ಸಿದ್ದಿ ಪಡೆದ ಸಿದ್ದರು

ಅತೀಂದ್ರಿಯ ಲೋಕದ ರಹಸ್ಯ.. ಸಿದ್ಧಿ ಮತ್ತು ಸಿದ್ಧರ ವಾಸ್ತವ ಸತ್ಯಗಳು: ಬಾಹ್ಯಾಕಾಶದ ಅನಂತತೆಯನ್ನು ಅಳೆಯಲು ಹೊರಟಿರುವ ನವೀನ ವಿಜ್ಞಾನಕ್ಕೇ ಸವಾಲೆಸೆಯುವ, ಪ್ರಕೃತಿಯ ನಿಯಮ...

Thursday, April 4, 2024

ಸ್ತ್ರೀ ಒಲಿದರೆ‌ನಾರಿ‌ ಮುನಿದರೆ ಮಾರಿ

ಒಬ್ಬಳು ಸ್ತ್ರೀ ಅಧ್ಯಾತ್ಮ ಚಿಂತನೆಯ ವಿಚಾರ ಮಂಡನೆ ಮಾಡೋದಕ್ಕೆ ಭಾರತೀಯರು  ತಡೆಯುತ್ತಾರೆ ಅದಕ್ಕೆ ಭಾರತ ಈ ಸ್ಥಿತಿಗೆ ತಲುಪಿದೆ. ಜ್ಞಾನದೇವತೆಯನ್ನು ವಿಗ್ರಹದ ರೂಪದಲ್ಲಿಟ್ಟು ಪೂಜಿಸಿ ಬೇಡಿದರೆ ವಿದ್ಯೆ ಬರಬಹುದು.ಜ್ಞಾನಕ್ಕೆ  ಆ ವಿದ್ಯೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕಷ್ಟೆ.ಎಷ್ಟೋ ಅವಿದ್ಯಾವಂತರು ಜ್ಞಾನಿಗಳಾಗಿರುವಾಗ ತಾಯಿ ಒಲಿಯೋದು ವಿದ್ಯೆಗೋ ಜ್ಞಾನಕ್ಕೋ?
ವಿದ್ಯೆಗಿಂತ ಜ್ಞಾನವೇ ಮೇಲೆಂದರು ಗುರುಹಿರಿಯರು. ಇಂದು ವಿದ್ಯೆ ಇದೆ ಜ್ಞಾನವಿಲ್ಲದೆ ಸತ್ಯವನ್ನು ಅಪಾರ್ಥ ಮಾಡಿಕೊಂಡು ವ್ಯವಹಾರಕ್ಕಿಳಿದು ಹಣ ಮಾಡುವವರಿಗೆ ಹೆಚ್ಚಿನ ಸಹಕಾರ.ಇದು ಪುರುಷರಲ್ಲಿ ಹೆಚ್ಚು .ಮಿತಿಮೀರಿದ ವಿದ್ಯೆಯೂ ಅಪಾಯವೆ. ಪ್ರತಿಯೊಬ್ಬರೊಳಗೂ ಅಡಗಿರುವ ವಿಶೇಷವಾದ ಜ್ಞಾನ ಗುರುತಿಸುವ ಶಿಕ್ಷಣ ಕೊಡದೆ ಜನರನ್ನು ಆಳುವ ರಾಜಕೀಯದಿಂದ ಭಾರತ ಇಂದು ಈ ಸ್ಥಿತಿಗೆ ತಲುಪಿದೆ.ವೇದ ಶಾಸ್ತ್ರ ಪುರಾಣಗಳೇನೋ ಅಲ್ಲಲ್ಲಿ ಪ್ರಚಾರ ಆಗಿದ್ದರೂ  ಅದರ ಬಳಕೆಯಿಂದ ಏನಾದರೂ ಜನಸಾಮಾನ್ಯರಲ್ಲಿ ಬದಲಾವಣೆ ಮಾಡಲಾಗಿದೆಯೆ? ಎಂದರೆ  ಒಂದು ಚೌಕಟ್ಟನ್ನು ಭದ್ರಪಡಿಸಲೇ ಸಾಧ್ಯವಾಗಿಲ್ಲ.ಅದರಲ್ಲೂ ಲಿಂಗಬೇಧ ಜಾತಿ ಬೇದ ಪಕ್ಷಬೇದವಿದ್ದಾಗ ತತ್ವ ವಿರದು. ಒಟ್ಟಿನಲ್ಲಿ ಭಾರತ ಮಾತೆಯ ಒಳಗಿದ್ದು ಅವಳ ಶಕ್ತಿಯನ್ನು ಗುರುತಿಸದವರು ಭಾರತವನ್ನು ಆಳಲು ಹೊರಟರೆ  ದೇವರು ಕಾಣೋದಿಲ್ಲ.ಅತೃಪ್ತ ಆತ್ಮಗಳು ಎಲ್ಲೆಂದರಲ್ಲಿ ಹರಿದಾಡುತ್ತಿರೋದಕ್ಕೆ ಕಾರಣವೇ ಆತ್ಮತೃಪ್ತಿ ಹೊಂದುವ ವ ಜ್ಞಾನದ ವಿದ್ಯೆ ಕೊಡದಿರೋದು.
ಕೆಲವು ಸತ್ಯ ಎಲ್ಲರಿಗೂ ಅರ್ಥ ವಾದರೂ ಒಪ್ಪಿಕೊಳ್ಳುವುದು ಕಷ್ಟವಿದೆ.ಕಾರಣ ಅಸತ್ಯ ದ ವಿಚಾರಗಳು ಮನಸ್ಸಿನಲ್ಲಿ ಮನೆ ಮಾಡಿಕೊಂಡು ಮುಂದೆ ನಡೆಸಿರುವಾಗ ಆಳವಾಗಿ ಹಿಂದೆ ಉಳಿದ ಸತ್ಯ  ರುಚಿಸೋದಿಲ್ಲ. ಎಷ್ಟು ಸತ್ಯವನ್ನು ಸ್ತ್ರೀ ಶಕ್ತಿಯನ್ನು ಹಿಂದೆ ತಳ್ಳಿದರೂ  ಅದರ ಪ್ರಭಾವ ಮುಂದೆ ತೋರಿಸುತ್ತದೆ ಎಂದು ತಿಳಿದರೆ ವಾಸ್ತವದಲ್ಲಿ ಸತ್ಯದೆಡೆಗೆ ನಡೆಯಬಹುದು. ಮಿಥ್ಯದ ರಾಜಕೀಯದಿಂದ  ಹಣ ಸಿಕ್ಕರೆ ಸತ್ಯದ ರಾಜಕೀಯದಿಂದ ಜ್ಞಾನೋದಯವಾಗುತ್ತದೆ. ಅದಕ್ಕೆ ರಾಜಕೀಯವಿರಲಿ ಅದರಲ್ಲಿ ಸತ್ಯವಿರಲಿ. ಸತ್ಯ ಧರ್ಮ ವು ಜೊತೆಯಾಗಿರಲಿ.ಹಿಂದಿನ ಮಹರ್ಷಿಗಳು ಸ್ವತಃ ಸತ್ಯಸಂಶೋಧನೆ ನಡೆಸಿಕೊಂಡು ಸ್ವತಂತ್ರ ವಾಗಿದ್ದು ರಾಜರಿಗೆ ಉಪದೇಶ ನೀಡಿ ಸಂಸಾರಸ್ಥರಾಗಿದ್ದರು. ಈಗ‌ರಾಜಕಾರಣಿಗಳ ಹಿಂದೆ ಜನರ ಹಿಂದೆ ನಡೆದು ಧರ್ಮಸತ್ಯದ ವಿಚಾರಮಾಡಿದರೂ  ಹಣವಿಲ್ಲದೆ ಜನಬಲವಿರದು ಹಣಕ್ಕಾಗಿ ರಾಜಕಾರಣ ಮಾಡಬೇಕು ಇಲ್ಲ ರಾಜಕಾರಣಿಗಳ ಹಿಂದೆ ನಡೆಯಲೇಬೇಕಾಗಿದೆ. ಪ್ರಜಾಪ್ರಭುತ್ವ  ನಡೆದಿರೋದು  ಹೀಗೆ ಇದನ್ನು ತಡೆಯಲಾಗದು ಹಾಗಂತ ಇದಕ್ಕೆ ಸಹಕರಿಸುತ್ತಿರುವ ರಾಜಕಾರಣಿಗಳಿಗೆ ಜನಸಾಮಾನ್ಯರಿಗೆ ‌ಉತ್ತಮ ಜ್ಞಾನದ ಶಿಕ್ಷಣ ನೀಡುವುದು ಧರ್ಮ. ಅದರಲ್ಲೂ ಜ್ಞಾನದೇವತೆಯಾಗಿರುವ ಸ್ತ್ರೀ ಯರಿಗೆ  ಧಾರ್ಮಿಕ ಶಿಕ್ಷಣ ನೀಡಿದಾಗಲೇ ಭಾರತ ಆತ್ಮನಿರ್ಭರ ವಾಗಲು ಸಾಧ್ಯವಿದೆ. ಒಳಗಿರುವ ಶಕ್ತಿ ಬಿಟ್ಟು ಹೊರಬಂದವರಿಗೆ‌ಮಣೆಹಾಕಿದರೆ ಆತ್ಮದುರ್ಭಲ ವಾಗುತ್ತದೆ. ಮೊದಲು ಆತ್ಮಾವಲೋಕನ.
ವಿಜ್ಞಾನ ಜಗತ್ತಿನಲ್ಲಿ ಇದು ಕಷ್ಟವಿದೆ  ಹೀಗಾಗಿ ಪ್ರಾಥಮಿಕ ಹಂತದಲ್ಲಿ ಅಧ್ಯಾತ್ಮ ಶಿಕ್ಷಣಕ್ಕೆ ಒತ್ತುಕೊಟ್ಟು ನಂತರ ಭೌತವಿಜ್ಞಾನದ ಶಿಕ್ಷಣ ನೀಡಿದಾಗಲೇ ಭೂಮಿಯ‌ಮೇಲೆ ಹೇಗೆ ಯಾರಿಗೆ ಎಷ್ಟು ಸಹಕಾರ ಸಹಾಯ ಮಾಡಿದರೆ ಉತ್ತಮವೆನ್ನುವ. ಜ್ಞಾನ ಮಾನವನಿಗೆ ಬರುತ್ತದೆ. ತನ್ನ ಜ್ಞಾನವನ್ನು  ತಾನೇ ಅರ್ಥ ಮಾಡಿಕೊಳ್ಳಲು  ಸೋತಾಗಲೇ ಪರಕೀಯರ ವಶದಲ್ಲಿ ಜೀವನ ಸಿಲುಕುವುದು. .
ಭಾರತೀಯತೆಯನ್ನು  ಕಲಿಸಬಹುದು ಆದರೆಬೆಳೆಸುವುದು ಪೋಷಕರ ಧರ್ಮ. ಇದಕ್ಕೆ ಮೊದಲ ಗುರುವೇ ತಾಯಿ .ಇವಳಿಗೇ  ಸಹಕಾರ ಸಿಗದಿದ್ದರೆ  ಸಂಸಾರ ಹೇಗಿರುವುದು? ಸ್ತ್ರೀ ಯರು ಜಾಗೃತರಾದರೆ ಬದಲಾಗಬಹುದು. ಹೊರಗಿನ ಹೋರಾಟ ಹಾರಾಟ ಮಾರಾಟದಲ್ಲಿ ಪ್ರಗತಿ ಹೊಂದುವ‌ಮೊದಲು ಒಳಗಿನ‌ಜ್ಞಾನದಿಂದ ಹೋರಾಟ ಮಾಡಿದರೆ ಒಳಗೇ ತುಂಬಿರುವ ಕಲ್ಮಶಗಳನ್ನು  ನಾಶಮಾಡುವಷ್ಟು ಶಕ್ತಿ ಸ್ತ್ರೀ ಗಿದೆ.ಇದಕ್ಕೆ ಸ್ತ್ರೀ ಗೆ ಸ್ತ್ರೀ ಸಹಕಾರ ಅಗತ್ಯವಾಗಿದೆ. ಪುರುಷರಾದರೂ ಸಹಕರಿಸುವರು ಆದರೆ ಸ್ತ್ರೀ ಸಹಕಾರ ಇಂದು ಅತಿಮುಖ್ಯವಾಗಿದೆ.ಧಾರ್ಮಿಕ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾಗಬೇಕಿದೆ. ಹಿಂದಿನ ವಾದ ವಿವಾದಕ್ಕಿಂತ ಇಂದಿನ‌ಚರ್ಚೆ ಹೆಚ್ಚು ಬದಲಾವಣೆಗಳಿಗೆ ದಾರಿಯಾಗುತ್ತದೆ.
ಭೌತಿಕದಲ್ಲಿ ರಾಜಕೀಯ ಚರ್ಚೆ/ನಿರಂತರವಾಗಿ ನಡೆದಿದೆ ಆದರೆ ಅದರೊಳಗೆ ಹೊಕ್ಕಿರುವ ಧಾರ್ಮಿಕ ಚರ್ಚೆ ಗೆ ಅವಕಾಶಕೊಡೋದಿಲ್ಲವೆಂದಾಗ ಧರ್ಮ ಕುಸಿದು ಅಧರ್ಮ ಬೆಳೆಯುತ್ತದೆ. ಕಲಿಗಾಲದ ಕಲಿಕೆಯೇ ಇದಕ್ಕೆ ಕಾರಣ. 
ಸ್ತ್ರೀ ಯಿಲ್ಲದೆ ಜನ್ಮವಿಲ್ಲ ಭೂಮಿಯಿಲ್ಲದೆ ಮನುಕುಲವಿಲ್ಲ ಆದರೂ ಅಜ್ಞಾನದಲ್ಲಿ ಮಾನವ ಸ್ತ್ರೀ ಯನ್ನು ಭೂಮಿಯನ್ನು ಆಳಲು ಹೋಗಿ  ಜನ್ಮಜನ್ಮಗಳ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸುವಂತಾಗಿದೆ. ಇದನ್ನು ತಡೆಯಲು ರಾಜಕೀಯದಿಂದ ಕಷ್ಟ ರಾಜಯೋಗದಿಂದ ಸಾಧ್ಯವಿದೆ ಎಂದಿದ್ದಾರೆ ಮಹಾತ್ಮರುಗಳು. ಯೋಗದಿಂದ  ಮಾಡುವ‌ಕರ್ಮಕ್ಕೂ ಭೋಗಕ್ಕಾಗಿ ಮಾಡುವ‌ ಧರ್ಮ ಕಾರ್ಯಕ್ಕೂ‌ ವ್ಯತ್ಯಾಸವಿದೆ. ಇದೀಗ ಭಾರತ ಭೋಗದೆಡೆಗೆ ನಡೆದು  ಆತ್ಮದುರ್ಭಲ ವಾಗಿದೆ. ಕೆಲವರಲ್ಲಿ ಯೋಗಶಕ್ತಿ ಇದ್ದರೂ ಸ್ತ್ರೀ ವಿಚಾರದಲ್ಲಿ ಹಿಂದುಳಿದಿದೆ. ಇದರಲ್ಲಿ ಕಷ್ಟ ನಷ್ಟ ಮನುಕುಲಕ್ಕೆ. ಕಾರಣ ಒಲಿದರೆ ನಾರಿ‌ಮುನಿದರೆ‌ಮಾರಿ.ಭೋಗದಲ್ಲಿ ಸೋಮಾರಿತನ ಹೆಚ್ಚು.ಸೋ 'ಮಾರಿ'ಯ ದರ್ಶನ ವಾದರೆ  ಅಜ್ಞಾನ ಬೆಳೆದಿದೆ ಎಂದರ್ಥ. ನಾವೆಲ್ಲರೂ ಭೂತಾಯಿಯ ಮಕ್ಕಳಾದಾಗ ಭೂ ತತ್ವವನರಿತು ಆಕಾಶತತ್ವದೆಡೆಗೆ ಹೋಗಲು ಇಬ್ಬರಿಗೂ ಒಂದೇ ಶಿಕ್ಷಣ  ಕೊಡದಿದ್ದರೂ‌ ಅವರಲ್ಲಿ ತತ್ವಜ್ಞಾನವಿರಬೇಕು.
ಜ್ಞಾನದಿಂದ ವಿಜ್ಞಾನ‌ಜಗತ್ತು ಬೆಳೆದಾಗ ಶಾಂತಿ ತೃಪ್ತಿ  ಜೀವನ್ಮುಕ್ತಿ.ಎಲ್ಲಿರುವರು ಮಹಾತ್ಮರುಗಳು? ಪ್ರತಿಮೆಯಲ್ಲೋ ಪ್ರತಿಭೆಯಲ್ಲೋ? ಪ್ರತಿಭೆಗಳು ಹಣದಿಂದ ಬೆಳೆದಿವೆಯೆ? ಜ್ಞಾನದಿಂದ ಬೆಳೆದ ಪ್ರತಿಭೆಗಳಿಗೆ ಆತ್ಮವಿಶ್ವಾಸ ವಿರುತ್ತದೆ ಅಹಂಕಾರ ವಲ್ಲ. ಅತಿಯಾದ ಅಹಂಕಾರ ಸ್ವಾರ್ಥ ವೇ ಅಸುರಿ ಗುಣವಾಗಿದೆ. ಹಾಗಾದರೆ ಮನುಕುಲ ಎಡವಿದ್ದೆಲ್ಲಿ? 
ಸಂಸ್ಕಾರ ಎಂದರೆ ಸಂಸ್ಕರಿಸೋದಷ್ಟೆ.ವಾಸ್ತವದಲ್ಲಿ ನಮ್ಮ ಈ ಅಹಂಕಾರ ಸ್ವಾರ್ಥ ದಿಂದ ನಮ್ಮ ಜ್ಞಾನ ನಮಗೆ ಕಾಣಿಸದೆ ದುರ್ಭಳಕೆ ಆಗಿರುವಾಗ ನಮ್ಮನ್ನು ನಾವು ಶುದ್ದಗೊಳಿಸಿಕೊಂಡು ಒಗ್ಗಟ್ಟಿನಿಂದ ಉತ್ತಮ‌ ಶಿಕ್ಷಣ ಮಕ್ಕಳಿಗೆ ಕೊಡುವತ್ತ‌ನಡೆದರೆ ಮನಸ್ಸು ಶುದ್ದವಾಗುತ್ತಾ ಬೇಧರಹಿತ ತತ್ವದೆಡೆಗೆ  ಮನುಕುಲ ನಡೆಯಲು ಸಾಧ್ಯ.ಮನೆಮನೆಯೊಳಗೆ  ಬೇಧತುಂಬಿರುವಾಗ ಹೊರಗಿನ ಬೇಧವನ್ನು ಬೇಧಿಸಲಾಗದು. ಒಟ್ಟಿನಲ್ಲಿ ನಮ್ಮ ಚಿಂತನೆಗಳು ಉತ್ತಮವಿದ್ದರೂ  ಸಹಕಾರವಿಲ್ಲದ ಸಮಾಜದಲ್ಲಿ  ಇದು ಸದ್ಬಳಕೆ ಆಗದಿರೋದಕ್ಕೆ  ಈ ಅಂತರಗಳೇ ಕಾರಣ.
ಸ್ತ್ರೀ ಪುರುಷ ಜ್ಞಾನವಿಜ್ಞಾನ, ಭೂಮಿ ಆಕಾಶ, ಪುರಾಣ ಭವಿಷ್ಯ, ವಾಸ್ತವಸತ್ಯದಿಂದ  ದೂರ ಮಾಡುತ್ತಿವೆ.ವಾಸ್ತವತೆ ಯಲ್ಲಿ ನಾವ್ಯಾರು? ಮಾನವರು ಭಾರತೀಯರಲ್ಲವೆ?

Wednesday, April 3, 2024

ಸದವಕಾಶದ ಕೊರತೆಯೇ ಕೊರಗಿಗೆ ಕಾರಣವೆ?



**ಅಂತಿಮವಾಗಿ ನಾವು ಬಳಸಿಕೊಳ್ಳಲು ಎಡವಿದ ಸದವಕಾಶಗಳ ಬಗ್ಗೆ ಕೊರಗುವುದೊಂದೇ ಜೀವನದಲ್ಲಿ  ಉಳಿದಿರುವ ಏಕೈಕ ದಾರಿಯಾಗಿರುತ್ತದೆ.**

ಈ ವಿಚಾರವನ್ನು ಭೌತಿಕದಲ್ಲಿ ಒಪ್ಪಿಕೊಳ್ಳಬಹುದು.ಆದರೆ ಅಧ್ಯಾತ್ಮ ದಲ್ಲಿ  ಸದವಕಾಶ ಸಿಗುವುದೇ ಅಪರೂಪ. ತನ್ನ ತಾನರಿತು ನಡೆಯೋ ಅವಕಾಶ ಸಿಗೋದು ಅಪರೂಪ. ಅವಕಾಶ ಸಿಕ್ಕಿದಾಗಲೂ ಸತ್ಯ ಶೋಧನೆ ಮಾಡದೆ ಬಳಸಿದರೆ ಕಷ್ಟ ನಷ್ಟದ ಸರಪಳಿಯಲ್ಲಿ ಬಂಧನವಾಗುತ್ತದೆ ಜೀವನ. ಜೀವನದಲ್ಲಿ ಕಷ್ಟ ನಷ್ಟಗಳಾದಾಗ  ಹಿಂದಿರುಗಿ  ಅದೇ ಅವಕಾಶಕ್ಕಾಗಿ  ಕೂತವರಿಗೆ  ತಿರುಗಿ ಅವಕಾಶ ಸಿಕ್ಕಿದಾಗ ಸತ್ಯದ ಅರಿವಿರುತ್ತದೆ ಆಗ ಕೊರಗಿರುವುದಿಲ್ಲ. ಅಂದರೆ ನಮ್ಮ ಉತ್ತಮ ಪ್ರಯತ್ನಕ್ಕೆ ಅವಕಾಶ ಸಿಕ್ಕಿ ಮುಂದೆ ಹೋದಾಗ ಆತ್ಮತೃಪ್ತಿ ಸಿಗೋದಾದರೆ ಅಂತಹ ಸದವಕಾಶ ತಪ್ಪಿಸಿಕೊಳ್ಳಬಾರದು.ಕೆಲವೊಮ್ಮೆ ತಪ್ಪಿ ಹೋದರೂ  ಮತ್ತೆ ಸಿಗುವ ನಂಬಿಕೆಯಿದ್ದರೆ  ಕೊರಗುವುದರಿಂದ ಮುಕ್ತಿ ಸಿಗುತ್ತದೆ ಅನಿಸುತ್ತದೆ.
ಇಲ್ಲಿ ಒಂದು ಅನುಭವದಿಂದ  ವಿಚಾರ ತಿಳಿಸುವುದಾದರೆ  ನನಗೆ  ಮೊದಲಿನಿಂದಲೂ  ಸತ್ಯ ಯಾವುದು  ಯಾಕಿಷ್ಟು ದು:ಖ  ಜೀವನದ ಉದ್ದೇಶ ಇವೆಲ್ಲದರ ಬಗ್ಗೆ ಆಸಕ್ತಿಯಿದ್ದರೂ  ತಿಳಿಯುವ  ಸದವಕಾಶವಿರಲಿಲ್ಲ. ಎಲ್ಲೋ ಹೇಳಿ ಕೇಳಿ ನೋಡಿ ತಿಳಿದು ಮುಂದೆ ಬಂದಾಗ ಪ್ರಶ್ನೆ ಮಾಡುವ ಅವಕಾಶವಿರಲಿಲ್ಲ. ಕೊನೆಗೆ  ಪ್ರಶ್ನೆಗೆ ಉತ್ತರ‌ಹೊರಗೆ ಹುಡುಕಿ ಸುಸ್ತಾಗಿ ಸಿಗದಿದ್ದಾಗ ಉತ್ತರ ಒಳಗೆ ಸಿಕ್ಕಿತು. ಹಾಗಂತ ಹೊರಗಿನ ಪ್ರಯತ್ನ ವ್ಯರ್ಥ ವಾಗಲಿಲ್ಲ.ಸದವಕಾಶಗಳು ಪ್ರತಿಕ್ಷಣ  ನಮ್ಮೊಂದಿಗಿದ್ದರೂ  ನಾನು ಗಮನಿಸದಿರೋದಕ್ಕೆ ಕಾರಣವಿರುತ್ತದೆ.  ಹೀಗೇ ಎಲ್ಲರಿಗೂ  ಆಗಿರುತ್ತದೆ. ಕೆಲವರಿಗೆ ಪ್ರಾರಂಭದಲ್ಲೇ ಅವಕಾಶ ಸಿಕ್ಕಿದ್ದರೆ ಕೆಲವರಿಗೆ ಜೀವನದ‌ಮಧ್ಯೆ ಭಾಗದಲ್ಲಿ ಸಿಗಬಹುದು ಕೆಲವರಿಗೆ ಕೊನೆಯಲ್ಲಿ ಸಿಗಬಹುದು. ಅವಕಾಶವು ನಮ್ಮ ಜ್ಞಾನದ ಚೌಕಟ್ಟಿನಲ್ಲಿದ್ದರೆ ಬಳಸಿಕೊಳ್ಳುವುದು ಸುಲಭ. ಹಾಗೆ ಅಜ್ಞಾನದಲ್ಲಿಯೂ ಅವಕಾಶವಿರುತ್ತದೆ. ಯಾವುದನ್ನು ಬಳಸಿದರೂ ಬೆಳೆಯುತ್ತದೆ .ಇದರಿಂದ  ಸಮಾಜಕ್ಕಾಗಲಿ ಸಂಸಾರಕ್ಕಾಗಲಿ ಉಪಯೋಗವಿದ್ದರೆ  ಕೊರಗಿನಿಂದ ಹೊರಬರಬಹುದು. ಇಲ್ಲವಾಗಿದ್ದರೆ ಕೊರಗೇ ಹೆಚ್ಚುವುದು.
ಇತ್ತೀಚಿನ ದಿನಗಳಲ್ಲಿ ಹೊರಗೆ ಸಾಧನೆ ಮಾಡುವುದಕ್ಕೆ ಅವಕಾಶವಿದೆ.ಇದರಿಂದ ಒಳಗೇ ನಷ್ಟವಾಗಿ ಕೊರಗುವ‌ ಮೊದಲು  ಯೋಚನೆ ಮಾಡಿ  ಅವಕಾಶ ಬಳಸಿಕೊಳ್ಳುವುದು ಉತ್ತಮ. ಜನ ಮೊದಲು ಹೆಸರು ಹಣ ಮಾಡಿದವರನ್ನು ಎತ್ತಿ ಏಣಿಗೇರಿಸಿ ಕೊನೆಯಲ್ಲಿ ಕೈ ಬಿಡುವುದು ಸಾಮಾನ್ಯವಾದಾಗ  ಎಚ್ಚರದಿಂದ  ಮೇಲೆ ಹತ್ತುವುದು ಅಗತ್ಯವಿದೆ. ಎಷ್ಟೇ ಇದ್ದರೂ ಒಂದಲ್ಲ ಒಂದು ಕೊರಗಿರುತ್ತದೆ. ಹಾಗಂತ  ಕೊರಗಿಲ್ಲದೆ ಬದುಕಲಾಗದು. ಅದಕ್ಕೆ ಇತಿಮಿತಿಯಲ್ಲಿ ಸದವಕಾಶವನ್ನು ಬಳಸುತ್ತಾ  ಅದರೊಂದಿಗೆ ಹೆಜ್ಜೆ ಹಾಕಿದರೆ ಉತ್ತಮ.
ಜೀವನದಲ್ಲಿ ಕಲಿಕೆ ನಿರಂತರವಾಗಿ  ಇರುತ್ತದೆ.ಎಲ್ಲಾ ಕಲಿಕೆಯೂ  ಕೊರತೆಯನ್ನು ನೀಗಿಸುವುದಿಲ್ಲ ಹಾಗಾಗಿ ನಮ್ಮ ಜ್ಞಾನದ ಕೊರತೆಯನ್ನು ನೀಗಿಸುವ ಶಿಕ್ಷಣ ನಮ್ಮ ಕೈ ಮೀರಿ ಹೋದಾಗ ಕೊರಗುವುದು ಸಹಜ. ಇದಕ್ಕೆ ಅವಕಾಶ ಸಿಗೋದು‌ ಅಪರೂಪ. ಸತ್ಯ ಒಂದೇ  ಅಸತ್ಯ ಹಲವು. ಅಸತ್ಯದೆಡೆಗೆ ನಡೆಯೋ ಅವಕಾಶವೂ ಹಲವು ಇದರಿಂದಾಗಿ ಕೊನೆಯಲ್ಲಿ ಕೊರಗುವ‌ಬದಲು ಮೊದಲೇ ಸತ್ಯದ ಕಡೆಗೆ ನಡೆಯೋ ಅವಕಾಶವಿದ್ದರೆ ಧೈರ್ಯವಾಗಿ ನಡೆದರೆ ಕೊರಗು ಕಡಿಮೆಯಾಗುತ್ತದೆ. ಇದಕ್ಕೆ ಸತ್ಯವೇ ದೇವರೆಂದಿರೋದು.
ಕಣ್ಣಿಗೆ  ಕಾಣುವ ಜಗತ್ತು  ತೃಣಮಾತ್ರದ್ದು ಕಾಣದ ಜಗತ್ತು ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತದೆ ಹಾಗಂತ  ಆ ಕ್ಷಣವನ್ನು ನೆನಪಿಸಿಕೊಂಡು  ಸದವಕಾಶವನ್ನು  ಬಳಸಿಕೊಂಡರೆ  ನಮ್ಮ ಕೊರಗಿನ ಮೂಲ ತಿಳಿಯಬಹುದು.ತಿಳಿದರೂ  ಏನೂ ಮಾಡಲಾಗದಿದ್ದಾಗ‌ಮರೆತು ಬಿಡೋದು ಉತ್ತಮ.ಯಾರೂ ಶಾಶ್ವತವಲ್ಲ ಯಾವುದೂ ಸ್ಥಿರವಲ್ಲವಾದಾಗ ಸದವಕಾಶ ಬಂದರೂ ಸರಿ ಬರದಿದ್ದರೂ ಸರಿ ಎನ್ನಬಹುದು. ಒಳ್ಳೆಯದಕ್ಕೆ ಸಿಗುವ ಅವಕಾಶ ಕೆಟ್ಟದ್ದಕ್ಕೆ ಸಿಕ್ಕರೆ ಕೊರಗುವುದು ನಿಶ್ಚಿತ. ಕೆಲವರಿಗೆ ಉತ್ತಮ ವಿಚಾರಗಳನ್ನು ಪ್ರಚಾರ ಮಾಡುವ ಅವಕಾಶ ಕೊಟ್ಟಿದ್ದರೂ ಮಾಡೋದಿಲ್ಲ .ಕೆಲವರಿಗೆ ಮಾಡುವ‌ಮನಸ್ಸಿದ್ದರೂ ಅವಕಾಶವಿರೋದಿಲ್ಲ. ಹಾಗಂತ ಒಳ್ಳೆಯದಕ್ಕೆ ಕೊರತೆಯಿಲ್ಲ ಒಳ್ಳೆಯವರು ಬೆಳೆಯೋದಿಲ್ಲವಷ್ಟೆ. 
ಶ್ರೇಷ್ಠ ವ್ಯಕ್ತಿತ್ವವುಳ್ಳವರು  ಸರಳವಾಗಿ ಸತ್ಯ ಧರ್ಮ ದಲ್ಲಿ ಶಾಂತಿಯಿಂದ  ಬದುಕುತ್ತಿದ್ದರೆ ಕಂಡವರು ಕಾಣದಂತಿರುವರು.ಅದಕ್ಕೆ ವಿರುದ್ದವಿರುವ ವ್ಯಕ್ತಿಯನ್ನು ಎಲ್ಲಾ ಗಮನಿಸುತ್ತಾ ಮನರಂಜನೆಯ ಜೊತೆಗೆ ತಾವೂ ಹೆಜ್ಜೆ ಹಾಕಿದರೆ ಸದವಕಾಶವೆನ್ನಬಹುದೆ? ನಿಜ ಜೀವನದಲ್ಲಿ ಸಂತೋಷ ಅಗತ್ಯ. ಸಂತೋಷದಿಂದ ಆತ್ಮಸಂತೋಷ ಆತ್ಮಸಂಶೋಧನೆಯೂ ಆಗಬೇಕಿದೆ.ಇದನ್ನು ಅಧ್ಯಾತ್ಮ ವೆಂದರು. ಬಹಳ ವೇಗದಲ್ಲಿ ಬೆಳೆಯುವ ಜಗತ್ತಿನಲ್ಲಿ ಅವಕಾಶಕ್ಕೆ ಕೊರತೆಯಿಲ್ಲ. ಆದರೆ ಅವಕಾಶದ ಹಿಂದಿನ ಗುರಿ ಉದ್ದೇಶ ತಿಳಿದು ಬಳಸುವ ಜ್ಞಾನಕ್ಕೆ ಕೊರತೆಯಿದೆ. ಹೀಗಾಗಿ ಎಲ್ಲಾ ಅವಕಾಶವನ್ನು ಸ್ವಾಗತಿಸಿ ಕೊನೆಗೆ ಹಿಂದಿರುಗಲಾಗದೆ ಕೊರಗಿ ಹೋದವರು ಹೆಚ್ಚಾಗಿದ್ದಾರೆ. 

Tuesday, April 2, 2024

ಹೆಸರಿನಲ್ಲಿ ಏನಿದೆ?

ಒಂದು ಜನ್ಮದಲ್ಲಿ ಒಂದೇ ಹೆಸರಿದ್ದರೆ ಯಾರೂ ಏನೂ ಹೇಳೋದಿಲ್ಲ ಕೇಳೋದಿಲ್ಲ ಎರಡಿದ್ದರೆ ಯಾಕೆ ಕೇಳುವರು ಹಾಗೆ ಇನ್ನೂ ಹೆಚ್ಚಿನ‌ಹೆಸರು ಮಾಡಿಕೊಂಡಾಗ  ಹೆಸರನ್ನು ಹೇಳೋರು ಕೇಳೋರ ಸಂಖ್ಯೆ ಬೆಳೆಯುತ್ತಾ ಕೊನೆಗೊಂದೆ ಹೆಸರು ಉಳಿಯೋದು  ಅದೇ ದೇವರಾಗಿರೋದು. ಇಲ್ಲಿ ಅಸುರರಿಗೂ ಇದೇ ಕಥೆಯಿರುತ್ತದೆ  ಆದರೆ ಉಸಿರು ನಿಂತ ಮೇಲೆ  ಆ ಹೆಸರಿಗೆ ಬೆಲೆಕಟ್ಟುವವರೂ ಅಸುರರೆ. ಹೀಗಾಗಿ ಹೆಸರಿಗೆ ಬೆಲೆಕಟ್ಟಿ ವ್ಯವಹಾರ ನಡೆಸಿದರೆ ಹಣ ಬರುತ್ತದೆ‌ ನಮ್ಮ ಹೆಸರು ಉಳಿಯಬಹುದು ಆದರೆ ಜ್ಞಾನಬರೋದಿಲ್ಲ. ಹೆಸರುಮಾಡೋ ಗೀಳಿಗಿಳಿದವರು ಉಸಿರಿರುವರೆಗೂ ಅದಕ್ಕಾಗಿ ಹೋರಾಟ ಹಾರಾಟ ಮಾರಾಟದಲ್ಲಿ ಕಷ್ಟಪಡಬೇಕು. ಅದೇ ಆ ಮೇಲಿನ‌ಪರಮಾತ್ಮನ ಹೆಸರಿನಲ್ಲಿ ನಡೆದ ಮಹಾತ್ಮರುಗಳು ಹೆಸರಿಗಾಗಿ  ಜೀವನನಡೆಸದೆ ತನ್ನ ಉಸಿರಿನಲ್ಲಿಯೇ ಪರಮಾತ್ಮನ ಹೆಸರನ್ನು ಸೇರಿಸಿಕೊಂಡು ನೆಮ್ಮದಿಯಿಂದ ಉಸಿರುಬಿಟ್ಟರು. ಈಗ ನಾವೆಲ್ಲರೂ ಯಾರ ಹೆಸರಿನಲ್ಲಿ ಯಾರಿಗಾಗಿ ಯಾವ‌ಕಡೆಗೆ ನಡೆದಿರುವೆವು ಎನ್ನುವ  ಸತ್ಯವರಿತರೆ  ನಮ್ಮ ಉಸಿರೆ ನಮಗೆ ತಿಳಿಯದೆ ಯಾರೋ ಉಸಿರಾಡುತ್ತಿರುವ‌ ಗಾಳಿಯಲ್ಲಿ  ಬದುಕಿದಂತಿದೆ.
ಪ್ರಕೃತಿ ಉತ್ತಮವಾದ ಗಾಳಿ ನೀರು ಬೆಳಕು ಭೂಮಿ ಆಕಾಶವನ್ನು ಸ್ವಚ್ಚವಾಗಿ ಕೊಟ್ಟರೂ  ನಮ್ಮ ಚಿಂತನೆಗಳು ಉಸಿರುಗಟ್ಟಿಸುವಂತಾಗಿರೋದಕ್ಕೆ ಕಾರಣ‌ಹೆಸರು ಮಾಡಿದವರ ಹಿಂದೆ ನಡೆದಿರೋದೆಂದರೆ ನಮ್ಮ ಹೆಸರನ್ನು ಹಿಂದೆ ತಳ್ಳುವರಷ್ಟೆ. ಇದರಿಂದ ಹೆಸರಿಗೇನೂ ಕಷ್ಟನಷ್ಟವಿಲ್ಲ ನಷ್ಟವಾಗೋದು ನಮ್ಮ ಉಸಿರಿಗೇ ಅಲ್ಲವೆ?
ಪ್ರತಿಕ್ಷಣವೂ ಉಸಿರಿನ‌‌ಮೂಲಕ ನೀನು ಬದುಕಿದ್ದೀಯ ಎಂದು ಪರಮಾತ್ಮ ತಿಳಿಸೋದನ್ನು ಎಷ್ಟು ಮಂದಿಕೇಳಿಸಿಕೊಳ್ಳಲು ಸಾಧ್ಯವಿದೆ? ಅದು ಸಾಧ್ಯವಾಗೋದಕ್ಕೆ ಬೇಕಿದೆ ಉಸಿರಿನ ಯೋಗ ಜೀವನ.
ಯೋಗದಿಂದ ಹೆಸರು ಪಡೆಯುವುದಕ್ಕೂ ಭೋಗಕ್ಕಾಗಿ ಹೆಸರು ಮಾಡುವುದಕ್ಕೂ ವ್ಯತ್ಯಾಸವಿದೆ. ಯೋಗ ದೈವತ್ವ ದೆಡೆಗೆ ನಡೆಸಿದರೆ ಭೋಗ ಅಸುರತ್ವದೆಡೆಗೆ ನಡೆಸಿ ತನ್ನ ಹೆಸರಿಗಾಗಿ ಏನು ಬೇಕಾದರೂ  ಮಾಡಲು ಜೀವಾತ್ಮ ನಡೆಯಬಹುದು.ಇದರಿಂದಾಗಿ  ಯಾರ ಹೆಸರು ಹಾಳಾದರೂ ಸರಿ ಎನ್ನುವ ಹಠವಿರುತ್ತದೆ. ಧರ್ಮ ದ ಮಾರ್ಗ ವಿದ್ದರೆ ಸರಿ.ಅಧರ್ಮ ದೆಡೆಗೆ ನಡೆದಷ್ಟೂ ಹೆಸರಿಗೇ ಕಂಟಕ.
ಈ ವಿಚಾರ ಯಾಕೆ ತಿಳಿಸಬೇಕಾಯಿತೆಂದರೆ ಇತ್ತೀಚಿನ ದಿನದಲ್ಲಿ ಸನಾತನ ಧರ್ಮದ ವಿರುದ್ದ ಹೇಳಿಕೆಕೊಟ್ಟವರ ಹೆಸರು ಮುಂಚೂಣಿಯಲ್ಲಿರೋದನ್ನು ಕಾಣುತ್ತೇವೆ. ಇದಕ್ಕೆ ಕಾರಣ ಸನಾತನ ಧರ್ಮ ದವರೆ ಎನ್ನುವ ಸತ್ಯವೂ ಇದೆ.ಇಲ್ಲಿ ಯಾವುದೇ ತಾತ್ವಿಕ‌ವಿಚಾರ ಅರ್ಥ ಮಾಡಿಕೊಳ್ಳಲು ಸೋತವರು ತಂತ್ರದಿಂದ ಮುಂದೆ ಬಂದು ನಮ್ಮವರ‌ಹೆಸರಿಗೆ ಮಸಿಬಳಿಯುವ ಹೇಳಿಕೆ ವಾದ ವಿವಾದಗಳು ಜನಸಾಮಾನ್ಯರವರೆಗೆ ಹರಿದುಬರುತ್ತಿದೆ. ಇದರಿಂದಾಗಿ ಸನಾತನ ಧರ್ಮ ರಕ್ಷಣೆ ಆಗುವುದೆ? ಮೊದಲು ನಮ್ಮ ಕಾಲುಬುಡದ ಸತ್ಯವರಿತರೆ ಹೊರಗಿನ ಸತ್ಯ ಅರ್ಥ ವಾಗುತ್ತದೆ. ಮೊದಲೇ ಹೊರಗಿನ ಸತ್ಯದ ಹಿಂದೆ  ನಡೆದು ಕಾಲುಬುಡವೇ ಇರುವ ಮಿಥ್ಯವನ್ನು  ಸರಿಯೆಂದು ಹಿಂದಿನ ಸತ್ಯಕ್ಕೆ ಕೈ ಹಾಕಿದರೆ ಮುಗಿಯಿತು ಕಥೆ. ಕಣ್ಣಿಗೆ ಕಾಣೋದು ಸತ್ಯವಿದ್ದರೂ ಒಳಹೊಕ್ಕಿ ನೋಡಿದಾಗ  ಅದರ ರೂಪ ಕಾಣುತ್ತದೆ.
ಶ್ರೀ ಶಂಕರ ಭಗವತ್ಪಾದರ ಹೆಸರು ಹೇಳೋದು ಸುಲಭ.ಆದರೆ ಅವರಂತೆ ಒಂದು ಹೆಜ್ಜೆ ನಡೆಯೋದು‌ಇಂದು ಕಷ್ಟ.ಹಾಗೆ ಎಷ್ಟೋ ಸನಾತನ ಋಷಿಮುನಿಗಳು ಮಹಾತ್ಮರು ಸಾದು ಸಂತ ಸಂನ್ಯಾಸಿಗಳ ಹೆಸರಿನ ಒಳಗೆ ಪರಮಾತ್ಮನ ಉಸಿರಿತ್ತು. ಅವರನ್ನು ಸರಿಯಿರಲಿಲ್ಲ ಎನ್ನುವ ಮೂಲಕ ತಮ್ಮ ಹೆಸರನ್ನು ಬೆಳೆಸಿಕೊಳ್ಳುವವರೊಮ್ಮೆ  ತಮ್ಮ ಜೀವನ ನಡೆದಿರೋದೆ ಅವರ ಹೆಸರಿನಿಂದ ಎನ್ನುವ ಸತ್ಯವರಿತರೆ ಮುಂದೆ  ನಮ್ಮ ಸನಾತನ ಧರ್ಮ ಬೆಳೆಯಬಹುದು.ಇಷ್ಟಕ್ಕೂ  ನಮ್ಮ ಹೆಸರಿನಿಂದ ಯಾವ ಧರ್ಮ ರಕ್ಷಣೆಯಾಗುತ್ತಿದೆ ಎನ್ನುವ ಪ್ರಶ್ನೆ ನಮ್ಮಂತಹ ಸಾಮಾನ್ಯಜ್ಞಾನಿಗಳು‌ಹೆಸರುಮಾಡಿದವರಿಗೆ ಕೇಳಿದರೆ ಉತ್ತರ ಸಿಗುವುದೆ? ಈವರೆಗೆ ಕೇಳೋದಕ್ಕೆ ಬಿಟ್ಟಿಲ್ಲ.ಬಿಡೋದೂ ಇಲ್ಲ ಕಾರಣ ಇದೇ ಸತ್ಯ. ಸತ್ಯ ಕ್ಕೆ ಸಹಕಾರವಿಲ್ಲ ಹೀಗಾಗಿ ಮಿಥ್ಯದಲ್ಲಿ ಹೆಸರು ಮಾಡಿಕೊಂಡು ಮುಂದೆ ನಡೆದವರ ಹಿಂದೆ ಸುಲಭವಾಗಿ ನಡೆದು ಹೆಸರು ಹಣ ಅಧಿಕಾರ ಸ್ಥಾನಮಾನ ಬೆಳೆದಿರೋದಲ್ಲವೆ?
ಇಲ್ಲಿ ಯಾರ ಹೆಸರನ್ನು ತಿಳಿಸಿಲ್ಲ ಕಾರಣ ಎಲ್ಲರಿಗೂ ಹೆಸರು ಮುಖ್ಯ.ಒಂದೊಂದು ಪ್ರಾಣಿ ಪಕ್ಷಿ ಗಿಡಮರ ಚರಾಚರಕ್ಕೂ ಮಾನವ ಹೆಸರಿಟ್ಟಿದ್ದರೂ ಅವೆಲ್ಲವೂ ಪರಮಾತ್ಮನ ಹೆಸರೆ ಆದಾಗ ಅವುಗಳು ಹೆಸರಿಗಾಗಿ ಜೀವನ‌ನಡೆಸುತ್ತಿಲ್ಲ.ಆದರೆ ಮಾನವನಿಗೆ ಇದರ ಅಗತ್ಯವಿದೆ. ಯಾರ ಹೆಸರಿಗೂ ಕುಂದು ಬರದಂತೆ ಜೀವನ‌ನಡೆಸಿರುವ ಮಹಾತ್ಮರ ಹೆಸರನ್ನು ಕೆಡಿಸಿ ಹೆಸರು ಮಾಡಲು ಹೋದರೆ‌ ಇದ್ದೂ ಸತ್ತಂತೆ ಕಾರಣ ಅವರನ್ನು ಪರಮಾತ್ಮನೇ ನೇರವಾಗಿ ನಡೆಸಿರುವಾಗ ಪರಮಾತ್ಮನ ವಿರುದ್ದ  ನಿಂತು ಹೆಸರು ಮಾಡಿದರೆ  ಅದನ್ನು ಜೀವನವೆನ್ನೋದಿಲ್ಲ.  ಇದನ್ನು ಹಿಂದೂಗಳಾದವರು‌ತಿಳಿದು ನಡೆದಾಗಲೇ ಪರಕೀಯರಿಗೆ  ನಾವು ಉತ್ತರ ಕೊಡಲು ಸಾಧ್ಯ.
 ಪರಕೀಯರು ತಿಳಿಯದೆ ಮಾಡುವ ಅಪರಾಧಕ್ಕೆ ಪರಮಾತ್ಮ ಕ್ಷಮಿಸಬಹುದು. ನಮ್ಮವರೆ ತಿಳಿದೂ ಮಾಡುವ ಅಪರಾಧದಿಂದ ಧರ್ಮ ಭಕ್ಷಣೆ ಆಗುತ್ತದೆ.ಅದೂ ಕೇವಲ ತನ್ನ ಹೆಸರಿಗಾಗಿ ನಡೆಸೋ ಕರ್ಮಕ್ಕೆ ತಕ್ಕಂತೆ ಫಲ  ಅನುಭವಿಸುವಾಗ ಯಾವ ಹೆಸರಿರುವುದೋ ಯಾರಿಗೂ ತಿಳಿಯೋದಿಲ್ಲ. ಒಟ್ಟಿನಲ್ಲಿ ಸ್ತ್ರೀ ಯಾಗಲಿ ಪುರುಷರಾಗಲಿ ಭೂಮಿ ಮೇಲಿರುವಾಗ ಮಾಡುವ ಹೆಸರಿನ ‌ಹಿಂದೆ ಪರಮಾತ್ಮನ ಶಕ್ತಿಯನ್ನು  ಗಮನಿಸುವುದು ಅಗತ್ಯವಿದೆ. ಮಹಾತ್ಮರುಗಳ ಬಗ್ಗೆ ವಾದ ವಿವಾದ ಮಾಡುವಾಗ ನಾನ್ಯಾರೆಂಬ ಪ್ರಶ್ನೆಗೆ ಉತ್ತರ ತಿಳಿಯುವುದು ಮುಖ್ಯ. ನಾನೇ ಯಾರೆಂದು ಗೊತ್ತಿಲ್ಲದೆ ಯಾರದ್ದೋ ಹೆಸರಿನಲ್ಲಿ ನನ್ನ ಹೆಸರನ್ನು ಬೆಳೆಸಿಕೊಂಡು ಎಷ್ಟು ವಾದ ಮಾಡಿದರೂ ವ್ಯರ್ಥ. ಹೀಗಾಗಿ ನಮ್ಮ ಸನಾತನ ಧರ್ಮ ಇಷ್ಟು ಹಿಂದುಳಿದಿರೋದು. ಹಾಗಂತ ಹಿಂದೆ ನಡೆಯುವುದಕ್ಕೆ ಕಷ್ಟವಿದೆ. ಹಿಂದೆ ನಡೆದು ಬರುವವರಿಗೆ  ಸಹಕಾರ ಅವಕಾಶ ಕೊಟ್ಟರೆ ಸಾಕು ನಮ್ಮ ಹೆಸರಿಗೂ ಬೆಲೆಯಿರುತ್ತದೆ.
ಎಲ್ಲದರಲ್ಲೂ ರಾಜಕೀಯ ಬೆಳೆಸಿಕೊಂಡು  ಹೆಸರು ಹಣ ಅಧಿಕಾರ ಪಡೆದು ಜನಸಾಮಾನ್ಯರ ಹೆಸರಿನೊಳಗಿರುವ ಆ ಪರಮಾತ್ಮನ  ಆಳೋದು ಧರ್ಮ ವೆಂದರೆ ಅಸತ್ಯ ಅಧರ್ಮ.
ಕೆಲವು ದಿನಗಳಿಂದ  ದ್ವೈತಾದ್ವೈತದ ಒಳಜಗಳವು  ಅಸಹ್ಯ ಕರ ಪದಗಳ ಮೂಲಕ ಫೇಸ್‌ಬುಕ್‌ ಮೂಲಕ ಹರಿದಾಡುತ್ತಿರುವುದನ್ನು ಗಮನಿಸಿದಾಗ ಈ ವಿಚಾರ ಹೊರಹಾಕಬೇಕಾಯಿತು. ಇಲ್ಲಿ ದೇಶ ಒಂದೇ ಧರ್ಮ ಒಂದೇ ಭೂಮಿ ಒಂದೇ ದೇವನೊಬ್ಬನೆ ಎನ್ನುವ ಸತ್ಯವನ್ನು ತಿಳಿಸಿದವರು ರಾಜಕೀಯಕ್ಕೆ ಇಳಿದಿರಲಿಲ್ಲ‌ ಪರಮಾತ್ಮನ  ಮಹಾಶಕ್ತಿಯಾಗಿ ಸತ್ಯ ಹೊರಹಾಕಿದ್ದರೆಂದು ಅರ್ಥ ವಾದರೆ ಅನಾವಶ್ಯಕವಾಗಿರುವ ವಾದ ವಿವಾದದಿಂದ  ಹಿಂದೂಗಳಲ್ಲಿ ಒಡಕು ಮೂಡಿಸುವ ಕೆಲಸವಾಗದು.ಆದರೂ ಸತ್ಯ ತಿಳಿಯುವುದರಲ್ಲಿ ತಪ್ಪಿಲ್ಲ.ಅಸತ್ಯ ತಿಳಿಸುವುದರಲ್ಲಿ ತಪ್ಪಿದೆ.ಇದರಿಂದಾಗಿ ಇನ್ನಷ್ಟು ವಿಷಸರ್ಪಗಳು ಬೆಳೆದಾಗ ಕಚ್ಚಿಸಿಕೊಳ್ಳುವುದು ಯಾರು? 
ಒಳಗೇ ಅಡಗಿರುವ ದ್ವೇಷಕ್ಕೆ ಹೊರಗಿನಿಂದ ಮತ್ತಷ್ಟು ದ್ವೇಷ ಬೆಳೆಸಿಕೊಂಡು ಹೆಸರು ಮಾಡಿಕೊಂಡರೆ ಉಒಯೋಗವಿಲ್ಲ.
ಇಷ್ಟು ಕಠೋರವಾಗಿ  ಯಾಕೆ ಸತ್ಯವಿದೆ ಎಂದರೆ ಹೆಸರಿಗಾಗಿ ಅಸತ್ಯವನ್ನು  ಬೆಳೆಸಿರೋದಾಗಿದೆ. ಕಲಿಯುಗದ ಕಲಿಕೆಯೇ ಅಸತ್ಯದೆಡೆಗೆ ನಡೆದಿರುವಾಗ  ಒಳಗಿರುವ ಸತ್ಯಕ್ಕೆ ಚ್ಯುತಿ ಬರುತ್ತದೆ. ಸತ್ಯವೇ ದೇವರೆಂದಾಗ   ಅಸತ್ಯದಿಂದದೈವತ್ವಕ್ಕೆ ಚ್ಯುತಿ ಬರುತ್ತದೆ. ಮಹಾತ್ಮರನ್ನು  ಅರಿಯುವ ಅರಿವನ್ನು ಬೆಳೆಸಿಕೊಳ್ಳಲು ಹೆಸರಿನ ಅಗತ್ಯವಿದೆಯೆ? 
ಅರಿವಿನಿಂದ ಬೆಳೆದ ಹೆಸರು ನನ್ನದಲ್ಲ. ಅಜ್ಞಾನದಿಂದ ಬೆಳೆದ ಹೆಸರು ನನ್ನದು.ಆದರೆ ಅದರಲ್ಲಿ ಸತ್ಯವಿರದು ಜೊತೆಗೆ ಸ್ಥಿರವಾಗಿರದು. ಇದು ಮಹಾತ್ಮರ ಸಂದೇಶವಾಗಿದೆ. 
ಪೀಠಾಧಿಪತಿಗಳಿಗೆ  ಎರಡು ಹೆಸರಿದ್ದರೂ ಜನ್ಮನಾಮಕ್ಕೆ ಬೆಲೆಯಿರದು. ಹಾಗೆ ಸಾಮಾನ್ಯರ ಜನ್ಮನಾಮಕ್ಕೆ ಬೆಲೆಕೊಟ್ಟು   ಹೊರಗೆ ಹೆಸರು ಮಾಡಿದಷ್ಟೂ  ಪರಮಾತ್ಮನ ಹೆಸರಿಗೆ ಬೆಲೆಯಿರದು. ಮಹಾತ್ಮರನ್ನು ಸಂಶೋಧನೆ ಮಾಡುವುದಕ್ಕೆ ಕಷ್ಟ.ನಮ್ಮ ಆತ್ಮ ಸಂಶೋಧನೆ ಮಾಡಿಕೊಂಡರೆ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ.ಅದನ್ನು ಮಾಡದೆಯೇ ನಾನೇ‌ಮಹಾತ್ಮ ಎಂದರೆ ಏನರ್ಥ?
ದಯವಿಟ್ಟು ಹಿಂದೂಗಳಾದವರು ಧರ್ಮ ರಕ್ಷಣೆಗಾಗಿ  ಸತ್ಯ ತಿಳಿದು  ಸನಾತನ ಧರ್ಮದ ಬಗ್ಗೆ ಅನಾವಶ್ಯಕವಾಗಿರುವ ವಿಚಾರಗಳನ್ನು  ಹೊರಗೆಳೆಯುವ ಬದಲು ತಮ್ಮ ಮನೆ ಮನಸ್ಸನ್ನು  ಶುದ್ದವಾಗಿಟ್ಟುಕೊಳ್ಳುವ   ಆತ್ಮಸಂಶೋಧನೆ ನಡೆಸಿಕೊಂಡರೆ ಉತ್ತಮ ಬದಲಾವಣೆ ಸಾಧ್ಯವಾಗಬಹುದು.
ಎಷ್ಟೋ ಕಡೆ ಹೆಸರಿದೆಯೆಂದು  ಜನರನ್ನು ದಾರಿತಪ್ಪಿಸಿ ಆಳುವ ರಾಜಕೀಯತೆಯಿದೆ. ಇದರಿಂದಾಗಿ ಧರ್ಮಕ್ಕೆ ನಷ್ಟ.
ವಿದ್ಯಾವಂತ ಯುವಜನತೆ ಈಗ ಹಿಂದಿರುಗಿ ಬರುತ್ತಿರುವುದು ಸಂತೋಷವಾದರೂ ಯಾರೊಂದಿಗೆ ಬರುತ್ತಿದ್ದಾರೆನ್ನುವ ಬಗ್ಗೆ ಚಿಂತನೆ ನಡೆಸಿದರೆ  ಹೆಸರಿಗಾಗಿ ಹೆಸರೊಂದಿಗೆ ಸೇರಿ ತಮ್ಮ ಹೆಸರಿನ ಒಳಗಿದ್ದ ಪರಮಾತ್ಮನಿಂದ ದೂರವಾಗಿ ರಾಜಕೀಯದಲ್ಲಿ  ಹೆಸರು ಮಾಡಲು ಹೊರಟು ಹೊರದೇಶಕ್ಕೆ ಹೋಗಿ ಹೆಸರಿಲ್ಲದಂತಾಗುತ್ತಿದ್ದಾರೆ. ಕೆಲವರಿಗೆ ಉತ್ತಮ ಗುರುಗಳ ಮಾರ್ಗದರ್ಶನ ಸಿಕ್ಕಿದ್ದರೂ ಹಲವರಿಗೆ ಅರ್ಧ ಸತ್ಯದ  ಅತಂತ್ರಸ್ಥಿತಿಯಲ್ಲಿ   ಜೀವನ  ನಡೆದಿದೆ. ಒಟ್ಟಿನಲ್ಲಿ ಮಾನವನಿಗೆ ಹೆಸರು ಮುಖ್ಯ. ಆ ಹೆಸರಿನ ಜೊತೆಗೆ ಕೆಸರಿದ್ದರೆ  ಕಮಲವರಳುತ್ತದೆ. ಕಮಲವನ್ನು ನೇರವಾಗಿ ಕಿತ್ತು ಹೆಸರುಮಾಡಿದರೆ ಜ್ಞಾನಬರದು. ಕೈ ಕೆಸರಾದರೆ ಬಾಯಿ ಮೊಸರು ಎನ್ನುವ‌ಗಾದೆ ಮಾತಿನ ಹಿಂದೆ ಪರಮಾತ್ಮನಿದ್ದ  ಈಗ ಪರಕೀಯರ ಹಿಂದೆ ನಡೆದು ಕೈ ಬಾಯಿ ಹೊಲಸು ಮಾಡಿಕೊಂಡು ಹೆಸರು ಮಾಡಿದವರ ಹಿಂದೆ ನಡೆದವರ ಗತಿ ಅಧೋಗತಿಯಾಗುತ್ತಿದೆ ಅನಿಸುತ್ತದೆ. 
ಇದರಿಂದಾಗಿ ನಷ್ಟ  ನಮಗೇ ಎನ್ನುವ ಸತ್ಯ ತಿಳಿಯುವುದು ಅಗತ್ಯವಾಗಿದೆ. 
ಕೆಲವರಿಗೆ ಸತ್ಯ ತಿಳಿದೂ ಹೆಸರು ಮಾಡದ ಕಾರಣ ಹೇಳಲಾಗದು.ಹಲವರಿಗೆ ಸತ್ಯವೇ ತಿಳಿಯದೆ ಹೆಸರು ಹಣ ಅಧಿಕಾರ ಸ್ಥಾನಗಳಿಸಿ  ಅಸತ್ಯವನ್ನು ಹೊರಹಾಕಿ ಹೆಸರು ಮಾಡುವ  ಆಸೆ. ಆಸೆ ಇರಲಿ ಆದರೆ ದುರಾಸೆಯಾದರೆ ಕಷ್ಟ ಹೆಸರಿಗೇ ಅಲ್ಲವೆ?
ಈಗ ಈ ಲೇಖನ  ಭಗವತಿಯ ಹೆಸರಿನಲ್ಲಿದೆ ಎಂದರೆ ಇದರ ಹಿಂದೆ ಇನ್ನೊಂದು ಕೈಯಿದೆ ಕಾಣೋದಿಲ್ಲ ಇನ್ನೊಂದು ಹೆಸರೂ ಇದೆ  ಹಾಗಾದರೆ ಸತ್ಯ ಯಾವುದು? 
ನನಗೆ ಅರಿವು ಬಂದಾಗಿನಿಂದ ಇದನ್ನೇ ಹೇಳಿಕೊಂಡು ಬಂದ ಪರಿಣಾಮ  ಇಂದಿಗೂ  ಜನರವರೆಗೆ ಹೋಗಿ ಹೆಸರು ಮಾಡುವ ಮನಸ್ಸಾಗಲಿಲ್ಲ. ಆದರೆ ಒಮ್ಮೊಮ್ಮೆ  ಸತ್ಯ ತಿಳಿಸಿ ಇರುವ ಸತ್ಯಕ್ಕೂ ಚ್ಯುತಿ ಬರುವಂತಾದರೆ  ಮುಂದಿನ ಪೀಳಿಗೆಗೆ ನಷ್ಟ.ಬರವಣಿಗೆಯ ಮೂಲಕ ಸತ್ಯ ಹೊರಹಾಕಿದಾಗ  ಸಿಗುವ ಆತ್ಮತೃಪ್ತಿ  ಹೊರಬಂದು ತಿಳಿಸಿದರೆ ಸಿಗೋದಿಲ್ಲ. ಆಸಕ್ತರು  ಪ್ರಶ್ನೆ ಮಾಡಿದರೆ ಉತ್ತರ ಕೊಡಬಹುದು ಆದರೆ ಅವರಿಗೂ  ಅದೇ ಅನುಭವವಾಗಿದ್ದರೆ ಉತ್ತರದಿಂದ ತೃಪ್ತಿ ಸಿಗುತ್ತದೆ.ಒಟ್ಟಿನಲ್ಲಿ ಎಲ್ಲಾ ವಾಸ್ತವದಲ್ಲಿ ಬದುಕುತ್ತಿಲ್ಲದ ಕಾರಣ ಪುರಾಣ ಭವಿಷ್ಯದ ಕಥೆ ವ್ಯಥೆಯಾಗುತ್ತಿದೆ. ಇಂದಿನ ಹೆಸರು ನಾಳೆಯ ಉಸಿರಾಗಿರಬೇಕೆಂದಿಲ್ಲ.ಇಂದಿನ ಉಸಿರು ನಾಳೆಯ ಹೆಸರಾಗಬಹುದು. ಮಹಾತ್ಮರನ್ನುಹಿಂದಿನ ಹೆಸರಿನಿಂದ ಗುರುತಿಸಬಹುದು. ಆದರೆ ಅವರು ಉಸಿರಾಡಿರೋದು ಪರಮಾತ್ಮನ ಹೆಸರಿನಲ್ಲಿ ಎನ್ನುವುದನ್ನು ಮರೆಯಬಾರದು.
ಶ್ರೀ ಶಂಕರ ಭಗವತ್ಪಾದರ ಹೆಸರಿನಲ್ಲಿ ಸಾಕಷ್ಟು ಧರ್ಮ ಕಾರ್ಯ ನಡೆದಿದೆ ಎಷ್ಟೋ ಜೀವ ಉಸಿರಾಡುತ್ತಿದೆ ಎಂದರೆ ಅವರ ಉಸಿರಿನಲ್ಲಿ ಪರಮೇಶ್ವರನಿದ್ದ ಪರಮಾತ್ಮನಿದ್ದನು ಎಂದರ್ಥ. ಹಾಗೆ ಇನ್ನೂ ಅನೇಕ ಮಹಾತ್ಮರನ್ನು ನಾವು ನಮ್ಮ ಉಸಿರಿನಿಂದ  ಗುರುತಿಸುವ ಜ್ಞಾನವಿದ್ದರೆ ಹೆಸರು ಕ್ಷಣಿಕವಾಗಿರುತ್ತದೆ. 
ಹುಟ್ಟುವಾಗ ಹೆಸರಿರದು ಉಸಿರುವುದು ಹೋಗುವಾಗ ಉಸಿರಿರದು ಹೆಸರಿರುವುದು.ಆ ಹೆಸರಿನಲ್ಲಿ ಪರಮಾತ್ಮನಿರಲಿ.
ದಯವಿಟ್ಟು  ಸಾಮಾಜಿಕ ಜಾಲತಾಣಗಳಲ್ಲಿ  ದ್ವೇಷದ ವಿಷಬೀಜ ಧರ್ಮದೊಂದಿಗೆ ಸೇರಿಸುವ ಕೆಲಸ ಮಾಡದಿದ್ದರೆ ಸನಾತನಧರ್ಮ ಉಳಿದಂತೆ. ಧರ್ಮ ಕ್ಕೆ ಅಪಾಯವಿಲ್ಲ ಅದನ್ನು ಅಪಾರ್ಥ ಮಾಡಿಕೊಂಡು ಹೆಸರು ಮಾಡಿದವರಿಂದ  ಅಪಾಯವಿದೆ. ಎಷ್ಟು ಓದಿ ತಿಳಿದರೂ ನಮ್ಮ ನಡೆ ನುಡಿಯಲ್ಲಿ ಸತ್ಯ ಶುದ್ದವಿಲ್ಲವಾದರೆ ಅಧರ್ಮಕ್ಕೆ ಜಯ.
ಇದರ ಬಗ್ಗೆ ಚರ್ಚೆ ನಡೆಸುವ ಬದಲು ಸತ್ಯ ತಿಳಿದಾಗಲೆ  ಭಾರತ ಯಾವ ಸ್ಥಿತಿಯಲ್ಲಿದೆ ಎಂದು ಅರ್ಥ ವಾಗಬಹುದು.
ಹೆಸರು ಮಾಡಿದವರಿಂದ ದೇಶ ಹಾಳಾಗಿದೆಯೋ ಹೆಸರು ಮಾಡದವರಿಂದಲೋ ?
ತಂದೆತಾಯಿಯರ ಹೆಸರನ್ನೇ ತಿಳಿಯದ ಮಕ್ಕಳಿರುವಾಗ ಪರಮಾತ್ಮನ ಹೆಸರು ತಿಳಿದು ನಡೆಯೋದು ಕಷ್ಟ. ಇದಕ್ಕೆ ಕಾರಣ ಪೋಷಕರು ಮಕ್ಕಳ ಹೆಸರಿಗಾಗಿ ತಮ್ಮಮೂಲದ ಧರ್ಮ ಕರ್ಮ ಹೆಸರನ್ನು ಬಿಟ್ಟು  ನಡೆದಿರೋದು.
ಇದೊಂದು ರಂಗಭೂಮಿ  ಇದರಲ್ಲಿ ಶ್ರೀ ರಂಗನ ಹೆಸರಿದೆಯೆ? 
ರಾಜಕೀಯದಿಂದ ಹೆಸರು ಮಾಡೋದು ಬೇರೆ ರಾಜಯೋಗದಿಂದ ಹೆಸರು ಗಳಿಸುವುದು ಬೇರೆ.
ಎಷ್ಟೋ  ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲವೆಂದರೆ ಅದು ಅಸತ್ಯವೆಂದಲ್ಲ ಅಂದಿನ‌ಕಾಲಮಾನ‌ಪರಿಸ್ಥಿತಿ ಮನಸ್ಥಿತಿಗೆ ತಕ್ಕಂತೆ  ಧರ್ಮ ರಕ್ಷಣೆಯಾಗಿದೆ. ಈಗ  ಕಾಲಬದಲಾಗಿ ಹಣ ಹೆಸರು ಅಧಿಕಾರವೆಲ್ಲಾ ಇದ್ದರೂ ಧರ್ಮ ವಿಲ್ಲ ಸತ್ಯವಿಲ್ಲ ಎಂದಾಗ  ಪರಮಾತ್ಮನಿಗೆ ನಷ್ಟವೆ? ಮನುಕುಲಕ್ಕೆ ನಷ್ಟವೆ?
ಯಾವುದೇ ಆಗಲಿ ಅತಿಯಾದರೆ ಗತಿಗೇಡು.

ಪುರಾಣ ಕಥೆಗಳಿಂದ ಜ್ಞಾನ ಬೆಳೆಯಬೇಕು

ಗರಿಕೆ ಗಣಪತಿಗೆ  ಇಷ್ಟ,ತುಳಸಿ ವಿಷ್ಣುವಿಗೆ ಇಷ್ಟ. ವಿಷ್ಣುವಿನೊಳಗೆ ಗಣಪತಿ ಇರೋದು  ಗಣಪತಿಯಿಂದಲೇ ಎಲ್ಲಾ ವಿಘ್ನನಿವಾರಣೆಯಾಗೋದು. ಭೂಮಿಯ ಮೇಲಿರುವ ಎಲ್ಲಾ ದೇವಾನುದೇವತೆಗಳು  ಆತ್ಮಸ್ವರೂಪಿಗಳು.ಅವತಾರ ಪುರುಷ ಸ್ತ್ರೀ ಯರು ಧರ್ಮ ರಕ್ಷಕರು. ಧರ್ಮ ರಕ್ಷಣೆಗೆ ದೇವತಾರಾಧನೆ ನಡೆಯಬೇಕು. ಇದಕ್ಕಾಗಿ ದೈವತ್ವದ ಅಗತ್ಯವಿದೆ. ದೈವತ್ವ ತತ್ವಜ್ಞಾನದಿಂದ ಬೆಳೆದಿದೆ. ಹಾಗಾದರೆ ಇಂದು‌  ಅಸುರತ್ವ‌ಹೆಚ್ಚಾಗಲು ಕಾರಣವೇನಾಗಿದೆ? ಎಂದರೆ  ತತ್ವವನ್ನು ತಂತ್ರವಾಗಿಸಿ  ಪುರಾಣ‌ಕಥೆ ಹೊರಗಿದೆ. ಪ್ರತಿಯೊಂದು ಕಥೆಯ ಒಳಗಿನ ಸತ್ವ ಸತ್ಯ ತತ್ವವನರಿತರೆ  ಈಗಲೂ ದೇವಾಸುರರಿರೋದನ್ನು ಕಾಣಬಹುದು. 

  *ಗರಿಕೆ ಹುಲ್ಲಿನ ಇತಿಹಾಸ ಹಾಗೂ ಮಹತ್ವ*

ಅದು ಸಮುದ್ರ ಮಥನದ ಕಾಲ. ಸುರರು ಮತ್ತು ಅಸುರರು ಮಥನ ಮಾಡಿ ಸೋತಿದ್ದಾರೆ. ಸಾಕ್ಷಾತ್ ವಿಷ್ಣುವೇ ಮಂದಾರ ಪರ್ವತ ಎತ್ತಿ ಹಿಡಿದು ಮಥಿಸ ತೊಡಗಿದ್ದಾನೆ. ಬಲಗೈಯಿಂದ ವಾಸುಕಿಯ ಶಿರವನ್ನು ಹಿಡಿದು ವೇಗವಾಗಿ ಎಳೆದಾಗ ಮಂದರವು ಗಿರ್ರನೆ ನೂರಾರು ಸುತ್ತು ತಿರುಗಿದೆ. ಅಷ್ಟರಲ್ಲೇ ಎಡಗೈಯಿಂದ ವಾಸುಕಿಯ ಬಾಲವನ್ನು ಸೆಳೆದಾಗ ಇನ್ನೂ ವೇಗದಿಂದ ಬಲಮಗ್ಗುಲಿಗೆ ತಿರುಗುತ್ತಿದ್ದ ಪರ್ವತ ಫಕ್ಕನೆ ಎಡಮಗ್ಗುಲಿಗೆ ವಾಲಿ ರಭಸದಿಂದ ತಿರುಗ ತೊಡಗಿದೆ.

ಈ ವೇಗಕ್ಕೆ ಸಾಗರವು ಭೋರ್ಗರೆದು ಮೇಲೆ ಚಿಮ್ಮಿದೆ. ಇಂತಹ ಸ್ಥಿತಿಯಲ್ಲಿ ವೇಗವಾಗಿ ಅತ್ತಿತ್ತ ಚಲಿಸುತ್ತಿರುವ ಭಗವಂತನ ಶರೀರದಿಂದ ರೋಮಗಳು ಚಿಮ್ಮಿ ದಡದಲ್ಲಿ ಬಿದ್ದಿವೆ. ಆ ರೋಮದಿಂದ ಹರಿತ ಶಾದ್ವವರ್ಣದ ಗರಿಕೆ ಹುಟ್ಟಿದೆ. ಹೀಗೆ ದೂರ್ವೆ ವಿಷ್ಣುತನೂದ್ಬವೆ ಎನ್ನಲಾಗಿದೆ. ಕ್ಷೀರಾಂಬುಧಿಯ ಅಲೆಗಳ ಪೆಟ್ಟಿಗೆ ಜಾರಿದ ವಿಷ್ಣುರೋಮದಿಂದ ಉದಿಸಿದ ಗರಿಕೆ ಮೇಲೆ ಅಮೃತ ಕಳಶವನ್ನು ಇರಿಸಲಾಯಿತು, ಅಮೃತದ ಸಂಪರ್ಕದಿಂದ ಗರಿಕೆ ಹುಲ್ಲು ಅಮೃತ ತೃಣವೆನಿಸಿ, ರೋಗ ನಿವಾರಕ ಔಷದ ವೆನಿಸಿತು. ಭಗವಂತನ ಆನಂದಭಾಷ್ಪದಿಂದುಸಿ ಬಂದ ಸಸ್ಯ ತುಳಸಿ, ಅಲ್ಲಿ ಲಕ್ಷ್ಮದೇವಿ ಸನ್ನಿಹಿತಳಾದಳು, ಹಾಗೆಯೆ ಭಗವಂತನ ರೋಮದಿಂದುದಿಸಿ ಬಂದ ಹುಲ್ಲು ಹಾಗು ದರ್ಭೆ ಅಲ್ಲಿಯೂ ಲಕ್ಷ್ಮಿದೇವಿ ಸನ್ನಿಹಿತಳಾದಳು. ದೂರ್ವೆಯಲ್ಲಿ ಸನ್ನಿಹಿತಳಾದ ಲಕ್ಷ್ಮಿಗೆ ದೂರ್ವದೇವಿ ಎಂದು ಕರೆಯಲಾಯಿತು.

ಗರಿಕೆ ರಸವು ದುಃಸ್ವಪ್ನವನ್ನು ಪರಿಹರಿಸುವ ಶಕ್ತಿಯುಳ್ಳ ಇದು ಮಾನಸ ಗೊಂದಲಗಳನ್ನು ಪರಿಹರಿಸುತ್ತದೆ. ಹಲವು ಬಗೆಯ ಔಷದಿಗಳಲ್ಲಿ ದೂರ್ವೆಯ ವಿನಿಯೋಗವನ್ನು ಆಯುರ್ವೇದವು ನಿರೂಪಿಸಿದೆ. ಸ್ತಿಯರ ಗರ್ಭಧಾರಣ ಶಕ್ತಿಗಾಗಿ ದೂರ್ವಾರಸ ಸೇವನದ ವಿಧಿಯನ್ನು, ಪುಂಸವನದಲ್ಲಿ ಅಳವಡಿಸಿದ್ದಾರೆ. ದೇವರ ಪೂಜೆಗೆ ಹೂವೇ ಸಿಗದಿದ್ದರು ಗರಿಕೆಯೊಂದನ್ನು ಏರಿಸಿದರೆ ಎಲ್ಲಾ ಪುಷ್ಟಗಳನ್ನು ಏರಿಸಿದ ಪುಣ್ಯ ಲಭಿಸುತ್ತದೆ. ಭಕ್ತಿಯಿಂದ ದೂರ್ವಾಂಕುರ ಅರ್ಚನೆಯಿಂದ ಸರ್ವ ಯಜ್ಞಗಳ ಫಲವು ದೊರೆಯುವುದು.

ಸರ್ವ ಯಜ್ಞಗಳಿಂದಲೂ ದುರ್ಲಭವಾದ ಫಲವನ್ನು ದೂರ್ವಾಂಕುರವನ್ನು ಭಕ್ತಿಯಿಂದ ಭಗವಂತನಿಗೆ ಅರ್ಪಿಸಿ ಪೂಜಿಸುವುದರಿಂದ ಪುಣ್ಯವನ್ನು ಪಡೆಯಬಹುದು. ಹರಿಪೂಜೆಗೆ ತುಳಸಿ ಮುಖ್ಯ, ಪರಿಪೂರ್ಣತೆಗೆ ಗರಿಕೆಯೂ ಮುಖ್ಯ..🌹🙏🏻
ಪ್ರತಿಯೊಂದು ಪರಮಾತ್ಮನ ಸೃಷ್ಟಿ ಎನ್ನುವ ಮೂಲಕ ದೇವತಾರಾಧನೆಯಲ್ಲಿ ಬಳಸುವರು. ಹಾಗಾಗಿ ಒಂದೊಂದು ದೇವರಿಗೆ ಒಂದೊಂದು ಶ್ರೇಷ್ಠ ವೆಂದಾಯಿತು.ಎಲ್ಲಾ ಒಂದೇ  ದೇವರಿಗೆ ತಲುಪಿದರೂ  ಆ ಒಬ್ಬನನ್ನು ಎಲ್ಲಾ ಪೂಜಿಸಲಾಗದ ಕಾರಣ ಅಧಿದೇವತೆಗಳಾಗಿ ಒಂದು ದೇವತೆಗಳ ಸರ್ಕಾರ ಸೃಷ್ಟಿ ಯಾಗಿ ಭೂಮಿ ನಡೆದಿದೆ. ಇದರಲ್ಲಿ ನನ್ನ ಅಧಿಕಾರವನ್ನು ಇನ್ನೊಬ್ಬರು ಕಿತ್ತುಕೊಂಡರೆ ಯುದ್ದಗಳಾಗುವುದು. ಇನ್ನೊಬ್ಬರ ಅಧಿಕಾರದಲ್ಲಿ ನಾನು ಸಹಕಾರ ಕೊಡದಿದ್ದರೂ ಯುದ್ದವಾಗುವುದು. ಯುದ್ದವಾದಾಗ ಅಧಿಕಾರವನ್ನು ಧರ್ಮದಿಂದ  ಪಾಲನೆ ಮಾಡಿದರೆ ಧರ್ಮ ಯುದ್ದ.ಇಲ್ಲವಾದರೆ ಅಧರ್ಮ ಯುದ್ದ. ದೇವಾಸುರರ ಈ ಅಧಿಕಾರದ  ಕಿತ್ತಾಟದಲ್ಲಿ ಯಾರು ಗೆದ್ದರು ಸೋತರು ಎನ್ನುವ ಲೆಕ್ಕಾಚಾರವನ್ನು ಮಾನವರು ಮಾಡುವರೆಂದರೆ  ಮಾನವನಿಗಿರುವ ಸಾಮಾನ್ಯಜ್ಞಾನ ಎಷ್ಟು ಮುಖ್ಯವೆಂದು ತಿಳಿದರೆ ಸಾಕು.ಈಗಿನ ಪ್ರಜಾಪ್ರಭುತ್ವ ನಡೆದಿರೋದೆ ಸಾಮಾನ್ಯಪ್ರಜೆಗಳಿಂದ.ಪ್ರಜೆಗಳಲ್ಲಿ ದೇವಾಸುರರ ಗುಣಗಳಿವೆ. ಯಾರು ಹೆಚ್ಚು ದೈವತ್ವಪಡೆದರೂ  ಭಗವಂತನೆಡೆಗೆ ಹೋಗಬಹುದು. ಆದರೆ ಅಂತಹ ತತ್ವಜ್ಞಾನದ ಶಿಕ್ಷಣವಿಲ್ಲದೆ ತಂತ್ರಜ್ಞಾನವನ್ನು ಬಳಸಿಕೊಂಡು  ಹೊರಗೆ ಹೋರಾಟ ಹಾರಾಟ ಮಾರಾಟದಿಂದ ಯುದ್ದವಾದರೆ   ಜೀವಹೋಗೋದು  ಸಹಜ‌.ಅದರೊಂದಿಗೆ  ಧರ್ಮ ಸೂಕ್ಮಜ್ಞಾನವಿರುವುದೆ? ಯಾರನ್ನು ಯಾರು ಆಳೋದು? ದೇವರೆಲ್ಲಿ? ಅಸುರರು ಯಾರು? ನಮ್ಮ ಸಹಕಾರ ವಿಲ್ಲದೆ ಏನೂ‌ ಯಾರೂ ಬೆಳೆದಿಲ್ಲ.ಎಂದಾಗ ಸಹಕಾರ  ದೈವತ್ವದೆಡೆಗೆ ಇದ್ದರೆ ಉತ್ತಮ ‌ಸರ್ಕಾರವಿರುವುದು.
ಇಡೀ ಭೂಮಂಡಲ  ಆವರಿಸಿರುವ ಪರಮಾತ್ಮನ ಶಕ್ತಿಯನ್ನು  ಯೋಗಶಕ್ತಿಯಿಂದಷ್ಟೆ  ಅರ್ಥ ಮಾಡಿಕೊಂಡವರು ಯೋಗಿಗಳಾದರು.ಮಹರ್ಷಿಗಳಾದರು. ದೇವಾನುದೇವತೆಗಳಿಗೆ ಗುರುವಾದರು. ಗುರುವನ್ನು ದೇವರಿಗಿಂತ ದೊಡ್ಡವರೆಂದರು. ಗುರುವನ್ನು ದೇವತೆಗಳು ಪೂಜಿಸಿದಂತೆ ಗುರುವೂ ದೈವತ್ವವನ್ನು ಪೂಜಿಸಬೇಕಿದೆ.