ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Saturday, September 9, 2023

ರಾಮರಾಜ್ಯ×ರಾವಣರಾಜ್ಯ

ಶ್ರೀ ರಾಮ ರಾಜ್ಯದ ಕನಸಿನಲ್ಲಿ ಭಾರತ ರಾವಣರನ್ನು ಸೃಷ್ಟಿ ಮಾಡುತ್ತಾ ನಡೆಯುತ್ತಿದೆಯೆ? ಎನ್ನುವ ಪ್ರಶ್ನೆ ಹಾಕಿಕೊಂಡರೆ ಮುಂದಿನ ಪೀಳಿಗೆಯ ಬಗ್ಗೆ ಚಿಂತೆಯಾಗುತ್ತದೆ. ಚಿಂತೆ ಮಾಡುವುದಕ್ಕಿಂತ ಉತ್ತಮ ಚಿಂತನೆ‌ನಡೆಸಿದರೆ ನಮ್ಮ ಭವಿಷ್ಯ‌ ನಮ್ಮ ಚಿಂತನೆಯಲ್ಲಿಯೇ ಬದಲಾಗಬಹುದು. ದೇಶವನ್ನೇ ವಿದೇಶಮಾಡಲು ಹೊರಟವರಿಗೆ ವೈಭೋಗವಷ್ಟೆ ಕಾಣುತ್ತದೆ.ವೈಭೋಗದ ‌ಹಿಂದಿರುವ ಅಸುರಿ ಶಕ್ತಿಗಳ ಲೆಕ್ಕಾಚಾರ ಕಾಣೋದಿಲ್ಲ. ಶ್ರೀ ರಾಮನ ಕಾಲದಲ್ಲಿದ್ದ ಧರ್ಮ  ನೀತಿ  ಇಂದಿಲ್ಲ.ಅಂದು ರಾಜನೇ ದೇವರಾಗಿದ್ದು ಪ್ರಜೆಗಳ ಸುಖ. ದು:ಖ  ತನ್ನ  ನಡೆ ನುಡಿಯ ಮೇಲೇ ನಿಂತಿದೆ ಎನ್ನುವ  ಆತ್ಮಜ್ಞಾನ ಮಹಾರಾಜರಲ್ಲಿತ್ತು.ತಾನು ತಪ್ಪಿದರೆ ಪ್ರಜೆಗಳೂ ತಪ್ಪು ದಾರಿ ಹಿಡಿಯುವರೆಂಬ  ಧಾರ್ಮಿಕ ಪ್ರಜ್ಞೆ  ಜಾಗೃತವಾಗಿತ್ತು.ಅದಕ್ಕೆ  ಉಪದೇಶ ನೀಡುವ ಸಲಹೆ ಸಹಕಾರ ಆಶೀರ್ವಾದ ಮಾಡುವ‌ ಮಹಾಗುರುಗಳು ಮಹರ್ಷಿಗಳು ರಾಜನ‌ ಹಿಂದೆ ಮುಂದೆ  ಇದ್ದರು. ಕಾಲ ಬದಲಾಗಿದೆ  ರಾಜಪ್ರಭುತ್ವ ‌ಹೋಗಿ  ಪ್ರಜಾಪ್ರಭುತ್ವ ಬಂದಿದೆ.
ಪ್ರಜೆಗಳೇ‌ರಾಜರಂತೆ ವರ್ತಿಸುವ. ಕಾಲದಲ್ಲಿದ್ದೇವೆ.ಜ್ಞಾನ ಹೋಗಿ ವಿಜ್ಞಾನ ಮಿತಿಮೀರಿದೆ. ಜನಜೀವನದಲ್ಲಿ ಅಧರ್ಮ, ಅನ್ಯಾಯ, ಅಸತ್ಯ,ಭ್ರಷ್ಟಾಚಾರ ತುಂಬಿಕೊಂಡು  ನಾನೇ ದೇವರು,ನಾನೇ ರಾಜ,ನಾನೇ ಸರಿ ಎನ್ನುವ ಅಹಂಕಾರಕ್ಕೆ ತನಗನ ತಾನರಿಯದೆ ಪರರಿಗೆ ಮಣೆಹಾಕಿ ಸ್ವಾಗತಿಸಿ ದೇಶದ ಸಂಪತ್ತನ್ನು ದಾರೆಎರೆದುಕೊಟ್ಟು ದಾನ ಮಾಡುತ್ತಿರುವ ದಾನವರು ಹೆಚ್ಚಾಗಿದ್ದಾರೆ.ಈ ಸಂಪತ್ತಿನಲ್ಲಿ  ಹೆಣ್ಣು, ಹೊನ್ನು ಮಣ್ಣು  ಸೇರಿಕೊಂಡು  ತತ್ವ ಹೋಗಿ ತಂತ್ರವು  ಮನುಕುಲ ಅತಂತ್ರಸ್ಥಿತಿಗೆ ತಲುಪುತ್ತಿದ್ದರೂ  ಇದೊಂದು ದೊಡ್ಡ ಸಾಧನೆ ಎಂದು ಪ್ರಚಾರ ಮಾಡುವ‌ಮಧ್ಯವರ್ತಿಗಳು ಈ ಕಡೆ ಬಡವರು ಇನ್ನೊಂದು ಕಡೆ ಶ್ರೀಮಂತರನ್ನು  ಮನಸ್ಸಿಗೆ ಬಂದಂತೆ ಆಟವಾಡಿಸುತ್ತಾ ತಾವು‌ಮನರಂಜನೆಯಲ್ಲಿ ವೈಭವದಲ್ಲಿ  ಕಾಲಹರಣ ಮಾಡಿದರೆ ಶ್ರೀ ರಾಮನೂ ಕಾಣೋದಿಲ್ಲ ಶ್ರೀ ಕೃಷ್ಣನೂ  ಕಾಣದೆ  ಕತ್ತಲಿನ ಸಾಮ್ರಾಜ್ಯ ದಲ್ಲಿದ್ದೂ  ಇದೇ ಬೆಳಕು ಇದೇ ಪ್ರಗತಿ ಎನ್ನುವ ಅಜ್ಞಾನವೇ
 ಮಕ್ಕಳು ಮೊಮ್ಮಕ್ಕಳವರೆಗೂ  ಹರಡಿಕೊಂಡಿರುವುದು.
ನಿಜ ತ್ರೇತಾಯುಗದ ಶ್ರೀ ರಾಮ ನಲ್ಲಿದ್ದ  ತತ್ವಜ್ಞಾನ ಶ್ರೀ ಕೃಷ್ಣ ನ ಕಾಲದಲ್ಲಿ ರಲಿಲ್ಲ ಅಲ್ಲಿ ತಂತ್ರವು ಹೆಚ್ಚಾಗಿ ಬಳಕೆಯಾಗಿ ಅಸುರ ಸಂಹಾರ ಮಾಡಲಾಯಿತು. ಈಗಿನ ಕಥೆ ಬೇರೆ ತತ್ವದ ಹೆಸರಿನಲ್ಲಿಯೇ ತಂತ್ರ ಪ್ರಯೋಗದಿಂದ ಜನರೊಳಗೇ ಇದ್ದ ಶಾಶ್ವತವಾದ ಜ್ಞಾನ ಹಿಂದುಳಿಸಿ ಆಳುತ್ತಿರುವವರೆ ಹೆಚ್ಚು.
ಇದಕ್ಕೆ ಸಹಕಾರ ಕೊಡುತ್ತಿರುವವರೂ‌ ಜನಸಾಮಾನ್ಯರೆ ಆದಾಗ  ಶಕ್ತಿ ಇನ್ನಷ್ಟು ಬೆಳೆಯುತ್ತದೆ.
ಸತ್ಯ ಅಸತ್ಯದೊಳಗೆ, ಧರ್ಮ ಅಧರ್ಮದೊಳಗೆ, ನ್ಯಾಯ ಅನ್ಯಾಯದೊಳಗೆ, ದೇಶ ವಿದೇಶದೊಳಗೆ‌‌ ಸೇರಿಕೊಂಡು ನಡೆಸೋ ವ್ಯವಹಾರದಿಂದ ಸಾಕಷ್ಟು ಹಣ,ಅಧಿಕಾರ, ಸ್ಥಾನ ಪಡೆದರೂ  ಪರಮಾತ್ಮನ ಒಳಗಿರುವ‌ ಜೀವಾತ್ಮನ ಸಾಲ ತೀರಿಸಲಾಗದು.ಕಾರಣ  ಇದು ಪರಮಸತ್ಯ ಧರ್ಮ ದಿಂದ ಮಾತ್ರ ತೀರೋದೆನ್ನುವ  ಸತ್ಯ ಮಾತ್ರ ಒಂದೇ ಇರುತ್ತದೆ. ಇದು ಕಾಲಮಾನಕ್ಕೆ ಬದಲಾಗದೇ ಸ್ಥಿರವಾಗಿರುವುದರಿಂದ ಆ ಸ್ಥಿರತೆಯ ಕಡೆಗೆ ಮನುಕುಲ ನಡೆಯುವುದಕ್ಕೆ ಶ್ರೀ ರಾಮನ ತತ್ವದ ಅಗತ್ಯವಿದೆಯೇ ಹೊರತು ಶ್ರೀ ರಾಮನಿಗೇ ತಂತ್ರದಿಂದ  ಗುಡಿಕಟ್ಟಿ ರಾಜಕೀಯ ನಡೆಸುವೆನೆಂದರೆ ಅದು ರಾವಣನ  ರಾಜ್ಯವಾಗಬಹುದು. ರಾವಣನ ರಾಜ್ಯ ಶ್ರೀಮಂತಿಕೆಗೆ,ವೈಭವಕ್ಕೆ, ವೈಭೋಗಕ್ಕೆ ಹೆಸರುವಾಸಿಯಾಗಿತ್ತು. ಆದರೆ ಏನಾಯಿತು ಎನ್ನುವ ಕಥೆ ಎಲ್ಲರಿಗೂ ತಿಳಿದಿದೆ. ಇಲ್ಲಿ ರಾವಣನಂತಹ ಮಹಾಶಿವಭಕ್ತ ಹಿಂದೆ ಇಂದು ಮುಂದೆ ಇರಲಿಕ್ಕಿಲ್ಲ. ಅಹಂಕಾರದಿಂದ  ಶಾಪಗ್ರಸ್ತರಾಗಿ ಅಸುರ ಜನ್ಮ ಪಡೆದ ಜಯವಿಜಯದ ಕಥೆ
ಪುರಾಣವಾಗಿದ್ದರೂ  ದೇವತೆಗಳಿಗೂ ಅಹಂಕಾರದ ಪ್ರತಿಫಲ ಅನುಭವಿಸಲೇಬೇಕೆಂಬ ಸಂದೇಶ ನಾವೆಲ್ಲರೂ ಅರ್ಥ ಮಾಡಿಕೊಂಡರೆ ನಾವೆಷ್ಟೇ ಓದಿ ತಿಳಿದು ಹಣ ಗಳಿಸಿದರೂ  ಅದರಿಂದ ಧರ್ಮ ರಕ್ಷಣೆಯಾಗಿದೆಯೇ ಭಕ್ಷಣೆ ಆಗುತ್ತಿದೆಯೇ ಎನ್ನುವ ಸತ್ಯಜ್ಞಾನ ನಮ್ಮನ್ನು ಯಾವ ದಿಕ್ಕಿಗೆ ಎಳೆಯುತ್ತಿದೆ ಎಂದು ತಿಳಿಸುತ್ತದೆ.
ವಿದೇಶಿಗಳಿಗೆ ಕೊಡುವ ಗೌರವ ಸ್ವದೇಶಿಗಳಿಗಿಲ್ಲ, ಸಹಧರ್ಮಿಯರನ್ನು ಬಿಟ್ಟು ಪರಧರ್ಮ ದವರನ್ನು ಸರಿಪಡಿಸಲಾಗದು, ಸ್ವದೇಶದ ಶಿಕ್ಷಣ ಬಿಟ್ಟು ಪರಕೀಯರ ಶಿಕ್ಷಣ ಒಳಗೆಳೆದುಕೊಂಡು ಸ್ವದೇಶದ ಧರ್ಮ ರಕ್ಷಣೆಯಾಗದು. ಹೀಗೇ ಹೊರಗಿನ‌ ಆಚಾರ,ವಿಚಾರ,
ಪ್ರಚಾರ,ಶಿಕ್ಷಣ,ಬಂಡವಾಳ, ಸಾಲದ ವ್ಯವಹಾರಕ್ಕೆ  ಜೋತುಬಿದ್ದವರ ಹಿಂದೆ ನಡೆದವರಿಗೆ ಸಿಕ್ಕಿದ್ದು ಸಾಲದ ಹೊರೆಯಷ್ಟೆ. ದೇವರುಗಳನ್ನು  ಎಲ್ಲೆಂದರಲ್ಲಿ  ಕೂರಿಸಿದರೂ ದೈವತ್ವದ ಅರಿವಿಲ್ಲದಿದ್ದರೆ  ವ್ಯರ್ಥ. ನಾಮಜಪ, ಕಾಯಕವೇ ಕೈಲಾಸ, ದೇಶಸೇವೆಯೇ ಈಶ ಸೇವೆ, ಜನರ ಸೇವೆಯೇ ಜನಾರ್ದನನನ ಸೇವೆ...ಇದರ ಹಿಂದೆ ಯೋಗಶಕ್ತಿಯಿತ್ತು.
ಈಗಿನ ಭೌತಿಕ ವಿಜ್ಞಾನ ಆಕಾಶದೆತ್ತರ ಬೆಳೆದರೂ ಭೂಮಿಯಲ್ಲಿ ಹೇಗಿರಬೇಕೆಂದು ತಿಳಿಸುತ್ತಿಲ್ಲ ಎಂದರೆ ಮನುಕುಲಕ್ಕೆ ಇರೋದು ಒಂದೇ ಭೂಮಿ. ಎಲ್ಲಾ ಅವತಾರವೂ ಇಲ್ಲೇ ನಡೆದಿದೆ ಎಂದರೆ ನಮ್ಮ ಸಾಧನೆ  ಎತ್ತ ಸಾಗುತ್ತಿದೆ?  ನಿಜವಾದ ಸಾಧಕರು ಯಾರು? ಭೂಮಿಯ ಸತ್ಯ,ಸತ್ವ,ತತ್ವವನ್ನು  ಶಿಕ್ಷಣದಲ್ಲಿಯೇ ತಿಳಿಸಿ ಬೆಳೆಸಿದ್ದರೆ ಈ ಗತಿ ಬರುತ್ತಿರಲಿಲ್ಲ.ಎಲ್ಲಾ ನಡೆದ‌ಮೇಲೇ ತಿಳಿಯೋದು. ನಡೆಯುವುದೆಲ್ಲವೂ ಒಳ್ಳೆಯದಕ್ಕೆ , ಕೊಟ್ಟು ಹೋಗಲೇಬೇಕು ಇಲ್ಲವಾದರೆ ಬಿಟ್ಟು ನಡೆಯಬೇಕು. ಆದರೆ ಏನು ಕೊಟ್ಟು ಬಿಟ್ಟು ನಡೆದರೆ ಏನಾಗುವುದೆನ್ನುವ ಜ್ಞಾನ ಮಾತ್ರ ನಮ್ಮೊಡನೇ  ಬರುತ್ತಿರುವುದು. ಜ್ಞಾನವನ್ನು ಹಣದಿಂದ ಖರೀದಿಸಲಾಗದು, ಕದಿಯಲೂಆಗದು.ಇದೊಂದು ಸತ್ಯ ಮಾನವ ಅರ್ಥ ಮಾಡಿಕೊಂಡು ನಡೆದರೆ ಜ್ಞಾನದಾಸೋಹ ಕಾರ್ಯ ಉತ್ತಮ ರೀತಿಯಲ್ಲಿ ನಡೆಸಬಹುದು.ಕೆಟ್ಟದ್ದನ್ನು ಕೊಟ್ಟರೆ ಕೆಟ್ಟದ್ದೇ ಆಗೋದು ಒಳ್ಳೆಯದು ಹಂಚಿದಷ್ಟೂ ಒಳ್ಳೆಯದು ಬೆಳೆಯುವುದು.ಇದು ವಸ್ತು,ವಿಷಯ, ಆಸ್ತಿಯಾಗಿರಬಹುದು.
ಮಕ್ಕಳಿಗೆ ಉತ್ತಮ ಸಂಸ್ಕಾರದ ವಿಷಯ, ಆಹಾರ,ಶಿಕ್ಷಣ ನೀಡಿದರೆ ಶ್ರೀ ರಾಮರಾಜ್ಯದ ಕನಸು ನನಸಾಗಬಹುದು. ಕೊಡುವವರಲ್ಲಿ ಸಂಸ್ಕಾರವಿರಬೇಕಷ್ಟೆ. ಸಂಸ್ಕಾರ ಎಂದರೆ ಸಂಸ್ಕಾರಿಸುವುದು,ಶುದ್ದಗೊಳಿಸುವುದು.ಮನಸ್ಸನ್ನು ಶುದ್ದಗೊಳಿಸುವುದೇ  ನಿಜವಾದ ಸಂಸ್ಕಾರ. ಇದಕ್ಕೆ ಅರಿಷಡ್ವರ್ಗದಿಂದ ಸಾಧ್ಯವಾದಷ್ಟು  ದೂರವಿದ್ದರೆ ಉತ್ತಮ.ಕಾರಣ ಇವೇ ಮಾನವನ‌ ನಿಜವಾದ ಹಿತ ಶತ್ರು. ಒಳಗೇ ಇರುವ ಶತ್ರುವನ್ನು ಓಡಿಸುವುದು ಕಷ್ಟ.ಹೊರಗಿನ ಶತ್ರುಗಳಿಗಿಂತ ಒಳಶತ್ರುಗಳೆ ಅಪಾಯಕರ. ಹೊರಗಿನಿಂದ ರಾಮನ ಭಕ್ತರಂತೆ ವೇಷಹಾಕಿಕೊಂಡು ಒಳಗೇ ರಾವಣನಿದ್ದರೆ  ಯಾರಿಗೂ ಕಾಣೋದಿಲ್ಲವಾದರೂ ಪರಮಾತ್ಮನಿಂದ  ಯಾರೂ  ತಪ್ಪಿಸಿಕೊಳ್ಳಲಾಗದು. ಇದು ಅಧ್ಯಾತ್ಮ ಸತ್ಯ.ಆತ್ಮಾವಲೋಕನ ಕ್ಕೆ ರಾಜಕೀಯದ ಅಗತ್ಯವಿಲ್ಲ.ಸ್ವತಂತ್ರ ಭಾರತದಲ್ಲಿ ಈಗ ಜನಸಾಮಾನ್ಯರಿಗೂ ಚಿಂತನೆ ನಡೆಸಿ ಮುಂದೆ ಹೋಗುವ ಸ್ವಾತಂತ್ರ್ಯ ವಿದೆ. ಹೊರಗಿನ ರಾಜಕೀಯದ ಹಿಂದೆ ನಡೆದರೆ‌ ಅದು ಸಿಗದು.
ವಿವೇಕಾನಂದರ ರಾಜಯೋಗದ ವಿಚಾರಗಳನ್ನು ಓದಿ ತಿಳಿದರೆ ವಿವೇಕದ ಆನಂದ ಸಿಗದು. ಅದರೊಳಗಿರುವ ಸತ್ಯ ಅರ್ಥ ಮಾಡಿಕೊಳ್ಳಲು ಸ್ವತಂತ್ರ ಜ್ಞಾನದ ಅಗತ್ಯವಿದೆ. ಜ್ಞಾನವೇ ಪರಕೀಯರದ್ದಾಗಿದ್ದರೆ ಕೇವಲ ನಾಟಕವಾಗುತ್ತದೆ.ಗಜೇಂದ್ರ ಮೋಕ್ಷದ ಕಥೆಯಲ್ಲಿ ಅಹಂಕಾರದಿಂದ  ಬಿಡುಗಡೆ  ಮೋಕ್ಷಕ್ಕೆ ಎಷ್ಟು  ಅಗತ್ಯ ಎಂದು ತಿಳಿಸುತ್ತದೆ. ಮಕ್ಕಳಿಗೆ  ಭೌತಿಕ ಆಸ್ತಿ ಮಾಡುವ ಭರದಲ್ಲಿ ಜ್ಞಾನದಿಂದ ವಂಚಿಸಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.

No comments:

Post a Comment