ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, February 29, 2024

ಧರ್ಮದಿಂದ ಕರ್ಮವೆ? ಕರ್ಮದಿಂದ ಧರ್ಮವೆ?

ಧರ್ಮದಿಂದ ಕರ್ಮ ಮಾಡೋದಕ್ಕೂ ಧರ್ಮ ವರಿಯದೆ ಕರ್ಮ ದಲ್ಲಿ ತೊಡಗಿರೋದಕ್ಕೂ ವ್ಯತ್ಯಾಸ ವಿದೆ. ಇಂದಿನ ಭಾರತ ಧರ್ಮದ ಹೆಸರಿನಲ್ಲಿ ಕರ್ಮ ಮಾಡಲು ಹೊರಟರೂ ಅಧರ್ಮ ಬೆಳೆದಿರೋದಕ್ಕೆ ಕಾರಣವೇ  ಪ್ರವೃತ್ತಿಯನ್ನು ವೃತ್ತಿ ಮಾಡಿಕೊಂಡಿರೋದು. ಯಾರೋ  ಅವರ ವೃತ್ತಿಯಲ್ಲಿ  ಅವರ ಧರ್ಮ ರಕ್ಷಣೆ ಮಾಡಿದ್ದರೆ  ನಾವೂ ಅವರ ವೃತ್ತಿಯಲ್ಲಿ ನಮ್ಮ ಧರ್ಮ ರಕ್ಷಣೆ ಮಾಡೋದರಲ್ಲಿ ಸ್ವಧರ್ಮ ವಿರದು.
ಪರಧರ್ಮದೆಡೆಗೆ ನಡೆದ ಶಿಕ್ಷಣದಲ್ಲಿ ನಮ್ಮ ಜ್ಞಾನವೇ ಇರದೆ ನಾವು ಅವರ ಹಿಂದೆ ನಡೆದರೆ ಅಧರ್ಮಕ್ಕೆ ಜಯ. ಹೀಗಾಗಿ ದೇಶವನ್ನೇ ವಿದೇಶದಂತೆ ನಡೆಸೋ ರಾಜಕೀಯದೆಡೆಗೆ ಪ್ರಜೆಗಳು ನಡೆದಂತೆಲ್ಲಾ ನಮ್ಮವರನ್ನೇ ನಾವು ದೂರಮಾಡಿಕೊಂಡು ನಮ್ಮ ಮೂಲ ಧರ್ಮ ಕರ್ಮದ ಸತ್ಯಜ್ಞಾನ ಅರ್ಥ ವಾಗದೆ‌ಮನಸ್ಸು ಹೊರಬಂದಂತೆಲ್ಲಾ ಮನೆಯಿಂದ ಹೊರಬರೋರೆ ಹೆಚ್ಚಾಗಿ‌ ಹೊರಗೆ  ಜನ ಮನೆಯಲ್ಲಿ ಬಣಬಣ. ಮನಸ್ಸು ಒಳಗೆಳೆಯೋದಕ್ಕೆ ಬೇಕಿದೆ ಜ್ಞಾನದ ಶಿಕ್ಷಣ. ಕೊಡೋರೇ ಹೊರಗಿದ್ದರೆ‌ ಅಜ್ಞಾನ. 
ಜ್ಞಾನದಿಂದ ಕರ್ಮ ಯೋಗವಾದರೆ ಉತ್ತಮ ವಿಜ್ಞಾನ.

ಆತ್ಮಸಾಕ್ಷಿಗಿಂತ ದೊಡ್ಡ ಸತ್ಯ ಬೇರಿಲ್ಲ

ನನ್ನ ಜೀವಾನುಭವದಲ್ಲಿ  ತಿಳಿದ ಸತ್ಯಕ್ಕಿಂತ ಅಸತ್ಯವೇ ಕಣ್ಣ ಮುಂದೆ ಸ್ಥಾನಮಾನ ಗಳಿಸಿ‌ಮುಂದೆ ನಡೆದಾಗ ಅಸಹಾಯಕತೆಗೆ ತಲೆಬಾಗಿ ನಡೆಯೋನ ಪರಿಸ್ಥಿತಿ ಬಂದಾಗೆಲ್ಲಾ ನನ್ನ ಒಳಮನಸ್ಸು ಪ್ರಶ್ನೆ ಮಾಡಿದ್ದು ಸತ್ಯವೇ ದೇವರೆನ್ನುವುದು ಯಾಕೆಂದು. ಉತ್ತರ ಹುಡುಕಲಾಗದೆ  ಹೊರಗೆ ನಡೆದರೆ  ಹಿಂದಿರುಗಿ ಬರುವಂತಾಯಿತು. ಒಳಗಿದ್ದರೆ  ಕಷ್ಟ ಹೊರಗೆ ತಿಳಿದರೆ ನಷ್ಟ. ಎರಡನ್ನೂ  ಅನುಭವಿಸಿದ ಮೇಲೇ  ಸತ್ಯದರ್ಶನ ವಾಗಿದ್ದು. ಹಣ ಇದ್ದರೆ ಎಷ್ಟು ಅಸತ್ಯವಿದ್ದರೂ ಬೆಳೆಯಬಹುದು.ಆದರೆ  ಅದೇ ಮುಂದೆ ಕಷ್ಟ ನಷ್ಟಕ್ಕೆ ಕಾರಣವಾದಾಗ ಸತ್ಯದ ಸಂಶೋಧನೆ ಕಡೆಗೆ ಮಾನವ ಹಿಂದಿರುಗಲೇ ಬೇಕೆನ್ನುವ ಅಧ್ಯಾತ್ಮ ವನ್ನು  ಯಾರೂ ಬೆಳೆಸಲಾಗದು.ಕಾರಣ ಅದು ಹಿಂದೆಯೇ ಬೆಳೆದಿರುವಾಗ ನಾವೇ ಹಿಂದಿನವರ ಧರ್ಮ/ಕರ್ಮ ಜ್ಞಾನದೆಡೆಗೆ  ನಡೆಯಬೇಕೆಂಬ ಸಾಮಾನ್ಯ ಜ್ಞಾನ ಇದ್ದರೆ  ನಮ್ಮ ಮುಂದಿನ ಭವಿಷ್ಯ ನಮ್ಮ ಆತ್ಮಾವಲೋಕನ ದಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವುದು  ಅನುಭವದ ಸತ್ಯ.
ಇದಕ್ಕೆ ವಿರೋಧಗಳು ನಮ್ಮವರಿಂದ ಹೊರಗಿನಿಂದ  ಬರುತ್ತಲೇ ಇರುತ್ತದೆ. ಆದರೆ  ನಮ್ಮ  ಚಿಂತನೆಯಲ್ಲಿ ಯಾವ ದೋಷವಿರದೆ  ಸತ್ಯವಿದ್ದರೆ  ಅದನ್ನು  ವಿರೋಧಿಸಿ ಅಥವಾ ಶಾಂತಿಯಿಂದಲೇ  ಕಡೆಗಣಿಸಿ  ಸ್ವತಂತ್ರ ಜ್ಞಾನದಿಂದ ಇರಲು ಸಾಧ್ಯ. ಯಾವತ್ತೂ ಸತ್ಯ ಕ್ಕೆ ಸಾವಿಲ್ಲ ಎನ್ನುವವವರೆ ಅಸತ್ಯಕ್ಕೆ  ಸಹಕಾರ ಸಹಾಯ ಅವಕಾಶ,ಅಧಿಕಾರ ಕೊಟ್ಟು ಮುಂದೆ ನಡೆದರೋ  ಆಗಲೇ  ಅಸತ್ಯಕ್ಕೆ ಬಲ,ಬೆಲೆ ಹೆಚ್ಚಾಗಿ ತನ್ನ ಸ್ಥಾನಭದ್ರಗೊಳಿಸಿಕೊಳ್ಳಲು ಭ್ರಷ್ಟಾಚಾರ ದೆಡೆಗೆ ನಡೆದಿದೆ.ಇದನ್ನು ಇಂದಿನವರು  ತಡೆಯುವುದಕ್ಕೆ ಕಷ್ಟವಿದೆ.ಆದರೆ   ಪ್ರಯತ್ನ ಪಟ್ಟರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಲು ಸಾಧ್ಯವಿದೆ.ಸಂಪೂರ್ಣ ಆಗದಿದ್ದರೂ  ಆ ದಾರಿಯಲ್ಲಿ ಹಿಂದಿರುಗಿದವರಿಗೆ ನೆಮ್ಮದಿ ಇದೆ.ಆದರೆ ಇದು ರಾಜಕೀಯವಾಗಿರಬಾರದಷ್ಟೆ. ಯಾರನ್ನೋ ಸರಿಪಡಿಸಲು ಹೋಗಿ‌ನಾವೇ ಅವರಡಿ ನಿಲ್ಲಬೇಕಾಗಬಹುದು.

ಉದಾಹರಣೆಗೆ  ಒಬ್ಬ ಭ್ರಷ್ಟನ ತಪ್ಪುನ್ನು ತಿಳಿಯುತ್ತಾ,ಹುಡುಕುತ್ತಾ,ಹೇಳುತ್ತಾ,ನಡೆಯುತ್ತಾ ಪ್ರಚಾರ ಮಾಡುವವರಿಗೆ ಹಣ ಹೆಚ್ಚಾಗಿ ಸಿಗುತ್ತದೆ.ಇದರಿಂದ ಅವನ ಸಂಸಾರ  ಬೆಳೆಯುತ್ತದೆ.ಅಂದರೆ ಅದಕ್ಕೆ ಸಹಕರಿಸುವವರೂ ಬೆಳೆಯುವರು. ಅವರ ಜೊತೆಗೆ  ಕೇಳಿದವರು ನೋಡಿದವರೂ  ಇದೇ ಸತ್ಯವೆಂದರಿತು  ನಂಬಿ  ಎಲ್ಲಾ ಭ್ರಷ್ಟರೆ ಎಂದು ತೀರ್ಮಾನ ಮಾಡಿದರೆ ಎಲ್ಲರ ಮನಸ್ಸಿನಲ್ಲೂ ಭ್ರಷ್ಟರ ವಿಷಯವೇ ತುಂಬುವುದು. ಮನಸ್ಸನ್ನು ಸೇರಿದ ಮೇಲೆ ಅದನ್ನು ಹೊರಗೆ ತರಬಹುದೆ? ಬಹಳ ಕಷ್ಟ.ಇದಕ್ಕೆ ಕಾರಣವೇ  ಮೂಲವ್ಯಕ್ತಿಯಾಗಿದ್ದರೂ  ಇದರಿಂದ ಕಷ್ಟ ಅನುಭವಿಸೋರು ಹಲವರು.ಇದಕ್ಕಾಗಿ ನಾವು ಸತ್ಯ ಬಿಡದೆ  ನಡೆದರೆ  ಇದು ಕಷ್ಟವೆನಿಸಿದರೂ  ಅಂತಿಮವಾಗಿ ತೃಪ್ತಿ ಸಿಗುವುದೆನ್ನುವ ಆತ್ಮವಿಶ್ವಾಸವಿರುತ್ತದೆ. ನಮ್ಮ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗೋದಕ್ಕೆ ಇದರಿಂದ ಮಾತ್ರ ಸಾಧ್ಯವೆನ್ನುವ ಸತ್ಯ ಒಂದೇ ಆಗಿದೆ.
ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನದ ಶಿಕ್ಷಣವೇ ಮೂಲಧಾರ.
ನಂತರದ ವಿಜ್ಞಾನ ಜೀವನಕ್ಕೆ ಅಗತ್ಯವಿದ್ದರೂ  ಜೀವಾತ್ಮನ ವಿರುದ್ದ ನಡೆಯದಂತಿದ್ದರೆ ಸಮಾಧಾನ ಶಾಂತಿ ಇರುತ್ತದೆ.
 ನಮ್ಮ ಮಕ್ಕಳಿಗೆ ಕೊಡುವ ಶಿಕ್ಷಣದಲ್ಲಿ ಬದಲಾವಣೆ ಆಗದೆ ದೇಶಬದಲಾಗದು. ಬದಲಾವಣೆ ಪೋಷಕರಿಂದಲೇ ಆಗಬೇಕು. ದೇಶದ ಪ್ರಜೆಗಳೇ ದೇಶದ ಪೋಷಕರು.ದೇಶದಲ್ಲಿ ಭ್ರಷ್ಟಾಚಾರ ಬೆಳೆದಿದೆ ಎಂದರೆ ಅದಕ್ಕೆ ಸಹಕಾರ ನೀಡಿದ ಪ್ರಜೆಗಳೇ ಆಗಿರುವಂತೆ ಶಿಕ್ಷಣಕ್ಷೇತ್ರ ಧಾರ್ಮಿಕ ಕ್ಷೇತ್ರದಲ್ಲೂ  ಭ್ರಷ್ಟರಿದ್ದಾರೆಂದರೆ ಇದಕ್ಕೂ ನಮ್ಮ ಸಹಕಾರವೇ ಕಾರಣ. ಇದಕ್ಕೆ ತಕ್ಕಂತೆ ಫಲ ಅನುಭವಿಸೋದು ಮುಂದಿನ ಪೀಳಿಗೆ. ಮಕ್ಕಳು ಸರಿಯಿಲ್ಲ ಎನ್ನುವ ಮೊದಲು ಅವರಿಗೆ  ಜೀವನದ ಸತ್ಯದ ಅರಿವಿದೆಯೆ ಚಿಂತನೆ ನಡೆಸಿ ತಿಳಿಸುತ್ತಾ  ಬೆಳೆಸಲು ನಾವು ಅದರೊಳಗೆ‌ಹೊಕ್ಕಿರಬೇಕು.
ಅಂದರೆ ನಮ್ಮ ತಪ್ಪು ಒಪ್ಪು  ನಮ್ಮ ಸತ್ಯ ಮಿಥ್ಯದ ಜ್ಞಾನವನ್ನೇ ಅವಲಂಭಿಸಿದೆ.
ಸತ್ಯ ಒಂದೇ ಧರ್ಮ ಒಂದೇ ಎನ್ನುವುದು ಅದ್ವೈತ. ಆದರೆ ಒಂದು  ಹಲವು ಮಂದಿ ಹಲವು ರೀತಿಯಲ್ಲಿ ಸತ್ಯವನ್ನು ಧರ್ಮ ವನ್ನು ಅಲ್ಲಗೆಳೆಯಬಹುದು.ಆದರೆ ಸತ್ಸಂಗ ಅಗತ್ಯ. ಹಿಂದಿನವರು ಅಸತ್ಯದಲ್ಲಿದ್ದರೆ ಹಾಗೇ ಮುಂದಿರುವವರೂ ನಡೆಯಬಹುದು.ಎಲ್ಲೋ ಕೆಲವರಿಗಷ್ಟೆ ಇದರ ವಿರುದ್ದ ನಿಂತು ನಡೆಯೋ ಚೈತನ್ಯ ಶಕ್ತಿಯಿರುತ್ತದೆ. ಹೀಗಾಗಿ  ಅಪ್ಪ ನೆಟ್ಟ ಆಲದ ಮರವೆಂದು ಯಾರೂ ನೇಣುಹಾಕಿಕೊಳ್ಳಲು ಆಗೋದಿಲ್ಲವೆಂದ ಮೇಲೆ ಅಸತ್ಯವನ್ನು ನಂಬಿ ನಡೆಯಬಾರದು. ಕಾಲಮಾನಕ್ಕೆ ತಕ್ಕಂತೆ ಸತ್ಯ ಬೆಳೆದಿದೆ ಆದರೆ ಅದು ಹೊರಗಿನಿಂದ ಬೆಳೆದಿದೆ ಮೂಲ ಸತ್ಯ ಒಳಗಿದೆ ಎಂದರ್ಥ.

ಮಾನವ ಎಡವಿದ್ದೆಲ್ಲಿ?

ನಮ್ಮ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸುವ‌ನಮಗೆ ಬೇರೆಯವರ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸೋ ಗುಣ ಬರೋದಿಲ್ಲ ಎಂದರೆ ತಪ್ಪು ನಮ್ಮೊಳಗೇ ಬೆಳೆಯುತ್ತಿದೆ ಎಂದರ್ಥ. ಮಕ್ಕಳ ತಪ್ಪು ತಿದ್ದಿ ಸರಿಪಡಿಸುವುದು ಧರ್ಮ  ಇದು ಶಿಕ್ಷಕರಿಗೆ ಅತ್ಯಗತ್ಯ.ಆದರೆ ಕಾಲ ಬದಲಾಗಿದೆ ಶಿಕ್ಷೆ ನೀಡೋ ಹಾಗಿಲ್ಲ. ಹೇಳಿ ಬೆದರಿಸೋ ಹಾಗಿಲ್ಲ  ಆದರೆ  ತಪ್ಪು ತಪ್ಪಾದ ವಿಷಯಗಳನ್ನು ಮಕ್ಕಳ ತಲೆಗೆ ತುಂಬುವ ಶಿಕ್ಷಣಕ್ಕೆ ಎಲ್ಲರ  ಸಹಕಾರವಿದೆ. ಹೀಗಾಗಿ  ಎಲ್ಲರ ಕಣ್ಣಿಗೆ ಸರಿಯಾದ ಸತ್ವ ಸತ್ಯ ತತ್ವ ಕಣ್ಣಿಗೆ  ತಪ್ಪಾಗಿ ಕಾಣುತ್ತದೆ. ಅಸತ್ಯ ತಂತ್ರ ಸರಿಯಾಗಿ ಕಾಣುತ್ತದೆ. ಇದನ್ನು ಮಕ್ಕಳೂ ಕಲಿತು ಮುಂದೆ ಹೋದಾಗ  ಮಕ್ಕಳ ತಪ್ಪು ಕಣ್ಣಿಗೆ ಕಂಡರೂ ಶಿಕ್ಷೆ ನೀಡುವ ಹಂತದಲ್ಲಿರೋದಿಲ್ಲ. ಹೊರಗಿನವರಿಂದ ಶಿಕ್ಷೆ ಅನುಭವಿಸುವಾಗ ಹೇಳುವ ಅಧಿಕಾರವೂ ಇರೋದಿಲ್ಲ.
ಇದೊಂದು ರಾಜಕೀಯದಿಂದ ಬೆಳೆದಿರುವ ದೋಷವಾಗಿರುವಾಗ ಅದನ್ನು ರಾಜಯೋಗದ ವಿಚಾರಗಳನ್ನು  ತಿಳಿದು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟವರಿಗಷ್ಟೆ ತಪ್ಪು ಯಾವುದು ? ಯಾರದ್ದು? ಸರಿ ಯಾರು? ಎಲ್ಲಿದೆ ಎಂದು ತಿಳಿಯಬಹುದು.ಕಾಲ ಮೀರುವ ಮೊದಲು  ಹಿಂದಿರುಗಿದರೆ ಮೂಲ ಸತ್ಯದ ಕಡೆಗೆ ನಿಧಾನವಾಗಿಯಾದರೂ  ಒಳಗಿರುವ ತಪ್ಪು ಕಲ್ಪನೆಗಳಿಂದ ಬಿಡುಗಡೆ ಪಡೆಯಬಹುದು. ಹೊರಗಿನವರು  ಕೊಟ್ಟಿರುವ ವಿಶೇಷಜ್ಞಾನವನ್ನು ಒಳಗಿರುವವರ ವಿಶೇಷಜ್ಞಾನದೆಡೆಗೆ ನಡೆಸಿದರೆ  ಸಂಪೂರ್ಣ ಸತ್ಯ ಅರ್ಥ ವಾಗದಿದ್ದರೂ  ಹೊರಗಿನ ಜ್ಞಾನದಿಂದ ನಮ್ಮ ಬುದ್ದಿ ಬೆಳೆದಿದೆ.ಆದರೆ ಸತ್ಯಜ್ಞಾನ‌ಕುಸಿದಿದೆ. ತತ್ವವಿಲ್ಲದ ತಂತ್ರ ಅತಂತ್ರವಾಗಿರುತ್ತದೆ.
ತಪ್ಪು ಮಾನವ ಮಾಡದೆ ಮರ ಮಾಡುವುದೆ? ಎನ್ನುವರು
ಸತ್ಯ .ಮಾನವನ ಮನಸ್ಸು ತಪ್ಪು ಗ್ರಹಿಕೆಗೆ ಒಳಪಟ್ಟಾಗ ತಿಳಿಯದೆಯೇ  ತಪ್ಪು ದಾರಿ ಹಿಡಿದರೂ ಸರಿಯಾದ ಮಾರ್ಗ ದರ್ಶಕರ ಗುರು ಹಿರಿಯರ ಹಿಂದೆ ಇರುವ ಸತ್ಯಜ್ಞಾನದ ಅನುಭವಪೂರಿತ  ಹಿತನುಡಿಗಳಿಂದ ಸರಿಪಡಿಸಿಕೊಂಡರೆ
ಉತ್ತಮ ಜೀವನ. ಅದುಬಿಟ್ಟು ಮಧ್ಯವರ್ತಿಗಳು ರಾಜಕಾರಣಿಗಳ ಹಿಂದೆ ನಡೆದರೆ ಇನ್ನಷ್ಟು ಅತಂತ್ರಸ್ಥಿತಿಗೆ ಜೀವನ ಬಂದು ನಿಲ್ಲುವುದು. ಸ್ವತಂತ್ರ ವಾಗಿರುವ ಒಂದೇ ಸತ್ಯವನರಿಯದೆ  ಅಸಂಖ್ಯಾತವಾಗಿ ಬೆಳೆದಿರುವ ಅನೇಕ ಅಸತ್ಯಕ್ಕೆ ಬೆಲೆಕೊಟ್ಟು  ತಪ್ಪು ಮಾಡಿದ ಜೀವಕ್ಕೆ ಹಿಂದಿರುಗಿ ಬರೋದಕ್ಕೆ  ಸಮಯಬೇಕಷ್ಟೆ. ಮಕ್ಕಳಿಗೂ ಹಾಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳದಿದ್ದರೆ ದೊಡ್ಡ ದಾಗಿ ಬೆಳೆದಾಗ ಶಿಕ್ಷೆ ಕೊಡಲೇಬೇಕು.ಆಗಲೂ  ಕೊಡದಿದ್ದರೆ ಅದೇ ಶಿಕ್ಷೆ ಪೋಷಕರು ಅನುಭವಿಸುವಂತಾಗಬಹುದು. ದೈಹಿಕ ಶಿಕ್ಷೆಗಿಂತ ಮಾನಸಿಕ ಹಿಂಸೆ ಹೆಚ್ಚು ನೋವಾಗುವುದಲ್ಲವೆ?
ತಪ್ಪು ಯಾರೇ ಮಾಡಲಿ ಅದು ತಪ್ಪೆ. ಇಂದು ಹಣದಿಂದ ನ್ಯಾಯಾಲಯವು ಬೆಳೆದಿದೆ ಎಂದರೆ ತಪ್ಪಿತಸ್ಥರು ಹೊರಗೆ  ಸ್ವತಂತ್ರವಾಗಿ ಬೆಳೆದಿರುವರು.ಇದಕ್ಕೆ ಕಾರಣ ಶಿಕ್ಷಣ.
ಗುರುವೇ ದಾರಿತಪ್ಪಿದರೆ ಶಿಷ್ಯನ ಗತಿ ಏನು?
ಮನೆಯೊಳಗೆ ಇರುವ ಗುರುಗಳೇ ಮಕ್ಕಳಿಗೆ ಹಣದಿಂದ ಬೆಳೆಸಿದ್ದರೆ  ಬೇಲಿಯೇ ಸರಿಯಿರದು.
ದೇಶ ರಕ್ಷಣೆ,ಧರ್ಮ ರಕ್ಷಣೆ ಮಾಡೋರೇ ತಪ್ಪಿತಸ್ಥ ರ ವಶದಲ್ಲಿದ್ದರೆ  ದೇಶ ಧರ್ಮ ಉಳಿಯುವುದೆ?

ಭಗವಂತನ ನ್ಯಾಯಾಲಯದಲ್ಲಿ ಒಂದೇ ನ್ಯಾಯ .ತಕ್ಕಡಿಯಲ್ಲಿ  ಎರಡು ಬಟ್ಟು ಇಟ್ಟು ಒಂದು ಹೆಚ್ಚು ತೂಗಿದರೆ ಇನ್ನೊಂದು ಕಡೆ ನಿಲ್ಲುವನು.ಆದರೆ ಅವನ‌ ಪ್ರತಿನಿಧಿಗಳಾದ ಮಾನವರು ಹಣಕ್ಕಾಗಿ ಭಗವಂತನನ್ನೇ ತೂಗಲು ಹೋದರೆ  ವಿನಾಶವಷ್ಟೆ.
ಎರಡೂ ಪಕ್ಷ ಭ್ರಷ್ಟಾಚಾರದ ಹಣದಲ್ಲಿಯೇ ದೇಶದ ಸಾಲ ತೀರಿಸುತ್ತೇವೆಂದರೆ ತೀರುವುದೆ? ದೇವರ ಸಾಲ ಶಿಷ್ಟಾಚಾರದ ಹಣದಲ್ಲಿಯೇ ತೀರಿಸಬೇಕಲ್ಲವೆ? ತಪ್ಪು ಯಾರದ್ದು? ದೇವರು ಮಾನವನನ್ನು ನಡೆಸಿದ್ದೆ? ಮಾನವ ದೇವರನ್ನು ಬೆಳೆಸಿದ್ದೆ? ದೈವತ್ವ ಬೆಳೆಸೋ ಶಿಕ್ಷಣ ನೀಡಿದಾಗಲೇ ತಪ್ಪು ಒಪ್ಪಿಕೊಳ್ಳಲು ಸಾಧ್ಯವಿದೆ ಎನ್ನುವುದು ಸನಾತನ ಧರ್ಮ.

ತಪ್ಪು ಮಾಡದವರಿದ್ದಾರೆಯೆ?

ನಮ್ಮ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸುವ‌ನಮಗೆ ಬೇರೆಯವರ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸೋ ಗುಣ ಬರೋದಿಲ್ಲ ಎಂದರೆ ತಪ್ಪು ನಮ್ಮೊಳಗೇ ಬೆಳೆಯುತ್ತಿದೆ ಎಂದರ್ಥ. ಮಕ್ಕಳ ತಪ್ಪು ತಿದ್ದಿ ಸರಿಪಡಿಸುವುದು ಧರ್ಮ  ಇದು ಶಿಕ್ಷಕರಿಗೆ ಅತ್ಯಗತ್ಯ.ಆದರೆ ಕಾಲ ಬದಲಾಗಿದೆ ಶಿಕ್ಷೆ ನೀಡೋ ಹಾಗಿಲ್ಲ. ಹೇಳಿ ಬೆದರಿಸೋ ಹಾಗಿಲ್ಲ  ಆದರೆ  ತಪ್ಪು ತಪ್ಪಾದ ವಿಷಯಗಳನ್ನು ಮಕ್ಕಳ ತಲೆಗೆ ತುಂಬುವ ಶಿಕ್ಷಣಕ್ಕೆ ಎಲ್ಲರ  ಸಹಕಾರವಿದೆ. ಹೀಗಾಗಿ  ಎಲ್ಲರ ಕಣ್ಣಿಗೆ ಸರಿಯಾದ ಸತ್ವ ಸತ್ಯ ತತ್ವ ಕಣ್ಣಿಗೆ  ತಪ್ಪಾಗಿ ಕಾಣುತ್ತದೆ. ಅಸತ್ಯ ತಂತ್ರ ಸರಿಯಾಗಿ ಕಾಣುತ್ತದೆ. ಇದನ್ನು ಮಕ್ಕಳೂ ಕಲಿತು ಮುಂದೆ ಹೋದಾಗ  ಮಕ್ಕಳ ತಪ್ಪು ಕಣ್ಣಿಗೆ ಕಂಡರೂ ಶಿಕ್ಷೆ ನೀಡುವ ಹಂತದಲ್ಲಿರೋದಿಲ್ಲ. ಹೊರಗಿನವರಿಂದ ಶಿಕ್ಷೆ ಅನುಭವಿಸುವಾಗ ಹೇಳುವ ಅಧಿಕಾರವೂ ಇರೋದಿಲ್ಲ.
ಇದೊಂದು ರಾಜಕೀಯದಿಂದ ಬೆಳೆದಿರುವ ದೋಷವಾಗಿರುವಾಗ ಅದನ್ನು ರಾಜಯೋಗದ ವಿಚಾರಗಳನ್ನು  ತಿಳಿದು ಅರ್ಥ ಮಾಡಿಕೊಳ್ಳಲು ಪ್ರಯತ್ನಪಟ್ಟವರಿಗಷ್ಟೆ ತಪ್ಪು ಯಾವುದು ? ಯಾರದ್ದು? ಸರಿ ಯಾರು? ಎಲ್ಲಿದೆ ಎಂದು ತಿಳಿಯಬಹುದು.ಕಾಲ ಮೀರುವ ಮೊದಲು  ಹಿಂದಿರುಗಿದರೆ ಮೂಲ ಸತ್ಯದ ಕಡೆಗೆ ನಿಧಾನವಾಗಿಯಾದರೂ  ಒಳಗಿರುವ ತಪ್ಪು ಕಲ್ಪನೆಗಳಿಂದ ಬಿಡುಗಡೆ ಪಡೆಯಬಹುದು. ಹೊರಗಿನವರು  ಕೊಟ್ಟಿರುವ ವಿಶೇಷಜ್ಞಾನವನ್ನು ಒಳಗಿರುವವರ ವಿಶೇಷಜ್ಞಾನದೆಡೆಗೆ ನಡೆಸಿದರೆ  ಸಂಪೂರ್ಣ ಸತ್ಯ ಅರ್ಥ ವಾಗದಿದ್ದರೂ  ಹೊರಗಿನ ಜ್ಞಾನದಿಂದ ನಮ್ಮ ಬುದ್ದಿ ಬೆಳೆದಿದೆ.ಆದರೆ ಸತ್ಯಜ್ಞಾನ‌ಕುಸಿದಿದೆ. ತತ್ವವಿಲ್ಲದ ತಂತ್ರ ಅತಂತ್ರವಾಗಿರುತ್ತದೆ.
ತಪ್ಪು ಮಾನವ ಮಾಡದೆ ಮರ ಮಾಡುವುದೆ? ಎನ್ನುವರು
ಸತ್ಯ .ಮಾನವನ ಮನಸ್ಸು ತಪ್ಪು ಗ್ರಹಿಕೆಗೆ ಒಳಪಟ್ಟಾಗ ತಿಳಿಯದೆಯೇ  ತಪ್ಪು ದಾರಿ ಹಿಡಿದರೂ ಸರಿಯಾದ ಮಾರ್ಗ ದರ್ಶಕರ ಗುರು ಹಿರಿಯರ ಹಿಂದೆ ಇರುವ ಸತ್ಯಜ್ಞಾನದ ಅನುಭವಪೂರಿತ  ಹಿತನುಡಿಗಳಿಂದ ಸರಿಪಡಿಸಿಕೊಂಡರೆ
ಉತ್ತಮ ಜೀವನ. ಅದುಬಿಟ್ಟು ಮಧ್ಯವರ್ತಿಗಳು ರಾಜಕಾರಣಿಗಳ ಹಿಂದೆ ನಡೆದರೆ ಇನ್ನಷ್ಟು ಅತಂತ್ರಸ್ಥಿತಿಗೆ ಜೀವನ ಬಂದು ನಿಲ್ಲುವುದು. ಸ್ವತಂತ್ರ ವಾಗಿರುವ ಒಂದೇ ಸತ್ಯವನರಿಯದೆ  ಅಸಂಖ್ಯಾತವಾಗಿ ಬೆಳೆದಿರುವ ಅನೇಕ ಅಸತ್ಯಕ್ಕೆ ಬೆಲೆಕೊಟ್ಟು  ತಪ್ಪು ಮಾಡಿದ ಜೀವಕ್ಕೆ ಹಿಂದಿರುಗಿ ಬರೋದಕ್ಕೆ  ಸಮಯಬೇಕಷ್ಟೆ. ಮಕ್ಕಳಿಗೂ ಹಾಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳದಿದ್ದರೆ ದೊಡ್ಡ ದಾಗಿ ಬೆಳೆದಾಗ ಶಿಕ್ಷೆ ಕೊಡಲೇಬೇಕು.ಆಗಲೂ  ಕೊಡದಿದ್ದರೆ ಅದೇ ಶಿಕ್ಷೆ ಪೋಷಕರು ಅನುಭವಿಸುವಂತಾಗಬಹುದು. ದೈಹಿಕ ಶಿಕ್ಷೆಗಿಂತ ಮಾನಸಿಕ ಹಿಂಸೆ ಹೆಚ್ಚು ನೋವಾಗುವುದಲ್ಲವೆ?
ತಪ್ಪು ಯಾರೇ ಮಾಡಲಿ ಅದು ತಪ್ಪೆ. ಇಂದು ಹಣದಿಂದ ನ್ಯಾಯಾಲಯವು ಬೆಳೆದಿದೆ ಎಂದರೆ ತಪ್ಪಿತಸ್ಥರು ಹೊರಗೆ  ಸ್ವತಂತ್ರವಾಗಿ ಬೆಳೆದಿರುವರು.ಇದಕ್ಕೆ ಕಾರಣ ಶಿಕ್ಷಣ.
ಗುರುವೇ ದಾರಿತಪ್ಪಿದರೆ ಶಿಷ್ಯನ ಗತಿ ಏನು?
ಮನೆಯೊಳಗೆ ಇರುವ ಗುರುಗಳೇ ಮಕ್ಕಳಿಗೆ ಹಣದಿಂದ ಬೆಳೆಸಿದ್ದರೆ  ಬೇಲಿಯೇ ಸರಿಯಿರದು.
ದೇಶ ರಕ್ಷಣೆ,ಧರ್ಮ ರಕ್ಷಣೆ ಮಾಡೋರೇ ತಪ್ಪಿತಸ್ಥ ರ ವಶದಲ್ಲಿದ್ದರೆ  ದೇಶ ಧರ್ಮ ಉಳಿಯುವುದೆ?

ಭಗವಂತನ ನ್ಯಾಯಾಲಯದಲ್ಲಿ ಒಂದೇ ನ್ಯಾಯ .ತಕ್ಕಡಿಯಲ್ಲಿ  ಎರಡು ಬಟ್ಟು ಇಟ್ಟು ಒಂದು ಹೆಚ್ಚು ತೂಗಿದರೆ ಇನ್ನೊಂದು ಕಡೆ ನಿಲ್ಲುವನು.ಆದರೆ ಅವನ‌ ಪ್ರತಿನಿಧಿಗಳಾದ ಮಾನವರು ಹಣಕ್ಕಾಗಿ ಭಗವಂತನನ್ನೇ ತೂಗಲು ಹೋದರೆ  ವಿನಾಶವಷ್ಟೆ.
ಎರಡೂ ಪಕ್ಷ ಭ್ರಷ್ಟಾಚಾರದ ಹಣದಲ್ಲಿಯೇ ದೇಶದ ಸಾಲ ತೀರಿಸುತ್ತೇವೆಂದರೆ ತೀರುವುದೆ? ದೇವರ ಸಾಲ ಶಿಷ್ಟಾಚಾರದ ಹಣದಲ್ಲಿಯೇ ತೀರಿಸಬೇಕಲ್ಲವೆ? ತಪ್ಪು ಯಾರದ್ದು? ದೇವರು ಮಾನವನನ್ನು ನಡೆಸಿದ್ದೆ? ಮಾನವ ದೇವರನ್ನು ಬೆಳೆಸಿದ್ದೆ? ದೈವತ್ವ ಬೆಳೆಸೋ ಶಿಕ್ಷಣ ನೀಡಿದಾಗಲೇ ತಪ್ಪು ಒಪ್ಪಿಕೊಳ್ಳಲು ಸಾಧ್ಯವಿದೆ ಎನ್ನುವುದು ಸನಾತನ ಧರ್ಮ.

ನೀನು ಮಾಯೆಯೋ ನಿನ್ನೊಳಗೆ ಮಾಯೆಯೋ?

ನೀನು ಮಾಯೆಯೋ ನಿನ್ನೊಳು ಮಾಯೆಯೋ ಎನ್ನುವಂತಿದೆ ಮನುಕುಲದ ಸ್ಥಿತಿಗತಿ. ಮಾಯಾಲೋಕದಲ್ಲಿ ವಿಹರಿಸುತ್ತಿರುವ ಮನಸ್ಸಿಗೆ  ಮನಸ್ಸಿಗೆ ಬಂದದ್ದೆ ಸತ್ಯವೆನ್ನುವ ಭ್ರಮೆ ಆವರಿಸಿದೆ. ಆದರೂ ಜೀವನ ನಡೆಸಲೇಬೇಕು ನಡೆಯುತ್ತದೆ  ನಡೆಯುತ್ತಲೇ ಇರುತ್ತದೆ. ಆದರೆ ಯಾರು ಯಾರನ್ನು ನಡೆಸೋದು ಎನ್ನುವ ಪ್ರಶ್ನೆ ಬಂದಾಗಲೇ ಮಾಯೆ ಆವರಿಸೋದು.ನಿನ್ನೊಳಗೆ ಪರಮಾತ್ಮನಿರುವನೋ ನೀನೇ ಪರಮಾತ್ಮನೋ ಎನ್ನುವ ಚರ್ಚೆ ನಡೆಸುವ ಹೊತ್ತಿಗೆ ವಾದ ವಿವಾದಗಳೇ ಸುತ್ತಿಕೊಂಡು  ಸತ್ಯಹೊರಗೆ ಬರದಂತೆ ತಡೆಯುತ್ತದೆ. ಇರುವ ಒಂದೇ ಸತ್ಯವನ್ನು ತಡೆಯುವುದರಿಂದ ಯಾರಿಗೆ ಲಾಭ ನಷ್ಟ ಎಂದರೆಮ ಅದೂ ಮಾನವನಿಗೇ ಅಷ್ಟೆ. ಯಾರು ಯಾರನ್ನೋ  ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದ ಜಗತ್ತಿನಲ್ಲಿ ತನ್ನ ತಾನರಿತು ಈ ಮಾಯೆಯಿಂದ ಹೊರಬರುವುದೇ ಜೀವನದ ಉದ್ದೇಶವೆಂದಿರೋ ಮಹಾತ್ಮರ ಹೆಸರಿನಲ್ಲಿಯೇ  ರಾಜಕೀಯ ವ್ಯವಹಾರ ಬೆಳೆದಾಗ ಇಂತಹ ದುರ್ಗತಿ  ಬರೋದು. ಇಷ್ಟಕ್ಕೂ ಇಲ್ಲಿ ನಾವ್ಯಾರು  ಜಗತ್ತನ್ನು ಸರಿಪಡಿಸಲು? ಜಗದೀಶ್ವರಿಯ ಕೃಪೆಯಿಂದ ಜನ್ಮ ತಾಳಿರುವ ಈ ಜೀವಾತ್ಮನಿಗೆ  ಪರಮೇಶ್ವರನೇ ಶ್ರೇಷ್ಠ ಎನ್ನುವುದು ಅರ್ಥ ವಾದಂತೆ ಪರಮೇಶ್ವರಿ  ಅರ್ಥ ವಾಗದಿರೋದಕ್ಕೆ  ಇಂದು ನಾರಿಯರು ಮಾರಿಯರಾಗಿರೋದು. ಇದಕ್ಕೆ ಕಾರಣವೇ ಕಷ್ಟಪಡದೆ ಕುಳಿತು ತಿನ್ನುವ ಜನರ ಸೋಮಾರಿತನ. ಇದನ್ನು ಬೆಳೆಸಿದ ಸರ್ಕಾರ ಇಂದಿಗೂ ತಮ್ಮ ದೋಷವನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದಿರೋದಕ್ಕೆ ಕಾರಣವೇ ಮಾಧ್ಯಮಗಳ ರಾಜಕೀಯ ಸುದ್ದಿ, ಅನಾವಶ್ಯಕ ವಿಚಾರಗಳ ಚರ್ಚೆ, ವಾದ ವಿವಾದದಿಂದಾಗುತ್ತಿರುವ ಮನಸ್ಸಿನ ವಿಕಲ್ಪ. ವಿಕಾರ ಮನಸ್ಸಿಗೆ ಕಾಣುತ್ತಿರುವ ಅಸತ್ಯ ಅನ್ಯಾಯ,ಭ್ರಷ್ಟಾಚಾರ. ಆ ಭ್ರಷ್ಟಾಚಾರ ವನ್ನೇ ವಿರೋಧಿಸುವಂತೆ ನಾಟಕವಾಡುವ ಅಸಂಖ್ಯಾತ ಮಧ್ಯವರ್ತಿಗಳು.. ಹೀಗೇ ಬೆಳೆಯುತ್ತಾ ಕಾಲ ಕಳೆಯುತ್ತಿದೆ .ಆದರೆ ಇವೆಲ್ಲದರ ಮೂಲವೇ ಅಜ್ಞಾನದ ಶಿಕ್ಷಣವೆಂದರೆ  ಒಪ್ಪಿಕೊಳ್ಳದ  ಪ್ರಜೆಗಳ ಒಳಗೇ ಮಾಯೆ ಇರೋವಾಗ  ಮಾಯಾಜಗತ್ತಿನಲ್ಲಿ  ನಾವಿರೋದು.
ನಮ್ಮೊಳಗಿನ ಮಾಯೆಯೇ ಜಗತ್ತನ್ನು ಬೆಳೆಸಿರೋದು ಎರಡೂ ಸರಿ. ಇದರಿಂದ ಹೊರಬರೋದಕ್ಕೆ ಮಹಾತ್ಮರಿಗೆ ಸಾಧ್ಯವಾಗಿತ್ತು. ಪಾಪಾತ್ಮರು, ಪುಣ್ಯಾತ್ಮರು, ಎನ್ನುವುದು  ಮಾನವನ ಧರ್ಮ ಕರ್ಮದ ಮೇಲಿತ್ತು.ಈಗ ಸೂಕ್ಷ್ಮ ವಾಗಿ ನೋಡಿದಾಗ ಯಾರು ಧರ್ಮದ ಹೆಸರಿನಲ್ಲಿ  ರಾಜಕೀಯ ನಡೆಸಿರುವರೋ ಅವರನ್ನು ಪುಣ್ಯವಂತರೆನ್ನಬಹುದೆ? ಅಥವಾ ಧರ್ಮ ದ ವಿರುದ್ದ ನಿಂತು ರಾಜಕೀಯಕ್ಕೆ ಇಳಿದವರನ್ನು ಪುಣ್ಯವಂತರೆನ್ನಬೇಕೆ? ಇಬ್ಬರಿಗೂ ಭಗವಂತ ಅಧಿಕಾರ ಹಣ ಸ್ಥಾನಮಾನ ಎಲ್ಲಾ ಕೊಟ್ಟಿರುವಾಗ ಇಬ್ಬರೂ ಪುಣ್ಯವಂತರೆ? ಅವರನ್ನು ಎತ್ತಿ ಮೇಲೆ ಕೂರಿಸಿ ನಮ್ಮನ್ನು ಆಳಿ ಎಂದಿರುವ ಪ್ರಜೆಗಳೇ ಪಾಪಿಷ್ಟರು. ಪಾಪ ಮಾಡಿದವರನ್ನು ಆಳೋದಕ್ಕೆ ಪುಣ್ಯ ಮಾಡಿರಬೇಕೆ? ಒಂದು ರೀತಿಯಲ್ಲಿ ಎಲ್ಲರೂ ಪಾಪದ ಕೂಪದಲ್ಲಿ ಮುಳುಗಿ ಭ್ರಷ್ಟಾಚಾರ. ನಡೆಸುತ್ತಾ ಜನರನ್ನು ತಮ್ಮೆಡೆ ಸೆಳೆದುಕೊಂಡು ಅಧಿಕಾರ ಪಡೆಯೋದರಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಸತ್ಯ,ಅನ್ಯಾಯ ಅಧರ್ಮ  ನಡೆಸಿದರೂ  ಮಧ್ಯವರ್ತಿಗಳು ಮಾಧ್ಯಮಗಳು ಇಬ್ಬರನ್ನೂ ಒಂದೇ ತಕ್ಕಡಿಯಲ್ಲಿಟ್ಟುಕೊಂಡು  ಹೆಚ್ಚು ತೂಗಿದವರತ್ರ ತಮ್ಮ ಪಾಲು ಪಡೆದು  ಜನರಿಗೆ ಸುದ್ದಿ ಹರಡೋದರಿಂದ ದೇಶಕ್ಕೆ ಕಷ್ಟ ನಷ್ಟ. ಇದನ್ನು  ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಳ್ಳಲು ನಾವು ಸಾಮಾನ್ಯ ಪ್ರಜೆಯಾಗಿದ್ದು ಆತ್ಮಸಾಕ್ಷಿ ಯ ಕಡೆಗಿದ್ದು ನಮ್ಮೊಳಗೇ ಅಡಗಿರುವ‌ಮಾಯೆಯಿಂದ ಹೊರಬರಲು ಪ್ರಯತ್ನಪಟ್ಟರೆ ಫಲ ಒಳಗೇ ಸಿಗಬಹುದಷ್ಟೆ. ಎಷ್ಟೋ ಯುಗಯುಗದಿಂದಲೂ  ಭೂಮಿಯಿದೆ ದೇವರು ಮಾನವರು ಅಸುರರಿದ್ದಾರೆ.ಯುದ್ದಗಳಾಗಿದೆ ಜೀವಹೋಗಿ ಜನ್ಮ ಪಡೆದಿದೆ...ಆದರೆ ಹಿಂದಿನ ಹೋದ ಜೀವ,ಜೀವನವನ್ನೇ ಮುಂದೆ ತಂದು  ಅವಾಂತರ ಮಾಡಿಕೊಂಡರೆ  ಮಾಯೆ ಹೆಚ್ಚಾಗಿದೆ ಎಂದಲ್ಲವೆ?
 **ನಗೆಯು ಬರುತಿದೆ ಎನಗೆ ನಗೆಯು ಬರುತಿದೆ ಜಗದೊಳಿರುವ‌ ಮನುಜರೆಲ್ಲ ಹಗರಣಮಾಡುವುದ ಕಂಡು....** ದಾಸರ ಈ ಪದದಲ್ಲಿ ಮಾಯೆಯಿಲ್ಲ ಸತ್ಯವಿದೆ ಅನಿಸೋದಿಲ್ಲವೆ?  ಕಾರಣ ಅವರು ಪರಮಾತ್ಮನ ದಾಸರಾಗಿದ್ದರು ಪರಕೀಯರ ದಾಸರಾಗಿರಲಿಲ್ಲ..
ಕಾಂಗ್ರೆಸ್ ಒಳಗೆ ಬಿಜೆಪಿ ಇದೆ,ಬಿಜೆಪಿಯೋಳಗೆ ಕಾಂಗ್ರೆಸ್ ಇದೆ ಅಂದರೆ ಪಕ್ಷಾಂತರವಾದಾಗ ಯಾರೊಳಗೆ ಯಾರು ಸೇರಿಕೊಂಡರೂ ಒಂದೇ ಬುದ್ದಿ. ಆದರೆ ದೇಶ ಒಂದೇ ಆದಾಗ  ದೇಶದೊಳಗೆ ಅಡಗಿರುವ ಅನೇಕ ಧರ್ಮ, ಜಾತಿ,ಗಡ,ಪಕ್ಷದ ಉದ್ದೇಶ  ಯಾರ ಕಡೆಗಿದೆ ಎನ್ನುವ ಪ್ರಶ್ನೆ ಎದ್ದಾಗ ವಿದೇಶಿ ವ್ಯವಹಾರ ಶಿಕ್ಷಣ, ಬಂಡವಾಳ,ಸಾಲ  ಒಳಗೆ ತಂದು ನಾವೇ ಬೇರೆ ನೀವೇ ಬೇರೆ ಎಂದರೆ  ಹೇಗಿದೆ?
ಜಿಪುಣನಾದರೂ ಮಹಾದಾನಿಯಾಗಬಹುದು ಆದರೆ ಈ ಉಚಿತವಾಗಿ  ಕೊಟ್ಟು ದುಂದುವೆಚ್ಚ ಮಾಡಲು ಬಿಡುವವರನ್ನು  ದಾನವರು ಎಂದು ಪುರಾಣ ತಿಳಿಸಿದೆ.
ಒಟ್ಟಿನಲ್ಲಿ  ಅಸುರೊಳಗೇ ಸುರರೂ ಅಡಗಿರುವಾಗ ಯಾರು ಸ್ವತಂತ್ರ ರು? ಅತಂತ್ರರು?  ಎಲ್ಲಾ ಮಾಯೇ ಮೋಹದ ಜಾಲದಲ್ಲಿರುವ ಮಾನವರೆ ಆದಾಗ ಮನಸ್ಸು‌ ಒಂದಾಗೋದು ಕಷ್ಟ.ಕಾರಣ ಚಂಚಲ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು‌ ಸಮಾಜ,ಸಂಸಾರದ ರಾಜಕೀಯದಲ್ಲಿ  ಬದುಕಿರುವುದೇ ದೊಡ್ಡ ಸಾಧನೆ ಎನ್ನಬಹುದೆ? ನಾವೆಲ್ಲರೂ ಸಾಧಕರೆ  ಆದರೆ  ನಮ್ಮ ಸಾಧನೆಯ ಫಲ ಇನ್ಯಾರೋ ಪಡೆದು ಮುಂದೆ ಹೋಗಲು ಸಹಕರಿಸಿರುವುದಾಗಿದೆ. ಎಷ್ಟು ‌ಮುಂದೆ ಮೇಲೆ ಹೋದರೂ ಹಿಂದಿರುಗಿ ಬರಬೇಕೆಂಬುದೆ ಹಿಂದೂ ಧರ್ಮದ ತಿರುಳು.
ಸುತ್ತ ಸುತ್ತಿಕೊಂಡಿರುವ ಮಾಯಾಜಾಲದಿಂದ ಬಿಡುಗಡೆ ಪಡೆಯೋದೇ  ಜೀವನದ ಗುರಿ  ಎನ್ನುವುದು ಅಧ್ಯಾತ್ಮ.

Monday, February 26, 2024

ಮಾನವ ಅದರಲ್ಲಿ ಭಾರತೀಯರು ಎಡವಿದ್ದೆಲ್ಲಿ?

ಮಾನವರು ಎಡವಿದ್ದೆಲ್ಲಿ ಎನ್ನುವ ಪ್ರಶ್ನೆಬಂದರೆ ಶಿಕ್ಷಣದಲ್ಲಿ ಎನ್ನುವ ಉತ್ತರ ಬರುತ್ತದೆ. ಶಿಕ್ಷಣ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರಬೇಕು.ಅವರೊಳಗಿದ್ದ ಆತ್ಮವಿಶ್ವಾಸ ಹೆಚ್ಚಿಸಬೇಕು ಅವರ ಜೀವನ ಅವರೇ ನಡೆಸಿಕೊಳ್ಳುವಂತಾಗಬೇಕಾದರೆ ಅವರ ಸಂಶೋಧನೆ  ಯಾರೋ  ಹೊರಗಿನವರು ನಡೆಸಬಹುದೆ? ಆತ್ಮಜ್ಞಾನಿಗಳಿಗೆ ಸಾಧ್ಯವಿದೆ ಮನೋವಿಜ್ಞಾನಿಗಳಿಗೂ ಸಾಧ್ಯವಿದೆ.ಹೀಗಾಗಿ ಪ್ರಾಥಮಿಕ ಶಿಕ್ಷಣದಲ್ಲಿಯೇ ಇವರನ್ನು ಶಿಕ್ಷಕರನ್ನಾಗಿಸಿ ಮಕ್ಕಳ ಲ್ಲಿ ಅಡಗಿರುವ‌ ಜ್ಞಾನ,ಆಸಕ್ತಿ ಪ್ರತಿಭೆಯನ್ನು ಗುರುತಿಸಿ ಅದೇ ವಿಷಯಕ್ಕೆ ಪೂರಕವಾದ ಹೆಚ್ಚಿನ ಶಿಕ್ಷಣ  ನೀಡಿದಾಗಲೇ ಪರಿಪೂರ್ಣತೆ  ಮಕ್ಕಳಲ್ಲಿ ಕಾಣಬಹುದು.
ಯಾರಿಗೆ ಗೊತ್ತು ಯಾವ ದೇಹದಲ್ಲಿ ಯಾವ ಮಹಾತ್ಮರಿರುವರೋ? ಮಹಾತ್ಮರನ್ನು ಪ್ರತಿಮೆಯಾಗಿ ದೇವರಾಗಿ  ಹೊರಗಿಟ್ಟು ತಮ್ಮ ಸ್ವಾರ್ಥ ದ ರಾಜಕೀಯ ನಡೆಸೋ ಬದಲಾಗಿ‌ಮಕ್ಕಳನ್ನೇ ಮಹಾತ್ಮರಾಗಿಸುವತ್ತ ನಡೆಸಿದರೆ  ಉತ್ತಮ ಬದಲಾವಣೆ ಸಾಧ್ಯವಿದೆ.
ನಾವ್ಯಾರು? ನಾನ್ಯಾರು? ಎಂಬ‌ಪ್ರಶ್ನೆ ಒಳಗಿನಿಂದ ಬರೋದೇ ಬೇರೆ, ನೀನ್ಯಾರೆಂದು ತಿಳಿಸೋದೇ ಬೇರೆ .ಒಟ್ಟಿನಲ್ಲಿ ಯಾರೋ ನಮ್ಮ ಜೀವನ ನಡೆಸುವರೆಂದು ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಸೋತರೆ  ಹೊರಗಿನವರೆ ಬೆಳೆಯೋದು. ಈಗಲೂ  ಕಾಲಮಿಂಚಿಲ್ಲ.ನಿಮ್ಮ‌ನಿಮ್ಮ ಮಕ್ಕಳ ಭವಿಷ್ಯ ಸರ್ಕಾರ ಕೊಡುವ ಶಿಕ್ಷಣದಲ್ಲಿಲ್ಲ.ನನೀವೇ ಕೊಡುವ ಸಂಸ್ಕಾರಯುಕ್ತ ಜ್ಞಾನದಲ್ಲಿದೆ.ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಮನೋವೈಧ್ಯರಾಗಲೇಬೇಕಿಲ್ಲ.ನಮ್ಮ ಮನಸ್ಸನ್ನು ಸ್ವಚ್ಚ ಮಾಡಿಕೊಂಡು  ಒಳ ಜಗತ್ತನ್ನು ಅರ್ಥ ಮಾಡಿಕೊಳ್ಳುತ್ತಾ ಹೊರಗಿನ ಸತ್ಯಾಸತ್ಯತೆಯನ್ನು ತಿಳಿದರಾಯಿತು. ನಾವೀಗ ಒಳಗೇ  ಸರಿಯಾಗಿ ತಿಳಿಯದೆ ಹೊರಗೆ ಬಂದಿರುವಾಗ ನಮ್ಮ  ಶಕ್ತಿಯನ್ನು  ಹಂಚಿಕೊಂಡು ಬೆಳೆಯುವ ಮಕ್ಕಳ ಗತಿ ನಮ್ಮ ಮನಸ್ಥಿತಿಯ ಮೇಲಿದೆ.ಶಿಕ್ಷಣದಿಂದ ಮಾನವನಿಗೆ ಶಾಂತಿ ಸಿಗಬೇಕೇ ಹೊರತು ಅಶಾಂತಿಯಾಗಬಾರದು. ಇಲ್ಲಿ ಭಾರತೀಯ ಶಿಕ್ಷಣವನ್ನು ಎಲ್ಲರೂ ಹೊಗಳುವರೆ ಆದರೆ ಕೊಡೋ ಶಿಕ್ಷಣದಲ್ಲಿ ಭಾರತೀಯತೆ ಇದೆಯೆ ಎನ್ನುವ ಬಗ್ಗೆ ಚಿಂತನೆ ನಡೆಸಿದರೆ ಇಲ್ಲ ಎನ್ನುವ ಉತ್ತರ ಬಂದರೂ ಕೊಡಲು ತಯಾರಿಲ್ಲ.ಕಾರಣ ಅದರ ಆಳ ಅಗಲ ಅಷ್ಟು ಸುಲಭವಾಗಿ ಅರ್ಥ ವಾಗದು.ನಾವೇ ಆಳಕ್ಕಿಳಿದು ಅರ್ಥ ಮಾಡಿಕೊಳ್ಳಲು ಸರ್ಕಾರ ಬಿಡದು.ಸರ್ಕಾರ ಎಂದರೆ ಸಹಕಾರ ಎಂದರ್ಥ. ನಮ್ಮವರೆ ನಮಗೆ ವಿರುದ್ದವಿದ್ದರೆ  ಏನರ್ಥ?
ಎಲ್ಲಾ ಅನರ್ಥಗಳ ಮೂಲವೇ ಅರ್ಥ ವಿಲ್ಲದ ಶಿಕ್ಷಣ. ಇಲ್ಲಿ ಅರ್ಥ ಎಂದರೆ ಹಣವಲ್ಲ.ಹಣಸಂಪಾದನೆಯೇ ಮುಖ್ಯವಾಗಿರುವಾಗ  ಜ್ಞಾನದಿಂದ  ಹಣಸಂಪಾದಿಸಲು ಬೇಕಿದೆ  ಆತ್ಮವಿಶ್ವಾಸ ಆತ್ಮಬಲ ಹೆಚ್ಚಿಸುವ ಶಿಕ್ಷಣ.ಇದೇ  ಮಾನವನ  ಆಸ್ತಿಯಾಗಿದೆ ಎಂದಿರೋದು ಮಹಾತ್ಮರು.
ಮಹಾತ್ಮರ ಹೆಸರಿನಲ್ಲಿ ಅಸುರರೂ ಹಣಗಳಿಸಿ ಆಳುವರು.ಇದರಿಂದಾಗಿ  ಯಾರಿಗೆ ಕಷ್ಟ ನಷ್ಟ? ನಮ್ಮ ಕಷ್ಟ ನಷ್ಟಕ್ಕೆ ಕಾರಣವೇ ನಾವೇ  ಬೆಳೆಸಿಕೊಂಡು ಬಂದಿರುವ ಪಾಶ್ಚಾತ್ಯ ಧರ್ಮ, ಶಿಕ್ಷಣ, ವ್ಯವಹಾರ, ಸಂಸ್ಕೃತಿ, ಭಾಷೆ ಎಂದರೆ ಇದರಲ್ಲಿ ನಮ್ಮದೇನಿದೆ? ಎಲ್ಲಾ ಪರರದ್ದೆ ಆದಾಗ ಪರಮಾತ್ಮನ ದರ್ಶನ ವಾಗದು.ಕಾರಣ ಪರಮಾತ್ಮನಿರೋದು  ಯೋಗ ಶಿಕ್ಷಣದಲ್ಲಿ ಇಂದು ಯೋಗದ ಹೆಸರಿನಲ್ಲಿಯೇ ಭೋಗವಡಗಿದೆ.ಕೆಲವರಷ್ಟೆ ಉತ್ತಮ ಶಿಕ್ಷಣ ನೀಡಿದ್ದರೆ ಅನೇಕರಿಗೆ ನಾವೆಲ್ಲರೂ ಎಲ್ಲಿ ತಪ್ಪಿದ್ದೇವೆಂಬ ಅರಿವಾಗದೆ ರಾಜಕೀಯದ ವಶದಲ್ಲಿದ್ದಾರೆ.
ಸ್ವತಂತ್ರ ಭಾರತಕ್ಕೆ ಬೇಕಿದೆ ಸ್ವತಂತ್ರ ಜ್ಞಾನ ಗುರುತಿಸುವ ಗುರು ಹಾಗು ಶಿಕ್ಷಣ . ಸಿಗುವುದೆ?
ಮನೆಮನೆಯೊಳಗೆ ಗುರುಕುಲವಿದ್ದ ಭಾರತವೀಗ ಮನೆಯೊಳಗೆ ಇದ್ದ ಮೊದಲ ಗುರು ವನ್ನೇ ಹೊರಗೆ ದುಡಿದು ಬರುವಂತೆ ಮಾಡುತ್ತಾ ವಿಪರೀತ ಸಾಲದೊಳಗೆ ಮುಳುಗಿಸಿ ರಾಜಕೀಯಕ್ಕೆ ಜನರನ್ನು ಎಳೆದಿದೆ.ಜೊತೆಗೆ ಮಕ್ಕಳು ಯುವಕರ  ಜ್ಞಾನಶಕ್ತಿ  ಭೌತವಿಜ್ಞಾನದ ಕಡೆಗೆ ಹೆಚ್ಚಾಗಿ ಅಧ್ಯಾತ್ಮ ಸತ್ಯ ಹಿಂದುಳಿದರೆ ಆತ್ಮದುರ್ಭಲ ವಾಗಿರುತ್ತದೆ.
ಇಂತಹ ದುರ್ಭಲರನ್ನು ಆಳೋದಕ್ಕೆ ಬಹಳಸುಲಭ.ಅಸತ್ಯವೇ ಇದರ ಬಂಡವಾಳ. ಇದರೊಂದಿಗೆ ಅಧರ್ಮ ವೂ ಜೊತೆಯಾಗಿ  ವೈಭೋಗಕ್ಕೆ  ಸಾಲದ ಹೊರೆ ಏರಿಸಿಕೊಂಡು  ಜನರಜೀವ‌ ಹೋಗುತ್ತಿದೆ. ಎಲ್ಲಿಯವರೆಗೆ ಸತ್ಯಜ್ಞಾನ  ಅರ್ಥ ವಾಗದೋ ಅಲ್ಲಿಯವರೆಗೆ ಮಿಥ್ಯದ ಜಗತ್ತನ್ನು  ಅಧರ್ಮ ಆಳುತ್ತದೆ. ಒಟ್ಟಿನಲ್ಲಿ ಎಲ್ಲಾರೂ ಮಾಡೋದು ಹೊಟ್ಟಗಾಗಿ ಗೇಣುಬಟ್ಟೆಗಾಗಿ ಎನ್ನುವುದನ್ನು ಈಗಿನ ರಾಜಕೀಯದಲ್ಲಿ ಎಲ್ಲರೂ ಮಾಡೋದು ಓಟಿಗಾಗಿ ನೋಟು ಸೀಟಿಗಾಗಿ ಎಂದರೆ ಸರಿಯಾಗಬಹುದು. ಇದಕ್ಕೆ ಸರಿಯಾದ ಪ್ರಜಾಸರ್ಕಾರ  ಮೋಸಹೋಗಿರೋದೇ ಶಿಕ್ಷಣದಲ್ಲಿ ಎಂದರೆ  ವಿರೋಧಿಸೋರು ನಮ್ಮವರೆ  ಕಾರಣ ಹೆಚ್ಚಿನ  ಜನರು ಪರಕೀಯರ ವಶದಲ್ಲಿರುವಾಗ ಜ್ಞಾನವೂ ನಮ್ಮದಾಗಿರದು. ಕಾಲ ಬದಲಾಗೋದು ನಮ್ಮ ಮನಸ್ಥಿತಿಯ ಮೇಲಿರುತ್ತದೆ.ಮನಸ್ಸು ನಮ್ಮದೇ ಜ್ಞಾನದೆಡೆಗೆ ಇದ್ದರೆ ಶಾಂತಿ ಸಿಗುತ್ತದೆ. ಇಷ್ಟು ತಿಳಿಯಲು ಪುರಾಣ ಇತಿಹಾಸ ಕೆದಕುವ ಅಗತ್ಯವಿಲ್ಲ.ಮನಸ್ಸನ್ನರಿತು ನಡೆಯುವ ಮನುಷ್ಯರಾಗಿದ್ದರೆ ಸಾಕು.
NEP ಬಂತು ಹಾಗೇ ಹೋಯಿತು.ಕಾರಣ ಇಲ್ಲಿ ಪಕ್ಷ‌ಬದಲಾವಣೆ ಹೆಛಚಾಗಿದೆಯೇ ಹೊರತು ಪೋಷಕರ ಮನಸ್ಥಿತಿ ಬದಲಾಗಿಲ್ಲ. ಮಕ್ಕಳು ಪೋಷಕರು ಕುಣಿಸಿ ಆಡಿಸೋ ಗೊಂಬೆಗಳಾಗಿರೋದು ದುರಂತಕ್ಕೆ ಕಾರಣ.ಇದೇ ಗೊಂಬೆಗಳು ಬೆಳೆದು ನಿಂತಾಗ  ಪೋಷಕರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೋಲುವರು.ಕಾರಣ ಮೊದಲು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸೋತವರು ಪೋಷಕರೆ ಆದಾಗ ಕರ್ಮಕ್ಕೆ ತಕ್ಕಂತೆ ಫಲ. ಇದರಲ್ಲಿ ದೇವರು ಏನು ಮಾಡಲು ಸಾಧ್ಯ? ತಂದೆತಾಯಿಯರೆ ದೇವರೆನ್ನುವುದು ಸತ್ಯವಾದಾಗ ದೈವತ್ವ ದೆಡೆಗೆ ನಡೆಸಿದರೆ ದೇವರಾಗಬಹುದು. ದೈವೀಕ ಗುಣಸಂಪತ್ತನ್ನು ಯಾರೂ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಒಳಗಿನಿಂದ ಬೆಳೆಸಬಹುದಷ್ಟೆ. ಅದು  ನಿಜವಾದ ಶಿಕ್ಷಣವೆನ್ನುವರು ಮಹಾತ್ಮರು. ಯಾವುದನ್ನು ಕೊಡಬೇಕಿತ್ತೋ ಕೊಡದಿದ್ದರೆ ಯಾವುದು ಆಗಬಾರದಿತ್ತೋ ಅದೇ ಆಗೋದು.ಪ್ರಜಾಪ್ರಭುತ್ವದ ಪ್ರಜೆಗಳಿಗೆ ಧಾರ್ಮಿಕ ಶಿಕ್ಷಣ ಕೊಡುವುದೇ ಧರ್ಮ ವಾಗಿತ್ತು.ಧಾರ್ಮಿಕ ಕ್ಷೇತ್ರಗಳಿವೆ ಆದರೆ ಶಿಕ್ಷಣವೇ ವಿರುದ್ದವಾಗಿದೆ ಎಂದಾಗ ಇದು ಯಾರ ತಪ್ಪು?
ಶಿಕ್ಷಣವೇ ರಾಜಕೀಯ ವ್ಯವಹಾರಕ್ಕೆ ತಿರುಗಿದರೆ ಅಧರ್ಮ.
ಅದು ಧಾರ್ಮಿಕ ಕ್ಷೇತ್ರದಲ್ಲಿಯೂ ನಡೆದಿರೋದನ್ನು ಈಗ ಕಾಣಬಹುದು. ಬದಲಾವಣೆ ಆಗುತ್ತಿದೆ ಅದಕ್ಕೆ ನಮ್ಮ ಸಹಕಾರ ಬೇಕಷ್ಟೆ.ಇದರಲ್ಲಿ ದ್ವೇಷವಿರಬಾರದಲ್ಲವೆ? ನಮ್ಮ ತಪ್ಪಿಗೆ ನಾವೇ ಕಾರಣವಾದಾಗ ಯಾರನ್ನು ದ್ವೇಷ ಮಾಡಬೇಕು? ದ್ವೇಷದಿಂದ ಜ್ಞಾನ ಕುಸಿಯುತ್ತದೆ. ಅಸತ್ಯ ಅಧರ್ಮ ಅನ್ಯಾಯ ಬೆಳೆಯುತ್ತದೆ. ಇದುಇನ್ನಷ್ಟು ಕಷ್ಟ ನಷ್ಟಕ್ಕೆ ದಾರಿಯಾಗುತ್ತದೆ.ಜೀವನವೇ ಹೀಗೆ ಈಸಬೇಕು ಇದ್ದು ಜೈಸಬೇಕು.ಇದಕ್ಕೆ ಉತ್ತಮ ಶಿಕ್ಷಣದ. ಜೊತೆಗೆ ಅನುಭವಿ ಜ್ಞಾನಿಗಳು ಶಿಕ್ಷಕರಾಗಬೇಕಿದೆ.
ಸಂನ್ಯಾಸಿ ಸಂಸಾರಿಯ ಸಮಸ್ಯೆಯನ್ನು ಅನುಭವಿಸಿ ತಿಳಿಯಲಾಗದು. ಹೀಗಾಗಿ ಸಂಸಾರಿಗಳಲ್ಲಿಯೇ ಒಗ್ಗಟ್ಟು ಹೆಚ್ಚಾಗುವ  ಜ್ಞಾನವಿರಬೇಕೆಂದರೆ ಜ್ಞಾನದ ಶಿಕ್ಷಣ ಪಡೆಯಬೇಕಿದೆ.
ಪುರಾಣದ ರಾಜರ ಕಾಲ ಹೋಗಿ ಪ್ರಜಾಪ್ರಭುತ್ವ ಬಂದಿದೆ ಎಂದರೆ ಪ್ರಜೆಗಳೇ  ಎಲ್ಲದ್ದಕ್ಕೂ ಕಾರಣರಾಗಿದ್ದಾರೆಂದರ್ಥ.ಇದರ ಮೂಲವೇ ಅಜ್ಞಾನದ ಶಿಕ್ಷಣ. ಅಜ್ಞಾನವೆಂದರೆ ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ.ಅದರೊಂದಿಗೆ ನಡೆದವರೆ ಮಹಾತ್ಮರಾದವರು  ಇಂದಿಗೂ ಅಮರರು.ಅವರನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ನಾವೆಲ್ಲರೂ ಇಂದಿನ ಸಮಸ್ಯೆಗೆ ಕಾರಣಕರ್ತರಾಗಿರುವಾಗ ಹೊರಗಿನವರನ್ನು ವಿರೋಧಿಸುವ ಮೊದಲು ನಮ್ಮೊಳಗೇ ಹೊಕ್ಕಿ ಸತ್ಯ ತಿಳಿದರೆ ಉತ್ತಮ ಬದಲಾವಣೆ ಸಾಧ್ಯವಲ್ಲವೆ? ಭೌತವಿಜ್ಞಾನ ಅಗತ್ಯ ಆದರೆ ಅಧ್ಯಾತ್ಮ ವಿಜ್ಞಾನ ಮೂಲ ಶಿಕ್ಷಣ ಅತ್ಯಗತ್ಯ.ಯಾವುದೂ ಅತಿಯಾದರೆ ಗತಿಗೇಡು.ಹಣವಿದೆಯೆಂದು ಜನರನ್ನು ಕೊಂಡುಕೊಂಡರೆ ಅನರ್ಥಕ್ಕೆ ದಾರಿಯಾಗುತ್ತದೆ.

Friday, February 23, 2024

ಜೀವನಾನುಭವ ಜೀವಾತ್ಮನಿಗಷ್ಟೆ ಅರಿವಿಗೆ ಬರೋದು

ನನ್ನ ಜೀವನಾನುಭವದಲ್ಲಿ  ತಿಳಿದ ಸದ್ವಿಚಾರವನ್ನು ಕೇಳೋರಿಲ್ಲದೆ  ಹೋದಾಗ ತನ್ನಲ್ಲಿಯೇ ಅಡಗಿರುವ  ಶಕ್ತಿಯ ದರ್ಶನ ವಾಗಿ  ಅದರಂತೆ‌ನಡೆಯಲು ಸಾಧ್ಯವಾಯಿತು.
ಅಂದರೆ ಸತ್ಯ ಯಾವತ್ತೂ ಒಳಗಿರುತ್ತದೆ ಅದನ್ನು ‌ನಂಬಿದವರಿಗಷ್ಟೆ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಸಾಧ್ಯವೆನ್ನುವ ಸನಾತನ ಹಿಂದೂ ಧರ್ಮ ಈಗಲೂ  ಸ್ಥಿರವಾಗಿದೆ ಆದರೆ ಹಿಂದೂಗಳಲ್ಲಿ ಒಳಗಿರುವ ಸತ್ಯ‌ಕಾಣದೆ ಹೊರಗಿನ‌ಸತ್ಯ‌ಕಾಣುತ್ತಿರುವ ಕಾರಣದಿಂದ  ಜಗತ್ತು  ವೈಜ್ಞಾನಿಕ ದೃಷ್ಟಿಯಿಂದ ಸರಿಯಿದೆ ವೈಚಾರಿಕತೆಯಲ್ಲಿ  ತಪ್ಪಾಗಿ ಕಾಣುತ್ತಿದೆ. ವಿಚಾರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ.ಆದರೆ, ಆತ್ಮಸಾಕ್ಷಿ  ಕಾಲಕಾಲಕ್ಕೂ ಒಂದೇ ಇರುತ್ತದೆ.ಅದನ್ನರಿತು‌ನಡೆದಾಗಲೇ ಆಚಾರ ವಿಚಾರ‌ಪ್ರಚಾರದಲ್ಲಿರುವ ಲೋಪದೋಷಗಳನ್ನು  ಅರ್ಥ ಮಾಡಿಕೊಂಡು ಸರಿಪಡಿಸಬಹುದು. ಇದು ಎಲ್ಲರ ಮನೆಯ ದೋಷವಾಗಿರುವಾಗ  ಅವರವರ ದೋಷಗಳನ್ನು  ಉತ್ತಮ ಗುರು ಶಿಕ್ಷಣದಿಂದ  ಮನೆಯೊಳಗೆ ಸರಿಪಡಿಸಿಕೊಂಡರೆ ಮುಂದಿನ‌ಪೀಳಿಗೆ ಸ್ವಚ್ಚವಾಗಿರಬಹುದು. ಒಳಗೇ‌ಹುಳುಕಿರುವಾಗ ಹೊರಗಿನ‌ಕೊಳಕನ್ನು‌ತೊಳೆದರೂ ವ್ಯರ್ಥ. ಇದೇ ನಮ್ಮ ಅಹಂಕಾರ ಸ್ವಾರ್ಥ ದ ಜೊತೆಗೆ ಅಸತ್ಯ ಅಧರ್ಮ ವನ್ನೂ  ಬೆಳೆಸಿದೆ. ಒಟ್ಟಿನಲ್ಲಿ ನಮ್ಮನ್ನು ನಾವು ಸಂಸ್ಕರಿಸಿಕೊಳ್ಳದೆ ಮಕ್ಕಳನ್ನು ಸಂಸ್ಕರಿಸುವುದು‌ಕಷ್ಟ.
ಇದರಲ್ಲಿ ರಾಜಕೀಯ ಬೆರೆತಾಗಲೇ‌ ಕಷ್ಟನಷ್ಟದ ವ್ಯವಹಾರವಾಗಿರೋದು. ಹಣದ ಲಾಭ ಜ್ಞಾನದ ನಷ್ಟ. ಹೀಗಾಗಿ  ಜ್ಞಾನದಿಂದ ಹಣಗಳಿಸಿ ದಾನಧರ್ಮ ದೇವರ ಕಾರ್ಯ ನಡೆಸಿದರೆ ಉತ್ತಮ ಬದಲಾವಣೆಯ ಗಾಳಿ ಬೀಸುವುದು.
ಭ್ರಷ್ಟಾಚಾರ ದ ಹಣದಲ್ಲಿ ಎಷ್ಟು ಗುಡಿಗೋಪುರ ಪ್ರತಿಮೆಗೆ ಪೂಜಿಸಿದರೂ  ಜನರ ಹಣ ಅಸುರರ ಪಾಲಾಗುವುದು.
ಪ್ರತ್ಯಕ್ಷವಾಗಿ ಕಾಣುತ್ತಿರುವ ಸತ್ಯವಾಗಿದೆ. ಸಾಲದ ಹಣದಲ್ಲಿ ದೇಶ ನಡೆಸೋದಾಗಲಿ,ಸಂಸಾರ ನಡೆಸೋದಾಗಲಿ,ಸಮಾಜಸೇವೆ ಮಾಡೋದಾಗಲಿ ನೀರಿನಲ್ಲಿ ಹೋಮಮಾಡಿದಂತೆ.ಇದರಲ್ಲಿ ಯೋಗವಿಲ್ಲ.‌ಯೋಗವೆಂದರೆ ಕೂಡುವುದು.ಪರಮಾತ್ಮನ ಜೀವಾತ್ಮ ಕೂಡಿ  ನಡೆಸೋ ಎಲ್ಲಾ ಕಾರ್ಯ  ಯೋಗವಾಗುತ್ತದೆ.ಅದು ಜ್ಞಾನ,ಭಕ್ತಿ ಕರ್ಮಯೋಗದ ಮೂಲಕ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ  ಇರಬೇಕು ಎಂದು ಭಗವದ್ಗೀತೆ  ತಿಳಿಸಿದೆ. ಆದರೆ ಇಂದು ಗೀತೆಯನ್ನು ವಿರೋಧಿಸಿ   ತಿಳಿಯದೆಯೇ ಅಸತ್ಯ ಅಧರ್ಮ ಅನ್ಯಾಯದಲ್ಲಿಯೇ ದೇವರನ್ನು  ದೇವಸ್ಥಾನವನ್ನು  ಧರ್ಮ ವನ್ನು  ಉಳಿಸುತ್ತೇವೆಂದವರು  ದೇಶ ಆಳುತ್ತಿರೋದು  ಯಾತ್ರಾ ಸ್ಥಳದ ಪವಿತ್ರತೆಗೇ ದಕ್ಕೆಯಾಗುತ್ತಾ ಪ್ರವಾಸಿ ತಾಣದ ವ್ಯವಹಾರವೇ ಮುಖ್ಯವಾಗಿರೋದು‌  ಭಾರತಕ್ಕೆ ನುಂಗಲಾರದ ತುತ್ತಾಗಿದೆ.  ಆ ವ್ಯವಹಾರದ ಹಣವನ್ನು ದುರ್ಭಳಕೆ ಮಾಡಿಕೊಳ್ಳುವವರ ಅಜ್ಞಾನಕ್ಕೆ‌ಮಿತಿಯೇ ಇಲ್ಲ.ವಿನಾಶಕಾಲೇ ವಿಪರೀತ ಬುದ್ದಿ ಎಂದರೆ  ಹೀಗೆಯೇ  ಇರಬೇಕು.ಕೆಲವೆಡೆ ಶುದ್ದವಿದ್ದರೂ ಅಲ್ಲಿಯೂ ರಾಜಕೀಯ ಪ್ರವೇಶ ಮಾಡುತ್ತಿರುವುದು‌ ಎಷ್ಟು ಸರಿ? ಹಣದಿಂದ ದೇವರೆ? ಜ್ಞಾನದಿಂದ ದೈವತ್ವವೆ?
ಸತ್ಯ ತಡೆದಷ್ಟೂ ದೂರವಾಗುತ್ತದೆ.ಆದರೆ ಹಿಂದಿರುಗಿ ಬರೋವಾಗ ಕಠೋರವೆನಿಸುತ್ತದೆ.  ಪಾಪಕ್ಕೆ ಪ್ರಾಯಶ್ಚಿತ್ತವೇ ಮದ್ದು. ಕರ್ಮಕ್ಕೆ ತಕ್ಕಂತೆ  ಪ್ರತಿಫಲ.
ಹಿಂದೂ ಧರ್ಮಕ್ಕೆ ಅಪಾಯವಿಲ್ಲ ಹಿಂದೂಗಳಿಗೆ ಅಪಾಯವಿದೆ.ಹಿಂದಿರುಗಿ‌ ಬಂದು ಸತ್ಯ ಧರ್ಮ ದೆಡೆಗೆ ನಡೆಯೋದೊಂದೇ ಇದಕ್ಕಿರುವ ಉಪಾಯ. ಅವರವರ ಮನೆಯ ಸಾಲ ಸರ್ಕಾರ ತೀರಿಸಬೇಕೆ? ಮನೆಯವರ ಸಹಕಾರವಿದ್ದರೆ ದುಡಿದು‌ ತೀರಿಸುವ  ಜ್ಞಾನವಿರಬೇಕಷ್ಟೆ. ಅದೇ ಹೊರಗಿನವರದ್ದಾಗಿದ್ದರೆ‌ ಹೊರಗಿನ ಸಾಲವೇ ಹೆಚ್ಚುವುದು. ಇಷ್ಟೊಂದು  ಹೋರಾಟ ಹಾರಾಟ ಮಾರಾಟದಿಂದ ಏನಾದರೂ  ಶಾಂತಿ ಸಿಕ್ಕಿತೆ? ಶಾಂತಿಯಿಂದ ಮಾತ್ರ  ಸತ್ಯದರ್ಶನ. ಬೆಂಕಿ ಆರುವಾಗ ದೊಡ್ಡದಾಗಿ ಉರಿಯುವಂತೆ‌ ವಿನಾಶಕಾಲೇ ವಿಪರೀತ ಬುದ್ದಿ ಬೆಳೆದಿದೆ.ಅದರಲ್ಲಿ ಸತ್ಯದ ಕೊರತೆಯಿದೆ. ಸತ್ಯವೇ ದೇವರಾದರೆ ಸತ್ಯ ಎಲ್ಲಿದೆ? ಧರ್ಮ ಯಾವುದು?
ಆತ್ಮಾವಲೋಕನ ನಡೆಸಿಕೊಳ್ಳಲೂ  ಅನೇಕರಿಗೆ ಕಷ್ಟವಿದೆ.

ಮಹಾತ್ಮರ ಜೀವಕ್ಕೂ ಸಾಮಾನ್ಯರ ಜೀವಕ್ಕೂ  ಅಂತರ ಬೆಳೆದಂತೆಲ್ಲಾ ಮಧ್ಯವರ್ತಿಗಳ ಜೀವನವೇ ಹೆಚ್ಚಾಗುತ್ತದೆ.
ಇಲ್ಲಿ  ಜೀವಕ್ಕೆ ಸಾವಿದೆ ಆತ್ಮಕ್ಕಿಲ್ಲವೆಂದವರು ಮಹಾತ್ಮರಾದರು, ಜೀವ ಎಲ್ಲರಲ್ಲಿಯೂ ಇದೆ‌ಜೀವಿಸುವ‌ಹಕ್ಕು ಎಲ್ಲರಿಗೂ ಇದೆ ಎನ್ನುವ ಸಾಮಾನ್ಯ ಜ್ಞಾನ ಎಲ್ಲರಿಗೂ ತಿಳಿದರೂ  ಮಧ್ಯೆ ಪ್ರವೇಶ ಮಾಡುವವರು ಇಬ್ಬರ ಜೀವನದಲ್ಲೂ  ಆಟವಾಡಿಕೊಂಡು  ತನ್ನ ಸ್ವಾರ್ಥ ಸುಖಕ್ಕಾಗಿ  ಜೀವನದ ಮುಖ್ಯ ಉದ್ದೇಶ ‌ಮರೆತು ತಾವೂ ಮುಂದೆ ನಡೆಯದೆ ನಡೆಯುವವರನ್ನೂ ಬಿಡದೆ ಅತಂತ್ರಸ್ಥಿತಿಗೆ  ತರುವರು.ಹೀಗಾಗಿ  ಮಧ್ಯವರ್ತಿ ಮಾನವನಿಗೆ ಆತ್ಮಜ್ಞಾನದೆಡೆಗೆ ಸತ್ಯದೆಡೆಗೆ ‌ ಹೋಗೋದಕ್ಕೆ ಮಧ್ಯವರ್ತಿಗಳ  ಕಾಟ ಹೆಚ್ಚಾಗಿರುವುದರಿಂದ ಮಹಾತ್ಮರು ತಮ್ಮ ಆತ್ಮಸಾಕ್ಷಿಯಂತೆ ಆತ್ಮಾವಲೋಕನ ದಲ್ಲಿದ್ದು ಸತ್ಯದೆಡೆಗೆ ನೇರವಾಗಿ ನಡೆದು ಪರಮಾತ್ಮನ ಸೇರಿದರು.

Tuesday, February 20, 2024

ಕಲಿಪುರುಷ ಯಾರು?

ಕಲಿಪುರುಷ ಯಾರೆಂಬ‌ಪ್ರಶ್ನೆ ಗೆ ಉತ್ತರ ಅಜ್ಞಾನದಲ್ಲಿರುವ ಪುರುಷರೆಂದರೆ ಸರಿಯಾಗಬಹುದೆ?
ಕಲಿಗಾಲದಲ್ಲಿ ಪುರುಷರಲ್ಲಿ ಅಜ್ಞಾನ‌ಮಿತಿಮೀರಿ ಭೂಮಿಯಲ್ಲಿ ಅಧರ್ಮ ಅನ್ಯಾಯ ಅಸತ್ಯ‌ಹೆಚ್ಚಾಗುತ್ತದೆ.ಬೇಲಿಯೇ ಎದ್ದು ಹೊಲಮೇಯ್ದರೆ ‌ಕಾಯೋರು ಯಾರು ? ಎನ್ನುವ ಸ್ಥಿತಿ ಬರುತ್ತದೆ ಎಂದು ಮೊದಲೇ ಭವಿಷ್ಯ ನುಡಿದಿದ್ದಾರೆಂದರೆ ಇಂತಹ‌ಲಕ್ಷಣಗಳು ಯಾರಲ್ಲಿದೆಯೋ  ಹುಡುಕಿಕೊಂಡರೆ ಉತ್ತಮ ಕಾಲ ಬರುತ್ತದೆ.ಇಲ್ಲವಾದರೆ ಕಾಲವೇ ಉತ್ತರ ಕೊಡುತ್ತದೆ.
ಇಲ್ಲಿ ಭೂಮಿಯಲ್ಲಿ ರುವ  ಹೆಣ್ಣು ಹೊನ್ನು ‌ಮಣ್ಣಿನ ಋಣ ತೀರಿಸಲು  ಪುರುಷರಿಗೆ ಜ್ಞಾನವಿರಬೇಕು. ಅಜ್ಞಾನದಲ್ಲಿ ಹಣ ಮಾಡಿಕೊಂಡು ಎಷ್ಟು  ಇದನ್ನು ದುರ್ಭಳಕೆ ಮಾಡಿಕೊಂಡು ಆಳುವರೋ ಅಷ್ಟೇ ಕೆಟ್ಟದಾದ ಪ್ರತಿಫಲವೂ ಅದೇ ಜೀವ‌ ಅನುಭವಿಸಲೇಬೇಕೆಂದಾಗ   ಇದನ್ನು ತಡೆಯಲು ಕಲಿಪುರುಷ ಬರುವನಂತೆ.ಇರುವವನೊಬ್ಬನೇ‌ಪುರುಷ ಅದರೊಳಗಿರುವ ಅಸಂಖ್ಯಾತ ‌ಜೀವಾತ್ಮರಲ್ಲಿ ಅಡಗಿರುವ ಆ ಒಬ್ಬನ ಸತ್ಯವನರಿಯುವುದೇ‌  ಜೀವನದ ಗುರಿಯಾಗಿತ್ತು.
ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೂ ನಡೆದು ಬಂದಿರುವ ಜೀವಾತ್ಮನಿಗೆ ಪರಮಾತ್ಮನೇ‌ಬೇರೆ ನಾನೇ ಬೇರೆ ನನ್ನಿಂದಲೇ ಭೂಮಿ‌ ನಾನೇ  ರಾಜ ನಾನೇ ಸರಿ ನಾನೇ ಎಲ್ಲಾ ನನ್ನಿಂದ ಲೇ ಎಲ್ಲಾ ನಡೆದಿರೋದೆನ್ನುವ ಅಹಂಕಾರ ಮಿತಿ ಮೀರಿದಾಗ. ಭೂಮಿಯ ಮೇಲಿರುವ ಸತ್ಯ ಸತ್ವ ತತ್ವವೂ ಅರ್ಥ ವಾಗದೆ ಜನ್ಮ ವ್ಯರ್ಥ ವಾಗಿ ಜೀವ ಹೋಗುತ್ತದೆ.
ಆತ್ಮಕ್ಕೆ ಸಾವಿಲ್ಲವೆಂದಾಗ‌  ಅದು ಲಿಂಗರೂಪದಲ್ಲಿ  ಸ್ತ್ರೀ ಯಾಗಿಯೂ ಜನ್ಮ ತಾಳಬಹುದು.ಪುರುಷನಾಗಿಯೂ ಜನ್ಮ ಪಡೆಯಬಹುದು.
ಇದಕ್ಕೆ ಹಿಂದಿನ ಜನ್ಮ ಋಣ ಹಾಗು ಕರ್ಮ ವೇ ಕಾರಣ ವೆನ್ನುವುದು ಹಿಂದೂ ಧರ್ಮ. ಆದರೆ ಇದನ್ನು ವಿರೋಧಿಸಿ ನನಗೆ ಪುನರ್ಜನ್ಮ ಇಲ್ಲವೆಂದು‌ ಅಧರ್ಮ ದಲ್ಲಿಯೇ  ಜೀವನ  ನಡೆಸಿದರೆ  ಅಜ್ಞಾನವೇ ಸುತ್ತಿಕೊಂಡು  ಕಲಿಪುರುಷನ ಮೂಲಕ  ಕಲಿಯುಗದ ಅಂತ್ಯವಾಗುತ್ತದೆ.
 ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಸತ್ಯವನ್ನು ಸತ್ಯದಿಂದ ಅರ್ಥ ಮಾಡಿಕೊಳ್ಳಲು ಆತ್ಮಸಾಕ್ಷಿಯ ಕಡೆಗೆ ನಡೆ ನುಡಿಯಿರಬೇಕು. ಹೀಗಾಗಿ ಇಂದು ಭ್ರಷ್ಟಾಚಾರವನ್ನು ಭ್ರಷ್ಟರೆ ವಿರೋಧಿಸಿದರೂ  ಭ್ರಷ್ಟಾಚಾರಕ್ಕೆ ಕೊನೆಯಿಲ್ಲ.
ಹೊರಗಿನ ಸತ್ಯ ಹೊರಗೇ ಇರುತ್ತದೆ.ಹಾಗಾಗಿ ಒಳಗಿನ ಸತ್ಯಜ್ಞಾನ ಬಿಟ್ಟು ಹೊರಗಿನ‌ಮಿಥ್ಯಜ್ಞಾನವೇ ಮೇಲೇರಿದೆ.
ಯಾವುದೂ ಅತಿಯಾದರೆ ಗತಿಗೇಡು. ಒಟ್ಟಿನಲ್ಲಿ  ಭೂ ಋಣ ತೀರಿಸಲು ಬಂದವರು ಭೂಮಿ ಸೇವೆ ಮಾಡದೆ ಆಳಲು ಹೊರಟರೆ ಕಲಿಯುಗವಾಗುತ್ತದೆ. ಕಲಿಕೆ  ಸೇವಾಮಾರ್ಗ ದ ಕಡೆಗೆ ನಡೆದರೆ  ಸತ್ಯ ಯುಗ ಅರ್ಥ ವಾಗುತ್ತದೆ.
ಭ್ರಷ್ಟರ ಹಣದಲ್ಲಿ  ಧರ್ಮ ಉಳಿಸಲು ಹೋದರೆ ಭ್ರಷ್ಟರಿಗೆ ಬಲ.
ಆದರೆ ಶಿಷ್ಟಾಚಾರದಲ್ಲಿ‌ಹಣಗಳಿಸುವುದೇ ಕಷ್ಟವಾದಾಗ ಜೀವನ‌ ನಡೆಸಲು  ವಾಮಮಾರ್ಗ ಅಡ್ಡದಾರಿ ಹಿಡಿದು‌ ಹೋದರೆ ಅದೇ ಹಿಂದೆ ತಿರುಗಿ ಬರೋವಾಗ‌ಕಷ್ಟ ನಷ್ಟ ಜೀವ ಅನುಭವಿಸಲೇಬೇಕು.
ಋಣ ಸಂದಾಯವಾಗದೆ ಜೀವನ್ಮುಕ್ತಿ ಇಲ್ಲವೆಂದರೆ‌ ಇದಕ್ಕೆ ಬೇಕಿದೆ ಯೋಗ .ಪರಮಸತ್ಯ ಧರ್ಮ ವನರಿತು  ಹಣಗಳಿಸಿ ದಾನಧರ್ಮ ದೆಡೆಗೆ ನಡೆದಾಗಲೇ‌  ಜೀವನ್ಮುಕ್ತಿ. ಇದೀಗ ಯಾರಿಗೆ ಸಾಧ್ಯವಿದೆ?
ಗುರುಹಿರಿಯರ ಆಸ್ತಿ ಬೇಕು ಜ್ಞಾನ ಬೇಡ.ಅವರಲ್ಲಿದ್ದ ತತ್ವ ತಿಳಿಯದೆ ತಂತ್ರಪ್ರಯೋಗದಿಂದ ಯಂತ್ರದಂತೆ ದುಡಿದರೂ ಸ್ವತಂತ್ರ ಜ್ಞಾನ ಸಿಗದು. ಸ್ವತಂತ್ರ ಜ್ಞಾನವಿಲ್ಲದ ಬದುಕು ಅತಂತ್ರಸ್ಥಿತಿಗೆ ತಲುಪುತ್ತದೆ. 
ಪುರುಷರು ಕಲಿಯುವುದು ಬಹಳಷ್ಟಿದೆ ಇದಕ್ಕೆ ಇದು ಕಲಿಗಾಲ. ಕಲಿಯಬೇಕಾದದ್ದು ಒಳಗೇ ಇದ್ದರೂ ಹೊರಗೆ ಹುಡುಕಿದರೆ ಕಲಿಕೆ  ದಾರಿ ತಪ್ಪಾಗಿದೆಯಷ್ಟೆ..

Friday, February 16, 2024

ಬಜೆಟ್ ಎಂಬ ಭೂತದಿಂದ ಭೂಸಾಲ ತೀರುವುದೆ?

ಸಾಲವೇ ಶೂಲ ಯಾವುದಿದರ ಮೂಲ?
ಸರ್ಕಾರವೇ ಇದರ ಮೂಲ.
ಇಲ್ಲಿ ಸರ್ಕಾರ ಎಂದರೆ ಸಹಕಾರವಾಗುತ್ತದೆ. ನಮ್ಮ ಸಹಕಾರವೇ ಸಾಲದ ಮೂಲವಾಗಿದೆ.ಭೌತವಿಜ್ಞಾನದ ಹಿಂದೆ ಹೋದಷ್ಟೂ ಸಾಲ ಬೆಳೆಯುತ್ತದೆ ಅಧ್ಯಾತ್ಮ ವಿಜ್ಞಾನದೆಡೆಗೆ ನಡೆದಷ್ಟೂ ಸಾಲದಿಂದ ಬಿಡುಗಡೆ ಸಿಗುತ್ತದೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ದೈವತ್ವದೆಡೆಗೆ ಹೋದಷ್ಟೂ ಆತ್ಮತೃಪ್ತಿ ಸಿಗುತ್ತದೆ ಅಸುರತ್ವದೆಡೆಗೆ ನಡೆದಷ್ಟೂ ಅಹಂಕಾರ ಬೆಳೆಯುತ್ತದೆ. ನಾನು ನನ್ನದು ನನ್ನಿಂದ ನನಗಾಗಿ ನಾನೇ ಮಾಡಿಕೊಂಡಿರೋದನ್ನು ಅನುಭವಿಸೋದೂ‌ ನಾನೇ ಆದಾಗ ಮಾಡಿದ ಸಾಲವನ್ನು ನಾನೇ ತೀರಿಸಬೇಕಷ್ಟೆ.ಇದನ್ನು ಹೊರಗಿನ ಸರ್ಕಾರ ತೀರಿಸಲೆಂದು ಹೋರಾಟ ಹಾರಾಟ ಮಾರಾಟದಲ್ಲೇ ಜೀವನ ನಡೆಸುತ್ತಿದ್ದರೆ‌ ಹನುಮಂತನ ಬಾಲದಂತೆ ಸಾಲವೂ ಬೆಳೆಯುತ್ತಾ‌ ಕೊನೆಗೆ ಜೀವ ಹೊರೆತಾಳಲಾರದೆ  ಹೋಗುತ್ತದೆ.ತೀರಿಸಲು ಮತ್ತೆ ಜನಿಸುತ್ತದೆ. ಜನನ ಮರಣವೆಂಬುದು ಆತ್ಮಕ್ಕಲ್ಲ ಜೀವಕ್ಕೆ ಮಾತ್ರ ಎಂದು ಹಿಂದೂ ಸನಾತನ ಧರ್ಮ ತಿಳಿಸಿದರೆ ಇದನ್ನು ವಿರೋಧಿಸುವ ಧರ್ಮ ಗಳಿವೆ. ಕಾರಣ ಕಣ್ಣಿಗೆ ಕಾಣದ ಸತ್ಯವನ್ನು ನಂಬೋದು ಕಷ್ಟ. ಕಷ್ಟಪಟ್ಟು ಜೀವನ್ಮುಕ್ತಿಯ ಮಾರ್ಗ ಹಿಡಿದವರನ್ನು ಮಹಾತ್ಮರೆಂದರು.ಅವರೀಗ ಪೂಜನೀಯರಾಗಿದ್ದರೂ ಅವರಂತೆ ನಡೆಯೋರು ವಿರಳ. ನಡೆದವರನ್ನು ಬಡವರು ಅಸಹಾಯಕರು,ದೀನದಲಿತರು, ಅನಕ್ಷರಸ್ಥರು,  ಅಬಲರು,ಅನಾಥರೆನ್ನುವ ಮಟ್ಟಿಗೆ ಅಜ್ಞಾನ ಮಿತಿಮೀರಿದೆ. ಹಾಗಾದರೆ ಅವರ ಹೆಸರಿನಲ್ಲಿ ನಡೆಸುವ ಎಲ್ಲಾ ರಾಜಕೀಯ ವ್ಯವಹಾರದಿಂದ ಏನಾದರೂ ಬದಲಾವಣೆ  ಆಗಿದೆಯೆ? ಜನಸಾಮಾನ್ಯರ ಮಕ್ಕಳ ಮೊಮ್ಮಕ್ಕಳ ತಲೆಯ ಮೇಲೇ ಸಾಲದ ಹೊರೆ ಹಾಕಿ ಆಳುವ ಅರಸರನ್ನು  ದೇಶಭಕ್ತರೆಂದರೆ ಸರಿಯೆ?
ಭೂಮಿಯ ಸಾಲ ತೀರಿಸಲು ಬಂದ ಜೀವಾತ್ಮನಿಗೆ ಪರಮಾತ್ಮನ  ತೋರಿಸುವ ಶಿಕ್ಷಣವೇ ಕೊಡದೆ  ನಾನೇ ರಾಜ,ನಾನೇ ದೇವರೆನ್ನುವಂತವರು  ತಮ್ಮೆಡೆ ಸೆಳೆದುಕೊಂಡು  ಒಳಗೇ ಇದ್ದ ಜ್ಞಾನವನ್ನು ಸರಿಯಾಗಿ ಗುರುತಿಸದೆ  ಹೊರಗಿನ ದೇವರನ್ನು ತೋರಿಸಿ ಬೇಡಿಕೊಳ್ಳಿ ಎಂದರೆ ಏನನ್ನು ಬೇಡಬೇಕು? ಯಾಕೆ ಬೇಡಬೇಕು? ಹೇಗೆ ಬೇಡಬೇಕೆನ್ನುವುದೇ ಪ್ರಶ್ನೆಯಾಗಿರುತ್ತದೆ. ಒಟ್ಟಿನಲ್ಲಿ ಸಾಲದ ಹಣದಲ್ಲಿ ದೊಡ್ಡ ದೊಡ್ಡ ಮನೆ,ಮಂದಿರ ಮಠ,ಮಸೀದಿ ಚರ್ಚೆ,ಶಾಲಾ ಕಾಲೇಜ್ ಕಟ್ಟಬಹುದು. ಆದರೆ ಅದರೊಳಗೆ ಯಾವ ಜ್ಞಾನವನ್ನು ಬೆಳೆಸುವರು ಯಾವ ದಿಕ್ಕಿನಲ್ಲಿ ಮನಸ್ಸನ್ನು  ಎಳೆಯುವರು, ಯಾರ ಕೈಕೆಳಗೆ ಕೆಲಸ ಮಾಡಿಸುವರು, ಯಾರಿಗಾಗಿ ನಡೆಸುವರು ಎನ್ನುವ ಬಗ್ಗೆ ಸಾಮಾನ್ಯ ಜನರು ಮನೆಯೊಳಗೆ ಇದ್ದು  ಸ್ಥಿತಪ್ರಜ್ಞರಾಗಿ ಚಿಂತನೆ ನಡೆಸಿದಾಗ  ತಿಳಿಯುವುದು ಎಲ್ಲಾರೂ ಮಾಡುವುದು‌  ಓಟಿಗಾಗಿ ನೋಟು ಸೀಟಿಗಾಗಿ ಅಷ್ಟೆ.
ಪ್ರಜಾಪ್ರಭುತ್ವದಲ್ಲಿ  ರಾಜರು ಯಾರು?ಪ್ರಜಾಧರ್ಮದ ಪ್ರಕಾರ ದೇಶದ ಸಾಲ ತೀರಿಸಲು ಪ್ರಜೆಗಳಲ್ಲಿ ಸತ್ಯಜ್ಞಾನದ ಶಿಕ್ಷಣವಿರಬೇಕಿತ್ತು. ಅಸತ್ಯದ ಶಿಕ್ಷಣದಲ್ಲಿ ತಂತ್ರ ಬೆಳೆಯುತ್ತದೆ.
ಅದೇ ಮುಂದೆ ಸಾಲದೆಡೆಗೆ ನಡೆಸುತ್ತಾ ಅತಂತ್ರಸ್ಥಿತಿಗೆ ತಲುಪಿಸಿ ಯಂತ್ರಮಾನವರ ಕೈಕೆಳಗೆ ಮಾನವನ ಜೀವನ ಇರುತ್ತದೆ.ಇದನ್ನು ಪ್ರತ್ಯೇಕವಾಗಿ  ತಿಳಿಸುವ ಅಗತ್ಯವಿಲ್ಲ.ಕಣ್ಣಿಗೆ ಕಾಣುತ್ತಿರುವ ಸತ್ಯವನ್ನೇ ಅಲ್ಲಗೆಳೆದು ತಮ್ಮ ಸ್ವಾರ್ಥ ಪೂರಿತ ರಾಜಕೀಯ ನಡೆಸುವಾಗ ಕಾಣದ ಸತ್ಯವನ್ನು ಅರ್ಥ ಮಾಡಿಸುವುದು ಕಷ್ಟ. ಆದರೂ ಸಾಲ ಎಂದರೆ ಋಣ ಕರ್ಮ ಎಂದರೆ ಕೆಲಸ. ಸತ್ಕರ್ಮ ಸತ್ಯದಿಂದ  ಧರ್ಮ ದಿಂದ ಗಳಿಸಿದ ಹಣದಿಂದ  ಹಿಂದಿನ ಸಾಲವನ್ನು ತೀರಿಸುವುದೇ  ಜೀವನದ ಗುರಿ. ಇದಕ್ಕಾಗಿ ಮೈ ಮನಸ್ಸು ಯೋಗದೆಡೆಗೆ  ನಡೆಯಬೇಕೆನ್ನುತ್ತದೆ ಅಧ್ಯಾತ್ಮ. ಹಾಗಾದರೆ ಇಂದಿನ ಜಗತ್ತಿನಲ್ಲಿ  ನಾವು ಕಾಣುತ್ತಿರುವ ವ್ಯವಹಾರದಲ್ಲಿ ಧರ್ಮ ವಿದೆಯೆ?  ರಾಜಕೀಯದಲ್ಲಿ ಧರ್ಮ ವಿದೆಯೆ?
ಧರ್ಮದಿಂದ  ಶಾಂತಿ ತೃಪ್ತಿ ಮುಕ್ತಿ ಸಿಗೋದಾದರೆ  ಯಾರಿಗೆ ಸಿಕ್ಕಿದೆ?  ಇದ್ದಾಗಲೇ ಒಳಗಿರುವ ಪರಮಸತ್ಯ ಪರಮಾತ್ಮನ ಕಂಡವರನ್ನು   ಜೀವಹೋದಮೇಲೆದೇವರೆಂದರು. ಇದ್ದಾಗ ಅವರೊಳಗಿದ್ದ ದೈವತ್ವವನ್ನು  ಕಡೆಗಣಿಸಿದವರೆ ಹೋದ ಮೇಲೆ ಗುಡಿಗೋಪುರ ,ಚರ್ಚ, ಮಸೀದಿ ಮಂದಿರ ಕಟ್ಟಿ ರಾಜಕೀಯ ನಡೆಸಿದರೆ  ಏನರ್ಥ?
ಒಳಗೇ ಅಡಗಿದ್ದ ದೈವತ್ವದೆಡೆಗೆ ಹೋಗುವುದಕ್ಕೂ ಹೊರಗಿನ ದೇವರನ್ನು  ಬೇಡಿಕೊಂಡು  ನಾನೇ ದೇವರೆಂದು ಆಳೋದಕ್ಕೂ ವ್ಯತ್ಯಾಸವಿದೆ. ಹೆಸರು,ಹಣ,ಅಧಿಕಾರ,ಸ್ಥಾನಮಾನವೆಲ್ಲವೂ ಹೊರಗಿನಿಂದ ಸೇರಿಕೊಂಡಿರುವಾಗ ಅದೊಂದು ಋಣ ಅಥವಾ ಸಾಲವಷ್ಟೆ.
ನಾವು ಹೊರಗಿನಿಂದ ಪಡೆದದ್ದನ್ನು ತಿರುಗಿ ಕೊಡೋದಕ್ಕಾಗಿ ಭೂಮಿಗೆ ಬಂದಿರುವಾಗ ಮತ್ತಷ್ಟು ಹೊರಗಿನ ಸಾಲ ಏರಿಸಿದರೆ  ಇದನ್ನು ಧರ್ಮ ಎನ್ನಲಾಗದು.
ಕಲಿಗಾಲದ ಪ್ರಭಾವ.ಕಲಿಕೆಯೇ ಸರಿಯಿಲ್ಲದೆ ಕಾಲಕೆಟ್ಟಿದೆ ಎಂದರೆ  ಕಲಿಕೆಯನ್ನು ಸರಿಪಡಿಸುವುದೇ ಧರ್ಮ. ಯಾವ ಸರ್ಕಾರ ಬಂದರೂ ಜನರಿಗೆ ಉಚಿತವಾಗಿ ನೀಡಿದರೆ ಅಧಿಕಾರಕ್ಕೆ ದಕ್ಕೆಯಾಗೋದಿಲ್ಲವೆನ್ನುವ ಲೆಕ್ಕಾಚಾರದಲ್ಲಿ ದೇಶವನ್ನೇ ವಿದೇಶಿ ಸಾಲ,ಬಂಡವಾಳ,ವ್ಯವಹಾರ,ಶಿಕ್ಷಣದ ಜೊತೆಗೆ ಪರಧರ್ಮದವರ ಕಡೆಗೆಳೆದರೆ ನಾವ್ಯಾರು? ಪರದೇಶಿಗಳೆ? ಹಿಂದೆ ಸ್ವತಂತ್ರ ಜ್ಞಾನದಿಂದ ಸರಳ ಜೀವನ ನಡೆಸಿ ಸ್ವಾಭಿಮಾನ ಸ್ವಾವಲಂಬನೆ ಜೊತೆಗೆ  ಜೀವನಸತ್ಯವನರಿತು ಸತ್ಕರ್ಮ ಸ್ವಧರ್ಮ ಬಿಡದೆ ಸಂತೋಷದಿಂದ ಕೂಡಿಬಾಳುತ್ತಿದ್ದ ಕುಟುಂಬ ವ್ಯವಸ್ಥೆ ಇಂದಿಲ್ಲ. ಕಾರಣ‌ ಹೊರಗಿನವರ ಕುತಂತ್ರದ ಫಲ. ಯಾರನ್ನೋ ನಂಬಿ ಯಾರೋ ಮೋಸಹೋಗಿ ಇನ್ಯಾರೋ  ಆಳುತ್ತಿರುವುದರಿಂದ  ಇಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಿದೆ.
ಹಿಂದೂ ಮುಸ್ಲಿಂ ರ ಮಧ್ಯೆ ಇಸ್ಲಾಂ ರವರು ತಮ್ಮ ತಂತ್ರದಿಂದ ಬೆಳೆದರು. ತಂತ್ರವೇ ಅತಂತ್ರಸ್ಥಿತಿಗೆ ತಂದಿರುವಾಗ ಅದರಲ್ಲಿ ತತ್ವವಿದೆಯೆ  ಇಲ್ಲವೆ ತಿಳಿದು ತತ್ವದೆಡೆಗೆ  ನಡೆಸಿದರೆ ಉತ್ತಮ ಬದಲಾವಣೆ ಸಾಧ್ಯವಿದೆ.
ಸರ್ಕಾರಗಳು ಅನಾವಶ್ಯಕವಾದ ಯೋಜನೆಗಳಿಗೆ ಕೋಟ್ಯಾಂತರ ರೂ‌ಬಳಸಿ ಪ್ರಗತಿ ಎಂದರೆ ನಮ್ಮಲ್ಲಿ ಸಹಕಾರವಿದೆ.ಅದೇ ಹಣವನ್ನು  ಅತ್ಯಗತ್ಯವಾಗಿರುವ ಉತ್ತಮ ಶಿಕ್ಷಣ ನೀಡಲು ಬಳಸಿದ್ದರೆ  ಮಾನವನೊಳಗಿರುವ ಅಜ್ಞಾನ  ತೊಲಗಿ ಸತ್ಯ ಯಾವುದು ಮಿಥ್ಯ ಯಾವುದು ನಾನ್ಯಾರು ನಾವ್ಯಾರು? ಎಲ್ಲಿಂದ ಬಂದೆವು? ಎಲ್ಲಿಗೆ ಹೋಗುವೆವು? ಜೀವನದ ಉದ್ದೇಶವೇನು? ಎಲ್ಲಿರೋದು?
ಋಣ ಕರ್ಮ, ದೇವರು ಧರ್ಮ ಎಲ್ಲಾ  ವಿಷಯಕ್ಕೂ ಉತ್ತರ ಒಳಗಿನಿಂದ ‌ ತಿಳಿಯುವುದಕ್ಕೆ  ಸಾಲ ಮಾಡುವ ಅಗತ್ಯವಿಲ್ಲ.ಸಾಲ ತೀರಿಸುವ ಅಗತ್ಯವಿದೆ.ಕಾರಣ ಆತ್ಮಶುದ್ದಿ ಆಗೋದಕ್ಕೆ ಸತ್ಯ ಧರ್ಮ ವೇ ಬಂಡವಾಳ. ಇದನ್ನು ಒಳಗೆ ತಿಳಿಯುತ್ತಾ  ಬೆಳೆಸಿಕೊಂಡಾಗಲೇ  ಪರಾವಲಂಬನೆಯಿಂದ ಬೆಳೆಯುತ್ತಿರುವ ಸಾಲವೇ ಎಲ್ಲಾ ನೋವು ಸಂಕಟ,ಸಮಸ್ಯೆಗಳಿಗೆ ಕಾರಣವಾಗಿ‌ ಜೀವಾತ್ಮನಿಗೆ ತೃಪ್ತಿ ಸಿಗದೆ ಹೋಗಿ ಅದೇ ಅತೃಪ್ತ ಆತ್ಮಗಳಾಗಿ ಮುಂದಿನ ಪೀಳಿಗೆಯವರೆಗೂ  ಕುಣಿಸುತ್ತಿದೆ.ಹೊರಗಿನ‌ಕುಣಿತದಿಂದ ಮನರಂಜನೆ ಸಿಗಬಹುದು ಆತ್ಮಕ್ಕೆ ತೃಪ್ತಿ ಶಾಂತಿ ಸಿಗಲು ಆತ್ಮಜ್ಞಾನ,ಆತ್ಮಪರಿಶೀಲನೆ,ಆತ್ಮವಿಶ್ವಾಸ ದ ಜೀವನ ಅಗತ್ಯ.
ಹೊರಗಿನಿಂದ ಗಳಿಸಿರುವ ಆಸ್ತಿ ಅಂತಸ್ತು ಹಣ ಅಧಿಕಾರ ಸ್ಥಾನ ಒಂದು ಜನ್ಮದಲ್ಲಿ ಸಂತೋಷಕೊಟ್ಟರೆ ಒಳಗಿನಿಂದ ಗಳಿಸಿದ ಆತ್ಮಜ್ಞಾನ ಜನ್ಮ ಜನ್ಮಗಳವರೆಗೆ  ತೃಪ್ತಿ ನೀಡುತ್ತದೆ ಎನ್ನುವ  ಸತ್ಯಕ್ಕೆ  ತಲೆಬಾಗಿದವರ ಸಾಲಮನ್ನಾ ಆಗಿದೆ.ಪರಮಾತ್ಮನ ಸಾಲ ತೀರಿಸುವುದಕ್ಕೆ ಅಧ್ಯಾತ್ಮ ಅಗತ್ಯ.
ಅಧ್ಯಾತ್ಮ ರಾಜಕೀಯದಲ್ಲಿಲ್ಲ ರಾಜಯೋಗದಲ್ಲಿದೆ. ಜ್ಞಾನಯೋಗವು ಆತ್ಮಸಾಕ್ಷಿಯಿಂದ ಬೆಳೆಯುತ್ತದೆ. ಎಂದರೆ ಆತ್ಮನಿರ್ಭರ ಭಾರತಕ್ಕೆ ಪ್ರಜೆಗಳಲ್ಲಿ ಆತ್ಮಸಾಕ್ಷಿಯ ಜೀವನ ಶಿಕ್ಷಣದ ಅಗತ್ಯವಿತ್ತು.ಇಂದು ಶಿಕ್ಷಣವೇ ವಿದೇಶಿಗಳ ಕಡೆಗೆ ನಡೆದು  ಅವರ ಬಂಡವಾಳ,ಸಾಲ,ವ್ಯವಹಾರದಲ್ಲಿ ನಮ್ಮ ತನ ಬಿಟ್ಟು ಹಣಗಳಿಸಿದರೆ ಸಾಲ ತೀರುವುದೆ? ಇದರಲ್ಲಿ ನಮ್ಮ ಹಿಂದಿನವರ ಸಾಲ ತೀರಿಸುವುದು ಕಷ್ಟವಿದೆ.ಕಾರಣ ಹಿಂದಿನ ಜ್ಞಾನ ಮೂಲಾಧಾರವಾಗಿದೆ. ಅದನ್ನು ತಿಳಿಯದೆ ಹೊರಗಿನ ಜ್ಞಾನದಿಂದ  ಹಿಂದಿನ ಸಾಲ ತೀರಿಸಲಾಗದು.
ಹಾಗಾಗಿ ಎಷ್ಟು ಲಕ್ಷ ಸಂಪಾದಿಸಿದರೂ ಸಾಲ ಮಾಡೋದು ತಪ್ಪುತ್ತಿಲ್ಲ.ಲಕ್ಷಕ್ಕೆ ತಕ್ಕಂತೆ ಆಸೆ ಆಕಾಂಕ್ಷೆಗಳು ಬೆಳೆದಾಗ ಹಣ ಸದ್ಬಳಕೆ ಆಗದೆ ದುರ್ಭಳಕೆ ಆಗೋದೇ ಹೆಚ್ಚು.
ನೂರು ರೂ ಕಷ್ಟಪಟ್ಟು ಸಂಪಾದಿಸುವ ಒಬ್ಬ ಕೂಲಿಕಾರ್ಮಿಕನಿಗೆ ಸಿಗುವ ತೃಪ್ತಿ ಲಕ್ಷ,ಕೋಟಿ ಒಂದೇ ಸಲ ಗಳಿಸುವ ಭ್ರಷ್ಟನಿಗಿರದು . ಆದರೆ ಲಕ್ಷ ಕೋಟಿ ಕೊಟ್ಟು ಒಂದು ಮಂದಿರ ಕಟ್ಟಿದರೆ ಅದರಲ್ಲಿ  ಪ್ರತಿಷ್ಟಾಪನೆ ಮಾಡುವ. ದೇವರಿಗೆ ಶಕ್ತಿ  ತುಂಬಿಸಲು  ಜ್ಞಾನಯೋಗಿಗೆ ಮಾತ್ರಸಾಧ್ಯ. ಯಾವ ರಾಜಕೀಯ ಶಕ್ತಿಯಿಂದಲೂ ಪರಮಾತ್ಮನ ಕಾಣಲಾಗದು.. ಅಲ್ಲಿ ಜ್ಞಾನಯೋಗಿಯೇ ಇಲ್ಲದೆ ಪ್ರತಿಮೆ ಇದ್ದರೆ  ಅದರೊಳಗೆ ಅಸುರಿ ಶಕ್ತಿಯೂ ಪ್ರವೇಶಮಾಡುವ ಸಾಧ್ಯತೆಯಿರುತ್ತದೆ  ಎನ್ನುವ ಕಾರಣಕ್ಕಾಗಿ ಹಿಂದೂ  ದೇವಾಲಯಗಳ ಗರ್ಭ ಗುಡಿಯೊಳಗೆ ದುಷ್ಟ ಶಕ್ತಿ ಪ್ರವೇಶಮಾಡದಂತೆ ಮಂತ್ರ ತಂತ್ತ ಯಂತ್ರಗಳ ಮೂಲಕ ದಿಗ್ಭಂಧನ  ಮಾಡುವುದು ಶಾಸ್ತ್ರ ವಾಗಿದೆ. ಆ ಶಾಸ್ತ್ರ ದ ಹಿಂದಿನ ವಿಜ್ಞಾನವರಿಯದೆ  ಎಷ್ಟೋ ದೇವಾಲಯಗಳು ವ್ಯವಹಾರಕ್ಕೆ  ತಿರುಗಿ ರಾಜಕೀಯವ್ಯಕ್ತಿಗಳ ಕೈವಶವಾಗಿ ದೈವತ್ವ ಕಳೆದುಕೊಂಡು ಸಾಲ ಮಿತಿಮೀರಿದೆ. ಹಾಗಾದರೆ ದೇವರಿಂದ ಸಾಲ ತೀರಿಸಬಹುದೆ? ದೇವರಿರೋದು ಎಲ್ಲಿ?
ಆತ್ಮವೇ ದೇವರು, ಸತ್ಯವೇ ದೇವರು,ಧರ್ಮ ವೇ ದೇವರು.
ಭೂಮಾತೆ, ಹೆತ್ತತಾಯಿ ತಂದೆ ...ಎಲ್ಲಾ ಬಂಧುಬಳಗದವರ ಜೊತೆಗೆ  ಇರುವ ನನ್ನಲ್ಲಿ ದೈವತ್ವವಿಲ್ಲವಾದರೆ  ದೇವರನ್ನು ಗುರುತಿಸಲಾಗದು. 
ಕೇಳಿದ್ದೆಲ್ಲಾ ಕೊಡುವವನು ದೇವರಲ್ಲ. ಯಾರಿಗೆ ಯಾವಾಗ ಎಷ್ಟು ಯಾಕೆ ಕೊಡಬೇಕೆಂಬ ಅರಿವಿದ್ದವನೆ ದೇವರು.ಅರಿವೇ ಗುರು,ದೇವರು...ಇದಕ್ಕೆ ಮಾನವ ಮಧ್ಯವರ್ತಿ ಯಾಗಿದ್ದು ಸತ್ಯ ಯಾವುದು ಅಸತ್ಯ ಯಾವುದೆನ್ನುವ ಬಗ್ಗೆ ತಿಳಿದು  ತನ್ನ ಹಿಂದಿನ ಸಾಲ ತೀರಿಸುವತ್ತ  ನಡೆಯುವುದೇ ಧರ್ಮ ವಾಗಿತ್ತು. ಹಿಂದಿನ ರಾಜಪ್ರಭುತ್ವ ಇಂದಿನ‌ಪ್ರಜಾಪ್ರಭುತ್ವದ ಶಿಕ್ಷಣದಲ್ಲಿಯೇ  ವಿರೋಧವಿದ್ದಾಗ ಜ್ಞಾನವೂ ಬೇರೆಯಾಗಿರುತ್ತದೆ. ಆದರೆ ಒಳಗಿರುವ ಆತ್ಮ  ಒಂದೇ. ಎಲ್ಲದ್ದಕ್ಕೂ ಸಾಕ್ಷಿಭೂತವಾಗಿದ್ದು
ಅದಕ್ಕೆ ತಕ್ಕಂತೆ ಫಲ ನೀಡುವ ಪರಮಾತ್ಮನ ‌ಒಳಗಿರುವ ಜೀವಾತ್ಮನಿಗೆ ‌ಎಲ್ಲವೂ ನನ್ನಿಂದಲೇ ನಡೆಯುತ್ತಿದೆ ಎನ್ನುವ ಭ್ರಮೆ ಹೆಚ್ಚಾದಾಗಲೇ‌ ಋಣ  ಬಾಧೆ ಹೆಚ್ಚಾಗುತ್ತದೆ.ಆಗಲೇ ಸಂಕಟ. ಸಂಕಟಬಂದಾಗ ವೆಂಕಟರಮಣ ಎನ್ನುವರು.
ವೆಂಕಟೇಶ್ವರ ನ ಸಾಲ ತೀರಿಸಲು ಮಾನವರು ಹೊರಟು ಈಗ ದೇಶದ ತುಂಬಾ ದೇವರುಗಳು ಆದರೆ ದೇಶದ ಸಾಲ ತೀರಿಸಲು ದೇವರುಗಳಿಗೆ ಸಾಧ್ಯವಿಲ್ಲವಾಗುತ್ತಿದೆ  ಎಂದರೆ‌ಇದರಲ್ಲಿ ಸತ್ಯ ಯಾವುದು? ಮಿಥ್ಯ ಯಾವುದು?
ನಿಜವಾಗಿಯೂ ಭಾರತೀಯರು  ಬಡವರೆ? ಒಂದೂ‌ಮನೆಯಿಲ್ಲದೆಯೂ ಕಾಡಿನಲ್ಲಿ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದ ಯೋಗಿಗಳೆಲ್ಲಿ? ಸಾಲದ ಹಣದಲ್ಲಿಅನೇಕ ಮನೆ ಕಟ್ಟಿಕೊಂಡು‌  ಊಟಕ್ಕೆ ಸಮಯವಿಲ್ಲದೆ  ದೇವರನ್ನು ನೆನಪಿಸಿಕೊಳ್ಳಲಾಗದೆ  ನಾನೇ ಸರಿ ಎನ್ನುವ ಅಹಂಕಾರದಲ್ಲಿರುವ  ಶ್ರೀಮಂತ ನ ಭೋಗವೆಲ್ಲಿ? ಒಟ್ಟಿನಲ್ಲಿ ಸಾಲ ಮಾಡೋದು ತಪ್ಪಲ್ಲ.ಅದನ್ನು ತೀರಿಸಲಾಗದೆ ಹೋಗೋದುತಪ್ಪು.
ಮಕ್ಕಳು ಮೊಮ್ಮಕ್ಕಳವರೆಗೂ ಆಸ್ತಿ ಮಾಡಿ  ಸಾಲ ಬೆಳೆಸಿದರೆ ಸಾಲ ತೀರುವವರೆಗೂ ಆತ್ಮಕ್ಕೆ ತೃಪ್ತಿ ಶಾಂತಿ ಮುಕ್ತಿ ಸಿಗದು.ಇದನ್ನು ಅಧ್ಯಾತ್ಮ ತಿಳಿಸಿರುವಾಗ  ಈಗ ಎಷ್ಟು ಜನ ಹಿಂದೂಗಳು ಇದನ್ನರಿತು ಧರ್ಮ ರಕ್ಷಣೆ ಮಾಡಲು ಸಾಧ್ಯವಾಗಿದೆ?
ಹಣದ ಹಿಂದಿರುವ ಋಣದ‌ಲೆಕ್ಕಾಚಾರ ಮಾಡೋದು ಕಷ್ಟ.
ಹಾಗಾಗಿ ಋಣ ತೀರಿಸಲು  ಸರ್ಕಾರಗಳು ತಂತ್ರ ಮಾರ್ಗ ಹಿಡಿದಿವೆ. ಇದರಿಂದ ಸ್ವತಂತ್ರ ಜ್ಞಾನ ಬಂದರೆ ಉತ್ತಮ ಪ್ರಗತಿ.
ಅತಂತ್ರಸ್ಥಿತಿಗೆ  ಜೀವನ ತಲುಪಿದರೆ ಅಧೋಗತಿ. ಯಾರಿಗೆ ಎಷ್ಟು ಅರ್ಥ ವಾಗುವುದೋ ಅದೂ ಜ್ಞಾನದ ಮೇಲಿದೆ.
ಉಂಡೂ ಹೋದ ಕೊಂಡೂ ಹೋದ ಎನ್ನುವಂತಹ ಪರಿಸ್ಥಿತಿಯಲ್ಲಿದೆ  ಭಾರತದ ಆರ್ಥಿಕ ಸ್ಥಿತಿ.
ವಿದೇಶಿ ಕಂಪನಿಗಳಲ್ಲಿ ದುಡಿಯುವ  ಭಾರತೀಯ ಯುವಪೀಳಿಗೆಯ  ಶ್ರಮ  ದೇಶದ ಸಾಲ ತೀರಿಸುವತ್ತ ನಡೆಯದೆ ವಿದೇಶದೆಡೆಗೆ  ಹೊರಟಿದೆ. ಹಾಗಾದರೆ ಇಲ್ಲಿನ ‌ನೆಲ ಜಲದ ಋಣ ತೀರಿಸೋರು ಯಾರು?
ಸರ್ಕಾರಗಳು ಅಧಿಕಾರಕ್ಕಾಗಿ ಕಿತ್ತಾಡುತ್ತಿವೆ. ಅದರಲ್ಲಿ ಮೇಲು ಕೀಳಿನ ಜಾತಿ ರಾಜಕೀಯ. ಧರ್ಮ ಧರ್ಮಗಳ ಅಂತರದಲ್ಲಿ ಮಧ್ಯವರ್ತಿಗಳ ಸಾಮ್ರಾಜ್ಯ ಸ್ಥಾಪನೆಯಾಗಿ ಈ ಕಡೆ  ಪೂರ್ಣ ಸತ್ಯವೂ ಇಲ್ಲ ಪೂರ್ಣ ಮಿಥ್ಯವೂ ಇಲ್ಲ.  ಸತ್ಯ ತಿಳಿಸುವುದಕ್ಕೆ ಅಧಿಕಾರ ಹಣವಿಲ್ಲ, ಮಿಥ್ಯ ಬೆಳೆಸುವುದಕ್ಕೆ ರಾಜಕೀಯವಿದೆ. ಭೂಮಿಯ ಮೇಲೇ ನಿಂತು ಭೂಮಿಯನ್ನು ತನ್ನ ವಶಕ್ಕೆ ಪಡೆದು ಆಳುವ ಅಸುರರ ಒಳಗೇ ಸುರರಿರೋವಾಗ ಸ್ವತಂತ್ರ ಯಾರಿಗಿದೆ?
ಒಳಗಿರುವ ದೈವಶಕ್ತಿಯನ್ನರಿತರೆ  ಅಸುರ ಶಕ್ತಿ ದೂರವಾಗಿ‌ ಸಾಲದಿಂದ ಮುಕ್ತಿ ಪಡೆಯಬಹುದು. ದೈವಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಆಳಿದರೆ  ಆಳಾಗಿಯೇ  ಸಾಲ ತೀರಿಸಬೇಕು. ಜನ್ಮಜನ್ಮಾಂತರದ  ಈ ಋಣದ ಲೆಕ್ಕಾಚಾರ
 ಮಾಡಲಸಾಧ್ಯ.ಅದಕ್ಕೆ ಬಂದದ್ದು ಬರಲಿ ಗೋವಿಂದನ ದಯೆ ಒಂದಿರಲಿ ಎಂದರು ದಾಸ ಶ್ರೇಷ್ಟರು.
ಹಾಗೆಯೇ ದೈವ ಋಣ ತೀರಿಸಲಾಗದೆ ನೀನ್ಯಾಕೋ ನಿನ್ನ ಹಂಗ್ಯಾಕೋ‌ನಾಮವೊಂದಿದ್ದರೆ ಸಾಕೋ ಎಂದರು.ಕೆಲವು ಸರಳ ಸತ್ಯ ಅನುಭವಿಸಿಯೇ ತಿಳಿಯುವುದು ಉತ್ತಮ.
ಯಾವಾಗ ಅಸತ್ಯಕ್ಕೆ ಅಸಹಕಾರ ಸಿಗುವುದೋ ಆಗ ಸಾಲ ಬೆಳೆಯುತ್ತದೆ.ಹಾಗೆಯೇ ಸರ್ಕಾರಗಳ ಅಸತ್ಯದ ಅಧರ್ಮ ವ್ಯವಹಾರಕ್ಕೆ ಪ್ರಜೆಗಳಾದವರು ಸಹಕರಿಸಿದಷ್ಟೂ ದೇಶದ ಸಾಲ ಬೆಳೆಯುತ್ತದೆ. ದೇಶದೊಳಗೆ ‌ಮನೆ ,ಮಂದಿರ. ಮಸೀದಿ...ಮನಸ್ಸಿರೋವಾಗ  ದೇಶ ಬೇರೆ ದೇವರು ಬೇರೆ ಮನೆ ಬೇರೆ ಮನಸ್ಸು ಬೇರೆ ಎಂದರೆ  ಅದ್ವೈತ ತತ್ವ ಬೇರೆ,ದ್ವೈತ ಬೇರೆ,ವಿಶಿಷ್ಟಾದ್ವೈತ ಬೇರೆ ಎಂದಂತೆ.
ಆದರೆ ಭೂಮಿ ಒಂದೇ  ಇದರ ಋಣ ತೀರಿಸಲು ನಿಸ್ವಾರ್ಥ ನಿರಹಂಕಾರ, ಪ್ರತಿಫಲಾಪೇಕ್ಷೆ ಯಿಲ್ಲದೆ ಮಾಡಿದ ಸೇವಾಕರ್ಮ ಗಳಿಂದ  ಸಾಧ್ಯವೆಂದಿರೋದು ಭಗವದ್ಗೀತೆ.
ಇದರಲ್ಲಿನ ಯೋಗದ ಅರ್ಥ  ಅಪಾರ್ಥ ಮಾಡಿಕೊಂಡು ರಾಜಕೀಯಕ್ಕಿಳಿದವರಿಗೆ ನಿಜವಾದ ರಾಜಯೋಗದ ಶಿಕ್ಷಣ ಕೊಟ್ಟರೆ   ಉತ್ತಮ ಬದಲಾವಣೆಯ ಗಾಳಿ‌ಬೀಸಬಹುದು.
ಆದರೆ ವಿಪರ್ಯಾಸವೆಂದರೆ ರಾಜಯೋಗಿಗಳಾದವರು ಸಂಸಾರ ಬಿಟ್ಟು ಹೊರಗೆ ನಡೆದರೆ  ಗೃಹಸ್ಥರ ಅನುಭವ ಆಗದೆ ಅವರ ಹಣದ ಋಣದಲ್ಲಿಯೇ ಇರಬೇಕಷ್ಟೆ. ತನ್ನ ಜೀವಾತ್ಮನಿಗೆ  ಪರಮಾತ್ಮನ ಕಾಣೋದಕ್ಕೆ  ತಾನೇ ಶ್ರಮ ಪಟ್ಟು ಸತ್ಯ ತಿಳಿದು ಸಂಸಾರದೊಳಗಿದ್ದು ಬದುಕಬೇಕು.
ಓದಿ ಕೇಳಿ,ನೋಡಿ ಹೇಳಿದಾಗ ಅರ್ಧ ಸತ್ಯವಾಗುತ್ತದೆ.ಇನ್ನರ್ಧ ಅಸತ್ಯದಿಂದ ಇನ್ನಷ್ಟು ಸಾಲ ಬೆಳೆಯುತ್ತದೆ. ಆದರೂ ಕೆಲವರಿಗೆ ಅನುಭವ ಜ್ಞಾನವಿದೆ ಅಧಿಕಾರ ಹಣವಿಲ್ಲ.ಹಲವರಿಗೆ ಅಧಿಕಾರ ಹಣವಿದೆ ಸತ್ಯದ ಅನುಭವವಿಲ್ಲದೆ ನೇರವಾಗಿ ನಡೆದವರನ್ನೂ ತಡೆದು ನಿಲ್ಲಿಸಿ ಆಳುತ್ತಿರುವುದೇ ದೊಡ್ಡ ಸಮಸ್ಯೆ ಗೆ ಕಾರಣವಾಗುತ್ತಿದೆ. 
ಭಾರತದಂತಹ ಪವಿತ್ರ ದೇಶ,ಯಾತ್ರಾಸ್ಥಳ ಇಂದು ಪ್ರವಾಸಿತಾಣವಾಗಿ ವ್ಯವಹಾರದ ಗೂಡಾಗುತ್ತಿರುವುದೇ ದೊಡ್ಡ ದುರಂತ. ಸ್ವಚ್ಚ ಶಿಕ್ಷಣ ವ್ಯವಸ್ಥೆ ಯಿಲ್ಲದೆ ಆರೋಗ್ಯವಿಲ್ಲ. ಆರೋಗ್ಯ ಹಾಳಾದರೆ  ರೋಗಿಗಳ ದೇಶ.ಇದಕ್ಕಾಗಿ ಹೈಟೆಕ್ ಆಸ್ಪತ್ರೆ ಗೆ ಸುರಿಯುವ ಹಣದಿಂದ ಜೀವಾತ್ಮನಿಗೆ ತೃಪ್ತಿ ಸಿಗುವುದೆ? ಜೀವ ಶಾಶ್ವತವಲ್ಲ ಆತ್ಮ ಶಾಶ್ವತ.ಹೀಗಾಗಿ ಮಕ್ಕಳಿರುವಾಗಲೇ ಸಂಸ್ಕಾರಯುತ ಶಿಕ್ಷಣ ನೀಡಿ ಜೀವನದ ಗುರಿ ಅರ್ಥ ವಾಗಿದ್ದರೆ ಸ್ವತಂತ್ರ ಜ್ಞಾ‌ನ ದಿಂದ ಸಾಲ ತೀರಿಸಬಹುದು.ಕೋಟಿ ವಿದ್ಯೆಗಿಂತ ಮೇಟಿವಿದ್ಯೆ ಮೇಲು. ವಿದೇಶಿ ಋಣದಲ್ಲಿ ಸ್ವದೇಶಿ ಸಾಲ ತೀರಿಸಬಹುದೆ?
ಮನೆಯವರ ಸಾಲ ಸರ್ಕಾರ ತೀರಿಸಬೇಕೆ?
ಕಷ್ಟಪಟ್ಟು ದುಡಿಯುವ‌ಕೈಗೆ ಕೆಲಸ ಕೊಡದೆ‌ ಉಚಿತ ಊಟ,ವಸತಿ ವಸ್ತ್ರ ಕೊಟ್ಟರೆ ದುಡಿಯುವ ಮನಸ್ಸಿರುವುದೆ?
ಯುವಪೀಳಿಗೆಯನ್ನು ರಾಜಕೀಯದ ದಾಳ ಮಾಡಿಕೊಂಡು ಮನೆಯಿಂದ ಹೊರಗೆಳೆದರೆ ಒಳಗಿದ್ದ ಜ್ಞಾನಕ್ಕೆ ಬೆಲೆಯೆಲ್ಲಿ?
ಪೋಷಕರೆ ಮಕ್ಕಳನ್ನು ಮನೆಯಿಂದ ಹೊರಹಾಕಿ ದೂರ ಮಾಡಿಕೊಂಡರೆ  ಸರ್ಕಾರ ಕಾರಣವಾಗದು.
ಒಟ್ಟಿನಲ್ಲಿ ಎಲ್ಲದ್ದಕ್ಕೂ ಕಾರಣ ನಮ್ಮ ಸಹಕಾರವಷ್ಟೆ.ಇದು ಸತ್ಯ ಧರ್ಮ ಕ್ಕೆ ಸಿಕ್ಕಿದರೆ ಸಾಲ ತೀರುತ್ತದೆ.ಅಸತ್ಯ ಅಧರ್ಮಕ್ಕೆ  ಇದ್ದರೆ ಭ್ರಷ್ಟಾಚಾರ ಬೆಳೆದು ಭ್ರಷ್ಟರ ವಶದಲ್ಲಿ ಜೀವವಿರುತ್ತದೆ. 
ಕುಳಿತು ತಿನ್ನುವವರಿಗೆ ಕುಡಿಕೆ ಹಣ ಸಾಲದು.
ಇದು ಸಾಲದು ಅಂದರೆ ಸಾಲ ಅದು ಎಂದರ್ಥ.
ಮಹಾತ್ಮರುಗಳು ಯಾಕೆ  ಯೋಗಮಾರ್ಗ ಹಿಡಿದರು,? ಭೋಗದಿಂದ ದೂರವಾದರು? ಕಾರಣ  ಸಾಲದಿಂದ‌ಬಿಡುಗಡೆ ಪಡೆಯಲು ಯೋಗಮಾರ್ಗ  ಅಗತ್ಯ.
ಆರೋಗ್ಯಕರ‌ಜೀವನದಿಂದ  ಸುಖ ಸಮೃದ್ದಿ,ಶಾಂತಿ ತೃಪ್ತಿ ಸಿಗೋವಾಗ  ಆರೋಗ್ಯಕೆಡಿಸಿಕೊಂಡು  ಔಷಧಗಳಿಗೆ ಲಕ್ಷಾಂತರ ಹಣವನ್ನು ‌ಸುರಿಯುವ ಅಗತ್ಯವಿದೆಯೆ? ಔಷಧಕ್ಕೆ ಬಳಸುವ ಹಣವನ್ನು ದಾನಧರ್ಮ/ಕಾರ್ಯಕ್ಕೆ‌ ಬಳಸಿದರೆ‌  ಅಸುರರ ಕಣ್ಣು ಕೆಂಪಾಗುತ್ತದೆ ಎಂದರೆ ಅಜ್ಞಾನ ಮಿತಿಮೀರಿದೆ.  ಹೊರಗಿನ ತಳುಕು ಬಳುಕಿನ‌ ಮನರಂಜನೆ ಒಳಗಿನ  ಆತ್ಮಜ್ಞಾನವನ್ನು  ಒಪ್ಪಿಕೊಂಡು ‌ ನಡೆಯದಂತೆ ತಡೆಯುತ್ತದೆ.  ಎರಡೂ ಇತಿಮಿತಿಯಲ್ಲಿದ್ದರೆ ಸಮಾಧಾನ.
ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ.