ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 21, 2024

ದಕ್ಷಿಣದಿಂದ ಉತ್ತರಕ್ಕೆ ದೇವತೆಗಳ ಪಯಣ ಶುಭಸೂಚನೆ

ದಕ್ಷಿಣದಿಂದ ಉತ್ತರ ದಿಕ್ಕಿಗೆ ದೇವತೆಗಳು ಏರುತ್ತಿರೋದು ಶುಭ ಸೂಚನೆಯಾಗಿದೆ. ಉತ್ತರ ಶಿವನ ದಿಕ್ಕು ದಕ್ಷಿಣ ಯಮನ ದಿಕ್ಕು.ಬಿಡುಗಡೆ ಅಥವಾ ಮುಕ್ತಿ  ಪಡೆಯಲು ಉತ್ತರ ಅಗತ್ಯವಿದೆ.ಯಾವುದಕ್ಕೆ ಉತ್ತರ ಕಂಡುಕೊಂಡರೆ ಮುಕ್ತಿ ಸಿಗುವುದೆನ್ನುವ ಬಗ್ಗೆ ಅರಿವಿದ್ದಾಗಲೇ ಎಲ್ಲಾ ಪ್ರಶ್ನೆ ಗೆ ಉತ್ತರವಿದೆ.
 
ಹೇಗೆ ಎಲ್ಲಾ ಸಮಸ್ಯೆಗೆ ಪರಿಹಾರ ಮಾರ್ಗ ವಿರುವುದೋ ಹಾಗೆ ಪ್ರಶ್ನೆಗೆ ಉತ್ತರವೂ ಇದೆ.ಆದರೆ ಇದನ್ನು ಒಳಗಿನಿಂದ ಹುಡುಕಿಕೊಂಡರೆ ಅಧ್ಯಾತ್ಮ ವಾಗುತ್ತದೆ ಭೌತಿಕದಲ್ಲಿ ಹುಡುಕಿದರೆ ವಿಜ್ಞಾನ ವಾಗುತ್ತದೆ. 
ಅರಿವೇ ಗುರು ಅರಿವೇ ದೇವರು ಎಂದರು .
ಜ್ಞಾನಸರಸ್ವತಿಯೂ ದಕ್ಷಿಣಕ್ಕೆ ಇಳಿದಿದ್ದಳು ಈಗ ಮತ್ತೆ ಮೇಲೇರಿದ‌ ಮೇಲೇ ಶ್ರೀ ರಾಮಚಂದ್ರನಂತಹ ಪುರುಷೋತ್ತಮನನ್ನು ಅಯೋಧ್ಯಾ ದಲ್ಲಿ ಪ್ರತಿಷ್ಟಾಪನೆ   ಮಾಡುವ  ಸುಯೋಗ ಬಂದಿದೆ. ಭಾರತೀಯರಿಗಷ್ಟೆ ಅಲ್ಲದೆ ಮನುಕುಲಕ್ಕೆ ಒಂದು ದಾರಿದೀಪವಾಗುವ ಶ್ರೀ ರಾಮನ ತತ್ವ ಆ ತಾಯಿ ಸರಸ್ವತಿಯ ಜ್ಞಾನದಿಂದ ಅರ್ಥ ವಾದಾಗಲೇ ಯೋಗಿಗಳ ದೇಶವಾಗೋದು. ಯೋಗಿಗಳಿಂದಲೇ  ಜ್ಞಾನದ ರಕ್ಷಣೆ ಸಾಧ್ಯ.ಜ್ಞಾನದಿಂದ ವಿಜ್ಞಾನ ಬೆಳೆದಾಗಲೇ  ಆತ್ಮಜ್ಞಾನ.
ಅಧ್ಯಾತ್ಮದ  ವಿಜ್ಞಾನ ಭೌತವಿಜ್ಞಾನ ದ ನಡುವಿರುವ ಸಾಮಾನ್ಯ ಜ್ಞಾನಕ್ಕೆ ಸರಿಯಾದ ಶಿಕ್ಷಣ  ನೀಡುವುದೇ ಧರ್ಮ.
ಅದಕ್ಕೆ ವಿರುದ್ದವಿದ್ದರೆ ಅಧರ್ಮ. ಒಟ್ಟಿನಲ್ಲಿ ಧರ್ಮಾತ್ಮ ಶ್ರೀ ರಾಮನಿಂದ  ದೇಶದ ಎಲ್ಲಾ ರಾಜ್ಯಗಳಲ್ಲಿ ಧರ್ಮ ನೆಲೆಸಲು ಪ್ರಜೆಗಳಲ್ಲಿ ಮುಖ್ಯವಾಗಿ ಸಾಮಾನ್ಯ ಜ್ಞಾನ ಅಗತ್ಯವಿದೆ.
ಶ್ರೀ ರಾಮ ಸಾಮಾನ್ಯರಲ್ಲಿ ಸಾಮಾನ್ಯನಂತೆ ಇರಲು ಅಂದಿನ ತ್ರೇತಾಯುಗದಲ್ಲಿ ಸಾಧ್ಯವಾಗಿತ್ತು.ಆದರೆ ಈಗ ಹಾಗೆ ಇದ್ದರೆ ಕೆಳಗೆಳೆದು ಹಾಕುವವರೆ ಹೆಚ್ಚಾಗಿರುವಾಗ ಶ್ರೀ ರಾಮನ ತತ್ವಕ್ಕೆ ಬೆಲೆಯಿರುವುದೆ?
ಬೆಲೆ ತತ್ವಕ್ಕೆ ಸಿಕ್ಕಾಗಲೇ ರಾಮರಾಜ್ಯದ ಕನಸು ನನಸಾಗಲು ಸಾಧ್ಯ.ಪ್ರತಿಯೊಂದು ತಂತ್ರದಿಂದ  ಹೆಣೆಯಲಾಗದು.ಇದು ಒಮ್ಮೆ ಬಿಟ್ಟು ಹೋದಾಗ ಅತಂತ್ರಸ್ಥಿತಿಗೆ ಜೀವನ ತಲುಪುತ್ತದೆ.ಹಾಗಾಗಿ ಸ್ವತಂತ್ರ ಭಾರತವನ್ನು ಸ್ವತಂತ್ರ ಜ್ಞಾನದಿಂದ ಕಟ್ಟಿ ಬೆಳೆಸುವ ಶಿಕ್ಷಣವಿದ್ದರೆ  ಎಲ್ಲರಲ್ಲಿಯೂ ಅಡಗಿರುವ ಶ್ರೀ ರಾಮನ ಭಕ್ತಿಯ ಜೊತೆಗೆ ದೇಶಭಕ್ತಿಯೂ ಹೆಚ್ಚಾಗುವುದು. ಇಷ್ಟು ಸುಲಭವಾಗಿ  ಬದಲಾವಣೆ ಆಗದ ಕಾರಣ  ದೇವತೆಗಳಿಗೂ  ಮಾನವರನ್ನು ಸರಿಪಡಿಸಲು ಕಷ್ಟ.
ಕಾರಣ ದೇವತೆಗಳೇ ತಿಳಿಯದೆಯೇ ರಾಜಕೀಯ ದಾಳವಾಗಿ
ಓಡಾಡುತ್ತಿರುವಾಗ ಶ್ರೀ ರಾಮ  ರಾಜಯೋಗಿಯಾಗಿದ್ದು ಧರ್ಮ ಪರಿಪಾಲನೆ ಮಾಡಿರೋದನ್ನು  ತಿಳಿಯಬೇಕಷ್ಟೆ.
ಒಟ್ಟಿನಲ್ಲಿ ಎಲ್ಲಾ ಒಳ್ಳೆಯದೇ ಆಗುತ್ತದೆ. ಇಂದಲ್ಲ ನಾಳೆ ಹಿಂದೆ ತಿರುಗಿ ಬರಲೇಬೇಕು. ಹಿಂದೂ ಧರ್ಮ ದ ಆಳ ಅಗಲ ಕಣ್ಣಿಗೆ ಕಾಣದಿದ್ದರೂ  ಭೂಮಿ ನಡೆದಿರೋದೇ ಸನಾತನ ಹಿಂದೂ ಧರ್ಮ ದ ತತ್ವ ಸತ್ವ ಸತ್ಯದಿಂದ ಎನ್ನುವುದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಲು ರಾಜಕೀಯದ ಅಗತ್ಯಕ್ಕಿಂತ ರಾಜಯೋಗದ ಅಗತ್ಯವಿದೆ. ಹೊರಗೆಳೆದು ಆಳೋದೇ ಬೇರೆ ಒಳಹೊಕ್ಕಿ ನೋಡೋದೇ ಬೇರೆ. ಈ ಬೇರೆ ಬೇರೆಯನ್ನು ಇನ್ನಷ್ಟು ಬೇರೆ ಮಾಡೋದೇ ರಾಜಕೀಯ.
ಒಂದು ಮಾಡೋದು ತತ್ವ‌ಬೇರೆ ಮಾಡೋದು ತಂತ್ರ.
ಶ್ರೀ ರಾಮನು ಪ್ರಜಾರಕ್ಷಕನಾಗಿದ್ದು ತನ್ನ ಪತ್ನಿಯನ್ನೇ ತೊರೆದು‌  ರಾಜನಾಗಿರಬೇಕಾದರೂ  ಧಾರ್ಮಿಕ ಕಾರ್ಯಕ್ಕೆ ಪತ್ನಿಯ ಮೂರ್ತಿಯನ್ನು ಪಕ್ಕಕ್ಕೆ ಇಟ್ಟುಕೊಂಡು ಮಾಡುವ ಪರಿಸ್ಥಿತಿ ಬಂದಿತು.ಅಂದರೆ ಭೂಮಿಯಲ್ಲಿರುವಾಗ ಭೂ ತಾಯಿಯಾಗಲಿ ಭೂಮಿ ಪುತ್ರಿಯರಾಗಲಿ ಪುರುಷನಿಗೆ ಧರ್ಮ ರಕ್ಷಣಾಕಾರ್ಯಕ್ಕೆ ಸಹಕರಿಸಿದಾಗಲೇ  ಭೂಮಿಯ ಋಣ ತೀರಿಸಲು ಪುರುಷನಿಗೆ ಸಾಧ್ಯ. ಜ್ಞಾನದೇವತೆಯೇ  ಮುಕ್ತಿ ಮೋಕ್ಷದ  ದಾರಿ  ತೋರಿಸೋದಲ್ಲವೆ? ಇಂದಿನ‌ಮಕ್ಕಳಿಗೆ ಕೊಡುತ್ತಿರುವ  ಭಾರತೀಯ ಶಿಕ್ಷಣದಲ್ಲಿ  ಸತ್ಯಜ್ಞಾನವಿದೆಯೆ? ಪೋಷಕರಾದವರು  ತಿಳಿದು ಸಹಕರಿಸಿದರೆ  ಮುಂದಿನ ಪೀಳಿಗೆಯಾದರೂ ರಾಮರಾಜ್ಯ ನೋಡಬಹುದು. ಇಲ್ಲವಾದರೆ ರಾಮನ ಹೆಸರಿನಲ್ಲಿ ರಾವಣರ ಸಾಮ್ರಾಜ್ಯ. ರಾವಣನಾದರೂ ಶಿವಭಕ್ತನಾಗಿದ್ದ. ಇಂದಿನ ಅಸುರರು ಶವಭಕ್ತರಾಗಿದ್ದಾರೆಂದರೆ  ಶವವನ್ನು ಬಿಡದೆ  ವ್ಯವಹಾರಕ್ಕೆ ಇಳಿದಿರೋದೆಂದರ್ಥ.

Thursday, January 18, 2024

ರಾಮನಭಕ್ತಿ ರಾವಣನ ಶಕ್ತಿ

ರಾವಣ ಶಿವನ ಆತ್ಮಲಿಂಗವನ್ನೇ ತಪ್ಪಸ್ಸಿನಿಂದ ಪಡೆದು ಭೂಮಿಯಲ್ಲಿಡುವಂತಾಯಿತು ರಾಮ ಶಿವಲಿಂಗವನ್ನು ತಯಾರಿಸಿಕೊಂಡು ಪೂಜಿಸಿದ್ದಕ್ಕೆ ರಾಮೇಶ್ವರ ಪ್ರಸಿದ್ದವಾಯಿತು.ಇದರಲ್ಲಿ ರಾವಣನ  ತಪಶಕ್ತಿಗಿಂತ ರಾಮನ ಭಕ್ತಿಯೇ ದೊಡ್ಡದಾಗಿರುವುದನ್ನು ಕಾಣಬಹುದು.ಅಂದರೆ ಭೂಮಿಯಲ್ಲಿ ಶಕ್ತಿಗಿಂತ ಭಕ್ತಿಯೇ ಹೆಚ್ಚಾಗಿದ್ದರೆ  ಧರ್ಮ ರಕ್ಷಣೆ ಸಾಧ್ಯವೆನ್ನಬಹುದಷ್ಟೆ. ಶಕ್ತಿಪ್ರದರ್ಶನ ರಾಜಕೀಯ ಭಕ್ತಿಯದರ್ಶನ ರಾಜಯೋಗ. ಹಾಗಾಗಿ ರಾಮರಾವಣರು ಆದರ್ಶ ಪುರುಷರಾದರೂ ಆದರಿಸುವುದು ಆರಾಧಿಸುವುದು ಶ್ರೀ ರಾಮನನ್ನೇ  ಆದರೂ ಜನರು  ರಾವಣನ ಶಕ್ತಿ ಪ್ರದರ್ಶನ ಕ್ಕೆ ಹೆಚ್ಚಾಗಿ ಗೌರವ ಸಹಕಾರ ಸಹಾಯ ಕೊಡುತ್ತಿರುವುದರಿಂದ ರಾಮನ ಹೆಸರಿನಲ್ಲಿ ರಾವಣರೂ ಸೇರಿಕೊಂಡು  ದೇಶವನ್ನು ಆಳಲು ಹೊರಟರೆ ರಾಮರಾಜ್ಯ ಆಗೋದಿಲ್ಲವಲ್ಲ.
ಒಳಗೊಂದು ಹೊರಗೊಂದು ನಾಟಕವಾಡಿದರೆ  ಪರಮಾತ್ಮ ಒಲಿಯೋದಿಲ್ಲವೆನ್ನುವುದೇ  ಅಧ್ಯಾತ್ಮ. ಒಟ್ಟಿನಲ್ಲಿ ನಮ್ಮ ಸಹಕಾರ ಯಾರಿಗೆ ಕೊಡಬೇಕು ಯಾಕೆ ಎಷ್ಟು ಯಾವಾಗ ಕೊಡಬೇಕೆಂಬ ಜ್ಞಾನವಿದ್ದರೆ  ಪರಮಾತ್ಮನ  ಕಾಣುವ ಯೋಗವೂ ಬರುತ್ತದೆ. ನಿಧಾನವೇ ಪ್ರಧಾನ ಎಂದರು ಹಾಗಾಗಿ  ರಾವಣನ ಅವಸರಕ್ಕೆ  ಆತ್ಮಲಿಂಗ ಸಿಗಲಿಲ್ಲ ಶ್ರೀ ರಾಮನ ತಾಳ್ಮೆಗೆ ಶಿವ ಒಲಿದ.ಹರಿಹರರಲ್ಲಿ‌ ಬೇಧವಿರದು ಎನ್ನುವ ವರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಭೇಧ ಹೆಚ್ಚಾಗಿರುವಾಗ ಶ್ರೀ ರಾಮ ಬೇರೆ ಶ್ರೀ ಕೃಷ್ಣ ಬೇರೆ ಎನ್ನುವತನಕ ಬಂದು  ಶ್ರೀ ರಾಮನೊಳಗೇ ಹರಿಹರರಿರುವ‌ ಸತ್ಯ ಒಪ್ಪದಿದ್ದರೆ  ದೇಶದೊಳಗೆ ನಾನಿರೋದೆನ್ನುವ ಸಾಮಾನ್ಯ ಜ್ಞಾನವಿದ್ದರೆ ಉತ್ತಮ ಪ್ರಗತಿಯಾಗುತ್ತದೆ. ಇಲ್ಲಿ ಹಿಂದೆ ನಡೆದದ್ದರಲ್ಲಿ ಲೋಪದೋಷಗಳನ್ನು ಹುಡುಕಿದರೆ ಬುದ್ದಿವಂತರಾಗಬಹುದು.ಜನರೂ ಅವರಿಗೆ ಸನ್ಮಾನ ಮಾಡಬಹುದು ಹಣ ಅಧಿಕಾರವೂ ಸಿಗಬಹುದು.ಆದರೆ ಆ ಲೋಪದೋಷದಿಂದ ಏನಾದರೂ ಧರ್ಮ ಸ್ಥಾಪನೆ ಸತ್ಯರಕ್ಷಣೆ ಆಗಿರುವುದೆ? ಆಗಿದ್ದರೆ ಸರಿ ಇಲ್ಲವಾಗಿದ್ದರೆ ಈ ಪಾಪದ ಫಲ ಅನುಭವಿಸಲೇಬೇಕೆನ್ನುವುದು ಅಧ್ಯಾತ್ಮ ಸತ್ಯ.
ಏನೇ ಆದರೂ ದೇವಾನುದೇವತೆಗಳು ತಮ್ಮ ತಮ್ಮ ಕೆಲಸ ನಿರಂತರವಾಗಿ ನಡೆಸಿರುವರು. ಆದರೆ ಮಾನವರು ಮಧ್ಯೆ ನಿಂತು  ತಾನೇ ದೇವರೆನ್ನುವ ವೇಷಧರಿಸಿ ನಾಟಕ ಮಾಡಿ ಜನರನ್ನು ದಾರಿತಪ್ಪಿಸಿ ದರೆ  ರಾಮ ಕಾಣದೆ ರಾವಣರೆ ಬೆಳೆಯಬಹುದು.
ಇಲ್ಲಿ ತ್ರೇತಾಯುಗದ ರಾವಣನ ಹಿಂದಿನ  ಕಥೆ ಎಲ್ಲರಿಗೂ ತಿಳಿದ ವಿಷಯವೇ  ಜಯವಿಜಯರ ಅಹಂಕಾರದ  ಪ್ರತಿಫಲವಾಗಿ ಅಸುರ ಜನ್ಮವೇ ರಾವಣನ ಅವತಾರ.ಅವರ ಸಂಹಾರಕ್ಕೆ ಶ್ರೀ ರಾಮನ ಅವತಾರ. ಶ್ರೀ ವಿಷ್ಣುವಿನ ಒಂದು ಮಹಾಅವತಾರವೇ ರಾಮಾವತಾರ. ಹೀಗೇ ಯುಗಯುಗವೂ ನಡೆದು ಬಂದಿದೆ. ಎಲ್ಲಾ ವಿಷಯ ಅರ್ಥ ಆದರೂ  ಮಾನವನಿಗೆ ತನ್ನೊಳಗೆ ಅಡಗಿರುವ ದೇವಾಸುರರ  ಗುಣಲಕ್ಷಣಗಳನ್ನು  ಕಾಣಲಾಗದು.ಇದು ಬೇರೆಯವರಿಗೆ ಕಂಡಾಗ ಹೇಳುವರಷ್ಟೆ.ಒಳ್ಳೆಯದಿದ್ದರೆ  ಹೇಳುವವರು ಕಡಿಮೆ.ಕೆಟ್ಟದ್ದನ್ನು ಹೆಚ್ಚಾಗಿ ಹೇಳಿಹರಡುವರು. ಯಾವುದನ್ನು ಹರಡುವೆವೋ ಅದೇ ಬೆಳೆಯುವುದು. ನಮಗೆ  ಕಣ್ಣಿಗೆ ಕಾಣೋದು ಅರ್ಧ ಸತ್ಯವಷ್ಟೆ.ಪೂರ್ಣ ಸತ್ಯ ತಿಳಿಯದೆ ಹರಡಿದರೆ  ಅಸತ್ಯವೇ ಬೆಳೆಯೋದು.
ಶ್ರೀ ರಾಮ ರಾಜ್ಯ ಮಾಡಲು ಹೊರಟಿರುವ ನಮಗೆ ತಾಳ್ಮೆ,ಸಹನೆ  ನಿಸ್ವಾರ್ಥ ನಿರಹಂಕಾರವಿದೆಯೆ? ಶ್ರೀ ರಾಮ ಮಹಾದೇವನಾಗಿ ಜಗತ್ತಿನೆಲ್ಲೆಡೆ ಪೂಜನೀಯನಾಗಿದ್ದರೂ ಯಾಕೆ ನಮ್ಮಲ್ಲಿ  ಶಾಂತಿ‌ಯ ಕೊರತೆಯಿದೆ? ಎಂದಾಗ  ದೈವ ಗುಣ ಸಂಪತ್ತಿನ ಕೊರತೆ ಒಳಗಿದ್ದು ಅದನ್ನು ಹಣದಿಂದ ಅಧಿಕಾರದಿಂದ ಪಡೆಯಬಹುದೆನ್ನುವ ಅಜ್ಞಾನ ಮನೆ ಮಾಡಿದೆ. ಶ್ರೀ ರಾಮನ ಪಿತೃಭಕ್ತಿ, ಪ್ರಜಾಪರಿಪಾಲನೆ,ಧರ್ಮನಿಷ್ಠೆ  ಶಾಂತ ಸ್ವಭಾವ  ಇಂದಿನ ರಾಜಕಾರಣಿಗಳಲ್ಲಿ  ಕಾಣಲಾಗದು.ಇದಕ್ಕೆ ಕಾರಣ ಪ್ರಜೆಗಳ ಅಜ್ಞಾನದ ಬೇಡಿಕೆಗಳಾಗಿದೆ.ಎಷ್ಟು ಕೊಟ್ಟರೂ ಸಾಲದು ಎನ್ನುವ  ಹಂತಕ್ಕೆ  ಬಂದಿರುವವರ ಸಾಲ ಮಿತಿಮೀರಿದೆ. ಅದನ್ನು ತೀರಿಸಲು ಯೋಗಮಾರ್ಗ ಹಿಡಿಯಬೇಕಿತ್ತು .ಈಗಲೂ ಭೋಗದೆಡೆಗೆ ಹೊರಟು ಉಚಿತವಾಗಿ ಪಡೆದು ತಿಂದು  ತೇಗಿದರೆ‌ಹೊಟ್ಟೆಗೆ ಹೋದಮೇಲೆ ಮುಗಿಯಿತು ಕಥೆ.ಸಾಲ ಮೈತುಂಬಿರುವಾಗ ಎಲ್ಲಿಯ ಶಾಂತಿ?
ಅಧ್ಯಾತ್ಮ ವಿಚಾರಗಳಲ್ಲಿಯೂ ಸಾಕಷ್ಟು ತಿರುಚಲಾಗಿದೆ.
ಅದ್ವೈತ ದೊಳಗೇ ದ್ವೈತ ವಿದ್ದರೂ ಬೇರೆ ಬೇರೆ.ಭಾರತದೊಳಗೇ ಪ್ರಜೆಗಳಿದ್ದರೂ ಬೇರೆ ಬೇರೆ ಎನ್ನುತ್ತಾ ಜೊತೆಗೆ ವಿದೇಶ ವ್ಯಾಮೋಹವನ್ನೂ ಸೇರಿಸಿಕೊಂಡು  ಧರ್ಮ ಬಿಟ್ಟು ನಡೆದರೆ  ಅಧ್ಯಾತ್ಮ ಪ್ರಗತಿ ಕಷ್ಟವಿದೆ.ಇನ್ನು ದೇವರನ್ನು ಒಳಗೇ ಸೇರಿಕೊಳ್ಳಲು ಆಂತರಿಕ ಜ್ಞಾನ ಬೆಳೆಸಬೇಕಿತ್ತು.ಭೌತವಿಜ್ಞಾನ ಮಿತಿಮೀರಿ ಭೂ ಗರ್ಭ ದೊಳಗಿನ ಸಂಪತ್ತನ್ನು ಅಗೆದು ಹೊರಹಾಕಿದರೆ ಸ್ವಚ್ಚವಾಗುವುದೆ? ಆತ್ಮಶುದ್ದತೆಗೆ  ಇವೆಲ್ಲವೂ ಅಡಚಣೆ ಆಗಿರುವಾಗ ಇದನ್ನು  ತಡೆಯುವವರಿಲ್ಲದೆ ಅಸುರರೆ ಹೊರಗೆ ಹೋರಾಟ ಹಾರಾಟ ಮಾರಾಟದಲ್ಲಿದ್ದರೆ  ಅದನ್ನು ಸಾಧನೆ ಎಂದು ಸನ್ಮಾನ ಮಾಡುವವರು‌ ಹೆಚ್ಚು. ಸಾಧನೆ ಒಳಗಿನ  ಶಕ್ತಿಯಿಂದ  ಮಾಡುವುದೇ ಬೇರೆ.ಹೊರಗಿನ ಶಕ್ತಿಯಿಂದ ತಿಳಿದು ನಡೆಯುವುದೇ ಬೇರೆ. ಇದರಿಂದಾಗಿ ಧರ್ಮ ಸತ್ಯ ರಕ್ಷಣೆ ಆದರೆ ನಿಜವಾದ ಧರ್ಮ ಕಾರ್ಯ ಎನ್ನುವ ಹಿಂದೂ ಸನಾತನ ಧರ್ಮ  ಅರ್ಥ ವಾದಂತೆಯೇ.
ಇದನ್ನು  ರಾಜಕೀಯದಿಂದ ತಿಳಿಯೋ ಬದಲು ರಾಜಯೋಗದೆಡೆಗೆ ನಡೆದಾಗಲೇ  ಅರ್ಥ ವಾಗೋದೆಂದು ನಡೆದು ತೋರಿಸಿದ್ದಾರೆ ಮಹಾತ್ಮರುಗಳು. ಯೋಗದಿಂದ ರಾಜಕೀಯ ನಡೆಸೋದಕ್ಕೂ ಭೋಗಕ್ಕಾಗಿ ರಾಜಕೀಯ ನಡೆಸೋದಕ್ಕೂ ವ್ಯತ್ಯಾಸವಿದೆ. ಭೌತವಿಜ್ಞಾನದ ಅರ್ಧ ಸತ್ಯಕ್ಕೂ ಅಧ್ಯಾತ್ಮ ವಿಜ್ಞಾನದ ಪೂರ್ಣ ಸತ್ಯಕ್ಕೆ ಅಂತರವಿದೆ.ಅಂತರವನ್ನು  ಸತ್ಯಜ್ಞಾನದಿಂದ ತುಂಬಿದರೆ ಆತ್ಮಕ್ಕೆ ತೃಪ್ತಿ ಮುಕ್ತಿ.ಮಿಥ್ಯಜ್ಞಾನದಿಂದ ಬೆಳೆಸಿದಷ್ಟೂ ಅತೃಪ್ತ ಆತ್ಮಗಳ ರಾಜಕೀಯವೇ ಗತಿ. ರಾಜಕೀಯ ಹೊರಗಿರುತ್ತದೆ.ರಾಜಯೋಗ ಒಳಗಿರುತ್ತದೆ. ಜ್ಞಾನವಿಜ್ಞಾನದ ಅಂತರದಲ್ಲಿ  ಮಾನವನಿರೋದು.ಯೋಗದಿಂದ ಅಧಿಕಾರ ಬಂದರೆ  ರಾಮರಾಜ್ಯ ..ಭೋಗಕ್ಕಾಗಿ ಅಧಿಕಾರ ಪಡೆದರೆ ಅಸುರರ ಸಾಮ್ರಾಜ್ಯವಾಗಬಹುದು. ಅಧಿಕಾರ ಯಾರಿಗೆ ಯಾಕೆ ಕೊಡಬೇಕೆಂಬ ಅರಿವು ಮಾನವನಿಗಿರಬೇಕಷ್ಟೆ.‌
ತಿನ್ನುವುದಕ್ಕಾಗಿ ಬದುಕುವುದಲ್ಲ ಬದುಕಲು ತಿನ್ನಬೇಕು.
ಜೀವನದಲ್ಲಿ ಜೀವಿಗಳವನವಿದೆ.ಆ ವನವು ಸತ್ವಪೂರ್ಣ ವಾಗಿದ್ದರೆ ಸುಖ ಸಂತೋಷ ಇದ್ದಲ್ಲಿ ಸಿಗುತ್ತದೆ.   ರಾಜಸಿಕವಾಗಿದ್ದರೆ ಹೋರಾಟವೇ ಜೀವನವಾಗುತ್ತದೆ.ತಾಮಸಿಕವಾಗಿದ್ದರಂತೂ ರೋಗವೇ ಜೀವನವಾಗಿರುತ್ತದೆ. ಇದನ್ನು ಪುರಾಣ ತಿಳಿಸೋದಿಲ್ಲ.ಕಾಲಮಾನಕ್ಕೆ ತಕ್ಕಂತೆ ವರ್ತ ಮಾನವೂ ಬದಲಾಗುತ್ತಲೇ ಇರುತ್ತದೆ.ಹೀಗಾಗಿ ವಾಸ್ತವತೆಯನ್ನು  ಸತ್ಯ ಸತ್ವ ತತ್ವದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯ ರಿಗೆ ಸಾಮಾನ್ಯ ಜ್ಞಾನವಿದ್ದರೆ ಸಾಕು. ತನ್ನ ತಾನು ಆಳಿಕೊಳ್ಳಲು ಸೋತವರು ಪರರ ವಶವಾಗಿರುವರು. ಪರರ ವಶದಲ್ಲಿ ಇದ್ದಾಗ  ನಮ್ಮವರನ್ನೇ  ಗುರುತಿಸಲಾರರು.ಹೀಗಾಗಿ ನಮಗೆ ನಾವೇ ಶತ್ರುಗಳಾದಾಗ ನಿಜವಾದ ಮಿತ್ರರನ್ನು ಗುರುತಿಸುವ ಜ್ಞಾನ ಕಳೆದುಕೊಂಡು ದೇವರನ್ನು ಬೇಡೋದು.ಒಳಗಿದ್ದ ದೈವತ್ವಕ್ಕೆ ಸರಿಯಾದ ಶಿಕ್ಷಣ,ಸಂಸ್ಕಾರ ಕೊಟ್ಟರೆ‌ ಯಾರು ‌ಮೇಲು ಯಾರು‌ಕೀಳು? ಎಲ್ಲಾ ಒಂದು ರೀತಿಯಲ್ಲಿ ದೈವಾಂಶ ಸಂಭೂತರೆ ಆಗಿದ್ದವರು. ಅಜ್ಞಾನ ಹೊರಗಿನಿಂದ ಆವರಿಸಿಕೊಂಡು ಒಳಗಿರುವ ದೈವೀಶಕ್ತಿ ಕುಸಿದಿದೆಯಷ್ಟೆ.

Sunday, January 14, 2024

ನಿಜವಾದ ಆಸ್ತಿ ಜ್ಞಾನ ಇದು ಸ್ತ್ರೀ ಗೆ ಹೆಚ್ಚಾಗಿರಬೇಕೋ ಪುರುಷರಿಗೂ?

ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು?
ಸ್ತ್ರೀ ಯೋ ಪುರುಷರೋ?
ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ
ಆಸ್ತಿಗಾಗಿ ಹೊಡೆದಾಟ,ಬಡಿದಾಟ,ಹೋರಾಟ,ಹಾರಾಟ
ಮಾರಾಟ  ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ
ಮುಳುಗಿಹೋಗುತ್ತಿದೆ. ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ  ಯಾರೂ  ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ
ಮುಂದೆ ಇರೋದಿಲ್ಲ.ಹೀಗಿರುವಾಗ ಈ ಜನ್ಮದ ಆಸ್ತಿ ಮುಂದಿನ ಜನ್ಮಕ್ಕೆ ಸಿಗುವುದೆ? 
ಆಸ್ತಿಯಲ್ಲಿಯೂ ಎರಡು ವಿಧವಿದೆ.ಒಂದು ಜ್ಞಾನ ಇನ್ನೊಂದು  ವಿಜ್ಞಾನ. ಸತ್ಯಜ್ಞಾನದಿಂದ  ಆಸ್ತಿ ಮಾಡಿದರೆ
ಶಾಂತಿ,ಮಿಥ್ಯಜ್ಞಾನದಿಂದ ಮಾಡಿದ ಆಸ್ತಿ  ಶಾಶ್ವತವಾದ
ಶಾಂತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿಯೇ ಹಿಂದಿನ
ಮಹಾತ್ಮರುಗಳು ಕೊನೆಗಾಲದಲ್ಲಿ ಭೂಮಿ ಮೇಲಿರುವ
ತಮ್ಮ ಹೆಸರಿನ ಆಸ್ತಿಯನ್ನು ದಾನ ಮಾಡಿ  ಮುಂದೆ ನಡೆದರು. ಅವರ ಚರಾಸ್ತಿ ಭೂಮಿ ಮೇಲಿದ್ದರೂ ಯಾರದ್ದೋ ಪಾಲಾಗಿದೆ. ಸ್ಥಿರಾಸ್ತಿ ಜ್ಞಾನ ಮಾತ್ರ ಅವರ ಹೆಸರಲ್ಲಿದೆ. ಇದನ್ನು ಸ್ತ್ರೀ ಪುರುಷರಿಬ್ಬರೂ ಅರ್ಥ ಮಾಡಿಕೊಂಡು ಯಾವ ಆಸ್ತಿಗಾಗಿ ನಾವು ಜೀವನ ನಡೆಸಿರುವೆವೋ ಅದರಿಂದಾಗಿ ನನ್ನ ನಂತರದ ದಿನದಲ್ಲಿ
ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವ ಜ್ಞಾನ ನಾವೇ
ಇದ್ದಾಗಲೇ ಪಡೆದಾಗಲೇ ಜೀವನಕ್ಕೆ ಅರ್ಥವಿರುತ್ತದೆ.
ನಾವೆಷ್ಟೇ ಬೌತಿಕದಲ್ಲಿ ಆಸ್ತಿ ಮಾಡಿದರೂ  ಮಿತಿಮೀರಿದರೆ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಅದನ್ನು ದಾನ ಮಾಡಲೇಬೇಕು. ಯಾರದ್ದೋ ಪಾಲನ್ನು
ಯಾರೋ  ಅನುಭವಿಸಿದರೂ ಅದರೊಡನೆ  ಕರ್ಮಫಲ
ಋಣವೂ ಸೇರಿರುವುದರಿಂದ ರೋಗ,ಕಷ್ಟ ನಷ್ಟಗಳು
ಹೆಚ್ಚುತ್ತದೆ. ನಿಜ, ಹಣವಿದ್ದವರಲ್ಲಿ,ಆಸ್ತಿಯಿದ್ದವರಲ್ಲಿ
ಸಮಾಜ  ಗೌರವದಿಂದ ನಡೆಸಿಕೊಳ್ಳುತ್ತದೆ.ಆದರೆ ಅವರ
ಹಿಂದಿನ  ಉದ್ದೇಶ ಸ್ವಾರ್ಥ ಪೂರ್ಣವಾಗಿರುತ್ತದೆ. ಜನರ
ಮನಸ್ಸನ್ನು ಗೆಲ್ಲುವುದಕ್ಕಾಗಿ ಆಸ್ತಿ ಮಾಡೋದರಿಂದ ನಮ್ಮ ಆತ್ಮಕ್ಕೆ ತೃಪ್ತಿ, ಶಾಂತಿ,ಮುಕ್ತಿ ಸಿಗುವುದಾಗಿದ್ದರೆ ಈಗಿನ ಭಾರತದ ಜನಸಂಖ್ಯೆ ಇಷ್ಟೊಂದು ಬೆಳೆಯುತ್ತಿರಲಿಲ್ಲ.ಇಷ್ಟು ಅಧರ್ಮ, ಅನ್ಯಾಯ, ಭ್ರಷ್ಟಚಾರ ಬೆಳೆಯುತ್ತಿರಲಿಲ್ಲ. ಭೂಮಿಯ ಮೇಲೆ ಜನ್ಮ
ಪಡೆದ ಜೀವಕ್ಕೆ ಜ್ಞಾನದ ಆಸ್ತಿ ಅತಿಮುಖ್ಯ. ಅದಿಲ್ಲದೆ
ಎಷ್ಟು ಆಸ್ತಿ ಅಂತಸ್ತು, ಅಧಿಕಾರ,ಹಣಗಳಿಸಿದರೂ ಅದನ್ನು ತಿರುಗಿಸುವವರೆಗೂ ಆತ್ಮಕ್ಕೆ ಮುಕ್ತಿ ಯಿಲ್ಲ.
ಭೂಮಿಯ ಋಣ ತೀರಿದಲಾಗದು.ತಾಯಿಯ ಋಣ ತೀರಿಸಲಾಗದು ಎಂದ ಮೇಲೆ ಸ್ತ್ರೀ ಯಾಗಲಿ ಪುರುಷರಾಗಲಿ  ಆಸ್ತಿಗಾಗಿ ಹೊಡೆದಾಡಿಕೊಂಡು ಜೀವನ ನಡೆಸೋದರಲ್ಲಿ ಅರ್ಥವಿಲ್ಲ. ಕೆಲವು ಸತ್ಯಗಳುಎಲ್ಲರಿಗೂ ತಿಳಿಯುತ್ತದೆ.
ಆದರೆ ಸಮಾಜದ ದೃಷ್ಟಿಯಿಂದ ನೋಡಿದಾಗ   ಇದಿಲ್ಲದೆ 
ಸಮಾಜದಲ್ಲಿ ಜೀವನ ನಡೆಸೋದೆ ಕಷ್ಟವಾಗುತ್ತದೆ. ಕಷ್ಟಪಡದೆ ಸುಖ ವಿಲ್ಲ ಎನ್ನುವುದು ಸತ್ಯ.ಆದರೂ ಇಂದು ಹೆಚ್ಚು ಜನರು ಅಡ್ಡ ದಾರಿಯಲ್ಲಿ  ನಡೆದು  ಬೌತಿಕದಲ್ಲಿ 
ಸುಖ ಜೀವನದಲ್ಲಿ ನಡೆಸುವಾಗ ನೇರವಾಗಿನಡೆಯುವವ
ರನ್ನು ಸಮಾಜವೆ ತಡೆಯುತ್ತದೆ.
ಹೀಗಾಗಿ ಸಮಸ್ಯೆ ಗಳು  ಹೆಚ್ಚಾಗಿರೋದು.
ಮಧ್ಯವರ್ತಿಗಳು  ತಮ್ಮ ತಮ್ಮ ಆಸ್ತಿ,ಅಂತಸ್ತು, ಹೆಸರು
ಅಧಿಕಾರಕ್ಕಾಗಿ  ಮೇಲಿನವರ ಆಸ್ತಿಯನ್ನು ಕೆಳಗಿನವರಿಗೆ
ತಲುಪಿಸೋ ಕೆಲಸದಲ್ಲಿ ಮಧ್ಯೆ  ಹಾದುಹೋಗುವ ಇದನ್ನು ತಾವು ಬೇಕಾದಷ್ಟು ಬಳಸಿಕೊಂಡು ಅಳಿದುಳಿದ
ಚೂರುಪಾರನ್ನು ಬಡವರಿಗೆ  ನೀಡುತ್ತಾ  ಬಡವರ ಜ್ಞಾನ
ಕುಸಿದಿದೆ. ಬಡತನವಿರೋದು  ಜ್ಞಾನದಲ್ಲಿ. ಹಿಂದಿನ ಮಹಾತ್ಮರನ್ನು ಪೂಜಿಸುವವರಿಗೆ ಅವರ ಜ್ಞಾನದಿಂದ
ಹಣ,ಹೆಸರು,ಅಧಿಕಾರ,ಸ್ಥಾನಮಾನಗಳು ಸುಲಭವಾಗಿ
ಸಿಗುತ್ತಿದೆ ಎಂದರೆ ಜ್ಞಾನ ಪಡೆಯಲು ಅವರು ಕಷ್ಟಪಟ್ಟು
ದುಡಿದು ಸಂಪಾಧಿಸಿ ನಂತರ ಎಲ್ಲಾ ಸಮಾಜಕ್ಕೆ ದಾನ
ಮಾಡಿ ಅಮರರಾದರು. ಯಾರ ಹಣಕ್ಕಾಗಲಿ,ಅಧಿಕಾರ
ಕ್ಕಾಗಲಿ  ಆಸೆ ಪಡದೆ ಜೀವನ ನಡೆಸಿದ ಅವರ  ಜ್ಞಾನ 
ಇಂದಿಗೂ ಭೂಮಿಯಲ್ಲಿದೆ. ಈ ಸತ್ಯ ಸಾಮಾನ್ಯಜ್ಞಾನ
ದಿಂದ ಅರ್ಥ ಮಾಡಿಕೊಂಡರೆ ಈಗಿನ ಯುವಕಯುವತಿ
ಯರಲ್ಲಿಯೂ  ಆಂತರಿಕ ಜ್ಞಾನ ಇದೆ .
ಆದರೆ ಅವರಿಗೆ ಯಾವ ಮಾರ್ಗದಲ್ಲಿ ನಡೆದರೆ ಅದರ ಸದ್ಬಳಕೆ ಆಗುವುದೆನ್ನುವುದನ್ನು ತಿಳಿಸಿಹೇಳುವ
ಗುರುವಿಲ್ಲದೆ  ಬೌತಿಕಾಸಕ್ತಿ ಹೆಚ್ಚಿಸಿಕೊಂಡು ರಾಜಕೀಯದ ಕಡೆ ಮುಖಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.
ಇದರಿಂದಾಗಿ  ಜೀವನ ನಡೆಯುವುದೆ?  ನಡೆದರೂ ಶಾಂತಿಯಿರುವುದೆ? ಹಣದ ಅಗತ್ಯವಿದೆ.ಆದರೆ ಅದನ್ನು ಸಂಪಾಧಿಸುತ್ತಾ ಜೀವನ ಸತ್ಯ ತಿಳಿಯದೆ  ಹೆಣವಾದರೆ  ಹಣವನ್ನು  ಇನ್ನಾರೋ ಬಳಸುತ್ತಾರೆ. 
ಬಳಸುವವರಲ್ಲಿಯೂ ಜ್ಞಾನವಿಲ್ಲವಾದರೆ
ಆತ್ಮಕ್ಕೆ ಮುಕ್ತಿ ಸಿಗದೆ  ಜನನ‌ ಮರಣದ  ಮಧ್ಯೆ ಸಿಲುಕಿ
ಅದೇ  ಹಿಂದಿನ ಜೀವನ. ಇದೊಂದು ಅಜ್ಞಾನದ  ಅತಿರೇಖವಷ್ಟೆ. ಹಿಂದೆ  ದೊಡ್ಡ ಸಂಸಾರವಾದರೂ  ಶಾಂತಿ ನೆಮ್ಮದಿ,ಸಂತೋಷ,ತೃಪ್ತಿ ಕರ ಜೀವನವಿತ್ತು.
ಇಂದು ಸಣ್ಣ ಸಂಸಾರದಲ್ಲಿದ್ದರೂ  ಶಾಂತಿಯಿಲ್ಲವಾದರೆ
ಜ್ಞಾನದ ಕೊರತೆ ಕಾರಣ. ಹೀಗಾಗಿ ಭಾರತೀಯರಾಗಲಿ
ವಿದೇಶಿಗರಾಗಲಿ ಮೊದಲ  ಶಿಕ್ಷಣದಲ್ಲಿ ಸತ್ಯಜ್ಞಾನವಿರಲಿ.
ಮನುಕುಲದ ಉದ್ದಾರ ಸತ್ಯಜ್ಞಾನದೊಳಗಿದೆ.ಸತ್ಯ ಎಲ್ಲಿದೆ? ಭೂಮಿಯಲ್ಲಿದೆಯೇ? ಆಕಾಶದಲ್ಲಿದೆಯೆ?
ಸತ್ಯ ನಮ್ಮೊಳಗೇ ಅಡಗಿದೆ. ಸತ್ಯವೇ ದೇವರಾಗಿದೆ.
ಆದರೆ, ಬೌತಿಕದಲ್ಲಿ ಸತ್ಯಕ್ಕೆ ಬೆಲೆಯಿಲ್ಲದೆ  ಆಧ್ಯಾತ್ಮ ಸತ್ಯ
ಹಿಂದುಳಿದಿದೆ.ಮಕ್ಕಳನ್ನು ದೇವರೆನ್ನುತ್ತಿದ್ದರು ಕಾರಣ
ಅವರ ನಿಷ್ಕಲ್ಮಶ  ಮನಸ್ಸು ಸ್ವಚ್ಚವಾಗಿರುತ್ತಿತ್ತು.ಆದರೆ
ಇಂದಿನ ಮಕ್ಕಳ ಮನಸ್ಸು ಹಾಳು ಮಾಡಿ ಪೋಷಕರೆ ಅವರನ್ನು ಒಂದು ಯಂತ್ರದಂತೆ  ಬಳಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು  ಬೌತಿಕಾಸಕ್ತಿ ಹೆಚ್ಚಿಸಿ
ಬೆಳೆಸಿದರೆ  ಮಹಾತ್ಮರನ್ನುದೂರಮಾಡಿಕೊಂಡಂತಾಗುತ್ತದೆ. 
ಧಾರ್ಮಿಕ  ಆಚರಣೆ ಸತ್ಯ,ಧರ್ಮದ ಪರವಾಗಿದ್ದಿದ್ದರೆ 
 ಈಗ  ಯಾಕೆ ಇಷ್ಟು ಸಮಸ್ಯೆ ಬೆಳೆಯುತ್ತಿತ್ತು? 
ಆಚರಣೆಗಳಿಂದ ಮನಸ್ಸು ಆತ್ಮ ಶುದ್ದವಾಗಬೇಕಾದರೆ ಅದರಲ್ಲಿ ಸತ್ಯಜ್ಞಾನವಿರಬೇಕು. ರಾಜಕೀಯದ ವ್ಯವಹಾರವಿದ್ದರೆ ಹಣ,ಆಸ್ತಿ,ಅಂತಸ್ತು, ಹೆಸರು,
ಪದವಿ,ಪದಕ,ಪ್ರತಿಷ್ಟೆ  ಸಿಕ್ಕರೂ  ಎಲ್ಲೋ ಒಂದು 
ಮೂಲೆಯಲ್ಲಿರುವ  ಸತ್ಯ. ಜೀವನದ ಕೊನೆಯಲ್ಲಿ 
ಮುಂದೆ ಬಂದು ಪ್ರಶ್ನೆ ಮಾಡಿದರೆ ಉತ್ತರ ನಮ್ಮಲ್ಲಿ
ರೋದಿಲ್ಲ.ಕಾರಣ ನಾವು ಸತ್ಯದ ಹಿಂದೆ ನಡೆದಿರೋದಿಲ್ಲ
ವಲ್ಲ. ಹೀಗಾಗಿ ಆಚರಣೆಗಳ ಹಿಂದಿನ ಉದ್ದೇಶ,ಗುರಿ,
ಗುರುವನ್ನು  ಸರಿಯಾಗಿ ಅರ್ಥ ಮಾಡಿಕೊಳ್ಳಲು  ಜ್ಞಾನದ ಶಿಕ್ಷಣದಿಂದ ಸಾಧ್ಯ. ಯಾರೋ ಯಾವುದೋ ಯುಗ, ಕಾಲದಲ್ಲಿ  ಹೇಳಿದ್ದಾರೆ,ಮಾಡಿದ್ದಾರೆ,ನಡೆದಿದ್ದಾರೆ ಎನ್ನುವ ಕಾರಣಕ್ಕೆ ನಾವು ಈಗಿನ ಕಾಲದಲ್ಲಿ ಹಾಗೆಯೇ ನಡೆಯಲು 
ಸಾಧ್ಯ ವಾದರೆ ಉತ್ತಮ.ಸಾಧ್ಯವಿಲ್ಲವೆಂದರೆ ಬೇರೆಯವರನ್ನು ನಡೆಸೋ ರಾಜಕೀಯ ಬಿಟ್ಟು ನಮ್ಮನ್ನು
 ನಾವು  ಅರಿತು ನಮ್ಮ ಕಾಲುಬುಡದ  ಸ್ವಚ್ಚತೆ ಕಡೆಗೆ
 ನಡೆಯಬೇಕು.
ನಮಗೆ ಅಧಿಕಾರ,ಜ್ಞಾನ ಭಗವಂತ ನೀಡಿರುವಾಗ  ಅದನ್ನು  ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವಾಗ
ಎಲ್ಲರೊಳಗೂ ಅಡಗಿರುವ ಪರಮಾತ್ಮನ ಸತ್ಯವನ್ನು
ಗೌರವದಿಂದ ಕಾಣುವುದೂ  ಧರ್ಮವೆ. ಹಾಗಂತ ಸತ್ಯ
ಕಾಣೋದಿಲ್ಲ.ಅರಿವಿಗೂ ಬರೋದಿಲ್ಲ.ಹೀಗಾಗಿ ಹಿಂದಿನ
ಮಹಾತ್ಮರುಗಳು ತೋರಿಸಿದ ದಾರಿಯಲ್ಲಿ ನಡೆಯುವುದು ಅಗತ್ಯ.ದಾರಿಯನ್ನು ಮುಚ್ಚಿ,ಇಲ್ಲ ದಾರಿಗೆ ಅಡ್ಡ ನಿಂತು ರಾಜಕೀಯ ನಡೆಸುವವರಿಗೇ  ಅಧಿಕಾರ, ಸಹಕಾರ,
ಗೌರವ ನೀಡುತ್ತಾ ನಮ್ಮೊಳಗೇ ಇದ್ದ ಮಹಾಚೈತನ್ಯ ಮರೆತರೆ ನಷ್ಟ ಯಾರಿಗೆ? ಇಲ್ಲಿ ಸ್ತ್ರೀಆಸ್ತಿ ಮಾಡಿದರೆ ತಪ್ಪು, ಪುರುಷ 
ಮಾಡಿದರೆ ಸರಿ ಎನ್ನುವ ಭಿನ್ನಾಭಿಪ್ರಾಯ ದಿಂದ ಸ್ತ್ರೀ ಶಕ್ತಿಯನ್ನು ಆಳೋದಕ್ಕೆ ಹೊರಟು,ಈಗ ಸ್ತ್ರೀ  ಬೌತಿಕದಲ್ಲಿ ಆಸ್ತಿಮಾಡಿ ಪುರುಷನಿಗೆ ವಿರೋಧಿಸುವ‌ಮಟ್ಟಿಗೆ ಸಂಸಾರ
 ನಡೆದಿದೆ.
ಪುರುಷನೊಬ್ಬನೆ ಅವನೇ  ಎಲ್ಲರನ್ನೂ ಒಳಗೊಂಡಿರುವ ಪರಮಾತ್ಮನೆನ್ನುವ ಅದ್ವೈತ  ತತ್ವವರಿತವರು ಸ್ತ್ರೀ ಶಕ್ತಿಯ ಋಣ ತೀರಿಸಲು ಭೂ ಸೇವೆ, ತಾಯಿ ಸೇವೆ ಪರಮಾತ್ಮನ ಸೇವೆಯಲ್ಲಿ ಜೀವನದ ಗುರಿ ತಿಳಿದು ಮುಕ್ತರಾಗಿದ್ದಾರೆ.
ಆದರೆ ಯಾವಾಗ ಅಜ್ಞಾನ ಆವರಿಸಿ  ಭೂಮಿಯನ್ನು ಭೋಗಕ್ಕಾಗಿ ಬಳಸಲಾಯಿತೋ  ಅದಕ್ಕೆ ಸರಿಯಾಗಿ ಸ್ತ್ರೀ ಸಹಕಾರ ದೊರೆಯಿತೋ  ಸ್ತ್ರೀ ಆಟಕ್ಕುಂಟು ಲೆಕ್ಕಕ್ಕಿಲ್ಲದೆ  ಋಣ ತೀರಿಸುವುದಿರಲಿ ಅವಳನ್ನು ಸೇವಕಿಯಾಗಿಸಿಕೊಂಡು ಆಳುವವರು  ಬೆಳೆದು ಭೌತ ವಿಜ್ಞಾನ ಬೆಳೆದು ಅಧ್ಯಾತ್ಮ ವಿಜ್ಞಾನ ಹಿಂದುಳಿಯಿತು.ಸ್ತ್ರೀ ಜ್ಞಾನ ದೇವತೆಯಾಗಿದ್ದರೂ ಅವಳ ಆತ್ಮಜ್ಞಾನಕ್ಕೆ ಸರಿಯಾದ ಶಿಕ್ಷಣ,ಸಹಕಾರವಿಲ್ಲದೆ  ಗೃಹಲಕ್ಮಿ ಯಾದಳು. ಗೃಹಲಕ್ಮಿ ಸಂಪಾದನೆ ಮಾಡಲು ಹೊರಗೆ  ಬರುವಂತಾಯಿತು. ಹೀಗಾಗಿ ಸಾಲ ಮಿತಿಮೀರಿ ಬೆಳೆದಾಗ  ಎಲ್ಲದ್ದಕ್ಕೂ ಸ್ತ್ರೀ ಕಾರಣ ಎನ್ನುವ ಹಂತಕ್ಕೆ ತಲುಪಿ ಶೋಷಣೆಗಳೂ ನಡೆದವು. ಜೀವಕ್ಕಾದ ಹಿಂಸೆಯಿಂದ ಬೇಸತ್ತ ಸ್ತ್ರೀ ವಿರೋಧಿಸಿಹೊರಗೆ ಬಂದಾಗ  ಅದನ್ನು ಪ್ರಗತಿ ಸಾಧನೆ ಎನ್ನುವವರೂ ಬೆಳೆದರು. ಇದು ಸತ್ಯವಾದರೂ ಯಾವ ಮನೆಯಲ್ಲಿ ಸ್ತ್ರೀ ಯಿರುವುದಿಲ್ಲವೋ  ಆ ಮನೆಯಲ್ಲಿ ಸುಖ ಸಮೃದ್ದಿ ಸಂತೋಷವಿರಲು ಕಷ್ಟ.ಸಂಸಾರದ ಒಂದು ಕಣ್ಣು  ಇನ್ನೊಂದು ಕಣ್ಣನ್ನು ಅರ್ಥ ಮಾಡಿಕೊಳ್ಳಲು ಎರಡೂ ಕಣ್ಣಿನ ದೃಷ್ಟಿ ಒಂದೇ ಆಗಿರಬೇಕು.
ಇಲ್ಲಿ  ಹೆಚ್ಚು ಆಸ್ತಿ ಮಾಡುವ ಉದ್ದೇಶದಿಂದ ಹೊರಗೆ ಹಣಸಂಪಾದನೆ ಹೆಚ್ಚಾದರೂ ಅದರ ಹಿಂದೆ ಸತ್ಯ ಧರ್ಮದ ಕೊರತೆಯಿದ್ದರೆ ಅದು ಪರಮಾತ್ಮನ ವರೆಗೆ ತಲುಪಲಾರದೆ ಯೋಗವಾಗದೆ  ಭೂಮಿಯ ಸಾಲ ತೀರದು.
ಮುಖ್ಯವಾಗಿ ಭೂಮಿಯ ಸಾಲ ತೀರಿಸಲು ಯೋಗಮಾರ್ಗ ಅಗತ್ಯವೆಂದು ಹಿಂದೂ ಧರ್ಮ ತಿಳಿಸುವಾಗ ಭೋಗದಲ್ಲಿ ಸಾಲ ತೀರದು ಎನ್ನುವ ಸತ್ಯವರಿತವರು  ಸ್ತ್ರೀ ಗೂ ಅಧ್ಯಾತ್ಮ ಶಿಕ್ಷಣ ನೀಡುತ್ತಾ ಸಂಸಾರವನ್ನು ಧರ್ಮ ಸತ್ಯದ ಮಾರ್ಗದಲ್ಲಿ ಸಾಮರಸ್ಯದಿಂದ  ನಡೆಸಿಕೊಂಡು ಮಹರ್ಷಿಗಳಾದರು.
ಋಷಿಪರಂಪರೆಯಿಂದ ಮುಂದೆ ಬಂದಿರುವ‌ ಮನುಕುಲಕ್ಕೆ
ಉತ್ತಮ ಶಿಕ್ಷಣವಿದ್ದರೆ  ಉತ್ತಮ ಬದಲಾಚಣೆ. ಅದರಲ್ಲಿ ಲಿಂಗ ಭೇಧ  ಜಾತಿ ಬೇಧ ಹೆಚ್ಚಾದರೆ ಸಾಲ ವೇ ಶೂಲ. ಹೀಗಾಗಿ ಲಕ್ಮಿಯನ್ನು ಆಳದೆ ಸರಸ್ವತಿಯನ್ನರಿತು ನಡೆದರೆ ಎಲ್ಲಾ ಭೂಮಿಗೆ ಆಸ್ತಿಯಾಗಿರುವರು. ವಿರುದ್ದ ನಡೆದರೆ ತಕ್ಕ ಶಾಸ್ತಿಯಾಗುತ್ತದೆ.
ಇದಕ್ಕಾಗಿ  ಭೂಮಿ ಸ್ತ್ರೀ ಸ್ವಯಂ ಲಕ್ಮಿ ಸ್ವರೂಪರಾದಾಗ  ಅವರನ್ನು  ಯಾವ ರೀತಿಯಲ್ಲಿ ಬಳಸಿದರೆ ಉತ್ತಮವೆನ್ನುವ ಅರಿವು ಪುರುಷರಿಗೆ ಅಗತ್ಯವಿದೆ.
ದುರ್ಭಳಕೆ ಮಾಡಿಕೊಂಡರೆ ಆಳಬಹುದು ಆದರೆ ನಂತರ ಆಳಾಗಿ ಜನ್ಮ ಪಡೆಯಲೇಬೇಕೆನ್ನುತ್ತದೆ ಅಧ್ಯಾತ್ಮ.  ಪುರಾಣವೂ ಸ್ತ್ರೀ ಯನ್ನು  ದೇವಿಯೆನ್ನುವ ದೃಷ್ಟಿಯಲ್ಲಿ  ವಿವರಿಸಿಲ್ಲವಾದರೂ ಎಲ್ಲದಕ್ಕೂ ಸ್ತ್ರೀ ಕಾರಣವೆಂದಿದೆ ಎಂದರೆ ಭೂಮಿಯಲ್ಲಿ ಜನ್ಮ‌ಪಡೆಯಲು ಸ್ತ್ರೀ ಋಣವೂ ಒಂದು ಕಾರಣವಾಗಿದೆ. ಹೀಗಾಗಿ ಸಂಪಾದನೆ ಜ್ಞಾನದಿಂದ ಮಾಡಿದರೆ ಸತ್ಯದ ಜೊತೆಗೆ ಧರ್ಮ ವೂ ಇದ್ದು ಋಣ ತೀರಿಸಬಹುದು. 
ಎಲ್ಲದ್ದಕ್ಕೂ ಸ್ತ್ರೀ ಯರ ಅತಿಆಸೆಯೇ ಕಾರಣವೆಂದಾಗ ಆಸೆಯ ಹಿಂದಿನ ಅಜ್ಞಾನವೂ ಕಾರಣ.ಅಜ್ಞಾನಕ್ಕೆ ಶಿಕ್ಷಣದ ಕೊರತೆ ಕಾರಣ.ಈ ಕೊರತೆಯನ್ನು ಸರಿಪಡಿಸುವುದು ಗುರುಹಿರಿಯರ ಧರ್ಮ. ಇದೀಗ ಕೆಲವೆಡೆ ನಡೆದರೂ ಹಲವು ಕಡೆ  ಅರ್ಥ ವಾಗದ ಶಾಸ್ತ್ರ ಸಂಪ್ರದಾಯಗಳು ಬೆಳೆಸಿಕೊಂಡು  ಸತ್ಯ ತಿಳಿಯದೆ  ಭೌತಿಕಾಸಕ್ತಿ ಹೆಚ್ಚಾಗಿರೋದು ದುರಂತ. ಎಲ್ಲದ್ದಕ್ಕೂ  ಕಾಲ ಕಾರಣ.ಕಲಿಯುಗದಲ್ಲಿ ಕಲಿಕೆಯುಉತ್ತಮಮಾರ್ಗದಲ್ಲಿದ್ದರೆ
 ಅದೇ ದೊಡ್ಡ ಆಸ್ತಿ.ಜ್ಞಾನಕ್ಕಿಂತ ದೊಡ್ಡ ಆಸ್ತಿ ಬೇರಿಲ್ಲ.

ಅಜ್ಞಾನದಿಂದ ಅಜ್ಞಾನದಿಂದ  ಯಾರಿಗೆ ಲಾಭವಾಗಿದೆ? ಸಮಾನತೆ
ಸುಜ್ಞಾನದಲ್ಲಿರಲಿ. ಜ್ಞಾನವೇ ಮಾನವನ ಆಸ್ತಿ. ಓದಿದ್ದನ್ನು
ಅಳವಡಿಸಿಕೊಂಡು  ಸತ್ಯ ತಿಳಿಯುವುದೆ ಜ್ಞಾನ.
ಓದಿದ ವಿಚಾರ ಆಧ್ಯಾತ್ಮ ವಾಗಿದ್ದರೆ  ಸಂಸಾರದಿಂದ ಮುಕ್ತಿ. ಬೌತಿಕವಾಗಿದ್ದರೆ  ರಾಜಕಿಯ ಶಕ್ತಿ. ಆಳೋದು
ತಪ್ಪಲ್ಲ.ಆದರೆ  ಆಳಾಗಿ ಕಾಣೋದು ತಪ್ಪು. ಆಳೋರೂ
ಒಂದು ರೀತಿಯಲ್ಲಿ ಆಳಾಗಿರುತ್ತಾರೆನ್ನುವುದೆ ಜ್ಞಾನ.
ಪ್ರಜಾಪ್ರಭುತ್ವದಲ್ಲಿ ಆಳೋರು ಯಾರು? ಆಳಾಗಿರೋರು ಯಾರು? ಇಬ್ಬರೂ ದೇಶದ ಪ್ರಜೆಗಳೆ.
ಭಾರತಮಾತೆಯನ್ನು  ಜ್ಞಾನದಿಂದ  ಆಳಿದರೆ ಅದೇ ದೇಶದ ಆಸ್ತಿ. ಇದಕ್ಕೆ ಬೇಕಾಗಿದೆ ಭಾರತೀಯರಿಗೆ ಸತ್ಯ ಜ್ಞಾನದ ಶಿಕ್ಷಣ. ಸತ್ಯದಿಂದ ಬೌತಿಕ ಜಗತ್ತು ಬೆಳೆದರೆ ಶಾಂತಿ.ಇಲ್ಲವಾದರೆ ಕ್ರಾಂತಿಯ ಅಶಾಂತಿ.ಪುರಾಣ ಪುರುಷ ಸ್ತ್ರೀ ಯರು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ
ಉತ್ತಮ  ಜ್ಞಾನದಿಂದ  ಸಂಸ್ಕಾರ ಪಡೆದ  ಮಕ್ಕಳೊಳಗೆ
ಮಹಾತ್ಮರನ್ನು ಕಾಣೋದಕ್ಕೆ  ಗುರು ಹಿರಿಯರು,ಶಿಕ್ಷಕರು
ಬೆಳೆಸೋದಕ್ಕೆ  ಹಣಕ್ಕಿಂತ ಜ್ಞಾನದ ಶಿಕ್ಷಣ ನೀಡಬೇಕಿತ್ತು.

Monday, January 8, 2024

ರಾಮರಾಜ್ಯದ ಕನಸು ನನಸಾಗಲಿ

ರಾಮ ರಾಜ್ಯದ ಕನಸಿನಲ್ಲಿ ರಾವಣನ ರಾಜ್ಯ ವಾಗದಿದ್ದರೆ ಉತ್ತಮ. ಅಂದಿನ ರಾಮ ರಾವಣರ  ಜ್ಞಾನ ಇಂದಿಲ್ಲ.ಇಂದಿನ ವೈಜ್ಞಾನಿಕ ಜ್ಞಾನ ಅಂದಿರಲಿಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡೋದಕ್ಕೆ  ಸಾಕಷ್ಟು ಅವಕಾಶ,ಸ್ವಾತಂತ್ರ್ಯ ಹಣ ಅಧಿಕಾರವಿರೋವಾಗ ರಾಮನ ತತ್ವದರ್ಶ ನವಾಗೋದು ಬಹಳ ಕಷ್ಟವಿದೆ. ಸಾಮಾನ್ಯ ಪ್ರಜೆಯ ಮಾತಿಗೆ ಕಿವಿಗೊಟ್ಟು  ಪತ್ನಿಯನ್ನು ದೂರಮಾಡಿಕೊಂಡ ಧರ್ಮಾತ್ಮ ಪ್ರಜಾಪಾಲಕ  ಶ್ರೀ ರಾಮ
ಇಂದಿಗೂ  ಪೂಜನೀಯನಾದರೂ  ರಾವಣನಂತಹ ಶಿವಭಕ್ತರಿಲ್ಲದಿದ್ದರೂ ಶಿವಭಕ್ತರಿಗೇನೂ ಕೊರತೆಯಿಲ್ಲದೆ‌  ತಮ್ಮ  ಸ್ವಾರ್ಥ ದ ಬೇಡಿಕೆಗಾಗಿ ರಾಜಕೀಯದ ಹಿಂದೆ ಮುಂದೆ  ಭಕ್ತರು ಬೇಡಿದರೆ  ಇಲ್ಲಿ ರಾಜರ ಆಡಳಿತವೇ ಇಲ್ಲ . ಸರ್ಕಾರ ಕೊಡುವುದನ್ನು ನಿಲ್ಲಿಸಿದರೆ   ಪಕ್ಷ ಉಳಿಯದು,ಕೊಟ್ಟರೆ ದೇಶವೇ  ಸಾಲದಲ್ಲಿ ಮುಳುಗುವುದು.
ಇಂತಹ  ಸ್ಥಿತಿಯಲ್ಲಿ  ರಾಜಕೀಯ  ನಡೆದಿದೆ  ಅದರೊಂದಿಗೆ  ಈ  ರಾಮರಾವಣರ  ಭಕ್ತರ ಹೋರಾಟ ಹಾರಾಟ ಮಾರಾಟ. ಗೆದ್ದವರಿಗೆ ಕಿರೀಟ ಪಟ್ಟ ಸೋತವರಿಗೆ
  ಮತ್ತಷ್ಟು ಕಾಟ ತಪ್ಪಿದ್ದಲ್ಲ. ಒಟ್ಟಿನಲ್ಲಿ  ಜನಬಲ ಹಣಬಲ ಅಧಿಕಾರ ಬಲವಿಲ್ಲದೆಯೇ ಶ್ರೀ ರಾಮ ವನವಾಸ ಮುಗಿಸಿ  ರಾವಣನ ವಧೆ ಮಾಡಿ ಸೀತೆಯನ್ನು ‌ ಬಿಡಿಸಿಕೊಂಡು ಬಂದರೂ‌ ನಾಡಿನ ಒಬ್ಬ ಸಾಮಾನ್ಯ ಪ್ರಜೆಯ ಮಾತಿಗೆ  ತನ್ನ ಪತ್ನಿಯನ್ನು  ಬಿಟ್ಟ ಶ್ರೀ ರಾಮನ  ಆಳವಾಗಿರುವ ಧರ್ಮ ತತ್ವವನ್ನು  ಅರ್ಥ ಮಾಡಿಕೊಳ್ಳಲು ಕಷ್ಟಪಡುವ  ಇಂದು  ಅವನ ಹೆಸರಿನಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ರಾವಣ ವಂಶದವರೂ  ಸೇರಿಕೊಂಡರೆ  ಧರ್ಮ  ಯಾರ ಪರವಿದೆ?
 ಯಾವುದೇ ವಿಚಾರವಿದ್ದರೂ ರಾಜಕೀಯ ವಿಚಾರ ಬಂದರೆ ಗೆಲ್ಲೋದು  ಅಸತ್ಯ ಅನ್ಯಾಯ ಅಧರ್ಮ .ಕಾರಣವಿಷ್ಟೆ ನಾವು ಯಾವುದನ್ನು ಸತ್ಯವೆಂದು ಕಣ್ಣಿಗೆ ಕಾಣುತ್ತಿರುವೆವೋ ಅದೇ  ಅಸತ್ಯ ಅಧರ್ಮ ವಾಗಿರುವಾಗ  ಜನಬಲ ಸಿಗೋದು ಕಣ್ಣಿಗೆ ಕಾಣೋದಕ್ಕೆ ಮಾತ್ರ.  ಹೀಗಾಗಿ ಪ್ರತಿಪಕ್ಷಗಳೂ ತಮ್ಮ ದ್ವೇಷವನ್ನು  ಪ್ರೀತಿಯಿಂದಲೇ ಹೊರಹಾಕಿ ಜನರೆಡೆಗೆ ಹೋದರೂ ಜನ ಬಯಸೋದು  ಪ್ರೀತಿ ವಿಶ್ವಾಸ ಆಶ್ವಾಸನೆಯ  ಭಾಗ್ಯವಷ್ಟೆ.ಅದರ ಹಿಂದಿನ ಸಾಲದ ಹೊರೆ ತಾವೇ ಹೋರಬೇಕಾದಾಗ ಶ್ರೀ ರಾಮನೇ ಬೇಕು. ರಾಮನ ದ್ಯಾನದಿಂದ  ಬರುವ  ಭಕ್ತಿಗೆ  ಯಾವ ರಾಜಕೀಯ ಅಗತ್ಯವಿಲ್ಲವಾದರೂ  ರಾಜಕೀಯದಲ್ಲಿಯೇ  ದೇವರು ಸಿಲುಕಿರುವಾಗ ನಮ್ಮ ಭಕ್ತಿಯೋಗದಿಂದಭಕ್ತಿಯನ್ನು ಹೇಗೆ ಮೂಡಿಸಬೇಕೆಂಬ ಜ್ಞಾನವಿದ್ದರೆ ಎಲ್ಲೆಡೆಯೂ ಇರುವ ರಾಮ ಒಬ್ಬನಾಗಿ ಕಾಣಬಹುದು. ರಾವಣನೂ ಅವನೊಳಗೇ ಇರೋವಾಗ ಬೇರೆ ಹೇಗೆ? ಶಿವಭಕ್ತ ರಾವಣನ ಸೋಲಿಸಲು ರಾಮನೂ ಶಿವಪೂಜೆ ಮಾಡಬೇಕಾಯಿತೆಂದರೆ  ದೇಶವನ್ನು ರಕ್ಷಣೆ ಮಾಡೋದಕ್ಕೆ ಪ್ರಜೆಗಳಲ್ಲಿ ದೇಶಭಕ್ತಿ ಇರಬೇಕು. ದೇವರ ಭಕ್ತರೆಲ್ಲ  ದೇಶಭಕ್ತರಾದರೆ ಸರಿ ವಿದೇಶಿ ಭಕ್ತರಾದರೆ  ತಪ್ಪು ಒಳಗಿದೆ. ರಾಮನ ತತ್ವ ರಾಮಭಕ್ತರೊಳಗಿದೆ ಹಾಗೇ ಕೃಷ್ಣ ಭಕ್ತರು ಇನ್ನಿತರ ಎಲ್ಲಾ ದೇವತೆಗಳ ಭಕ್ತರು ದೇಶದೊಳಗೆ ಇದ್ದಾಗ  ಯೋಗದಿಂದ ಭಕ್ತಿ ಹೆಚ್ಚಲು ರಾಮದ್ಯಾನದ ಅಗತ್ಯವಿದೆ. ಯಾವ ಖರ್ಚು ವೆಚ್ಚವಿಲ್ಲದೆಯೇ  ದೇವರನ್ನು ಕಾಣುವ ಶಕ್ತಿ ಯೋಗಿಗಳಲ್ಲಿತ್ತು.  ರಾಮ ದ್ಯಾನ ಮಾಡಿದರೂ ಸರಿ ಅವನ ಹೆಸರಿನಲ್ಲಿ ನಡೆದರೂ ಸರಿ,ಹೇಳದೆಯೇ ದ್ವೇಷ ಮಾಡಿದರೂ ಸರಿ ಎಲ್ಲಾ ತಲುಪುವುದು  ಶ್ರೀ ರಾಮನಿಗೇ ಎಂದಾಗ ಯಾರು ಹೇಗೆ‌ ನಡೆದರೂ ರಾಮಾಯಣವೇ ಆಗಿರುತ್ತದೆ. ರಾಮನ‌ನಡಿಗೆ ಅವನ ತತ್ವದಲ್ಲಿತ್ತು. ಹೊರಗಿರುವ ಭೂಮಿಯಲ್ಲಿ ನಡೆದ ಸ್ಥಳದಲ್ಲಿ ಗುಡಿಗೋಪುರ ಕಟ್ಟಿ ಪೂಜಿಸಿದರೂ ರಾಮನ ಪೂಜೆ, ಕಟ್ಟಿದ್ದನ್ನು ವಿರೋಧಿಸಿದರೂ  ರಾಮನಿಗೇ ತಲುಪುತ್ತದೆ. ರಾವಣನು ರಾಮನನ್ನು ಕೊನೆಕ್ಷಣದವರೆಗೂ ನೆನಸಿಕೊಂಡು ಅವನ ಧರ್ಮ (ಅಸುರಿ) ದ ಪ್ರಕಾರ ನಡೆದ ಪರಿಣಾಮ ಶ್ರೀ ರಾಮನಿಂದಲೇ ಹತನಾಗಿ  ಅವನೊಳಗೇ ಸೇರಿಕೊಂಡು ಮುಕ್ತನಾದನೆಂದರೆ ರಾಮನಾಮಕ್ಕಿದ್ದ ಶಕ್ತಿ ರಾಮನಿಗಿಂತ ದೊಡ್ಡದಾಗಿದೆ ಎಂದರ್ಥ.
ಮಾನವ ಕಾರಣಮಾತ್ರದವ. ಒಳ್ಳೆಯದಕ್ಕೆ ಒಳ್ಳೆಯ ಫಲ ಕೆಟ್ಟದ್ದಕ್ಕೆ ಕೆಟ್ಟಫಲ. ಒಳ್ಳೆಯದು ಕೆಟ್ಟದೆನ್ನುವ ಜ್ಞಾನ ಅಗತ್ಯವಿದೆ. ಯಾರನ್ನೂ ಯಾರೋ ಆಳೋದಕ್ಕೆ ಯಾರನ್ನೋ ಬೆಳೆಸಬಾರದಷ್ಟೆ.ನಮ್ಮ ನಾವುಆಳಿಕೊಳ್ಳಲು ಬೇಕಾದಷ್ಟು  ಜ್ಞಾನಶಕ್ತಿ ಒಳಗಿರುವಾಗ ಬಳಸಿಕೊಂಡರೆ ಉತ್ತಮ ಶಾಂತಿ. ತಿಳಿಯದೆ ಹೊರನಡೆದರೆ ಕ್ರಾಂತಿ.

Saturday, January 6, 2024

ನಿನ್ನಯ ಗುರಿಯು ಆತ್ಮದರುಶನ

"ನಿನ್ನಯ ಗುರಿಯು  ಆತ್ಮದರುಶನ ನಿನ್ನೊಳಗೇ ಇದೆ ಆ ರತುನ ಬನ್ನಪಡುತ ಈ ಕ್ಷುದ್ರ ಜೀವನದಿ   ಇನ್ನು ತೊಳಲದಿರು ಮುನ್ನಡೆ ಸಖನೇ  ಉತ್ತಿಷ್ಠತಾ ಜಾಗ್ರತ ಹೇ ಮನುಜ....

ಭಾರತೀಯರ ಅದರಲ್ಲೂ ಹಿಂದೂಗಳ ಈ ಸ್ಥಿತಿಗೆ ಅಧ್ಯಾತ್ಮಿಕ ವಾಗಿ  ಕಾರಣ ತಿಳಿಯುತ್ತಾ ಹೋದಂತೆಲ್ಲ ಕಂಡ ಸತ್ಯ  ಇದಾಗಿದೆ. ಸ್ವಲ್ಪ ಆತ್ಮಾವಲೋಕನ ದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟರೆ ಹಿಂದೂಗಳು ಹಿಂದಿರುಗಿ ಬರಬಹುದು. ಓದಿ ಪ್ರತಿಕ್ರಿಯೆ ನೀಡಿ ಸ್ನೇಹಿತರೆ,

 ಗೃಹಲಕ್ಮಿಯನ್ನು ಕಡೆಗಣಿಸಿದ ಪರಿಣಾಮವೇ ಇಂದಿನ ಗೃಹಲಕ್ಮಿ ಯೋಜನೆ. ಲಕ್ಮಿ ಯ ಸ್ವರೂಪ ಅನೇಕ ಅದರಲ್ಲಿ ಗೃಹಲಕ್ಮಿ ಮುನಿದರೆ  ಎಲ್ಲರಿಗೂ ತಗಲುವುದು ಶಾಪ.

 ಭಾರತೀಯ ಧರ್ಮ ಸಂಸ್ಕೃತಿ ಉಳಿಸಿಬೆಳೆಸಿರೋ ಗೃಹಲಕ್ಮಿ ಯರನ್ನು ಕೇವಲವಾಗಿ ಕಾಣುತ್ತಾ ಅವರನ್ನು ಹೊರಗೆ ದುಡಿದು ಜೀವನ‌ ನಡೆಸುವಂತೆ ಮಾಡಿದಾಗಲೇ ಮನೆಯೊಳಗೆ ಇದ್ದ ಲಕ್ಮಿ ಹೊರಗೆ ಹೆಚ್ಚು ಹೆಚ್ಚು ಹರಿದಾಡಲು ಪ್ರಾರಂಭವಾಯಿತು. ಇತಿಮಿತಿಗಳನ್ನು ಕಾಯ್ದುಕೊಂಡು ಸಂಚಾರಕ್ಕಾಗಿ ತನ್ನ ಸ್ವಂತಿಕೆಯನ್ನು ಮರೆತು ಶ್ರಮವಹಿಸಿ  ಯಾವುದೇ ನಿರೀಕ್ಷೆಯಿಲ್ಲದೆಯೇ ಧರ್ಮ ಪತ್ನಿ ಪತಿವ್ರತೆಯಾಗಿದ್ದವರಿಗೆ ಸಿಕ್ಕಿದ್ದು  ಅಬಲೆ  ಅನಕ್ಷರಸ್ಥೆ, ಅಸಹಾಯಕಿ  ಪಟ್ಟ. ಇದರಿಂದಾಗಿ  ಸಿಡಿದು ಹೊರಬಂದವರು  ತಮ್ಮ ಜೀವನ ತಾವೇ ನಡೆಸಿಕೊಂಡು ಹೋಗುವ ವಿದ್ಯಾವಂತರಾಗಿ ಸ್ವತಂತ್ರ ಚಿಂತನೆ ಗಳಿಂದ ಸಮಾಜದ ಮಧ್ಯೆ ನಿಂತು ಹೋರಾಟಗಳೂ ನಡೆದಿವೆ. ಇದನ್ನು ಸ್ವಾಗತಿಸಿದವರಿಗಿಂತ ವಿರೋಧಿಸಿದವರೂ ಸ್ತ್ರೀ ಯರೆ ಆಗಿರೋದು ಸತ್ಯ. ಯಾವಾಗ ಸ್ತ್ರೀ ಶಕ್ತಿ ಸಂಘಟನೆ ಎದ್ದು ನಿಂತವೋ ಮನೆಯೊಳಗಿನ ಸಮಸ್ಯೆಗಳು ಬೆಳೆದವು.
ಹಣದಿಂದ  ಸಮಸ್ಯೆ ಬಗೆಹರಿಸುವ  ಅನೇಕ ಯೋಜನೆಗಳೂ ಸರ್ಕಾರದಿಂದ  ಪಡೆದರೂ ಅದರ ಹಿಂದಿನ ಸಾಲ ಮಾತ್ರ  ಮಿತಿಮೀರಿದಾಗ‌ ತೀರಿಸಲು  ಸ್ತ್ರೀ ಭ್ರಷ್ಟಾಚಾರ ಕ್ಕೆ ಸಹಕರಿಸಬೇಕಾಯಿತು. ಅಧರ್ಮ, ಅನ್ಯಾಯ ಅಸತ್ಯದ ಪರವಾಗಿ ನಿಂತು ಹಣ ಬಂದಾಗ  ಸಾಲ ತೀರಿಸಬಹುದೆನ್ನುವ ಭ್ರಮೆಯಲ್ಲಿ  ಭ್ರಷ್ಟ ದುಷ್ಟರ ವಶದಲ್ಲಿ ಸ್ತ್ರೀ ಸಿಲುಕಿದರೆ ಸಂಸಾರದ ಗತಿ ಏನಾಗಬಹುದು.
ಈಗಂತೂ ಶಿಕ್ಷಣವೇ ದುಬಾರಿ. ಮಕ್ಕಳಿಗೆ ಜ್ಞಾನ ಬರುವುದೋ ಇಲ್ಲವೋ ಒಟ್ಟಿನಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜ್ ಬೆಳೆದುನಿಂತಿವೆ. ಸಾಲ ಮಾಡಿಯಾದರೂ ಅಂತಹ ಶಾಲೆಯಲ್ಲಿ ಕಲಿಸಲು ಪೋಷಕರು ಸರದಿಸಾಲಿನಲ್ಲಿ ನಿಂತರೆ ಮನೆಯೊಳಗೆ ಇರೋರಿಗೆ ಹೊರಗೆ ಒಳಗೆ ದುಡಿಯೋದು ಅನಿವಾರ್ಯ. ಇವೆಲ್ಲವೂ ನಮ್ಮ ಕಣ್ಣ ಮುಂದೆಯೇ ಕಾಣುವ ಸತ್ಯ. ಕೆಲವರಿಗೆ ಸಾಕಷ್ಟು ಆಸ್ತಿ ಹಣವಿದ್ದರೂ ಮನೆಯೊಳಗೆ ಕುಳಿತು ಮಾಡಲು ಕೆಲಸವಿಲ್ಲದೆ  ಹೊರಗೆ ದುಡಿಯಲು ಹೋದರೆ ಹಲವರಿಗೆ ಸಂಸಾರ ಸಾಗಿಸಲೂ ಕಷ್ಟವಾಗಿ ದುಡಿಯದೆ  ನಡೆಯೋದಿಲ್ಲ. ಇನ್ನೂ ಕೆಲವರಿಗೆ ಉದ್ಯೋಗ ವಿಲ್ಲವಾದರೆ ಮನೆಯೊಳಗೆ ಗೌರವ ಬೆಲೆ ಸಿಗದು.
ವಿದ್ಯೆ ಕಲಿತವರು  ಅದನ್ನು ಬಳಸಿ ಹಣ ಗಳಿಸಿದರೆ ತೃಪ್ತಿ, ನೆಮ್ಮದಿ.ಹೀಗಾಗಿ  ಸಾಕಷ್ಟು  ಹಣಸಂಪಾದನೆಯಾದಂತೆಲ್ಲಾ ಭೌತಿಕಾಸಕ್ತಿ ಹೆಚ್ಚಾಗುತ್ತಾ ಅಧ್ಯಾತ್ಮಿಕ ವಿಚಾರದಲ್ಲಿ ಜ್ಞಾನ ಕುಸಿಯಿತು. ಗೃಹಲಕ್ಮಿ ಯೋಜನೆಯ ಫಲಾನುಭವಿಗಳಲ್ಲಿ ಎಷ್ಟು  ಮಹಿಳೆಯರು ಹಣವನ್ನು ಸದ್ಬಳಕೆ ಮಾಡಿಕೊಳ್ಳುವರೋ  ದುರ್ಭಳಕೆ ಮಾಡಿಕೊಳ್ಳುವರೋ ಸರ್ಕಾರಕ್ಕೆ ಕಾಣೋದಿಲ್ಲವಾದರೂ ಮೇಲಿರುವ ದೇವರ ಸರ್ಕಾರ ನೋಡುತ್ತಿರುತ್ತದೆ. ಸ್ತ್ರೀ ಲಕ್ಮಿ ಸ್ವರೂಪ.ಅವಳಿಗೆ ಬೆಲೆಕಟ್ಟಲು ಕಷ್ಟವಿದೆ.ಆದರೂ ಕೇವಲ ಸಣ್ಣ ಪ್ರಮಾಣದ ಹಣದಿಂದ ಅಳೆಯುವಾಗ‌ ಗೌರವ ಸಿಗದು. ಒಟ್ಟಿನಲ್ಲಿ ಜ್ಞಾನದೇವತೆಯಾಗಿದ್ದ ಸ್ತ್ರೀ  ಹಣದ ದೇವತೆಯಾಗುತ್ತಾ ತೃಪ್ತಿ ಯಿಲ್ಲದೆ‌ ದುರ್ಗೆಯಾಗಿ  ಸಿಡಿದು ಹೊರಬಂದರೆ ನಷ್ಟ ಯಾರಿಗೆ? ಸ್ತ್ರೀ ಯರನ್ನು  ಗೃಹಲಕ್ಮಿ ಎನ್ನುವ ಜೊತೆಗೆ ಗೃಹ ಮಂತ್ರಿ ಎಂದರು. ಮಂತ್ರಿಯ ಸಲಹೆ,ಸೂಚನೆ,ಸಹಕಾರಕ್ಕೆ ವಿರುದ್ದ ನಡೆದಾಗಲೇ  ಲಕ್ಮಿ ಮುನಿದು ಹೋಗೋದಲ್ಲವೆ?
ಇಂತಹ ವಿಚಾರಗಳನ್ನು ಯಾರೂ ಗಮನಿಸೋದಿಲ್ಲ.ಕಾರಣ ದೇವರನ್ನು ಹೊರಗೆ ನೋಡುವ ಕಣ್ಣಿಗೆ ಒಳಗೇ ಇರುವ ದೈವೀ ಶಕ್ತಿಯನ್ನು ಗುರುತಿಸೋದೇ ಕಷ್ಟ.ಅದಕ್ಕಾಗಿ ಇಂದು ಎಲ್ಲಾ ಇದ್ದೂ ಏನೂ ಇಲ್ಲದ ಸ್ಥಿತಿಗೆ ಮನುಕುಲ ನಿಂತಿದೆ.
ಅದರಲ್ಲೂ ಭಾರತೀಯರ ಸ್ಥಿತಿ ಚಿಂತಾಜನಕವಾಗಿದೆ.
ಚಿಂತನೆ ಅಧ್ಯಾತ್ಮಿಕ ವಾಗಿ ನಡೆಸದೆ ರಾಜಕೀಯವಾಗಿ ನಡೆಸಿ ಸ್ತ್ರೀ ಯನ್ನು ಮನೆಯಿಂದ ಹೊರಗೆಳೆದು ತನ್ನ ಪಕ್ಷ ವೇ ಸರಿ ಎಂದರೆ ಇನ್ನೊಂದು ಪಕ್ಷವೂ ಅದೇ ಮಾಡುತ್ತದೆ. ಈ ಪಕ್ಷಪಾತದಿಂದ  ಏನಾದರೂ  ಅಧ್ಯಾತ್ಮಿಕ ಪ್ರಗತಿ ಸಾಧ್ಯವೆ? ಹಣ,ಅಧಿಕಾರ ಸ್ಥಾನಮಾನಕ್ಕಾಗಿ  ಎಷ್ಟು ಮನಸ್ಸು ಹೊರಬಂದರೂ  ಮಹಿಳೆಯರನ್ನು ಗೌರವಿಸುವ ಜ್ಞಾನಬರದು. ಹೀಗಾಗಿ ಗೃಹಲಕ್ಮಿ  ಯೋಜನೆಯವರೆಗೂ ಸರ್ಕಾರ ಬೆಳೆದಿದೆ. ಇದನ್ನು ಸರಿ ಎನ್ನುವವರಿಗೆ ಹಣ ಸಿಗುತ್ತದೆ ಜೊತೆಗೆ ಸಾಲವೂ ಬೆಳೆಯುತ್ತದೆ. ಸರಿಯಲ್ಲ ಎನ್ನುವವರಲ್ಲಿ ಹಣವಿದ್ದರೂ  ಗೃಹಲಕ್ಮಿ ಗೆ  ಸಿಗೋದಿಲ್ಲ.
ಲಕ್ಮಿ ಯನ್ನೇ ಹಣಕೊಟ್ಟು ಖರೀದಿಸುವ ಅಜ್ಞಾನದಿಂದ  ನಮ್ಮ ಧರ್ಮ ಸಂಸ್ಕೃತಿ ಭಾಷೆ ದೇಶವೇ ಪರಕೀಯರ ವಶವಾದರೂ  ಆಶ್ಚರ್ಯ ವಿಲ್ಲ.ಕಾರಣ ಅಜ್ಞಾನಿಗಳನ್ನು ಅಜ್ಞಾನಿಗಳೇ ಸರಿಪಡಿಸೋದು. ಹೊರಗಣ್ಣಿಗೆ ಕಾಣುವ ಹಣ ಒಳಗಣ್ಣಿಗೆ ಕಾಣುವ ಜ್ಞಾನ  ಎರಡೂ ಒಂದಾಗಲು ಮಧ್ಯದ ಕಣ್ಣು ತೆರೆಯಬೇಕಲ್ಲವೆ?
ಶಿವಶಕ್ತಿಯರ ಸಮಾನತೆಯು‌  ಜ್ಞಾನದಿಂದಾದರೆ  ಮನೆಯೊಳಗೆ ಹೊರಗೆ ಶಾಂತಿ. ಇಲ್ಲವಾದರೆ  ಅಜ್ಞಾನದ ಕ್ರಾಂತಿಯ ಅಶಾಂತಿ. 
ದೇವತೆಗಳನ್ನು ಬಿಡದ ಈ ಸ್ಥಿತಿ ಮಾನವರನ್ನೂ ಕಾಡುತ್ತಿದೆ.
ಉದಾಹರಣೆಗೆ ತಿರುಪತಿ ವೆಂಕಟೇಶ್ವರ ನ ಕಥೆ. ಲಕ್ಮಿ ಮುನಿಸಿಕೊಂಡು ಹೊರಬಂದಾಗ ವೆಂಕಟೇಶ್ವರ ಪದ್ಮಾವತಿಯ ವಿವಾಹ  ನಂತರ ಲಕ್ಮಿ ಯ ಶಾಪವೇ ವೆಂಕಟೇಶ್ವರ ನು ತಿರುಪತಿ ಬೆಟ್ಟದಲ್ಲಿ ನೆಲೆಸುವಂತಾಯಿತು.
ಈಗ  ಅವನಲ್ಲಿ ಸಾಕಷ್ಟು ಆಸ್ತಿ ಹಣ ತುಂಬಿತುಳುಕುತ್ತಿದ್ದರೂ  ದೇಶದ ಸಾಲತೀರಿಸಲಾಗುತ್ತಿಲ್ಲ .ಮಾನವನಕೈಗೊಂಬೆಯಂತೆ 
 ವೆಂಕಟೇಶ್ವರ ಒಂದೆಡೆ ಲಕ್ಮಿ ಇನ್ನೊಂದು ಕಡೆ ಪದ್ಮಾವತಿ ಮತ್ತೊಂದು ಕಡೆ .ಹಾಗಾದರೆ  ದೇವರಿರೋದೆಲ್ಲಿ? ಸಂಕಟ ಯಾರಿಗೆ? ಇಡೀ ದೇಶವೇ ವಿದೇಶಿ ಸಾಲ,ಬಂಡವಾಳ,
ವ್ಯವಹಾರ, ಶಿಕ್ಷಣದ ಜೊತೆಗೆ  ಅವರ ಧರ್ಮ, ಸಂಸ್ಕೃತಿ ಯ ವಶವಾಗುತ್ತಿದ್ದರೂ ಮನೆಯೊಳಗೆ  ಲಕ್ಮಿ ಯಾಗಿ ಬಂದ ಹೆಣ್ಣನ್ನು ಗೌರವದಿಂದ ಪ್ರೀತಿಯಿಂದ ವಿಶ್ವಾಸದಿಂದ  ನೋಡಿಕೊಳ್ಳುವ ಸಂಸಾರಗಳು ಕಡಿಮೆಯಿದೆ. ಎಲ್ಲಿ ಸ್ತ್ರೀ ಯನ್ನು ಜ್ಞಾನದಿಂದ ನೋಡಲ್ಪಡುವುದೋ ಅಲ್ಲಿ ಜ್ಞಾನದ ಜೊತೆಗೆ ಲಕ್ಮಿ ಯೂ ನೆಲೆಸಿರುವಳು. ಅಜ್ಞಾನದಿಂದ  ಲಕ್ಮಿಯನ್ನು ಬೆಳೆಸಿದರೆ ಅಜ್ಞಾನವೇ ಸುತ್ತಿಕೊಂಡು ಆಳುವುದು. ಇದು ದೇವಾನುದೇವತೆಗಳಿಗೂ ಅನ್ವಯಿಸುತ್ತದೆ. ಹೀಗಾಗಿ  ಜ್ಞಾನಲಕ್ಮಿಯಾಗಿರುವ ಸರಳ ಸುಂದರ ಸ್ವಚ್ಚ ಹೃದಯವಂತ ಗೃಹಲಕ್ಮಿ ಗೃಹಮಂತ್ರಿಯರನ್ನು  ಸರಿಯಾಗಿ ತಿಳಿದು ನಡೆಯುವುದಕ್ಕೆ ಪುರುಷರಿಗೆ ಸತ್ಯಜ್ಞಾನ ಅಗತ್ಯವಿದೆ. ಮಿಥ್ಯ ಜ್ಞಾನದಿಂದ ಯಾರಿಗೂ ಜೀವನ್ಮುಕ್ತಿ ಸಿಗದು. ಇಷ್ಟೇ ಜೀವನ ಸತ್ಯ. ನಿಮ್ಮ ಹೃದಯದಲ್ಲಿ ಲಕ್ಮಿ ಗೆ ಸ್ಥಾನಮಾನವಿದ್ದರೆ ಹೃದಯವಂತ ಸಂಸಾರವಾಗುತ್ತದೆ. ತಲೆಯಲ್ಲಿ ಇಟ್ಟುಕೊಂಡು  ಓಡಾಡಿದರೆ ತಲೆತಿರುಗುತ್ತದೆ.
ಕಾಲಿಗೆ ಹಾಕಿ ತುಳಿದರಂತೂ  ಮೇಲೇಳದಂತೆ ಮಾಡುತ್ತಾಳೆ ಎಚ್ಚರವಾದರೆ ಉತ್ತಮ ಜೀವನ.

ವರಹದಕ್ಷಿಣೆಯನ್ನು ವರದಕ್ಷಿಣೆ ಮಾಡಿಕೊಂಡು ಹೆಣ್ಣನ್ನು ಆಳಿ ಅಳಿಸಿದರು, ಕನ್ಯಾ ಆದಾನವನ್ನು ಕನ್ಯಾದಾನ ಮಾಡಿಕೊಂಡು ದಾನವರಂತೆ ನಡೆದರು. ಒಟ್ಟಿನಲ್ಲಿ ಹಿಂದೂ ಸ್ತ್ರೀ ಪುರುಷರ ಈ ಅಜ್ಞಾನವನ್ನು  ಸರಿಯಾಗಿ ಅರ್ಥ ಮಾಡಿಕೊಂಡು ‌ಮಧ್ಯವರ್ತಿಗಳು  ರಾಜಕೀಯ ನಡೆಸುತ್ತಾ ಮನೆಮನಸ್ಸನ್ನು ಹಾಳು ಮಾಡಿ ಹೊರಗೆಳೆದರೆ‌ ಒಳಗಿನ ಸತ್ಯ ಹಿಂದುಳಿದು ಧರ್ಮ ವೂ ಹಿಂದುಳಿಯಿತು. ಕಲಿಗಾಲದ  ಪ್ರಭಾವವಷ್ಟೆ.ಏನಾದರೂ ತಪ್ಪು  ಕಂಡರೆ ತಿಳಿಸಿ. ಕಾರಣ ಕುರುಡುಕಾಂಚಾಣ ಕುಣಿಸುತ್ತದೆ‌ಕಾಲಿಗೆ ಬಿದ್ದವರನ್ನು ತುಳಿಯುತ್ತಲೇ ಇರುತ್ತದೆ. ತುಳಿತಕ್ಕೆ ಒಳಗಾದವರ ಸಂಕಟ ಸಮಸ್ಯೆ ಸಮಾಜವನ್ನು ಹಾಳು ಮಾಡೋದಲ್ಲದೆ ದೈವತ್ವವನ್ನೇ ಇಲ್ಲವೆನ್ನುವುದು. ದೇವರಿರುವ ಮನೆ ಮನಸ್ಸು ಗುಡಿ ಗೋಪುರ ಮಠ ಮಂದಿರ ಕಟ್ಟುವುದಕ್ಕೆ  ಹಣಕ್ಕಿಂತ ಜ್ಞಾನದ ಅಗತ್ಯವಿದೆ. ಜ್ಞಾನದಿಂದ ಕಟ್ಟಿದ್ದು  ಆತ್ಮತೃಪ್ತಿ ತರುತ್ತದೆ. ಇದು ಯಾವುದೇ ಲಿಂಗ ಬೇಧದಿಂದ ಸಾಧ್ಯವಿಲ್ಲ. ಶಿವಬೇರೆ ಶಕ್ತಿ ಬೇರೆಯೇ?
ಶಿವ ನಿರಂತರ ದ್ಯಾನದಲ್ಲಿದ್ದರೂ ಶಕ್ತಿಯ ಕಾರ್ಯ ನಿಲ್ಲದು.ಹೀಗಾಗಿ  ಜ್ಞಾನವಿದ್ದರೆ  ಆತ್ಮಶಕ್ತಿ  ಜಾಗೃತವಾಗಿರುತ್ತದೆ. ಆ ಶಕ್ತಿಯನ್ನು ಬಿಟ್ಟು  ರಾಜಕೀಯ ನಡೆಸಿದರೆ ಅತಂತ್ರಸ್ಥಿತಿ. ಈಗಲೂ ಎಷ್ಟೋ  ಜನರಿಗೆ ತನ್ನ ಅರ್ಧ ಶಕ್ತಿಯ ಬಗ್ಗೆ ಅರಿವಿಲ್ಲದೆ  ಪೂರ್ಣ ನನ್ನದೇ ಶಕ್ತಿ ಎನ್ನುವ ಅಹಂಕಾರ ದಿಂದ  ಸ್ತ್ರೀ ಯನ್ನು ನಿರ್ಲಕ್ಷ್ಯ ಮಾಡಿ ಲಕ್ಷಲಕ್ಷ ಸಂಪಾದಿಸುತ್ತಾ ಅತೃಪ್ತಿ ಜೀವನ ನಡೆಸಿರೋದು ದುರಂತ ಕ್ಕೆ ಕಾರಣ. ಎಷ್ಟೇ ಹೊರಗೆ ಹೋರಾಟ ಮಾಡುತ್ತಾ  ದೇಶ ಕಟ್ಟಲು ಸಹಕಾರ ಕೊಟ್ಟರೂ ಒಳಗಿರುವ  ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸೋತರೆ  ಮೆಟ್ಟುವವರೆ ಬೆಳೆಯೋದು. ಇದನ್ನು ನೇರವಾಗಿ ಯಾರೆಂದು ತಿಳಿಸಲಾಗದು.ಕಾರಣ ಇದು ಎಲ್ಲರ ಒಳಗೆ ಸುಪ್ತವಾಗಿರುವ ಗುಣವಾಗಿರುವಾಗ ಅದನ್ನು  ಸರಿಪಡಿಸಿಕೊಂಡರೆ ಜ್ಞಾನೋದಯ ಸಾಧ್ಯವಿದೆ. ಎಲ್ಲರಲ್ಲಿಯೂ ಅಡಗಿರುವ ಆ ಪರಾಶಕ್ತಿ ಪರಮಾತ್ಮನಿಗೆ ನಮಸ್ಕರಿಸುತ್ತೇನೆ. 

"ನಿನ್ನಯ ಗುರಿಯು  ಆತ್ಮದರುಶನ ನಿನ್ನೊಳಗೇ ಇದೆ ಆ ರತುನ ಬನ್ನಪಡುತ ಈ ಕ್ಷುದ್ರ ಜೀವನದಿ   ಇನ್ನು ತೊಳಲದಿರು ಮುನ್ನಡೆ ಸಖನೇ  ಉತ್ತಿಷ್ಠತಾ ಜಾಗ್ರತ ಹೇ ಮನುಜ....

Tuesday, January 2, 2024

ಗುರುಹಿರಿಯರ ಆಸ್ತಿ ಸದ್ಬಳಕೆಯಾದರೆ ಸದ್ಗತಿ

ಗುರುಹಿರಿಯರಿಂದ ಬಳುವಳಿಯಾಗಿ ಬಂದ ಜ್ಞಾನದ ಆಸ್ತಿಯನ್ನು ಸದ್ಬಳಕೆ ಮಾಡಿಕೊಂಡರೆ ಸದ್ಗತಿ ಮುಕ್ತಿ ಮೋಕ್ಷ ಮಾರ್ಗ. ದುರ್ಭಳಕೆ ಮಾಡಿಕೊಂಡಷ್ಟೂ ದುರ್ಗತಿ ದು:ಖ.ಹೊರಗಿನ ಆಸ್ತಿ ಯ ಹಿಂದೆ ಹೇಗೆ ಧರ್ಮ ಕರ್ಮ ಗಳ ಋಣವಿರುವುದೋ ಹಾಗೆಯೇ  ಒಳಗಿನ ಜ್ಞಾನದ ಆಸ್ತಿಗೂ ಇರುತ್ತದೆ. ಯಾರೂ  ಎಲ್ಲವನ್ನೂ ತೆಗೆದುಕೊಂಡು ಹೋಗಲಾಗದು.ಹಂಚಿಹೋಗಬಹುದು. ಹಂಚುವಾಗ ಯಾರಿಗೆ ಎಷ್ಟು ದಕ್ಕುವುದೋ ಅಷ್ಟೇ ತಿನ್ನುವುದು.ಹಂಚದೆ ಕೂತರೆ ಜೀವ ಹೋಗುವಾಗ  ತೆಗೆದುಕೊಂಡು ಹೋಗಲಾಗದು ಆದರೆ ಪಾಪಪುಣ್ಯ ಫಲಾಫಲವಂತೂ ಮುಂದೆ ಇದ್ದೇ ಇರುತ್ತದೆ. ಇದು ಸನಾತನಧರ್ಮ ತಿಳಿಸುತ್ತದೆ.
ಇದನ್ನು ಪರಕೀಯರೂ ತಿಳಿಯುತ್ತಾರೆ. ನಡೆಸುವವರು ನಡೆಯುವವರು  ವಿರಳ. ಜ್ಞಾನದ ಆಸ್ತಿ ಬೆಳೆಸಲು ಶಿಕ್ಷಣವೂ ಅದೇ ಜ್ಞಾನದಲ್ಲಿರಬೇಕಷ್ಟೆ. ಹೊರಗಿನ ಜ್ಞಾನದಿಂದ ಸಂಪಾದಿಸಿದ ಆಸ್ತಿಯನ್ನು  ಒಳಗಿನ ಜ್ಞಾನದಿಂದ ಸದ್ಬಳಕೆ ಮಾಡಿಕೊಳ್ಳಲು ಮೊದಲು ಒಳಜ್ಞಾನದ ಶಿಕ್ಷಣ ಪಡೆದಿರಬೇಕು. ಹೊರಗೆ ಹೋದವರನ್ನು ಒಳಗೆಳೆಯೋದು ಕಷ್ಟ.ಒಳಗಿದ್ದವರನ್ನು ಹೊರಗಿನ ಸತ್ಯ ತಿಳಿಸುತ್ತಾ ನಡೆಸುವುದು ಸುಲಭ. ಮಕ್ಕಳಿಗೆ  ಒಳಗಿನ ಜ್ಞಾನದ ಶಿಕ್ಷಣ ನೀಡುವುದು ಪೋಷಕರ ಧರ್ಮ. ಇಲ್ಲವಾದರೆ ಮಕ್ಕಳೇ ಮುಂದೆ ಪೋಷಕರ ವಿರುದ್ಧ ನಡೆದು ಶೋಷಣೆ ಮಾಡಿದರೂ  ಯಾರೂ ಕೇಳೋದಿಲ್ಲ. ನಿದ್ದೆ ಮಾಡಿದವರನ್ನು ಎಚ್ಚರಿಸಬಹುದು.ನಿದ್ದೆ ಬಂದವರಂತೆ ನಾಟಕವಾಡೋರನ್ನು ಎಬ್ಬಿಸಲಾಗದು. ಆತ್ಮಸಾಕ್ಷಿಗೆ‌ಮೀರಿದ ಸತ್ಯವಿಲ್ಲವೆಂದಿದ್ದಾರೆ ಮಹಾತ್ಮರುಗಳು. ಭಾರತದ ಆತ್ಮವೇ ಅಧ್ಯಾತ್ಮ ಸತ್ಯವಾಗಿದೆ.