ನಾವೆಲ್ಲರೂ ಮಾಡುವ ತಪ್ಪು ಸುಮ್ಮನಿರಬೇಕಾದಲ್ಲಿ ಮಾತನಾಡುವುದು ಮಾತನಾಡಬೇಕಾದಲ್ಲಿ ಸುಮ್ಮನಿರುವುದು .
ಭಗವದ್ಗೀತೆ ಶ್ರೀ ಕೃಷ್ಣನ ಉಪದೇಶವೋ ಉಪಕಾರವೋ ಅರ್ಜುನ ಮಾತ್ರ ಹೆಚ್ಚು ಪ್ರಶ್ನೆ ಕೇಳದೆಯೇ ಉತ್ತರ ಕಂಡುಕೊಂಡಿದ್ದು ಜ್ಞಾನದಿಂದಷ್ಟೆ. ಸರಿ ತಪ್ಪು ಎರಡು ರೀತಿಯಲ್ಲಿ ಇರುವುದರಿಂದ ಅಧ್ಯಾತ್ಮ ಸತ್ಯ ಭೌತಿಕ ಸತ್ಯದ ನಡುವೆ ಮಾತುಕತೆಗಳಾಗುತ್ತಾ ಕೊನೆಗೊಮ್ಮೆ ಅದೇ ದೊಡ್ಡ ಕಥೆಕಾದಂಬರಿ,ನಾಟಕ ರೂಪದಲ್ಲಿ ಪ್ರದರ್ಶನದ ವಸ್ತುವಾಗಿ ಮನರಂಜನೆಯಲ್ಲಿ ನಿಂತುಕೊಳ್ಳುವಾಗ ಮನರಂಜನೆ ಯಾರಿಗೆ ಬೇಡ? ರಾಮಾಯಣ ಮಹಾಭಾರತದ ಕಥೆಗಳೇ ಮನರಂಜನೆಯ ಸಾಧನವಾಗಿರುವಾಗ ಉಳಿದ ಜನಸಾಮಾನ್ಯ ರ ಕಥೆ ಕಾದಂಬರಿ ನಾಟಕದ ವಿಷಯದಿಂದ ಏನಾದರೂ ಜ್ಮ್ಮಞಾನಬರುವುದಾಗಿದ್ದರೆ ಜಗತ್ತು ಇಷ್ಟು ಜನಸಂಖ್ಯೆ ಮೀರಿ ಬೆಳೆಯುತ್ತಿರಲಿಲ್ಲ.ಎಲ್ಲರಿಗೂ ಮುಕ್ತಿ ಸಿಕ್ಕಿದರೆ ಭೂಮಿಯಲ್ನೋಲಿ ಮನುಕುಲವೇ ಇರದು. ಹೀಗಾಗಿ ನಾಟಕ ನೋಡಿಕೊಂಡು
ಮನರಂಜನೆಯಲ್ಲಿರುವಾಗ ತಪ್ಪು ಕಾಣದೆಯೇ ಮಾತನಾಡದೆ ಬೆಳೆಯುತ್ತದೆ.ಸತ್ಯ ಹಿಂದೆ ಸರಿಯುತ್ತದೆ. ಹಾಗಾಗಿ ಭೌತಿಕವಿಜ್ಞಾನಕ್ಕೆ ಹೆಚ್ಚು ಸಹಕಾರ ಸಿಕ್ಕಿದ್ದಷ್ಟೂ ಅಧ್ಯಾತ್ಮ ವಿಜ್ಞಾನ ಹಿಂದೆ ಸರಿಯುತ್ತಾ ತಪ್ಪಿತಸ್ಥ ರ ನಡುವೆಯೇ ಇದ್ದು ನಾನೇ ಸರಿ ಎನ್ನುವ ನಾಟಕದಲ್ಲಿರುವುದು.
ಮಕ್ಕಳ ತಪ್ಪು ಪೋಷಕರುನೋಡಿಯೂ ಸುಮ್ಮನಿದ್ದರೆ ಅದೇ ತಪ್ಪು ಬೇರೆಮಕ್ಕಳು ಮಾಡುವಾಗ ಮಾತನಾಡಿದರೂ ವ್ಯರ್ಥ. ಹಾಗೆ ನಮ್ಮ ದೇಶದಲ್ಲಿ ನಡೆಯುತ್ತಿರುವಹಿಂಸೆ ,ಅನಾಚಾರ, ಭ್ರಷ್ಟಾಚಾರ ನನಗೇನೂ ಸಂಬಂಧಿಸಿಲ್ಲ ಎಂದು ಸುಮ್ಮನಿರೋರು ಹೆಚ್ಚಾದಂತೆ ಅದೇ ತನ್ನ ಕಾಲುಬುಡ ಬಂದಾಗ ಸುಮ್ಮನಿರಬಹುದೆ? ಇಲ್ಲವಾದರೆ , ಇಲ್ಲಿ ತಮ್ಮ ಸ್ವಾರ್ಥ ಸುಖಕ್ಕಾಗಿ ಹೆಚ್ಚಿನ ಜನರು ಮಾತನಾಡುತ್ತಾರೆ ಅದೇ ಮುಂದೆ ದು:ಖಕ್ಕೆ ಕಾರಣವಾದಾಗ ಮೌನವಾಗಿರಲಾಗದೆ ಮತ್ತೆ ಪರರನ್ನೇ ದೋಷಿಯನ್ನಾಗಿಸಿ ಹೋರಾಟಕ್ಕಿಳಿದರೆ ಆಂತರಿಕಶುದ್ದಿ ಸಾಧ್ಯವಿಲ್ಲ.
ಹಿಂದಿನಿಂದಲೂ ಬಂದಿರುವ. ಈ ಗುಣ ಹುಟ್ಟುಗುಣಸುಟ್ಟರೂ ಹೋಗೋದಿಲ್ಲ ಎನ್ನುವರು.ಪೂರ್ವ ಜನ್ಮದ ಫಲಾಫಲ ಈ ಜನ್ಮದಲ್ಲಿ ಈ ಜನ್ಮದ ಫಲಾಫಲ ಮುಂದಿನಜನ್ಮದಲ್ಲಿ ಅನುಭವಿಸಲೇಬೇಕೆನ್ನುವ ಕರ್ಮ ಸಿದ್ದಾಂತವನರಿತವರೆ ಸತ್ಯ ತಿಳಿದೂಮಾತನಾಡದ ಪರಿಸ್ಥಿತಿ ಇಂದಿದೆ ಎಂದಾಗ ಸತ್ಯ ತಿಳಿಯದವರ ಪಾಡೇನು?
ಮಾತುಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಎಂದಂತೆ
ಮಾತನಾಡಿ ಅಸತ್ಯ ಬೆಳೆಸೋದಕ್ಕಿಂತ ಮಾತನಾಡದೆ ಸತ್ಯ ಬೆಳೆಸೋದೇ ಉತ್ತಮ. ಕಾರಣ ಸತ್ಯ ನಿಧಾನವಾಗಿ ಮಾತನಾಡುತ್ತದೆ.ಅಸತ್ಯ ಬೇಗ ಒದರುತ್ತದೆ. ಅದಕ್ಕಾಗಿ ಮಹಾತ್ಮರುಗಳು ಮೌನಕ್ಕೆ ಹೆಚ್ಚು ಜಾರಿದ್ದರು. ಭೌತಿಕದಲ್ಲಿ ಮೌನವಾಗಿರೋರನ್ನು ಮೂಕರು ಎನ್ನಬಹುದು. ಅಧ್ಯಾತ್ಮ ದಲ್ಲಿ ಮೌನವಾಗಿದ್ದರೆ ಸಾಧಕರಾಗೋದು. ಒಳ ಹೊಕ್ಕಿ ಸತ್ಯತಿಳಿದರೂ ನೋಡಲು ಕಷ್ಟ.ತೋರಿಸಲೂ ಕಷ್ಟಹೀಗಾಗಿ ಇರುವಒಂದೇ ಸತ್ಯ ತಿಳಿದಮೇಲೆ ಮೌನವೇ ಮಾತಾಗಬೇಕು.
ಚರ್ಚೆ, ಸಂವಾದ,ವಾದ,ವಿವಾದಗಳಿಗೆ ಮಾತು ಅಗತ್ಯವಿದೆ.
ಯಾರೊಂದಿಗೆ ಮಾತನಾಡಬೇಕೆಂಬುದನ್ನು ಮೌನವಾಗಿ ಚಿಂತಿಸಬೇಕಷ್ಟೆ.ವಿಜ್ಞಾನಿ ವಿಜ್ಞಾನಿಯೊಂದಿಗೆ ಮಾತನಾಡಬೇಕು ಆತ್ಮಜ್ಞಾನಿಯೊಂದಿಗೆ ವಾದ ಮಾಡಲಾಗದು. ಕಣ್ಣಿಗೆ ಕಾಣೋದನ್ನು ಅಸತ್ಯವೆಂದರೆ
ನಂಬಲು ಸಾಧ್ಯವಿಲ್ಲ. ಇದರರ್ಥ ಶಾಶ್ವತವಲ್ಲ ಎಂದರೆ ಸತ್ಯ.ಕಾಣದ್ದನ್ನು ಇದೆ ಎಂದರೂ ನಂಬಲಾಗದು, ಉದಾಹರಣೆಗೆ' ದೈವತ್ವ ನಿರಾಕಾರ ಶಕ್ತಿಯಾಗಿ ಎಲ್ಲರೊಳಗೂ ಇದ್ದರೂ ಒಳಹೊಕ್ಕಿ ಕಂಡುಕೊಳ್ಳದವರಿಗೆ ದೇವರಿಲ್ಲ ನಾನೇ ಎಲ್ಲಾ ಎಂದಾಗ ಸಾವು ಬಂದಾಗಲೇ ಸತ್ಯ ತಿಳಿಯೋದು. ಆತ್ಮ ಅಮರ ಕಣ್ಣಿಗೆ ಕಾಣದು, ದೇಹವಿದೆ ಕಾಣುತ್ತದೆ. ಎರಡೂ ನನ್ನದೇ ಆದರೂ ನನ್ನ ನಾಅರಿಯದೆ ಮಾತನಾಡಿದರೆ ಅಸತ್ಯ.ಹೀಗಾಗಿ ಮಾತನಾಡುವ ಸಮಯದಲ್ಲಿ ಎರಡೂ ಕಡೆ ಎಚ್ಚರವಾಗಿರೋರು ಜ್ಞಾನಿಗಳು. ಇಹ ಪರದ
No comments:
Post a Comment