ಸಂನ್ಯಾಸಿಗಳು ಭಗವಂತನ ಪಾದ ಹಿಡಿದಿರುವರು,ಪರಮಸತ್ಯದ ದಾರಿಯಲ್ಲಿರುವರು,
ನಾವ್ಯಾರ ವಶದಲ್ಲಿರೋದು?
ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...
Friday, September 22, 2023
ನಿಜವಾದ ಸಂನ್ಯಾಸಿಗಳು ಯಾರು?
ಸಂನ್ಯಾಸ ಸ್ವೀಕರಿಸಿದ ನಂತರ ಸಂಸಾರಕ್ಕೆ ಬರಬಾರದೆ? ಸಂಸಾರದಲ್ಲಿ ದ್ದು ಸಂನ್ಯಾಸಿಗಳಾಗಿರಬಾರದೆ ಎನ್ನುವ ಪ್ರಶ್ನೆಗೆ ಉತ್ತರವಿಷ್ಟೆ ಸಂನ್ಯಾಸ ಎಂದರೆ ಏನು ಎನ್ನುವ ಬಗ್ಗೆ ತಿಳಿದವರು ಈ ಪ್ರಶ್ನೆ ಮಾಡೋದಿಲ್ಲ ವೇಷ ಹಾಕೋದೂ ಇಲ್ಲ.ಜ್ಞಾನಾರ್ಜನೆಗೆ ತೊಡಕಾಗುವ ದೂರವಿದ್ದವರಿಗೆ ಸಂನ್ಯಾಸಿಗಳೆಂದರು. ಈಗ ಪೀಠದ ಅಧಿಕಾರ ಸಾಮಾಜಿಕ ಜವಾಬ್ದಾರಿ ,ಸಂಸಾರಿಗಳ ಸಹಕಾರ, ರಾಜಕೀಯದ ಒತ್ತಡ ಎಲ್ಲಾ ಹೊತ್ತು ನಡೆಯುವ ಪರಿಸ್ಥಿತಿ ಇದ್ದವರ ಮನಸ್ಸು ಎಷ್ಟರ ಮಟ್ಟಿಗೆ ಶಾಂತವಾಗಿರಬಹುದು. ಇದ್ದರೆ ಅವರು ನಿಜವಾದ ಸಂನ್ಯಾಸಿಗಳೆ? ಎನ್ನುವ ಪ್ರಶ್ನೆ ಏಳುತ್ತದೆ. ಒಟ್ಟಿನಲ್ಲಿ ಯಾರ ಮನಸ್ಸನ್ನು ಯಾರೋ ಸರಿಪಡಿಸಲಾಗದೆ ಅಧಿಕಾರ,ಹಣಸ್ಥಾನ, ಜನಬಲವಿದ್ದರೆ ಏನಾದರೂ ಆಗಬಹುದು.ಆತ್ಮಜ್ಞಾನಿಯಾಗಲಾರ. ಹಿಂದಿನ ವಿಷಯ ತಿಳಿದು ತಿಳಿಸಬಹುದು.ಹಿಂದೆ ಸಂನ್ಯಾಸಿಗಳು ನಡೆದಂತೆ ನಡೆಯಲಾಗದು. ದೇವರ ವಿಷಯ ತಿಳಿಸಬಹುದು.ದೈವತ್ವ ಪಡೆಯುವುದು ಕಷ್ಟವಿದೆ. ಆದರೂ ಅಸಾಧ್ಯವೇನಲ್ಲ.ಇದಕ್ಕೆ ಸ್ವತಂತ್ರ ಜ್ಞಾನವಿರಬೇಕು. ಸ್ವತಂತ್ರ ಜೀವನವಿರಬೇಕು, ವಾಸ್ತವತೆಯನ್ನು ಅನುಭವದ ಆಧಾರದ ಮೇಲೇ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಯಾರೋ ಹೇಳಿದ್ದನ್ನು ಕೇಳದೆ ಪೂರ್ವಾ ಗ್ರಹ ಪೀಡಿತರಾಗದೆ ಸಹಕಾರ ಆಶೀರ್ವಾದ ಮಾಡಿ ಧರ್ಮ ರಕ್ಷಣೆಯಾಗುತ್ತದೆ. ಶ್ರೀಮಂತ ವ್ಯಕ್ತಿಗೂ ಶ್ರೀಮಂತ ಜ್ಞಾನಿಗೂ ವ್ಯತ್ಯಾಸವಿಷ್ಟೆ. ಹಣವನ್ನು ಜ್ಞಾನದಿಂದ ಸದ್ಬಳಕೆ ಮಾಡಿಕೊಳ್ಳುವುದು. ಆದರೆ ವ್ಯಕ್ತಿಯ ಹಿಂದೆ ಜ್ಞಾನಿ ಇದ್ದರೆ ಅಧರ್ಮ ಕ್ಕೆ ಹಣಬಳಸಲಾಗುತ್ತದೆ. ಅದಕ್ಕೆ ಹೇಳಿದ್ದು ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸವೇ ಶ್ರೇಷ್ಠ ವೆಂದು. ಬಾಲ್ಯಯೌವನ ಎಲ್ಲರಿಗೂ ಒಂದೇ ಗೃಹಸ್ಥ ನಾಗಿ ಸಂನ್ಯಾಸಿಯಾಗೋದು ವಿರಳ. ಗೃಹಸ್ಥ ರಿಗೆ ನಿರ್ಮೋಹ,ನಿರಾವಲಂಬನೆ,ನಿಸ್ವಾರ್ಥ, ನಿರಹಂಕಾರ ಇಲ್ಲದೆ ಬದುಕುವುದಕ್ಕೆ ಆತ್ಮಜ್ಞಾನ ಬೇಕು.ಇದು ಸಂನ್ಯಾಸಿಗಳಿಂದ ತಿಳಿಯಬೇಕು. ಹೀಗಾಗಿ ಸಂನ್ಯಾಸಿಗಳನ್ನು ಸಂಸಾರಿಗಳು ನಡೆಸದೆ ಸಂಸಾರಿಗಳನ್ನು ಸನ್ಮಾರ್ಗದಲ್ಲಿ ಸಂನ್ಯಾಸಿಗಳು ನಡೆಸಬೇಕಾದರೆ ಅವರಿಗೆ ಸ್ವತಂತ್ರ ಜ್ಞಾನದ ಜೀವನ ಅಗತ್ಯವಿದೆ. ಅಲ್ಲಿಯವರೆಗೆ ಮಧ್ಯವರ್ತಿಗಳಷ್ಟೆ.
Subscribe to:
Post Comments (Atom)
-
ಇವತ್ತಿನ ವಿಶೇಷ ಲೇಖನದಲ್ಲಿ ಎಲ್ಲಾ ವಿಷಯದ ಮೂಲವೇ ವ್ಯವಹಾರವಾಗಿದೆ ಎನ್ನುವುದಾಗಿದೆ. ಇದು ಸತ್ಯವೆ ಅಸತ್ಯವೆ ನಿಮ್ಮಭಿಪ್ರಾಯ ತಿಳಿಸಿ ಸಕ್ಕರೆಯಲ್ಲಿ ವಿಷವಿದೆ ಎನ್ನುವುದ...
-
ಚಿಂತೆ ಚಿತೆಗೆ ಸಮಾನವೆನ್ನುವರು. ಚಿಂತೆಯಿಲ್ಲದ ಮನುಷ್ಯನಿಲ್ಲ.ಚಿಂತೆಯಿಲ್ಲದ ಮಹಾತ್ಮರಿದ್ದರು. ಮಹಾತ್ಮರ ಚಿಂತನೆಗಳು ಸತ್ವಪೂರ್ಣ ವಾದ ಕಾರಣ ಆಗೋದೆಲ್ಲಾ ಒಳ್ಳೆಯದಕ್ಕೆ, ಆ...
-
ಸಾಮಾನ್ಯವಾಗಿ ಆತ್ಮಜ್ಞಾನ ಪಡೆದ ಮಹಾತ್ಮರನ್ನು ಗಮನಿಸಿದರೆ ಅವರಲ್ಲಿ ಮುಗ್ದತೆಯೇ ಪ್ರಾರಂಭದ ಶಿಕ್ಷಣವಾಗಿತ್ತು ಗುರು ಭಕ್ತಿ ಗುರುವಿನ ಮೇಲಿರುವ ಭಯದಿಂದ ಉತ್ತಮ ಜ್ಞಾನದ ಶಿ...
No comments:
Post a Comment