ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, August 4, 2023

ಹೃದಯ ಜೀವ ಶಕ್ತಿಯಾದರೆ ಹೃದಯವಂತಿಕೆ ಆತ್ಮಶಕ್ತಿ


 ಆತ್ಮಜ್ಞಾನವನ್ನು ಕಣ್ಣಿನಿಂದ ನೋಡಲಾಗದು.  ಜೀವವಿಜ್ಞಾನ  ಸಂಶೋಧನಾ ಕೇಂದ್ರಗಳಿಂದ ಜಗತ್ತು ಹೇಗೆ ನಡೆದಿದೆಯೋ ಹಾಗೆಯೇ ಆತ್ಮವಿಜ್ಞಾನದ ಸಂಶೋಧಕರು  ಒಳಗಿದ್ದೇ ಸೂಕ್ಮದೃಷ್ಟಿಯಿಂದ  ಸತ್ಯವರಿತು ಆತ್ಮವೇ ದೇವರೆಂದರು. ಕಾಣದ ಆತ್ಮ ಕಾಣದ ದೇವರ ಹೆಸರಿನಲ್ಲಿ ಸಾಕಷ್ಟು ಮಂದಿ ರಾಜಕೀಯ ನಡೆಸುತ್ತಾ ಜನರನ್ನು ಆಳಿದರು.ಈಗಲೂ ಇದೆ ನಡೆದಿದೆ ಎಂದರೆ ಎಲ್ಲರಲ್ಲಿಯೂ ಜೀವಶಕ್ತಿಯ ಜೊತೆಗೆ ಆತ್ಮಶಕ್ತಿಯಿದ್ದರೂ  ಕೆಲವರಷ್ಟೆ ಆತ್ಮಜ್ಞಾನಿಗಳಾಗಿರೋದು. ಇದಕ್ಕೆ ಕಾರಣ ಆತ್ಮಾವಲೋಕನ. ತನ್ನ ತಾನರಿತು ಜಗತ್ತಿನಲ್ಲಿ ಜೀವಿಸೋದಷ್ಟೆ. ತನ್ನ ಹಿಂದೆ ಎಷ್ಟು ಜನರಿದ್ದಾರೆನ್ನುವುದು ರಾಜಕೀಯ .ನನ್ನೊಳಗೇ ಎಷ್ಟು ಆತ್ಮ ಶಕ್ತಿಯಿದೆ ಎನ್ನುವ ಸತ್ಯ ವರಿತು  ಭೂಮಿಯನ್ನು ಸದ್ಬಳಕೆ ಮಾಡಿಕೊಂಡವರು ರಾಜಯೋಗಿಗಳು. ಯೋಗ  ಜೀವಾತ್ಮ ಪರಮಾತ್ಮನ ಸೇರೋ ಕಡೆಗಿತ್ತು. ಈಗ ಪರಮಾತ್ಮನ ಆಳೋ ಕಡೆಗೆ ಹೊರಟು ಸೋತು  ಹೋಗುತ್ತಿದೆ. ದೇಶವನ್ನೇ ತೆಗೆದುಕೊಂಡರೆ ಭಾರತ ಮಾತೆ ಒಳಗೆ ಇದ್ದು ನಾನೇ ಬೇರೆ ನೀನೇ ಬೇರೆ, ನಿನ್ನ ನಾ ಆಳುವೆ ಎಂದರೆ ದೇಶ ಭಕ್ತಿ ಇರದು.ಹಾಗೆ ದೇವರು ಪರಮಾತ್ಮ,ಆತ್ಮನ  ಅರಿವು ಒಳಗಿನಿಂದಲೇ  ಬರಬೇಕು. ಅನುಭವಕ್ಕೆ ಬರೋವರೆಗೂ  ಸುಳ್ಳಾಗಿರುವುದು. ಸತ್ಯಕ್ಕೆ ಸಾವಿಲ್ಲ.  ಅದಕ್ಕೆ ದೇಹಕ್ಕೆ ಅಂತ್ಯವಿದೆ ಆತ್ಮಕ್ಕಿಲ್ಲವೆಂದರು.

ಭೂಮಿಯ ಮೇಲಷ್ಟೇ ಮನುಕುಲವಿರೋದು, ಮಾನವನಿಗಷ್ಟೆ ಆರನೇ ಅರಿವಿರೋದು. ಅದನ್ನು ಆತ್ಮಸಾಕ್ಷಾತ್ಕಾರದ ನಂತರವೇ ತಿಳಿಯೋದು. ಅಂದರೆ ಮೇಲಿರುವ ಎಲ್ಲಾ ಗ್ರಹ ನಕ್ಷತ್ರ ಗಳ ಪ್ರಭಾವದಿಂದಾಗಿ ಮನಸ್ಸು  ನಡೆಯುತ್ತದೆ. ಭೂಮಿಯೇ ಒಂದು ಗ್ರಹ ಅದರ ಸುತ್ತಮುತ್ತಲಿನ ಎಲ್ಲಾ ಗ್ರಹ ನಕ್ಷತ್ರಗಳ ಚಲನಗಳು ಭೂಮಿ ಮೇಲಿರುವ‌  ಮಾನವನ ಜೀವನದ ಮೇಲೆ ಪರಿಣಾಮ ಬೀರುವುದೆನ್ನುವ ಜ್ಯೋತಿಷ್ಯ ವಿಜ್ಞಾನವು  ಹಿಂದಿನಿಂದಲೂ ಭವಿಷ್ಯ  ಹೇಳಿಕೊಂಡು ಬಂದಿದೆ. ನಡೆದಿದೆ ನಡೆಯುತ್ತಿದೆ ಎಂದರೆ ಇದನ್ನು ತಪ್ಪು ಸುಳ್ಳು ಎನ್ನುವ ವಾದ ವಿವಾದದಿಂದ ಏನಾದರೂ ಬದಲಾವಣೆ ಆಗಿದೆಯೆ? ಪ್ರಕೃತಿ ವಿಕೋಪ ಕ್ಕೆ ಬಲಿಯಾದವರಲ್ಲಿ  ಮಾನವರೂ ದೇವಾಸುರರೂ ಇದ್ದಾರೆ ಎಂದರೆ ಈ ಮೂರೂ ಗುಣಗಳ ಭಿನ್ನಾಭಿಪ್ರಾಯ  ಆತ್ಮನ ಸರಿಯಾದ ತಿಳಿವಳಿಕೆಯಿಂದ ದೂರ ಮಾಡುತ್ತಾ ರಾಜಕೀಯ  ಬೆಳೆಸಿದೆ. ಆದರೂ ಮಾನವ ಕಾರಣಮಾತ್ರ ಎನ್ನುವ ಅದ್ವೈತ. ಎಲ್ಲದ್ದಕ್ಕೂ ನಾನೇ ಕಾರಣ ಎನ್ನುವ ದ್ವೈತ  ಎಲ್ಲರಲ್ಲಿಯೂ ಇದ್ದು ನಡೆಸೋನು ನಾನೇ ಎನ್ನುವ ವಿಶಿಷ್ಟಾದ್ವೈತ  ತಮ್ಮ ತಮ್ಮ ದರ್ಶನವನ್ನು  ತಿಳಿಸಿದ್ದರೂ ಅದನ್ನು ಒಳಹೊಕ್ಕಿ ಸತ್ಯಾಸತ್ಯತೆ ತಿಳಿಯುವುದು ಬಿಡುವುದು  ಮಾನವ ಧರ್ಮ ಕರ್ಮ. ಬಡವನಲ್ಲಿ ಜ್ಞಾನವಿದ್ದರೆ ಹಣವಿರದು,ಶ್ರೀಮಂತ ನಲ್ಲಿ ಹಣವಿದ್ದರೆ ಜ್ಞಾನವಿರದು.ಜ್ಞಾನವಿದ್ದರೂ ಸತ್ಯವಿರದು. ಕಾರಣ ಇಲ್ಲಿ ಬಡವನ ಪಾಲನ್ನು ಪಡೆದು ಶ್ರೀಮಂತ ಸ್ವತಂತ್ರ ಜೀವನ ನಡೆಸಿದರೂ  ಅದು  ಬಡವನ ಕರ್ಮ ಎನ್ನುವವರೆ ಹೆಚ್ಚು. ಬಡವನಿಗೆ ಕೊಟ್ಟು ಸಮಾನ ಜೀವನ ನಡೆಸೋರು ಇಲ್ಲ. ಹಾಗಾಗಿ ಆತ್ಮ ಎಲ್ಲರನ್ನೂ ಒಂದಾಗಿ ಕಾಣು ಎಂದರೆ ಜೀವ ಬೇರೆ ಬೇರೆಯಾಗೇ ಇರುತ್ತದೆ. ಯಾರಲ್ಲಿ ಆತ್ಮಜ್ಞಾನವಿದ್ದು ಜೀವದ ಹಂಗುತೊರೆದು  ಪರಮಾತ್ಮನ ಶರಣಾಗುವ ಭಾಗ್ಯ ಇರುವುದೋ ಅವರು ಮಹಾತ್ಮರಾದರು. ಇದಕ್ಕೆ ಯೋಗ ಎಂದರು. ಜ್ಞಾನಯೋಗ, ರಾಜಯೋಗ,ಭಕ್ತಿಯೋಗ,ಕರ್ಮ ಯೋಗವೆಲ್ಲವೂ ಮುಕ್ತಿಯ ಮಾರ್ಗಗಳಾಗಿವೆ. ಇದನ್ನು ಶ್ರೀ ಕೃಷ್ಣ ಪರಮಾತ್ಮನೇ ಭಗವದ್ಗೀತೆ ಮೂಲಕ ವಿವರವಾಗಿ ತಿಳಿಸಿದ್ದರೂ ರಾಜಕೀಯ ಬಿಡದೆ ಯೋಗ ಸಿದ್ದಿಸದು, ಯೋಗ ಸಿದ್ದಿ ಆದವರಿಗೆ ರಾಜಕೀಯ ಹಿಡಿಸದು.ಆದರೆ ವಾಸ್ತವದಲ್ಲಿ ಭಾರತ ದೇಶದ ಯೋಗ ಭಾರತೀಯರ ತತ್ವಶಾಸ್ತ್ರ ದಲ್ಲಿದೆ. ತಂತ್ರದಿಂದ ತತ್ವವನರಿಯದೆ ರಾಜಕೀಯ ನಡೆಸಿದರೆ ಅತಂತ್ರ ಜೀವನ. ಸ್ವತಂತ್ರ ಭಾರತಕ್ಕೆ ಬೇಕಿದೆ ಸ್ವತಂತ್ರ ಜ್ಞಾನದ ಶಿಕ್ಷಣ. ಕೊಡುವವರು ಯಾರು? ಪಡೆಯುವವರು ಯಾರು? ಒಳಗೇ ಅಡಗಿರುವ ಆತ್ಮಶಕ್ತಿಯನ್ನು ಅಧ್ಯಾತ್ಮದ ಸತ್ಯ ತಿಳಿಯುವ ಕಡೆಗೆ ಹೊರಡಿಸಲೂ  ಮನಸ್ಸು ಬೇಕು.ಇದನ್ನು ಒಳಗಿದ್ದೇ ಹಿಡಿತದಲ್ಲಿಟ್ಟುಕೊಂಡವರು ವಿರಳ. ಹೊರಗೆಷ್ಟು ಪ್ರಚಾರ ಮಾಡಿದರೂ ಒಳಗೇ ಶುದ್ದವಾಗದಿದ್ದರೆ ಸ್ವಚ್ಚ ಭಾರತ ಕನಸು. ವೈಜ್ಞಾನಿಕ ಸಂಶೋಧನೆಯಿಂದ ವೈಧ್ಯಕೀಯ ಸೇವೆ ಹೆಚ್ಚಾಗಿ ರೋಗಿಗಳೂ ಬೆಳೆದರು. ವೈಚಾರಿಕತೆಯ ಸಂಶೋಧನೆಯಲ್ಲಿ  ಹಿಂದೂಗಳು ಹಿಂದುಳಿದು  ವೈಜ್ಞಾನಿಕತೆಯ ಹಿಂದೆ ನಡೆದು ಯೋಗದಿಂದ ದೂರವಾದರು. ಕಾಲದ ಪ್ರಭಾವವೆಂದರೆ ಸರಿಯಾಗಬಹುದಷ್ಡೆ.ಯಾವುದೂ ನಮ್ಮ‌ಕೈಯಲ್ಲಿಲ್ಲ ಎನ್ನುವ ಬದಲಾಗಿ ನಮ್ಮ ಕೈ ಯಾವುದಕ್ಕೆ ಜೋಡಿಸಿ ಉಪಯೋಗಿಸಿದರೆ ಬಲವಾಗುತ್ತದೆಂದು ಅರಿವಾಗಬೇಕಿದೆ. 
ಸತ್ಯ ಕಣ್ಣಿಗೆ ಕಾಣದು ಅಸತ್ಯ  ಬೆನ್ನ ಬಿಡದು.ಬೆನ್ನ ಬಿಡದ ಬೇತಾಳಗಳು ಭೂತಕಾಲದಲ್ಲಿದ್ದೇ ವಾಸ್ತವತೆಯನರಿಯದೆ ಭವಿಷ್ಯ ನಿರ್ಮಾಣ ಮಾಡಲು ಹೋದರೆ ಆಗೋದು ಹೀಗೆ. 

No comments:

Post a Comment