ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, September 8, 2023

ದೈವಸಂಶೋಧನೆ ಎಷ್ಟು ಅಗತ್ಯವಿದೆ?

ಸಾಕಾರ,ನಿರಾಕಾರ, ದೇವಾನುದೇವತೆಗಳು  ಯುಗಯುಗದಿಂದಲೂ ಭೂಮಿಯಲ್ಲಿ ಅವತರಿಸಿದ್ದಾರೆ. ಕೆಲವರಿಗೆ ಕಂಡರೆ ಹಲವರಿಗೆ ಕಾಣಲಿಲ್ಲ ಕಂಡವರು ತೋರಿಸಲಾಗದ ಕಾರಣವೇ ದೇವರೇ ಇಲ್ಲ ನಾನೇ ಎಲ್ಲಾ ಎನ್ನುವ ಅಸುರಶಕ್ತಿ ಹೆಚ್ಚಾಗಿದೆ. ಗ್ರಹ ನಕ್ಷತ್ರಗಳಿಂದ ಹಿಡಿದು  ಎಲ್ಲಾ ದೇವಾನುದೇವತೆಗಳು ಭೂಮಿಯಲ್ಲಿದ್ದವರೆ ಆದಾಗ ಅವರೆಲ್ಲರೂ ಈಗಿಲ್ಲವೆ? ಗ್ರಹ‌ನಕ್ಷತ್ರಗಳಾಗಿ ಆಕಾಶದಲ್ಲಿ ಮಿಂಚುವ  ಇವರ ಪುರಾಣ ಕಥೆಗಳು ಸುಳ್ಳೆ? ಸೂರ್ಯ ಚಂದ್ರ ಗ್ರಹತಾರೆಗಳ ಪ್ರಭಾವದಿಂದಾಗಿ ಭೂಮಿಯ ಮಾನವ  ತನ್ನ ಜೀವನ‌ನಡೆಸುತ್ತಿರುವುದೆ? ಇಲ್ಲವೆಂದಾದರೆ ಯಾಕೆ ನಮ್ಮ ವಿಜ್ಞಾನಿಗಳು ಬೇರೆ ಬೇರೆಗ್ರಹಗಳಿಗೆ ಹೋಗಿ ನೋಡಬೇಕು? ಸುಮ್ಮನೆ  ಭೂಮಿಯಲ್ಲಿರುವ ಸಾಕಷ್ಟು  ಸಂಪತ್ತನ್ನು ಬಳಸಿಕೊಂಡು  ಜೀವನ ನಡೆಸಬಹುದಲ್ಲವೆ? ಬೇರೆ ಗ್ರಹಗಳಲ್ಲಿ ಮನುಕುಲ ವಾಸ ಮಾಡಿದ ಪುರಾಣವಿಲ್ಲ ಆದರೂ  ಸಂಶೋಧನೆ ಬಿಟ್ಟಿಲ್ಲ. ಹಾಗೆಯೇ ಹಿಂದಿನ ಎಷ್ಟೋ
ಅಧ್ಯಾತ್ಮ ಸಂಶೋಧಕರು  ಯಾವ ಗ್ರಹ ನಕ್ಷತ್ರಗಳ ಮೇಲೆ ಹೋಗಿ ಸತ್ಯ ತಿಳಿದಿಲ್ಲವಾದರೂ ಅವರೇ  ಗ್ರಹ ನಕ್ಷತ್ರವಾಗಿ ಅಮರರಾಗಿದ್ದಾರೆಂದರೆ ಭೂಮಿಯ ಮೇಲೆ  ನಕ್ಷತ್ರ ಅಥವಾ  star ಎನಿಸಿಕೊಳ್ಳಲು  ಪಡುವ ಶ್ರಮಕ್ಕಿಂತ. ಆಕಾಶದಲ್ಲಿ ನಕ್ಷತ್ರವಾಗಿರೋದು ಲಕ್ಷಪಟ್ಟುಕಷ್ಟ  .ಎನ್ನುವ ಸತ್ಯ‌ಮಾನವ ತಿಳಿದಾಗಲೇ  ಜೀವನ ಸತ್ಯವೂ ಸ್ವಲ್ಪ  ಅರ್ಥ ವಾಗುತ್ತದೆ. ಅದಕ್ಕೆ ನಮ್ಮ ಮಹಾತ್ಮರುಗಳು ಪರಮಾತ್ಮನ ದಾಸರಾಗಲು ಕಷ್ಟಪಟ್ಟರು. ಈಗ ಪರದೇಶದ ದಾಸರಾಗಲು  ವಿದೇಶಕ್ಕೆ ಹಾರೋರೆ ಹೆಚ್ಚು.  ಯಾರಿಗೆ ಎಲ್ಲಿ ಹೆಚ್ಚು ಋಣ ಇರುವುದೋ ಅಲ್ಲಿ ಹೋಗಲೇಬೇಕು.ಒಟ್ಟಿನಲ್ಲಿ ಋಣ ಎಂದರೆ ಸಾಲ ತೀರಿಸಲು ಬಂದಾಗ  ಅದರ ಬಗ್ಗೆ ಜ್ಞಾನ ವಿದ್ದರೆ  ಎಲ್ಲಾ  ನಡೆಯುತ್ತಿರುವುದಕ್ಕೆ  ನಾನೇ ಕಾರಣವೆಂಬ ಸತ್ಯ ತಿಳಿದು  ವಿಜ್ಞಾನದೊಳಗೇ ಅಡಗಿರುವ ಸಾಮಾನ್ಯ ಜ್ಞಾನದಿಂದ  ಮಾನವ ಮಹಾತ್ಮನಾಗಬಹುದು. ಯಾರಿಗೆ ಗೊತ್ತು ಯಾರ ದೇಹದಲ್ಲಿ ಯಾವ ಮಹಾತ್ಮರಿರುವರೋ? ಗ್ರಹಚಾರ ಕೆಟ್ಟಾಗ ಯಾವ ನಕ್ಷತ್ರಗಳೂ ಕಾಣೋದಿಲ್ಲ.
ಹಾಗೆಯೇ ಭೂಮಿಯ ಮೇಲೆ ಎಷ್ಟೇ Star ಪಡೆದರೂ  ಇಲ್ಲೇ ಬಿಟ್ಟು ನಡೆಯೋದು  ತಪ್ಪಲ್ಲ. ಸಂಶೋಧನೆ ಇರಲಿ ಆತ್ಮಸಂಶೋಧನೆಯೇ ಗುರಿಯಾಗಿರಲೆಂದು ಮಹಾತ್ಮರು ತಿಳಿಸಿರೋದು. 
ಆಸ್ತಿಕ ನಾಸ್ತಿಕರಿಬ್ಬರಲ್ಲಿಯೂ ಇರೋದು‌   ಒಂದೇ ಶಕ್ತಿ.ಆದರೆ ಬಳಸುವ ರೀತಿ ಬೇರೆಯಾದಾಗ ಅನುಭವದಲ್ಲಿ ಬೇರೆಯಾಗಿರುತ್ತದೆ. ಹಾಗಂತ ಭೂಮಿ ಬಿಟ್ಟು ಜೀವನ ನಡೆಸಬಹುದೆ? ಸಾಮಾನ್ಯ ಸತ್ಯವನ್ನು ಮಾನವ‌ಪ್ರತಿಕ್ಷಣ ನೆನಪಿಸಿಕೊಳ್ಳುತ್ತಿದ್ದರೆ ಭೂಮಿ ಇಲ್ಲದೆ ನಾನಿಲ್ಲ,ನಾನಿಲ್ಲದೆ  ಜಗತ್ತಿಲ್ಲ ಜಗತ್ತಿನಲ್ಲಿ ನಾನ್ಯಾರು? ನನ್ನಿಂದಲೇ ಜಗತ್ತಲ್ಲ ಆಗ ಅಹಂಕಾರವಿಲ್ಲದೆ  ನಾನು ಬೆಳೆಯಲು ಸಾಧ್ಯ. ಆತ್ಮವಿಶ್ವಾಸ ಅಗತ್ಯವಿದೆ. ನಿಧಾನವಾದರೂ  ಸತ್ಯ ಸತ್ಯವೆ ಮಿಥ್ಯ ಮಿಥ್ಯವೆ.
ಇಡೀ  ನಭೋಮಂಡಲ  ಅರ್ಥ ವಾಗದು  ಕೊನೆಪಕ್ಷ ಭೂ ಮಂಡಲವನ್ನು ಅರ್ಥ ಮಾಡಿಕೊಂಡರೆ ಇಲ್ಲಿಗೆ ಬಂದಿರುವ ಉದ್ದೇಶ ತಿಳಿದು ನಡೆಯಬಹುದು.
ಯುಗಯುಗದಿಂದಲೂ  ಮನುಕುಲವಿದೆ ದೇವರಿದ್ದಾರೆ ಅಸುರರಿದ್ದಾರೆ. ಯುದ್ದಗಳಾಗುತ್ತದೆ ಪುನಜನ್ಮವಾಗುತ್ತದೆ.
ಹಿಂದಿನ ಜನ್ಮದ ಪಾಪ ಪುಣ್ಯದ ಫಲ ಜೀವ ಅನುಭವಿಸುತ್ತಾ‌ ಮರೆಯಾಗಿರುತ್ತದೆ.  ಅಧ್ಯಾತ್ಮಸಂಶೋಧನೆಯಿಂದ  ಜಗತ್ತಿನಲ್ಲಿ ಶಾಂತಿ ನೆಲೆಸಿದರೆ ಭೌತಿಕ ಸಂಶೋಧನೆ ಕ್ರಾಂತಿ ಎಬ್ಬಿಸಿ ಆಳುತ್ತದೆ. ಆಳಿದವರೂ ಆಳಾಗಿರುತ್ತಾರೆ. ಹೀಗೇ‌ ಹಿಂದಿನ ಸಾಲ ತೀರಿಸದೆ ಮುಂದಿನ ಸಾಲ  ಮಾಡಬಾರದೆನ್ನುವ ಕಾರಣದಿಂದ ಪರಮಾತ್ಮನ ಸೃಷ್ಟಿ ಮಾನವನೇ ಮಾಡಿದರೆ ಅಸಂಖ್ಯಾತ  ಗ್ರಹ ನಕ್ಷತ್ರ ಚಂದ್ರ ಸೂರ್ಯ ರ ಜೊತೆಗೆ ದೇವತೆಗಳಿದ್ದರೂ ನಾನೇ ಎನ್ನುವ ಅಹಂಕಾರ ಮಾತ್ರ ಹೋಗದೆ ಒಳಗೇ ಕೆಳಗೇ ತಳ್ಳುತ್ತಾ ಇದ್ದರೆ‌ಮೇಲೆ ನಕ್ಷತ್ರವಾಗಲು ಕಷ್ಟ. 
ಒಟ್ಟಿನಲ್ಲಿ ಮಾನವನೊಳಗೇ ಅಡಗಿರುವ ದೇವಾಸುರರ ಜ್ಞಾನ  ಮೇಲೂ ಏರಲಾಗದೆ ಕೆಳಗಿಳಿಯಲಾಗದೆ ಮಧ್ಯೆದ ಭೂಮಿಯಲ್ಲಿ  ಆಟಕ್ಕುಂಟು ಲೆಕ್ಕಕ್ಕಿಲ್ಲದಂತಿರುವುದು. ಇವರಲ್ಲಿ ದೈವತ್ವ ಪಡೆದವರು‌ಮೇಲೇರಿದರೆ ಅಸುರತ್ವ ಪಡೆದವರು ಕೆಳಗಿಳಿದು ಹೋರಾಡುವರಷ್ಟೆ. ಹಾಗಾದರೆ ದೇವರು ಯಾರು? ಅಸುರರು ಯಾರು,,? ಮಾನವರೆಲ್ಲಿ?

No comments:

Post a Comment