ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Monday, October 27, 2025

ಸೋಲೇ ಗೆಲುವಿನ ಮೆಟ್ಟಿಲು

ಸೋಲು ಗೆಲುವು,  ಕಷ್ಟ ಸುಖ ಇವೆರಡೂ ಒಂದೇ ನಾಣ್ಯದ ಎರಡು ಮುಖವಾಗಿದೆ. ಯಾವಾಗ ಮಾನವ ಸತ್ಯದೆಡೆಗೆ ಹೊರಡುವನೋ ಸೋಲಿನ‌ಮುಖ ಹೆಚ್ಚಾಗಿ ಕಾಣುತ್ತದೆ. ಆಗ  ಅಸತ್ಯದೆಡೆಗೆ  ಮುಖ ಮಾಡಿಕೊಂಡು ಜೀವನ‌ ನಡೆಸಲು ಪ್ರಾರಂಭಿಸುವನು. ಆಗಲೂ ಕಷ್ಟಗಳು ನಷ್ಟಗಳು ಎದುರಾದಾಗ ಮತ್ತೆ ಸತ್ಯವನ್ನು ಅರಸುವನು. ಹೀಗೇ ತನ್ನ ಗೆಲುವಿಗಾಗಿ ಸುಖಕ್ಕಾಗಿ  ಪ್ರಯತ್ನ ಪಡುವಾಗ  ಪರಮಾತ್ಮನ  ಸತ್ಯ  ಬಿಟ್ಟು  ಪರಕೀಯರನ್ನು ಸೋಲಿಸುವುದೇ ಮುಖ್ಯ  ಎನಿಸಿದರೆ  ಅದೇ ಮುಂದೆ ದೊಡ್ಡ ದೊಡ್ಡ ಸಮಸ್ಯೆಗೆ ಕಾರಣವಾಗಿ ಕೊನೆಯಲ್ಲಿ ಸೋತು ಹೋಗುವನು. ಮಹಾತ್ಮರು  ಸತ್ಯ ತಿಳಿದು ಗೆಲ್ಲುವರು.

ಒಟ್ಟಿನಲ್ಲಿ ಸೋತವನು ಗೆಲ್ಲಲು ಪ್ರಯತ್ನ ಪಡುವುದು ಸಹಜ.
ಆದರೆ ಆ ಗೆಲುವಿನ ಹಿಂದೆ ಸತ್ಯವಿದೆಯೋ ಅಸತ್ಯವಿದೆಯೋ ಎನ್ನುವ ಜ್ಞಾನ ಅತಿ ಮುಖ್ಯ.
ಯಾರನ್ನೂ ಯಾರೂ ಆಳಲಾಗದು ಎನ್ನುವುದು ಸತ್ಯ ಹೀಗಾಗಿ ಜ್ಞಾನಿಗಳಾದವರು  ಪರಮಾತ್ಮನ ದಾಸರಾಗಿ ಶರಣರಾಗಿ  ಮುಂದೆ ನಡೆದರು. ಹಿಂದಿನ ರಾಜಪ್ರಭುತ್ವದ ರೀತಿ ನೀತಿ ಸಂಸ್ಕೃತಿ ಸಂಸ್ಕಾರದ ಶಿಕ್ಷಣವನ್ನು ನೀಡದೆ  ಜನರನ್ನು ಆಳಲು ಹೋದವರಿಗೆ  ಗೆಲುವು ಸಿಗುತ್ತಿದೆ ಎಂದರೆ ಜನರ ಅಜ್ಞಾನವಷ್ಟೆ. ಅಜ್ಞಾನವೇ ಎಲ್ಲಾ ಸಮಸ್ಯೆಗೆ ಕಾರಣ.
ಉಪದೇಶ ಮಾಡೋದು ತಪ್ಪಲ್ಲ. ಉಪ ಆದೇಶದ ಹಿಂದಿನ ವಿಜ್ಞಾನವನ್ನು ಅರಿತು ನಡೆಯೋದು  ಮುಖ್ಯ. ವಾಸ್ತವದಲ್ಲಿ ದೇಶದ ಸ್ಥಿತಿಗೆ ಕಾರಣವಾಗಿರುವ  ಶಿಕ್ಷಣದ ವಿಚಾರಗಳು ಮಕ್ಕಳನ್ನು  ತಂತ್ರದಿಂದ ಆಳಲು ಹೊರಟಿವೆ. ಸ್ವತಂತ್ರ ಜ್ಞಾನ ಒಳಗೇ ಅಡಗಿದ್ದರೂ ಗುರುತಿಸಲಾಗದ  ಪಠ್ಯ ಪುಸ್ತಕದ ಹೊರೆಯ ಜೊತೆಗೆ  ಆಹಾರವೂ ಕಲಬೆರೆಕೆ ಆಗಿ ಆರೋಗ್ಯ ಹಾಳು ಮಾಡಿದರೆ  ಗೆಲುವು ಯಾರದ್ದು? ಸೋಲುವುದು ಯಾರು? 
ಅಜ್ಞಾನದಲ್ಲಿ ಸೋಲಿಸುವುದು ಸುಲಭದ ಕೆಲಸ. ಆದರೆ ಜ್ಞಾನದ ನಂತರವೇ  ಸೋತವರು ಯಾರು ಗೆದ್ದವರು ಯಾರು ಎನ್ನುವುದು ಅರ್ಥ ವಾಗುವುದು.
ಈಗಲೂ ಭಾರತ ವಿಶ್ವಗುರು ಎನಿಸಿಕೊಂಡಿದೆ .ಆದರೆ ಅದನ್ನು  ದುರ್ಭಳಕೆ ಮಾಡಿಕೊಂಡು  ರಾಜಕೀಯ ನಡೆಸೋರ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಗೆಲುವು ಎಂದು  ಹೊರಗೆ  ಸಮಾರಂಭ ನಡೆಸಿದರೆ  ನಿಜವಾದ ಸೋಲು  ಜನರದ್ದೆ ಆಗುತ್ತದೆ. ಎಷ್ಟು ಹೊರಗೆ ಗೆದ್ದರೂ ಒಳಗಿನ ಸೋಲಿನ  ಅನುಭವಿಸೋದನ್ನು ತಡೆಯಲಾಗದು.
ಸ್ಪರ್ಧೆ ನಡೆಸೋದಾದರೆ ಸತ್ಯ ಧರ್ಮ ದಲ್ಲಿರಬೇಕು. ಅಸತ್ಯ ಅಧರ್ಮ ದೆಡೆಗೆ  ನಡೆಸಿದಷ್ಟೂ ಜೀವನದಲ್ಲಿ ಸೋಲುವುದು ಹೆಚ್ಚಾಗುತ್ತದೆ. ಆದರೂ  ಸೋತ ಮೇಲೇ ಗೆಲುವಿನ ರುಚಿ ಹೆಚ್ಚುವುದು. ಸೋಲೇ ಗೆಲುವಿನ‌ಮೆಟ್ಟಿಲು ಎಂದಿರುವರು...
ಭಯ ಹುಟ್ಟಿಸಿ ಭಯೋತ್ಪಾದಕರಾಗಿ  ಜನರನ್ನು ಸೋಲಿಸಬಹುದು  ಆದರೆ  ಇದರಿಂದ  ಆತ್ಮರಕ್ಷಣೆ ಆಗಿದ್ದರೆ ಸರಿ.ಆತ್ಮಹತ್ಯೆಯಾದರೆ? ಆತ್ಮಕ್ಕೆ ಸಾವಿಲ್ಲ , ಆತ್ಮವೇ ದೇವರು, ಸತ್ಯವೇ ದೇವರು...ಅಂದರೆ ಹತ್ಯೆಯಾಗೋದು ಸತ್ಯ. ಸತ್ಯ ಹಿಂದುಳಿದಷ್ಟೂ ಧರ್ಮ ಸಂಕಟವೇ ಹೆಚ್ಚುವುದು.
ಇದನ್ನರಿತು ಮಾನವ ನಡೆದಾಗಲೇ  ಸೋಲು ಗೆಲುವಿನ‌ ಲೆಕ್ಕಾಚಾರ  ಚೆನ್ನಾಗಿ ಅರ್ಥ ವಾಗುತ್ತದೆ.

Wednesday, October 8, 2025

ಕಾಣದ ದೇವರಿರೋದೆಲ್ಲಿ?

ದೇವರಿರೋದೆಲ್ಲಿ? ಒಳಗೋ ಹೊರಗೋ? 

ರಾಮಾಯಣ ಮಹಾಭಾರತ ಭಗವದ್ಗೀತೆ ಯಂತಹ‌
ಮಹಾಗ್ರಂಥಗಳು ಇಂದು ಮಾನವನಿಗೆ ಜೀವನ ನಡೆಸಲು ಆಧಾರವಾಗಿದೆ. ಆಧಾರವಾಗಿದ್ದರೆ ಧರ್ಮ ಉಳಿಯುತ್ತಿತ್ತು ಅದನ್ನೇ ಆಹಾರವಾಗಿ ತಿಂದರೆ  ಗ್ರಂಥ ಹೊಟ್ಟೆಗೆ ಹೋದರೂ ತಲೆಯೊಳಗೆ  ಜ್ಞಾನವಿಲ್ಲದಿದ್ದರೆ ವ್ಯರ್ಥ.

ದೇವರೆಲ್ಲಿರುವುದು  ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಸಿಗದು.ಆದರೆ  ಇಂದಿನ ಜನತೆ ಹೊರಗೇ ಹುಡುಕಿಕೊಂಡು ಕಾಣದೆ ಪರದಾಡುತ್ತಿರುವರು. ಸಾಲದೆನ್ನುವಂತೆ  ಹೋರಾಟ ಹಾರಾಟ ಮಾರಾಟಕ್ಕೆ ಇಳಿದು ಒಳಗೇ ಇರುವ ಆತ್ಮಸಾಕ್ಷಿಗೆ ವಿರುದ್ದ ನಡೆದು ನ್ಯಾಯಾಲಯದವರೆಗೂ ದೇವರನ್ನು  ಕರೆದುಕೊಂಡು ಹೋಗಿ ಇವನಿಗೊಂದು ದೇವಸ್ಥಾನ ಕಟ್ಟಲು ಅನುಮತಿ ಕೊಡಿ ಎಂದರೆ ನ್ಯಾಯಾಧೀಶರೆ ದೇವರಿಗಿಂತ ದೊಡ್ಡವರಾಗಿ ತೀರ್ಪು ನೀಡಲೇಬೇಕು.

ತೀರ್ಪು  ಆಸ್ತಿಕ ನಾಸ್ತಿಕರಿಗೆ ಒಪ್ಪುವಂತೆ ಇರೋದು ಕಷ್ಟ. ಹೀಗಾಗಿ  ನ್ಯಾಯಾಧೀಶರಾಗೋದು  ಬಹಳ ಕಷ್ಟದ ಕೆಲಸ.
ದೇವರಾಗಿರೋದು ಕಷ್ಟ ಅಸುರರಾಗಿರೋದು ಸುಲಭ. ಹೀಗಾಗಿ ಇಂದು ದೇವರ ಹೆಸರಿನಲ್ಲಿ ಅಸುರರು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು  ತಾವೇ ದೇವರಂತೆ ನಟನೆ ಮಾಡಿದರೂ ಕೇಳೋರಿಲ್ಲದ ಪರಿಸ್ಥಿತಿಇದೆ. ಇದಕ್ಕೆ ಕಾರಣವೇ ಅಜ್ಞಾನ ವಾಗಿದೆ. ಎಲ್ಲಿ ಹುಡುಕಬೇಕು ಯಾವುದನ್ನು ಕೆದಕಬೇಕು ಯಾರನ್ನು ಕೇಳಬೇಕು ಯಾರನ್ನು ಬೆಳೆಸಬೇಕು? ಏನು ಬೇಡಬೇಕು? ಎಷ್ಟು ಕೊಡಬೇಕು? ಯಾವುದೂ  ತಿಳಿಯದೆ  ಹೊರಗೆ ಕಂಡದ್ದೇ ಸತ್ಯವೆಂದು ಹಿಂದೆ ನಡೆದರೆ ಹಿಂದೂಗಳಾಗೋದಿಲ್ಲ. ಹಿಂದಿನ ಮಹಾತ್ಮರು ದೇವರನ್ನು ಬೆಳೆಸಿಲ್ಲ ದೈವತ್ವ ಬೆಳೆಸಿಕೊಂಡು ಮುಂದೆ ನಡೆದರು. ಈಗ ಮಕ್ಕಳ ದೈವತ್ವಕ್ಕೆ ಬೆಲೆಕೊಡದ ಶಿಕ್ಷಣ  ಮಕ್ಕಳನ್ನು ಆಳಲು ಹೊರಟಿದೆ. ಇದೇ ಮುಂದೆ ಪೋಷಕರನ್ನು ಗುರು ಹಿರಿಯರನ್ನು ಆಳುವಾಗ ಶಕ್ತಿಹೀನವಾದ  ದೇಹಕ್ಕೆ ಏನೂ ಮಾಡಲಾಗದೆ ಸೋಲುತ್ತದೆ.
ಏನು ಕೊಡುವೆವೋ ಅದೇ ತಿರುಗಿ ಬರೋದು.
ಪುರಾಣ‌ಇತಿಹಾಸ ಓದಿಕೊಂಡು ವಾಸ್ತವದಲ್ಲಿ ಜೀವನ ನಡೆಸುವಾಗ  ಸತ್ಯ ಮತ್ತು ಧರ್ಮ ದ ಅರಿವೇ ಮುಖ್ಯ.
ಸರ್ವಕಾಲಿಕ ಸತ್ಯವೇ ದೇವರು. ಅಂದರೆ ಅಂದು ಇಂದು ಮುಂದು ಇರುವ ಒಂದೇ ಭೂಮಿಯ ಮೇಲಿರುವ ಎಲ್ಲಾ ದೇವಾಸುರರಿಗೆ  ಭೂಮಿ ಆಳೋದೇ ಗುರಿಯಾದರೆ ಭೂಮಿಗೆ ಅಸ್ತಿತ್ವ ಇಲ್ಲವೆ? ಧರ್ಮ ಸತ್ಯವಿಲ್ಲದೆ ಆಳಿದರೆ  ಮಾರಿಯಾಗುವಳಷ್ಟೆ. ಇಷ್ಟು ತಿಳಿದರೆ ಸಾಕು ನಮ್ಮಲ್ಲಿ ಸಾಕಷ್ಟು ಜ್ಞಾನಸಂಪತ್ತಿದೆ.ಅದನ್ನು ಲೋಕಕಲ್ಯಾಣಕ್ಕಾಗಿ
ನಿಸ್ವಾರ್ಥ ನಿರಹಂಕಾರ ಮತ್ತು ಪ್ರತಿಫಲಾಪೇಕ್ಷೆ ಇಲ್ಲದೆ ಮಹಾತ್ಮರುಗಳು  ಹಿಂದಿನ ಕಾಲದಲ್ಲಿ ನಡೆಸಿದ್ದರೆಂದರೆ ಅದರಲ್ಲಿ ಯೋಗವಿತ್ತು. ಯಾವಾಗಿದು ಭೋಗಕ್ಕೆ ಸೀಮಿತವಾಯಿತೋ ದೈವತ್ವ‌ಕುಸಿಯಿತು. ಹೀಗಾಗಿ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಎಷ್ಟು ಹಣ ಅಧಿಕಾರ ಸ್ಥಾನಪಡೆದರೂ ಆತ್ಮಕ್ಕೆ ತೃಪ್ತಿ ಸಿಗದೆ ಋಣ ಕಳೆಯದೆ‌ಪಾಪಕ್ಕೆ ತಕ್ಕಂತೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪುನರ್ಜನ್ಮ ನಿಶ್ಚಿತ ಎಂದಿರುವರು.
ಧಾರ್ಮಿಕ ವರ್ಗ ಇದನ್ನರಿತಾಗಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಎಷ್ಟು ಮಂತ್ರ ತಂತ್ರ ಯಂತ್ರ ಬಳಸಿದರೂ ಸ್ವತಂತ್ರ ಜ್ಞಾನವಿಲ್ಲದಿದ್ದರೆ ಜೀವನ್ಮುಕ್ತಿ ಸಿಗದು.
 
ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ ಎನ್ನುವರು.
ಹಾಗಾದರೆ ಪರಮಾತ್ಮ ಒಬ್ಬನೇ ಇಬ್ಬರೆ ಹಲವರೆ? ಎಲ್ಲರಲ್ಲಿಯೂ ಅಡಗಿರುವ ಆ ಒಂದೇ ಚೇತನಾಶಕ್ತಿಯನ್ನು  ಅರ್ಥ ಮಾಡಿಕೊಳ್ಳಲು  ನಿರಾಕಾರದೆಡೆಗೆ ನಡೆದವರಿಗೆ ಸಾಧ್ಯವಾಗಿದೆ  ಎಂದರೆ ಮಹಾತ್ಮರಿಗೆ ದೇವರ ದರ್ಶನ ಆಗಿದೆ . ಮಹಾತ್ಮರು ಇರೋದೆಲ್ಲಿ? ಒಳಗೋ ಹೊರಗೋ?
 ಹೋರಾಟ ಹಾರಾಟ ಮಾರಾಟದಲ್ಲಿಯೇ ಮುಳುಗಿರುವ ಮನುಷ್ಯನಿಗೆ  ತನ್ನೊಳಗೆ ಇರುವ ಆ ಮಹಾ ಆತ್ಮದ ದರ್ಶನ ಆಗದಿದ್ದರೆ  ದೇವರಾದರೂ ಏನೂ ಮಾಡಲಾಗದು.
ಒಟ್ಟಿನಲ್ಲಿ  ದೇವರು ಧರ್ಮ, ಜಾತಿ,ಪಂಗಡ,ಪಕ್ಷ,ದೇಶದೊಳಗೇ ಅಡಗಿದೆ. ದೇಶ ಒಂದೇ ಎನ್ನುವ ಸತ್ಯವರಿತರೆ ತನ್ನೊಳಗೆ ಇರುವ ದೈವತ್ವದೆಡೆಗೆ  ಇರುವ  ಒಂದೇ ದೇವರ ನಾಮಸ್ಮರಣೆಯಲ್ಲಿ ತನ್ನ ಕಾಯಕದಲ್ಲಿ ಕೈಲಾಸವನ್ನು ಕಾಣುತ್ತಾ ಸ್ವತಂತ್ರ ಜ್ಞಾನದಿಂದ ಸರಳವಾಗಿ ಇರುವ  ದೇವರನ್ನು ಮಾನವ‌ಕಾಣಬಹುದು.

ಇದನ್ನು ತಿಳಿಸೋದು ಸುಲಭವಾದರೂ  ಅದರಂತೆ ನಡೆಯೋದು ಬಹಳ ಕಷ್ಟದ ಕೆಲಸ.ಇದಕ್ಕಾಗಿ ನಾವು ಹೊರಗೆ ಬೆಳೆಸಿಕೊಂಡ  ಅಸಂಖ್ಯಾತ  ಜಾತಿ ಧರ್ಮ ದೇವರುಗಳ  ತಂಟೆಗೆ ಹೋಗದೆ ರಾಜಕೀಯದಿಂದ ದೂರವಿದ್ದು ಪರಮಾತ್ಮ ನಮಗೆ ಕೊಟ್ಟಿರುವ  ಧರ್ಮ ಕರ್ಮ ಕ್ಕೆ ಋಣಿಯಾಗಿ ಸತ್ಸೇವೆ ಸತ್ಸಂಗದಲ್ಲಿ ಜೀವನ ನಡೆಸಬೇಕು.
ಹಿಂದೆ ದಾಸ ಶರಣರು ಮಹಾತ್ಮರುಗಳು  ಯೋಗದಿಂದ ದೇವರನ್ನು ಕಂಡಿದ್ದರೆ ಇಂದು ನಾವು ಭೋಗಕ್ಕಾಗಿ ದೇವರನ್ನು ಬೇಡುತ್ತಾ ಸಾಲದಲ್ಲಿ  ಜೀವನ ನಡೆಸೋ ಪರಿಸ್ಥಿತಿ  ತಂದುಕೊಂಡು  ಅದೇ ದೇವರನ್ನು ಸಾಲ ತೀರಿಸಲು ಆಳಲು ಹೊರಟರೆ  ದೇವರು  ಕಾಣದಿದ್ದರೂ  ಅಸುರರು ಬೆಳೆಯುವರು. 
ರಾಜಕೀಯ ಸರಿಯಿಲ್ಲ  ಎನ್ನುವ  ಜನರಿಗೆ ರಾಜಕೀಯ ಎಂದರೆ ಏನೆಂಬ ಅರಿವಿದ್ದರೆ ಉತ್ತಮ.
ಇನ್ನೊಬ್ಬರನ್ನು ಆಳೋದೇ ರಾಜಕೀಯವಾಗಿರುವ ಇಂದು ತನ್ನ ತಾನರಿತು ನಡೆಯೋ ರಾಜಯೋಗದ ಅರಿವಿಲ್ಲದಿರೋದು ದುರಂತವಷ್ಟೆ.
ದೇವರಿದ್ದರೆ ಇಷ್ಟು ಭ್ರಷ್ಟಾಚಾರ ಹೇಗೆ ಬೆಳೆಯಿತು? ಇಷ್ಟು ಅಸುರಿಗುಣ ಮಾನವನಲ್ಲಿ ಹೇಗೆ ಮನೆ‌ಮಾಡಿತು?
ಇದಕ್ಕೆ ಕಾರಣ ಮಾನವನ ಅತಿಯಾದ ರಾಜಕೀಯ ಬುದ್ದಿ ಸ್ವಾರ್ಥ ಅಹಂಕಾರದ ‌ ವ್ಯವಹಾರಿಕ ಜ್ಞಾನ. ವ್ಯವಹಾರಕ್ಕೆ ಇಳಿದಾಗ ಹಣ ಮಾತ್ರ ಕಾಣೋದು ಜ್ಞಾನದ ದುರ್ಭಳಕೆ ಆದಷ್ಟೂ ಅಜ್ಞಾನ ಬೆಳೆಯುತ್ತದೆ. ಅಂದರೆ ಕಲಿಯುಗದಲ್ಲಿ ಕಲಿಕೆಯೇ  ಅಸತ್ಯದೆಡೆಗೆ ನಡೆದಾಗ ತಲೆಗೆ ತುಂಬಿದ ವಿಷಯವೇ  ಮಾನವನ ನಡೆ ನುಡಿಯಾಗಿ  ನಾನೇ ದೇವರು ಎನ್ನುವ ಅರ್ಧ ಸತ್ಯದಲ್ಲಿ ತಾನೂ ಮುಂದೆ ಹೋಗದೆ ಅನ್ಯರನ್ನೂ  ಸರಿದಾರಿಯಲ್ಲಿ ನಡೆಯಲು ಬಿಡದೆ ಮಧ್ಯೆ ನಿಂತು ಆಳೋದೇ ಸಾಧನೆ ಎನ್ನುವನು.
ಮಧ್ಯಮ ವರ್ಗ, ಮಾಧ್ಯಮ, ಮಾನವ, ಮಹಿಳೆ,ಮಕ್ಕಳ ಈ ಸ್ಥಿತಿಗೆ  ಮೇಲಿರುವ ದೇವರು ಕಾರಣನೆ ಅಥವಾ ಕೆಳಗಿಳಿದ ಅಸುರರೆ? 
ಇಬ್ಬರಿಗೂ ಒಂದೇ ಸ್ಥಾನಮಾನ ಕೊಟ್ಟು ಸಹಕರಿಸಿರುವ ಮನುಷ್ಯನೇ  ಎಲ್ಲದ್ದಕ್ಕೂ ಕಾರಣವಾದಾಗ ಅದರ ಫಲವನ್ನು ಅವನೇ ಉಣ್ಣಬೇಕೆನ್ನುತ್ತದೆ ಕರ್ಮ ಸಿದ್ದಾಂತ.
ಸಿದ್ದರನ್ನು  ಹಿಡಿದು ಯೋಗಿ ಯಾಗೋದು ಕಷ್ಟ.
ಆದರೆ ಅವರ ಹೆಸರನ್ನು ಹಿಡಿದು ತಾನೇ ಯೋಗಿ ಎಂದು ಪ್ರಸಿದ್ದರಾಗೋದು ಸುಲಭ. ಹಣ ಅಧಿಕಾರ ಸ್ಥಾನ ವಿದ್ದರೆ ಜನ ಬಲ ಹಣಬಲವೂ‌  ಬೆಳೆದು  ಅದೇ ಮುಂದೆ ದೇವರಿಲ್ಲ ನಾನೇ ಎಲ್ಲಾ ಎನ್ನುವ ಹಂತಕ್ಕೆ ತರುತ್ತದೆ.
ರಾಮಾಯಣ ದಿಂದ ರಾಮನ ನಡೆಯನ್ನು ಅರ್ಥ ಮಾಡಿಕೊಂಡು ಯೋಗಿಯಾಗಬಹುದು.ಶ್ರೀ ರಾಮಚಂದ್ರನ ಪ್ರಜಾಪರಿಪಾಲನೆ ಧರ್ಮ ಪರಿಪಾಲನೆ  ಇಂದಿನ ಪ್ರಜಾಪ್ರಭುತ್ವದಲ್ಲಿ  ಅರ್ಥ ಮಾಡಿಕೊಳ್ಳಲು  ಸಾಮಾನ್ಯರಂತೆ ಬದುಕಿರಬೇಕಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಾಮಾನ್ಯ ಪ್ರಜೆಗಳೇ ಹೀಗಿರುವಾಗ ‌ಇಲ್ಲಿ ರಾಜರು ಯಾರು?
ರಾಮರಾಜ್ಯದ ಹೆಸರಿನಲ್ಲಿ ಎಷ್ಟು ದೇವಸ್ಥಾನ‌ಕಟ್ಟಿದರೂ ದೈವತ್ವದ ಶಿಕ್ಷಣ ನೀಡದೆ ಜನರನ್ನು ದಾರಿತಪ್ಪಿಸಿ ಆಳಿದರೆ ಅಧರ್ಮ ಕ್ಕೆ ಜಯ.
ಇದನ್ನು  ಪ್ರಗತಿಪರ ಎನ್ನುವವರು ಅರ್ಥ ಮಾಡಿಕೊಳ್ಳಲು ಕಷ್ಟ.ಕಾರಣ ಜನರೆ ಅವರನ್ನು ಎತ್ತಿ ಏಣಿಗೇರಿಸಿ ಮೇಲಕ್ಕೆ ಕೂರಿಸಿ  ಅಧಿಕಾರ ಕೊಟ್ಟಿರುವಾಗ  ಹೊರಗೆ ತಳುಕುಬಳುಕಿನ ಜೀವನ. ಒಳಗಿರುವ ಅಸಮಾನತೆಯ ಶಿಕ್ಷಣ ಜ್ಞಾನ, ಅಜ್ಞಾನದ  ಭೋಗದ ಜೀವನದಲ್ಲಿ ದೇವರು ಕಾಣೋದಿಲ್ಲ. ಹೀಗಾಗಿ ದೇವರನ್ನು ಆಳೋದಕ್ಕೆ  ಜನರನ್ನು ಬಳಸುವರು. ಸತ್ಯವೇ ದೇವರೆನ್ನುವರು,ಧರ್ಮ ವೇ ದೇವರೆನ್ನುವರು, ಹಾಗಾದರೆ ಸತ್ಯ ಎಲ್ಲಿದೆ ಧರ್ಮ ಎಲ್ಲಿದೆ ಎನ್ನುವ ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿದರೆ ಸಿಗದು.
ಆತ್ಮಾವಲೋಕನದಿಂದ  ಅಧ್ಯಾತ್ಮ ಸಂಶೋದನೆ ಮಾಡಿಕೊಂಡರೆ  ವಾಸ್ತವದಲ್ಲಿ  ನಾವೆತ್ತ ಸಾಗಿದ್ದೇವೆನ್ನುವುದು  ಒಳಗೇ ಅರ್ಥ ವಾಗುತ್ತದೆ. ನಮ್ಮದೇ ಸಹಕಾರದಿಂದ  ಬೆಳೆದಿರುವ ದೇವಾಸುರರು  ನಮಗೇ ಕಾಣದಿದ್ದರೆ ಏನರ್ಥ?
ಈ ಪೋಸ್ಟ್ ಹಂಚಿಕೊಳ್ಳಲು  ನಮಗೆ ದೇವರು ಮನಸ್ಸು ಕೊಡಬೇಕು. ಅಸುರರು  ಒಳ್ಳೆಯದಕ್ಕೆ ಸಹಕರಿಸೋದಿಲ್ಲ ಹೀಗಾಗಿ ಸತ್ಯ ಹಿಂದುಳಿದು ಮಿಥ್ಯ ಹೊರಗೆ ಓಡುತ್ತಿದೆ.
ಎಷ್ಟು ಓಡಿದರೂ ಒಂದೇ ಸತ್ಯದಡಿ ನಿಲ್ಲಬೇಕೆನ್ನುವುದು ಪರಮಾತ್ಮನ ಇಚ್ಚೆ.

ಹಣ ಅಧಿಕಾರ ಸ್ಥಾನವಿದ್ದರೆ  ದೇವರಾಗುವರೆ? ಇಲ್ಲದಿದ್ದರೆ  ಮಾನವರೆ? ಹಾಗಾದರೆ ಅಸುರರು ಯಾರು? ಉತ್ತರ ತಿಳಿದವರು ತಿಳಿಸಬಹುದು..ಕಾರಣ ಉತ್ತರ ತಿಳಿದೂ ತಿಳಿಸದೆ  ಅಸುರರ ಹಿಂದೆ ನಡೆದವರಿಗೆ ದೇವರು ಕಂಡಿಲ್ಲ. ಅಧಿಕಾರ ಸ್ಥಾನ ಹಣ ಸಿಕ್ಕಿದೆಯಷ್ಟೆ.

ಶ್ರೀ ಶಂಕರಾಚಾರ್ಯರ ಪ್ರಶ್ನೋತ್ತರ ಮಾಲಿಕ

ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ
ಪ್ರಶ್ನೋತ್ತರಮಾಲಿಕಾ , ಬದುಕಿನಲ್ಲಿ ಏನನ್ನು
ಮಾಡಬೇಕು , ಏನನ್ನು ಮಾಡಬಾರದೆಂದು ಬಹಳ
ಸುಂದರ , ಸರಳವಾಗಿ ತಿಳಿಸುತ್ತದೆ..

ಈ ಲೇಖನವನ್ನು ತಪ್ಪದೇ ಓದಿ..

ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..?
ಪೂಜ್ಯರೇ ಜೀವನದಲ್ಲಿ
ಏನನ್ನು ಅನುಸರಿಸಬೇಕು ?
ಉತ್ತರ - ಗುರುವಚನಮ್
ಜೀವನದಲ್ಲಿ ಗುರು-ಹಿರಿಯರ
ಮಾತನ್ನು ಅನುಸರಿಸಬೇಕು.

ಪ್ರಶ್ನೆ - ಕಃ ಪಥ್ಯತರಃ ?
ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ?
ಉತ್ತರ - ಧರ್ಮಃ
ಧರ್ಮವೇ ಹಿತಕರವಾದದ್ದು.

ಪ್ರಶ್ನೆ - ಕಿಮ್ ವಿಷಮ್ ?
ಯಾವುದು ವಿಷ ?
ಉತ್ತರ - ಅವಧೀರಣಾ ಗುರುಷು
ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷ.

ಪ್ರಶ್ನೆ - ಕಿಮ್ ಮನುಜೇಷು ಇಷ್ಟತಮಮ್ ?
ಮನುಷ್ಯರಲ್ಲಿ ಇರಲೇಬೇಕಾದ ಶ್ರೇಷ್ಠ ಗುಣ
ಯಾವುದು ?
ಉತ್ತರ - ಸ್ವಪರಹಿತಾಯ ಉದ್ಯತಂ ಜನ್ಮ
ಯಾವಾಗಲೂ ತನ್ನ ಮತ್ತು ಇತರರ ಸುಖಕ್ಕಾಗಿ
ಜೀವನವನ್ನು ತೊಡಗಿಸಿಕೊಳ್ಳುವುದು.

ಪ್ರಶ್ನೆ - ಕೇ ಚ ದಸ್ಯವಃ ?
ಕಳ್ಳರು ಯಾರು ?
ಉತ್ತರ - ವಿಷಯಾಃ
ಸುಖಪಭೋಗ
ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ
ಮನಸನ್ನು
ಅಪಹರಿಸುತ್ತವೆ )

ಪ್ರಶ್ನೆ - ಕೋ ವೈರೀ ?
ನಮ್ಮ ಶತ್ರು ಯಾರು ?
ಉತ್ತರ - ಯಸ್ತು ಅನುದ್ಯೋಗಃ
ನಿರುದ್ಯೋಗವೇ ನಮ್ಮ ಶತ್ರು.

ಪ್ರಶ್ನೆ - ಕಿಮ್ ಗುರುತಾಯಾಂ ಮೂಲಮ್ ?
ಶ್ರೇಷ್ಠತೆಯ ಮೂಲ ಯಾವುದು ?
ಉತ್ತರ - ಯತ್ ಏತತ್ ಅಪ್ರಾರ್ಥನಮ್ ನಾಮ ಇತರರಲ್ಲಿ ಏನನ್ನೂ ಅಂಗಲಾಚದಿರುವುದೇ ಜೀವನದ
ಶ್ರೇಷ್ಠತೆ

ಪ್ರಶ್ನೆ - ಕಿಮ್ ದುಃಖಮ್ ?
ದುಃಖವೆಂದರೇನು..?
ಉತ್ತರ - ಅಸಂತೋಷಃ
ಸಂತೋಷವನ್ನು ಕಳೆದುಕೊಂಡಾಗಿನ ಅವಸ್ಥೆ.

ಪ್ರಶ್ನೆ - ಕಿಮ್ ಜಾಡ್ಯಮ್ ?
ಆಲಸ್ಯತನವು ಯಾವುದು ?
ಉತ್ತರ - ಪಾಠತೋSಪಿ ಅನಭ್ಯಾಸಃ
ವಿದ್ಯಾವಂತನಾಗಿಬಿಟ್ಟೆನೆಂದು ತಿಳಿದು , ಅಧ್ಯಯನ
ಮಾಡದಿರುವುದು.

ಪ್ರಶ್ನೆ - ನಲಿನೀ-ದಲ-ಗತ-ಜಲವತ್-ತರಲಂ 
ಕಿಮ್ ?
ಕಮಲದ ಎಲೆಯ ಮೇಲಿನ ನೀರಿನಂತೆ
ಚಂಚಲವಾದದ್ದು ಯಾವುದು ?
ಉತ್ತರ - ಯೌವ್ವನಂ - ಧನಂ ಚ ಆಯುಃ
ತಾರುಣ್ಯ,ಸಂಪತ್ತು ಮತ್ತು ಆಯುಷ್ಯ
ಇವು ಕಮಲದ ಎಲೆ ಮೇಲಿನ ನೀರಿನಂತೆ
ಚಂಚಲವಾದವುಗಳು.

ಪ್ರಶ್ನೆ - ಕಿಮ್ ಚ ಅನರ್ಘಮ್ ?
ಬೆಲೆ ಕಟ್ಟಲಾಗದ್ದು ಯಾವುದು ?
ಉತ್ತರ - ಯದವಸರೇ ದತ್ತಮ್ ?
ಸರಿಯಾದ ಸಮಯದಲ್ಲಿ ಅನ್ಯರಿಗೆ ದಾನ ಮಾಡಿದ್ದು.

ಪ್ರಶ್ನೆ - ಆಮರಣಾತ್ ಕಿಮ್ ಶಾಲ್ಯಮ್ ?
ಸಾಯುವವರೆಗೂ ಬಾಣದಂತೆ
ಚುಚ್ಚುತ್ತಲೇ ಇರುವುದು ಯಾವುದು ?
ಉತ್ತರ - ಪ್ರಚ್ಛನ್ನಂ ಯತ್ ಕೃತಂ ಪಾಪಮ್
ಬಚ್ಚಿಟ್ಟುಕೊಂಡ ಪಾಪಕಾರ್ಯ
ಸಾಯುವವರೆಗೂ ಬಾಣದಂತೆ
ಚುಚ್ಚತ್ತಲೇ ಇರುತ್ತದೆ .

ಪ್ರಶ್ನೆ - ಕುತ್ರ ವಿಧೇಯೋ ಯತ್ನಃ ?
ಯಾವ ವಿಷಯದಲ್ಲಿ ಪ್ರಯತ್ನವನ್ನು ಮಾಡಬೇಕು ?
ಉತ್ತರ - ವಿದ್ಯಾಭ್ಯಾಸೇ ಸದೌಷಧೇ ದಾನೇ
ವಿಧ್ಯಾಭ್ಯಾಸದಲ್ಲಿ ,ಒಳ್ಳೆಯ ಔಷಧೋಪಚಾರದಲ್ಲಿ
ಮತ್ತು ದಾನ ಮಾಡುವಲ್ಲಿ ಪ್ರಯತ್ನ
ಮಾಡಬೇಕು..

ಪ್ರಶ್ನೆ - ಕೇನ ಜಿತಂ ಜಗದೇತತ್ ?
ಈ ಜಗತ್ತನ್ನು ಯಾರು ಗೆಲ್ಲುತ್ತಾರೆ ?
ಉತ್ತರ - ಸತ್ಯ-ತಿತಿಕ್ಷಾವತಾ ಪುಂಸಾ
ಸತ್ಯ ಮತ್ತು ಸಹನೆಗಳಿಂದ ಕೂಡಿದ ಮನುಷ್ಯನು ಈ
ಜಗತ್ತನ್ನು ಗೆಲ್ಲುತ್ತಾನೆ.

ಪ್ರಶ್ನೆ - ಕಸ್ಯ ವಶೇ ಪ್ರಾಣಿಗಣಃ ?
ಪ್ರಾಣಿ ಸಮೂಹವು ಯಾರ ಅಧೀನದಲ್ಲಿರುತ್ತದೆ ?
ಉತ್ತರ - ಸತ್ಯ-ಪ್ರಿಯಭಾಷಿಣೋ ವಿನೀತಸ್ಯ
ಪ್ರಾಣಿ
ಸಮೂಹವು ಸತ್ಯವದುದನ್ನು ಮತ್ತು ಪ್ರಿಯವಾದುದನ್ನು ಮಾತನಾಡುವ
ವಿನಯಶಾಲಿಯ ವಶದಲ್ಲಿ ಇರುತ್ತದೆ.

ಪ್ರಶ್ನೆ - ಕ್ವ ಸ್ಥಾತವ್ಯಮ್ ?
ಎಲ್ಲಿ ಸ್ಥಿರವಾಗಿ ನಿಲ್ಲಬೇಕು ?
ಉತ್ತರ - ನ್ಯಾಯ್ಯೇ ಪಥಿ ದೃಷ್ಟ - ಅದೃಷ್ಟ -
ಲಾಭಾಢ್ಯೇ
ದೃಷ್ಟ ಮತ್ತು ಅದೃಷ್ಟ
(ಕಂಡು ಕಾಣದ )ಲಾಭದಿಂದ ಸಮೃದ್ಧವಾದ
ನ್ಯಾಯಯುತವಾದ
ಮಾರ್ಗದಲ್ಲಿ ಸದಾ ನಿಲ್ಲಬೇಕು.

ಪ್ರಶ್ನೆ - ಕಿಮ್ ದಾನಮ್ ?
ದಾನವು ಯಾವುದು ?
ಉತ್ತರ - ಅನಾಕಾಂಕ್ಷಮ್
ಪ್ರತಿಫಲವನ್ನು ಬಯಸದೇ ಮಾಡಿದ
ದಾನವೇ ನಿಜವಾದ ದಾನವು .

ಪ್ರಶ್ನೆ - ಕಿಮ್ ಮಿತ್ರಮ್ ?
ನಿಜವಾದ ಮಿತ್ರನು ಯಾರು ?
ಉತ್ತರ - ಯೋ ನಿವಾರಯತಿ ಪಾಪಾತ್
ಪಾಪ ಕಾರ್ಯಗಳನ್ನು ಮಾಡದಂತೆ
ತಡೆಯುವನು ನಿಜವಾದ ಮಿತ್ರನು.

ಪ್ರಶ್ನೆ - ಕಿಮ್ ಶೋಚ್ಯಮ್ ?
ದುಃಖಕರವಾದುದು ಯಾವುದು ?
ಉತ್ತರ - ಕಾರ್ಪಣ್ಯಮ್
ದಾರಿದ್ರ್ಯವು (ಬಡತನವು) ಕಷ್ಟಕರವಾದದ್ದು..

ಪ್ರಶ್ನೆ - ಕಃ ಪರಿಹರ್ಯೋ ದೇಶಃ ?
ಎಂತಹ ದೇಶದಿಂದ ದೂರ ಇರಬೇಕು ?
ಉತ್ತರ - ಪಿಶುನಯುತೋ ಲುಬ್ಧಭೂಪಶ್ಚ
ಕ್ರೂರರಾದ ಪ್ರಜೆಗಳುಳ್ಳ ಮತ್ತು ಲೋಭಿಯಾದ
ರಾಜನುಳ್ಳ ದೇಶವನ್ನು ತೊರೆಯಬೇಕು.

ಪ್ರಶ್ನೆ - ಇಹ ಭುವನೇ ಕೋ ಶೋಚ್ಯಃ ?
ವಿಶ್ವದಲ್ಲಿ ಸದಾ ದುಃಖದಲ್ಲಿರುವವನು ಯಾರು ?
ಉತ್ತರ - ಸತ್ಯಪಿ ಭುವನೇ ಯೋ ನ ದಾತಾ
ಸಂಪತ್ತಿದ್ದರೂ ದಾನಿಯಾಗಿರದವನೇ ದುಃಖಿ.

ಪ್ರಶ್ನೆ - ಕಿಮಹರ್ನಿಶಂ ಅನುಚಿಂತ್ಯಮ್ ?
ಹಗಲಿರುಳು (ಸದಾಕಾಲವೂ )ಯಾವುದನ್ನು ಕುರಿತು ಚಿಂತಿಸಬೇಕು ?
ಉತ್ತರ - ಭಗವಚ್ಚರಣಮ್ ನ ಸಂಸಾರಃ
ಹಗಲಿರುಳು ಪರಮಾತ್ಮನ ಚರಣದ ಚಿಂತೆ
ಮಾಡಬೇಕೇ ವಿನಃ ಸಂಸಾರವನ್ನಲ್ಲ .

ಪ್ರಶ್ನೆ - ಕಿಮ್ ಸಂಪಾದ್ಯಂ ಮನುಜೈಃ ?
ಮಾನವರು ಏನನ್ನು ಸಂಪಾದಿಸಬೇಕು ?
ಉತ್ತರ - ವಿದ್ಯಾ , ವಿತ್ತಮ್ , ಬಲಂ , ಯಶಃ ,
ಪುಣ್ಯಮ್
ಮಾನವರು ವಿದ್ಯೆ ,ಸಂಪತ್ತು ,ಬಲ ,ಕೀರ್ತಿ
ಮತ್ತು ಪುಣ್ಯಗಳನ್ನು ಸಂಪಾದಿಸಬೇಕು .

ಪ್ರಶ್ನೆ - ಕಃ ಸರ್ವಗುಣವಿನಾಶೀ ?
ಎಲ್ಲ
ಗುಣಗಳನ್ನು ನಾಶಪಡಿಸುವಂಥಹದು ಯಾವುದು ?
ಉತ್ತರ - ಲೋಭಃ
ಲೋಭವು ಸರ್ವ ಗುಣಗಳನ್ನು ನಾಶ
ಪಡಿಸುವಂತಹದು.

ಪ್ರಶ್ನೆ - ಶತ್ರುಶ್ಚ ಕಃ ?
ವೈರಿಯು ಯಾರು ?
ಉತ್ತರ - ಕಾಮಃ
ಕಾಮವೇ ವೈರಿಯು .

ಪ್ರಶ್ನೆ - ಕಾ ಸುರಕ್ಷ್ಯಾ
ಸಂರಕ್ಷಿ ಸಲ್ಪಡತಕ್ಕಂಥಹದು ಯಾವುದು ?
ಉತ್ತರ - ಕೀರ್ತಿಃ , ಪತಿವ್ರತಾ , ನೈಜಬುದ್ಧಿಶ್ಚ
ಕೀರ್ತಿ ,ಪತಿವ್ರತೆ ಮತ್ತು ಸ್ವಂತ ಬುದ್ಧಿ (ಸ್ವಂತ
ವಿಚಾರ ಶಕ್ತಿ ) ಇವು ಸಂರಕ್ಷಿಸಲು ಅರ್ಹ .

ಪ್ರಶ್ನೆ - ಕಾ ಕಲ್ಪಲತಾ ಲೋಕೇ ?
ಜಗತ್ತಿನ್ನಲ್ಲಿ ಕಲ್ಪಲತೆ ಯಾವುದು ?
(ಬೇಡಿದ್ದನ್ನು ,ಬಯಸಿದ್ದನ್ನು ಕೊಡುವ ಬಳ್ಳಿ )
ಉತ್ತರ - ಸಚ್ಛಿಷ್ಯಾಯ ಅರ್ಪಿತಾ ವಿದ್ಯಾ
ಒಳ್ಳೆಯ ಶಿಷ್ಯನಿಗೆ ಗುರುವು ನೀಡಿದ ವಿದ್ಯೆಯು
ಜಗತ್ತಿನಲ್ಲಿ ಕಲ್ಪಲತೆ .

ಪ್ರಶ್ನೆ - ಪಾತಕಂ ಚ ಕಿಮ್ ?
ಪಾತಕವು ಯಾವುದು ?
ಉತ್ತರ - ಹಿಂಸಾ
ಹಿಂಸೆಯೇ(ಕ್ರೂರತೆ) ಪಾತಕವು.

ಪ್ರಶ್ನೆ - ಸಂಭಾವಿತಸ್ಯ ಮರಣಾತ್ ಅಧಿಕಂ ಕಿಮ್ ?
ಒಳ್ಳೆಯವನಿಗೆ ಸಾವಿಗಿಂತಲೂ
ಹೆಚ್ಚು ದುಃಖದಾಯಕ ಯಾವುದು ?
ಉತ್ತರ - ದುರ್ಯಶೋ ಭವತಿ
ಅಪಕೀರ್ತಿಯು ಮರಣಕ್ಕಿಂತಲೂ
ಹೆಚ್ಚು ದುಃಖದಾಯಕ.

ಪ್ರಶ್ನೆ - ಕೋ ವರ್ಧತೇ ?
ಯಾರು ಪ್ರಗತಿ ಯನ್ನು ಹೊಂದುತ್ತಾರೆ ?
ಉತ್ತರ - ವಿನೀತಃ
ವಿನಮ್ರ ನಾದವನು (ವಿನಯಶಾಲಿಯು )
ಪ್ರಗತಿಯನ್ನು ಹೊಂದುತ್ತಾನೆ .

ಪ್ರಶ್ನೆ - ಕಿಮ್ ಭಾಗ್ಯಂ ದೇಹವತಾಮ್ ?
ದೇಹಿಗಳಿಗೆ (ಮನುಷ್ಯರಿಗೆ)
ಭಾಗ್ಯವು ಯಾವುದು ?
ಉತ್ತರ - ಆರೋಗ್ಯಮ್
ಆರೋಗ್ಯವೇ ಭಾಗ್ಯವು .

ಪ್ರಶ್ನೆ - ಕೋ ಜಗದ್ಭರ್ತಾ ?
ಜಗತ್ತಿನ ಸಂರಕ್ಷಕನ್ಯಾರು ?
ಉತ್ತರ - ಸೂರ್ಯಃ
ಸೂರ್ಯ.

ಪ್ರಶ್ನೆ - ಸರ್ವೇಷಾಂ ಕೋ ಜೀವನಹೇತುಃ ?
ಎಲ್ಲರ ಬದುಕಿಗೆ ಕಾರಣನು ಯಾರು ?
ಉತ್ತರ - ಸ ಪರ್ಜನ್ಯಃ
ಪರ್ಜನ್ಯನು (ಮಳೆ ) ಎಲ್ಲರ ಬದುಕಿಗೆ ಕಾರಣನು .

ಪ್ರಶ್ನೆ - ಕಃ ಶೂರಃ ?
ಶೂರನು ಯಾರು ?
ಉತ್ತರ - ಯೋ ಭೀತತ್ರಾತಾ
ಭೀತನಾದವನನ್ನು ಕಾಪಾಡುವವನು ಶೂರನು .

ಪ್ರಶ್ನೆ - ತ್ರಾತಾ ಚ ಕಃ ?
ಮತ್ತೆ ಕಾಪಾಡುವವನು ಯಾರು ?
ಉತ್ತರ - ಸ ಗುರುಃ
ಗುರುವೇ ಕಾಪಾಡುವವನು.

ಪ್ರಶ್ನೆ - ಪ್ರತ್ಯಕ್ಷದೇವತಾ ಕಾ ?
ಪ್ರತ್ಯಕ್ಷ(ಸಾಕ್ಷಾತ್ ) ದೇವತೆ ಯಾರು ?
ಉತ್ತರ - ಮಾತಾ
ತಾಯಿಯೇ ಪ್ರತ್ಯಕ್ಷ ದೇವತೆಯು .

ಪ್ರಶ್ನೆ - ಪೂಜ್ಯೋ ಗುರುಶ್ಚ ಕಃ ?
ಪೂಜ್ಯ ಗುರುವು ಯಾರು ?
ಉತ್ತರ - ತಾತಃ
ತಂದೆಯೇ ಪೂಜ್ಯ ಗುರುವು .

ಪ್ರಶ್ನೆ - ಪಾತ್ರಂ ಕಿಮ್ ಅನ್ನದಾನೇ ?
ಅನ್ನದಾನಕ್ಕೆ ಅರ್ಹನಾರು ?
ಉತ್ತರ - ಕ್ಷುಧಿತಮ್
ಹಸಿದವನು ಅನ್ನದಾನಕ್ಕೆ ಅರ್ಹನು .

ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಜೀವನದಲ್ಲಿ ಇಷ್ಟು ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡರೆ ಸಾಕು..
ತತ್ವಜ್ಞಾನವನ್ನರಿಯಲು
ಇನ್ನ್ಯಾವ ಶಾಸ್ತ್ರ-ಪುರಾಣಗಳ ಅಗತ್ಯತೆಯಿಲ್ಲ..

ಆ ವಿಷ್ಣುವನ್ನೇ ಕೇಳುವ ಶಕ್ತಿ ಮಾನವನಿಗಿದೆಯೆ?

"ಹೋಗಿ ನಿನ್ನ ದೇವರಾದ ವಿಷ್ಣುವಿಗೇ ಕೇಳು" ಈ ವಾಕ್ಯವನ್ನು ನಾವು‌ಪುರಾಣ ಕಥೆಗಳಲ್ಲಿ ಹೇಳಿದ್ದನ್ನು ತಿಳಿದಿದ್ದೇವೆ. ಅಂದು ದೇವರನ್ನು  ನೋಡಲಾಗದವರು  ದೇವರಿಗೇ ಗೊತ್ತು ಅವನೇ ಎಲ್ಲದ್ದಕ್ಕೂ ಉತ್ತರ ಕೊಡಬೇಕು..ಎಂದೆಲ್ಲಾ ಹೇಳಿ ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದರು. ಈಗಲೂ ಇದೇ ನಡೆಯುತ್ತಿದೆ  ಆದರೆ  ಇಂದು ಸ್ವಯಂ ತಾವೇ ಶ್ರೇಷ್ಠ ಎನ್ನುವ ಅಹಂಕಾರ ಬೆಳೆದಿದೆಯಷ್ಟೆ.
ಇಷ್ಟಕ್ಕೂ ದೇವರನ್ನು ತೋರಿಸುವವರು ಎಲ್ಲಿರುವರು?
ಅಂದಿನ ಮಹರ್ಷಿಗಳು ಮಕ್ಕಳಲ್ಲಿನ ದೈವತ್ವವನ್ನು ಬೆಳೆಸುವ ಶಿಕ್ಷಣ ನೀಡಿ  ಸ್ವಯಂ ಗುರುದೇವರಾಗಿದ್ದರು. 
ನ್ಯಾಯ ನೀತಿ ಧರ್ಮ ಸಂಸ್ಕೃತಿಯಿಂದ ದೇವರನ್ನು ಕಾಣಬೇಕೆನ್ನುವ ಸನಾತನ ಧರ್ಮ  ಇಂದು ಹಿಂದುಳಿದವರನ್ನು  ಹಣದಿಂದ ಮೇಲೆತ್ತುವ ಹರಸಾಹಸಕ್ಕೆ ಇಳಿದು  ಇನ್ನಷ್ಟು ಅಜ್ಞಾನ  ಹೆಚ್ಚು ಮಾಡಿದೆ ಎಂದರೆ ಅರ್ಥ ಆದವರು ಮಾತನಾಡೋದಿಲ್ಲ.ಆಗದವರು  ಮಾತಿಗಿಳಿಯಲಾರರು.
ಎಲ್ಲರ‌ಮನೆ ದೋಸೆ ತೂತು ಎಂದಂತೆ ನಮ್ಮ ದೇಶದ ಕಾವಲಿಯನ್ನೇ ತೂತು ಮಾಡಿ ಆಳುವವರಿಗೆ  ಇವೆಲ್ಲವೂ  ಮನರಂಜನೆಯಾಗುತ್ತಿದೆ. 
ಅಂದಿನ‌, ನಚಿಕೇತ,ದ್ರುವ,ಪ್ರಹ್ಲಾದರಂತಹ ಮಹಾಭಕ್ತರು
ಇಂತಹ  ಹೇಳಿಕೆಯನ್ನು  ಸ್ವಯಂ ಪ್ರಕಾಶಕರಾಗಿ ಮಹಾವಿಷ್ಣುವಿನ ಭಕ್ತರಾದರು. ನಚಿಕೇತನಂತೂ ಯಮನ ದರ್ಶನ ಮಾಡಿ ಧರ್ಮ ಜ್ಞಾನಿಯಾದ .ಇಂತಹ  ಪುರಾಣ ಕಥೆ
ಇಂದಿನ‌ಮಕ್ಕಳಿಗೆ  ತಿಳಿಸುವುದಿರಲಿ  ಪೋಷಕರೆ ಕೇಳಿಸಿಕೊಳ್ಳದ ಪರಿಸ್ಥಿತಿ ಯಿದೆ. 
ನ್ಯಾಯ ದೇವತೆಗೆ ಕಣ್ಣಿಗೆ ಬಟ್ಟೆ ಕಟ್ಟಿರುವ. ಹಿಂದಿನ ಉದ್ದೇಶ
ನ್ಯಾಯವನ್ನು  ಸಮಾನವಾಗಿ  ಯಾವುದೇ ಜಾತಿ ಪಂಗಡ ಪಕ್ಷ, ಮತ ಬೇದವಿಲ್ಲದೆ ನೀಡೋದಾದರೆ ಈಗ ನಡೆದಿರೋದು ಏನು? 
ಎಲ್ಲಾ ಹಣ ಅಧಿಕಾರ ಸ್ಥಾನಕ್ಕೆ ಸೀಮಿತವಾಗಿ ಎಲ್ಲರನ್ನೂ ನಡೆಸುತ್ತಿರುವ  ಮಹಾವಿಷ್ಣುವನ್ನೇ ನ್ಯಾಯ ಕೇಳಿ ಎನ್ನುವ ಮಟ್ಟಿಗೆ ನ್ಯಾಯಾಧೀಶರು ಹೇಳುವ ಮೂಲಕ  ಜನರಲ್ಲಿ  ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆನ್ನಬಹುದೆ?

ಒಂದಂತೂ ಸತ್ಯ ಕೆಳಗಿನ ನ್ಯಾಯಾಲಯಕ್ಕೆ ಪರಮಾತ್ಮ ಕಾಣದಿದ್ದರೂ ಮೇಲಿನ  ನ್ಯಾಯಾಲಯವೇ  ಕೆಳಗಿನವರನ್ನು ನಡೆಸಿರೋದು. ಹೀಗಿರುವಾಗ ಮಾನವರಾದವರು ದೇವರನ್ನು  ನ್ಯಾಯದಿಂದ ಗೆಲ್ಲಬೇಕೆ ಅನ್ಯಾಯದಿಂದಲೆ ಎಂದು ಸಾಮಾನ್ಯ ಜ್ಞಾನ ಬಳಸಿದರೆ ಆಗೋದೆಲ್ಲಾ ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು.
ಭಗವಂತನಿಗೇಕೆ ಆಲಯ? ಭಗವಂತನಿಗೇಕೆ ನ್ಯಾಯ?
ಎಲ್ಲಾ ಬೇಕಾಗಿರೋದು ಮಾನವನಿಗಷ್ಟೆ. ಹೀಗಾಗಿ  ಯಾವುದೂ ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳದೆ ವಾದ ವಿವಾದಕ್ಕೆ  ಇಳಿದರೆ  ಇರುವ ಅಲ್ಪ ಸ್ವಲ್ಪ ಶಾಂತಿ ಭಂಗ ಆಗುತ್ತದೆ.
ಹೊರಗಿನ ನ್ಯಾಯಾಲಯದಲ್ಲಿ ಎಷ್ಟು ಹಣಕೊಟ್ಟು ಗೆದ್ದರೂ ಮೇಲಿರುವ ನ್ಯಾಯಾಲಯಕ್ಕೆ ವಿರುದ್ದ ತೀರ್ಪು ನೀಡಿದ್ದರೆ ಶಿಕ್ಷೆ  ಆಗೋದನ್ನು ತಡೆಯಲಾಗದು.
ಅವರು ದೇವರೇ ಇರಲಿ ಮಾನವರೆ ಇರಲಿ ಅಸುರರೆ ಇರಲಿ ಎಲ್ಲರಿಗೂ ಒಂದೇ ನ್ಯಾಯಾಲಯ. 
ಹಿಂದೆಯೂ ಎಷ್ಟೋ ದೇವತೆಗಳು ಇದೇ ಭೂಮಿಯಲ್ಲಿ ಅವತರಿಸಿದ್ದರೂ ಕಷ್ಟ ನಷ್ಟ ತಪ್ಪಿರಲಿಲ್ಲ. ಈಗ ದೇವರ ಮೂರ್ತಿ  ಪುನ: ಪ್ರತಿಷ್ಟಾಪಿಸಲು  ನ್ಯಾಯಲಯದ ಅನುಮತಿ  ಬೇಡುವ ಪರಿಸ್ಥಿತಿ ಬಂದಿರೋದು  ಭಗವಂತನ ಇಚ್ಚೆಯೆ?
ಪರಮಾತ್ಮನ ಇಚ್ಚೆಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು. ಅದರಲ್ಲಿ  ಹುಲುಮಾನವರೂ ಇರುವರು.
ಈ ರೀತಿಯಲ್ಲಿ ಯಾರೂ ಚಿಂತನೆ ನಡೆಸಲಾರರು. ಹೀಗಾಗಿ ಪ್ರತಿಯೊಂದು  ರಾಜಕೀಯರೂಪ ತಳೆದು ಆಳುತ್ತಿದೆ.

Friday, October 3, 2025

ಜಗನ್ಮಾತೆಯ ಆರಾಧನೆಯಿಂದ ಜ್ಞಾನೋದಯ

ಸ್ತ್ರೀ ಶಕ್ತಿಯನ್ನು ಜ್ಞಾನದಿಂದ ಗೆಲ್ಲಬಹುದೆ
ಹೊರತು ವಿಜ್ಞಾನದಿಂದ  ಕಷ್ಟ.
ಪುರಾಣ,ಇತಿಹಾಸದ ಕಥೆಗಳಲ್ಲಿ ನಾವು ಕಾಣುವ ಸ್ತ್ರೀ ಶಕ್ತಿ
ಅವಳ ಜ್ಞಾನವನ್ನು  ತೋರಿಸುತ್ತದೆ. ಪುರುಷರು  ಜ್ಞಾನಿಗಳಾಗಿ ಧರ್ಮದ ಪರವಾಗಿದ್ದ ಕಾರಣ ಎಷ್ಟೋ ಕಷ್ಟ ನಷ್ಟಗಳನ್ನು ಅನುಭವಿಸಿ ದೈವತ್ವ ಪಡೆದಿದ್ದಾರೆ. ಅಲ್ಲಿಯೂ
ಪುರುಷರ ರಾಜಕೀಯತೆಗೆ ಬಲಿಯಾದ ಸ್ತ್ರೀ ಶಕ್ತಿ ತನ್ನ ರೌದ್ರ
ರೂಪ ತೋರಿಸಿ  ಜೀವ ಬಲಿ,ಪ್ರಾಣ ಬಲಿಗಳಾಗಿರೋದನ್ನು
ನಾವು ಕಾಣುತ್ತೇವೆ.
ಅಂದಿನಿಂದ ಇಂದಿನವರೆಗೂ  ಭೂಮಿಯನ್ನು  ಅರ್ಥ ಮಾಡಿ ಕೊಳ್ಳದೆ ರಾಜಕೀಯ ನಡೆಸಿದವರು  ಈಗಲೂ ಅದೇ‌ಸರಿ ಎಂದು ವಾದ ಮಾಡಿದರೆ  ನಷ್ಟ ಯಾರಿಗೆ?
ಭೂಮಿಯ ಮೇಲೆ ಜೀವನ ಮಾಡಲು ಕಲಿಯದ ಮೇಲೆ ಆಕಾಶದೆತ್ತರ  ಹಾರುವ ಅಜ್ಞಾನ ಬೇಕೆ? ಜೀವ ಹುಟ್ಡಿ ಬೆಳೆದು
ನಡೆದು ಸಾಯೋದು ಭೂಮಿಯ ಮೇಲೆ.ಅದನ್ನು ತಿಳಿಯದ
ಮನುಕುಲ ಈಗ  ಸಮಸ್ಯೆಗಳಿಗೆ ಪರಿಹಾರ ಸಿಗದೆ  ಹೊರಗೆ
ಹುಡುಕುತ್ತಾ, "ಅಂಗೈಯಲ್ಲಿ ‌ಬೆಣ್ಣೆ ಇಟ್ಟುಕೊಂಡು ತುಪ್ಪ ಕ್ಕೆ
ಹುಡುಕಾಡಿದಂತೆ"  ಹೊರಗಿನ ರಾಜಕೀಯಕ್ಕೆ ಸ್ತ್ರೀ ಶಕ್ತಿಯ
ಸಹಕಾರ ಪಡೆದು ಹಿರ ನಡೆದರೆ  ಜೀವಕ್ಕೆ ಮುಕ್ತಿ ಸಿಗುವುದೆ?

ಪುರಾಣ,ಇತಿಹಾಸದ ರಾಜಾದಿರಾಜರ  ಕಥೆಗಳಲ್ಲಿ ಪುರುಷರ
ಹಿಂದೆ ಸ್ತ್ರೀ ಇರುವುದನ್ನು ಉಲ್ಲೇಖಿಸದೆ  ಪುರುಷರನ್ನಷ್ಟೇ
ದೇವರು ,ಮಹಾತ್ಮರು ಎಂದರೆ ಅರ್ಧಸತ್ಯವಷ್ಟೆ.ಇದರಲ್ಲಿ
ರಾಜಕೀಯ ಅಡಗಿದೆಯೇ ಹೊರತು ರಾಜಯೋಗವಿಲ್ಲ.

ಈಗಿನ  ನಮ್ಮ ಭಾರತದಲ್ಲಿ  ಸ್ತ್ರೀ ಯರ ಸಾಧನೆ ಹೊರಮುಖ
ಹೆಚ್ಚಾಗಿರಲು ಕಾರಣವೆ ತನ್ನ ಅಸ್ತಿತ್ವಕ್ಕೆ  ಆದ ಹಿಂದಿನ ಕಾಲದ ಅಪಚಾರ,ಅನಾಚಾರ,ಅತ್ಯಾಚಾರ, ಅನಾಧರ,ಅನಾಥ ಪ್ರಜ್ಞೆ ಈ ಜನ್ಮದಲ್ಲಿ  ಇದಕ್ಕೆ ಅವಕಾಶ  ಸಿಕ್ಕಿದಾಗ ಜೀವ ಬಿಡುವುದೆ?
ಜೀವಕ್ಕೆ ಸ್ತ್ರೀ ಪುರುಷನೆಂಬ ಬೇಧಭಾವ  ಆಧ್ಯಾತ್ಮಿಕ ದಲ್ಲಿಲ್ಲ.
ಭೂಮಿಯನ್ನು ಆಳಿದವರಲ್ಲಿ ಇದನ್ನು ಕಾಣಬಹುದು.
ಇನ್ನು ಸಂನ್ಯಾಸಿಗಳು,ಸಾದು,ಸಂತರು . .. ಹೆಣ್ಣು,ಹೊನ್ನು,ಮಣ್ಣು ಮಾಯೆ ಎಂದು ಸಂಸಾರ ತೊರೆದು
 ಹೊರನಡೆದರು. ಸಂಸಾರಕ್ಕೆ ಬಂದ ಮೇಲೆ ಕೊನೆಯವರೆಗೆ
ಈಸಬೇಕು ಇದ್ದು ಜೈಸಬೇಕು..ಎಂದಂತೆ ಇವರಲ್ಲಿ ನಾವು
ಕಾಣದೆ  ಇದೇ ಸತ್ಯ ಸ್ತ್ರೀ ಬಿಟ್ಟು ನಡೆದರೆ  ಮುಕ್ತಿ ಮೋಕ್ಷ ಎಂದು‌ ಪುರುಷರಿಗೆ ಸಹಕರಿಸುವ ಸಮಾಜ ,ಅದೇ ಸ್ತ್ರೀ
ಸಂಸಾರ ತೊರೆದು  ಆಶ್ರಮ ಸೇರಿದರೆ  ಅಧರ್ಮ ಎನ್ನುತ್ತಾರೆ.
ಅಂದರೆ, ಇಲ್ಲಿ ಕೇವಲ ಲಿಂಗ ಬೇಧ ಮಾತ್ರ ಕಾಣುತ್ತೇವೆ. ಜೀವ ಹಾಗು ಆತ್ಮ  ಇಬ್ಬರಿಗೂ ಒಂದೇ ನ್ಯಾಯ ಒದಗಿಸಿದ್ದರೂ ಭೂಮಿ ಮೇಲೆ ಇದು ನಡೆಯದ ಕಾರಣವೆ
ಇಂದಿನ ಸಮಾಜದಲ್ಲಿ  ಹೊರಗಿನ  ವಿರುದ್ದ ಹೋರಾಟ
ಹೆಚ್ಚಾಗಿದೆ. ಇದನ್ನು ಜ್ಞಾನದಿಂದ ಸರಿಪಡಿಸೋ ಬದಲು ಹಣ
ದಿಂದ ಸರಿಪಡಿಸಿದರೆ ಅಜ್ಞಾನ ಇನ್ನಷ್ಟು ಬೆಳೆದು, ಸಂಸಾರ ಬೀದಿಗೆ ಬರುತ್ತದೆ.
ಮನೆ,ಮಾಧ್ಯಮ, ಮಠ ಇದರಲ್ಲಿರುವ ಮಾನವರಲ್ಲಿ ಮನೆಯ ಒಳಗಿನ ಸ್ತ್ರೀ ಯನ್ನು ಅರ್ಥ ಮಾಡಿಕೊಳ್ಳದೆ  ಅವಳ ವಿರುದ್ದ ಮಾಧ್ಯಮ ಕ್ಕೆ ಹೋದರೆ  ಮಠಗಳಾದರೂ
ಏನು ಮಾಡಲಾಗದು.
ಮನೆಯ ಲಕ್ಮಿ ಯನ್ನು ಅಲಕ್ಷ್ಯ  ಮಾಡಿ, ಮಾಧ್ಯಮಗಳಲ್ಲಿ
ಬರುವ  ಮಹಾಲಕ್ಮೀಯ ಅವತಾರ ಹಾಕಿಕೊಂಡು ನಾಟಕ
ಮಾಡುವವರನ್ನು  ನೋಡಿ, ಮಠ ಮಠಗಳಲ್ಲಿ  ದೇವರನ್ನು
ಬೇಡಿಕೊಂಡಿದ್ದರೆ  ಹೊರಗಿನ ಲಕ್ಮಿ  ಒಳಗೆ ಬಂದರೂ ಮನೆ
ಒಳಗಿರುವ ಲಕ್ಮಿಯ ಕೋಪ ಹೆಚ್ಚಾಗಿ,ಒಂದು ದಿನ  ನಾಶ
ನಷ್ಟ ಕಟ್ಟಿಟ್ಟ ಬುತ್ತಿ.
ಕೊರೊನ ಒಂದು ಕಣ್ಣಿಗೆ ಕಾಣದ ಮಹಾಮಾರಿ. ಇದನ್ನು
ಹಣದಿಂದ ಶಾಂತಗೊಳಿಸಲಾಗದು. ಜ್ಞಾನದಿಂದ ಇದರ
ಹಿಂದಿನ ಆಧ್ಯಾತ್ಮಿಕತೆಯ  ಸತ್ಯವನ್ನು ಸೂಕ್ಷ್ಮ ವಾಗಿ ಅರ್ಥ
ಮಾಡಿಕೊಂಡರೆ  ಮನೆಯೊಳಗೆ ಹೊರಗೆ  ಓಡಾಡುತ್ತಿರುವ ಈ ಸೂಕ್ಷ್ಮ ಶಕ್ತಿಯನ್ನು ಶಾಂತಗೊಳಿಸಬಹುದು. ಆದರೆ ಇದು
ಸಾಕಷ್ಟು ಪ್ರಮಾಣದಲ್ಲಿ  ಬೆಳೆಸಿರುವುದರಿಂದ. ಯಾರ ಜೀವ
ಯಾವಾಗ ಹೋಗುವುದೆನ್ನುವುದು ಯಾರೂ ತಿಳಿಯಲು ಕಷ್ಟ. ಜೀವವನ್ನು  ಉಳಿಸುವ  ನೆಪದಲ್ಲಿ ಮಾನವನ ಜೀವನವೆ ಮುಗಿದರೆ  ಆತ್ಮಹತ್ಯೆಯಲ್ಲವೆ?  ಸಾವು ನೋವು
ಹೆಚ್ಚಾಗುವುದೆಂದು ಯುದ್ದ ಮಾಡದೆ  ಹಿಂದಿನ ರಾಜರು ಕುಳಿತರೆ?  ಆದರೂ ಇಲ್ಲಿ  ಎಲ್ಲಾ ಸಾಮಾನ್ಯರೆ ಇರುವಾಗ
ಸಾಮಾನ್ಯಜ್ಞಾನದಿಂದಲೂ ಸತ್ಯದರ್ಶನ ಮಾಡಿಸಿ,ಅವರ ಜೀವ, ಜೀವನ ನಡೆಸಲು ಬಿಡುವುದೇ ಧರ್ಮ. ಇದಕ್ಕೆ ಮಧ್ಯೆ
ರಾಜಕೀಯ ತೂರಿಸಿಕೊಂಡು ಮಧ್ಯವರ್ತಿಗಳು, ಮಾಧ್ಯಮ
ಗಳು ತಮ್ಮ ಹೊಟ್ಟೆ ತುಂಬಿಸಿಕೊಂಡರೆ , ಹೊಟ್ಟೆ ಒಳಗೆ ಸೇರಿದ  ಕರ್ಮಫಲ ಒಂದು ದಿನ ಅನುಭವಿಸೋದು ಜೀವವೆ. ಇದಕ್ಕೆ ಸಹಕರಿಸಿದ  ಸ್ತ್ರೀ ಗೂ ಇದು ತಪ್ಪಿದ್ದಲ್ಲ.
ಅದಕ್ಕೆ ಸ್ತ್ರೀ ಶಕ್ತಿಯ ಜ್ಞಾನವನ್ನು ಹೆಚ್ಚಿಸಲು  ಉತ್ತಮವಾದ
ಶಿಕ್ಷಣವನ್ನು ಸ್ತ್ರೀ ಗೆ ಕೊಡಬೇಕು.ಈಗಿನ ಶಿಕ್ಷಣ ವಿಜ್ಞಾನಕ್ಕೆ
ಸೀಮಿತವಾಗಿದೆ. ಜ್ಞಾನವಿಲ್ಲದ ವಿಜ್ಞಾನ ಕುರುಡು ಪ್ರಪಂಚಕ್ಕೆ
ಸಾಕ್ಷಿಯಾಗಿದೆ. ಇಲ್ಲಿ ಯಾರೂ ಯಾರನ್ನೋ ಆಳೋ ರಾಜಕೀಯ ಬಿಟ್ಟು, ನಮ್ಮನ್ನು ನಾವೇ ಆಳಿಕೊಳ್ಳಲು ಸ್ವತಂತ್ರ
ಜ್ಞಾನದ ಅಗತ್ಯವಿದೆ. ಇದನ್ನು ನಾವೇ ಕಷ್ಟಪಟ್ಟು  ಪಡೆಯಲು
ಸ್ತ್ರೀ ಯರ ಸಹಕಾರ ಬೇಕೆಂದರೆ  ಅವಳಿಗೆ ಜ್ಞಾನ ಬೇಕಿದೆ.
ಸಾಮಾನ್ಯಜ್ಞಾನದಿಂದಲೆ ಈ ಸತ್ಯ ತಿಳಿಯಬಹುದಲ್ಲವೆ?
ನಾವ್ಯಾರು? ಭಾರತೀಯರೆ? ವಿದೇಶಿಗಳೆ?
ಅತಂತ್ರ ಭಾರತಕ್ಕೆ ಸ್ವತಂತ್ರ ಜ್ಞಾನದ ಶಿಕ್ಷಣ  ಬೇಕಿದೆ.ಅದು
ನಮ್ಮ ನಮ್ಮ ಮೂಲ ಗುರು ಹಿರಿಯರು ಬಿಟ್ಟು ನಡೆದ ಧರ್ಮ. ಹಾಗು ಕರ್ಮ(ಕಸುಬು) ದ ಒಳಗಿದೆ. ಮನೆಯಲ್ಲಿದ್ದೇ
ಸಾಧ್ಯವಾದರೆ ಬೆಳೆಸಿ, ಇಲ್ಲವಾದರೆ ಕಲಿಸಿ ಬೆಳೆಸಿ.

ದೇವರಿರೋದೆಲ್ಲಿ?

ದೇವರನ್ನು  ಒಳಗೆ ಹುಡುಕಿದವರಿಗೆ ದೇವರು ಕಂಡಿರುವರೆಂದರು ಮಹಾತ್ಮರು ಆದರೆ ಇಂದಿನ ಜನರು ದೇವರನ್ನು ಹೊರಗೆ ಹುಡುಕುತ್ತಾ ಹೊರಗೆ ಹೊರಟಿರುವರೆಂದರೆ  ದೇವರು  ಹೊರಗಿರುವನೋ ಒಳಗೋ  ಎನ್ನುವುದೇ ಜನರಿಗೆ ಅರಿವಿಲ್ಲದೆ ತಿರುಗುತ್ತಿರುವರು.  ಹಣಕೊಟ್ಟರೆ ದೇವರದರ್ಶನ ಎಂದರೆ ಹಣದಲ್ಲಿರುವನೆ ದೇವರು? ಜನಮರುಳೋ ಜಾತ್ರೆ ಯೋ ಎಂದಂತಹ   ಪರಿಸ್ಥಿತಿ ಯಲ್ಲಿ  ಜನರ ಜಾತ್ರೆ ನಡೆಯುತ್ತಿದೆ...ಕಲಿಯುಗದಲ್ಲಿ  ಜನರು ಹೇಗಿರುವರು ಅರಸರು ಹೇಗಿರುವರು ಎನ್ನುವುದನ್ನು ಶ್ರೀ ಕೃಷ್ಣ ಮೊದಲೇ ತಿಳಿಸಿದಂತೆ ಕೆಲವೆಡೆ  ತೋರಿಸುತ್ತಿದೆ. ಜನಜಾಗೃತರಾಗದೆ  ಯಾವ ದೇವರೂ  ಸರಿಪಡಿಸಲಾಗದು. ಕಾರಣ ಜನರಲ್ಲಿ ದೈವತ್ವವಿದ್ದರಷ್ಟೆ ದೇವರ ದರ್ಶ ನ ಸಾಧ್ಯ. ಅಸುರರ ವಶದಲ್ಲಿ ಇದ್ದರೆ  ಅಸುರರ ದರ್ಶನ. ಇಷ್ಟೇ ಜೀವನ.

ಎಲ್ಲಿರುವನು ಹರಿ? ಎಂದ  ಹಿರಣ್ಯಕಶ್ಯಪುವಿನ ವಧೆ  ಮಾಡೋದಕ್ಕೆ ಎಷ್ಟೋ ವರ್ಷಗಳು ಹಿಡಿದವು ಎಂದರೆ ಹಿರಣ್ಯಕಶ್ಯಪುವಿನ  ಅಧಿಕಾರ ಹಣ ಸ್ಥಾನವನ್ನು  ನೋಡಿ ಜನ ಅವನನ್ನು ದೇವರೆಂದು  ಸಹಕರಿಸಿದ್ದರು. ಇದರಲ್ಲಿ  ತಪ್ಪು ಯಾರದ್ದು? 

ಕೃತಯುಗದಲ್ಲಿದ್ದ ಪ್ರಹ್ಲಾದ ನು ಶ್ರೀ ಹರಿಯ ಒಂದು ರೂಪ.
 ಹಿರಣ್ಯಾಕ್ಷ ಹಿರಣ್ಯಕಷ್ಯಪುವಾಗಿ  ಅಸುರ ಜನ್ಮತಳೆದ   ಜಯವಿಜಯರೂ  ದೇವತೆಗಳೇ ಆಗಿದ್ದವರು. ಅಹಂಕಾರದ ಫಲವಾಗಿ  ಭೂಮಿಯಲ್ಲಿ  ಅಸುರಜನ್ಮತಾಳಬೇಕಾಯಿತೆನ್ನುವ ಪುರಾಣ. ಕಥೆ ಎಲ್ಲರಿಗೂ ತಿಳಿದಿದೆ. ಅಂದರೆ ಅಹಂಕಾರ ವೇ ದೈವತ್ವದಿಂದ ದೂರ ಮಾಡುತ್ತದೆಂದರೆ ನಮ್ಮಲ್ಲಿ ತುಂಬಿರುವ. ಈ ಶಕ್ತಿಯನ್ನು  ಯಾರು ಹೊರಹಾಕಬೇಕು? ಅಜ್ಞಾನದಿಂದ ಅಹಂಕಾರ  ಬೆಳೆದಿರುವಾಗ ಸುಜ್ಞಾನದೆಡೆಗೆ ನಡೆಯೋದೆ ಉತ್ತಮಮಾರ್ಗ. 
ಅಂದಿನ ಕಾಲದಲ್ಲಿ ರಾಜನೇ ಪ್ರಜೆಗಳಿಗೆ ದೇವರು. ಉತ್ತಮ  ಶಿಕ್ಷಣ. ನೀಡುವುದರ ಮೂಲಕ ಜನರಲ್ಲಿ ಜ್ಞಾನವಿತ್ತು.‌ ಈಗ ಹೊರಗಿನ ಜ್ಞಾನವೇ ಬಂಡವಾಳವಾಗಿ ಒಳಗೇ ಇದ್ದ ಸತ್ಯ ಧರ್ಮ ಹಿಂದುಳಿದರೆ  ದೇವರು ಕಾಣೋದಿಲ್ಲ.

ಪ್ರಜಾಪ್ರಭುತ್ವದಲ್ಲಿ  ಯಾರು ದೇವರು?

ಜೀವ ಜೀವನ ನೀಡಿದ ಪೋಷಕರನ್ನೇ  ಬಿಟ್ಟು ಹೊರಗಿನವರನ್ನು ದೇವರೆಂದರೆ  ಅಜ್ಞಾನ. ತನ್ನ ಸ್ವಂತ ಬುದ್ದಿ ಜ್ಞಾನ ವಿದ್ಯೆಗೆ  ವಿರುದ್ದ  ಕೆಲಸ ಮಾಡುತ್ತಾ ಎಷ್ಟು ಹಣಗಳಿಸಿದರೂ ಸಂತೃಪ್ತಿ ಸಮಾಧಾನ ಶಾಂತಿ ಸಿಗಲಿಲ್ಲ ಎಂದರೆ  ಯೋಗವಿಲ್ಲ ಎಂದರ್ಥ. ಅಂದರೆ ಪರಮಾತ್ಮನ ಇಚ್ಚೆಯ ವಿರುದ್ದ ಜೀವಾತ್ಮ ನ ಪಯಣ ನಡೆದಿದೆ ಎಂದರ್ಥ.
ಹೊರಗಿನ  ಸಂಬಂಧ ಒಳಗಿನ ಸಂಬಂಧ ಒಂದು ಮಾಡೋದು ಯೋಗ. ಅಂತರ ಬೆಳೆಸುತ್ತಿದೆ ಎಂದರೆ  ದಾರಿತಪ್ಪಿದೆ ಎಂದಾಗುತ್ತದೆ. ಅಧ್ಯಾತ್ಮ ವಿಜ್ಞಾನ ಭೌತವಿಜ್ಞಾನ ವು ಮಾನವನಿಗೆ ವರವಾಗಬೇಕು ಶಾಪವಾಗಬಾರದು. ಯಾವಾಗಿದು ದುರ್ಭಳಕೆ ಆಗುವುದೋ ಶಾಪವಾಗುತ್ತದೆ.ಸಾಲವಾಗುತ್ತದೆ.   ದೇವರ ಸಾಲತೀರಿಸಲು 
ದೈವತ್ವದ  ಶಿಕ್ಷಣ ಕೊಡಬೇಕು. ದೇವರನ್ನು ಆಳಲು ಹೊರಟರೆ  ತಕ್ಕ ಶಿಕ್ಷೆ ಅನುಭವಿಸಲೇಬೇಕು. 
ಜ್ಞಾನವೇ  ದೇವರು, ಅರಿವೇ ಗುರು, ಗುರುವನ್ನು  ಅರಿತ ಮೇಲೆ ದೇವರ ದರ್ಶನ. ಗುರು  ವ್ಯಕ್ತಿಯಲ್ಲ ಆತ್ಮಶಕ್ತಿ.ಎಲ್ಲರಲ್ಲಿಯೂ ಅಡಗಿದ್ದರೂ  ಎಲ್ಲರನ್ನು  ತಿಳಿದೋತಿಳಿಯದೆಯೋ ಸನ್ಮಾರ್ಗ ದಲ್ಲಿ ನಡೆಸುವ ಶಕ್ತಿ ಗುರುವಿನಲ್ಲಿದೆ.  ಗುರುವನ್ನು ಗುರುತಿಸಿಕೊಳ್ಳುವುದೇ ಜೀವನದ ಗುರಿಯಾಗಿದೆ .

ಕಲಿಯುವವರೆಗೆ ಬ್ರಹ್ಮವಿದ್ಯೆ ಕಲಿತ ಮೇಲೆ ಕೋತಿವಿದ್ಯೆಯಾದರೆ  ಜ್ಞಾನಬರೋದಿಲ್ಲ. 

ಇದರಲ್ಲಿ ದೇವಗುರು, ಮಾನವಗುರು, ಅಸುರಗುರು ಇರುವರು. ಗುಣಕರ್ಮಯೋಗದಿಂದ ಅರಿಯಬಹುದು.
ಕೃಷ್ಣಂ ವಂದೆಜಗದ್ಗುರುಂ.
ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವರೆ ಗುರುದೇವರು.
ಅಸತ್ಯದಿಂದ ಸತ್ಯದ ಕಡೆಗೆ ನಡೆಸುವವರೆ ಜಗದ್ಗುರು.
ಸದ್ಗುರುಗಳ ಸೇವೆಯಿಂದ ಪಾಪನಾಶವಾಗುತ್ತದೆ.
ಶ್ರೀ ಗುರುಭ್ಯೋ ನಮ:

Thursday, October 2, 2025

ಭೂಮಿಯಿಲ್ಲದೆ ಮನುಕುಲವಿಲ್ಲ

ಭೂಮಿ‌ ನಡೆದಿರೋದು ಸಂಸಾರಿಗಳಿಂದಲೋ ಸಂನ್ಯಾಸಿಗಳಿಂದಲೋ ಎಂದರೆ ಯಾರಿಂದಲೂ ನಡೆಯುತ್ತಿಲ್ಲ.ಇವರನ್ನು ಹೊತ್ತು ನಡೆಯುತ್ತಿದೆ ಅಷ್ಟೆ.ಇವರಲ್ಲಿ ಸತ್ವ ಗುಣವಿದ್ದರೆ ಶಾಂತಿ ಇಲ್ಲವಾದರೆ ಕ್ರಾಂತಿ.
ಕ್ರಾಂತಿಯಿಂದ  ಯಾವ ಯೋಗವೂ ಕಾಣೋದಿಲ್ಲ.ಹೀಗಾಗಿ ಪರಮಾತ್ಮನ ಜೀವಾತ್ಮ ಸೇರುವ ಯೋಗದಿಂದ ಮಾನವರು ವಂಚಿತರಾಗಿ  ಭೋಗದೆಡೆಗೆ ‌ನಡೆದಷ್ಟೂ ರೋಗದ. ಜೀವನ.

ಭ್ರಷ್ಟಾಚಾರ ಎನ್ನುವ ರೋಗವು ಈಗ ಎಲ್ಲರಲ್ಲಿಯೂ ಅಡಗಿದೆ. ಕಾರಣ  ಸಂಸಾರ ನಡೆಸಲು ಹಣ ಬೇಕು. ಸಂನ್ಯಾಸಿಯಾಗಲು ಜ್ಞಾನ‌ಬೇಕು. ಜ್ಞಾನವೇ ಇಲ್ಲದೆ ಹಣಗಳಿಸಿ  ಶ್ರೀಮಂತ ರಾದವರೂ ಸಂನ್ಯಾಸಿಗಳೆಂದರೆ  ಸಂಸಾರಿಗಳ ಗತಿಏನು?
ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಾಗಿದ್ದರೆ ಎಲ್ಲರೂ ದೇವರೆ ಆಗಬಹುದಿತ್ತು. ದೈವತ್ವವಿಲ್ಲದ ಸಂಸಾರವಾಗಲಿ ಸಂನ್ಯಾಸವಾಗಲಿ  ರಾಜಕೀಯದ ಹಿಂದೆ ನಡೆದಾಗ ಆಳೋದೆ ಗುರಿಯಾಗಿರುತ್ತದೆ. ಯಾರನ್ನು ಯಾರು ಆಳಬೇಕು? 
ರಾಜಪ್ರಭುತ್ವದ  ಕಾಲ ಹೋಗಿ ಪ್ರಜಾಪ್ರಭುತ್ವ ಬಂದರೂ ಪ್ರಜೆಗಳನ್ನು ಆಳೋದೇ  ರಾಜಕೀಯ ಎಂದರೆ  ಕಾಲ ಬದಲಾಗುತ್ತದೆ. ಕಾಲವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ.
ಆದರೂ ತಡೆಯುವ ಪ್ರಯತ್ನದಲ್ಲಿ ಸೋತವರೆ ಹೆಚ್ಚಾಗಿ ಸಂಸಾರಿಗಳ  ಕಷ್ಟ ಸಂನ್ಯಾಸಿಗಳಿಗಿಲ್ಲ ಆದರೆ ಜ್ಞಾನದ ಪ್ರಕಾರ  ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ದೂರವಿರೋದು ಸಂನ್ಯಾಸಿ ಧರ್ಮ. ಪರಮಾತ್ಮನ ದರ್ಶನ  ಸಂನ್ಯಾಸಿಗಳಿಗೆ ಆದಂತೆ ಸಂಸಾರಿಗಳಿಗೆ ಆಗದು. ಒಟ್ಟಿನಲ್ಲಿ ಇಬ್ಬರೂ ಪರಮಾತ್ಮನ ಅಧೀನರೆ  ಆದಾಗ ಅವರವರ ಧರ್ಮ ಕರ್ಮ ದಲ್ಲಿ ಸತ್ಯ ಸತ್ವ ತತ್ವವಿದ್ದರೆ ಮಾತ್ರ ಯೋಗ.ಯೋಗದಿಂದ ಜ್ಞಾನ,ಜ್ಞಾನದಿಂದ ಹಣ ಸಂಪಾದಿಸಿ ಋಣ ತೀರಿಸುವುದರಿಂದ ಭೂಮಿಯಲ್ಲಿ  ಧರ್ಮ ನೆಲೆಸುತ್ತದೆಂದು ಸನಾತನ ಹಿಂದೂ ಧರ್ಮದ ತಿರುಳಾಗಿತ್ತು.
ಹೊರಗಿನ  ಸಿಪ್ಪೆಯನ್ನೇ  ಸರಿಯಾಗಿ ಅರಿತು ನಡೆಯಲಾಗದ ಅಜ್ಞಾನದಲ್ಲಿ  ಇಂದಿಗೂ ಮಾನವನಿಗೆ ಹಣವಿದೆ ಅದರ ಹಿಂದೆ ಬೆಟ್ಟದ್ದಷ್ಟು ಹಿಂದಿನವರ ಋಣವೂ ಇದೆ. ಇದನ್ನು ಹಿಂದಿನ ಮಹಾತ್ಮರ  ಧರ್ಮ ಕರ್ಮ ವನರಿತು  ನಡೆದಾಗಷ್ಟೆ ಅವರಲ್ಲಿದ್ದ ಜ್ಞಾನದ ಅನುಭವವಾಗಲು ಸಾಧ್ಯವೆಂದರೆ ಇದು ಒಳಗಿನಿಂದ  ಬೆಳೆಸುವುದು ಅಗತ್ಯವಿದೆ. ಹೊರಗೆ ತೇಪೆಹಾಕಿ ಒಳಗಿನಹುಳುಕನ್ನು ಮುಚ್ಚಿದರೂ  ಒಂದು ದಿನ ಹೊರಗೆ ಬರುತ್ತದೆ. ಹಿಂದಿನ ಗುರುಕುಲಗಳಲ್ಲಿದ್ದ  ಶಿಕ್ಷಣದಿಂದ ಗುರುಭಕ್ತಿ ಹೆಚ್ಚಾಗಿತ್ತು. ದೇವರನ್ನು ತೋರಿಸುವ ಗುರುವಲ್ಲಿ ಭಕ್ತಿ ಭಯವಿದ್ದರೆ ಮಾತ್ರ ಅಧ್ಯಾತ್ಮ ಸಾಧನೆ ಸಾಧ್ಯ. 
ಹೈಟೆಕ್ ಶಾಲೆ ಹೈಟೆಕ್ ಆಸ್ಪತ್ರೆ ಗಳು  ಬೆಳೆದಿರೋದು ಅಜ್ಞಾನವನ್ನು ತೋರಿಸುತ್ತದೆ. ಸತ್ಯ ರೋಗವಿಲ್ಲದ ಜೀವವಿಲ್ಲ.
ಆ ರೋಗಕ್ಕೆ ಕಾರಣವೇ  ತಾವೇ ಒಳಗೆಳೆದುಕೊಂಡಿರುವ ವಿಷಯುಕ್ತ ನಕಾರಾತ್ಮಕ ವಿಷಯಗಳು,ಆಹಾರ ವಿಹಾರ ಶಿಕ್ಷಣವೇ  ಎಂದರೆ  ನಂಬಲಾಗದು .ಭೂಮಿ ಒಂದು ಮಾಧ್ಯಮ.ಆ ಮಾಧ್ಯಮದ  ವಿಚಾರಗಳು ಸಂಸಾರವನ್ನು ಗಟ್ಟಿ ಮಾಡುತ್ತದೋ ಟೊಳ್ಳು ಮಾಡುತ್ತದೋ  ಅದರ ಮೇಲೆ ಸಮಾಜ ನಿಂತಿದೆ. ಹೊರಗೆಳೆದು ಆಳೋದೆಂದರೆ  ರಾಜಕೀಯ. ಒಳಗಿನಿಂದ ಕೂಡಿ ಬಾಳೋದೆ ರಾಜಯೋಗ.

ಎಲ್ಲವೂ ಕಲಿಗಾಲದ ಪ್ರಭಾವವೆಂದು ಸುಮ್ಮನಿರಬೇಕೆ? ಅಥವಾ ಕಲಿಕೆಯಲ್ಲಿ ಉತ್ತಮ ಬದಲಾವಣೆ ತರಲು ಸಹಕಾರ ಕೊಟ್ಟು ಒಗ್ಗಟ್ಟಿನಿಂದ ಸಂನ್ಯಾಸಿಗಳು ಸಂಸಾರಿಗಳನ್ನು ಬಾಳೋದನ್ನು ಕಲಿಸಬೇಕೆ?
ಹಣವಿದ್ದರಷ್ಟೆ‌ ಜೀವನ. ಆದರೆ ಸತ್ಯಜ್ಞಾನವಿಲ್ಲದ  ಜೀವನದಲ್ಲಿ ಋಣ ತೀರೋದಿಲ್ಲವಾದ್ದರಿಂದ ಇದು ಮರಣ ಎನ್ನುವರು ಮಹಾತ್ಮರು. ಬದಲಾವಣೆ ಜಗದ ನಿಯಮ.
ಅನ್ಯರನ್ನು ಬದಲಾಯಿಸೋ ಮೊದಲು ನಮ್ಮವರನ್ನು ಅರಿತು ನಡೆಯೋದನ್ನು ಕಲಿಯುವುದು ಅಗತ್ಯವಿದೆ.
ಸತ್ಯ ಕಣ್ಣಿಗೆ ಕಾಣೋದಿಲ್ಲವೆಂದರೆ ಸತ್ಯವಿಲ್ಲ. ಎಂದರ್ಥ ವಲ್ಲ.
ಸಂಸಾರಿಗಳಲ್ಲಿಯೂ ಸತ್ಯವಿದ್ದರೂ ಗಮನಕ್ಕೆ ಬರೋದಿಲ್ಲ.
ಏನೇ  ಆದರೂ ಯಾರನ್ನು ಯಾರುನಡೆಸಿರೋದೆಂದರೆ ಭೂಮಿಯೇ ಎಲ್ಲರನ್ನೂ ನಡೆಸಿರೋದು. ಪರಮಾತ್ಮನ ಸೊಂಟದ ಭಾಗದಲ್ಲಿ ರುವ ಭೂತಾಯಿ ಮನುಕುಲಕ್ಕೆ ಆಶ್ರಯ ನೀಡಿರುವಾಗ ಅವಳನ್ನು ಸಂಸಾರಿಗಳು ಸಂನ್ಯಾಸಿಗಳು ಹೇಗೆ ಬಳಸುವರೋ ಹಾಗೆ ಜೀವನವಿರುತ್ತದೆ.
ಎಲ್ಲದ್ದಕ್ಕೂ ಸ್ತ್ರೀ ಶಕ್ತಿ ಕಾರಣ ಎನ್ನುವ ಹಿಂದೆ ಅವಳನ್ನು ಹೇಗೆ  ಬಳಸಿದ್ದೇವೆನ್ನುವ ಅರಿವಿದ್ದರೆ ಈಗಲೂ ಸ್ತ್ರೀ ಇಲ್ಲದೆ ಸಂಸಾರವಿಲ್ಲ.ಜನ್ಮ ಕೊಟ್ಟು ಜೀವನ ನಡೆಸಲು ಬಿಟ್ಟಿರುವ ತಾಯಿಗೆ ಸರಿಯಾದ ಜ್ಞಾನದ ಶಿಕ್ಷಣನೀಡದೆ ಆಳಲು ಹೊರಟರೆ ಅಜ್ಞಾನದಿಂದ ಸಂಸಾರ ಹಾಳಾಗುತ್ತದೆ. ಇದು ಹಿಂದೂ ಗಳು ಅರ್ಥ ಮಾಡಿಕೊಳ್ಳಲು ಸೋತರೆ ಹಣವಿದ್ದರೂ  ದುರ್ಭಳಕೆ ಆಗುತ್ತಲೇ ಇರುತ್ತದೆ.ಜೊತೆಗೆ ಋಣವೂ ಬೆಳೆಯುತ್ತಲೇ  ಜೀವಹೋಗುತ್ತದೆ . ಹೊರಗಿನಿಂದ ದೇವಿಯನ್ನು ಅಲಂಕರಿಸಿ ಒಳಗಿದ್ದ ಜ್ಞಾನಶಕ್ತಿ ಗುರುತಿಸದಿದ್ದರೆ  ಅಜ್ಞಾನವಲ್ಲವೆ?
ಸ್ವತಂತ್ರ ವಾಗಿರುವ  ಸತ್ಯ ಒಂದೇ. ಆ ಒಂದರ ಹಿಂದೆ ಒಳಹೊಕ್ಕು ನೋಡಲು ಸಂನ್ಯಾಸಿಗಳಿಗೆ ಸುಲಭ. ಆದರೆ ಅವರು ಸಂಸಾರಿಗಳಹಿಂದೆ ನಡೆಯುವಂತಾದರೆ ಅಧೋಗತಿ.
ಈಗಲೂ ಎಷ್ಟೋ ಮಹಾತ್ಮರಿದ್ದಾರೆ.ಹಾಗಾಗಿ ಭೂಮಿಯಲ್ಲಿ ಮಳೆಬೆಳೆಗಳಾಗುತ್ತಿದೆ. ಹೊಟ್ಟೆ ತುಂಬಿಸುವ ಅನ್ನದಾಸೋಹ ಚೆನ್ನಾಗಿ ನಡೆದಿದೆ. ಆತ್ಮಕ್ಕೆ ತೃಪ್ತಿ ಕೊಡುವ ಜ್ಞಾನದಾಸೋಹದ ಶಿಕ್ಷಣದಿಂದ  ಆತ್ಮನಿರ್ಭರ ಭಾರತವಾಗಬಹುದು. ಇದರ ಬಗ್ಗೆ ಚರ್ಚೆ ನಡೆಸದೆ  ರಾಜಕೀಯ ಸರಿಯಿಲ್ಲ,ಸರ್ಕಾರ ಸರಿಯಿಲ್ಲ ಎಂದರೆ ನಮ್ಮ ಅಧಿಕಾರ ಸರಿಯಿಲ್ಲ ಸಹಕಾರ ಸರಿಯಿಲ್ಲ ಎಂದರ್ಥ .ಆತ್ಮಾವಲೋಕನ  ಒಳಗಿನಿಂದ ಆಗೋದಕ್ಕೆ  ಹೊರಗಿನ ರಾಜಕೀಯದ ಅಗತ್ಯವಿಲ್ಲ ಅಲ್ಲವೆ?

ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮದಿನದ ವಿಶೇಷ

ದಸರಾ ಶುಭಾಶಯಗಳು. 

ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಯಿಂದ ಲೋಕಕಲ್ಯಾಣವಾಗಲೆಂದು ಪ್ರಾರ್ಥನೆ ಮಾಡೋಣ. 
ನಕಾರಾತ್ಮಕ ಯಾವುದು? ಸಕಾರಾತ್ಮಕ ಯಾವುದೆನ್ನುವ ಸುಜ್ಞಾನ ನೀಡುವ ಭಗವತಿಯನ್ನು  ನಾವು ಹೇಗೆ ಆರಾಧಿಸುವೆವೋ ಹಾಗೇ ನಮ್ಮ ಶಕ್ತಿ ಬೆಳೆಯುತ್ತದೆ. ಅಂದರೆ ಜ್ಞಾನ ಎಲ್ಲರಲ್ಲಿಯೂ ಅಡಗಿರುವ ಶಕ್ತಿಯೇ ಆದರೆ ಅದನ್ನು ಹೇಗೆ ಬಳಸಿದರೆ ಲೋಕಕಲ್ಯಾಣವಾಗುವುದೆನ್ನುವ ಸತ್ಯ ದ  ಅಗತ್ಯತೆ  ಇಂದಿದೆ. ಕಲಿಕೆಯೇ ಅಸತ್ಯದೆಡೆಗೆ ಹೊರಟಾಗ ಕಾಣೋದಷ್ಟೆ ಸತ್ಯ.ಕಾಣದ ಸತ್ಯವನ್ನು ಅರಿಯುವ ಶಕ್ತಿ ಇಲ್ಲದವರಿಗೆ  ತಾನು ಮಾಡೋದಷ್ಟೆ ಉತ್ತಮ ಕಾರ್ಯ ಎನ್ನುವ ಅಹಂಕಾರ ಒಳಗೇ ಬೆಳೆದಾಗ ಅದೇ ಮುಂದೆ ನಕಾರಾತ್ಮಕ ಶಕ್ತಿಗೆ ಪ್ರೇರಣೆ ನೀಡುತ್ತಾ ಹೊರಗಿನ ರಾಜಕೀಯದ ದಾಳವಾಗಿ ಜೀವಾತ್ಮ ನಿಗೆ  ತನ್ನ ತಾನರಿಯದ ಪರಿಸ್ಥಿತಿ ‌ಒದಗುತ್ತದೆ. 
ಹೀಗಾಗಬಾರದೆಂದರೆ ಮೊದಲು ನಮ್ಮ ಅಂತರಂಗದ ಶುದ್ದಿ ಆಗಬೇಕೆಂದು ಮಹಾತ್ಮರುಗಳು ತಿಳಿದು ತಿಳಿಸಿ ನಡೆದಿರುವರು.
ಅವರಲ್ಲೇ ತಪ್ಪನ್ನು ಹುಡುಕಿಕೊಂಡು  ತಾವು ಅವರಿಗಿಂತ ದೊಡ್ಡವರೆನ್ನುವ ಅಜ್ಞಾನವನ್ನು  ಪ್ರದರ್ಶನ ಮಾಡುವಷ್ಟು ‌ಬುದ್ದಿವಂತಿಕೆ ಇಂದಿನ ಮಾನವರಿಗಿದೆ .ಆದರೆ ಒಂದು ಸತ್ಯ ಅರ್ಥ ವಾಗಬೇಕಷ್ಟೆ ಇಲ್ಲಿ ಯಾರೂ ಶ್ರೇಷ್ಠ ರು ಕನಿಷ್ಟರು ಎಂದು ಜನ್ಮ ತಾಳಿರುವುದಿಲ್ಲ.ಎಲ್ಲರಲ್ಲಿಯೂ ಅಡಗಿರುವ ಚೇತನಾತ್ಮ. ಪವಿತ್ರವೇ ಆಗಿದ್ದು  ಸುಜ್ಞಾನದಿಂದ ಜೀವನ ನಡೆಸುವ  ಶಿಕ್ಷಣ ನೀಡುವುದು ಮಾನವ ಧರ್ಮ. ಯಾವಾಗ ಇದನ್ನು  ನಿರ್ಲಕ್ಷ್ಯ ಮಾಡಿ ಲಕ್ಷ ಹಣಗಳಿಸುವ  ವಿಜ್ಞಾನಕ್ಕೆ ನೇರವಾಗಿ  ಏಣಿಏರಿಸುವ ಯೋಚನೆ ಬೆಳೆಯಿತೋ ಏಣಿ ಏರಿದರೂ ಕೆಳಗಿದ್ದ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದೆ ಕೆಳಗೆ ಬಿದ್ದು ಹೋದವರೆ ಬೆಳೆದರು.
ಇಲ್ಲಿ ಕಲಿಗಾಲ ಎಂದರೆ ಕಲಿಯುವುದೇ ಕಾಲ. ಯಾವುದನ್ನು ಕಲಿತರೆ  ಅಧ್ಯಾತ್ಮ ಪ್ರಗತಿಯಾಗುವುದೋ  ಅದನ್ನು ಆತ್ಮಜ್ಞಾನ ಎಂದರೆ  ಭೌತಿಕದಲ್ಲಿ ಪ್ರಗತಿ ಕಾಣುವುದು ವಿಜ್ಞಾನ. ವಿಜ್ಞಾನ ವಿಶೇಷಜ್ಞಾನವಾಗಿದ್ದು  ಸಂಶೋಧನೆಯಿಂದ ಬೆಳೆದಿರುವ ಸತ್ಯವಾಗಿದೆ. ಇದರಲ್ಲಿ ಅಂತರಂಗ ಸಂಶೋಧನೆಯೇ ಬೇರೆ ಸತ್ಯ ತಿಳಿಸಿದರೆಬಹಿರಂಗ ಸಂಶೋಧನೆ ಬೇರೆ ಸತ್ಯ ತಿಳಿಸಿದ್ದರೂ ಎರಡೂ ಮಧ್ಯವರ್ತಿ ಮಾನವನಿಗೆ ಜೀವನದಲ್ಲಿ ಅಗತ್ಯವಿದೆ.
ಯಾವುದೂ ಅತಿಯಾಗದೆ ಇತಿಮಿತಿಗಳನ್ನು ಕಾಯ್ದುಕೊಂಡು ಬಳಸಿದಾಗಲೇ  ಸಮಾಧಾನಕರ ಜೀವನವಾಗುತ್ತದೆ. ಸಮಾಧಾನ ಇಲ್ಲದ ಮನುಷ್ಯನಿಗೆ ಎಲ್ಲರಲ್ಲಿಯೂ ಎಲ್ಲದರಲ್ಲೂ ಅನುಮಾನವೇ ಇದ್ದಾಗ ನಕಾರಾತ್ಮಕ ವಿಷಯವಾಗುತ್ತಾ  ಸತ್ಯ ಹಿಂದುಳಿದು ಧರ್ಮಕ್ಕೆ ಚ್ಯುತಿ ಬಂದಾಗ  ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಅನ್ಯರನ್ನು ಬೇಡೋದೇ ಕೆಲಸವಾಗುತ್ತದೆ. 
ಬೇಡೋನು ದೀನ ಸ್ಮರಿಸೋನೆ ಜಾಣ  ಎಂದ  ಮಹಾತ್ಮರುಗಳು  ಪರಮಾತ್ಮನ ಸ್ಮರಣೆ ಮಾತ್ರದಿಂದ  ಸತ್ಯಜ್ಞಾನ ಪಡೆದು ಏನೂ ಬೇಡದೆಯೇ ಜೀವನ್ಮುಕ್ರರಾದರು.
ಎಲ್ಲಾ ಕ್ಷಣಿಕವಾದರೂ ಜೀವನ‌ನಡೆಸುವಷ್ಟು ಸಂಸಾರ ಸಾಗಿಸುವಷ್ಟು ಸಂಪಾದನೆ ಮಾಡೋದು ಮಾನವನ ಧರ್ಮ ಕರ್ಮ. ಅದರಲ್ಲಿ ಸತ್ಯ ಧರ್ಮ ವಿದ್ದರೆ ಎಲ್ಲಾ ಶುಭವೇ.ಇಲ್ಲವಾದರೆ ನೀರಿನಲ್ಲಿ ಹೋಮಮಾಡಿದಂತಾಗುತ್ತದೆ. ಒಟ್ಟಿನಲ್ಲಿ ಸತ್ಯ ಯಾರೋ ಹೊರಗಿನಿಂದ ತಿಳಿದರೆ ಸಾಲದು ಅಳವಡಿಸಿಕೊಂಡು ಅನುಭವಿಸುವುದರಿಂದ ನಾವೀಗ ಹೊರಗಿನ ರಾಜಕೀಯ ತಂತ್ರದ ವಶದಲ್ಲಿ ನಮ್ಮ ಸ್ವಾತಂತ್ರ್ಯ ಕಳೆದುಕೊಂಡರೂ ಏನೂ ಸಾಧನೆ ಮಾಡಿದಂತೆ ಬೀಗುತ್ತಿರುವ ಸತ್ಯದ ಇನ್ನೊಂದು ಮುಖದರ್ಶನ ಒಳಗೇ ಆದರೂ ನಮ್ಮ ಸಹಕಾರವೇ ಇದಕ್ಕೆ ಕಾರಣವಾಗಿದ್ದರೆ ಅದರ ಫಲ ಅನುಭವಿಸದೆ ವಿಧಿಯಿಲ್ಲ. ಇದನ್ನು ಸಕಾರಾತ್ಮಕ ದೃಷ್ಟಿ ಎಂದರೆ ಕಣ್ಣಿಗೆ  ಕಾಣೋದಿಲ್ಲ ಅರಿವಿಗೆ ಬರುತ್ತದೆ. ನಕಾರಾತ್ಮಕ ಎಂದು ತಿರಸ್ಕರಿಸಿದರೂ ಇನ್ನಷ್ಟು ದೊಡ್ಡದಾಗಿ ಬೆಳೆದು ನಿಲ್ಲುತ್ತದೆ. ಯಾರೂ  ತಡೆಯಲಾಗದು. ತಡೆದವರೂ ಇಲ್ಲ.
ಇಂದು  ಮಹಾತ್ಮರಾಗಿದ್ದ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮದಿನ.ಇಬ್ಬರೂ ದೇಶಕ್ಕಾಗಿ ಹೋರಾಟಮಾಡಿದ  ದೇಶಭಕ್ತರಾದರೂ ಇಬ್ಬರನ್ನೂ ನೋಡುವ ದೃಷ್ಟಿ ಬೇರೆಯಾಗಿರಲು ಕಾರಣವೇ ನಮ್ಮ ಸ್ವಾರ್ಥ ಪೂರ್ಣ ರಾಜಕೀಯ ಪ್ರಜ್ಞೆ.
ಇಬ್ಬರೂ ಭಾರತಮಾತೆಯನ್ನು  ಆಂಗ್ಲರಿಂದ ಬಿಡುಗಡೆಗೊಳಿಸಲು ತಮ್ಮದೇ ಆದ ವಿಶೇಷಜ್ಞಾನದಿಂದ ಹೋರಾಟ ನಡೆಸಿದ್ದಾರೆ. ಗಾಂಧಿಯವರು  ಸ್ವಾತಂತ್ರ್ಯ ನಂತರ ಅಧಿಕಾರವಹಿಸಿಕೊಳ್ಳದೆ ಅಮರರಾದವರು.ಶಾಸ್ತ್ರೀಜಿ ದೇಶವನ್ನು ಮತ್ತೆ ಪುನನಿರ್ಮಾಣ ಮಾಡುವ ಕೆಲಸದಲ್ಲಿ ನಿಸ್ವಾರ್ಥ ದಿಂದ ದೇಶದ ಪ್ರಧಾನಮಂತ್ರಿಗಳಾಗಿ ಸರಳ ಜೀವನ‌ನಡೆಸಿರುವ ಮಹಾತ್ಮರು. 
ಆದರೆ ಇಂದಿನ ದೇಶದ ಸ್ಥಿತಿಗೆ ಕಾರಣವಾಗಿರುವ ಭ್ರಷ್ಟದುಷ್ಟರ ಆಡಳಿತ ಅಧಿಕಾರಕ್ಕೆ ಸಹಕಾರ ನೀಡುತ್ತಾ ಇಷ್ಟು ವರ್ಷ ನಡೆದು ಬಂದಿರುವ ಪ್ರಜೆಗಳ ದೃಷ್ಟಿಯಲ್ಲಿ   ಇಬ್ಬರೂ ಬೇರೆಯೇ  ಕಾರಣವಿಷ್ಟೆ  ಅವರ ಆ ಶ್ರಮದ ಹಿಂದೆ ಇದ್ದ ದೇಶಭಕ್ತಿಯಕೊರತೆಯಿದೆ.
ಹಾಗಾದರೆ ದೃಷ್ಟಿ ದೋಷವೇ ಎಲ್ಲದ್ದಕ್ಕೂ ಕಾರಣವೆಂದರೆ  ಅದಕ್ಕೆ ಸರಿಯಾದ  ಔಷಧ ಕೊಡುವುದು ಧರ್ಮ.
ಇದೇ ಸುಶಿಕ್ಷಣ ಸತ್ಯ ಧರ್ಮ ದ ನೈತಿಕ ಶಿಕ್ಷಣ. ಮಾನವರಾಗಿ ಮಹಾತ್ಮರಾಗುವ ಶಿಕ್ಷಣ  ಕೊಡುವುದೇ  ಧರ್ಮ ಕಾರ್ಯ.
ಜ್ಞಾನಕ್ಕೆ ಕೊರತೆಯಿಲ್ಲ ಅದನ್ನು ‌ಬೆಳೆಸುವವರ ಕೊರತೆಯಿದೆ.
ಹೊರಗಿನ ದೃಷ್ಟಿ ಒಳದೃಷ್ಟಿಯನ್ನು  ಹಿಂದುಳಿಸಿದರೆ ಅದನ್ನು ಹಣದಿಂದ ಮೇಲೆತ್ತಲಾಗದು.ಹಾಗೇನಾದರೂ ಮಾಡುತ್ತಿದ್ದರೆ ಅಜ್ಞಾನ ಎಂದಿರುವರು. 
ಇದನ್ನು  ಜನಸಾಮಾನ್ಯರು ಅರ್ಥ ಮಾಡಿಕೊಳ್ಳಲು ಸೋತಾಗಲೇ ಅನ್ಯರು  ದೇಶದ ಜೊತೆಗೆ ದೇಹವನ್ನು ಆಳುವರು. ಯಾರು ಎಷ್ಟೇ ಆಳಲು ಹೋದರೂ  ಅಧರ್ಮಕ್ಕೆ ತಕ್ಕಂತೆ ಫಲವೂ ಇರುತ್ತದೆ. ಹಾಗೆ ಧರ್ಮ ದಿಂದ ಆಳಿದವರೂ ಇಂದಿಗೂ ಅಮರರಾಗಿರುವರೆಂದರೆ  ಮರಣವಿಲ್ಲದ ಆತ್ಮವನರಿತರೆ ಸಕಾರಾತ್ಮಕ ದೃಷ್ಟಿ. ಕೇವಲ ದೇಹಕ್ಕೆ  ವ್ಯಕ್ತಿಗೆ ಹಣಕ್ಕೆ ಬೆಲೆಕೊಟ್ಟರೆ ನಕಾರಾತ್ಮಕ ಶಕ್ತಿ ಜಾಗೃತವಾಗಿ  ಎಷ್ಟು ಇದ್ದರೂ ಸಾಲದು. ಸಾಲವೇ ಅದು.
ಏನಂತೀರ?
ಬರೋವಾಗ  ತಂದ ಪಾಪ ಪುಣ್ಯ ದ ಪ್ರಕಾರ ಜೀವನ ನಡೆಯುತ್ತದೆ. ಹೋಗುವಾಗಲೂ  ಪುಣ್ಯ ಹೆಚ್ಚಾಗಿದ್ದರೆ ಸದ್ಗತಿ.ಇಲ್ಲವೆಂದರೆ ದುರ್ಗತಿ.
ಎರಡೂ ಕೊಡೋನು ಒಬ್ಬನೇ . ಎರಡಕ್ಕೂ ಕಾರಣ ಜ್ಞಾನವೇ ಆಗಿದೆ. ಕದಿಯಲಾಗದ ಸಂಪತ್ತು ಜ್ಞಾನವಾಗಿದೆ. ಅನುಭವಿಸಿಯೇ  ತಿಳಿಯಬೇಕು ತೀರಿಸಬೇಕು ತೀರಬೇಕು...

ಭಗವತಿ
ಬೆಂಗಳೂರು