ಸರ್ಕಾರದ ಖಜಾನೆ ತುಂಬಲುಮಧ್ಯದಂಗಡಿ ಜೊತೆಗೆ ಗ್ರಂಥಾಲಯಗಳನ್ನು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಮಾಧ್ಯಮಗಳ ಸುದ್ದಿಗೆ ಜನಸಾಮಾನ್ಯರಾಗಿದ್ದು ಪ್ರಜೆಯಾಗಿದ್ದು ನಮ್ಮ ಅನಿಸಿಕೆ,ಅಭಿಪ್ರಾಯ ಹೀಗಿದೆ ಓದಿ ಪ್ರತಿಕ್ರಿಯೆ ನೀಡಿ. ಉತ್ತರ ಬರೋದಿಲ್ಲ ಕಾರಣ ಸತ್ಯಕ್ಕೆ ಯಾವತ್ತೂ ಪ್ರಶ್ನೆ ಇರದು.ಮೌನವೇ ಉತ್ತರ. ಇಲ್ಲಿ ದೇಶದ ಸಮಸ್ಯೆಗೆ ಕಾರಣವೇ ಮನರಂಜನೆಯ ಜೀವನಶೈಲಿ. ಮನಸ್ಸನ್ನು ತಡೆಹಿಡಿಯಲು ಉತ್ತಮ ಜ್ಞಾನದ ಅಗತ್ಯವಿದೆ.ಜ್ಞಾನವು ಪುಸ್ತಕ ಓದಿ ಪಡೆಯುವುದು ಸರಿ ಆದರೂ ಯಾವ ಪುಸ್ತಕ ಓದಬೇಕೆಂಬುದು ಬಹಳ ಮುಖ್ಯ.ಗ್ರಂಥಾಲಯಗಳು ಸಮಯ ಕಳೆಯುವುದಕ್ಕಾಗಿರದೆ ಜ್ಞಾನೋದಯದ ತಾಣವಾಗಬೇಕಿದೆ. ಅಂತಹ ಆಂತರಿಕ ಶಕ್ತಿಯನ್ನು ಹೆಚ್ಚಿಸುವ ಪುಸ್ತಕಗಳಿಗೇನೂ ಭಾರತದಲ್ಲಿ ಕೊರತೆಯಿಲ್ಲವಾದರೂ ಹೆಚ್ಚು ಮಂದಿ ಇದನ್ನು ಓದದಿರೋದು ಮನಸ್ಸಿನ ರೋಗಕ್ಕೆ ಕಾರಣವಾಗುತ್ತಿದೆ. ಈ ರೋಗವನ್ನು ಮಧ್ಯದಂಗಡಿಯಲ್ಲಿ ಕಳೆದುಕೊಳ್ಳಲು ಸಾಧ್ಯವೆ? ಅಂತಹ ಚಟಕ್ಕೆ ಬಿದ್ದವರು ಚಟ್ಟ ಏರಿರೋದೇ ಹೆಚ್ಚು. ಬುದ್ದಿವಂತಿಕೆ ಹೊರಗಿನ ಶಕ್ತಿ ಜ್ಞಾನ ಒಳಗಿನ. ಶಕ್ತಿ. ಇವೆರಡೂ ಒಂದೇ ವಿಷಯದಲ್ಲಿದ್ದರೆ ನಿಜವಾದ ಶಾಂತಿ. ಇಂದಿನ ಶಿಕ್ಷಣದಲ್ಲಿ ಮಕ್ಕಳ ಜ್ಞಾನಕ್ಕೆ ವಿರುದ್ದದ ವಿದ್ಯೆ ನೀಡುತ್ತಾ ಪೋಷಕರು ಹೊರಗೆ ಬಂದು ಮಕ್ಕಳನ್ನು ಹುಡುಕುವಂತಾಗಿದೆ.ಕಾರಣ ಅವರು ದಾರಿತಪ್ಪಿಸಿಕೊಳ್ಳಲು ಅವರ ಶಿಕ್ಷಣವೇ ಕಾರಣವಾಗಿರುವಾಗ ಹಿಂದಿರುಗಲಾಗದೆ ಎಲ್ಲೋ ಮೈಮರೆತು ಹೋಗಿರುತ್ತಾರೆ.ಇದನ್ನು ಸರ್ಕಾರದ ಹಣದಿಂದ, ಯೋಜನೆಗಳಿಂದ ಸರಿಪಡಿಸುವ
ಶತಪ್ರಯತ್ನದಲ್ಲಿ ಸೋತಿದ್ದು ಯುವಜನತೆಯೇ ಎಲ್ಲಿ ತಪ್ಪಾಗಿದೆಯೋ ಅಲ್ಲಿ ಸರಿಪಡಿಸದೆ ಹೊರಗಿನಿಂದ ತಪ್ಪನ್ನು ತೇಪೆಹಾಕಿ ಮುಚ್ಚಿ ಮನರಂಜನೆ ಕಡೆಗೆ ಇಳಿದರೆ ಒಳಗೇ ಆತ್ಮವಂಚನೆ ಹೆಚ್ಚಾಗುತ್ತದೆ. ಒಟ್ಟಿನಲ್ಲಿ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಕುಡಿತ ಕಡಿತಗೊಳಿಸಿ ಉತ್ತಮ ಗ್ರಂಥ ಗಳನ್ನು ಮಕ್ಕಳ ವಿದ್ಯಾಭ್ಯಾಸದಲ್ಲಿರಿಸಿ ಓದಿಸಿ ಕಲಿಸಿದರೆ ಮಕ್ಕಳಕುಣಿತ ಪೋಷಕರಿಗೆ ಆತ್ಮ ಸಂತೋಷ ನೀಡಿ ಸಮಾಜದಲ್ಲಿ ಉತ್ತಮ ಬದಲಾವಣೆ ಕಾಣಬಹುದು. ಇಲ್ಲಿ ಮನರಂಜನೆಗಾಗಿ ಆತ್ಮವಂಚನೆಯಲ್ಲಿರುವ ಸಮಾಜದ ಜನರಿಗೆ ಕುಡಿತದ ದುಷ್ಪರಿಣಾಮದ ಬಗ್ಗೆ ತಿಳುವಳಿಕೆಯಿಲ್ಲವೆಂದಿಲ್ಲ. ತಿಳಿದೂ ಈ ಗುಂಪಿಗೆ ಸೇರುತ್ತಿರುವ ಯುವಕರ ಮನಸ್ಥಿತಿ,ಪರಿಸ್ಥಿತಿಯ ಬಗ್ಗೆ ತಿಳಿದರೆ ದೊಡ್ಡ ಷಡ್ಯಂತ್ರದ ಜಾಲವೇ ಹಿಂದಿರುವ ಸತ್ಯ ತಿಳಿಯಬಹುದಾಗಿದೆ. ಇದಕ್ಕೆ ಮಧ್ಯವರ್ತಿಗಳೇ ಕಾರಣವಾಗಿರುವರು.ತಿಳಿದೋ ತಿಳಿಯದೆಯೋ ದುಷ್ಟರಿಗೆ ಸಹಕರಿಸುತ್ತಾ ಮನರಂಜನೆಯಲ್ಲಿ ಮುಳುಗಿರುವ ಮನುಕುಲಕ್ಕೆ ತನ್ನೊಳಗೇ ಅಡಗಿರುವ ದೇವಾಸುರರ ಆಟ ಅರ್ಥ ವಾಗದೆ ಜೀವನವನ್ನೇ ಸುರಪಾನಕ್ಕೆ ಬಲಿಪಶುಮಾಡಿಕೊಂಡು ಆತ್ಮವಂಚನೆಯಲ್ಲಿಯೇ ಬದುಕುವಂತಾದರೆ ಇದನ್ನು ಸಾಧನೆ ಎನ್ನಲಾಗದು.ಯುವ ಜನರನ್ನು ತಮ್ಮೆಡೆ ಎಳೆದಾಡಿಕೊಂಡು ಸಂಸಾರದಿಂದ ಸಮಾಜದೆಡೆಗೆ ಎಳೆದು ರಾಜಕೀಯದಾಳವಾಗಿಸಿ ಮತದಾನದ ಹೆಸರಿನಲ್ಲಿ ಮತಬೇಟೆಗೆ ಬಳಸಿ ಮಾಧ್ಯಮಗಳಿಂದ ಹಿಡಿದು ಮಠಗಳವರೆಗೂ ಮನರಂಜನೆಗಾಗಿ ಸುರಕ್ಷಿತವಾಗಿ ಸುಖವಾಗಿದ್ದಮಕ್ಕಳನ್ನು ಮಹಿಳೆಯರನ್ನು ತಮ್ಮ ರಾಜಕೀಯದ ದಾಳವಾಗಿಸಿಕೊಂಡು ಆಟವಾಡುತ್ತಿದ್ದಾರೆಂದರೆ ನಂಬಲು ಕಷ್ಟ.ಕಾರಣ ಮನಸ್ಸು ಹೊರಗೆ ಎಳೆದಷ್ಟೂ ಒಳಗೇ ಕುಸಿಯುವ ಸತ್ಯ ಧರ್ಮ ದ ಜ್ಞಾನದ ಬಗ್ಗೆ ಅರಿವಾಗದೆ ಎಲ್ಲೋ ಕಳೆದುಹೋಗುತ್ತದೆ. ಕಳೆದುಕೊಂಡ ಮೇಲೇ ಹುಡುಕುವುದೇ ಕಷ್ಟ.ಹೀಗಾಗಿ ಈ ಹುಡುಕಾಟದಲ್ಲಿ ಸಿಗದೆ ಅಲೆದಾಡುವವರೆ ಹೆಚ್ಚು ಹುಡುಗರು ಹುಡುಗಿಯರಿದ್ದಾರೆ.
ಮಧಾನ್ವಿತರು ಮದಿರೆಯರೂ ಬಾರು ಬಾರಿಗೆ ಹೋಗುತ್ತಾ
ಮನರಂಜನೆಗಾಗಿ ಈ ಮಧುಪಾನಮತ್ತರಾಗಿ ತಮ್ಮ ತಾವು ಮರೆತು ಸಮಾಜಕ್ಕೆ ದೊಡ್ಡ ಮಹನೀಯರೆನಿಸಿಕೊಂಡರೆ ಸಾಮಾನ್ಯರ ಪಾಡೇನು? ಒಟ್ಟಿನಲ್ಲಿ ಎಲ್ಲದ್ದಕ್ಕೂ ಸರ್ಕಾರದ ಕಾನೂನಿನ ಅಗತ್ಯವೇ ಇರಲಿಲ್ಲ.ಸರ್ಕಾರವಿಲ್ಲದೆ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡವರೆ ಮಹಾತ್ಮರಾಗಿರೋದು.
ಮಹಾತ್ಮರಿಗೆ ಈ ದುಷ್ಚಟಗಳ ಬಗ್ಗೆ ಅರಿವಿರೋದರಿಂದ ಅದರಿಂದ ದೂರವಿದ್ದು ಸಾಧಕರಾಗಿದ್ದರು.ಈಗಿನ ದುಷ್ಟರಿಗೆ ಇದೇ ದೊಡ್ಡ ಬಂಡವಾಳವಾಗುತ್ತಿದೆ ಎಂದರೆ ಸಮಾಜಸುಧಾರಕರು ಸಮಾಜಸುಧಾರಣೆಯ ಹೆಸರಿನಲ್ಲಿ ಏನು ಮಾಡುತ್ತಿರುವುದೆನ್ನುವ ಪ್ರಶ್ನೆ ಏಳುತ್ತದೆ. ಹೊರಗೆ ನಡೆದಷ್ಟೂ ಮನಸ್ಸನ್ನು ತಡೆಹಿಡಿಯಲಾಗದು. ಇದಕ್ಕೆ ಈ ಮಾರ್ಗ ಹಿಡಿದರೆ ಆತ್ಮದುರ್ಭಲ ಭಾರತವಾಗುತ್ತಿದೆ ಎಂದರ್ಥ.ಇದನ್ನು ತಿಳಿದು ನಡೆಯಲು ಸಾಮಾನ್ಯ ಜ್ಞಾನದ ಅಗತ್ಯವಿದೆ. ವಿಶೇಷಜ್ಞಾನಿಗಳಿಗೆ ಮನರಂಜನೆಯೇ ಮುಖ್ಯವಾದರೆ ಆಗೋದೇ ಹೀಗೆ. ಸಲಹೆ ಕೊಡುವುದಕ್ಕೆ ಸುಲಭ ಸಹನೆಯಿಂದ ಇರೋದೇ ಕಷ್ಟ. ಸರ್ಕಾರದ ದಾರಿತಪ್ಪಿಸಿ ಆಳುತ್ತಿರುವ ಮಧ್ಯವರ್ತಿಗಳು ತಾವೂ ತಮ್ಮ ಜೀವನ ಹಾಳುಮಾಡಿಕೊಂಡು ಒಮ್ಮೆ ಸಾಯಲೇಬೇಕೆನ್ನುವ ಸತ್ಯ ತಿಳಿದು ಸರಿದಾರಿಗೆ ಸಹಕರಿಸಿದರೆ ಉತ್ತಮ ಸಮಾಜಕಾರ್ಯ ವಾಗುತ್ತದೆ. ಕುಣಿಯಬಾರದವ ನೆಲಡೊಂಕು ಎಂದಂತಿದೆ. ಸರ್ಕಾರ ನಡೆಸಲು ಹಣ ಬೇಕು.ಈಕಡೆ ಉಚಿತವೂ ಕೊಡಬೇಕೆಂದರೆ ಅಡ್ಡದಾರಿ ಹಿಡಿಯಲೇಬೇಕು.ಆದರೆ ಇದಕ್ಕೆ ಕಾರಣಕರ್ತರು ಯಾರು? ಅನುಭವಿಸೋರು ಯಾರು? ಎಲ್ಲಾ ಪ್ರಜೆಗಳೇ ಆದಾಗ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಸರಿಯಾದ ಮಾರ್ಗದರ್ಶಕರ ಕೊರತೆಯಿದೆ, ಗುರುಹಿರಿಯರ ಮಾರ್ಗದರ್ಶನ ರಾಜಕೀಯವಾಗಿರಬಾರದು ರಾಜಯೋಗವಾಗಬೇಕಾಗಿತ್ತು.
ರಾಜಯೋಗದೆಡೆಗೆ ಹೋಗಬೇಕಾದರೆ ಹೊರಗಿನ ಭ್ರಷ್ಟ ರಾಜಕೀಯ ಬಿಟ್ಟು ಒಳಗಿನ ಶಿಷ್ಟಾಚಾರಕ್ಕೆ ಸಹಕಾರ ನೀಡಬೇಕಷ್ಟೆ. ಬುದ್ದಿವಂತಿಕೆ ಗಿಂತ ಜ್ಞಾನವೇ ಶ್ರೇಷ್ಠ. ಇದು ಹೊರಗಿಲ್ಲ ಒಳಗಿದೆ. ಅದರಿಂದ ಆತ್ಮರಕ್ಷಣೆ ಆತ್ಮಸಂತೋಷ,ಆತ್ಮಸಂಶೋಧನೆಯಾಗುತ್ತದೆ. ಇದನ್ನು ಅಧ್ಯಾತ್ಮ ಜಗತ್ತು ತಿಳಿದು ನಡೆದರೆ ಆತ್ಮನಿರ್ಭರ ವಾಗುತ್ತದೆ. ಒಟ್ಟಿನಲ್ಲಿ ಮನರಂಜನೆಯು ಆತ್ಮಜ್ಞಾನದೆಡೆಗೆ ಸಾಗಿದರೆ ಈ ದುಷ್ಚಟಗಳಿಂದ ಮಾನವ ದೂರವಾಗಬಹುದಿತ್ತು.ಇದಕ್ಕೆ ವಿರುದ್ದದ ಕಾರ್ಯಾಚರಣೆಯು ಇಂದಿನ ದಿನಗಳಲ್ಲಿ ಹೆಚ್ಚಾಗಿರೋದು ದುರಂತ ವಷ್ಟೆ.ವಿನಾಶಕಾಲೇ ವಿಪರೀತ ಬುದ್ದಿ ಎಂದಂತೆ. 'ಬಾರು' ಬಾರಿಗೆ ಹೋಗುವ ಬಾಲಕ ಬಾಲಕಿಯರನ್ನು ತಡೆಯಲು ಉಚಿತ ಭಾಗ್ಯಗಳಿಂದ ಅಸಾಧ್ಯ. ಇದಕ್ಕೆ ಭಾಗ್ಯೋದಯವನ್ನು ಉತ್ತಮ ಶಿಕ್ಷಣ ನೀಡಿಯೇ ಮಾಡಬೇಕೆಂದರೆ ನಮ್ಮ ಗುರುಹಿರಿಯರು ಪೋಷಕರೆ ವಿರೋಧ ವ್ಯಕ್ತಪಡಿಸಿದರೆ ಸರ್ಕಾರಗಳ ನಡಿಗೆ ಬಾರಿನೆಡೆಗೆ ಇರುತ್ತದೆ ಎಚ್ಚರವಾಗಿದ್ದರೆ ಭಾರತ ಬಾರಿನ ರಥ ಆಗೋದಿಲ್ಲವಲ್ಲ.
ಇದಕ್ಕೆ ನಿಮ್ಮ ಉತ್ತರವಿದೆಯೆ ತಿಳಿಸಿ , ಬೇರೆಯವರಿಗೂ ಕಳಿಸಿ.
No comments:
Post a Comment