ಸತ್ಯ. ಬ್ರಾಹ್ಮಣ ಎನ್ನುವುದು ಜಾತಿಯಲ್ಲ. ಬ್ರಹ್ಮಜ್ಞಾನವನ್ನರಿತು ನಡೆಯುವ ಒಂದು ಪಂಗಡ ಅಥವಾ ವರ್ಣ ಎಂದರೆ ಸರಿಯಾಗುತ್ತದೆ. ಬ್ರಹ್ಮನ ಕೆಲಸ ಸೃಷ್ಟಿ ಮಾಡೋದು.ಯಾವುದನ್ನು ಸೃಷ್ಟಿ ಮಾಡಿದರೆ ಸ್ಥಿತಿ ಚೆನ್ನಾಗಿ ಇರುವುದು ಹಾಗೇ ಮುಕ್ತಿ ಸಿಗುವುದೆನ್ನುವ ಜ್ಞಾನವೇ ಬ್ರಹ್ಮಜ್ಞಾನ. ಸೃಷ್ಟಿ ಗೆ ಕಾರಣವೇ ಬ್ರಹ್ಮಜ್ಞಾನ ನಂತರ ವಿಷ್ಣು ಶಿವರ ಕೆಲಸ ನಡೆಯುತ್ತದೆ. ಇದನ್ನು ಯಾರೂ ತಡೆಯಲಾಗದ ಮೇಲೆ ನಮ್ಮ ಸೃಷ್ಟಿ ಯ ರಹಸ್ಯವನರಿತರೆ ನಾವು ಬ್ರಾಹ್ಮಣರಾಗಿರುವ ಉದ್ದೇಶ ಅರ್ಥ ವಾಗಿ ಒಗ್ಗಟ್ಟಿನ ಬಲ ತತ್ವದ ಉದ್ದೇಶ. ಭೂಮಿಗೆ ಬಂದ ಕಾರಣ ತಿಳಿದು ಉತ್ತಮೋತ್ತಮರಾಗಿರಬಹುದು. ರಾಜಕೀಯದಿಂದ ಇದು ಅಸಾಧ್ಯ.ರಾಜಯೋಗದಿಂದ ಸಾಧ್ಯವಿದೆ. ಅಧಿಕಾರ ಹಣ ಸ್ಥಾನವಿದ್ದಾಗ ನಾವು ಸ್ವತಂತ್ರ ವಾಗಿ ನಮ್ಮ ಒಳಗಿನ ಜ್ಞಾನವನ್ನು ಬಳಸಲಾಗದ ಕಾರಣ ಹೊರಗಿನ ಅತಂತ್ರ ಜ್ಞಾನವಾದ ತಂತ್ರದಲ್ಲಿಯೇ ಬದುಕಿ ಮುಕ್ತಿ ಯಿಲ್ಲದೆ ಹೋಗುತ್ತಿರುವವರ ಸಂಖ್ಯೆ ಬೆಳೆಯುತ್ತಿದೆ. ಒಟ್ಟಿನಲ್ಲಿ ಬ್ರಾಹ್ಮಣ ಜನ್ಮ ಪಡೆಯುವುದಕ್ಕೆ ಪುಣ್ಯ ಮಾಡಿರಬೇಕು. ಆ ಪುಣ್ಯವನ್ನು ಅಧ್ಯಾತ್ಮ ಸಾಧನೆಯಿಂದ ಹೆಚ್ಚಿಸಿಕೊಳ್ಳಲು ನಮ್ಮನ್ನು ನಮ್ಮವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಜ್ಞಾನದ ಅಗತ್ಯವಿದೆ. ವಿಜ್ಞಾನ ಜಗತ್ತಿನಲ್ಲಿ ಸತ್ಯವೇ ಇಲ್ಲದೆ ಬ್ರಹ್ಮನ ಅರಿವಿಲ್ಲದೆ ಜಾತಿರಾಜಕೀಯದಲ್ಲಿ ಮಾನವ ಸಿಲುಕಿ ನನ್ನಿಂದ ಏನೂ ಸಾಧ್ಯವಿಲ್ಲ ಎಂದು ಅಸುರರಿಗೆ ಮಣೆ ಹಾಕಿದಷ್ಟೂ ಅಜ್ಞಾನ ಬೆಳೆಯುತ್ತದೆ. ಜ್ಞಾನದ ಶ್ರೀಮಂತಿಕೆಯೇ ಬ್ರಾಹ್ಮಣನ ಆಸ್ತಿಯಾಗಿತ್ತು. ಈಗ ಅರ್ಥ ವಾಗದ ಅಜ್ಞಾನಿಗಳಿಗೆ ಉಪದೇಶಮಾಡಲು ಹೋಗಿ ಅವರ ಹಿಂದೆ ನಿಂತು ಕೂಗಿದರೂ ತಪ್ಪು ನಮ್ಮದೇ ಆಗಿರುತ್ತದೆ. ನಮ್ಮ ಧರ್ಮ ಕರ್ಮಕ್ಕೆ ನಾವು ತಲೆಬಾಗಿರಲೂ ಈ ಸಮಾಜದಲ್ಲಿ ಸಾಧ್ಯವಾಗದಿರಲು ಇದೇ ಕಾರಣ.ಸತ್ಯಕ್ಕೆ ಸಾವಿಲ್ಲ ಧರ್ಮಕ್ಕೆ ನೆಲೆಯೇ ಇಲ್ಲದಂತೆ ಸರ್ಕಾರ ನಡೆದಿದೆ.ಇದಕ್ಕೆ ನಮ್ಮದೇ ಸಹಕಾರವಿದ್ದಾಗ ಏನೂ ಮಾಡಲಾಗದು. ಎಲ್ಲಾ ನಾಟಕವಷ್ಟೆ.ದೇವಾಸುರರ ಪಾತ್ರಧಾರಿಗಳಲ್ಲಿರುವ ಸಾಮಾನ್ಯಜ್ಞಾನ ಹಿಂದುಳಿದು ಮನುಕುಲ ಹಿಂದುಳಿಯುತ್ತಿದೆ .ಒಟ್ಟಿನಲ್ಲಿ ಬ್ರಹ್ಮನ ಸೃಷ್ಟಿ ಗೆ ತಕ್ಕಂತೆ ಸ್ಥಿತಿ ಲಯಕಾರ್ಯ ನಿರಂತರವಾಗಿ ನಡೆಯುವಾಗ ಯಾರು ಯಾವ ಕೆಲಸ ಮಾಡಿದರೆ ಉತ್ತಮ ಅಧಮ ಎನ್ನುವ ಜ್ಞಾನವಿದ್ದರೆ ಎಲ್ಲಾ ಉತ್ತಮರಾಗಿರಬಹುದು. ಎಲ್ಲಾ ಮಾನವರಾದರೂ ಮಾನವೀಯತೆಗೆ ಬೇಕಾದ ಜ್ಞಾನದ ಶಿಕ್ಷಣ ಎಲ್ಲಾ ಕೊಟ್ಟಿಲ್ಲ.ಪಡೆದಿಲ್ಲವಾದರೆ ಏನು ಕೊಟ್ಟಿರುವೆವೋ ಅದೇ ತಿರುಗಿ ಪಡೆಯುವೆವು. ಇದರಲ್ಲಿ ಹೊರಗಿನವರ ತಪ್ಪಿಗಿಂತ ಒಳಗಿನವರ ತಪ್ಪು ಹೆಚ್ಚಾಗಿದ್ದರೂ ಒಪ್ಪುವ ಸ್ಥಿತಿಯಲ್ಲಿಲ್ಲದ ನಮ್ಮ ಮನಸ್ಸೇ ಕಾರಣವಾದಾಗ ಮನಸ್ಸೇ ಮನುಷ್ಯನ ಶತ್ರು ಮಿತ್ರ.ಇದಕ್ಕೆ ಜ್ಞಾನವಿಜ್ಞಾನದ ಅಂತರವೇ ಕಾರಣ. ಅಂತರವು ಧರ್ಮ, ಜಾತಿ, ಪಂಗಡ,ಪಕ್ಷ,ದೇಶವನ್ನೇ ಅಂತರದಲ್ಲಿಟ್ಟುತನ್ನ ಸ್ವಾರ್ಥ ಸುಖಕ್ಕೆ ಬೆಲೆಕೊಟ್ಟು ಜೀವಾತ್ಮ ಪರಮಾತ್ಮನೆಡೆಗೆ ಹೋಗದಂತೆ ಮಧ್ಯೆ ನಿಂತು ಆಳುತ್ತಿದೆ. ಇದಕ್ಕೆ ನಮ್ಮದೇ ಸಹಕಾರ ಸಹಾಯ ವಿದ್ದಾಗ ತಡೆಯೋರು ಯಾರು?
ಪಕ್ಷಾಂತರ ಮಾನವ ಮಾಡಿಕೊಂಡರೂ ಒಳಗಿರುವ ಶಕ್ತಿ ಒಂದೇ ಅಲ್ಲವೆ? ಜನರನ್ನು ಮೋಸಮಾಡಿ ಗೆದ್ದರೂ ಒಳಗೇ ಸೋತಿರುವ ಸತ್ಯವನ್ನು ಗೆಲ್ಲಲಾಗದು. ಕಾಣದ ಕೈಗಳ ಕೈಚಳಕದಿಂದ ಆತ್ಮರಕ್ಷಣೆ ಆಗೋದಿಲ್ಲವೆನ್ನುವ ಕಾರಣಕ್ಕಾಗಿ ಮಹಾತ್ಮರುಗಳು ಸ್ವತಂತ್ರ ವಾಗಿರುವ ಆ ಬ್ರಹ್ಮಚೈತನ್ಯವನರಿತು ಪರಮಾತ್ಮನ ದಾಸರಾಗಿ ಬ್ರಹ್ಮಜ್ಞಾನಿಗಳಾದರು. ಈಗಲೂ ಏನೂ ಅರಿಯದ ಮಕ್ಕಳಲ್ಲಿ ಅಡಗಿರುವ ಸ್ವಚ್ವಾಗಿರುವ ಜ್ಞಾನಕ್ಕೆ ಸರಿಯಾದ ಗುರು ಸಿಕ್ಕರೆ ಬ್ರಹ್ಮಜ್ಞಾನಿಗಳಿಂದ ಬ್ರಹ್ಮಾಂಡ ನಡೆಯುತ್ತಿರುವ ಸತ್ಯ ತಿಳಿಯಬಹುದು. ಎಲ್ಲಾ ದೇವಾನುದೇವತೆಗಳಿಗೂ ಭೂಮಿಯಲ್ಲಿದ್ದಾಗ ಗುರುಗಳಿದ್ದರು ಎಂದರೆ ಗುರುವಿನಲ್ಲಿರುವ ಬ್ರಹ್ಮಜ್ಞಾನ ಶಿಷ್ಯ ಪಡೆದಾಗಲೇ ಜ್ಞಾನೋದಯ. ಗುರುವಿಗಿಂತ ಶಿಷ್ಯ ಬೆಳೆದರೆ ಅದು ಭೌತಿಕ ಸಾಧನೆಯಷ್ಟೆ. ಭೌತಿಕದಲ್ಲಾದರೂ ಬ್ರಹ್ಮನ ಅರಿವಿನಲ್ಲಿ ಜೀವನ ನಡೆಸುವುದು ಸನಾತನಿಗಳ ಲಕ್ಷಣ.ಆದರೆ ಇದಕ್ಕೆ ಹಣವನ್ನು ದಾನ ಮಾಡಬೇಕು,ಸರಳ ಜೀವನ ನಡೆಸಬೇಕು,ಸತ್ಯ ನುಡಿಯಬೇಕು ಇದು ಇಂದಿನ ವಿಜ್ಞಾನ ಜಗತ್ತು ತಿರಸ್ಕಾರದಿಂದ ಕಾಣುವುದೆಂದು ಹಿಂದುಳಿದರೆ ಅಧರ್ಮ, ಅಜ್ಞಾನ, ಭ್ರಷ್ಟಾಚಾರ, ಅಸತ್ಯವೇ ಬ್ರಹ್ಮನೇ ಇಲ್ಲ ನಾನೇ ಬ್ರಹ್ಮ ಎಂದು ನಾನು ಮಾತ್ರ ಬೆಳೆದರೆ ಬ್ರಹ್ಮಜ್ಞಾನವಾಗದು ಬ್ರಹ್ಮನೂ ಕಾಣದು. ಭೂಮಿಗೆ ಬಂದ ಉದ್ದೇಶವೇ ತಿಳಿಯಲಾಗದು..
No comments:
Post a Comment