ಹಿಂದೂ ಸನಾತನ ಧರ್ಮ ಎಂದು ಮಾನವ ಮಾನವರಲ್ಲಿಯೇ ದ್ವೇಷ ಹೆಚ್ಚಿರೋದಕ್ಕೆ ಮೂಲ ಸತ್ಯ ಅರ್ಥ ವಾಗದಿರೋದೇ ಕಾರಣ. ಸತ್ಯ ಒಂದೇ ಹಿಂದೆ ಇಂದು ಮುಂದೆಯೂ ಅದೇ ಇರೋದು. ಭೂಮಿ ಒಂದೇ, ದೇಶ ಒಂದೇ ನಮ್ಮ ಜನ್ಮಗಳು ಹಲವಿದ್ದರೂ ಆತ್ಮ ಒಂದೇ ಇದೇ ಸನಾತನಕಾಲದಿಂದ ಲೂ ಹರಡಿಕೊಂಡಿದೆ. ಜನ್ಮ ಜನ್ಮಗಳ ಅಂತರದಲ್ಲಾದ ಜ್ಞಾನ ಶಿಕ್ಷಣದ ಬದಲಾವಣೆಯಲ್ಲಿ ಭೌತ ಶಾಸ್ತ್ರ ಕಣ್ಣಿಗೆ ಕಂಡರೂ ಅಧ್ಯಾತ್ಮ ಶಾಸ್ತ್ರ ಕಣ್ಣಿಗೆ ಕಾಣದೆ ಭೌತವಿಜ್ಞಾನ ದ ಹಿಂದೆ ಹೊರಗೆ ನಡೆದಂತೆಲ್ಲಾ ತನ್ನ ಆಂತರಿಕ ಶಕ್ತಿ ಕ್ಷೀಣವಾದಾಗ ಬದುಕುವುದಕ್ಕೆ ಭೌತವಿಜ್ಞಾನ
ಅಗತ್ಯವಾಗಿದೆ. ಆದರೆ ಜೀವಾತ್ಮ ಪರಮಾತ್ಮನೆಡೆಗೆ ಹೋಗದೆ ಇದ್ದರೆ ಬದುಕಿದ್ದೂ ವ್ಯರ್ಥ ಎನ್ನುವ ಶಾಸ್ತ್ರ ಸಂಪ್ರದಾಯಗಳು ಹಿಂದುಳಿದಂತೆಲ್ಲಾ ಸನಾತನ ಧರ್ಮ ಕ್ಕೆ
ಹೊಡೆತ ಹೆಚ್ಚಾಯಿತು.
ಭಾರತ ಮಾತೆ ಎನ್ನುವ ಪವಿತ್ರ ಶಬ್ದ ಭಾರತೀಯ ಮಕ್ಕಳು ಎಷ್ಟರ ಮಟ್ಟಿಗೆ ಕೇಳಿಸಿಕೊಂಡು ಸೇವೆ ಮಾಡುವರೋ ಅಷ್ಟೇ ದೇಶ ಸಧೃಢವಾಗಿರುವುದು. ಇದನ್ನು ಯಾರೋ ಕೆಲವರು ವಿರೋಧಿಸಿದರೆಂದು ಅವರ ವಿರುದ್ದ ಹೋರಾಟ,ಹಾರಾಟ ಮಾರಾಟಕ್ಕೆ ಇಳಿದರೆ ಕೊಳಕನ್ನು ಹತ್ತಿರ ತಂದುಕೊಂಡು ಮೈಗೆ ಮೆತ್ತಿಕೊಂಡಂತೆ. ಇದಕ್ಕಾಗಿಯೇ ಸಾಕಷ್ಟು ಜನರಿರೋವಾಗ ನಮ್ಮ ಮೂಲದ ಧರ್ಮ ಸಂಸ್ಕೃತಿ ಭಾಷೆಯನ್ನು ನಾವೇ ಉಳಿಸಿಬೆಳೆಸಲು ಮನೆಯೊಳಗೆ ಇರುವ ಗೃಹಿಣಿಯರು ಮಕ್ಕಳು ಮುಂದಾದರೆ ಮನೆಯೊಳಗೆ ಸನಾತನ ಧರ್ಮ ಭಾರತ ಮಾತೆ ಸುರಕ್ಷಿತ. ಹೊರಗೆ ಬಂದಷ್ಟೂ ತಿರುಗಿ ಹೋಗೋದು ಕಷ್ಟವಿದೆ.ಸಂಘಟನೆಗಳು ಹೊರಗಿನ ಕಾರ್ಯಕ್ರಮ ವನ್ನು ಆನ್ಲೈನ್ ಮೂಲಕ ಮನೆ ಮನೆಗೆ ತಲುಪಿಸುವಾಗ ಮೊದಲು ತಮ್ಮ ಸುತ್ತಲಿರುವ ರಾಜಕೀಯ ಬಿಟ್ಟು ದೇಶದ ಹಿತಚಿಂತನೆ ಧರ್ಮದ ಹಿತಚಿಂತನೆ ನಡೆಸಿದರೆ ಉತ್ತಮ. ಕಾರಣ ಇಲ್ಲಿ ಯಾರೋ ಹೇಳಿ ಕೇಳಿದಾಕ್ಷಣ ಧರ್ಮ ಜ್ಞಾನ ಬೆಳೆಯದು.ಮೂಲದ ಗುರು ಹಿರಿಯರಲ್ಲಿದ್ದರೆ ಮಾತ್ರ ರಕ್ತಗತವಾಗಿ ಮಕ್ಕಳೂ ಕಲಿಯುವರು.ಶಿಕ್ಷಣದಲ್ಲಿಯೇ ಕೊಡದೆ ಹೊರಗೆಳೆದರೆ ಸತ್ಯ ಅರ್ಥ ವಾಗೋದಿಲ್ಲ. ಒಟ್ಟಿನಲ್ಲಿ ಸನಾತನ ಧರ್ಮ ಹಿಂದಿನ ಧರ್ಮ. ಹಿಂದೆ ಎಲ್ಲರೂ ಸನಾತನಿಗಳೇ ಆಗಿದ್ದರು. ಈಗ ಹಿಂದಿನದನ್ನು ಬಿಟ್ಟು ಮುಂದೆ ಹೋದವರಿಗೆ ಬೇರೆ ಎನಿಸಿದರೂ ಒಳಗೇ ಅಡಗಿರುವ ಆಶಕ್ತಿ ಕಾಣೋದಿಲ್ಲ. ಒಳಗಿನ ಶಕ್ತಿಯನ್ನು ನಾವೇ ವಿರೋಧಿಸಿದರೆ ನಮಗೆ ನಾವೇ ಶತ್ರುಗಳಲ್ಲವೆ?
ದೈವತ್ವಕ್ಕೆ ತತ್ವ ಬೇಕಿದೆ. ತತ್ವವನ್ನು ತಂತ್ರವಾಗಿಸಿದರೆ ಅತಂತ್ರ ಜೀವನ. ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ.
ಆತ್ಮಕ್ಕೆ ಸಾವಿಲ್ಲ.ಸನಾತನ ಧರ್ಮ ಕ್ಕೂ ಸಾವಿಲ್ಲ.ಆದರೆ ಮಾನವ ಮಾತ್ರ ಧರ್ಮ ದ ಹೆಸರಿನಲ್ಲಿ ಒಡಕುತಂದು ಸಾಯೋದು ತಪ್ಪುತ್ತಿಲ್ಲ.ಈಗಿನ ಹಿಂದೂ ಮುಂದಿನ ಇಸ್ಲಾಂ ಮುಸ್ಲಿಂ ಆಗಬಾರದೆ? ಯಾವ ಧರ್ಮದಡಿ ಜನ್ಮವಾಗಿದೆಯೋ ಯಾವ ದೇಶದೊಳಗೆ ಜೀವನನಡೆಸಿರುವೆವೋ, ಯಾರಿಗೆ ಮಕ್ಕಳಾಗಿರುವೆವೋ ಅವರ ಋಣ ತೀರಿಸಲು ಧರ್ಮದ ಜೊತೆಗೆ ಸತ್ಯವೂ ಅಗತ್ಯವಾಗಿದೆ.
ಧರ್ಮವೇ ಇಲ್ಲದ ಸತ್ಯ ಕುರುಡು,ಸತ್ಯವಿಲ್ಲದ ಧರ್ಮ/ಕುಂಟುತ್ತದೆ. ಲಕ್ಷಾಂತರ ರೂ ಧರ್ಮ ಮಾರ್ಗದಲ್ಲಿ ಗಳಿಸಲಾಗದು. ಆದರೆ ಧರ್ಮ ಕಾರ್ಯಕ್ಕೆ ಬಳಸಬಹುದು. ಹಾಗೆ ಬಳಸಬೇಕಾದರೂ ಆ ಹಣದ ಮೂಲ ಯಾವ ಧರ್ಮದ್ದು ಎನ್ನುವುದೂ ಮುಖ್ಯ. ಅಸುರಧರ್ಮ ದವರಿಂದ ಪಡೆದು ಸುರರ ಧರ್ಮ ಉಳಿಸುತ್ತೇವೆಂದರೆ ಅಸುರ ಶಕ್ತಿ ಹೆಚ್ಚುವುದು. ಸೂಕ್ಮವಾಗಿರುವ ಈ ಋಣದ ಲೆಕ್ಕಾಚಾರ ಕಣ್ಣಿಗೆ ಕಾಣದೆ ಮನಸ್ಸಿಗೆ ಬಂದಂತೆ ಹರಿದಾಡುತ್ತಿದೆ. ಹಿಂದೂಸ್ತಾನದಲ್ಲಿದ್ದು ಪರಕೀಯರಾಗಿದ್ದರೆ ಯೋಗವಿಲ್ಲ.
ಹಾಗೇ ಪರದೇಶದಲ್ಲಿದ್ದು ಹಿಂದೂಸ್ತಾನಿ ಭಾರತೀಯರು ಎಂದರೂ ಯೋಗವಿಲ್ಲ. ಪರಮಾತ್ಮನ ಒಳಗಿದ್ದು ಜೀವಾತ್ಮ ಬೇರೆ ಎಂದರೆ ಯೋಗವಲ್ಲ. ಜೀವಾತ್ಮನೇ ಪರಮಾತ್ಮ ಎಂದರೂ ಸರಿಯಲ್ಲ. ಹೀಗಾಗಿ ಯಾರೆಲ್ಲೇ ಇರಲಿ ತನ್ನ ತಾನರಿತು ನಡೆದರೆ ಉತ್ತಮ ಶಾಂತಿ. ಯಾರೂ ಶಾಶ್ವತವಲ್ಲ
ಯಾವುದೂ ಸ್ಥಿರವಾಗಿರಲ್ಲ.ಬದಲಾವಣೆ ಜಗದ ನಿಯಮ.
ಭೂಮಿಯ ಮೇಲೆ ಮನುಕುಲವಿದೆ.ಮನುಕುಲವು ಸನಾತನಕಾಲದಿಂದಲೂ ಇದೆ ಎಂದರೆ ನಾವೆಲ್ಲರೂ ಸನಾತನಿಗಳೇ ಅಲ್ಲವೆ? ತಿಳಿಯದವರಿಗೆ ತಿಳಿಸಬಹುದು.ಅರ್ಧ ತಿಳಿದವರಿಗೆ ತಿಳಿಸಲಾಗದು. ಅವರು ಭೂಮಿ ಮೇಲಿದ್ದರೂ ಆಕಾಶ ನೋಡಿಕೊಂಡಿರುವರು.
No comments:
Post a Comment