ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Wednesday, August 16, 2023

ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?

ಸ್ವಾತಂತ್ರ್ಯ ಸಿಕ್ಕಿ 76 ವರ್ಷ ಕಳೆದೇ ಹೋಯಿತು.ಈಗಲೂ ಉತ್ಸವಾಚರಣೆಯಲ್ಲಿ ಯಾವುದೇ ಕೊರತೆಯಿಲ್ಲವಾದರೂ ಸ್ವಾತಂತ್ರ್ಯ ವನ್ನು ಸ್ವೇಚ್ಚಾಚಾರವೆಂದರಿತ ಯುವಪೀಳಿಗೆಯ ಸಂಖ್ಯೆ ಮಿತಿಮೀರಿರೋದು ಭಾರತೀಯರ ದೋಷವೋ ಅಥವಾ ಪರಕೀಯರ ವೇಷವೋ?
ವೇಷಭೂಷಣಗಳಿಂದ ನಾಟಕವಾಡಿಕೊಂಡು ಸ್ವತಂತ್ರ ಭಾರತದಲ್ಲಿ  ನಡೆಯೋದೇ ಬೇರೆ ಯಾವ ವೇಷಧರಿಸದೆಯೇ ದೇಶಕ್ಕಾಗಿ ದುಡಿದು ಬದುಕುವುದೇ ಬೇರೆ. ಹೀಗಿರುವಾಗ ದೇಶದ ಸಾಲವನ್ನು ತೀರಿಸುವ ಹಿಂದಿನ ಮಹಾತ್ಮರ ಜೀವಬಲಿದಾನವನ್ನು ನೆನಪಿಸಿಕೊಳ್ಳಲು ಕೇವಲ ಒಂದು ದಿನಸಾಕೆ? ಪ್ರತಿದಿನವೂ ಮಕ್ಕಳ ತಲೆಗೆ ತುಂಬುದ ವಿಷಯದಲ್ಲಿ ದೇಶಭಕ್ತಿಯ ವಿಚಾರವಿದ್ದರೆ ದೇಶದಲ್ಲಿ ಇಷ್ಟು ಭ್ರಷ್ಟಾಚಾರವಿರುತ್ತಿರಲಿಲ್ಲ. ಕಾಲದ ಪ್ರಭಾವ. ಪ್ರಭಾವಿ ವ್ಯಕ್ತಿಗಳನ್ನು ಕರೆದು  ರಾಷ್ಟ್ರ ದ್ವಜಾರೋಹಣ ಮಾಡುವಾಗ ಪ್ರಭಾವಿ ವ್ಯಕ್ತಿಯ ಹಿಂದಿನ ಶಕ್ತಿಯನ್ನು  ಗಮನಿಸುವುದೂ ಅಗತ್ಯವಿದೆ. ಅಷ್ಟೊಂದು ಪ್ರಭಾವ  ಬೀರುವ ವ್ಯಕ್ತಿತ್ವವುಳ್ಳವರು ದೇಶದ ಸಾಲ ತೀರಿಸಲು ಯಾವ  ಕೆಲಸ ಕಾರ್ಯ ದಲ್ಲಿರುವರು? ಸಮಾಜದ ಪರಿಸ್ಥಿತಿಯನ್ನು ಎಷ್ಟು ಅರ್ಥ ಮಾಡಿಕೊಂಡಿರುವರು? ಜನಸಾಮಾನ್ಯರಂತೆ  ಎಷ್ಟು ಸರಳಜೀವನ ನಡೆಸಿರುವರು? ಭಾರತ ಮಾತೆ ಇರೋದೆ ಸರಳತೆಯಲ್ಲಿ.ಮಾನವ ಎಷ್ಟು ಸರಳವಾಗಿರುವನೋ ಅಷ್ಟು ಉಳಿತಾಯ ಮಾಡುವನು.ಉಳಿತಾಯದಲ್ಲಿ ಹಣ ಮಾತ್ರ ಬರೋದಿಲ್ಲ‌  ನಮ್ಮ ಧರ್ಮ, ಸಂಸ್ಕೃತಿ, ಭಾಷೆ,  ನೆಲ,ಜಲ,ದೇಶವನ್ನು ಉಳಿಸಿ ಬೆಳೆಸುವುದು ಉಳಿತಾಯ.ಇದರಿಂದಾಗಿ ನಮ್ಮ ಋಣ ಅಥವಾ ಸಾಲ ಕಳೆದು ಹಿಂದಿನ ಮಹಾತ್ಮರ ನಡೆ ನುಡಿಯಲ್ಲಿದ್ದ ಸತ್ಯದ ಅರಿವಾಗುವುದು. ಎಲ್ಲೆಂದರಲ್ಲಿ  ಯಾರು ಯಾರಿಗೋ ರಾಷ್ಟ್ರದ ದ್ವಜ ಹಂಚುವ  ಬದಲಾಗಿ  ರಾಷ್ಟ್ರೀಯ ಚಿಂತನೆ  ಹೆಚ್ಚಿಸುವ   ದೇಶಭಕ್ತರನ್ನು ಅರಿತು ನಡೆಯೋ ಮಹಾತ್ಮರನ್ನು  ಸೃಷ್ಟಿ ಮಾಡುವ ಶಿಕ್ಷಣ ಭಾರತಕ್ಕೆ ಅಗತ್ಯವಿದೆ.
ಹೀಗೆ ಹೇಳಿದರೂ ನೀವ್ಯಾರು  ನಿಮಗೇನು ಕೆಲಸ ನಿಮಗೇನು ಅಧಿಕಾರ ಎಂದು ಕೇಳುವ ನಮ್ಮವರೆ ನಮಗೆ ಪರಕೀಯರು.
ಇದು ಭಾರತವನ್ನು ರಾಜಕೀಯವಾಗಿ ಬೆಳೆಸಿ ರಾಜಯೋಗದ  ಸತ್ಯದಿಂದ ದೂರಮಾಡಿರೋದಕ್ಕೆ ಕಾರಣವೇ ನಮ್ಮ ಶಿಕ್ಷಣ.
ಬ್ರಿಟಿಷ್ ರಿಂದ ನಮ್ಮ ದೇಶ ಹಾಳಾಗಿಲ್ಲ ನಮ್ಮಲ್ಲಿಯ ಒಡಕಿನಿಂದ ಹಾಳಾಗಿದೆ. ನಮ್ಮೊಳಗೇ ಸರಿಯಾದ ಒಗ್ಗಟ್ಟು ಇಲ್ಲದ ಮೇಲೆ ಹೊರಗಿನವರ ಹೆಸರಿನಲ್ಲಿ ನಮ್ಮ ಮಹಾತ್ಮರ ತಪ್ಪು ಎತ್ತಿ ಹಿಡಿಯುವಷ್ಟು  ಸ್ವಾರ್ಥ ಅಹಂಕಾರದ ಅಜ್ಞಾನ ನಮ್ಮವರನ್ನೇ ದೂರ ಮಾಡಿಕೊಂಡು  ಪರಕೀಯರನ್ನು ಅತಿಥಿ ಸತ್ಕಾರ ಮಾಡುತ್ತಾ ಸ್ವಾತಂತ್ರ್ಯ ದಿನಾಚರಣೆ ಮಾಡಿ ನಾವು ಸ್ವತಂತ್ರ ಪ್ರಜೆಗಳೆನ್ನುವವರೊಮ್ಮೆ  ಸ್ವತಂತ್ರ ಜ್ಞಾನ  ನಮ್ಮೊಳಗೇ ಇರೋವಾಗ. ಯಾಕಿಷ್ಟು ಅತಂತ್ರಸ್ಥಿತಿಗೆ ಜನ ಜೀವನ ತಲುಪುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡಬೇಕಿತ್ತು.
ದೇಶದ ಪ್ರತಿಯೊಬ್ಬ ಪ್ರಜಾಶಕ್ತಿ ಸರಿಯಾಗಿ ದುಡಿದು  ಜೀವನ ನಡೆಸಲಾಗದೆ ಸರ್ಕಾರದ ಹಿಂದೆ ನಿಂತಿರೋದು ಸ್ವಾತಂತ್ರ್ಯ ದ  ಚಿಹ್ನೆಯಾಗದು. ಒಟ್ಟಿನಲ್ಲಿ ಹೇಳೋದಾದರೆ ಸ್ವಾತಂತ್ರ್ಯ ನಮಗೆ ಸಿಕ್ಕಿದ್ದು ಮಹಾತ್ಮರಿಂದ. ಅದನ್ನು ದುರ್ಭಳಕೆ ಮಾಡಿಕೊಂಡು ಆಳಿದ್ದು ನಮ್ಮವರೆನ್ನಿಸಿಕೊಂಡವರೆ ಹೊರತು ಪರಕೀಯರಲ್ಲ.ಇದಕ್ಕೆ ಕಾರಣ ಪರಕೀಯರ ಶಿಕ್ಷಣ.ಈಗಲೂ ಬುದ್ದಿವಂತ ವಿದ್ಯಾವಂತ,ಜ್ಞಾನವಂತರಿಗೆ ದೇಶದಲ್ಲಿ ಸ್ವತಂತ್ರ ವಾಗಿ ದುಡಿದು ಬದುಕಲಾಗದೆ ಹೊರ ದೇಶದವರ ಕೈಕೆಳಗಿದ್ದೇ  ಲಕ್ಷಾಂತರ ರೂ ಸಂಪಾದಿಸಿದರೂ ದೇಶದ ಸಾಲ ತೀರುತ್ತಿಲ್ಲವೆಂದರೆ  ನಮ್ಮದೇ ಜ್ಞಾನದ ಶಿಕ್ಷಣ ಬಿಟ್ಟು ಹೊರಗಿನ ವಿಜ್ಞಾನದಿಂದ  ಪಡೆದ ವಿಷಯದಲ್ಲಿ ಪೂರ್ಣ ಸತ್ಯವಿಲ್ಲದೆ ಭೌತಿಕಾಸಕ್ತಿ ಬೆಳೆದಿದೆ.ಅಧ್ಯಾತ್ಮ ಸತ್ಯ ಹಿಂದುಳಿದಿದೆ. ಅಧ್ಯಾತ್ಮ ವಿಚಾರಗಳನ್ನು ಪ್ರಚಾರ ಮಾಡಲು ಸ್ವಾತಂತ್ರ್ಯ ವಿದ್ದರೂ ಅದೂ  ಕೆಲವರಿಗಷ್ಟೆ ಸೀಮಿತವಾಗಿದ್ದು ಜನಸಾಮಾನ್ಯರೊಳಗಿದ್ದ ಜ್ಞಾನವನ್ನು ನಿರ್ಲಕ್ಷ್ಯ ಮಾಡಿ ಆಳುವ  ರಾಜಕೀಯತೆ ಮನೆ ಮನೆಯೊಳಗಿದೆ. 
ಭ್ರಷ್ಟಾಚಾರದ ಹಣದಲ್ಲಿ ಉತ್ಸವ,ಆಚರಣೆ,ಪ್ರಚಾರ ಮಾಡಿ ಹೆಸರು ಹಣ,ಅಧಿಕಾರ ಪಡೆದವರು ಪ್ರತಿಷ್ಟಿತರು.  ಆದರೆ ಈ ಉತ್ಸವ ಆಚರಣೆಗಳಿಗೆ ಸುರಿಯುವ ಕೋಟ್ಯಾಂತರ ಹಣ ಪ್ರಜೆಗಳೇ  ದುಡಿದು ತೀರಿಸುವವರೆಗೂ ದೇಶದ ಋಣ ತೀರದು. ಕೆರೆಯ ನೀರನು ಕೆರೆಗೆ ಚೆಲ್ಲಿ ಸರಿ,ಆದರೆ ಕೆರೆಯ ನೀರನು ಕೊಳಚೆಗೆ ಚೆಲ್ಲಿದರೆ  ಸ್ವಚ್ಚತೆ ಎಲ್ಲಿರುವುದು.
 ಕೆಲವೆಡೆ ಉತ್ತಮ ವ್ಯಕ್ತಿಗಳಿಂದ ದ್ವಜಾರೋಹಣವಾಗಿದೆ. ಆದರೆ ಕೆಲವೆಡೆ   ದೇಶವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಾ ಜನರ ದಾರಿ ತಪ್ಪಿಸಿ ಆಳುವವರು  ಸ್ವಾತಂತ್ರ್ಯ ದ ದ್ವಜ ಹಿಡಿದು ಹಾರಿಸಿದರೆ ನಿಜವಾದ ಸ್ವಾತಂತ್ರ್ಯ ಯಾರಿಗೆ ಸಿಕ್ಕಿದೆ?
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಹಕಾರವಿಲ್ಲದೆ ಏನೂ ನಡೆಯದು ಎಂದಾಗ ಎಲ್ಲದ್ದಕ್ಕೂ ಕಾರಣವೇ ಸಹಕಾರ.
ಇದು ಜ್ಞಾನದ ಪರವಿದೆಯೋ ಅಜ್ಞಾನದ ಪರ ಇದೆಯೋ ತಿಳಿದುಕೊಂಡು ನಡೆಯಲೂ ಉತ್ತಮ ಶಿಕ್ಷಣದ ಅಗತ್ಯವಿದೆ.
ಪ್ರಗತಿಪರ ದೇಶದಲ್ಲಿ ಪ್ರಜೆಗಳಾದವರು ದೇಶದ ಸಾಲ ತೀರಿಸುವತ್ತ ನಡೆಯುತ್ತಾರೆ. ಸಾಲ ಬೆಳೆಸೋ ಕಾರ್ಯಕ್ರಮ ಗಳು  ಕಡಿಮೆಯಾದಷ್ಟೂ‌  ದೇಶದ ಜೊತೆಗೆ ದೇಶವಾಸಿಗಳ ಸಾಲವೂ ತೀರುವುದು.
ಒಂದು ಹೊತ್ತಿನ ಊಟವಿಲ್ಲದವರ ಮುಂದೆ ‌ ದ್ವಜ ಹಾರಿಸಿ ಒಂದು ದಿನದ ಊಟ ಕೊಟ್ಟರೆ  ಕಾರ್ಯಕ್ರಮವಾಗುತ್ತದೆ.
ಅದೇ ಅವರಿಗೆ ಸರಿಯಾಗಿ ದುಡಿದು ಬದುಕುವ ಸ್ವಾತಂತ್ರ್ಯ ಕೊಟ್ಟು ಕೆಲಸ ಕೊಟ್ಟರೆ ಆತ್ಮನಿರ್ಭರ ಭಾರತ. ಒಂದು ದಿನದ ಖರ್ಚು ವೆಚ್ಚ ಬಡವರ ಪಾಲಿಗೆ  ಒಂದು ವರ್ಷದ ಜೀವನಕ್ಕೆ ಸಾಕು. 
ರಾಷ್ಟ್ರ ಭಕ್ತರನ್ನು  ಹೊರಗಿನ ವೇಷದಿಂದ ತೀರ್ಮಾನ ಮಾಡುವ‌ ಬದಲಾಗಿ ಒಳಗಿನ‌ಜ್ಞಾನದಿಂದ ತಿಳಿಯುವವರೆಗೆ ಭಾರತ ಸ್ವತಂತ್ರ ದೇಶವೆನಿಸಿಕೊಳ್ಳುವುದು ಕಷ್ಟವಿದೆ.ಈಗ ವಿದೇಶಿ ಬಂಡವಾಳ, ಸಾಲ,ವ್ಯವಹಾರ, ಶಿಕ್ಷಣವೇ ಸ್ವದೇಶಿಗಳಿಗೆ‌  ನುಂಗಲಾರದ ತುತ್ತಾಗಿದೆ. ಎಷ್ಟೇ ಹೊಟ್ಟೆಗೆ ಹಾಕಿಕೊಂಡರೂ ಒಳ ಹೋದ ಮೇಲೇ ಅದರ ಪರಿಣಾಮ ಅನುಭವಿಸಬೇಕಿದೆ. ಕಣ್ಣಿಗೆ ಕಾಣುವ ಸ್ವಾತಂತ್ರ್ಯ ಕಾಣದ ಸ್ವಾತಂತ್ರ್ಯ ವನ್ನು  ಎಷ್ಟೇ ವಿರೋಧಿಸಿದರೂ ಆತ್ಮತೃಪ್ತಿ ಸಿಗಲು ಕಾಣದ ಸ್ವಾತಂತ್ರ್ಯ ವೇ  ಬೇಕಿದೆ. ಅದು ಭಾರತೀಯರ  ಆಂತರಿಕ ಶಕ್ತಿಯಾಗಿತ್ತು. ಈಗಲೂ ಇದೆ ಎಚ್ಚರವಾದರೆ ಉತ್ತಮ. ಆತ್ಮಶಕ್ತಿಯನ್ನು ಸರ್ಕಾರ ಬೆಳೆಸದು. ಕಾರಣ ಸರ್ಕಾರವೇ ಜನರಿಂದ ನಡೆದಿದೆ.ಇನ್ನು ಜನರನ್ನು ನಡೆಸುವವರು ಯಾರು? ಒಳಗೇ ಇರುವ ಮಹಾಶಕ್ತಿಭಾರತ ಮಾತೆ ಎಂದರೆ ಅವಳ ಜ್ಞಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಶಿಕ್ಷಣವೇ ನಮ್ಮ ಭಾರತೀಯ ಶಿಕ್ಷಣವಾಗಿತ್ತು.ದೇಶಭಕ್ತಿಗೆ ದೇಶೀಯ ಶಿಕ್ಷಣವೇ ಮೂಲಾಧಾರ.ನಂತರವಷ್ಟೆ ವಿದೇಶಿ ಶಿಕ್ಷಣದ ಪ್ರಚಾರ.ಈಗಿದು‌ ಮೊದಲೇ ವಿದೇಶಿ ಶಿಕ್ಷಣ ನಂತರ‌ವೃದ್ದರಿಗೆ ಸ್ವದೇಶಿ ಜ್ಞಾನೋಪದೇಶ ಮಾಡುವ ಪರಿಸ್ಥಿತಿಯಲ್ಲಿ ದೇಶವಿದೆ.ಬದಲಾವಣೆ ಜಗದ ನಿಯಮ. ಬದಲಾದರೆ ಉತ್ತಮ ಜೀವನ. ಪರರನ್ನು ಬದಲಾಯಿಸುವ ಸ್ವಾತಂತ್ರ್ಯ ಇದ್ದವರು ತಮ್ಮನ್ನು  ತಾವುಬದಲಾಯಿಸಿಕೊಂಡರೆ ಉತ್ತಮ.
ಆಂತರಿಕ ಶಕ್ತಿ ಒಲಿಯೋದು ಹಣಕ್ಕಲ್ಲ ಜ್ಞಾನಕ್ಕೆ.  ಅದಕ್ಕಾಗಿ ಹೊರಗಿನ ಹೋರಾಟ,ಹಾರಾಟ ಮಾರಾಟದ ಬದಲು ಒಳಗಿನ ಸಾತ್ವಿಕ ಹೋರಾಟವಾದ ಉಪವಾಸ ಸತ್ಯಾಗ್ರಹ, ಸ್ವದೇಶೀ ಚಳುವಳಿ, ಅಸಹಕಾರ ಚಳುವಳಿ..ಮುಂತಾದ ಚಳುವಳಿಗಳ ಹಿಂದೆ ಅಧ್ಯಾತ್ಮಿಕ ಸತ್ಯವಡಗಿತ್ತು.ಇದನ್ನು ಅರ್ಥ ಮಾಡಿಕೊಳ್ಳಲು ಸೋತವರು ತಮ್ಮ ಅಧಿಕಾರಕ್ಕಾಗಿ ಮಹಾತ್ಮರನ್ನೇ ಸರಿಯಿಲ್ಲವೆನ್ನುವ  ಮಟ್ಟಿಗೆ ಬೆಳೆದಿರೋದು ಭಾರತೀಯರ ದುರಂತವಷ್ಟೆ.ನಮ್ಮವರೆ ನಮಗೆ ಶತ್ರುಗಳಾದರೆ ಪರಕೀಯರನ್ನು ಮಿತ್ರರಾಗಿಸಿಕೊಳ್ಳುವುದರ ಹಿಂದೆ ಕೇವಲ ರಾಜಕೀಯವಿರುತ್ತದೆ.ರಾಜಯೋಗವಿರದು.
ಸ್ವಾಮಿ ವಿವೇಕಾನಂದರ ರಾಜಯೋಗವನ್ನು ಅರ್ಥ ಮಾಡಿಕೊಂಡು ನಡೆದ  ಯುವಕರು ವಿದೇಶದೆಡೆಗೆ ನಡೆದಿದ್ದಾರೆಂದರೆ ಅದರಲ್ಲಿ ಯೋಗವಿರಲಿಲ್ಲ ಭೋಗವಷ್ಟೆ‌ ಇರೋದು. ಇದು ಅಧರ್ಮ ದೆಡೆಗೆ‌  ನಡೆಸುತ್ತಿದೆ ಎಂದರ್ಥ.
ಸ್ವದೇಶದ ಸಾಲ ತೀರಿಸಲು ಸ್ವದೇಶ ಸೇವೆ  ಮಾಡಬೇಕೇಹೊರತು ವಿದೇಶ ಸೇವೆ ಮಾಡೋದರಿಂದ ವಿದೇಶಿ ಸಾಲ ತೀರಿಸಬಹುದು. ನಮ್ಮ‌ ಸಾಲ ವಿದೇಶದ ವರೆಗೂ ಹರಡಿದೆ ಎಂದರೆ ಇದರ ಮೂಲವೇ ವಿದೇಶಿ ಶಿಕ್ಷಣ.ಅಜ್ಞಾನದ ಅಂದಕಾರದಲ್ಲಿ ಎಷ್ಟು ಓದಿದರೂ ಸಾಲ ತೀರದು.ಇದೇ ಹಿಂದೂ ಧರ್ಮ ಕ್ಕೂ‌ಪರಧರ್ಮ ಕ್ಕೂ ಇರುವ ವ್ಯತ್ಯಾಸ. ಹಿಂದೂಗಳ ದೇಶವಾಗಿದ್ದ ಭಾರತದೊಳಗೆ ಎಲ್ಲಾ ಧರ್ಮದವರೂ ಬೆಳೆದರು.ಆದರೆ ದೇಶಭಕ್ತಿ ಇಲ್ಲದೆ ಮೆರೆದ ಕಾರಣ‌ ಧರ್ಮ ಕುಸಿದಿದೆ.ಹಾಗೆಯೇ ಭಗವಂತನೊಳಗೇ ಇರುವ‌ ಮನುಕುಲಕ್ಕೆ ದೈವತ್ವವಿರಬೇಕಿತ್ತು. ಸ್ವಾರ್ಥ ಅಹಂಕಾರದ ಅಸುರಿತನವೇ  ದೇಹದೊಳಗೆ ಸೇರಿಕೊಂಡು ಎಷ್ಟೇ ದೇವರನ್ನು ಬೇಡಿ ಕಾಡಿದರೂ ಸಿಕ್ಕಿದ್ದೆಲ್ಲಾ ನನಗೇ ಎನ್ನುವ ಅತಿಆಸೆಯೇ ಸಾಲವೇ ಶೂಲವಾಗಿಸಿದೆ. ಅದ್ವೈತ ದೊಳಗೇ ದ್ವೈತ ದ ರಾಜಕೀಯತೆ. ವಿದೇಶದೊಳಗೇ  ದೇಶವಿದ್ದು  ಬೇರೆ ಬೇರೆ  ಎನ್ನುವ ರಾಜಕೀಯತೆ ದೇಶವನ್ನು ಕಟ್ಟುವುದರಲ್ಲಿ  ತೊಡಗಿದೆ. ಅಜ್ಞಾನದೊಳಗೇ ಅಡಗಿರುವ ಜ್ಞಾನವನ್ನು ಆಂತರಿಕ ಶುದ್ದಿಯಿಂದ ಮಾತ್ರ ಕಂಡುಕೊಳ್ಳಲು ಸಾಧ್ಯವಾದಾಗ ಶುದ್ದ ಮನಸ್ಸಿನ ನಿಗ್ರಹಕ್ಕೆ ಬೇಕಾದ ಯೋಗ ಶಿಕ್ಷಣ,ಯೋಗ್ಯ ಶಿಕ್ಷಣ,ಯೋಗ್ಯಗುರು,ಯೋಗ್ಯ ಪಠ್ಯಕ್ರಮ ಅಗತ್ಯವಿಲ್ಲವೆ? 
ಓದುಗರು ಇದರಲ್ಲಿರುವ ಸತ್ಯವನರಿತರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ದಲ್ಲಿ ನಾವೆಷ್ಟು ಸ್ವತಂತ್ರ ಚಿಂತನೆ ನಡೆಸುತ್ತಾ ದೇಶದೊಳಗಿರಲು ಸ್ವಾತಂತ್ರ್ಯ ಸಿಕ್ಕಿದೆ ಎನ್ನುವ ಪ್ರಶ್ನೆ ಹಾಕಿಕೊಂಡರೆ  ಬೆರಗಾಗಬಹುದು.ಗಾಭರಿಯಾಗಬಹುದು.
ಕಾರಣ ನಾವು ಹೊರಗಿನಿಂದ ಸ್ವಾತಂತ್ರ್ಯ ಪಡೆದರೂ ಒಳಗಿನ 
ಸ್ವಾತಂತ್ರ್ಯ ದಿಂದ ದೂರವಾಗಿದ್ದೇವೆ. ಇದಕ್ಕೆ ಅತಂತ್ರಸ್ಥಿತಿಗೆ ಜೀವನ ತಲುಪಿದೆ.  ದೇಶದಲ್ಲಿ  ವೃದ್ದಾಶ್ರಮ, ಅನಾಥಾಶ್ರಮ, ಅಬಲಾಶ್ರಮ,  ಬಿಕ್ಷುಕಾಶ್ರಮಗಳ ಸಂಖ್ಯೆ ಮಿತಿಮೀರಿದೆ ಎಂದರೆ  ಯಾರಿಗೆ ಸ್ವತಂತ್ರ ಸಿಕ್ಕಿದೆ? ಯೋಗಿಗಳ ದೇಶ ರೋಗಿಗಳ ದೇಶವಾಗುತ್ತಾ ಎಲ್ಲೆಂದರಲ್ಲಿ ಹೈಟೆಕ್  ಆಸ್ಪತ್ರೆಗಳು,  ಔಷಧ ಅಂಗಡಿಗಳಿವೆ  ಆದರೆ  ಆರೋಗ್ಯಕರ  ಸದ್ವಿಚಾರ ತಿಳಿಸುವವರಿಗೆ ಸಹಕಾರ ನೀಡದ  ಜನರು  ತಮ್ಮ  ಆರೋಗ್ಯವನ್ನೇ  ರಕ್ಷಣೆ ಮಾಡಿಕೊಳ್ಳಲಾಗದ  ಉಪದೇಶ,ಭಾಷಣಕಾರರು, ಇನ್ನಿತರ  ಮಧ್ಯವರ್ತಿಗಳು   ಆರೋಗ್ಯ ಹೆಚ್ಚಿಸುವ ಶಿಕ್ಷಣ ಕೊಡಲು ಸೋತರೆ ಮುಂದೆ ನಡೆದವರನ್ನಾಗಲಿ, ನಡೆಯುವವರನ್ನಾಗಲಿ ಅರ್ಥ ಮಾಡಿಕೊಳ್ಳರು.  ಆರೋಗ್ಯವಿದ್ದರೆ  ಸಾಧನೆ ಸಾಧ್ಯ.ಅದೂ ಅಧ್ಯಾತ್ಮಿಕ  ಸಾಧನೆಗೆ ಯೋಗ ಬೇಕಿದೆ. ಯೋಗದಿಂದ ಪರಮಾತ್ಮನ ಸಾಲ ತೀರಿಸಬಹುದು. ಈಗ ಭೋಗದ ಭೌತಿಕ ವಿಜ್ಞಾನಕ್ಕೆ ಸಾಲ ಬೆಳೆದಿದೆ ಎಂದರೆ ಸಾಲ ತೀರಿಸಲು ಸರ್ಕಾರದಿಂದ ಕಷ್ಟವಿದೆ.ಇದಕ್ಕೆ ಪ್ರಜೆಗಳ ಸರಳ ಜೀವನದ ಅಗತ್ಯವಿದೆ. ಇಂದಿನ ಶ್ರೀಮಂತ ಮುಂದಿನ‌ ಬಡವ.
ಇಂದಿನ‌ ಬಡವ ಮುಂದಿನ ಶ್ರೀಮಂತ. ಶ್ರೀಮಂತ ರಿಗೆ ಹಣದ ಕೊರತೆಯಿರದೆ ಜ್ಞಾನದ ಕೊರತೆಯಿದ್ದರೆ ಬಡವನಿಗೆ ಹಣದ ಕೊರತೆ ಇದ್ದು ಜ್ಞಾನವಿರುತ್ತದೆ.ಪೂರಕವಾದ ಶಿಕ್ಷಣ ನೀಡದೆ ಆಳಿದರೆ ತಪ್ಪು ಯಾರದ್ದು? ಹಿಂದೂ ಧರ್ಮ ದವರು ಇದನ್ನು ಕರ್ಮ ಫಲ ಎಂದರೂ‌ ಭೌತಿಕ ಜಗತ್ತು ಒಪ್ಪಲಾಗದು.
ಸಮಾನತೆಗೆ ಬೇಕು ಜ್ಞಾನದ ಶಿಕ್ಷಣ.  ಎಲ್ಲರಲ್ಲಿಯೂ ಅಡಗಿರುವ ಚೇತನಾಶಕ್ತಿಗೆ ಸರಿಯಾದ   ಜ್ಞಾನದ ಶಿಕ್ಷಣ ಸಿಗುವುದಕ್ಕೂ  ಪ್ರಾರಬ್ದ ಕರ್ಮ ಬಿಡದು. ಎಂದರೆ  ಋಣ ಮತ್ತು ಕರ್ಮ ವೇ  ಮಾನವನ ಸ್ವಾತಂತ್ರ್ಯ ವನ್ನು  ಕಸಿದುಕೊಂಡು ಆಳುತ್ತಿದೆ. ಸತ್ಕರ್ಮದಿಂದ ಋಣಮುಕ್ತರಾಗೋದು ಜೀವನ.ದುಷ್ಕರ್ಮದಿಂದ ಋಣಭಾರ ಹೊತ್ತು ಜೀವ ಹೋಗುತ್ತದೆನ್ನುವರು ಮಹಾತ್ಮರು. ಸಾಲ ತೀರಿಸಲು ಬಂದ ಜೀವಕ್ಕೆ ಇನ್ನಷ್ಟು ಸಾಲದ ಹೊರೆ ಹಾಕಿ ಬೆಳೆಸಿದರೆ  ಇದಕ್ಕೆ ಕಾರಣ ಅಜ್ಞಾನ.
ಮಹಿಳೆ ಮಕ್ಕಳ ಜ್ಞಾನ ಶಕ್ತಿಯನ್ನು ಮನೆಯೊಳಗಿದ್ದೇ ಬೆಳೆಸುವ ಗುರು ಹಿರಿಯರ ಕೊರತೆ ಭಾರತೀಯರ ಈ ಸ್ಥಿತಿಗೆ ಕಾರಣ.ಸತ್ಯವನ್ನು ನುಡಿದು ಧರ್ಮದಲ್ಲಿ ನಡೆದರೆ ಜ್ಞಾನಪ್ರಾಪ್ತಿಯಾಗುತ್ತದೆ.ಜ್ಞಾನದ ನಂತರವೇ ಸ್ವಾತಂತ್ರ್ಯ ಜೀವಕ್ಕೆ ಸಿಗೋದು. ಈಗಿನ ಸ್ವಾತಂತ್ರ್ಯ ತಾತ್ಕಾಲಿಕ ವಷ್ಟೆ.

ಉತ್ಸವಗಳಿರಲಿ‌  ಆದರೆ ಜ್ಞಾನದಿಂದ ನಡೆಯಲಿ. ಅತಿಯಾದ ಊಟ,ಉಪಚಾರ, ಉಡುಗೊರೆಗಳು  ಸಾಲವಾಗಿರುತ್ತದೆ.

No comments:

Post a Comment