ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, September 8, 2023

ಪುರಾಣಪಾತ್ರಧಾರಿಗಳಿಗೂ ಇಂದಿನವರೆಗೂ ವ್ಯತ್ಯಾಸವಿದೆ.


ಮಾನ್ಯ ಡಿ,ವಿ,ಜಿ ಯವರು ಜೀವಿಸಿದ ಕಾಲದಲ್ಲಿ ಅವರೊಳಗಿದ್ದ ಅಗಾಧವಾದ ಜ್ಞಾನ ಸಂಪತ್ತು‌ಕಾಣದವರು ಈಗ ಅವರ ಕಗ್ಗದೊಳಗಿನ  ಭಗವದ್ಗೀತೆಯ ಸಂದೇಶವನ್ನು  ಎತ್ತಿ ಹಿಡಿಯುವ  ಪ್ರಜ್ಞಾವಂತರಾಗಿದ್ದಾರೆಂದರೆ  ನಾವು ಬದುಕಿರುವಾಗಲೇ ಸತ್ಯ ಹೊರಬರಬೇಕೆಂದಿಲ್ಲ ಹೋದ ಮೇಲೂ ಬರುತ್ತದೆ ಕಾರಣ ಸತ್ಯ ಒಂದೇ ಅದಕ್ಕೆ ಸಾವಿಲ್ಲ.
 ರಾಮಾಯಣ ಮಹಾಭಾರತದ ಒಂದೊಂದು ಪಾತ್ರವೂ  ಜ್ಞಾನದಿಂದ  ಬಹಳ ಶ್ರೇಷ್ಠ ವಾದದ್ದೇ ಆದರೂ ಮುಖ್ಯಪಾತ್ರವನ್ನಷ್ಟೇ  ನೋಡಿದರೆ ಪೂರ್ಣ ತೆ ದೊರಕದು.
*ಕಗ್ಗ - 707*
ಒಡೆಯನೆಂದೋ ಬಂದು ಕೇಳ್ವನದಕುತ್ತರವ।
ಕೊಡಬೇಕು ತಾನೆನುವವೊಲು ಋಜುತೆಯಿಂದ॥
ಒಡಲ, ಜಾಣಿನ, ಜೀವಶಕ್ತಿಗಳನೆಲ್ಲವನು।
ಮುಡುಪುಕೊಟ್ಟನು ಭರತ.

                                 *- ಮಂಕುತಿಮ್ಮ.*

  *Translation,*
The real owner of this (Kingdom) will come back one day. He will ask for a detailed account and I must provide one. This was Bharata's mantra while running the state while Rama was away. He was always righteous. He gave his body, mind and his life towards this single goal.

                                *- Mankutimma.*

  *ವಾಚ್ಯಾರ್ಥ,*
ಒಡೆಯನೆಂದೋ = ಒಡೆಯನು+ಎಂದೋ, 
ಕೇಳ್ವನದಕ್ಕುತ್ತರವ = ಕೇಳ್ವನು+ಅದಕ್ಕೆ+ಉತ್ತರವ, ತಾನೆನುವವೊಲು = ತಾನ್+ಎನುವ+ವೊಲು,
ಋಜತೆ = ಪ್ರಾಮಾಣಿಕತೆ, ಒಡಲ = ದೇಹದ, 
ಜಾಣಿನ = ಬುದ್ಧಿವಂತಿಕೆಯ, 
ಮುಡುಪುಕೊಟ್ಟನು = ಸಂಪೂರ್ಣ ತೊಡಗಿಸಿಕೊಂಡನು.

 *ಭಾವಾರ್ಥ:-*
ರಾಮನ ರಾಜ್ಯವನ್ನು ಆಳುತ್ತಿದ್ದೇನೆ ಎಂದು ಪರಿಗಣಿಸಿ, ಅವನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇರಿಸಿ, ಎಂದಾದರೂ ಒಂದು ದಿನ ಎನ್ನ ಒಡೆಯ ನಾನು ಮಾಡಿದ ಎಲ್ಲ ಕೆಲಸಗಳಿಗೂ ವಿಶ್ಲೇಷಣೆಯನ್ನು ಕೇಳುತ್ತಾನೆ. ಎಂಬಂತೆ ತನ್ನ ದೇಹ, ಬುದ್ಧಿವಂತಿಕೆ ಮತ್ತು ಚೈತನ್ಯವನ್ನೆಲ್ಲ, ನಿರಪೇಕ್ಷೆಯಿಂದ, ಪ್ರಾಮಾಣಿಕತೆಯಿಂದ ರಾಮನ ರಾಜ್ಯವನ್ನಾಳಲು ಮುಡುಪಾಗಿಟ್ಟ ಭರತನಂತೆ, ನೀನೂ ಸಹ ಬದುಕು. ಎಂದು ಸೂಚಿಸುವಂತೆ ನಮಗೊಂದು ಆದೇಶವನ್ನಿತ್ತಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

 *ವ್ಯಾಖ್ಯಾನ,*
ನಾವು ಮಾಡಿದ ಯಾವುದೇ ಕೆಲಸಕ್ಕೂ ಯಾರಿಗೂ ಸಮಜಾಯಷಿಯನ್ನು ನಾವು ಕೊಡಬೇಕಾಗಿಲ್ಲವಾದರೂ, ಪರಮಾತ್ಮ ಸ್ವರೂಪವಾದ ನಮ್ಮ ಒಡೆಯನಂತಿರುವ ಅಂತರಾತ್ಮಕ್ಕೆ ಸದಾಕಾಲ ಅದು ಕೇಳುವ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತಲೇ ಇರಬೇಕು. ನಮ್ಮನ್ನು ನಾವೇ ಮೋಸ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಅಲ್ಲವೇ..? ಭರತ ಇದು ತನ್ನದಲ್ಲವೆಂದು ಅರಿತು, ತಾನು ಕೇವಲ ರಾಮನ ಸೇವಕನೆಂದು ಬಗೆದು ರಾಜ್ಯಭಾರವನ್ನು ರಾಮನ ಸೇವೆ ಎಂದು ದುಡಿದ. ಹಾಗಾಗಿ ಅವನ ಯಾವುದೇ ಕೆಲಸದ ಕರ್ಮಫಲ ಅವನದಾಗಿರಲಿಲ್ಲ. ಭಗವದ್ಗೀತೆಯಲ್ಲಿ 
*ಕಿಂ ಕರ್ಮ ಕಿಮಕರ್ಮೇತಿ* (೪-೧೬) ಎಂದು ಹೇಳುವಾಗ ಶ್ರೀ ಕೃಷ್ಣ *ಅಕರ್ಮ* ಎನ್ನುವ ಪದವನ್ನು ಉಪಯೋಗಿಸುತ್ತಾನೆ. ಆಕರ್ಮವೆಂದರೆ ಕರ್ಮ ಮಾಡದೇ ಇರುವುದಲ್ಲ. ಕರ್ಮ ಮಾಡುವಾಗ ನಾನು ಮಾಡುತ್ತಿದ್ದೇನೆ ಎನ್ನುವ ಭಾವ ಮತ್ತು ಅದರ ಫಲಾಪೇಕ್ಷೆ ಇಲ್ಲದೆ ಮಾಡಿದರೆ ಅದು ಅಕರ್ಮ. ಅಂತಹ ಕರ್ಮದಿಂದ ಉಂಟಾಗುವ ಯಾವುದೇ ಫಲಕ್ಕೂ ನಾವು ಭಾಜ್ಯರಾಗುವುದಿಲ್ಲ. ಈ ಜಗತ್ತಿನಲ್ಲಿ ನಾವು ಒಂದು ರೂಪವನ್ನು ಹೊತ್ತು ಹುಟ್ಟಿದ್ದೇವೆ ಎಂದರೆ ಆ ರೂಪಕ್ಕನುಗುಣವಾಗಿ ಮತ್ತು ಅದರ ಅವಶ್ಯಕತೆ ಗನುಗುಣವಾಗಿ ಸಾಯುವವರೆಗೂ ಕರ್ಮವನ್ನು ಮಾಡುತ್ತಲೇ ಇರಬೇಕು. ಹಾಗೆ ಮಾಡುವಾಗ ನಾನು, ನನ್ನದು, ನನ್ನಿಂದ, ನನಗಾಗಿ..... ಎನ್ನುವ ನಾನತ್ವದ ನಾನಾ ಭಾವಗಳನ್ನು ತೊರೆದು ಮಾಡಿದರೆ ಅದು ಅಕರ್ಮ. ಅಂತಹ ಕರ್ಮದಿಂದ ನಾವು ಹೆದರಲೇ ಬೇಕಾಗಿಲ್ಲ. ಅದೊಂದು ಮುಕ್ತಭಾವ. ಅಂತಹ ಭಾವದಿಂದಲೇ 
ಭರತನೂ ಹದಿನಾಲ್ಕು ವರ್ಷ ರಾಮನ ವನವಾಸದ ಕಾಲದಲ್ಲಿ ರಾಜ್ಯಭಾರ ಮಾಡಿದನು. ಈ ಜಗತ್ತಿನಲ್ಲಿದ್ದು ಈ ಜಗತ್ತಿನ ಕೆಲಸಗಳಲ್ಲಿ ನಿಮಗ್ನರಾಗಿ ಇದಕ್ಕೆ ಅಂಟಿಕೊಳ್ಳದೆ ಇರುವುದು ಸಾಧ್ಯವೇ..? ಎಂದರೆ, ಸಾಧ್ಯವೆಂದು ಭರತ ತೋರಿಸಿ ಕೊಟ್ಟಿದ್ದಾನೆ. ನಮಗೂ ಸಾಧ್ಯವಾಗುತ್ತದೆ ಪ್ರಯತ್ನಪಟ್ಟರೆ. ಮೊದಲು ಮನೋನಿಗ್ರಹ, ನಂತರ ಇಂದ್ರಿಯ ನಿಗ್ರಹವನ್ನು ಸಾಧಿಸಿದರೆ, ಅಹಂಕಾರ ನಶಿಸಿ, ಮಮಕಾರ ಕರಗಿ, ನಿರ್ಲಿಪ್ತತೆಯಿಂದ ನಮ್ಮ ಎಲ್ಲ ಕೆಲಸಗಳನ್ನೂ ಅಕರ್ಮವೆಂಬಂತೆ ಮಾಡಿ ಪ್ರಾಪಂಚಿಕ ಬಂಧನದಿಂದ ಮುಕ್ತರಾಗಬಹುದು. ನಮ್ಮ ಅಂತರಾತ್ಮದೆದುರು ಧೈರ್ಯವಾಗಿ ನಿಂತು ಅದು ಕೇಳುವ ಪ್ರಶ್ನೆಗಳಿಗೆ ಪ್ರಾಮಾಣಿಕವಾದ ಉತ್ತರಗಳನ್ನು ನೀಡಬಹುದು. ಅದಕ್ಕೆ ಶುದ್ಧ ಧೀರ್ಗಕಾಲಿಕ ಮತ್ತು ಪ್ರಾಮಾಣಿಕ ಪ್ರಯತ್ನ ಬೇಕು..🌹🙏

   

No comments:

Post a Comment