ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, September 22, 2023

ಮೇಲಿನ ನಕ್ಷತ್ರಕ್ಕೂ ಕೆಳಗಿನ ನಕ್ಷತ್ರಕ್ಕಿರುವ ವ್ಯತ್ಯಾಸ

.    .    .    .🕉.    .    .    .
|| ಶ್ರೀ ಗುರುಭ್ಯೋ ನಮಃ || 
|| ಓ೦ ಗ೦ ಗಣಪತಯೇ ನಮಃ ||

      
* ನುಡಿ ಮುತ್ತುಗಳು:-  
———————————
*ಮನುಷ್ಯ ಒಳ್ಳೆಯವನ್ನಾಗಿರಬೇಕು.. ಆದರೆ ಅತೀ ಒಳ್ಳೆಯವನಲ್ಲ.. ಮತ್ತು ಸದಾ ಒಳ್ಳೆಯವನ್ನಾಗಿರಬೇಕಿಲ್ಲ. ಒಳ್ಳೆಯತನ ಒಳ್ಳೆಯದು**

**ಬಂದರಿನಲ್ಲಿ ನಿಲ್ಲಿಸಿದ ಹಡಗು ಸುರಕ್ಷಿತ ನಿಜ, ಆದರೆ... ಅದರ ಉದ್ದೇಶ ಅದಲ್ಲವಲ್ಲ.*ಬದುಕೂ ಹಾಗೆಯೇ, ಕಟ್ಟಿ ಹಾಕಿಕೊಂಡರೆ ಉಪಯೋಗವಿಲ್ಲ.**

**ಪ್ರತಿ ದಿನವೂ ಹೊಸತೇ.ನೀವು ಎಷ್ಟೇ ಅನುಭವಿಗಳಾದರೂ ನಿತ್ಯವೂ ಕಲಿಯುತ್ತೇನೆಂಬ ಮನೋಭಾವದಿಂದಲೇ ಸಿದ್ಧರಾಗಿರಬೇಕು.ಆಗ ಮಾತ್ರ
ಮತ್ತಷ್ಟು ಕಲಿಯಲು, ಅನುಭವಿಗಳಾಗಲು ಸಾಧ್ಯ.**

**ಈ ಪ್ರಪಂಚದಲ್ಲಿ ನೋಡಲು ಹಲವಾರು ಸುಂದರ ಸ್ಥಳಗಳಿವೆ. ಆದರೆ ಅತ್ಯಂತ ಸುಂದರವಾದ ಸ್ಥಳವೆಂದರೆ ನೀವು ನಿಮ್ಮ   ಕಣ್ಣುಗಳನ್ನು ಮುಚ್ಚಿಕೊಂಡು ನೋಡುವುದು.**

**ನಾವು ಪ್ರತಿಯೊಬ್ಬರಿಗೂ ಸಾಕಷ್ಟು ಒಳ್ಳೆಯವರೆಂದು ಸಾಬೀತುಪಡಿಸಲು ಎಂದಿಗೂ ಸಾಧ್ಯವಿಲ್ಲ.ಆದರೆ ನಮ್ಮನ್ನು
ಅರ್ಥಮಾಡಿಕೊಳ್ಳುವವರಿಗೆ ನಾವು ಉತ್ತಮರೇ.ನಮ್ಮ
ಆಲೋಚನೆಗಳನ್ನು ಮೇಲೆ
ಅವಲಂಬಿಸಿ ನೋಡಿದರೆ ಜಗತ್ತಿನಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ.**

**ಜನರನ್ನು ಕ್ಷಮಿಸಲು ಸಾಕಷ್ಟು ಒಳ್ಳೆಯವರಾಗಿರಿ. ಆದರೆ ಅವರನ್ನು ಮತ್ತೆ ನಂಬುವಷ್ಟು ಮೂರ್ಖರಾಗಬೇಡಿ.**

**ಸಾವಿರಾರು ಉತ್ತಮ ಆಲೋಚನೆಗಳು ನಿಮ್ಮನ್ನು ಯಶಸ್ವಿಯಾಗಿಸಲು ಸಾಧ್ಯವಿಲ್ಲ, ಆದರೆ ಕೇವಲ ಒಂದು ಕಲ್ಪನೆಯನ್ನು ಉತ್ತಮವಾಗಿ ಸಾಕಾರಗೊಳಿಸಿದರೆ,  ನಿಮ್ಮ ಜೀವನ ದಿಕ್ಕನ್ನೇ ಬದಲಾಯಿಸಬಹುದು.**

 
**ಕಷ್ಟದ ದಿನಗಳಿಗೆ ಕೃತಜ್ಞರಾಗಿರಿ. ಆ ದಿನಗಳಲ್ಲಿ ನೀವು ಬೆಳೆದಿರುವಿರಿ. ನಿಮ್ಮ ಇತಿ ಮಿತಿಗಳಿಗೆ ಕೃತಜ್ಞರಾಗಿರಿ. ಏಕೆಂದರೆ ಅವು ನಿಮ್ಮಲ್ಲಿ ಹೆಚ್ಚಿನ ಸುಧಾರಣೆಗೆ ಅವಕಾಶ ಕಲ್ಪಿಸಿವೆ. ಪ್ರತಿಯೊಂದು ಹೊಸ ಸವಾಲುಗಳಿಗೂ ಕೃತಜ್ಞರಾಗಿರಿ. ಏಕೆಂದರೆ ಅವು ನಿಮ್ಮಲ್ಲಿ ಸಾಮರ್ಥ್ಯ ಮತ್ತು ನಡವಳಿಕೆ ಗಟ್ಟಿಗೊಳಿಸಿವೆ. ನಿಮ್ಮ ತಪ್ಪುಗಳಿಗೆ  ಕೃತಜ್ಞರಾಗಿರಿ ನಿಮಗೆ ಮೌಲ್ಯಯುತ ಪಾಠಗಳನ್ನು ಬೋಧಿಸಿವೆ, ಬೋಧಿಸುತ್ತಲಿವೆ.**

**ಬದುಕಿನ ಉಡುಗೊರೆಯನ್ನು ದೇವರು ನಮಗೆ ಕೊಟ್ಟಿದ್ದಾನೆ. ಬದುಕನ್ನು ಸುಂದರವಾಗಿಸುವ ಉಡುಗೊರೆಯನ್ನು ನಮಗೆ ನಾವೇ ಕೊಟ್ಟುಕೊಳ್ಳಬೇಕು.**
    (ವೋಲ್ಟೇರ್, ಫ್ರೆಂಚ್ ಚಿಂತಕ)

ಮನುಷ್ಯನ ಅಮೂಲ್ಯ ಅಂಗ ಜ್ಞಾನ ತುಂಬಿದ ಮೆದುಳಲ್ಲ; ಪ್ರೀತಿ ತುಂಬಿದ ಹೃದಯ, ಆಲಿಸುವ ಕಿವಿಗಳು ಮತ್ತು ಸಹಾಯ ಮಾಡುವ ಕೈಗಳು.**

**Never feel Sad on losing anything in your Life because Whenever A Tree Loses it’s Leaf, A New Leaf is ready to take its Place.**

**Perfect Definition Of Relation.The Wrong kind of People Hate you for the Good in you And **The Right kind of People Love you even after knowing the Bad in you.*

**A formula for a great relationship:
#Enjoy the similarities. 
#Accept the differences.**

*Use Your Voice for Kindness, your Ears for Compassion, your Hands for Charity,Your Mind for Truth,and Your Heart for Love.**

**Life is Very Interesting,in the End Some of Your Greatest Pains become your Greatest Strengths.**

**Everyone knows about Alexandr Grahambell who invented phone But he never made a call to his family because his wife & daughter were deaf. That's life. Live for others.**

 
**How you treat those who are of no use to you will be your true act of generosity.*

 
**It always feels impossible, until it is done.**
———————————————-

———————————————
——*ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು**ಸಮಸ್ತ ಲೋಕ ಸುಖಿನೋಭವಂತು* *ಸರ್ವೇ ಸನ್ಮಂಗಳಾನಿ ಭವಂತು* ಧಮೋ೯ ರಕ್ಷತಿ ರಕ್ಷಿತ:* 
**ಕೃಷ್ಣಾರ್ಪಣಮಸ್ತು**
ಭಗವಂತನ ಅಂಗಾಂಗಗಳಲ್ಲಿರುವ ನಕ್ಷತ್ರಗಳನ್ನು ನೋಡಿದರೆ  ಆ ಅಂಗದ ಕಾರ್ಯಕ್ಕೆ ಆ ನಕ್ಷತ್ರಗಳೇ ಕಾರಣವೆಂದಾಗುತ್ತದೆ. ಹಾಗೆಯೇ ಒಂದು ಮನೆ ಮಠ, ರಾಜ್ಯ,ದೇಶದ  ಕಾರ್ಯಕ್ಕೆ ಅಲ್ಲಿರುವ‌  ಜನ ಜೀವನಕ್ರಮವೇ ಕಾರಣ. ಉತ್ತಮ ಜೀವನ ಶೈಲಿ ಅಳವಡಿಸಿಕೊಂಡರೆ  ಇಡೀ ದೇಹದ ಜೊತೆಗೆ ದೇಶ ವಿಶ್ವವೇ ಬದಲಾಗುವುದಲ್ಲವೆ? ಹಾಗಾದರೆ ಉತ್ತಮ ಜೀವನ ಎಂದರೇನು? ಉತ್ತಮ ಚಿಂತನೆಯೆ? ಚಿಂತೆಯೆ? ಎಲ್ಲರಿಗೂ ಅವರವರ ದೇಹದ ಚಿಂತೆಯಾದರೆ ಮುಖ್ಯವಾದರೆದೇಶದ ಚಿಂತನೆಯಿರದು.
ಅವರವರ ಜೀವದ ಚಿಂತೆಯಾದರೆ ಪರಮಾತ್ಮನ ಚಿಂತನೆ ನಡೆಯದು.
ಅವರವರ ಸಂಸಾರದ ಚಿಂತೆಯಾದರೆ ಸಮಾಜದ ಚಿಂತನೆಯಾಗದು.
ಒಳಗಿನ ಸಮಸ್ಯೆಗೆ ಹೊರಗೆ ಪರಿಹಾರ ಹುಡುಕಿದರೆ ಸಿಗೋದಿಲ್ಲ. ಬದಲಾಗಿ ಬೆಳೆಯುತ್ತದೆ. ಒಳಗೇ ಸರಿಯಿಲ್ಲದೆ ಹೊರಗಿನಿಂದ  ತೇಪೆಹಾಕಿ ಮುಚ್ಚಿದರೆ ನಾಟಕವಾಗುವುದು.
ಹಾಗಾಗಿ ಪರಮಾತ್ಮನ ಅರಿಯಲು ನಾವು ಮೇಲಿರುವ ನಕ್ಷತ್ರಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಹೊರಗೆ ನಕ್ಷತ್ರ ಅಥವಾ star ಆಗಲು ಮನೆ ಬಿಟ್ಟು ಹೊರಗೆ ಹೋಗುವ ಅವಶ್ಯಕತೆ ಯಿರದು. ಆದರೂ ಜ್ಞಾನದ ನಂತರ ನಾವು ನಡೆಯೋ ದಾರಿಗೂ ಅಜ್ಞಾನದಲ್ಲಿ ನಡೆಯೋ ದಾರಿಗೂ ಅಂತರವಿದೆ.ಆ ಅಂತರವೇ ಇಂದು ಅವಾಂತರಕ್ಕೆ ಕಾರಣವಾಗುತ್ತಿದೆ. ಪರಮಾತ್ಮ ಜೀವಾತ್ಮ, ಸ್ತ್ರೀ ಪುರುಷ, ಭೂಮಿ ಆಕಾಶ, ದೇವರು ಅಸುರರು, ಜ್ಞಾನ ವಿಜ್ಞಾನ, ದೇಶ-ವಿದೇಶ ಹೀಗೇ ಒಂದೇ ನಾಣ್ಯದ ಎರಡು ಮುಖಗಳನ್ನು  ವ್ಯವಹಾರಕ್ಕೆ ಅತಿಯಾಗಿ ಬಳಸುತ್ತಾ  ಹೊರಗೆ  ನಕ್ಷತ್ರಗಳು ‌ಬೆಳೆಸಿದರೆ ಮೇಲಿರುವ‌ನಕ್ಷತ್ರಗಳ ಪ್ರಭಾವ ಅರ್ಥ ವಾಗದೆ ಜೀವ ಹೋಗುತ್ತದೆ.
ಶಾಶ್ವತವಾಗಿರುವ ಆತ್ಮಜ್ಞಾನ ಹಿಂದುಳಿದಿರುತ್ತದೆ. 
ದೇವನೊಬ್ಬನೆ ನಾಮ ಹಲವು,ಆಕಾಶ ಒಂದೇ ನಕ್ಷತ್ರ ಹಲವು, ದೇಶ ಒಂದೇ ರಾಜ್ಯ ಹಲವು, ತಾಯಿ ಒಬ್ಬಳೇ ಮಕ್ಕಳು ಹಲವು, ಒಂದಾಗಿಸೋ ತತ್ವಬಿಟ್ಟು ಹಲವು ತಂತ್ರಕ್ಕೆ ಮಾನವನ ಜೀವನವೇ ವಶವಾಗಿರುವಾಗ ಹಿಂದಿರುಗಿ ತತ್ವದ ಕಡೆಗೆ ಬರೋದಿಕ್ಕೆ‌ ಸತ್ಯಜ್ಞಾನ ಬೇಕಿದೆ. ಮಿಥ್ಯಜ್ಞಾನ ಬುದ್ದಿ ಬೆಳೆಸಿದರೆ ಸತ್ಯಜ್ಞಾನ  ಜ್ಞಾನಶಕ್ತಿ ಬೆಳೆಸುತ್ತಾ ಸತ್ಯವೇ ದೇವರು ಎನ್ನುತ್ತದೆ. ಕಣ್ಣಿಗೆ ಕಾಣುವ ಶ್ರೀಮಂತಿಕೆಗೆ  ಮೇಲಿನ ನಕ್ಷತ್ರಗಳನ್ನು ಖರೀದಿಸಲಾಗದು.

No comments:

Post a Comment