ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, September 26, 2023

ಕಾವೇರಿಸಿರುವ ಕಾವೇರಿ ಯಾರು?


ಭೂಮಿ ಮೇಲಿರುವ ಅಸಂಖ್ಯಾತ ದೇವಾನುದೇವತೆಗಳು ಕಣ್ಣಿಗೆ ಕಾಣುತ್ತಿಲ್ಲ ಕಾಣುವ ದೇವತೆಗಳಿಗೆ ಬೆಲೆಕಟ್ಟಲಾಗದೆ ಮಾನವ ತನ್ನ ಹಕ್ಕನ್ನು ಹೋರಾಟದ ಮೂಲಕ ತೋರಿಸಿಕೊಳ್ಳಲು ಹೊರಟು ಏನೂ ದಕ್ಕದೆ ದಿಕ್ಕುಗೆಟ್ಟರೆ ಇದಕ್ಕೆ ಕಾರಣ ರಾಜಕೀಯವಾಗಿರುತ್ತದೆ. ಇದರಲ್ಲಿ ಪಂಚಭೂತಗಳನ್ನರಿಯದ  ಮಾನವನ ಅಜ್ಞಾನವನ್ನು ಹೆಚ್ಚಿಸುವ ಮಧ್ಯವರ್ತಿ ಮಾನವನಿಗೆ ತನಗೆ ತಾನೇ ಮೋಸಹೋಗುತ್ತಿರುವ ಸತ್ಯ ತಿಳಿಯದೆ ಒಳಗೇ ಇರುವ ದೇವಾಸುರರ ಮಧ್ಯೆ ನಿಂತು ನಾನು ಅಮರನೆಂಬ ಭ್ರಮೆ ಇಂದು ಹೆಚ್ಚಾಗಿರೋದು ಮೂರ್ಖತನ. ಈ ಮೂರ್ಖರಿಗೆ ಸಹಕರಿಸುವವರು ಬುದ್ದಿವಂತರಿದ್ದರೂ ಜ್ಞಾನಿಗಳಾಗಿರರು.
ಜ್ಞಾನ ಆಂತರಿಕ ಶಕ್ತಿ ಹಾಗೆ ಕಾವೇರಿ ದೇವತೆಯಾಗಿ‌ ಮನುಕುಲದ  ಬಾಯಾರಿಕೆ ತೀರಿಸಿ ಅನ್ನ‌ನೀಡುವ ಮಹಾಶಕ್ತಿಯಾಗಿರುವಾಗ ಅನ್ನದಾತರ ನಡುವೆ  ವೈರತ್ವ ಬೆಳೆಸಿ  ಇರುವ ಅನ್ನಕ್ಕೂ ಕಲ್ಲಾಕಿದರೆ ಇದು ಅಪರಾಧವಾಗಿ ಅಪಾಯಕ್ಕೆ ದಾರಿಯಾಗುತ್ತದೆ.   ಕಾವೇರಿದ ಕಾವೇರಿ ವಿವಾದದಿಂದ ಏನಾದರೂ ಲಾಭವಾಯಿತೆ? ನಿಜವಾಗಿ ಕಾವೇರಿ ಯಾರು?ಪ್ರಕೃತಿಯ ಬಹುಮುಖ್ಯ ಅಂಗವಾಗಿರುವ‌ ನದಿಗಳನ್ನು ತನ್ನ ರಾಜಕೀಯದಾಳವಾಗಿಸಿಕೊಂಡು  
 ಹೋರಾಟ ನಡೆಸೋ ಮಾನವನಿಗೆ ಸಿಕ್ಕಿದ್ದೇನು? ಈವರೆಗಿನ  ಹೋರಾಟಗಳಲ್ಲಿ ರೈತರಿಗಿಂತ  ರೈತಮುಖಂಡರು, ಸಂಘಟನೆಯ ಮುಖಂಡರು,ಪ್ರತಿಷ್ಟಿತರು, ಶ್ರೀಮಂತ ವರ್ಗ, ಕಲಾವಿದರ ಸಂಘ,ಸಾಹಿತ್ಯವಲಯದವರೆ ಹೆಚ್ಚಾಗಿ ಹೋರಾಟಕ್ಕೆ ಇಳಿದು ರಾಜ್ಯ ಬಂದ್, ದೇಶ ಬಂದ್ ಮಾಡಿರೋದನ್ನು ಗಮನಿಸಿದರೆ ನೀರು  ಎಲ್ಲರ ಜೀವ. ಭೂಮಿತಾಯಿ ಸೇವೆ ಮಾಡೋ ರೈತರಿಗೆ ನೀರಿನ ಅವಶ್ಯಕತೆ ಇದೆ. ಇದನ್ನು ಯಾರದ್ದೋ ರಾಜಕೀಯಕ್ಕೆ ಬಳಸಿ  ಭೂ ಸೇವೆ ಮಾಡದವರ ಸಹಕಾರ ಪಡೆದು  ದಿನನಿತ್ಯದ ಕಾಯಕ‌ಮರೆತು ಒಂದು ಪಕ್ಷದ ವಿರುದ್ದ,ರಾಜ್ಯದ ವಿರುದ್ದ ಅಥವಾ ನಮ್ಮ ಆತ್ಮಸಾಕ್ಷಿಯ ವಿರುದ್ದ ಹೋರಾಟ ಮಾಡಿದರೆ  ಭೂತಾಯಿ ಕ್ಷಮಿಸುವಳೆ? ಅಥವಾ ಸಹಕರಿಸುವಳೆ?
ಇಷ್ಟು ವರ್ಷಗಳ ಕಾನೂನು ಹೋರಾಟದಲ್ಲಿ ಪರ ರಾಜ್ಯದ ರೈತರಿಗೆ ನೀರು ಕೊಟ್ಟು ಉಪಕಾರ ಮಾಡಿದ್ದೇವೆಂದರೆ  ಸರಿ ಆದರೆ ನಮ್ಮವರಿಗೇ ನೀರಿನ‌ಕೊರತೆ ಹೆಚ್ಚಿಸಿ ಯಾರಿಗೋ ಸಹಾಯ ಮಾಡಿರೋದರಲ್ಲಿ ಧರ್ಮ ವಿಲ್ಲ. ಇದಕ್ಕೆ ಹೋರಾಟ ಹೆಚ್ಚಾಗಿದೆ. ಮಳೆಬೆಳೆ ಚೆನ್ನಾಗಿ ಆಗಬೇಕಾದರೆ ಮಾನವ  ತನ್ನ ಮೂಲ ಧರ್ಮ/ ಕರ್ಮ ಬಿಡದೆ ನಡೆಯಬೇಕೆನ್ನುವುದು ಸತ್ಯ ಅತಿವೃಷ್ಟಿ ಅನಾವೃಷ್ಟಿಗೂ ಅಧರ್ಮ ವೇ ಕಾರಣ. ದೈವೀಕ ಶಕ್ತಿಯನ್ನು ರಾಜಕೀಯಕ್ಕೆ ಬಳಸಿದಷ್ಟೂ ಅಧರ್ಮ ಹೆಚ್ಚುವುದು. ಈ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೊಂದಿಗೆ ಒಂದಾಗಿ ಬಾಳುವ
ಜ್ಞಾನವಿದ್ದರೆ  ನೆಲ ಜಲದ ಅರಿವಿನಲ್ಲಿ ಮಾನವ ಸುಖ ಶಾಂತಿಯಿಂದ ‌ ಬದುಕಬಹುದು. ಒಟ್ಟಿನಲ್ಲಿ ಹೊರಗಿನ ಹೋರಾಟ,ಹಾರಾಟ,ಮಾರಾಟದಲ್ಲಿ ‌ಮಾನವ ತನ್ನ ಸ್ವಾರ್ಥ ಸುಖ, ಸಂತೋಷಕ್ಕಾಗಿ‌ ಇತರರ  ಸುಖ ಸಂತೋಷ ಕಡೆಗಣಿಸುವ ಜೊತೆಗೆ ‌ದೈವೀಕ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ  ಅದರ ಪ್ರತಿಫಲ ಇಡೀ‌ಸಮಾಜವೇ ಅನುಭವಿಸಬೇಕು. ಸಹಕಾರ‌ ಕೊಡುವಾಗ  ಅದರ ಮೂಲ ಉದ್ದೇಶ ಅರ್ಥ ವಾದರೆ  ಭವಿಷ್ಯದಲ್ಲಿ ‌ಉತ್ತಮ ಬದಲಾವಣೆ ಸಾಧ್ಯವಿದೆ. ಎಲ್ಲವನ್ನೂ ಹಣದಿಂದ ಅಳೆಯುವ ಕಾಲದಲ್ಲಿ ಪ್ರಕೃತಿಯನ್ನು  ಹಣದಿಂದ ಖರೀದಿಸಿ  ಆಳುತ್ತೇವೆಂದರೆ ಇದರರ್ಥ  ನಮ್ಮಲ್ಲಿ   ಜ್ಞಾನದ ಬರಗಾಲವಿದೆ. ಇದನ್ನು ಯಾವ ಹಣ ಅಧಿಕಾರದಿಂದ ಸರಿಪಡಿಸಲಾಗದು. ಕಾರಣ ಇದು ಹೊರಗಿಲ್ಲ ಒಳಗೇ ಇರೋದು. ಭೂಮಿ ಮೇಲೆ ನಿಂತು ಭೂ ತಾಯಿ ಸೇವೆ ಮಾಡಲು‌ ಯಾವ ರಾಜಕೀಯದ ಅಗತ್ಯವಿದೆ? ಇದನ್ನರಿತು ನಡೆದವರು ನಮ್ಮ ಮಹಾತ್ಮರುಗಳು. ರೈತರು ಭೂ ತಾಯಿಯ ಮಕ್ಕಳಿದ್ದ ಹಾಗೆ ಎಲ್ಲಾ ಮಾನವರೂ ಮಕ್ಕಳೇ ಆದರೂ  ಸೇವಕರನ್ನು ಸೇವೆ ಮಾಡಲು‌ ಬಿಡದೆ  ತಮ್ಮ ಸೇವಕರನ್ನಾಗಿಸಿಕೊಂಡು  ಹೊರಗೆ ಹೋರಾಟಕ್ಕೆ ಇಳಿದರೆ  ಹೊರಗಿನ ನ್ಯಾಯಾಲಯದಿಂದ ಒಬ್ಬರಿಗೆ ನ್ಯಾಯ ಸಿಕ್ಕರೆ ಇನ್ನೊಬ್ಬರಿಗೆ ಅನ್ಯಾಯವಾಗೇ ಇರುತ್ತದೆ. ಇದಕ್ಕಾಗಿ  ನಿಜವಾದ  ಸೇವಕರು  ನ್ಯಾಯವಾಗಿ ನೀರನ್ನು ಬಳಸಿ  ಭೂ ತಾಯಿ ಸೇವಕರಾದರೆ ಇದ್ದಲ್ಲಿಯೇ ತೃಪ್ತಿ ಶಾಂತಿ ಮುಕ್ತಿ. ಇದಕ್ಕೆ ಮಧ್ಯವರ್ತಿಗಳು  ಸಹಕಾರ ನೀಡದೆ  ತಮ್ಮ ಸ್ವಾರ್ಥ ಕ್ಕೆ  ಎಳೆದಾಡಿದರೆ  ಇರುವ ಶಕ್ತಿಯೂ ಕುಸಿಯುತ್ತದೆ.ಆತ್ಮಾವಲೋಕನ ಅಗತ್ಯವಾಗಿದೆ. ಇಷ್ಟಕ್ಕೂ ಭರತ ಭೂಮಿಯ ಸತ್ಯ ಸತ್ವ,ತತ್ವ ತಿಳಿಯದವರಿಗೆ ಹೊರಗಿನ ಹೋರಾಟದಲ್ಲಿ  ಗೆದ್ದು ಒಳಗಿನ ಹೋರಾಟದಿಂದ ದೂರವಾಗಿದ್ದರೆ  ನಮಗೆ ನಾವೇ ಮೋಸಹೋದಂತೆ. ಸಾಮಾನ್ಯಜ್ಞಾನದ ಕೊರತೆಯೇ ಮಾನವನ ಎಲ್ಲಾ ಸಮಸ್ಯೆಗಳಿಗೆ ಮೂಲ  ಕಾರಣ . ಮಳೆಬೆಳೆ ಚೆನ್ನಾಗಿ ಆಗಲು ಪ್ರಕೃತಿಯನ್ನು ಸರಿಯಾಗಿ ಬಳಸಬೇಕು.ವಿಕೃತವಾಗಿ ಬಳಸಿ ಪ್ರಕೃತಿ ವಿಕೋಪಕ್ಕೆ ಜೀವ ಹೋಗೋದನ್ನು ತಡೆಯಲು ಜ್ಞಾನ ಬೇಕಿದೆ. ವೈಜ್ಞಾನಿಕ ಸಂಶೋಧನೆಯಿಂದ ಪ್ರಕೃತಿ ವಿಕೋಪ ತಡೆಯಲಾಗದು.ಅಧ್ಯಾತ್ಮದ ಸಂಶೋಧನೆಯಿಂದ ಸತ್ಯ ತಿಳಿಯಬಹುದು. ಮಾನವರಿಗೆ ಅಧ್ಯಾತ್ಮ ಸಂಶೋಧನೆಯ ಅಗತ್ಯವಿದೆ.ಅಧ್ಯಾತ್ಮ ರಾಜಕೀಯದಿಂದ ಬೆಳೆಯೋದಿಲ್ಲ.
ಇನ್ನಷ್ಟು ಕುಸಿಯುತ್ತದೆ. ಇದನ್ನು ಆತ್ಮದುರ್ಭಲ ಎನ್ನುವರು.
ಬಂದ್ ಮಾಡೋದಾದರೆ  ಅಜ್ಞಾನ ಬಂದ್ ಮಾಡಬೇಕು, ಭ್ರಷ್ಟಾಚಾರ ಬಂದ್ ಆಗಬೇಕು, ಮಧ್ಯವರ್ತಿಗಳ  ಬಾಯಿ ಬಂದ್ ಆಗಬೇಕು, ಅಜ್ಞಾನವನ್ನು ಹೆಚ್ಚಿಸಿರುವ ರಾಜಕೀಯ ಬಂದ್ ಆಗಬೇಕು.ಇದು ಮನೆಮನೆಯೊಳಗೆ ಹರಡಿರುವಾಗ ಹೊರಗೆ ಬಂದು ಬಂದ್  ಆಚರಿಸಿ ಒಂದು ದಿನ ಹೋರಾಟ‌ನಡೆಸಿದರೆ ಆ ದಿನದ ನಷ್ಟವನ್ನು ತುಂಬಲು ರಾಜಕಾರಣಿಗಳಿಗೆ ಸಾಧ್ಯವೆ? ಕೆಲಸವೇ ಮಾಡದೆ ತಿಂದರೆ ಸಾಲವಾಗುತ್ತದೆ. ಹೀಗಾಗಿ ನೆಲ ಜಲದ ಋಣ ತೀರದೆ ಕಷ್ಟ ನಷ್ಟದ ಸುಳಿಯಲ್ಲಿ ಮನುಕುಲ ಸಮಸ್ಯೆಗಳನ್ನು ಬೆಳೆಸಿಕೊಂಡು  ಜೀವನ ನಡೆಸೋದೆ  ಸಾಧನೆ ಎನ್ನುವ ಅಜ್ಞಾನ ಮಿತಿಮೀರಿದೆ ಎಂದರೆ  ದೊಡ್ಡ ವಿವಾದ ಸೃಷ್ಟಿ  ಆಗಬಹುದು. ವಾದ ಮಾಡದೆಯೇ ವಿವಾದ ಸೃಷ್ಟಿ ಮಾಡೋರೆ ಮಧ್ಯವರ್ತಿಗಳು. ಕಾರಣವಿಷ್ಟೆ ಸತ್ಯಕ್ಕೆ ವಾದ ಮಾಡಲಾಗದು. ಅರ್ಧ ಸತ್ಯಕ್ಕೆ ವಿವಾದವಿರುತ್ತದೆ. ಇಂದಿನ ಹಲವು ವಾದ ವಿವಾದಗಳಿಂದ ಸತ್ಯ ಹೊರಬರದಂತೆ ತಡೆ ಹಿಡಿದು ರಾಜಕೀಯ ಬೆಳೆಸಿರುವ ಕಾರಣ‌ ಇಂದಿಗೂ ನಮ್ಮ ದೇಶದಲ್ಲಿ ನಾವೇ ಪರಕೀಯರಾಗಿರೋದಾಗಿದೆ. ಇದಕ್ಕೆ ಹೊರಗಿನವರು ಕಾರಣರಾಗಿಲ್ಲ ನಮ್ಮವರೆ ನಮಗೆ ಶತ್ರುವಾಗಿ  ದ್ವೇಷ ಹರಡಿಕೊಂಡಿರೋದು ಕಾರಣವಾಗುತ್ತಿದೆ.
ಎತ್ತ ಸಾಗುತ್ತಿದೆ ಭಾರತ? ನಿಜವಾಗಿಯೂ ನಾವು ಸ್ವತಂತ್ರ ಯಾರಿಗೆ ಕೊಟ್ಟಿದ್ದೇವೆ? ದೇವರಿಗೂ ಅಸುರರಿಗೋ? ಇಬ್ಬರೂ ನಮ್ಮೊಳಗೇ ಇರೋದು.  ಮಾನವನ ಮನಸ್ಸು ಹೊರಗೆ ಹೊರಟಷ್ಟೂ ಅಸುರ ಶಕ್ತಿ ಅಜ್ಞಾನ ಬೆಳೆದರೆ ಒಳಗೆ ಇದ್ದಷ್ಟೂ ದೈವೀ  ಶಕ್ತಿ ಸತ್ಯಜ್ಞಾನ ಹೆಚ್ಚುವುದು ವಿನಾಶಕಾಲೇ ವಿಪರೀತ ಬುದ್ದಿ ಎಂದಂತಿದೆ  ನಮ್ಮ ನಡೆ ನುಡಿ. ಹಂಚಿ ಬಾಳುವುದು ಮಾನವ ಗುಣ.ಇದು ದೈವೀ ಸಂಪತ್ತಾಗಬೇಕಷ್ಟೆ. ಅಸುರಿ ಗುಣ ಅಸತ್ಯ ಅಧರ್ಮ, ಅನ್ಯಾಯ ಹಂಚಿಕೊಂಡಷ್ಟೂ  ಬೆಳೆಯುತ್ತದೆ. ಇದರೊಳಗೇ ಅಡಗಿರುವ ದೈವೀಕ  ಕಾರ್ಯ  ಕಣ್ಣಿಗೆ ಕಾಣದಂತಿರುವುದು.ಈಸಬೇಕು ಇದ್ದು ಜೈಸಬೇಕು.  ಎಲ್ಲಾ ಕಾರ್ಯದ ಹಿಂದೆ  ಇರುವ ಎರಡೂ ಶಕ್ತಿಯನ್ನು ಸೂಕ್ಷ್ಮ ದೃಷ್ಟಿಯಿಂದ  ಕಾಣೋದಕ್ಕೆ  ಮಾನವನಿಗೆ  ಆತ್ಮಸಂಶೋಧನೆ ಅಗತ್ಯವಿದೆ. ಎಲ್ಲಾ ಇದ್ದೂ  ಏನೂ ಸಾಕಾಗದು ಎನ್ನುವ ಅಜ್ಞಾನ ಕ್ಕೆ ಮದ್ದು  ಜ್ಞಾನದ ಶಿಕ್ಷಣವಾಗಿದೆ. ಅದನ್ನೇ ವಿರೋಧಿಸುವವರನ್ನು  ಸರಿಪಡಿಸಲಾಗದು. ಕಲಿಗಾಲದ ಪ್ರಭಾವವಷ್ಟೆ. 

No comments:

Post a Comment