ಪುರಾಣ, ಇತಿಹಾಸದ ಕಥೆಗಳಲ್ಲಿ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡೋದಕ್ಕಾಗಿಯೇ ಸಾಕಷ್ಟು ಧರ್ಮ ಸೂಕ್ಷ್ಮ ಗಳನ್ನು ಮಹರ್ಷಿಗಳು ಕಂಡುಕೊಂಡು ರಾಜಾಧಿರಾಜರಿಗೆ ತಿಳಿಸುವುದರ ಮೂಲಕ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡಿದ್ದರು. ಕಾಲಾನಂತರದಲ್ಲಿ ಅದೇ ದೊಡ್ಡ ವಾದ ವಿವಾದಕ್ಕೆ ಎಡೆ ಮಾಡಿಕೊಟ್ಟು ರಾಜಕೀಯವೇ ಧರ್ಮ ಕ್ಕಿಂತ ಮುಂದೆ ನಡೆದು ಕೆಳಗಿದ್ದ ಸಾಮಾನ್ಯಜ್ಞಾನ ಕುಸಿಯಿತು. ಈಗ ನಾವೆಲ್ಲರೂ ಸಾಮಾನ್ಯ ಮಾನವರಾಗಿದ್ದು ಈ ವಿಚಾರದ ಬಗ್ಗೆ ಚಿಂತನೆ ಒಳಗಿಂದಲೇನಡೆಸಿಕೊಂಡರೆ ಇಷ್ಟು ವರ್ಷದ ಸ್ವಾತಂತ್ರ್ಯ ವನ್ನು ನಾವು ಯಾರಿಗೆ ಯಾಕೆ ಹೇಗೆ ಕೊಟ್ಟು ಬೆಳೆಸಿದ್ದೇವೆ.ಇದರಿಂದ ನಮಗೆಷ್ಟು ಜ್ಞಾನ ಬಂದಿದೆ? ನಮ್ಮ ಸಾಲ ಕಳೆದಿದೆ? ಎಂದು ಪ್ರಶ್ನೆ ಹಾಕಿಕೊಂಡರೆ ನಾವೀಗ ಪ್ರಗತಿಯ ಕಡೆಗೆ ಹೊರಟಿರುವೆವೋ ಅಧೋಗತಿಯತ್ತ ನಡೆದಿರುವೆವೋ ಅರ್ಥ ವಾಗಬಹುದು.
ವ್ಯವಹಾರವೇ ಜೀವನ ಎನ್ನುವವರಿಗೆ ಅರ್ಥ ವಾಗದು.
ವ್ಯವಹಾರ ಜೀವನದ ಮೂರನೆಯ ಅಂಗವಷ್ಟೆ. ಮಗು ಜನ್ಮ ಪಡೆಯುವಾಗಲೇ ಅದರ ಮೂಲದ ಧರ್ಮ ಕರ್ಮ ರಕ್ತದಲ್ಲಿರುತ್ತದೆ. ಅದನ್ನು ಬೇರೆ ಮಾಡಲಾಗದಿದ್ದರೂ ಅದರಿಂದ ದೂರವಿಟ್ಟು ಹೊರಗಿನ ಧರ್ಮ ಕರ್ಮಕ್ಕೆ ತೊಡಗಿಸಿಕೊಂಡರೆಒಳಗೇ ಇದ್ದ ಮೂಲ ಹಿಂದುಳಿಯಬಹುದಷ್ಟೆ. ತಿರುಗಿ ಹೋಗದೆ ಆತ್ಮಕ್ಕೆ ತೃಪ್ತಿ ಸಿಗದು ಎನ್ನುವ ಕಾರಣಕ್ಕಾಗಿ ನಮ್ಮ ಸನಾತನ ಹಿಂದೂ ಧರ್ಮವು ಮೂಲ ಶಿಕ್ಷಣದಲ್ಲಿಯೇ ಧಾರ್ಮಿಕ ತತ್ವವನ್ನು ಕೊಟ್ಟು ನಂತರ ತಂತ್ರಜ್ಞಾನ ಬೆಳೆದಿತ್ತು. ಕಣ್ಣಿಗೆ ಕಾಣದ ತತ್ವವನ್ನು ಅರ್ಥ ಮಾಡಿಸದೆ ತಂತ್ರಕ್ಕೆ ಬಳಸಿ ಮಕ್ಕಳಿಗೆ ಏನೆಲ್ಲಾ ಶಿಕ್ಷಣ ನೀಡಿದ್ದರೂ ಕೊನೆಯಲ್ಲಿ ಬೇರೆಯಾಗೋದು ಸಹಜ. ಮನಸ್ಸು ಆತ್ಮಾನುಸಾರ ನಡೆದರೆ ಆತ್ಮಜ್ಞಾನ ಎಂದ ಮೇಲೆ ಆತ್ಮ ಒಳಗಿತ್ತೋ ಹೊರಗಿತ್ತೋ?
ದೇವತೆಗಳ ವಿಷಯದಲ್ಲಿಯೇ ದ್ವೇಷವಿದ್ದರೆ ಅಸುರರ ಸ್ವಭಾವವೇ ದ್ವೇಷ. ಇದರಲ್ಲಿ ತಪ್ಪು ಯಾರದ್ದು?
ಶ್ರೀಮಂತಿಕೆ ಜ್ಞಾನದಿಂದ ಬೆಳೆಸುವುದೇ ಸನಾತನ ಹಿಂದೂ ಶಿಕ್ಷಣದ ಗುರಿಯಾಗಿತ್ತುಈಗಿನ ಶಿಕ್ಷಣವೇ ಹಣ ಸಂಪಾದನೆಯ ಗುರಿಯಾಗಿದೆ. ಹಣವಿಲ್ಲದೆ ಜೀವನವಿಲ್ಲ.ಆದರೆ ಜ್ಞಾನವಿಲ್ಲದಜೀವನ ಜೀವನವಲ್ಲ ಎನ್ನುವರು. ಇಲ್ಲಿ ಸತ್ಯ ಹಾಗುಮಿಥ್ಯಗಳ ನಡುವಿನ ಅಂತರದಲ್ಲಿ ಅಜ್ಞಾನದ ಅಹಂಕಾರ ಸ್ವಾರ್ಥ ಮಿತಿಮೀರಿದೆ. ಇದರಿಂದಾಗಿ ಮನುಕುಲಕ್ಕೆ ತಿರುಗಿ ಬರಲೂ ಕಷ್ಟ ಮುಂದೆ ಹೋಗಲೂ ಕಷ್ಟ.ಈ ಅತಂತ್ರಸ್ಥಿತಿಗೆ ಅರ್ಧ ಸತ್ಯವೇ ಕಾರಣ.ದ್ವಂದ್ವದಿಂದ ಪ್ರಗತಿಯಾಗದು.ನೇರ ದಾರಿಯಲ್ಲಿ ನಡೆಯುವಾಗ ಅಡೆತಡೆಗಳನ್ನು ಎದುರಿಸುವುದು ಸಹಜ.ಹಾಗಂತ ಅಡ್ಡದಾರಿ ಹಿಡಿದರೆ ಮೂಲ ತಲುಪಲಾಗದು.
ರಾಮ ಬೇರೆ ಕೃಷ್ಣ ಬೇರೆ, ಶಿವ ಬೇರೆವಿಷ್ಣುಬೇರೆ, ಖಾಸಗಿ ಸಂಸ್ಥೆ ಬೇರೆ ಸರ್ಕಾರಿ ಸಂಸ್ಥೆ ಬೇರೆ , ಕಾಂಗ್ರೆಸ್ ಬೇರೆ ಬಿ ಜೆ ಪಿ ಬೇರೆ , ಸ್ತ್ರೀಬೇರೆ ಪುರುಷ ಬೇರೆ......ದೇಶ ಬೇರೆ ವಿದೇಶ ಬೇರೆ...ಹೀಗೇ ಬೇರೆ ಬೇರೆಯಾಗುತ್ತಾ ಮೂಲವನ್ನರಿಯದೆ ನಿಂತ ನೆಲವನ್ನರಿಯದೆ, ಕುಡಿದ ಜಲವನ್ನರಿಯದೆ ಒಳಗೇ ಅಡಗಿದ್ದ ದೈವತ್ವವನ್ನು ಬಿಟ್ಟು ಹೊರಗಿನ ರಾಜಕೀಯಕ್ಕೆ ಬೆಲೆ ಕೊಡುತ್ತಾ ಈವರೆಗೆ ಮಾನವ ಮಾಡಿದ ಸಾಧನೆ ಎಂದರೆ ಎಲ್ಲರನ್ನೂ ಬೇರೆ ಮಾಡಿ ಆಳುತ್ತಾ ಆಳಾಗಿಯೇ ಜನ್ಮ ಪಡೆದಿದ್ದು. ಒಟ್ಟಿನಲ್ಲಿ ಸೃಷ್ಟಿ ಮಾಡಲುತಾಕತ್ತಿಲ್ಲದವರು ಸೃಷ್ಟಿ ಯೇ ಸರಿಯಿಲ್ಲ ಎನ್ನುವ ಅಜ್ಞಾನದಲ್ಲಿದ್ದು ಅಧಿಕಾರ ಹಣ ಸ್ಥಾನ ಪಡೆದವರಿಗೆ ಈ ಬೇಧಭಾವ,ಭಿನ್ನಾಭಿಪ್ರಾಯ, ದ್ವೇಷ ಹೆಚ್ಚಾದಷ್ಟೂ ಸಂತೋಷ ಸಿಗುತ್ತದೆಂದರೆ ಇದು ಅಸುರಿ ಗುಣವಾಗಿದೆ. ಅಸುರರಿಗೆ ಎಷ್ಟು ಸಹಕಾರ ಸಿಗುವುದೋ ಅಷ್ಟು ಬೆಳೆಯುತ್ತದೆ. ಇದೇ ಜೀವಾತ್ಮನಿಗೆ ಪರಮಾತ್ಮನ ಸತ್ಯ ಅರ್ಥ ವಾಗದಂತೆಮಾಡುತ್ತಾ ದೇಹವನ್ನು ಆವರಿಸಿ ದೇಶ ವಿದೇಶ ವಿಶ್ವದ ಶಾಂತಿ ಕೆಡಿಸಿದರೆ ಸಾಧನೆಯೆ?
ದೇವಾಸುರರ ನಡುವಿರುವ ಮಾನವ ಶಕ್ತಿ ದುರ್ಭಳಕೆ ಆಗಿರೋದು ಈ ಸ್ವಾರ್ಥ ಅಹಂಕಾರದ ವಶದಲ್ಲಿರುವ ಅಸುರಿ ಗುಣಗಳು ಮಧ್ಯೆ ಇರುವ ರಾಜಕೀಯದಿಂದ. ಮಾನವನ ಸಾಮಾನ್ಯಜ್ಞಾನ ಎಚ್ಚರವಾದರೆ ತನ್ನ ತಾನರಿತು ತನ್ನೊಳಗೇ ಇರುವ ಶಕ್ತಿಯನರಿತು ಮಹಾತ್ಮರುಗಳು ಹಾಕಿಕೊಟ್ಟ ದಾರಿ ತಿಳಿದು, ತಿಳಿಸುತ್ತಾ ಸ್ವತಂತ್ರ ಜ್ಞಾನದಿಂದ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಇದಕ್ಕಾಗಿ ಯಾವ ಹೊರಗಿನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಅಗತ್ಯವಿರಲಿಲ್ಲ.ಆದರೆ ವಿಪರ್ಯಾಸವೆಂದರೆ "ಬಿದ್ದರೂಮೀಸೆಮಣ್ಣಾಗಿಲ್ಲ "ಎನ್ನುವ ಹಠವೇ ಚಟವಾಗುತ್ತಾ ಚಟ್ಟ ಏರುವವರೆಗೂ ಅಧಿಕಾರದ ದಾಹದಲ್ಲಿ ಅಮಾಯಕರನ್ನು ಬಳಸಿಕೊಂಡು ನಾನೇ ಬೇರೆ ನೀನೇ ಬೇರೆ ಎಂದರೆ ತತ್ವ ಅರ್ಥ ವಾಗದೆ ತಂತ್ರದಲ್ಲಿ ಜೀವನ ಮುಗಿದು ಆತ್ಮ ಅತಂತ್ರಸ್ಥಿತಿಗೆ ತಲುಪುತ್ತದೆ. ಒಗ್ಗಟ್ಟು, ಏಕತೆ,ಐಕ್ಯತೆ,ಸಮಾನತೆಯನ್ನು ಯಾವುದೇ ರಾಜಕೀಯದಿಂದ, ಹಣದಿಂದ, ಅಧಿಕಾರದಿಂದ ಬೆಳೆಸಲು ಸಾಧ್ಯವಾಗಿದ್ದರೆ ನಮ್ಮ ಮಹಾತ್ಮರುಗಳು ಅಧಿಕಾರ ಬಿಟ್ಟು ಹೋಗುತ್ತಿರಲಿಲ್ಲ.ಇಷ್ಟು ಸಾಮಾನ್ಯ ಸತ್ಯ ಎಲ್ಲರಿಗೂ ಅರ್ಥ ಆದರೂ ತಾವೇ ಹೋಗಿ ಸೇರಿಕೊಂಡ ಪಕ್ಷ,ಪಂಗಡ,ಜಾತಿ, ಧರ್ಮದಲ್ಲಿ ಯೇ ಮರೆಯಾಗಿದ್ದರೂ ಪ್ರಶ್ನೆ ಮಾಡದ ಸ್ಥಿತಿಗೆ ತಲುಪಿರೋದಕ್ಕೆ ಕಾರಣ ಋಣಭಾರ.
ಬೀಷ್ಮ ಪಿತಾಮಹಾರಂತಹ ಮಹಾಜ್ಞಾನಿಗಳೇ ಕುರುವಂಶ ಬೆಳೆಸಲು ಮಾಡಿದ ಸಾಹಸ. ಕಾರ್ಯದಲ್ಲಿ ಸೋತು
ಹೋದರು.
ಕಾರಣ, ಅಲ್ಲಿ ಅಸುರಿಶಕ್ತಿಗೆ ಸಹಕಾರವಿತ್ತು. ಅದು ಯುಗದ ಕೊನೆಯ ಭಾಗವಾಗಿ ದ್ವಾಪರದ ಅಂತ್ಯವಾಗಿತ್ತು. ಆದರೆ ಕಲಿಯುಗದ ಪ್ರಾರಂಭವೇ ಇಷ್ಟು ಅಜ್ಞಾನವಾಗಿದ್ದರೆ ಅಂತ್ಯ ಹೇಗಿರಬಹುದು? ಪುರಾಣ,ಇತಿಹಾಸದ ಕಥೆಗಳಲ್ಲಿ ಧಾರ್ಮಿಕ. ಸೂಕ್ಷ್ಮ ಗುರುತಿಸುವ ಜ್ಞಾನವಿದ್ದರೆ ಯಾವುದಕ್ಕಾಗಿ ನಮ್ಮ ಹೋರಾಟ,ಹಾರಾಟ,ಮಾರಾಟ ,ಕಾದಾಟ ನಡೆದಿದೆಯೋ ಅದೇ ವಿನಾಶಕ್ಕೆ ಕಾರಣವಾಗುತ್ತಿದೆ ಎಂಬ ಸತ್ಯ ತಿಳಿಯಬಹುದು. ಯಾರ ಸಾಲವನ್ನೂ ಯಾರೂ ತೀರಿಸಲಾಗದು. ಯಾರ ಧರ್ಮ ವನ್ನು ಯಾರೂ ರಕ್ಷಿಸಲಾಗದು ಹಾಳೂ ಮಾಡಬಾರದು. ಅವರ ಜ್ಞಾನಶಕ್ತಿ ಶಿಕ್ಷಣದಿಂದ ಸರಿದಾರಿಯಲ್ಲಿ ಬೆಳೆಸಬಹುದಷ್ಟೆ..
ಇದರಲ್ಲಿ ರಾಜಕೀಯ ತೂರಿಸಿದರೆ ಮುಗಿಯಿತು ಕಥೆ.
ವಿನಾಶಕಾಲೇ ವಿಪರೀತ ಬುದ್ದಿ.ಬುದ್ದಿವಂತಿಕೆ ಹೆಚ್ಚಾದಷ್ಟೂ ಜ್ಞಾನ ಕುಸಿಯುತ್ತದೆ.ಕಾರಣ ಬುದ್ದಿ ಹೊರಗಿನ ಶಕ್ತಿ ಜ್ಞಾನ ಒಳಗಿನ ಶಕ್ತಿ. ಮಾನವ ತನಗೆ ತಾನೇ ಮೋಸಹೋದರೆ ಯಾರ ತಪ್ಪು?
ಅನಾದಿಕಾಲದಿಂದಲೂ ನಡೆದು ಬಂದಿರುವ ಈ ಹಿಂದಿನ ಧರ್ಮ ಯಾರನ್ನು ಉಳಿಸಿ ಬೆಳೆಸಿದೆಯೋ ಆ ದೇವರಿಗಷ್ಟೆ ಗೊತ್ತು. ಕಾರಣ ದೇವರಿರೋದು ಆತ್ಮಜ್ಞಾನದಲ್ಲಿ ಆತ್ಮಜ್ಞಾನಕ್ಕೆ ರಾಜಕೀಯವೇ ಅಡ್ಡಿಯಾದಾಗ ಅದರ ಹಿಂದೆ ನಡೆದವರು ಹಿಂದೂಗಳಾಗಿರಬೇಕಾದರೆ ಎಲ್ಲರನ್ನೂ ಆ ಪರತತ್ವದೆಡೆಗೆ ಸೇರಿಸಬೇಕೇ ಹೊರತು ದೂರ ಮಾಡುತ್ತಾ ಆಳಬಾರದಲ್ಲವೆ? ಇದು ರಾಜಕೀಯ ಕ್ಷೇತ್ರಕ್ಕೆ ಸೀಮಿತ ವಾಗಿಲ್ಲ ಮೂಲದ ಶೈಕ್ಷಣಿಕ, ಧಾರ್ಮಿಕ ಕ್ಷೇತ್ರ ಶುದ್ದವಾದರೆ ಬದಲಾವಣೆ ಅಲ್ಪ ಮಟ್ಟಿಗೆ ಸಾಧ್ಯ. ಬೇಲಿಯೇ ಎದ್ದು ಹೊಲಮೇಯ್ದರೆ ಅಧರ್ಮ ಕ್ಕೆ ಜಯ.ಅಸುರಿ ಶಕ್ತಿಯೇ ಗೆಲ್ಲುವುದು. ಆಂತರಿಕ ಶುದ್ದಿಯಾಗದೆ ಹೊರಗಿನ ಕಸ ಗುಡಿಸಿದರೆ ಉಪಯೋಗವಿಲ್ಲ. ಭಾರತ ಭರತವಾಳಿದ ದೇಶ ಹಿಂದೂ ದೇಶವಾಗಿ ನಂತರ ಮುಸ್ಲಿಂ ದೊರೆಗಳಿಂದ ಹಿಂದೂಸ್ತಾನವಾಗುತ್ತಾ ಇಬ್ಬರ ನಡುವಿನ ಜಗಳದಲ್ಲಿ ಹೊರಗಿನಿಂದ ಬಂದ ಇಸ್ಲಾಂ ರವರು ಆಂಗ್ಲ ಭಾಷೆಯಲ್ಲಿ ಇಂಡಿಯಾ ಮಾಡಿಕೊಂಡು ಆಳಿದರು. ಹಾಗಾದರೆ ಒಂದೇ ದೇಶ ಹಲವು ಹೆಸರು ,ದೇವನೊಬ್ಬನೆ ನಾಮ ಹಲವು ಎನ್ನುವ ತತ್ವದಿಂದ ದೂರವಾಗಿದ್ದರೆ ಇದರಲ್ಲಿ ಧರ್ಮ ಯಾವುದು? ಅಧರ್ಮ ಯಾವುದೆಂದರೆ ಮೂಲವೇ ಧರ್ಮ. ಅದಕ್ಕೆ ಸೇರಿಕೊಳ್ಳದೆ ಬೇರೆ ಬೇರೆ ಎನ್ನುವ ಇತರರು ಅಧರ್ಮದೆಡೆಗೆ ನಡೆಯುತ್ತಾ ಜನರನ್ನು ಆಳುವುದು ಅಧರ್ಮವೆಂದರೆ ಕಾಣದ ದೈವತ್ವ ತೋರಿಸಲಾಗದು.ಕಾಣುವ ದೇವರನ್ನು ಬಿಡಲಾಗದು.
ಮಾನವನೇ ದೇವರೆಂದರೆ ತಪ್ಪು ಮಾನವನೊಳಗೇ ಅಡಗಿರುವದೈವತ್ವಬೆಳೆಸಿಕೊಂಡರೆಮಹಾತ್ಮನಾಗಬಹುದಷ್ಟೆ.
No comments:
Post a Comment