ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, September 2, 2023

ಪರಮಾತ್ಮ,ದೇವರು,ಗುರು,ಸತ್ಯ ಎಲ್ಲಿರುವುದು?

ದೇವರು,ಗುರು, ಸತ್ಯವನ್ನು ಬಿಟ್ಟು  ಬದುಕಿಲ್ಲ. ಮಾನವನೊಳಗೂ ಹೊರಗೂ ಆವರಿಸಿರುವ ಈ ಮೂರೂ ಶಕ್ತಿ ಒಂದಾಗಿದ್ದರೆ  ಜೀವನ್ಮುಕ್ತಿ.ಆದರೆ ಇದರಲ್ಲಿ ಬೇಧ ಭಾವವಿದ್ದರೆ ಮುಕ್ತಿಯಿಲ್ಲ.ಇಲ್ಲಿ ಗುರುವೇ ದೇವರಾಗಬಹುದು, ದೇವರೇ ಗುರುವಾಗಬಹುದು  ಆದರೆ ಸತ್ಯ ಒಂದೇ ಆಗಿರುತ್ತದೆ. ಹಾಗಾಗಿ ಸತ್ಯವೇ ದೇವರೆಂದರು.ಆತ್ಮಸಾಕ್ಷಿಗೆ ಮೀರಿದ. ಸತ್ಯ ಬೇರೊಂದಿಲ್ಲ.  ಹಾಗಾಗಿ ಆತ್ಮಜ್ಞಾನದ. ನಂತರವೇ ಸತ್ಯದ ಸಾಕ್ಷಾತ್ಕಾರ.ಆತ್ಮಕ್ಕೆ ಸಾವಿಲ್ಲ,ಸತ್ಯಕ್ಕೆ ಸಾವಿಲ್ಲ,ದೇವರಿಗೂ ಸಾವಿಲ್ಲ,ಗುರುವೂ ಅಮರ." ಮಾನವ ಜನ್ಮ ದೊಡ್ಡದು ಹಾಳು ಮಾಡದಿರಿ ಹುಚ್ಚಪ್ಪಗಳಿರಾ" ಎಂದರು ದಾಸರು. ದಾಸರಿಗೆ  ಎಲ್ಲರಲ್ಲಿಯೂ ಕಾಣಿಸುತ್ತಿದ್ದ  ಗುರು ಪರಮಾತ್ಮ ಇಂದು ನಮಗೆ ಕಾಣಿಸುತ್ತಿಲ್ಲವೆಂದರೆ ನಮ್ಮ ಗುರುತಿಸುವಿಕೆಯಲ್ಲಿಯೇ ಧೋಷವಿದೆ ಎಂದರ್ಥವಾಗುತ್ತದೆ.
 ದೇವರು ನಿರಾಕಾರ, ಅರಿವೇ ಗುರು ಅರಿವೂ ಕೂಡ ನಿರಾಕಾರ ಹಾಗೆಯೇ ಆತ್ಮಸಾಕ್ಷಿ  ನಮಗಷ್ಟೇ  ತಿಳಿಯುವುದು ಯಾರಿಗೂ ಕಾಣಿಸದೆಂದು ಅಸತ್ಯದಿಂದ ಮುಂದೆ ನಡೆದರೆ ದೇವರೂ ಸಿಗೋದಿಲ್ಲ ಗುರುವೂ ಕಾಣೋದಿಲ್ಲ. ಹೀಗಾಗಿ ಭೌತಿಕದೆಡೆಗೆ  ಹೋಗುವಾಗ  ನಮಗೆ ಹೊರಗಿನ ಸತ್ಯ,ದೇವರು,ಗುರು ಕಾಣುವರು. ಆಂತರಿಕವಾಗಿ ಶುದ್ದಿಯಾಗಲು  ಈ ಮಹಾಶಕ್ತಿಯ ಅಗತ್ಯವಿದೆ. ಯಾವಾಗ ಆಂತರಿಕ ಶುದ್ದಿಯಾಗುತ್ತಿರುವ ಅನುಭವವಾಗುವುದೋ ಆಗ  ತಂತ್ರ. ಬಿಟ್ಟು ತತ್ವದೆಡೆಗೆ  ನಮ್ಮ ಮನಸ್ಸು ಹರಿಯುತ್ತದೆ ಹೊರಗಿರುವ ಕುತಂತ್ರದ ರಾಜಕೀಯ ಅರ್ಥ ವಾಗುತ್ತದೆ. ಇದೇ  ನಮ್ಮೊಳಗೇ ಹೊರಗೇ ಹರಿಯುತ್ತಿರುವಾಗ ಎಲ್ಲಿಯ ಸ್ವಾತಂತ್ರ್ಯ ? ಒಟ್ಟಿನಲ್ಲಿ  ಅಧರ್ಮ, ಅಸತ್ಯ,ಅನ್ಯಾಯ, ಭ್ರಷ್ಟಾಚಾರ ದ ಸುಳಿಯಲ್ಲಿ ಸಿಲುಕಿರುವ. ಜೀವಾತ್ಮನಿಗೆ ಒಳಗೇ ಅಡಗಿರುವ ದೇವರು, ಗುರು,ಸತ್ಯದ ಅರಿವಿಲ್ಲದೆ ಹೊರಗೆ ಹುಡುಕಿ ಸುಸ್ತಾಗಿ  ವ್ಯವಹಾರಿಕ ಜೀವನದಲ್ಲಿ ಕಷ್ಟ ನಷ್ಟದ ಸುಳಿಯಲ್ಲಿರುವಾಗ  ಆ ಸುಳಿಯಿಂದ ಹೊರಬರಲು ರಾಜಕೀಯದ ಅಗತ್ಯವಿಲ್ಲ ರಾಜಯೋಗದ ಅಗತ್ಯವಿದೆ.
ಎಲ್ಲಿ ರಾಜಕೀಯವಿರುವುದೋ ಅಲ್ಲಿ ತಂತ್ರವಿರುತ್ತದೆ.ಎಲ್ಲಿ ತಂತ್ರವಿರುವುದೋ ಅಲ್ಲಿ ಸತ್ಯವಿರದು. ಸತ್ಯವಿಲ್ಲದ ಕಡೆ ದೇವರಿರೋದಿಲ್ಲ ದೇವರನ್ನು ತೋರಿಸುವ ಗುರುಇರೋದಿಲ್ಲ. ಗುರುವೇ ಇಲ್ಲದೆ  ಬದುಕಿರದು. ಹಾಗಾಗಿ ಗುರುವೇ ದೇವರಿಗಿಂತ ದೊಡ್ಡವರು.  ಗುರು ವ್ಯಕ್ತಿಯಲ್ಲ ಮಹಾ ಶಕ್ತಿ.. ಜ್ಞಾನಕ್ಕೆ ಗುರುಕೃಪೆಯಿರಬೇಕು. ಸತ್ಯಜ್ಞಾನದಿಂದ ಮಾತ್ರವೇ ಅಧ್ಯಾತ್ಮ ಸಾಧನೆಯಾಗುತ್ತದೆ.ಅಧ್ಯಾತ್ಮ ಎಂದರೆ ತನ್ನ ತಾನರಿತು ನಾನ್ಯಾರೆಂಬ ಅರಿವಿನಲ್ಲಿ ನಡೆಯೋದಾದರೆ ವಾಸ್ತವದಲ್ಲಿ  ನಾನ್ಯಾರೆಂಬ ಪ್ರಶ್ನೆಗೆ ಉತ್ತರ ಎಷ್ಟು ಜನರಿಗಾಗಿದೆ? ಆಗಿದ್ದರೂ ನಂಬುವ ಜನರಿಲ್ಲದ ಮೇಲೆ  ತಿಳಿಸೋದು ವ್ಯರ್ಥ.
ಇಲ್ಲಿ ನಮ್ಮ ಹೆಸರಿನಲ್ಲಿ ನಡೆಸೋ  ಎಷ್ಟೋ  ಧಾರ್ಮಿಕ ಕಾರ್ಯ ದಿಂದ ನಮ್ಮ ಪಾಪ ಕಳೆದು ಪುಣ್ಯ ಪ್ರಾಪ್ತಿ ಯಾಗುತ್ತದೆ. ಪುಣ್ಯದಿಂದ ಮತ್ತಷ್ಟು ಹಣ ಸಂಪಾದನೆ ಯಾಗಿ ದಾನ ಧರ್ಮ ಕಾರ್ಯ ನಡೆಸಬಹುದು. ಆದರೆ ದೇವರನ್ನು ಕಾಣೋದಕ್ಕೆ ಕಷ್ಟವಿದೆ. ಅಂತಹ ಕಾರ್ಯ ನಡೆಸೋರನ್ನು ದೇವರೆಂದರೆ ಪೂರ್ಣ ಸತ್ಯವಾಗದು.ಕಾರಣ ನಾನಿರೋವಾಗ ದೇವರು ಕಾಣೋದಿಲ್ಲ.ಹಾಗಂತ ನಾನೇ ದೇವರು ಎಂದರೆ ಬೇರೆಯವರಲ್ಲಿಯೂ ಅಡಗಿರುವ ದೇವರು ಕಾಣೋದಿಲ್ಲ. ದ್ವೈತದ ದ್ವಂದ್ವದಲ್ಲಿ ಯಾವಾಗ  ಭಿನ್ನಾಭಿಪ್ರಾಯ ಹೆಚ್ಚಾಯಿತೋ ಆಗಲೇ ಮೂಲದ ಒಂದೇ ಸತ್ಯ, ಗುರು,ದೇವರು  ಹಲವು ಆಗುತ್ತಾ  ಒಂದೇ ಭೂಮಿಯಲ್ಲಿ, ಒಂದೇ ದೇಶ,ರಾಜ್ಯ,ಗ್ರಾಮ,ಊರು,ಕೇರಿ,ಮನೆಯೊಳಗೆ ಬೇರೆ ಬೇರೆ ದೇವರು,ಗುರು,ಸತ್ಯ ಜನ್ಮಪಡೆದು ಈಗಿದು ದೊಡ್ಡ ದೊಡ್ಡ ಸಮಸ್ಯೆಗಳಿಗೆ ದಾರಿಮಾಡಿಕೊಟ್ಟಿರುವುದಕ್ಕೆ ಕಾರಣ ಮಾನವನ ರಾಜಕೀಯ. ನಾನೇ ಸರಿ ಎನ್ನುವ ಅಹಂಕಾರವೇ ಶತ್ರುವಾಗಿ ತಿರುಗಿ ತನಗೇ ಮೋಸ ಮಾಡಿದರೂ ತಿಳಿಯಲಾಗದ ಅಜ್ಞಾನ ಮೈ ಮನಸ್ಸಿನಲ್ಲಿ ಆವರಿಸಿ  ಧಾರ್ಮಿಕ ಕ್ಷೇತ್ರದಲ್ಲಿಯೂ  ರಾಜಕೀಯಕ್ಕೆ ಹೆಚ್ಚಿನ ಬೆಲೆ ಸಿಕ್ಕಿದರೆ  ಮಾನವನಿಗೆ ದೈವತ್ವದ ಅರಿವಾಗೋದು ಕಷ್ಟ.
ಇದರಿಂದ ಹೊರಬರಲು  ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡರೆ ಉತ್ತಮ. ನಾನ್ಯಾರು? ಪ್ರಶ್ನೆ ಒಳಗಿನಿಂದ  ಬಂದರೆ  ಸರಿ ಹೊರಗಿನವರು ಕೇಳಿದರೆ ಉತ್ತರ ಕೇವಲ. ಭೌತಿಕದಲ್ಲಿರುವುದು. ಒಟ್ಟಿನಲ್ಲಿ ಅಧ್ವೈತ ದೊಳಗಿರುವ ದ್ವೈತ ಬಾವನೆ ನಾನಿರುವವರೆಗೂ ಇರುತ್ತದೆ. ಅದಕ್ಕಾಗಿಯೇ ನಮ್ಮ ಮಹಾತ್ಮರನ್ನು ಇಂದಿಗೂ ನಾವು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಅವರು ರಾಜಕೀಯ ಬಿಟ್ಟು  ಈ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದರು. ಈಗನಾವು ರಾಜಕೀಯದಲ್ಲಿದ್ದು  ನನ್ನ ಹೆಸರು ಹಿಡಿದು ನಾನ್ಯಾರೆಂದು ಎಲ್ಲರಿಗೂ ತಿಳಿಸುವ‌ ಹೊರನಡಿಗೆಯಲ್ಲಿರುದರಿಂದ ಎಲ್ಲರೂ ಅದೇ ನಡಿಗೆಯಲ್ಲಿ ಅವರವರ ಹೆಸರು ಉಳಿಸಿಕೊಳ್ಳಲು ಹೋರಾಟ ನಡೆಸುವಂತಾಗಿದೆ.ಹಾಗಾದರೆ ನಾನು ,ನನ್ನ ಹೆಸರು ಶಾಶ್ವತವೆ? ಶಾಶ್ವತವಲ್ಲವಾದರೆ ಯಾಕಿಷ್ಟು ಕಷ್ಟಪಟ್ಟು ಅಧರ್ಮ, ಅನ್ಯಾಯ, ಅಸತ್ಯಕ್ಕೆ ಬೆಲೆಕೊಟ್ಟು ಸಹಕಾರ ನೀಡಬೇಕು? ಇದರಿಂದಾಗಿ ಯಾರ ಆತ್ಮಕ್ಕೆ ಶಾಂತಿಸಿಕ್ಕಿದೆ?
ಯಾರಿಗೆ ದೇವರು ಕಂಡಿರುವನು? ಒಳಗಿರುವ ಆತ್ಮಸಾಕ್ಷಿಯ ಕಡೆಗೆ ನಡೆಯಲು  ಗುರುವಿನ ಸಹಕಾರದ ಜೊತೆಗೆ ಆಶೀರ್ವಾದ ಅಗತ್ಯವಿದೆ. ತಾಯಿಯೇ ಮೊದಲ ಗುರು ಎಂದರು.ಆ ತಾಯಿಯ ಸತ್ಯಕ್ಕೆ ಧರ್ಮಕ್ಕೆ ಚ್ಯುತಿಬರದ ಶಿಕ್ಷಣ ಕೊಡಲು ಸಾಧ್ಯವಾಗಿದೆಯೆ? ಇಲ್ಲ ತಾಯಿಯಾದವಳಿಗೆ ಉತ್ತಮ ಶಿಕ್ಷಣ ನೀಡಲು ಭಾರತೀಯರಿಗೆ ಸಾಧ್ಯವಾಯಿತೆ?ಎಲ್ಲಿ ನೋಡಿದರೂ ಸ್ತ್ರೀ ಶಕ್ತಿ  ವ್ಯವಹಾರಕ್ಕೆ  ಇಳಿದ ಸ್ತ್ರೀ ಹಣದ ಲಾಭಕ್ಕಾಗಿ ಜ್ಞಾನದ ನಷ್ಟವನ್ನು  ಅರಿಯದಂತಾಗಿದೆ.
ಒಟ್ಟಿನಲ್ಲಿ  ಜ್ಞಾನವಿಲ್ಲದ ಹಣದಿಂದ. ಋಣ ಕಳೆಯದು.ಋಣ ಕಳೆಯಲು ಬಂದ ಜೀವಕ್ಕೆ ಇನ್ನಷ್ಟು ಋಣ ಭಾರ ಹಾಕಿ ಸರ್ಕಾರ ನಡೆಸಿದರೆ  ಭಾರತ ಮಾತೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟ. ಸೇವೆಯ ಹೆಸರಿನಲ್ಲಿ ಸಾಕಷ್ಟು ಆಶ್ರಮ ಬೆಳೆದಿದೆ.ಇದರಲ್ಲಿ ವೃದ್ದಾಶ್ರಮ, ಅನಾಥಾಶ್ರಮ,ಅಬಲಾಶ್ರಮ,ಸೇವಾಶ್ರಮ,ಬಿಕ್ಷುಕಾಶ್ರಮಗಳೇ ಹೆಚ್ಚಾಗುತ್ತಿದೆ ಎಂದರೆ  ಇದರಲ್ಲಿ ದೇವರನ್ನು, ಗುರುವನ್ನು ಹಾಗು ಸತ್ಯವನ್ನು ಕಾಣಬಹುದೆ?
ಜನಸಾಮಾನ್ಯರಿಗೆ ಅರ್ಥ ವಾಗುವ ಈ ಸಾಮಾನ್ಯ ಸತ್ಯವನ್ನು  ಯಾರೂ  ಪ್ರಚಾರ ಮಾಡೋದಿಲ್ಲ,ಬೆಲೆಯೂ ಕೊಡೋದಿಲ್ಲ , ಆಸಕ್ತಿಯೂ ತೋರಿಸೋದಿಲ್ಲವೆಂದರೂ  ಸತ್ಯ ಸತ್ಯವೇ ಮಿಥ್ಯ ಮಿಥ್ಯವೇ ಇದನ್ನು ಬದಲಾಯಿಸಲಾಗದು. ಇದು ಇಂದಿನ  ವಾಸ್ತವ ಸತ್ಯ. ಪುರಾಣ ಭವಿಷ್ಯದ ನಡುವಿರುವ ವಾಸ್ತವತೆಯನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವೋ ಅವರಿಗೆ ದೇವರು,ಗುರು,ಸತ್ಯದ ಅರಿವಾಗುತ್ತದೆ.ಇದಕ್ಕಾಗಿ ಹೋರಾಟ ಒಳಗಿದ್ದು ನಡೆಸಬೇಕಷ್ಟೆ. ಎಲ್ಲಾ ತಿಳಿದ ಮೇಲೆ  ತಿಳಿಯೋದು ನಾನೆಂಬುದಿಲ್ಲ ಎಂದು.ಇದೇ ಅದ್ವೈತ ಸಂಶೋಧನೆ. ಇದನ್ನು ‌ಹೊರಗೆಳೆದಷ್ಟೂ ವಾದ ವಿವಾದವಾಗುತ್ತಾ ದ್ವೈತವಾಗಿ ನಾನೇ ದೇವರಾಗಿ ನಾನೇ ಸರಿಎನ್ನುವ ಅಹಂಕಾರವಾಗುತ್ತದೆ. ಆತ್ಮವಿಶ್ವಾಸ  ಅತಿಯಾದರೂ ಅಹಂಕಾರವಾಗಬಹುದೆನ್ನುವ‌  ಕಾರಣಕ್ಕಾಗಿ ಮಹಾತ್ಮರುಗಳು  ವಾದ ವಿವಾದದಿಂದ ದೂರವಾಗುತ್ತಾ ಸ್ವತಂತ್ರ ವಾಗಿರುವ ಸತ್ಯವನ್ನರಿತರು. ಆದರೆ ಈಗ  ಪುರಾಣದ ಸತ್ಯ ಹಿಡಿದು ಭವಿಷ್ಯ ನುಡಿಯುವವರೆ ಹೆಚ್ಚಾಗಿ ವಾಸ್ತವದಲ್ಲಿ  ನಾನೇ ಪರಕೀಯರ ವಶದಲ್ಲಿರುವ ಸತ್ಯ ಬಿಟ್ಟು   ನಡೆದಿರೋದಕ್ಕೆ  ಭಾರತ ಈ ಸ್ಥಿತಿಗೆ ಬಂದಿದೆ. ಹಾಗಾದರೆ ನಾವ್ಯಾರು? ಭಾರತೀಯರಾಗಿದ್ದರೆ ನಮ್ಮಲ್ಲಿ ಭಾರತೀಯ ತತ್ವ ಇದೆಯೆ? ಇದ್ದರೆ ಯಾಕಿಷ್ಟು  ರಾಜಕೀಯತೆ? ಪ್ರಜಾಪ್ರಭುತ್ವದಲ್ಲಿ  ಯಾರನ್ನು ಯಾರು ಆಳಬೇಕಿತ್ತು? ಯಾರು ಆಳುತ್ತಿರುವುದು? ಇದರ ಹಿಂದಿನ ಉದ್ದೇಶ ಏನು? ಯಾರಿಗಾಗಿ ಜೀವನ? ಆತ್ಮರಕ್ಷಣೆಗಾಗಿ  ದೇವರು,ಗುರು, ಸತ್ಯದ ಸದ್ಬಳಕೆ ಆಗಿದೆಯೆ? ಈ ಎಲ್ಲಾ ಪ್ರಶ್ನೆಗೆ ಉತ್ತರ ಪ್ರಜೆಗಳಾಗಿದ್ದವರೆ  ಹಾಕಿಕೊಳ್ಳಲು  ಜ್ಞಾನದ ಶಿಕ್ಷಣವಿರಬೇಕಿತ್ತು. ಸತ್ಯವೇ ಇಲ್ಲದ ಧರ್ಮ, ಧರ್ಮ ವಿಲ್ಲದ ಸತ್ಯದಿಂದ  ಅಧರ್ಮ, ಅನ್ಯಾಯ, ಭ್ರಷ್ಟಾಚಾರ ಬೆಳೆಯುತ್ತದೆ. ಇಷ್ಟಕ್ಕೂ  ಪ್ರತಿಷ್ಠಿತ ಶ್ರೀಮಂತ ಪ್ರಜೆಗಳು,ದೇವರುಗಳು,ಗುರುಗಳಿರುವ ಭಾರತ ಮಾತೆ ಬಡವಳಾಗಿರಲು ಸಾಧ್ಯವೆ? ವಿದೇಶಿ ಸಾಲ,ಬಂಡವಾಳ, ವ್ಯವಹಾರಕ್ಕೆ ತಲೆಬಾಗಿ ನಡೆಯುತ್ತಿರುವ  ಭಾರತ ಮಾತೆಯು ವಿಶ್ವಗುರು  ಆಗಿರುವಳೆ? ಗುರುವಿನಲ್ಲಿಯೂ ಅಧ್ಯಾತ್ಮ ಗುರು ಭೌತಿಕಗುರು ಇರೋವಾಗ  ಅಧ್ಯಾತ್ಮ ಗುರು ಕಣ್ಣಿಗೆ ಕಾಣೋದಿಲ್ಲ ಭೌತಿಕಗುರು ಕಾಣುವಾಗ  ಕಾಣದ ಗುರುವಿನ ಶಕ್ತಿಯನ್ನು ಕಂಡವರು ನಮ್ಮ ಮಹಾತ್ಮ ರಾಗಿದ್ದರು.. ಈಗಿನ ಸ್ಥಿತಿ ನೋಡಿದರೆ ಸತ್ಯ ತಿಳಿಸಬಾರದು, ಗುರುವನ್ನು ಅರಸಬಾರದು, ದೇವರನ್ನು  ಬೆಳೆಸಬಾರದೆನ್ನುವ ಅಸುರರಿಗೆ  ನಮ್ಮದೇ ಸಹಕಾರವಿದೆ ಎಂದರೆ ಇಲ್ಲಿ ಹಣ,ಅಧಿಕಾರ,ಸ್ಥಾನಮಾನಕ್ಕಾಗಿ  ಪ್ರಜೆಗಳ ಸಾಮಾನ್ಯಜ್ಞಾನ   ಹಿಂದುಳಿದಿದೆ. ಹಿಂದುಳಿದವರನ್ನು ಹಣದಿಂದ ಮೇಲೆತ್ತುವ ರಾಜಕೀಯವಿದೆ. ಎಷ್ಟೇ  ಮೇಲೆತ್ತಿದರೂ ಸಾಲವೂ ಮೇಲೇ ಬೆಳೆಯುತ್ತಾ ಜೀವ ಹೋಗುವುದು ಜ್ಞಾನ ಬರೋದಿಲ್ಲ. ಇದಕ್ಕೆ ಶಿವಶರಣರು  ದಾಸ,ಸಂತ,ಶ್ರೇಷ್ಠ ರು  ಬೇಡೋನು
ದೀನ ಸ್ಮರಿಸೋನೆ ಜಾಣ ಎಂದು ನಾಮ‌ಜಪದಲ್ಲಿಯೇ ತಮ್ಮ ಕಾಯಕ ಕರ್ಮ ನಡೆಸುತ್ತಾ ಪರಮಾತ್ಮನಿಗೆ  ಪರಮಸತ್ಯಕ್ಕೆ ಶರಣಾದರು,ದಾಸರಾದರು.
ಕಲಿಗಾಲ‌ ಕಲಿಸುತ್ತದೆ. ಕಲಿಕೆಯಲ್ಲಿ ಸತ್ಯವಿದ್ದರೆ  ಜ್ಞಾನ. ಅಸತ್ಯವಿದ್ದರೆ  ಅಜ್ಞಾನ. 
ಕಡಲಿಗೆ ಸೇರುವ‌ ನದಿಗಳಲ್ಲಿ ಶ್ರೇಷ್ಠ ಕನಿಷ್ಠ ವೆಂಬುದಿಲ್ಲ. ಹಾಗೆ ಭೂಮಿಯಲ್ಲಿ ಜನ್ಮ ಪಡೆದ   ಮೇಲೆ  ಆತ್ಮಜ್ಞಾನದೆಡೆಗೆ  ನಡೆಯಲು ಯಾವ ಜಾತಿಯ ಅಗತ್ಯವಿರಲಿಲ್ಲ. ಮಾನವನೇ ಮಾಡಿಕೊಂಡಿರುವ‌  ಈ ಅಂತರಗಳ  ಅವಾಂತರಕ್ಕೆ ತಾನೇ ಬಲಿಪಶುವಾದರೂ ಯಾರೂ ಕಾರಣರಾಗೋದಿಲ್ಲ. ಆದರೂ ಎಲ್ಲದ್ದಕ್ಕೂ ನಾನೇ ಕಾರಣವೆನ್ನುವುದು ಸತ್ಯ. ನಾನೆಂಬ ಆತ್ಮವಿಶ್ವಾಸ ದೆಡೆಗೆ ಹೋಗೋದಕ್ಕೆ ಆತ್ಮಸಾಕ್ಷಿಯ ಸತ್ಯವೇ ದೇವರಾಗಬೇಕಷ್ಟೆ.  ಒಳಗೇ ಇರುವ ದೇವರನ್ನು ಬಿಟ್ಟು ಹೊರ ನಡೆದವರಿಗೆ  ದೇವರು ಸಿಗೋದಿಲ್ಲ. ಹಾಗೆಯೇ ಗುರು ಹಾಗು ಗುರಿಯೂ  ಕಾಣೋದಿಲ್ಲ. 
"ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಭಾರತದೊಳಗಿದ್ದು ವಿದೇಶದ ವ್ಯಾಮೋಹ,ಚಿಂತನೆ,ಚರ್ಚೆ ನಡೆಸಿದರೆ  ದೇಶಭಕ್ತಿ ಹೆಚ್ಚುವುದೆ? ಇದಕ್ಕೆ ಕಾರಣ  ಶಿಕ್ಷಣ ಪದ್ದತಿಯಾಗಿದೆ. ಎಷ್ಟೇ ಶಾಸ್ತ್ರ ಸಂಪ್ರದಾಯ,ಪೂಜೆ, ಕಾರ್ಯಕ್ರಮ  ನಡೆಸಿದರೂ  ಒಳಗೆ ಕೊಡುವ. ಶಿಕ್ಷಣವೇ  ನಮ್ಮ  ಮೂಲದಿಂದ ದೂರವಿದ್ದರೆ ದೇವರಾಗಲಿ,
ಗುರುವಾಗಲಿ,ಸತ್ಯವಾಗಲಿ  ಹತ್ತಿರವಿದ್ದರೂ ಕಾಣೋದಿಲ್ಲ. ತಾಯಿಯೇ ದೇವರು,ಗುರು  ಎಂದರು ಆದರೆ ತಾಯಿಗೇ ದೈವತ್ವದ ಶಿಕ್ಷಣ,ಗುರು ತತ್ವ ದ ಅರಿವಿನಿಂದ ದೂರವಿಟ್ಟರೆ  ಮಕ್ಕಳ ಪಾಡೇನು? ಇಲ್ಲಿ ಯಾರನ್ನೂ ತಪ್ಪು ಎನ್ನುವ ಅಧಿಕಾರ ಯಾರೂ ಪಡೆದಿಲ್ಲ ಕಾರಣ ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ನಮ್ಮ ಅರಿವಿನಂತೆ ದೇಶವಿದೆ,
ಮನೆಯಿದೆ,ಮನಸ್ಸಿದೆ.ಇದಕ್ಕೆ ಕಾರಣ ನಮ್ಮ ಶಿಕ್ಷಣವಷ್ಟೆ ಕಾರಣ.ಇದನ್ನು ಪೋಷಕರೆ ಅರ್ಥ ಮಾಡಿಕೊಂಡು  ಪರಮಾತ್ಮ ಕೊಟ್ಟಿರುವ ಹಣವನ್ನು ಸದ್ಬಳಕೆ ಮಾಡಿಕೊಂಡರೆ ಮುಂದಿನ  ಸಂತಾನವಾದರೂ  ಉತ್ತಮವಾದ ಶಿಕ್ಷಣ ಪಡೆದು ಭಾರತ ವಿಶ್ವಗುರುವಾಗಬಹುದು.
 ಆಕಾಶದೆತ್ತರ ಹಾರೋದಕ್ಕೆ ಬಳಸುವ ಹಣದಿಂದ ವಿಶ್ವಗುರುವಾಗಲಾರದು, ಭೂಮಿಯಲ್ಲಿ ಹೇಗೆ ಬದುಕಬೇಕೆಂಬ ಜ್ಞಾನದಿಂದ ವಿಶ್ವಗುರು ಆಗಬಹುದು.
ಒಟ್ಟಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವ  ನಾಟಕದ ಜಗತ್ತಿನಲ್ಲಿ ನಾವಿದ್ದೇವೆ. ಒಂದೊಂದು  ಪೈಸೆಯ ಹಿಂದೆ ಇರುವ ಸಾಲ ತೀರಿಸಲು ಮತ್ತೆ ಜನ್ಮ ತಾಳಲೇಬೇಕೆನ್ನುವ ಸತ್ಯಕ್ಕೆ ಸಾವಿಲ್ಲ. ಶ್ರೀ ಕೃಷ್ಣ ಪರಮಾತ್ಮನೇ ತಿಳಿಸಿದಂತೆ ನನಗೂ ಜನ್ಮವಿದೆ ಎಂದರೆ ಸಾಮಾನ್ಯರಾದ  ಮಾನವನಿಗಿಲ್ಲವೆ? ಭೌತಿಕಾಸಕ್ತಿ  ಬೆಳೆಸೋರು ಗುರುವಾಗೋದಿಲ್ಲ . ಅಧ್ಯಾತ್ಮಶಕ್ತಿಬೆಳೆಸೋದು 
ಸುಲಭವಿಲ್ಲ. ಹಲ್ಲಿದ್ದವರಿಗೆ ಕಡಲೆಯಿಲ್ಲ ಕಡಲೆಯಿದ್ದವರಿಗೆ ಹಲ್ಲಿಲ್ಲ ಎನ್ನುವ ಪರಿಸ್ಥಿತಿ  ಭಾರತದಲ್ಲಿದೆ ಎಂದರೆ ತಪ್ಪಿಲ್ಲ.
ಪರಮಾತ್ಮನ ಇಚ್ಚೆಯಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡದು ಎನ್ನುವರು ಹಾಗಾದರೆ ಪರಮಾತ್ಮನಿರೋದೆಲ್ಲಿ? ಪರಕೀಯರಲ್ಲೆ? ಪರಮಸತ್ಯದಲ್ಲೆ? 

No comments:

Post a Comment