ಪರಮಾತ್ಮನ ಕಾಣೋದು ಹೇಗೆ?

ಪರಮಾತ್ಮನಿರೋದೆಲ್ಲಿ? ಪರಮಾತ್ಮ ಎಲ್ಲರಲ್ಲಿಯೂ ಇದ್ದು ಜಗತ್ತಿನ ಸೃಷ್ಟಿ ಸ್ಥಿತಿ ಲಯ ಕಾರ್ಯ‌ನಡೆಸುವನೆಂಬುದು ಅಧ್ವೈತ. ಪರಮಾತ್ಮನ‌ಜೊತೆಗೆ ಜೀವಾತ್ಮನು ಸೇರಿಕೊಂಡು  ಸೃಷ್ಟ...

Sunday, June 2, 2024

ಎಲ್ಲದ್ದಕ್ಕೂ ಸ್ತ್ರೀ ಕಾರಣವೆ?

ಎಲ್ಲದ್ದಕ್ಕೂ  ಮಹಿಳೆ ಕಾರಣ ಎನ್ನುವುದು ಸುಲಭ.ಯಾಕೆ ಕಾರಣಳಾದಳೆನ್ನುವುದನ್ನು ತಿಳಿಯುವುದು ಕಷ್ಟ. ತಾಯಿಯನ್ನು ಎಲ್ಲಿ  ಭಕ್ತಿಗೌರವದಿಂದ ಕಾಣಲಾಗುವುದೋ ಅಲ್ಲಿ ಸುಖ ಶಾಂತಿ ಸಮೃದ್ದಿಯಿರುತ್ತದೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸುತ್ತದೆ. ಭಾರತ ಇಂದು ಅಶಾಂತಿಯ ಗೂಡಾಗುತ್ತಿದೆ ಎಂದರೆ ಭಾರತಮಾತೆಗೆ ತೋರಿಸದ ಗೌರವ ಎಂದರೆ ಒಪ್ಪಿಕೊಳ್ಳಲು ಎಷ್ಟು ಮಂದಿ ತಯಾರಿದ್ದಾರೆ?
ದೇಶಭಕ್ತರು ನಡೆಸಿರುವ‌ರಾಜಕೀಯ ಹೋರಾಟ ಹಾರಾಟ ಮಾರಾಟದಲ್ಲಿ ಸ್ತ್ರೀ ಯರನ್ನುಹೆಚ್ಚಾಗಿ ಬಳಸಲಾಗಿದೆ. ಮನೆಯೊಳಗೆ ಸಮಾಧಾನ ಶಾಂತಿ,ಸುರಕ್ಷಿತವಾಗಿದ್ದ  ಮಹಿಳೆ  ಯಾವಾಗ  ಸಿಡಿದು ಹೊರಬಂದಳೋ ಅದೇ ಮುಂದೆ  ಸಾಧನೆಯಾಗಿ ಕಾಣಲಾರಂಭಿಸಿತು. ಇದರಿಂದಾಗಿ ಸಮಾಜ ಸಂಘ,ಸಂಸ್ಥೆಗಳು  ಬೆಳೆದವು. ಇದರೊಂದಿಗೆ ರಾಜಕೀಯ ಬೆಳೆಯಿತು.ಅದೇ ರಾಜಕೀಯ ಮನೆಯೊಳಗೆ ತೂರಿ ಕೊಂಡು
ಹಣಸಂಪಾದನೆ ಮಾಡುವ‌ ಮಹಿಳೆ ಬೇರೆ ಗೃಹಕೆಲಸ ಮಾಡುವ  ಗೃಹಿಣಿ ಬೇರೆಯಾಗಿ  ಬೆಳೆದರು.ಯಾವಾಗ ಸ್ತ್ರೀ ಯರ ನಡುವೆ ಅಂತರ ಬೆಳೆಯಿತೋ ಮಧ್ಯವರ್ತಿಗಳು ಆಳಲು  ಪ್ರಾರಂಭಿಸಿದರು. ಭೂಮಿಯಲ್ಲಿ ಬದುಕುವುದೇ ಬೇರೆ ಆಳೋದೇ ಬೇರೆಯಾಯಿತು. ಜೀವನವೆಂದರೆ ಜೀವಿಗಳ ವನ.ಈ ಜೀವರಕ್ಷಣೆಗಾಗಿ ಆತ್ಮಹತ್ಯೆಗಳಾದವು.
ಆತ್ಮವೇ ದೇವರೆಂದವರಿಗೆ ಸ್ತ್ರೀ ಯರಲ್ಲಿದ್ದ ಆತ್ಮ ಕಾಣಲಿಲ್ಲ.
ಹೀಗಾಗಿ ಅಧರ್ಮ, ಅಸಮಾನತೆ,ಅನ್ಯಾಯ,ಅಸತ್ಯದ ಭ್ರಷ್ಟಾಚಾರಕ್ಕೆ  ತಿಳಿಯದೆಯೇ  ಸ್ತ್ರೀ ಸಹಕಾರವೂ ಸಿಗುತ್ತಾ ಕೊನೆಗೆ ಅದೇ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಕಲಿಯುಗ ಪ್ರಾರಂಭವಾಯಿತು.
ಈಗಿನ‌ಪರಿಸ್ಥಿತಿಯಲ್ಲಿ ಅನೇಕ ಸ್ತ್ರೀ ಯರಿಗೆ ಸ್ವಾತಂತ್ರ್ಯ ಸಿಕ್ಕಿದೆ.

ಆದರೆ ಅಧ್ಯಾತ್ಮಿಕ ಕ್ಷೇತ್ರಕ್ಕೆ ಬಂದಾಗ  ಸತ್ಯಕ್ಕೆ ಬೆಲೆಯಿಲ್ಲ ಧರ್ಮಕ್ಕೆ ನೆಲೆಯಿಲ್ಲವಾಗಿದೆ. ಎಲ್ಲಿರುವುದು  ದೇವರು ಮಹಾತ್ಮರು ಎಂದರೆ ಫೋಟೋ  ತೋರಿಸಿ  ದೇವಸ್ಥಾನ ತೋರಿಸುವ ಮಕ್ಕಳೊಳಗೇ ಅಡಗಿರುವ ದೈವತ್ವಕ್ಕೆ ಸರಿಯಾದ ಶಿಕ್ಷಣ ಕೊಡದೆ  ಬೆಳೆಸುವ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣಸಂಪಾದನೆ ‌ಮಾಡಿದರೂ ಸಾಲ ಬೆಳೆಯುತ್ತಿದೆಯೇ ಹೊರತು ಮಕ್ಕಳಲ್ಲಿ ಸತ್ಯಜ್ಞಾನ ಬೆಳೆಯುತ್ತಿಲ್ಲ. ಅದರಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ  ದೂರವಿಟ್ಟ  ಹಿಂದಿನವರ ಅಜ್ಞಾನದಿಂದ ಇಂದು ವಿದ್ಯೆ ಅವಿದ್ಯೆಯಾಗಿದೆ ಎಂದರೆ ಅರ್ಥ ವಾಗದು. ಕಾರಣ, ವಿದ್ಯೆಯಿಂದ ವಿನಯ ಬೆಳೆಯಬೇಕು. ಸತ್ಯ ಧರ್ಮ ರಕ್ಷಣೆ ಆಗಬೇಕು. ಯೋಗದ ಮೂಲಕ ಪರಮಾತ್ಮನ ಜೀವಾತ್ಮ ಸೇರಬೇಕು. ಇದನ್ನು ಅಧ್ಯಾತ್ಮ ಸಾಧಕರು ತಿಳಿಸಿದ್ದರು.
ಹಿಂದೆ ವೇದಕಾಲದಲ್ಲಿದ್ದ ಎಷ್ಟೋ ಮಹಿಳೆಯರು ವೇದ ಶಾಸ್ತ್ರ ಪುರಾಣಗಳಿಂದ ಬ್ರಹ್ಮಜ್ಞಾನಿಗಳಾಗಿದ್ದರೆಂದರೆ ಅವರ ಶಿಕ್ಷಣ ಹೇಗಿರಬಹುದು?
ಜ್ಞಾನದೇವತೆ ಸರಸ್ವತಿಯನ್ನು ವಿಗ್ರಹದಲ್ಲಿಟ್ಟು ಪೂಜೆ ಮಾಡಿದವರೆಲ್ಲರೂ ಬ್ರಹ್ಮಜ್ಞಾನಿಗಳಾಗಿಲ್ಲ .ಬ್ರಾಹ್ಮಣರೆಲ್ಲರೂ ಬ್ರಹ್ಮನಾಗಿಲ್ಲ.ಎಂದರೆ ಸೃಷ್ಟಿಯ ರಹಸ್ಯವನರಿಯಲು  ಜ್ಞಾನ ಬೇಕು. ಅದು ಒಳಗೇ ಇರುವ ಸಂಪತ್ತು. ಈಗಿನ ತಂತ್ರವಿದ್ಯೆ ಮನುಕುಲಕ್ಕೆ ಆಪತ್ತನ್ನು ತರುತ್ತಿದೆ ಎಂದಾಗ ಅದರಲ್ಲಿ ಸತ್ವ ಸತ್ಯ ತತ್ವವಿದೆಯೆ ಎನ್ನುವ ‌ಬಗ್ಗೆ ಚಿಂತನೆ ‌ನಡೆಸುವುದು  ಗುರು ಹಿರಿಯರ ಧರ್ಮ ಕರ್ಮ ವಾಗಿದೆ. 
ಒಟ್ಟಿನಲ್ಲಿ  ನಮ್ಮ ತಂತ್ರಕ್ಕೆ ಸರಿಯಾಗಿ ಅತಂತ್ರ ಸ್ಥಿತಿಗೆ ತಲುಪಿರುವಾಗ ನಾವು ಸ್ವತಂತ್ರ ಪ್ರಜೆಗಳೆಂದು ಅಜ್ಞಾನದಲ್ಲಿ ಮಕ್ಕಳು ಮಹಿಳೆಯರ  ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಹೊರಗೆಳೆದರೆ  ಒಳಗಿದ್ದ ಶಾಂತಿ ಸಿಗದು.
ಕೆಲವೆಡೆ ಸ್ತ್ರೀ ಯರು ಎಚ್ಚರವಾಗಿದ್ದರೆ ಹಲವೆಡೆ ಅಧರ್ಮಕ್ಕೆ ಕೈ ಜೋಡಿಸಿಕೊಂಡು ಮನರಂಜನೆಯಲ್ಲಿ ಮೈಮರೆತಿದ್ದಾರೆ.
ಇದರಿಂದಾಗಿ ಅಸುರಿ ಶಕ್ತಿ ಜಾಗೃತವಾಗಿ  ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಮೆರೆಯುತ್ತಿದೆ. 
ದೇವತೆಗಳಿರುವಲ್ಲಿ ಶಾಂತಿ ಸಮಾಧಾನ ತೃಪ್ತಿ ಇರುತ್ತದೆ ಎಂದರೆ ಇಂದು ಲಕ್ಷ ಕೋಟಿ ಸಂಪಾದಿಸುವವರ ಗತಿ ಏನಾಗುತ್ತಿದೆ? ಮಕ್ಕಳೇ ಅವರಿಂದ ದೂರವಾಗುತ್ತಿದ್ದಾರೆ.ದ್ವೇಷ ಬೆಳೆಯುತ್ತಿದೆ  ಮಕ್ಕಳು ದಾರಿತಪ್ಪಿ ನೆಡೆದಿದ್ದಾರೆಂದರೆ ತಾಯಿಯನ್ನು ಸರಿಯಾಗಿ ಗೌರವಿಸದಿರೋದು ಕಾರಣವಿರಬಹುದು ಅಥವಾ ತಾಯಿಗೆ ಉತ್ತಮ ವಿದ್ಯೆ ಕಲಿಸದಿರಬಹುದು, ಅಥವಾ ತಾಯಿಯೇ ಸ್ವಯಂ ಕೃತ ಅಪರಾಧಿಯಾಗಿರಬಹುದು. ಕಲಿಗಾಲದ ಪ್ರಭಾವ ಅತಿಯಾದ ಮೋಹ‌ಮಾಯೆಯ ಹಿಡಿತದಲ್ಲಿರುವ ಮನುಕುಲಕ್ಕೆ  ಸತ್ಯಾಸತ್ಯತೆಯ ಅರಿವಿನ ಕೊರತೆಯಿದೆ. ಆ ಅರಿವು ಅಂತರಾಳಕ್ಕೆ ಇಳಿದವರಿಗಷ್ಟೆ ಅರ್ಥ ವಾಗಿದೆ. ಅವರನ್ನು ಮಹಾತ್ಮರೆಂದು ಕರೆಯಲಾಗಿದೆ. ಇದರಲ್ಲಿ ಸ್ತ್ರೀ ಶಕ್ತಿ ಇದ್ದರೂ ನಿರ್ಲಕ್ಷ್ಯ ಮಾಡಿರೋದೇ  ಇಂದಿನ ಈ ಭಾರತದ  ಸ್ಥಿತಿಗೆ ಕಾರಣವಾಗಿದೆ. ಈಗಲಾದರೂ  ಹೆಣ್ಣು ಮನೆಯ ಕಣ್ಣು, ಒಂದು ಕಣ್ಣಿಗೆ ನೋವಾದರೂ ಎರಡೂ ಕಣ್ಣಿನಲ್ಲಿ ನೀರುಬರುತ್ತದೆ. ಅಂದರೆ  ಹೃದಯಕ್ಕೆ ನೋವನ್ನು ಕೊಟ್ಟು  ಬುದ್ದಿಬೆಳೆಸಿಕೊಂಡರೆ  ಅಸುರರಾಗುವರು. 
ತಲೆಯಲ್ಲಿ ಉತ್ತಮ ವಿಚಾರವಿದ್ದರೆ ಕಾಲಿನ‌ನಡಿಗೆ ಉತ್ತಮವಾಗಿರುತ್ತದೆ. ಹೀಗಾಗಿ ಎಷ್ಟು ಓದಿದ್ದೇವೆನ್ನುವ ಬದಲು ಎಷ್ಟು ಅರ್ಥ ಮಾಡಿಕೊಂಡು ಭೂಮಿಯಲ್ಲಿ ನಡೆದಿದ್ದೇವೆಂದು ಹಿಂದೂಗಳಾದವರು  ತತ್ವದಿಂದ ಅರ್ಥ ಮಾಡಿಕೊಂಡರೆ  ಸ್ತ್ರೀ ಸಹಕಾರವಿಲ್ಲದೆ ಈವರೆಗೆ ಏನೂ ನೆಡೆದಿಲ್ಲ ನಡೆಯೋದಿಲ್ಲ. ಅವಳ ಜ್ಞಾನಶಕ್ತಿಯಿಂದಲೇ ಭೂಮಿ ನಡೆದಿದೆ. ಇದರಲ್ಲಿ ಅಜ್ಞಾನ ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಒಲಿದರೆ ನಾರಿ ಮುನಿದರೆ ಮಾರಿ .ಒಮ್ಮೆ ಮಾರಿಯ ದರ್ಶನದಲ್ಲಿ ಸಾಕಷ್ಟು ಜೀವ ಹೋಗಿದೆ.ಇದಕ್ಕೆ ಕಾರಣವೆ ಸೋಮಾರಿತನ. ಸೋ ಮಾರಿ ಇರೋದೆಲ್ಲಿ? ನಮ್ಮೊಳಗೇ .
ಮನೆಯೊಳಗೆ ಹೊರಗೆ ದುಡಿದು ಸಂಸಾರ ನೆಡೆಸೋ ಪರಿಸ್ಥಿತಿ  ನಾರಿಗೆ ಬಂದಿದೆ ಎಂದರೆ ಸೋಮಾರಿ ಸಂತಾನವಿದೆ ಎಂದರ್ಥ. ಭಾರತ ಮಾತೆಯ ಒಳಗಿರುವ‌ಕುಳಿತು ತಿನ್ನುವವರ ಸಂಖ್ಯೆ ಬೆಳೆದಿದೆ ಹೀಗಾದರೆ ಪ್ರಗತಿ ಸಾಧ್ಯವೆ?
ಪ್ರಜೆಗಳಲ್ಲಿ ಸಾಕಷ್ಟು ಆಸ್ತಿ ಹಣ,ಅಂತಸ್ತು ಇದ್ದರೂತೃಪ್ತಿ ಇಲ್ಲ ಎಂದರೆತಾಯಿಯ ಋಣ ತೀರಿಸಿಲ್ಲ. ಋಣ ತೀರೋದಕ್ಕೆ ಯೋಗದ ಅಗತ್ಯವಿದೆ. ಪರಮಾತ್ಮ ಜೀವಾತ್ಮರ ಸೇರೋದು ಮಹಾಯೋಗ.
ಭೂಮಿಗೆ ಬಂದ ಮೇಲೆ ಇಲ್ಲಿನ ಋಣ ತೀರದೆ ಪರಾಶಕ್ತಿ ಪರಮಾತ್ಮ ಕಾಣೋದಿಲ್ಲ.ಇದಕ್ಕೆ  ಮಹಾತ್ಮರುಗಳು  ರಾಜಕೀಯ ಬಿಟ್ಟು ಭೂಮಿಯಲ್ಲಿ ಸತ್ಯ ಧರ್ರ್ಮ ದಿಂದ ಜೀವನ ನೆಡೆಸುತ್ತಿದ್ದರು. ಬ್ರಹ್ಮನ್ ಸತ್ಯ ಜಗತ್ ಮಿಥ್ಯವೆಂದರು.ಇಂತಹ  ಯೋಗಿಗಳ ಹೆಸರಿನಲ್ಲಿ ಭೋಗದ ಜೀವನ  ನಡೆಸುವುದೇ ಸಮಸ್ಯೆಗೆ ಕಾರಣವಾದಾಗ  ಎಷ್ಟು ಬೇಕೋ ಅಷ್ಟು ಯೋಗದ ಜೊತೆಗೆ ಭೋಗವಿದ್ದರೆ ಉತ್ತಮ.
ಏನೇ ಇರಲಿ ಸಂನ್ಯಾಸಿಯಾಗೋದು ಕಷ್ಟ.ಸಂಸಾರ ಇನ್ನೂ ಕಷ್ಟ.ಆದರೆ ಯೋಗದಿಂದ ಇವರೆಡೂ ಅರ್ಥ ವಾದರೆ  ಲಿಂಗಬೇಧ,ಧರ್ಮಬೇಧ,ಜಾತಿ ಬೇಧದ ಹಿಂದಿನ  ಹಲವು ರಾಜಕೀಯ ಕುತಂತ್ರದಿಂದ  ಅಧರ್ಮ ಹೇಗೆ ಬೆಳೆದಿದೆ ಇದೇ ಮುಂದೆ ಯಾವ ರೀತಿಯಲ್ಲಿ ತಿರುಗಿ ಹೊಡೆಯುತ್ತದೆ ಎಂದು ತಿಳಿಯಬಹುದು.
ಮಾಡಿದ್ದುಣ್ಣೋ ಮಹಾರಾಯ. ತಾಯಿ ಮಾಡಿ ಹಾಕಿದ್ದ ನ್ನು ಉಂಡು ಬೆಳೆದವರು  ತಾಯಿಯನ್ನು ಆಳೋದೆಂದರೆ ಏನರ್ಥ. ಕಾಲಸರಿಯಿಲ್ಲವೆನ್ನುವ ಬದಲು ನಮ್ಮ ಕಲಿಕೆಯ ವಿಷಯ ಸರಿಯಿಲ್ಲವೆಂದರೆ ಸರಿಯಾಗುತ್ತದೆ..ವಿಷಯದಲ್ಲಿ ವಿಷವಿದ್ದರೆ ಅಮೃತ ಎಲ್ಲಿರುವುದು?
ದೇವತೆಗಳು ಅಮೃತ ಕ್ಕಾಗಿ ಸಮುದ್ರಮಥನ ಮಾಡಿ ಅಮೃತ ಸೇವಿಸಿ ಗೆದ್ದರು. ಆದರೆ ಅಸುರರಿಗೆ ಮಾಡಿದ ಮೋಸದ ಫಲ ಇಂದಿಗೂ ಭೂಮಿಯಲ್ಲಿ ಅಸುರರು ಜನ್ಮ‌ಪಡೆದು ದ್ವೇಷ ಮುಗಿಲುಮುಟ್ಟಿದೆ. ಯಾರಿಗೆ ಗೊತ್ತು ಯಾರಲ್ಲಿ ದೇವರಿರುವರೋ ಅಸುರರೋ ಎಂದು. ಅವರವರ ಆತ್ಮವೆ ಅವರ ದೇವರು. ಜನ್ಮವೇ ಇಲ್ಲದಿದ್ದರೆ ಭೂಮಿ ಋಣ ಇರದು.
ಹೀಗಾಗಿ ಭೂಮಿಯಲ್ಲಿ ಜನ್ಮಪಡೆಯಲು ಕಾರಣವೇ ಹಿಂದಿನ ಋಣ. ಇದನ್ನು ಸೇವೆಯಿಂದಷ್ಟೆ ತೀರಿಸಬಹುದೆನ್ನುವರು ಅದೂ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇರಬಾರದಂತೆ‌ .ಈಗ ಎಲ್ಲಿರುವರು ? ದೇಶದಿಂದ ನನಗೇನು ಲಾಭ? ತಾಯಿಯಿಂದ ನನಗೇನು ಲಾಭ? ಎನ್ನುವ ವ್ಯವಹಾರಕ್ಕೆ  ಸಿಲುಕಿದ ಮನಸ್ಸಿಗೆ ಹಣವೇ ಜ್ಞಾನಕ್ಕಿಂತ ಶ್ರೇಷ್ಠ ಎನ್ನುವ ಹಂತ ತಲುಪಿದೆ. ಇದನ್ನು ನೇರವಾಗಿ ಧಾರ್ಮಿಕ ವರ್ಗ ವೇ ಹೇಳುವಾಗ ಸಾಮಾನ್ಯರ ಪಾಡೇನು?
ಲಕ್ಷ  ಕೋಟಿ ಕೊಟ್ಟರೆ  ಮಹಾಯಾಗ ಮಾಡಿಸಬಹುದು.ಕೋಟಿ ಸಂಪಾದನೆಗೆ ಭ್ರಷ್ಟಾಚಾರ ಕ್ಕೆ ಇಳಿದಿರಬೇಕು. ಪಿತೃಗಳ ಆಸ್ತಿ ಮಾರಿ  ಧರ್ಮ ರಕ್ಷಕಾಗಲಾರ.ಅವರ ಆಸ್ತಿಯನ್ನು  ಅವರದೇ ಆದ ಧರ್ಮ ಕರ್ಮದಿಂದ  ಬೆಳೆಸಿ ಸೇವೆ ಮಾಡೋದರಿಂದ ಒಳಗೇ ತೃಪ್ತಿ ಸಿಗುತ್ತದೆ. 
ಕಷ್ಟವಿದೆ. ಕಷ್ಟಪಡದೆ ಸುಖವಿಲ್ಲ. ಸುಖ ಒಳಗಿನ ಜ್ಞಾನದಿಂದ ಬೆಳೆದರೆ ಯೋಗ. ಹೊರಗಿನ  ಜ್ಞಾನದಿಂದ ಬೆಳೆದರೆ ಭೋಗ.
ಎರಡೂ ಒಂದಾಗಿ ತಿಳಿದಾಗಲೇ  ಪರಮಾತ್ಮನ ದರ್ಶನ.

_ಭಾನುವಿನಂತಿಪ್ಪುದು ಜ್ಞಾನ,_  _ಭಾನುಕಿರಣದಂತಿಪ್ಪುದು  ಭಕ್ತಿ,_
_ಭಾನುವನಳಿದು ಕಿರಣಂಗಳಿಲ್ಲ,_
_ಕಿರಣಂಗಳನಳಿದು ಭಾನುವಿಲ್ಲ,_
_ಜ್ಞಾನವಿಲ್ಲದ ಭಕ್ತಿ,_
_ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ?_ 
 
                   *- ಅಕ್ಕಮಹಾದೇವಿ.* 

 *ಭಾವಾರ್ಥ:-* 
ಜ್ಞಾನ ಅಥವಾ ಅರಿವು, ತಿಳುವಳಿಕೆ ಎಂಬುದು ಪ್ರಜ್ವಲಿಸುತ್ತಿರುವ  ಸೂರ್ಯನಂತೆ, ಭಕ್ತಿ ಎನ್ನುವುದು ಆ ಸೂರ್ಯನ ಕಿರಣದಂತೆ. ಸೂರ್ಯನಿಲ್ಲದೆ ಕಿರಣ ಇರುವುದಿಲ್ಲ. ಕಿರಣಗಳಿಲ್ಲದ ಸೂರ್ಯನಿಲ್ಲ. ಕಿರಣ ಮತ್ತು ಸೂರ್ಯ ಎರಡೂ ಪರಸ್ಪರ ಪೂರಕ. ಅದೇ ರೀತಿಯಲ್ಲಿ ಪರಿಪೂರ್ಣ ಅರಿವಿಗೆ ಭಕ್ತಿ ಜ್ಞಾನ ಎರಡೂ ಇರಬೇಕು. ಭಕ್ತಿ ಇಲ್ಲದ ಜ್ಞಾನ, ಜ್ಞಾನವಿಲ್ಲದ ಭಕ್ತಿ ಎರಡೂ ಪರಿಪೂರ್ಣವಲ್ಲ, ಎಂದು ಅಕ್ಕಮಹಾದೇವಿ ತಿಳಿಸಿದ್ದಾರೆ.

_ವಿಶ್ವ ಕಂಡ ಮಹಾ ಮೇಧಾವಿ_ 
_ಆಲ್ಬರ್ಟ್ ಐನ್ಸ್ಟೆನ್ ಹೇಳಿದ ಪ್ರಸಿದ್ದ ಮಾತು._ 
*_ಧರ್ಮ ರಹಿತ ವಿಜ್ಞಾನ ಕುಂಟು,_* 
*_ವಿಜ್ಞಾನ ರಹಿತ ಧರ್ಮ ಕುರುಡು.._*

Thursday, May 30, 2024

ಆತ್ಮನೇ ಪರಮಾತ್ಮನೇ?

ಈ ಅದ್ವೈತಿಗಳು ಆತ್ಮವನ್ನು ಪರಮಾತ್ಮ ಎನ್ನುವರಲ್ಲ ಎಂದು ಯಾರೋ ಪ್ರಶ್ನೆ ಮಾಡಿದ್ದರು. ಅದ್ವೈತ ದಲ್ಲಿ ಒಂದೇ ಇರೋದು ಬೇರೆಯಿಲ್ಲ.ಅದರೊಳಗೆ ದ್ವೈತ ವಿದ್ದಾಗ ಇದನ್ನು ಅರ್ಥ ಮಾಡಿಕೊಳ್ಳಲು  ಒಬ್ಬರಿಂದ ಸಾಧ್ಯ ಇಬ್ಬರೂ ವಾದಕ್ಕಿಳಿದರೆ ದ್ವೈತವಾಗುತ್ತದೆ. ಹೀಗಾಗಿ ಅದ್ವೈತ ವಾದಕ್ಕೆ ನಿಲುಕದ ತತ್ವ. 

ಒಂದೇ ಸತ್ಯವಿರೋವಾಗ ಉತ್ತರ ಒಂದೇ ಇರಬೇಕು.ಅದು ತಿಳಿದ ಮೇಲೆ ಮೌನವಾಗಬೇಕಷ್ಟೆ.ಅದ್ವೈತ ವೆಂದರೆ ವಾದ ಮಾಡಲಾಗದ ತತ್ವ. ನಾನು ಬೇರೆ ನೀನು ಬೇರೆ ಎಂದರೆ ಒಪ್ಪಬಹುದು ಇಬ್ಬರಲ್ಲಿ ಇರುವ ಪರಮಾತ್ಮ ಒಬ್ಬನೆ ಎಂದರೆ ಒಪ್ಪೋದಿಲ್ಲ ಇದೇ ವಾದಕ್ಕೆ ಕಾರಣವಾಗಿದೆಯಲ್ಲವೆ? ಅಣುರೇಣುತೃಷಕಾಷ್ಟ ಪರಿಪೂರ್ಣಗೋವಿಂದ.ಇದರಲ್ಲಿ ಪ್ರಾಣಿಪಕ್ಷಿ ಕೀಟ ಜಂತು ಗಿಡಮರ ಪ್ರಕೃತಿ ಪುರುಷರೆಲ್ಲರೂ ಸೇರುವರು. ಪರಮಾತ್ಮನ ಒಳಗೇ  ಇರೋವಾಗ ಹೊರಗಣ್ಣಿನ ಕಾಣದ ಸತ್ಯ ತಿಳಿಯಲು ಒಳಗಣ್ಣು ತೆರೆಯಬೇಕು. ಇದೇ ಅಧ್ಯಾತ್ಮ ಸಂಶೋಧನೆ.ಹೊರಗೆ ಹೊಡೆದಾಡಿಕೊಂಡಿದ್ದರೆ ಅರ್ಥ ವಾಗದೆ ಜೀವ ಹೋಗುವುದು.

ಉದಾಹರಣೆಗೆ ಶ್ರೀ ಶಂಕರಾಚಾರ್ಯರು ಸ್ವಯಂ ಶಿವನ ಅವತಾರ ಪುರುಷರೆಂದರೆ ಅಧ್ವೈತ ದಲ್ಲಿ ದ್ವೈತ ವಾಗಬಹುದು. ಪ್ರಕೃತಿ ಪುರುಷನಿಲ್ಲದೆ ಜನ್ಮವಿಲ್ಲ. ಅಧ್ವೈತವೂ ಆಗಬಹುದು. ಹಾಗೆ ಎಲ್ಲಾ ಅವತಾರ ಪುರುಷ ಸ್ತ್ರೀ ದೇವಾನುದೇವತೆಗಳು  ಈ ಭೂಮಿಗೆ ಬಂದಿದ್ದಾರೆ ಹೋಗಿದ್ದಾರೆ ಎಂದರೆ ಭಗವಂತನ ಒಂದು ಶಕ್ತಿ  ಲೋಕಕಲ್ಯಾಣಕ್ಕಾಗಿ  ಭೂಮಿಯಲ್ಲಿ ಅವತರಿಸಿ ದೇವರಾಗಿ ಗುರುವಾಗಿರೋದಾಗಿದೆ.ಗುರುವಾಗಿ ದೇವರನ್ನು ತೋರಿಸುವುದು  ಸುಲಭವಿಲ್ಲ.ಅದೂ ತತ್ವಜ್ಞಾನದ ಮೂಲಕ ಆಗಿದೆಯೇ ಹೊರತು ತಂತ್ರಜ್ಞಾನದಿಂದ ದೇವರನ್ನು ಕಂಡಿಲ್ಲ.
ಇಷ್ಟು ತಿಳಿದರೆ ನಮ್ಮ ಇಂದಿನ ಗೊಂದಲ,ಭಿನ್ನಾಭಿಪ್ರಾಯ, ದ್ವೇಷ ವಾದ ವಿವಾದದ ಹಿಂದೆ ತತ್ವವಿದೆಯೆ ತಂತ್ರವಿದೆಯೆ ಕಂಡು ನೆಡೆಯಬಹುದಷ್ಟೆ. ಅತಿಯಾದ ತಂತ್ರ ಜೀವಾತ್ಮನನ್ನುಅತಂತ್ರಸ್ಥಿತಿಗೆ ತಲುಪಿಸುತ್ತದೆ. ಒಟ್ಟಿನಲ್ಲಿ ನಮ್ಮ  ಅರಿವೇ ಗುರು.ಅದಕ್ಕೆ ಪೂರಕವಾದ ಶಿಕ್ಷಣವೇ ಗುರುಕುಲವಾಗಿತ್ತು. ಈಗಿದು  ಯಾವ ದಿಕ್ಕಿನಲ್ಲಿ ನಡೆದಿದೆ ಎನ್ನುವ ಬಗ್ಗೆ ಚಿಂತನೆ ನಡೆಸಿಕೊಂಡರೆ ನಮ್ಮ ಸುತ್ತಮುತ್ತಲಿರುವ ಆ ಪರಮಾತ್ಮನ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು  ಜೀವನ ಸಾಗಿಸಬಹುದು. ಜೀವವಿದ್ದರೆ ಜೀವನವಲ್ಲವೆ? ಜೀವ ಕೊಟ್ಟವರು ಯಾರು? ಭೂಮಿ ಇದ್ದರೆ ಮನುಕುಲವಲ್ಲವೆ? ಶಿವಶಕ್ತಿಯಲ್ಲಿಯೇ ಬೇಧಭಾವ,
ಹರಿಹರರಲ್ಲಿ ಬೇಧ,ತತ್ವಗಳಲ್ಲಿ ಬೇಧ ತಂದವರು ನಾವೇ ಅಲ್ಲವೆ? ಅದಕ್ಕೆ ಅಲ್ಲ ಬೆಳೆದಿರೋದು.

ಪ್ರತಿಯೊಂದರಲ್ಲಿಯೂ ಅದಲ್ಲ ಇದಲ್ಲ ಅವ ಸರಿಯಲ್ಲ ಇವಳು ಸರಿಯಲ್ಲ ಎನ್ನುವುದರಲ್ಲಿ ಅಲ್ಲನೇ ಬೆಳೆದಿರೋದು.ನಕಾರಾತ್ಮಕ ಶಕ್ತಿಯಿಂದ ಸಕಾರಾತ್ಮಕ ಶಕ್ತಿ ಹಿಂದುಳಿದಾಗ ಹಿಂದೂ ಸನಾತನಧರ್ಮ ಅರ್ಥ ವಾಗಲ್ಲ. 
ದೇಶದೊಳಗೆ  ನಾವಿದ್ದರೂ ನಮ್ಮ ‌ಮನಸ್ಸು ವಿದೇಶದಲ್ಲಿದ್ದರೆ  ನಾವು ನಾವಲ್ಲ. ಹೀಗೇ ಅದ್ವೈತ ದ್ವೈತ ವಿಶಿಷ್ಟಾದ್ವೈತ ಎಲ್ಲಾ ಎಲ್ಲರನ್ನೂ ಒಂದಾಗಿ ಕಾಣುವುದಕ್ಕೆ  ಸಾಧ್ಯವಾಗುವ‌ ಒಂದೆ ತತ್ವ. ನಮಗೆ ಅರ್ಥ ವಾಗಿಲ್ಲವೆಂದಾಗ  ಮನಸ್ಸು ಪರಮಾತ್ಮನಿಂದ ದೂರವಾಯಿತು. ಪರಮಾತ್ಮನೇ ಎಲ್ಲಾ ಮಾಡೋದಾದರೆ ಜೀವಾತ್ಮನಿಗೆ ಏನೂ ಕೆಲಸವಿಲ್ಲ.  ಎಲ್ಲಾ ಸಂನ್ಯಾಸಿಗಳಾದರೆ ಸಂಸಾರವೇ ಇರೋದಿಲ್ಲ.  ಸಂನ್ಯಾಸಿಗಳ ಅನುಭವ ಸಂಸಾರಿಗಳಾಗೋದಿಲ್ಲ.ಸಂಸಾರಿಗಳ ಅನುಭವ ಸಂನ್ಯಾಸಿಗಾಗೋದಿಲ್ಲ. ಅದಕ್ಕೆ ಹಿಂದೆ ಮಹರ್ಷಿಗಳು ಸಂಸಾರಕ್ಕೆ ‌ಬಂದು ಬ್ರಹ್ಮಜ್ಞಾನಿಗಳಾದರು. ಬಾಲ್ಯದಲ್ಲೇ  ಉತ್ತಮ ಗುರುಕುಲ ಯೌವನದಲ್ಲಿ ಉತ್ತಮ ಗುರೋಪದೇಶ ಗೃಹಸ್ಥಾಶ್ರಮ ದಲ್ಲಿ ಉತ್ತಮ ಗುರು ವಾಗಿ  ಎಲ್ಲಾ ತಿಳಿದು ಕಳೆದ‌ಮೇಲೆ‌ವಾನಪ್ರಸ್ಥದೊಂದಿಗೆ ಸಂನ್ಯಾಸ ಆಶ್ರಮ. ಎಷ್ಟು ಸತ್ಯದ ಅನುಭವವಿತ್ತು. ಓದಿ ತಿಳಿಯುವುದೇ ಬೇರೆ  ಅನುಭವಿಸಿ ತಿಳಿಸುವುದೇ ಬೇರೆ.ಒಟ್ಟಿನಲ್ಲಿ ಭೂಮಿ ನಡೆದಿರೋದೆ ದ್ವೈತದಲ್ಲಿ ಹೀಗಿರುವಾಗ ಅದ್ವೈತ ಅರ್ಥ ವಾಗೋದು ಕಷ್ಟ.ಭೂತ ಭವಿಷ್ಯ ಕ್ಕೆ ವರ್ತ ಮಾನವೇ ಸಾಕ್ಷಿ. ವರ್ತ ಮಾನದ ವಾರ್ತೆ ವಾತಾವರಣ  ಸ್ವಚ್ಚಗೊಳಿಸಿದರೆ ಭವಿಷ್ಯ ಉತ್ತಮ. 
ಮಕ್ಕಳ ಭವಿಷ್ಯ ಪೋಷಕರ ಧರ್ಮಕರ್ಮದೊಳಗಿದೆಯೇ ಹೊರತು ಅವರ ಶಿಕ್ಷಣದಲ್ಲಿಲ್ಲ. ಶಿಕ್ಷಣದ ವಿಷಯ ಧರ್ಮ ದ ಹಾದಿಯಲ್ಲಿದ್ದರೆ  ಭವಿಷ್ಯವೂ ಧರ್ಮದ ಕಡೆಗಿರಬಹುದು.ಹಾದಿ ತಪ್ಪಿದರೆ  ಅಧರ್ಮ ಬೆಳೆಯುವುದು.

ನಮಗೆ ಸರಳವಾಗಿ ಅರ್ಥ ವಾಗುವ ರೀತಿಯಲ್ಲಿ ತತ್ವ ತಿಳಿದರೆ  ನಮ್ಮ ವಾಸ್ತವತೆಗೆ ಕಾರಣವೇ ತಂತ್ರಮಯ ಜೀವನವಾಗಿದೆ.
ಎಲ್ಲರನ್ನೂ ಒಂದು ಮಾಡೋದಕ್ಕೆ ಜನರನ್ನು ಹೊರಗೆಳೆಯೋದೆ ತಂತ್ರ.ಬೇರೆ ಮಾಡೋದು ತಂತ್ರ.ಒಂದು ಮಾಡೋದು ತತ್ವದ ಉದ್ದೇಶ. ಇದಕ್ಕೆ ಒಳಗಣ್ಣು ಅಗತ್ಯ.ಪರಮಾತ್ಮನ ದರ್ಶನ ಒಳಗಣ್ಣಿನಿಂದ ಸಾಧ್ಯವೆಂದರೆ ಯೋಗದಿಂದ ಸಾಧ್ಯ.ಜೀವಾತ್ಮ ಪರಮಾತ್ಮನಲ್ಲಿ ಐಕ್ಯವಾದಾಗ ನಾನಿರೋದಿಲ್ಲ ಎಂದಂತೆ ಅದ್ವೈತ ನಾನೆಂಬುದಿಲ್ಲವೆಂದರೂ ಭೂಮಿಯಲ್ಲಿ ನಾನಿರದೆ ಸಂಸಾರವಿದೆಯೆ? ಹಾಗಾದರೆ ನಾನ್ಯಾರು? ಪ್ರಶ್ನೆ ಜನ್ಮ ಪಡೆಯಿತು. ಪ್ರಶ್ನೆಗೆ ಹಲವಾರು ನಾನು ಸೇರಿಕೊಂಡು ‌ನಾನೇ ದೇವರಾಯಿತು. ದೇವರ ಜೊತೆಗೆ ಅಸುರರೂ ನಾನೂ ದೇವರೆ ಎಂದಾಗಲೇ ಯುದ್ದವಾಯಿತು. ಯುದ್ದದಲ್ಲಿ ಹೋದ ಜೀವ ಮರುಜನ್ಮ ಪಡೆದರೂ ನಾನ್ಯಾರು ಪ್ರಶ್ನೆಗೆ ಉತ್ತರ  ಈಗಲೂ ಸಿಕ್ಕಿಲ್ಲ.ಹೊರಗೆ ನಾನು ಬೆಳೆದಿರುವಾಗ ಒಳಗಿನನಾನುಸುಮ್ಮನಿದ್ದರಬೇಕಾಯಿತು..ಮೌನವಾಗಿದ್ದವರಿಗೆ ಉತ್ತರ ಸಿಕ್ಕಿದೆಯಷ್ಟೆ. ನಾನು‌ಮೌನವಾದಾಗ ಪರಮಾತ್ಮ ಒಬ್ಬನೆ ಆಗಿರುವನು ಇದೇ ಅದ್ವೈತ. ದ್ಯಾನದಿಂದ ಯೋಗದಿಂದ  ಪರಮಾತ್ಮನ ದರ್ಶನ ಸಾಧ್ಯವೆಂದವರು ಮಹಾತ್ಮರುಗಳು. ಇವರಲ್ಲಿ ತಂತ್ರವಿರದೆ ತತ್ವವಿತ್ತು. ರಾಜಕೀಯವಿರದೆ ರಾಜಯೋಗವಿತ್ತು. ವಿವೇಕದ ಆನಂದವಿತ್ತು. 
ವಿಚಾರವನ್ನು ವೇದ ಶಾಸ್ತ್ರ ದಿಂದ ಕಾಣುವ ಆನಂದ ವಿವೇಕಾನಂದ.
ವಿಚಾರವನ್ನು  ವೇದನೆಯಿಂದ  ತಿಳಿದು  ಆನಂದ ಕಾಣಬಹುದೆ?  ಇಂದಿನ ಶಿಕ್ಷಣದ ವಿಚಾರ  ಹೆಚ್ಚಾಗಿ ಇದೇ ದಾರಿಹಿಡಿದಿದೆ ಅದಕ್ಕೆ ಇಷ್ಟು ದು:ಖ,ದುರಾಸೆ,ದುರಾಚಾರ
,ದುಷ್ಟ,ಭ್ರಷ್ಟರು ಬೆಳೆದಿರೋದು.

ಕ್ಷಮಿಸಿ  ಇದರಲ್ಲಿ ಯಾವುದೇ ಪುರಾಣ ಇತಿಹಾಸ ಭವಿಷ್ಯದ ಕಥೆಯಿಲ್ಲ ವಾಸ್ತವ ಸತ್ಯವಿದೆ. ಎಲ್ಲದ್ದಕ್ಕೂ ಕಾರಣ ನಾವೇ ನಮ್ಮನ್ನು ಅರ್ಥ ಮಾಡಿಕೊಳ್ಳಲು ಸೋತಿರುವುದಾಗಿದೆ. ಇದು ಪರರಿಗೆ ವರದಾನವಾಗಿದೆ.ಪರಮಾತ್ಮನಿಗೆ ಎಲ್ಲಾ ಒಂದೇ.
ಜೀವಾತ್ಮನಲ್ಲಿ ಜೀವ ಶಾಶ್ವತವಲ್ಲ ಆತ್ಮ ಶಾಶ್ವತ ಅದು ಪರಮಾತ್ಮನ ಒಂದು ಕಣವಷ್ಟೆ.

ಸಾಯಿಬಾಬ ಹಿಂದೂವೆ ಮುಸ್ಲಿಂ ರೆ?

ಇತ್ತೀಚಿನ ದಿನಗಳಲ್ಲಿ ಸಾಯಿಬಾಬರನ್ನು ನಂಬುವ ಹಿಂದೂಗಳನ್ನು  ಬಾಬ ಮುಸ್ಲಿಂ ಜನಾಂಗದ ಪಕೀರನಾದ್ದರಿಂದ ಹಿಂದೂಗಳಿಗೆ ಸಮಸ್ಯೆಗಳಾಗುತ್ತಿದೆ ಎನ್ನುವ ಪ್ರಚಾರ ನಡೆದಿದೆ. ಇದು ಎಷ್ಟು ಸತ್ಯ ಅಸತ್ಯವೆನ್ನುವ ಬದಲಾಗಿ  ಸಾಯಿಭಕ್ತರ ನಡವಳಿಕೆಯಲ್ಲಿ ಹಿಂದುತ್ವ ಇದೆಯೆ ಇಲ್ಲವೆ ಎನ್ನುವ ಬಗ್ಗೆ ತಿಳಿಯುವುದು ಅಗತ್ಯವೆನಿಸುತ್ತದೆ.
ಹಿಂದೂ ದೇವಾಲಯದ ಹಣವನ್ನು ಅನ್ಯಧರ್ಮ ದವರ ಉದ್ದಾರಕ್ಕೆ ಬಳಸುವುದು ತಪ್ಪು ಎಂದಂತೆ ಸಾಯಿ ಟ್ರಸ್ಟ್ ಹಣವನ್ನು  ಅನ್ಯಧರ್ಮದವರಿಗೆ  ಕೊಡಬಾರದು ಎಂದರೆ ಇಲ್ಲಿ  ಇತ್ತೀಚಿಗೆ  ಮುಸ್ಲಿಂ ಗೆ ಕೋಟ್ಯಾಂತರ ಹಣವನ್ನು ನೀಡಿದ ವಿಚಾರವನ್ನು ಗಮನಿಸಿದರೆ  ನಿಜವಾಗಿಯೂ ಹಿಂದೂಗಳ ಹಣ ಯಾರ ಪಾಲಾಗುತ್ತಿದೆ ? ಸಾಯಿಬಾಬರ ಕಾಲವೇ ಬೇರೆ ಈಗಿನ ಕಾಲವೇ ಬೇರೆಯಾಗಿದೆ.ಅಂದಿನ ಬಾಬರ ಪವಾಡಗಳನ್ನು ಇಂದಿಗೂ ಜನರುಮೆಚ್ಚುವರು. ಹಾಗೆ ಇನ್ನೂ ಅನೇಕ ದೇವಾನುದೇವತೆಗಳ ಪವಾಡಗಳನ್ನು ಮರೆಯಲ್ಲಿಟ್ಟು ಮರೆತವರು ನಾವೇ ಎಂದಾಗ ಯಾವುದು ಪ್ರಚಾರದಲ್ಲಿದೆ ಅದೇ ಬೆಳೆಯೋದು. ಹಣದಿಂದ ಸಂತನಾಗೋದಿಲ್ಲ ಹಾಗೆ ಪಕೀರನಾಗೋದಿಲ್ಲ. ಜ್ಞಾನದಿಂದ ಇದು ಸಾಧ್ಯ. ಸಾಯಿಬಾಬಾರ ಭಕ್ತರು ವಿಶ್ವದೆಲ್ಲೆಡೆ ಇರುವರು.
ಅವರನ್ನು ಶಿವ ಸ್ವರೂಪ ಗುರುವೆಂದು  ಗುರುತಿಸಿ ಬೆಳೆಸಿದವರು ಹಿಂದೂಗಳೇ ಆಗಿರುವರು. ಇದರಿಂದ  ಸಾಕಷ್ಟು ಶ್ರೀಮಂತ ವರ್ಗದವರು  ಸಾಯಿಭಕ್ತರಾಗಿದ್ದಾರೆ.
ಇದನ್ನು ತಪ್ಪು ಎಂದರೆ  ಭಕ್ತಿಗೆ  ಅಡೆತಡೆಯಿಲ್ಲ. ಆದರೂ ಒಂದು ಸೂಕ್ಷ್ಮ ವಾಗಿರುವ ಸತ್ಯ ನಮ್ಮಲ್ಲಿ ಸಾಕಷ್ಟು ಹಣ,ಅಧಿಕಾರ,ಸ್ಥಾನಮಾನವೆಲ್ಲವೂ ಇದ್ದರೂ ಯಾಕೆ ನೆಮ್ಮದಿ ಶಾಂತಿ ತೃಪ್ತಿ ಇಲ್ಲ? ಈ ಪ್ರಶ್ನೆ ಹಿಂದೂ ದೇವತೆಗಳನ್ನು ಆರಾಧಿಸಿ ಪೂಜಿಸಿದವರೂ ಕೇಳಿಕೊಂಡರೆ  ನಮ್ಮ ಸಮಸ್ಯೆಗೆ ಪರಿಹಾರ ಒಳಗೇ ಸಿಗುತ್ತದೆ. 
ಹಿಂದೂ ದೇವಾನುದೇವತೆಗಳು  ಹಿಂದೆ ಇಂದುಮುಂದೆ ಇದ್ದೇ ಇರುತ್ತಾರೆ.ಆದರೆ, ಹಿಂದೆ ಪುರಾಣಗಳಲ್ಲಿ  ನಾವೀಗ ಹೊರಗಿನ ವ್ಯಕ್ತಿಗಳನ್ನು ದೇವರೆಂದು ಪೂಜಿಸುವುದನ್ನು ಕಾಣೋದಿಲ್ಲ. ಗೌರವಿಸಿ ಅವರ ದೈವಶಕ್ತಿಯನರಿತು ಅವರ ದಾರಿಯಲ್ಲಿ ನಡೆದವರನ್ನು ಕಾಣಬಹುದಷ್ಟೆ. ಇಂದು ಸಾಕಾರಕ್ಕೆ ಕೊಡುವ ಲಕ್ಷ ಹಣ ನಿರಾಕಾರಕ್ಕೆ ಕೊಡದೆ ನಿರ್ಲಕ್ಷ್ಯ ಮಾಡಿ  ಇದ್ದಾಗಲೇ ಸಾಯಿಸಿ,ಸತ್ತ ಮೇಲೆ ಬದುಕಿಸುವ ಪ್ರಯತ್ನ ನೆಡೆದಿದೆ.
ಅಂದರೆ  ಸಾವು ಎಲ್ಲರಿಗೂ ನಿಶ್ಚಿತ. ಹಾಗಂತ ಬದುಕು ಶಾಶ್ವತವಾಗದು. ನಮ್ಮ ಆತ್ಮಸಾಕ್ಷಿ ಗೆ  ನಾವೇ ಹೊಣೆಗಾರರು.
ನಮ್ಮ ಮೂಲದ ಗುರು ಹಿರಿಯರು  ನಡೆದು ನುಡಿದು ಅರಿತು  ಕೊಂಡ ಅಧ್ಯಾತ್ಮ ಸತ್ಯದ ಪ್ರಕಾರ ದೇವರು ನಮ್ಮೊಳಗೇ ಇದ್ದು ನಮ್ಮನ್ನು  ತಾಯಿ ತಂದೆ ಗುರು ಬಂಧು ಬಳಗ ಸ್ನೇಹಿತರ ಮೂಲಕ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಕೊಡುವಾಗ  ದೂರದಿಂದ ಯಾರೋ ಬಂದು ನಾನೇ ದೇವರು ಎಂದರೆ ಹತ್ತಿರವಿರುವ ಸಂಬಂಧ ಮುರಿದು ಹೋದರೆ ಹಿಂದಿರುಗಿ  ಬರೋದು ಕಷ್ಟವಿದೆ. ಯಾವುದೋ ಒಂದು ಶಕ್ತಿಯಿಂದ ಎಲ್ಲಾ ನಡೆದಿದೆ ಎನ್ನುವ ಅದ್ವೈತ ದ ಜೊತೆಗೆ ಆ ಶಕ್ತಿಯ ಜೊತೆಗೆ ನನ್ನಲ್ಲೂ ಒಂದು ಶಕ್ತಿಯಿದೆ ಅದನ್ನು ಅರ್ಥ ಮಾಡಿಕೊಂಡು ಕೂಡಿ ನೆಡೆದರೆ ತೃಪ್ತಿ ಇದೆ ಎನ್ನಬಹುದು. ಆದರೆ ಇವೆರಡನ್ನೂ ಬಿಟ್ಟು ಇನ್ನೊಂದು  ಶಕ್ತಿ ಹಿಡಿದು  ಮುಂದೆ ನಡೆಯುವೆ ಎಂದಾಗಲೇ  ಸಮಸ್ಯೆ ಹೆಚ್ಚು.
ಅವರವರ ಇಷ್ಟದೇವರು ಕುಲದೇವರು ಗ್ರಾಮದೇವರು, ದೇಶದ ದೇವರು...ವಿಶ್ವದ ದೇವರುಗಳನ್ನು ಗುರುತಿಸುವ ಗುರುವನ್ನು  ದೇವರೆಂದು ತಿಳಿಯುವುದು ಸರಿ. ಆದರೆ ನಮ್ಮ ಮೂಲದ ದೇವರು ಗುರುವನ್ನು  ಮನೆಯೊಳಗೆ ಇದ್ದು ಗುರುತಿಸಿ ಗೌರವಿಸಿ ಬೆಳೆಸಿಕೊಂಡರೆ ಮನೆಯೊಳಗೆ ತೃಪ್ತಿ.
ಸಮಾಜದ ವಿಚಾರಕ್ಕೆ ಬಂದಾಗ ಗ್ರಾಮ ದೇವತೆ ,ದೇಶದ ಪ್ರಶ್ನೆ ಬಂದಾಗ ಎಲ್ಲಾ ದೇವತೆಗಳಿಗೂ ಅವರದೇ ಆದ ವಿಶೇಷ ಶಕ್ತಿ ಯಿರುತ್ತದೆ. ದೇಶದ ರಕ್ಷಣೆಗಾಗಿ ದೇವರ ಭಕ್ತರು ಒಂದಾಗಿ ನಿಂತರೆ ದೇಶಭಕ್ತಿಯಿಂದ  ಧರ್ಮ ರಕ್ಷಣೆಯಾಗುತ್ತದೆ. ಅದಕ್ಕಿಂತ ದೊಡ್ಡದು ವಿಶ್ವಶಕ್ತಿ ಇದನ್ನು ವಿಶ್ವದ ಜನರೆಲ್ಲರೂ ಅರ್ಥ ಮಾಡಿಕೊಳ್ಳಲು ಕಷ್ಟ.ಹಾಗಾಗಿ ಅಂತರ ಬೆಳೆದು ಯುದ್ದಗಳಾಗುತ್ತದೆ. 
ಒಟ್ಟಿನಲ್ಲಿ ದೈವತ್ವಕ್ಕೆ  ದೇವರನ್ನು  ಮೂಲದಲ್ಲಿಯೇ ಅರ್ಥ ಮಾಡಿಕೊಳ್ಳಲು  ದೈವೀಕ ಶಕ್ತಿಯನ್ನು ಬೆಳೆಸುವ‌ಗುರುವಿನ ಅಗತ್ಯವಿದೆ. ದೈವೀಕ ಶಕ್ತಿ ಬೆಳೆದಂತೆಲ್ಲಾ ಹಣ ಅಧಿಕಾರದ ದಾಹ ಕುಸಿಯುತ್ತದೆ. ಶ್ರೀಮಂತಿಕೆ ಜ್ಞಾನದಿಂದ ಬೆಳೆದಾಗ ವಿಶ್ವೇಶ್ವರನ ದರ್ಶನ. ಅರ್ಧ ನಾರೀಶ್ವರರ ಸಮಾನತೆಯಲ್ಲಿ  ಏರುಪೇರಾದಾಗಲೇ ಅತಂತ್ರ ಜೀವನ.
ಗುರು ವ್ಯಕ್ತಿಯಲ್ಲ ಶಕ್ತಿ.ಆ ಶಕ್ತಿಯಿಂದ ಆತ್ಮಕ್ಕೆ ತೃಪ್ತಿ ಮುಕ್ತಿ ಸಿಗೋದಾದರೆ  ಅರಿವೇ ಗುರು. ನಮ್ಮ ಸುಜ್ಞಾನ ಒಳಗಿನ ಶಿಕ್ಷಣ ಒಂದೇ ಆದಾಗಲೇ ಅರಿವು ಹೆಚ್ಚುವುದು. ಅಂತರ ಬೆಳೆದರೆ ಅಜ್ಞಾನ  ಆವರಿಸಿ ಅಶಾಂತಿಯ ಅತೃಪ್ತ ಜೀವನ ಆಗೋದು. 
ನಮ್ಮ ಮಹಾಯತಿಗಳು,ಸಾದು ಸಂತ ದಾಸ ಶರಣರ ಜ್ಞಾನ ಯಾರೋ ಹೊರಗಿನವರಿಂದ  ಜನ್ಮಪಡೆದಿದ್ದಲ್ಲ.ಮೂಲ ಶಿಕ್ಷಣವೇ ಅವರ ಆತ್ಮಜ್ಞಾನಕ್ಕೆ  ಪೂರಕವಾಗಿತ್ತು. ಕೆಲವರಿಗೆ ಜೀವನದ ಮಧ್ಯದಲ್ಲಿ ಜ್ಞಾನೋದಯವಾಗಿದ್ದರೆ, ಕೆಲವರಿಗೆ ಅಂತ್ಯದಲ್ಲಿ  ಜ್ಞಾನೋದಯವಾಗಿದೆ. ಪ್ರಾರಂಭದಿಂದಲೂ ಜ್ಞಾನಿಗಳಾದವರಿಗೆ ಉತ್ತಮ‌ಗುರುವಿನ ಮಾರ್ಗ ದರ್ಶನ ಇತ್ತು. ಒಟ್ಟಿನಲ್ಲಿ ಜ್ಞಾನವೆಂಬುದು ಯಾರ ಸ್ವತ್ತಲ್ಲ. ಯಾರೂ ಕದಿಯೋ ವಸ್ತುವಲ್ಲ.ಆದರೆ ಇದನ್ನು ದುರ್ಭಳಕೆ ಮಾಡಿಕೊಂಡು ಹಣ ಮಾಡೋದೇ ಅಜ್ಞಾನವಾಗುತ್ತದೆ. ಎಷ್ಟು ಹಣಗಳಿಸಿದರೂ ಅದರ ಹಿಂದೆ  ಅಸತ್ಯ ಅನ್ಯಾಯ ಅಧರ್ಮ ಇದ್ದರೆ  ಗುರುವಿಗೆ ಮಾಡುವ ಅವಮಾನವಾಗುತ್ತದೆನ್ನುತ್ತದೆ ಸನಾತನ ಧರ್ಮ. 
ಇತ್ತೀಚಿನ ದಿನಗಳಲ್ಲಿ ಕೆಲವರು  ಧರ್ಮ ಕ್ಕಿಂತ ನಮಗೆ ಹಣವೇ ಮುಖ್ಯ. ಜೀವನ ನೆಡೆಸಬೇಕಲ್ಲ ಎನ್ನುವ ಮೂಲಕ ವಾಮಮಾರ್ಗದಲ್ಲಿ ಅನ್ಯಧರ್ಮ ದವರೊಂದಿಗೆ ಸೇರಿಕೊಂಡು ಶ್ರೀಮಂತ ರಾಗಿದ್ದರೂ ಅವರ ಸಂತಾನಕ್ಕೆ ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗಿದೆ ಎಂದರೆ ಇಲ್ಲಿ ಹೊರಗಿನವರ ಸಂಬಂಧ ಬೆಳೆಸೋ ಮೊದಲು ನಮ್ಮ ಮೂಲವನರಿತರೆ ಉತ್ತಮ.ಇದಕ್ಕಾಗಿ ಹಿಂದೆ  ಸಂಬಂಧ ಗಳಲ್ಲಿ ಮದುವೆ ಆಗುತ್ತಿತ್ತು. ಆದರೆ ಅತಿಯಾದ ಸಲಿಗೆಯೂ ಸಮಸ್ಯೆಯ ಮೂಲವಾಗುತ್ತದೆ. ಕಾಲಕ್ಕೆ ತಕ್ಕಂತೆ  ಕೆಲವು ಬದಲಾವಣೆ ಆಗುತ್ತದೆ. ಬದಲಾವಣೆ ಒಳಗಿನಿಂದ ಆದರೆ ಹೊರಗಿನ ಸತ್ಯಾಸತ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ತನ್ನ ತಾನರಿತು  ಪರರನ್ನು ಬೆರೆತು ಪರಮಾತ್ಮನ ಅರಿಯುವುದು  ಬಹಳ ಕಷ್ಟ. ಎರಡೂ ಕಡೆಯಿಂದ ಒಂದೇ ಶಕ್ತಿಯಿದ್ದರೂ ಮಧ್ಯದಲ್ಲಿ ತೂರಿಕೊಳ್ಳುವ ಮಧ್ಯವರ್ತಿಗಳು  ಮಾನವನಿಗೆ ದಾರಿತಪ್ಪಿಸಿ ಅತಂತ್ರಸ್ಥಿತಿಗೆ ತಲುಪಿಸಬಹುದು.
ಅದಕ್ಕಾಗಿ ಮಧ್ಯವರ್ತಿಗಳಿಂದ ದೂರವಿದ್ದು ಮಾನವರಾಗಿ ಬದುಕಲು  ಮನಸ್ಸು ನಿರ್ಮಲವಾಗಿರಬೇಕು. ಮಾಧ್ಯಮ ಮಧ್ಯವರ್ತಿ, ಮಹಿಳೆ ಮಕ್ಕಳು  ಮನುಕುಲದ  ಒಂದು ಭಾಗ.ಅವರೆ ದೇವರಾಗಿ ಗುರುವಾಗಿ  ಮಹಾತ್ಮರಾಗಲು ತತ್ವಶಾಸ್ತ್ರ ಅಗತ್ಯವಿದೆ. ಅತಿಯಾದ  ತಂತ್ರವಿದ್ದರೆ ಅತಂತ್ರ ಜೀವನ. ಭೂಮಿ ಒಂದು ಮಾಧ್ಯಮವಷ್ಟೆ. ಇಲ್ಲಿ ಬರಲು ಕಾರಣವಿದೆ.ಹಿಂದಿನ ಜನ್ಮದ ಋಣಾತ್ಮಕ ಗುಣಗಳಾಗಿದೆ.ಇದನ್ನು ಧನಾತ್ಮಕ ಗುಣವಾಗಿಸೋರೆ ನಿಜವಾದ ಗುರುವಾಗಿರುವರು.ನಮ್ಮಲ್ಲಿ ಅಂತಹ ಗುಣವಿದ್ದರೆ ನಾವೇ ಗುರು.ಶಿವಸ್ವರೂಪರಲ್ಲಿ ಜ್ಞಾನ ಹೆಚ್ಚು.
ಹಣಕ್ಕಾಗಿ ಅಧರ್ಮ ಬೆಳೆಸೋದು ಅಸುರಿಗುಣವಾಗಿದೆ. 

Monday, May 27, 2024

ಆತ್ಮಕ್ಕೆ ಬೇಧವಿಲ್ಲ

ಪ್ರಕೃತಿ ಪುರುಷನಿಂದಲೇ ಜೀವಾತ್ಮನಿಗೆ ಮುಕ್ತ ಮುಕ್ತಿ ಮೋಕ್ಷವೆನ್ನುವರು ಸನಾತನ ಮಹರ್ಷಿಗಳು. ಒಮ್ಮೆ ಶಿವಪಾರ್ವತಿಗೆ ಸೃಷ್ಟಿಯ ರಹಸ್ಯವನ್ನು  ಒಂದು ಗುಹೆಯೊಳಗಿದ್ದು ಹೊರಗೆ ಯಾರಿಗೂ ಕೇಳಿಸಬಾರದೆಂದು ಹೇಳುತ್ತಿರುವಾಗ ಅದೇ ಗುಹೆಯಲ್ಲಿ ವಾಸವಿದ್ದ ಒಂದು ಶುಕಪಕ್ಷಿ ಅದನ್ನು ಕೇಳುತ್ತಿತ್ತಂತೆ ಹೇಳುವಾಗ‌ಮಧ್ಯೆದಲ್ಲಿ ಹುಂ ಹುಂ ಎನ್ನುವ ಶಬ್ದ ಬರುತ್ತಿದ್ದಾಗ ಪಾರ್ವತಿ ಮಧ್ಯದಲ್ಲಿ ನಿದ್ರೆಗೆ ಜಾರಿದ್ದಳು .ದ್ವನಿ ಮಾತ್ರ ಬರುತ್ತಿದ್ದ ಕಡೆ ಶಿವನ ದೃಷ್ಟಿ ಹೋದಾಗ ಶುಕ ಸತ್ತು ಹೋಯಿತಂತೆ. ಮುಂದಿನ ಜನ್ಮದಲ್ಲಿ ಅದೇ ಶುಕ ಪಕ್ಷಿ ವೇದವ್ಯಾಸರ ಮಗನಾಗಿ ಜನಗಮ ಪಡೆದು ಭಾಗವತ ಪುರಾಣದ ಪ್ರಚಾರಕ್ಕೆ ಕಾರಣಕರ್ತ ರಾದ ಶುಕಮುನಿಗಳಾದರೆನ್ನುವುದು ಪುರಾಣ.
ಇಲ್ಲಿ ಒಂದು ಸಣ್ಣ ಪಕ್ಷಿ  ಭಗವಂತನ ವಾಣಿ ದರ್ಶನ ಮಾಡಿ ಉನ್ನತ ಜನ್ಮ ಪಡೆದಿರುವಾಗ ನಮ್ಮಂತಹ ಸಾಮಾನ್ಯರಿಗೆ ಯಾಕೆ ಸಾಧ್ಯ ವಾಗುತ್ತಿಲ್ಲ.ಕೆಲವರಂತೂ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೆ,ಹಲವರು ಅವರ ಹಿಂದೆ ಸಹಕರಿಸುವರು.ಕೆಲವರಿಗೆ ಎಲ್ಲಾ ತಿಳಿದರೂ ಹೇಳದೆ ಹೋದರೆ ಮತ್ತೆ ಕೆಲವರಿಗೆ ಬೇರೆಯವರಿಗೆ ಒಳ್ಳೆಯದಾದರೆ ನಮಗಮ ಗತಿ ಏನೆಂಬ ಸ್ವಾರ್ಥ ಚಿಂತನೆ.ಅಮಾಯಕರ ಸ್ಥಿತಿ ಕೇಳೋದೇ ಬೇಡ.ಇವೆಲ್ಲವೂ ಪೂರ್ವಾರ್ಜಿತ ಕರ್ಮ ಫಲ ಎನ್ನುವುದು ಸತ್ಯ.ಇಂದು ನಾವು ಮಾಡುವ‌ಕರ್ಮದ ಫಲ ಮುಂದೆ ಅನುಭವಿಸೋದನ್ನು   ಯಾರೂ ತಡೆಯಲಾಗದು.
ಪುರುಷಾತ್ಮ ಎಲ್ಲಾ ಕಡೆ ಇದ್ದು  ಪ್ರಕೃತಿಯೊಂದಿಗೆ ಬೆರೆತು ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣಕರ್ತ ನಾಗಿದ್ದರೂ ಮಾನವನಿಗೆ ತಾನೇ ಸೃಷ್ಟಿ ಕರ್ತ ಎನ್ನುವ ಅಹಂಕಾರ ಸ್ವಾರ್ಥ ಮಿತಿಮೀರಿ ಕೊನೆಗೆ  ಜೀವ ಹೋಗುತ್ತದೆ. ಹಾಗಾದರೆ  ವಾಸ್ತವದಲ್ಲಿ ನಾವು ಬದುಕಿದ್ದೇವೆಯೆ? ಪುರಾಣದಲ್ಲಿ ಬದುಕಿದ್ದೇವೆಯೆ? ಅಥವಾ ಭವಿಷ್ಯದಲ್ಲಿ ಬದುಕಿದ್ದೇವೆಯೆ? 
ಪುರಾಣ ಭವಿಷ್ಯದ ಪ್ರಚಾರ ವಾಸ್ತವದಲ್ಲಿ ನಡೆದರೂ  ಅಂತರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಯಾಗಿ ಅಸತ್ಯ ಅನ್ಯಾಯ ಅಧರ್ಮ ಕ್ಕೆ  ನಮ್ಮ ಸಹಕಾರ ಹೆಚ್ಚಾಗಿ ಈ ಕಡೆ ಪುರಾಣವೂ ಅರ್ಥ ವಾಗದೆ ವಾಸ್ತವದಲ್ಲಿ ಬದುಕಲಾಗದೆ ಭವಿಷ್ಯವನ್ನು  ಹಾಳು ಮಾಡುವವರು ಬೆಳೆದಿರುವುದು ಕಲಿಗಾಲದ ಕಲಿಕೆಯ ಪ್ರಭಾವ.
ಒಟ್ಟಿನಲ್ಲಿ  ಯಾವಜನ್ಮದಲ್ಲಿ ಏನು ಕೇಳಿದರೆ ಮಾಡಿದರೆ ನೋಡಿದರೆ ಅದೇ ಮುಂದಿನ ಜನ್ಮದ ಪ್ರಾರಂಭವಾಗಿರುತ್ತದೆ ಎಂದು ಶುಕಮುನಿಗಳ ಕಥೆಯ ಸಾರಾಂಶ.
ಇದನ್ನು ಶ್ರೀ ಕೃಷ್ಣ ಪರಮಾತ್ಮನೂ  ಜೀವ ಹೋಗುವ ಕ್ಷಣದಲ್ಲಿ ಯಾವ ಚಿಂತನೆಯಿರುವುದೋ ಅದೇ ರೀತಿಯಲ್ಲಿ ಮುಂದಿನ ಜನ್ಮನಿರ್ಧಾರವಾಗುತ್ತದೆ ಎಂದರೆ ವಾಸ್ತವದಲ್ಲಿ ಹೆಚ್ಚಿನ ಜನರಮನಸ್ಸು ರಾಜಕೀಯದಲ್ಲಿ ಮುಳುಗಿರುತ್ತದೆ.
ಅಧ್ಯಾತ್ಮಿಕ ಪ್ರಗತಿ ರಾಜಯೋಗದ ಮೂಲಕ ಆಗುತ್ತದೆ ಎಂದಾಗ ತನ್ನ ತಾನರಿಯದೆ ಹೊರಗಿನ ರಾಜಕಾತಣಿಗಳನ್ನು  ಪ್ರತಿಷ್ಠಿತ ಜನರನ್ನು ಅರ್ಥ ಮಾಡಿಕೊಳ್ಳುತ್ತಾ ಪರಮಸತ್ಯ ಪರಮಾತ್ಮನಿಂದ ಮನಸ್ಸು ದೂರವಿದ್ದರೆ  ಜೀವನ್ಮುಕ್ತಿ ಎಲ್ಲಿ?
ಇದನ್ನು  ಪ್ರಗತಿ  ಎನ್ನಬೇಕೋ ಅಧೋಗತಿ ಎನ್ನಬೇಕೋ. ಹೊರಗಿನ ಪ್ರಗತಿಯ ಹಿಂದೆ  ಅಧ್ಯಾತ್ಮ ಚಿಂತನೆಯೂ ಇದ್ದರೆ ಸಮಸ್ಥಿತಿ. ಇದು ಸಾಧ್ಯವಾಗೋದಕ್ಕೆ ನಮ್ಮ ಪರಿಸ್ಥಿತಿ  ಪುರಾಣ  ಕಾಲದ ಪರಿಸ್ಥಿತಿ  ಒಂದೇ ಇರಬೇಕು. ಅಂದಿನ ಜ್ಞಾನದ ಸ್ಥಿತಿ ಇಂದಿಲ್ಲ. ಹೀಗಾಗಿ‌ನಡೆ ನುಡಿಯ ನಡುವಿನ ಅಂತರ ಬೆಳೆದಿದೆ. ಏನೇ ಇರಲಿ ಪುರಾಣದಿಂದ ನಮ್ಮ ಆತ್ಮಜ್ಞಾನ ಆತ್ಮಾವಲೋಕನ ಆತ್ಮಪರಿಶೀಲನೆ,ಆತ್ಮಸಂಶೋಧನೆಯಿಂದ ಆತ್ಮತೃಪ್ತಿ ಸಿಗುವುದೆನ್ನುವುದು ಸತ್ಯ.ಆದರೆ ಅದರೊಳಗೆ ಹೊಕ್ಕಿ ಸತ್ಯ ತಿಳಿದು ನಡೆದವರಿಗೆ ಇದು ಸಾಧ್ಯವಾಗಿದೆ.  ನೆಡೆದವರು ಕಣ್ಮರೆಯಾಗಿದ್ದಾರೆ. ಕಣ್ಣಿಗೆ ಕಾಣೋರು ನಡೆಯುತ್ತಿಲ್ಲ. ನಡೆಯುವವರನ್ನು ಮಧ್ಯವರ್ತಿಗಳು ಮುಂದೆ ಹೋಗದಂತೆ ತಡೆಹಿಡಿದಿರುವರೆಂದರೆ  ಯಾರನ್ನು ಯಾರು ತಡೆಯಬೇಕಿತ್ತು.ತಡೆಯುತ್ತಿರುವವರು ಯಾರು? ಇದರಲ್ಲಿ ಲಾಭ ನಷ್ಟ ಯಾರಿಗೆ? 
ತಾಳುವಿಕೆಗಿಂತ ತಪವಿಲ್ಲ ಎನ್ನುವರು ‌.ಹೀಗಾಗಿ ಆತ್ಮಾವಲೋಕನ  ನಿಧಾನವಾದರೂ ಆಗಲೇಬೇಕಿದೆ.ಕಾರಣ ಒಳಗೇ ಅಡಗಿರುವ ದಿವ್ಯಾತ್ಮನ ಅರಿಯದ ಅರಿವಿನಿಂದ  ಸಾಧನೆ  ಹೊರಗಿನವರಿಗೆ‌ ಕಂಡರೂ ತಾತ್ಕಾಲಿಕ ವಷ್ಟೆ.
ಹಿಂದಿನ ಎಲ್ಲಾ ‌ದೇವತೆಗಳು ಮಾನವರು ಅಸುರರು ಎಲ್ಲಿರೋದು? ಪ್ರತಿಮೆಯಲ್ಲೋ ಪ್ರತಿಭೆಯಲ್ಲೋ?
ಪ್ರತಿಮೆ‌ಮಾತನಾಡದು ಮಾಡಿ ಪೂಜಿಸಬಹುದು. ಆದೇ ಪ್ರತಿಭೆ  ಆಡೋದೊಂದು‌ ಮಾಡೋದೊಂದಾಗಿ‌ನಾಟಕ ಹೆಚ್ಚಾಗಿ  ಆತ್ಮವಂಚನೆಯಿಂದ ಮನರಂಜನೆಗೂ ಇಳಿಯಬಹುದು. ಎರಡೂ ರೀತಿಯಲ್ಲಿ ಸತ್ಯವಿದೆ.ಒಳಗಿನ ಸತ್ಯ  ಹಿಂದುಳಿದಿದೆ.ಇದಕ್ಕೆ ಕಾರಣ ನಾವೇ ಹಿಂದೂಗಳೆಂದರೂ ತಪ್ಪು ಎನ್ನುತ್ತೇವೆ. ಒಳಗಿನ ಸಮಸ್ಯೆಗೆ ಪರಿಹಾರ ಹೊರಗೆ ಹುಡುಕಿದರೆ ಸಿಗದು.  ಪರಿಪೂರ್ಣ ತೆ ಆತ್ಮಜ್ಞಾನದಿಂದಷ್ಟೆ ಸಿಗೋದು ಎಂದರೆ ಓದಲು ಸಾಕಷ್ಟು ಗ್ರಂಥವಿದ್ದರೂ  ಯಾವುದನ್ನು ಓದಿದರೆ ಉತ್ತಮ ಅಧಮ ಎನ್ನುವ ಬಗ್ಗೆ  ತಿಳಿದವರು ತಿಳಿಸಿ ಕಲಿಸಿ ಬೆಳೆಸುವುದೇ ಧರ್ಮ. ಈಗ ಹೇಗಿದೆ?
ನಮ್ಮ ಭಾರತೀಯ ಶಿಕ್ಷಣ ಪತ್ರಿಕೆ ನೆಡೆಸುವಾಗಿನ ಹಲವು ಅನುಭವದ ಸತ್ಯದ ಪ್ರಕಾರ ನಮ್ಮ ದೇಶ ಶಿಕ್ಷಣದಿಂದ ಹಿಂದುಳಿದಿದೆ, ಶಿಕ್ಷಣವೇ ಪರರ ವಶದಲ್ಲಿ ರುವಾಗ ನಮ್ಮ ತನ ಏನಿರುತ್ತದೆ? ಹೋಗಲಿ ಮನೆಯೊಳಗೆ ಕಲಿಸೋಣವೆಂದರೆ ಮನೆಯವರ  ವಿರೋಧವಿದೆ ಎಂದರೆ ಒಳಗೇ ಸರಿಯಿಲ್ಲದೆ ಹೊರಗೆ ತೇಪೆಹಾಕಿ ಬಣ್ಣ ಹಚ್ಚುವ  ಕೆಲಸ ಸಾಕಷ್ಟು ನೆಡೆದಿದೆ. ತೇಪೆ ಒಮ್ಮೆ ಕಳಚೋದೆ ಎಂದಾಗ
ಒಳಗಿನ  ಶಕ್ತಿ ಜಾಗೃತವಿದ್ದರೆ ಉತ್ತಮ. 
ಏನೂ ಅರಿವಿಲ್ಲದ ಮಕ್ಕಳಿಗೆ ಕಲಿಸುವುದು ಸುಲಭ.ಆದರೆ ಅರಿವು ಯಾವ ದಿಕ್ಕಿನಲ್ಲಿ ನೆಡಸುವುದೆನ್ನುವ ಅರಿವು ಪೋಷಕರಿಗೆ ಇದ್ದರೆ ಮಕ್ಕಳ ಭವಿಷ್ಯ ವೂ ಉತ್ತಮವಿರುತ್ತದೆ.
ಕಲಿಯುಗ ಪ್ರಭಾವದಿಂದಾಗಿ  ಒಂದೇ ಮನೆಯಲ್ಲಿ ಶತ್ರುಗಳು ಹೆಚ್ಚಾಗಿರುವಾಗ  ಹೊರಗಿನಿಂದ ಅವರನ್ನು ಒಂದು ಮಾಡಲು ಹೊರಗಿನ ಶಿಕ್ಷಣ ಸತ್ವಯುತ,ಸತ್ಯ ಹಾಗು ತತ್ವಯುತ  ಆಗಿದ್ದರೆ  ಇದ್ದಲ್ಲಿಯೇ ಬದಲಾವಣೆ. ಹೊರಗಿನಿಂದ ಸಾಲ ತಂದು ಮನೆ ನೆಡೆಸುವುದು ಸ
ಅನಿವಾರ್ಯ ಆದರೂ ಯಾರ ಹತ್ತ್ತಿರ  ಸಾಲ ಪಡೆದೆವು ಎನ್ನುವ ಸೂಕ್ಮವೂ ಮುಖ್ಯ. ತೀರಿಸುವಷ್ಟು  ಚೈತನ್ಯಶಕ್ತಿ ಇದ್ದರೆ  ಅದೇ ಪುಣ್ಯ. ಭಾರತೀಯ ಶಿಕ್ಷಣ ಪದ್ದತಿ ಸರಳ ಸುಲಭ ಸಾಮಾನ್ಯ ಜ್ಞಾನದಿಂದ ವಿಶೇಷಜ್ಞಾನ ಆತ್ಮಜ್ಞಾನಕ್ಕೆ ಒತ್ತುಕೊಡುತ್ತದೆ. ಯಾವಾಗ ಇದು ಹೊರಗಿನ ವಿಶೇಷ ಜ್ಞಾನದಡಿ ಸಿಲುಕಿತೋ  ಆಗಲೇ ಕೆಳಮಟ್ಟದ ಚಿಂತನೆ ಮೇಲೆ ಏರಿತು. ಜ್ಞಾನವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ ಭೂಮಿಯಲ್ಲಿರುವವರಿಗೆ ಅಗತ್ಯ. ಭೂಮಿ ಹಾಳಾಗಲು ಮಾನವನೆ ಕಾರಣ.ಮನಸ್ಸೇ ಎಲ್ಲದ್ದಕ್ಕೂ ಕಾರಣ. ಯಾವಾಗ ಯಾರ ಮನಸ್ಸು  ಬದಲಾಗುವುದೆನ್ನುವುದು ಯಾರಿಗೂ ತಿಳಿಯದು ಎಂದರೆ ಪರಮಾತ್ಮನ  ಕಾಣೋದಕ್ಕೆ  ಕಾಡುಮೇಡು ಅಲೆದವರು ಇಂದಿಲ್ಲ ಕಾರಣ ಸುತ್ತಲುಕಾಡೇ ಇಲ್ಲ. ಕಾಡುಪ್ರಾಣಿಗಳು  ನಾಡಿಗೆ ಬರುವಂತಹ ಪರಿಸ್ಥಿತಿ ತಂದವರು ಯಾರು? 
ಪ್ರಾಣಿ ಪಕ್ಷಿ ಗಳೊಗಿರುವಷ್ಟು ಸ್ವತಂತ್ರ ಜೀವನ ಮಾನವನೊಳಗಿಲ್ಲವೆ? ಇದ್ದರೂ ಕಂಡುಕೊಳ್ಳುವ ಶಿಕ್ಷಣವಿಲ್ಲ.
ಇದಕ್ಕೆ ಪರಕೀಯರು ಕಾರಣವಲ್ಲ ನಮ್ಮ ಅಂತರವೇ ಕಾರಣ.
ಆದರೂ  ಹಿಂದಿರುಗಿ ಬರಲಾಗುತ್ತಿಲ್ಲ ಎಂದರೆ  ನಮ್ಮ ಅಹಂಕಾರ ಸ್ವಾರ್ಥ ಚಿಂತನೆ ಹೊರಗೆ ಬೆಳೆದು ನಿಂತಿದೆ

ತತ್ವಜ್ಞಾನದಿಂದ ಸ್ವತಂತ್ರ ಜ್ಞಾನ

ಹಿಂದುತ್ವ‌ಜಾಗೃತವಾದರೆ‌ಹಿಂದೂ ಧರ್ಮ ಉಳಿಯುತ್ತದೆ ಎಂದು ಎಲ್ಲಾ ಹೇಳುವರು ಹಾಗಾದರೆ ಹಿಂದುತ್ವ‌ಹೇಳೋದೇನು? ತತ್ವ ಯಾವತ್ತೂ ಪರಮಾತ್ಮನ ಸತ್ಯದಲ್ಲಿ ಧರ್ಮದಲ್ಲಿ ಕಾಣಬೇಕೆನ್ನುತ್ತದೆ.ಸತ್ಯ ಯಾವುದು ಧರ್ಮ ಎಲ್ಲಿದೆ? ಎಂದರೆ ಎರಡೂ ನಮ್ಮೊಳಗೇ ಅಡಗಿರುವ ಅಂತರಾತ್ಮದೊಳಗಿದೆ.ಇದನ್ನು ತಿಳಿಯಲೆಂದೇ ಅಧ್ಯಾತ್ಮ ಸಂಶೋಧನೆಯಾಗಿದೆ. ಸಂಶೋಧಕರು  ನಮ್ಮ ಮಹಾಗುರು ಹಿರಿಯರು, ಸಾದು ಸಂತ ದಾಸ ಶರಣರಾಗಿದ್ದರು. ಹಾಗಾದರೆ
ಹಿಂದುತ್ವ ಇದ್ದದ್ದು ಹಿಂದಿನ‌ಮಹಾತ್ಮರೊಳಗೆ ಅವರ ನಡೆ ನುಡಿಯೊಳಗೆ ಅವರ  ಸಾತ್ವಿಕ ಗುಣಗಳ ಒಳಗೆ, ಅವರು ರಾಜಕೀಯದೆಡೆಗೆ ನಡೆಯದೆಯೇ  ಯಾರನ್ನೋ ಆಳದೆಯೇ  ಪರಮಾತ್ಮನನ್ನು  ಕಂಡಿದ್ದರೆಂದರೆ ಹಿಂದುತ್ವಕ್ಕೆ ಮುಖ್ಯವಾಗಿ ಬೇಕಾಗಿರೋದು ಪರಮಸತ್ಯ ಧರ್ಮ ದ ಶಿಕ್ಷಣವಾಗಿತ್ತು.
ಹಿಂದಿನ ಗುರುಕುಲದಲ್ಲಿ ಗುರುಗಳಾಶ್ರಯದಲ್ಲಿ ಶಿಷ್ಯರು ಕಲಿತು  ತನ್ನ ತಾನರಿತು  ಸಂಸಾರವನ್ನು ಅರ್ಥ ಮಾಡಿಕೊಂಡು ಸ್ವತಂತ್ರ ಜ್ಞಾನದಿಂದ  ಎಲ್ಲರೊಂದಿಗೆ ಬಾಳಿ ಬದುಕುವುದು ತತ್ವದ ಉದ್ದೇಶ ವಾಗಿತ್ತು. ಈಗ  ಕಾಲ ಬದಲಾಗಿದೆ  ಆದರೂ  ತತ್ವದ ಉದ್ದೇಶ ಎಲ್ಲರನ್ನೂ ಒಂದು ಮಾಡೋದಾಗಿ  ಹಣದಿಂದ ,ರಾಜಕೀಯ ಶಕ್ತಿಯಿಂದ  ಹೊರಗೆ ನಡೆದು ಒಳಗೇ ಅಡಗಿದ್ದ ಬ್ರಹ್ಮತತ್ವ ಕಾಣದೆ ಹಿಂದುಳಿದಿದೆ. ಇದನ್ನು  ತಂತ್ರದಿಂದ ಜೋಡಿಸುವುದಕ್ಕೂ ಕಷ್ಟ.ತಾತ್ಕಾಲಿಕವಾಗಿ  ಪರಿಹಾರ ಸಿಕ್ಕಿದರೂ ಒಳಗೇ ಅಡಗಿದ್ದ ದ್ವೇಷ ಭಿನ್ನಾಭಿಪ್ರಾಯ ಅಸೂಯೆ ಎನ್ನುವ  ದುಷ್ಟಶಕ್ತಿ ಯಾವಾಗ  ಎದ್ದು ನಿಲ್ಲುವುದೋ  ಗೊತ್ತಿಲ್ಲ. ಇದಕ್ಕಾಗಿ ನಾಟಕದ‌ಜಗತ್ತು ಬೆಳೆದಿದೆ. ಜೀವನವೇ ಒಂದು ನಾಟಕರಂಗ.ಇದರಲ್ಲಿ ಪಾತ್ರಧಾರಿಗಳಾದ ಮಾನವರಿಗೆ ಮೇಲಿನ‌ ಪರಮಾತ್ಮನ ಅರ್ಥ ಮಾಡಿಕೊಳ್ಳಲು ಪರಮ ಸತ್ಯ ಧರ್ಮದ  ಶಿಕ್ಷಣದ‌ಕೊರತೆಯಿದೆ. ಶಿಕ್ಷಣವೇ ವ್ಯವಹಾರಕ್ಕೆ ಸೀಮಿತವಾದಾಗ ಧರ್ಮ ಎಲ್ಲಿರುವುದು?ಉಚಿತವಾಗಿ ಭೌತವಿಜ್ಞಾನ ಶಿಕ್ಷಣದ ಜೊತೆಗೆ ಅಧ್ಯಾತ್ಮ ವಿಜ್ಞಾನದ ಶಿಕ್ಷಣವೂ ಕೆಲವರಿಗೆ  ಬೇರೆ ಬೇರೆಯಾಗಿ ಸಿಕ್ಕಿದ್ದರೂ ಇವೆರಡರ ಮಧ್ಯೆ ನಿಂತ ಸಾಮಾನ್ಯಜ್ಞಾನಕ್ಕೆ ಸರಿಯಾದ ಶಿಕ್ಷಣ ಸಿಗದವರು ಅತಂತ್ರಸ್ಥಿತಿಗೆ ತಲುಪಿರೋದು ಭಾರತಕ್ಕೆ ತುಂಬಲಾರದ ನಷ್ಟಕ್ಕೆ ಕಾರಣ. ಒಟ್ಟಿನಲ್ಲಿ ಮನುಕುಲಕ್ಕೆ ಸಾಮಾನ್ಯಜ್ಞಾನ ಅಗತ್ಯವಿದೆ. ನಮ್ಮ ಅಧ್ಯಾತ್ಮ ಸಾಧಕರು ಹೆಚ್ಚಾಗಿ ಸಾಮಾನ್ಯ ಸರಳ ಸುಲಭವಾಗಿ ಅರ್ಥ ವಾಗುವ ತತ್ವದಿಂದ ಪರಮಾತ್ಮನ ದರ್ಶನ ಮಾಡಿದ್ದರೆಂದರೆ ಇದು ಎಲ್ಲರೊಳಗೂ ಇರುವ ಜ್ಞಾನ.ಇದನ್ನು ಸದ್ಬಳಕೆ ಮಾಡಿಕೊಳ್ಳಲು ಸ್ವಯಂ ಪ್ರಯತ್ನ ಬೇಕು.ಸ್ವತಂತ್ರ  ಜೀವನ ಅಗತ್ಯ.ಇಂದು ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂನಮ್ಮ  ಶಿಕ್ಷಣ ಪಡೆಯಲು ಸ್ವಾತಂತ್ರ್ಯ ವಿಲ್ಲವೆಂದರೆ  ತಂತ್ರಕ್ಕೆ ಕೊಡುವ ಸಹಕಾರ ತತ್ವಕ್ಕೆ ಕೊಡದೆ ನಮ್ಮವರ ಸತ್ಯಕ್ಕೆ ಬೆಲೆ ಕೊಡದೆ ಪರರ ಸತ್ಯಕ್ಕೆ ಮಣೆಹಾಕುವ ಸಂಸ್ಕೃತಿ,ಸಂಸ್ಕಾರ ಆಗಿದೆಯೆ?
ನಮ್ಮ ಮಕ್ಕಳ ಭವಿಷ್ಯ ಹೊರಗಿನವರಲ್ಲಿದೆಯೆ? ಹೊರಗಿನ ಶಿಕ್ಷಣದಿಂದ ಆತ್ಮನಿರ್ಭರ ಆಗಬಹುದೆ? ಭೌತಿಕದಲ್ಲಿ ಸಾಕಷ್ಟು ಸಂಶೋಧಕರಿದ್ದರೂ ಅಧ್ಯಾತ್ಮ ಸಂಶೋದನೆ ಆಗದಿದ್ದರೆ‌ಪುರಾಣ ಇತಿಹಾಸದ ಸತ್ಯಾಸತ್ಯತೆಯನ್ನು ಅಪಾರ್ಥ ಮಾಡಿಕೊಂಡು ಜನರನ್ನು ಆಳೋರೇ ಬೆಳೆಯೋದು. ರಾಜಪ್ರಭುತ್ವದ  ಅಂದಿನ  ಕಾಲದ ಧರ್ಮ ನೀತಿಗೂ ಪ್ರಜಾಪ್ರಭುತ್ವದ ಇಂದಿನ ರೀತಿ ನೀತಿಗೂ ವ್ಯತ್ಯಾಸದಲ್ಲಿ ಬಹಳಷ್ಟು ಅಸತ್ಯ ಅಧರ್ಮ ಅನ್ಯಾಯ ಭ್ರಷ್ಟತೆ  ತನ್ನ ಸ್ವಾರ್ಥ ಸುಖಕ್ಕಾಗಿ  ಆವರಿಸಿಕೊಂಡು ಜನರ ಒಳ್ಳೆಯ ಗುಣವನ್ನು ತಿರಸ್ಕರಿಸಿ  ಇಲ್ಲದ ದ್ವೇಷ ಹುಟ್ಟಿಸಿ  ಮನೆಯಿಂದ ಹೊರಬಂದು ಮೂಲದಿಂದ ದೂರಮಾಡಿದೆ.
ಇದು ಕಲಿಪ್ರಭಾವ ಎಂದು ಸುಮ್ಮನೆ ಕೂರಬಹುದೆ?
ಆ ಪರಮಾತ್ಮನ ಲೀಲೆ ಎಂದು ಒಪ್ಪಬಹುದೆ? ಸಾಧ್ಯವಾಗಿದ್ದರೆ ಈ ಹೋರಾಟ ಹಾರಾಟ ಮಾರಾಟವೇ ಇರುತ್ತಿರಲಿಲ್ಲ.ಒಟ್ಟಿನಲ್ಲಿ ಹೋರಾಟ ಒಳಗಿನ ಆತ್ಮತತ್ವದೆಡೆಗೆ ನೆಡೆದರೆ ನಮ್ಮ ತಪ್ಪು ನಮಗೆ ಕಾಣೋದು.ನಾವು ಬದಲಾಗದೆ ಯಾರನ್ನೋ ಬದಲಾವಣೆ ಮಾಡಲಾಗದು ಎಂದು ತತ್ವ ತಿಳಿಸುತ್ತದೆ. ಪರಮಾತ್ಮ ಇರೋದು  ಸತ್ಯ,ಸತ್ಯವೇ ದೇವರು  ಇದು ಎರಡು ರೀತಿಯಲ್ಲಿ ವಿರುದ್ದ ದಿಕ್ಕಿನಲ್ಲಿ ನಡೆದಿದ್ದರೂ ಒಂದೇ ಶಕ್ತಿಯ ಅಧೀನದಲ್ಲಿರುವುದೆ ಅದ್ವೈತ ತತ್ವ. ಅದ್ವೈತ ದೊಳಗೆ ದ್ವೈತ ಕಾಣುವಾಗ  ಎರಡೂ ಸತ್ಯ. ನಾನಿಲ್ಲದ ನೀನಿಲ್ಲ.ನೀನಿಲ್ಲದ ಜಗತ್ತಿಲ್ಲ. ಹಾಗಾದರೆ ನೀನ್ಯಾರು? ನಾನ್ಯಾರು?  ಉತ್ತರ ಒಳಗಿನಿಂದ ಸಿಕ್ಕಿದರೆ ತತ್ವ ಹೊರಗೆ ಹುಡುಕಿದರೆ ತಂತ್ರ.ತಂತ್ರ ಸದ್ಬಳಕೆಯಾದರೆ ಸ್ವತಂತ್ರ. ದುರ್ಭಳಕೆ ಆದರೆ ಅತಂತ್ರ ಜೀವನ. ಅತಂತ್ರಸ್ಥಿತಿಗೆ ತಲುಪಿದವರನ್ನು ಕುತಂತ್ರದಿಂದ ಆಳೋದೆ ಅಸುರಿ ಶಕ್ತಿ.
ಎಲ್ಲರನ್ನೂ ನಡೆಸೋ ಒಂದೇ ಶಕ್ತಿಯನ್ನು ಎಲ್ಲಾ ಒಂದೇ ರೀತಿ ಅರ್ಥ ಮಾಡಿಕೊಳ್ಳಲು ಅಸಾಧ್ಯ.ಹೀಗಿರುವಾಗ ನಮ್ಮ ಆತ್ಮಕ್ಕೆ ತೃಪ್ತಿ ಸಿಗುವ  ಸ್ವಧರ್ಮ  ಸತ್ಕರ್ಮ  ನಮ್ಮಲ್ಲಿ ಇದ್ದರೆ ಅದೇ  ತತ್ವ. ಜೀವಾತ್ಮನು ಪರಮಾತ್ಮನ ಸೇರೋದೆ  ಯೋಗ.
ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲ. ಭೂಮಿಗಿಂತ ದೊಡ್ಡ ತಾಯಿಯಿಲ್ಲ. ಕಾರಣ ಈ ಭೂಮಿಗೆ ಬರೋದಕ್ಕೆ  ಕಾರಣವೆ ಋಣ ಮತ್ತು ಕರ್ಮ. ಇದನ್ನು ತೀರಿಸಲು ತತ್ವಜ್ಞಾನ ಅಗತ್ಯ. ಯಾರ ಸಾಲ ಯಾರೋ ತೀರಿಸಬಹುದೆ? ದೇಶದ ಸಾಲ ವಿದೇಶಿಗರು ತೀರಿಸಬಹುದೆ?  ಸರಳವಾಗಿರುವ ತತ್ವ ಬಿಟ್ಟು ಕ್ಲಿಷ್ಟವಾದ ತಂತ್ರದಡಿ ಜೀವ ಸಿಲುಕಿದಾಗ ಸ್ವತಂತ್ರ  ಮರೆಯಾಗುತ್ತದೆ.

Thursday, May 23, 2024

ಬುದ್ದ ಬುದ್ದಿವಂತಿಕೆಯಲ್ಲಿರುವರೆ?

ಬುದ್ದ‌ಜಯಂತಿಯ ಶುಭಾಶಯಗಳು
ಭಗವಾನ್ ಬುದ್ದನನ್ನು ವಿಷ್ಣುವಿನ‌ಒಂದು ಅವತಾರವೆನ್ನುವರು , ಕೆಲವರು ಅಲ್ಲ ಎನ್ನುವರು. ಹಿಂದೂಗಳ ಒಂದು ಸಮಸ್ಯೆ ಯೆಂದರೆ ಈ ಅಲ್ಲ ಪದವನ್ನು ಹೆಚ್ಚಾಗಿ ಬಳಸುತ್ತಾ ನಾನೇ ಎಲ್ಲಾ ಎನ್ನುವುದಾಗಿದೆ. ಇದರ ಪ್ರಭಾವದಿಂದಾಗಿ ಎಲ್ಲೆಡೆ ಅಲ್ಲ ಬೆಳೆದಿರುವುದಾಗಿದೆ.ಒಂದು ಪದದ ಅರ್ಥ ಏನೇ ಇರಲಿ ಅದನ್ನು ಬಳಸುವಾಗ  ನಮಗೆ  ಅದರಿಂದ. ಲಾಭವೋ ನಷ್ಟವೋ ಎನ್ನುವ ಜ್ಞಾನ ಅಗತ್ಯ.
ಅತಿಸೂಕ್ಮವಾಗಿರುವ ಈ ವಿಚಾರ  ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದರೂ ಎಲ್ಲರೂ ಗಮನಿಸೋದಿಲ್ಲ.
ಒಂದೊಂದು  ಮಾತಿಗೂ ಮೇಲಿರುವ ದೇವತೆಗಳು ಅಸ್ತು ಎನ್ನುವರಂತೆ ಎಂದು ನಮಗೆ ಹಿಂದೆ ಹಿರಿಯರು ತಿಳಿಸುತ್ತಿದ್ದರು.ಅದಕ್ಕೆ ಒಳ್ಳೆಯ ಮಾತಾಡಬೇಕು ಒಳ್ಳೆಯದನ್ನು ‌ಕೇಳಬೇಕು,ಹೇಳಬೇಕು ಕೇಳಿಸಿಕೊಳ್ಳಬೇಕು ವಿರೋಧಿಸಬಾರದು ಹೀಗೇ ಉಪದೇಶ‌ಮಾಡುತ್ತಾ ಬೆಳೆಸಿದ ಗುರುಹಿರಿಯರ ಮಾತಿಗೆ ಇಂದಿನ‌ಯುವ ಜನತೆ ಅಲ್ಲಗೆಳೆದು  ದೇವರೇ ಅಲ್ಲ ಎನ್ನುವ‌ಮಟ್ಟಿಗೆ ಬೆಳೆದಿರೋದು. ಕೆಟ್ಟದ್ದನ್ನು ಹೇಳಿ,ಕೇಳಿ,ನೋಡಿ,ಮಾಡೋದನ್ನು ಅಲ್ಲಗೆಳೆದಿದ್ದರೆ ದೈವತ್ವ ಒಳಗೇ ಬೆಳೆಯುತ್ತಿತ್ತು.ಇರಲಿ ಕಾಲದ ಪ್ರಭಾವ.
ಬುದ್ದನ  ಜ್ಞಾನ,ಪ್ರಜ್ಞೆ ಸನಾತನ ಧರ್ಮದಲ್ಲಿ ವಿರೋಧಿಸಿ  ಹಲವು‌ ಬದಲಾವಣೆಗಳು ಕಾಲಕ್ಕೆ ತಕ್ಕಂತೆ ‌ನಡೆದಿವೆ. ಈಗಲೂ  ಬದಲಾಗೋದು ಅಗತ್ಯವಾಗಿದೆ. 
ತತ್ವದ ಪ್ರಕಾರ ಬದಲಾವಣೆ ಆದಾಗ ಜಗತ್ತಿನಲ್ಲಿ ಧರ್ಮ ವಿರುತ್ತದೆ. ತಂತ್ರವೇ‌ಬೆಳೆದಾಗ ಅತಂತ್ರಸ್ಥಿತಿಗೆ ಮನುಕುಲ ತಲುಪುತ್ತದೆ.
ಬುದ್ದನ‌ಪ್ರಕಾರ ಆಸೆಯೇ ದು:ಖಕ್ಕೆ ಕಾರಣ ಇದನ್ನುಈಗ ಅತಿಆಸೆಯೇ ದು:ಖಕ್ಕೆ ಕಾರಣವೆನ್ನಬಹುದು.
'ಸತ್ಯಂ ವದ ಧರ್ಮಂ ಚರ' ಇಲ್ಲಿ ಅಧ್ಯಾತ್ಮ ಸತ್ಯ ಬಿಟ್ಟು ಭೌತಿಕ ಸತ್ಯದ ಹಿಂದೆ ನಡೆದಾಗ  ಧರ್ಮ ದ ದಿಕ್ಕು ಬದಲಾಗುತ್ತದೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಒಳಗಿನ ಧರ್ಮ ಸತ್ಯದೆಡೆಗೆ ನಡೆಯುತ್ತಾ  ಹೋದರೆ ಶಾಂತಿ ಸಿಗುತ್ತದೆ.
ಅಹಿಂಸೋ ಪರಮೋಧರ್ಮ:
ಹಿಂಸೆಗೆ ಕಾರಣವೇ ಅಕರ್ಮ, ಅಜ್ಞಾನವಾದಾಗ  ಯಾವುದನ್ನು ಹೇಗೆ ತಿಳಿಯಬೇಕೆನ್ನುವ ಶಿಕ್ಷಣವನ್ನು  ಮಕ್ಕಳ ಮನಸ್ಸಿಗೆ ಹಿಂಸೆ ಆಗದಂತೆ  ತಿಳಿಸುವುದೇ  ಗುರುವಿನ ಲಕ್ಷಣ.
ನಲಿಕಲಿ ಅಭಿಯಾನ್‌ಮೂಲಕ ಸರ್ಕಾರದ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪದ್ದತಿ  ಆರಂಭಿಸಿದ್ದರೂ ಅನಗತ್ಯ  ಪ್ರಭುದ್ದ ವಿಷಯಗಳನ್ನು ತಲೆಗೆ ತುಂಬುವುದರ ಮೂಲಕ ಮಕ್ಕಳ‌
ಮುದ್ಗತೆ ಹಾಳಾಗುತ್ತಾ‌ಹಿಂಸೆ ಬೆಳೆಯಿತು. ಇದರಿಂದಾಗಿ ಜ್ಞಾನ ಬಂದಿತೆ? ಅಜ್ಞಾನ ಮಿತಿಮೀರಿತೆ? ಹೀಗೆ‌ನಾವು‌ಹಿಂದಿನ ಮಹಾತ್ಮರುಗಳೇ  ಮನೆ ಬಿಟ್ಟು ಸಂನ್ಯಾಸಿಯಾಗಿ ದೇವರಾಗಿದ್ದಾರೆಂದು ಅಪಾರ್ಥ ‌ಮಾಡಿಕೊಂಡು ಎಲ್ಲಾ ಸಂಸಾರದ ಸುಖ ಅನುಭವಿಸಿ ಕೊನೆಗೆ ಕಷ್ಟವೆಂದು ಹೆಂಡತಿ‌ಮಕ್ಕಳನ್ನು ನಡುನೀರಿನಲ್ಲಿ ಬಿಟ್ಟು  ಹೊರಬಂದರೆ  ಅಜ್ಞಾನವಷ್ಟೆ.
ಶ್ರೀ ಕೃಷ್ಣ ಪರಮಾತ್ಮನೇ  ಸಾವಿರಾರು ಸ್ತ್ರೀ ಯರನ್ನು ಮದುವೆ ಆಗಿರುವಾಗ‌ನಾವ್ಯಾಕೆ ಆಗಬಾರದು ಎಂದರೆ ಅಧರ್ಮ ಅಜ್ಞಾನ ವಷ್ಟೆ. ಶ್ರೀ ರಾಮಚಂದ್ರನೇ  ಯಾರೋ ಸಾಮಾನ್ಯ ಪ್ರಜೆಯ ಮಾತಿಗೆ ಧರ್ಮ ಪತ್ನಿಯನ್ನು ತೊರೆದು ನಡೆದಾಗ ನಮ್ಮಂತಹ ಸಾಮಾನ್ಯರು ಯಾವ‌ಲೆಕ್ಕ?ಎಂದರೂ ಅಜ್ಞಾನ.
ಕಾರಣವಿಷ್ಟೆ ಮನುಕುಲದ ಒಳಗೇ ಹೊರಗೆ  ಇರುವ‌ ಈ ಪರಮಾತ್ಮನ ಶಕ್ತಿಯನ್ನು  ಒಳಹೊಕ್ಕಿ ಅರ್ಥ ಮಾಡಿಕೊಳ್ಳುವುದು ಅಧ್ಯಾತ್ಮ ಸತ್ಯ, ಹೊರಗಿನ ಮಿಥ್ಯ ಭೌತಿಕ ಸತ್ಯ. ಆ ಕಾಲಕ್ಕೆ ಧರ್ಮ ಸಂಸ್ಥಾಪನೆಗಾಗಿ  ಅಂದಿನ‌ಜನರ ಮನಸ್ಥಿತಿ,ಪರಿಸರದ ಪರಿಸ್ಥಿತಿ ಆರ್ಥಿಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನು ಸೂಕ್ಮ ವಾಗಿ ಗಮನಿಸಿದಾಗ  ಒಂದು ಮಾಡುವ ತತ್ವ ಒಂದೆಡೆ ಕಂಡರೆ ಬೇರೆ ಮಾಡುವ ತಂತ್ರ ಮತ್ತೊಂದು ಕಡೆ ಕಾಣುತ್ತದೆ. ಬೇರೆ ಮಾಡುತ್ತಾ ದೇಶದ ಜೊತೆಗೆ ಜನರನ್ನು ಆಳಿ ಅಳಿಸಿದವರು ಅಸುರರಾದರೆ ಒಂದು ಮಾಡಿ  ಒಗ್ಗಟ್ಟಿನಿಂದ ಹೋರಾಟ ಮಾಡಿ ತಮ್ಮ ಆತ್ಮರಕ್ಷಣೆ ಮಾಡಿಕೊಂಡವರು  ಭಕ್ತರು ದೇವರು. ಹೀಗಾಗಿ ಯಾವುದೇ‌ಮಹಾತ್ಮರ ಜಯಂತಿಯಲ್ಲಿ ಅವರ ಆತ್ಮಕಥೆ ಅರ್ಥ ಮಾಡಿಕೊಳ್ಳಲು ಸುಜ್ಞಾನ ಬೇಕಿದೆ.

ಬುದ್ದನಂತಹ  ಮಹಾಜ್ಞಾನಿಗಳು  ಬೆಳೆಯುವುದು ಕಷ್ಟ.ತನ್ನ ಕರ್ತವ್ಯ ದಲ್ಲಿ ಬದ್ದನಾಗಿದ್ದರೆ ಸಾಧ್ಯ.  ಪ್ರಜಾಪ್ರಭುತ್ವದ ಈ ದೇಶದಲ್ಲಂತೂ ಎಲ್ಲದ್ದಕ್ಕೂ ಅಲ್ಲ ಎನ್ನುವವರು‌ ಬೆಳೆದರಂತು ಅಲ್ಲಾನೇ ಬೆಳೆಯೋದು ಸಹಜ. 
ಸನಾತನಧರ್ಮದ ಸತ್ಯ ಸತ್ವ‌ತತ್ವವರಿಯದೆ ಜನರು ಅಧರ್ಮಿ ಗಳಾಗಿ ಹಿಂಸಾಕೃತ್ಯಗಳಿಗೆ ತೊಡಗಿದಾಗ‌
ಮಹಾತ್ಮರುಗಳು ಮಹಾಸಂನ್ಯಾಸಿಗಳು ಜನ್ಮಪಡೆದು ಧರ್ಮ ವನ್ನು ಎತ್ತಿ ಹಿಡಿದಿರುವ ಈ ಭಾರತ ಇಂದು
ಅಧರ್ಮಿಗಳಿಗೆ‌ ಮತ್ತೆ ಮಣೆಹಾಕಿಕೊಂಡು  ರಾಜಕೀಯದ ಸುಳಿಯಲ್ಲಿದೆ. ಇದಕ್ಕೆ ಕಾರಣವೇ  ನಮ್ಮ ಶಿಕ್ಷಣ ಪದ್ದತಿ. ಇಲ್ಲಿ ತತ್ವವೇ  ಇಲ್ಲದ ತಂತ್ರ ಮಕ್ಕಳು ಮಹಿಳೆಯರನ್ನು ಹೊರಗೆಳೆಯುವಲ್ಲಿ ಯಶಸ್ವಿ ಆಗಿದ್ದು ಮನೆಮನೆಯೊಳಗೆ  ಇರಬೇಕಾದ ದೈವೀಕ  ಪ್ರಜ್ಞೆ ಹಿಂದುಳಿದಾಗ  ಅಸುರಿ ಶಕ್ತಿ ಜಾಗೃತವಾಗೋದು ಸಹಜ.
ಅಸುರಿ ಶಕ್ತಿ  ದೇಹದಲ್ಲಿ ಶಕ್ತಿಯಿರೋವರೆಗೂ ಕುಣಿಸುತ್ತದೆ ನಂತರ ಬಿಟ್ಟು ದೂರವಾದರೆ ದೈವೀ ಶಕ್ತಿ  ಶಕ್ತಿಯನ್ನು  ಸದ್ಬಳಕೆ ಮಾಡಿಕೊಂಡು  ಉಸಿರಿರುವರೆಗೂ ನೆಡೆಸುತ್ತದೆ.
ಹಾಗಾದರೆ ದೇವರಿಗೆ ಮಾಡೋರೆಲ್ಲರೂ‌  ಉತ್ತಮರೆ ಎಂದರೆ ತಪ್ಪು ‌ದೈವತ್ವ ಹೊಂದಿದವರು ಉತ್ತಮರಾಗಿದ್ದರು. ತತ್ವ ಒಂದು ಮಾಡುತ್ತದೆ ತಂತ್ರ  ಬೇರೆ ಮಾಡುತ್ತದೆ.
ಅಪಾರ್ಥ ಮಾಡಿಕೊಂಡು ತತ್ವವನ್ನು  ಒಂದಾಗಿ ಕಾಣದೆ ದ್ವೇಷ,ಭಿನ್ನಾಭಿಪ್ರಾಯ, ಜಗಳ, ಮನಸ್ತಾಪ ಬೆಳೆದಾಗ ಅಲ್ಲಿ ತಂತ್ರ ಪ್ರವೇಶವಾಗಿ‌ಮಾನವ ಯಂತ್ರದ ವಶವಾಗೋದು.
ಯಾಂತ್ರಿಕ ಜೀವನದಲ್ಲಿ  ದೇವರನ್ನು ಹುಡುಕೋದು ಕಷ್ಟ.
ಜೀವ ಇದ್ದರೆ ಜೀವನ. ಇದೇ ಲೆಕ್ಕಕ್ಕೆ ಇಲ್ಲವಾದರೆ ಮರಣ.
ಆತ್ಮಕ್ಕೆ ಸಾವಿಲ್ಲ ಎನ್ನುವ ಸತ್ಯ ವನ್ನು ಯಾರೂ ಅಲ್ಲಗೆಳೆಯಲಾರರು. ಎಲ್ಲಾ ಧರ್ಮ ವೂ ಒಂದೇ ಆದರೂ ಅವರವರ ಕರ್ಮಕ್ಕೆ ತಕ್ಕಂತೆ ಫಲ ಬೇರೆ ಬೇರೆ ಇರುತ್ತದೆ.
ನಾವೆಷ್ಟು ವರ್ಷ ಬದುಕಿದ್ದರೂ  ಎಷ್ಟು ಸತ್ಯಜ್ಞಾನ ಒಳಗೆ ತಿಳಿದೆವು ಮಿಥ್ಯಜ್ಞಾನ ತಿಳಿದೆವು ಎನ್ನುವುದರ ಮೇಲಿದೆ ಭವಿಷ್ಯ.ಕಾಲಜ್ಞಾನಿಗಳೇ ತಿಳಿಸಿರುವಂತೆ ಕಲಿಯುಗದ ಸ್ಥಿತಿ ಇಂದೇ ಹೀಗಾದರೆ ಮುಂದೆ ಹೇಗಿರಬಹುದು. ಒಟ್ಟಿನಲ್ಲಿ ಎಲ್ಲಾ ಬಿಟ್ಟು ಹೋಗೋದು ಸತ್ಯ ಆದರೆ ಪಾಪಪುಣ್ಯಕ್ಕೆ ತಕ್ಕಂತೆ ಜನ್ಮವಿದೆ ಎನ್ನುವುದೂ ಸತ್ಯ.  ಪುಣ್ಯಕಾರ್ಯ  ಯೋಗದಿಂದ ನಡೆದರೆ ಅಧ್ಯಾತ್ಮ. ಅಂದರೆ ಭಗವಂತ ನೀಡಿರುವುದನ್ನು ಸದ್ಬಳಕೆ ಮಾಡಿಕೊಂಡು ದಾನ ಧರ್ಮ ದೆಡೆಗೆ ನಡೆದರೆ ಪುಣ್ಯ. ಭ್ರಷ್ಟಾಚಾರ ದ ಹಣ ಬಳಸಿ ದಾನ ಮಾಡಿದರೆ ಪಾಪವೇ ಸುತ್ತಿಕೊಳ್ಳುವುದೆಂದಿದ್ದಾರೆ ದಾಸ ಶ್ರೇಷ್ಠ ರು. ಹೀಗಾಗಿ ಅಂದಿನ ಮಹಾತ್ಮರುಗಳು ಭೌತಿಕ ಆಸ್ತಿ ತ್ಯೆಜಿಸಿ ಜ್ಞಾನದ ಆಸ್ತಿಯನ್ನು ಸದ್ಬಳಕೆ ಮಾಡಿಕೊಂಡು ಪರಮಾತ್ಮನ ಸೇರಿದರು.ಈಗಿದುವಿರುದ್ದ ದಿಕ್ಕಿನ ಕಡೆ ಸಾಗಿದೆ .ಕಲಿಕೆಯ ಪ್ರಭಾವ ಹೊರಜಗತ್ತಿನೆಡೆಗೆ ಜೀವ ಸಾಗಿದೆ.. 

Wednesday, May 22, 2024

ಬುದ್ದಪೂರ್ಣಿಮೆಯ ಶುಭಾಶಯಗಳು

ಬುದ್ದ ಪೂರ್ಣಿಮೆ ಇಂದು ಎಷ್ಟರ ಮಟ್ಟಿಗೆ  ಅರ್ಥ ವಾಗುವುದೋ  ನಮಗೇ ಗೊತ್ತಿಲ್ಲ.
ಆಸೆಯೇ ದು:ಖದ ಮೂಲ ಎನ್ನುವ ಸತ್ಯ ಅತಿಆಸೆಯೇ  ದು:ಖದ ಮೂಲವೆನ್ನುವಸ್ಥಿತಿಗೆ ಬಂದಿದೆ.ಆಸೆ ಇಲ್ಲದವರಿಗೆ ಜನ್ಮವಿಲ್ಲ. ಜನ್ಮವಾಗಿದೆ ಎಂದರೆ ಏನೂ ಒಂದು ಆಸೆ ಜೀವ ಪಡೆದಿತ್ತೆಂದರ್ಥ.
ಹೀಗಾಗಿ ಅತಿಯಾದ ಜನಸಂಖ್ಯೆಯಿಂದ ಆಸೆ  ನಿರಾಸೆಯ ಕಡೆಗೆ ನಡೆಯದಂತಾಗಿ ಭೌತಿಕದಲ್ಲಿ ಬುದ್ದನನ್ನು ಹುಡುಕುವ ಮಟ್ಟಕ್ಕೆ ‌ಮನಸ್ಸು ನಿಂತಿದೆ.
ಸಂಸಾರ ತೊರೆದು ಹೋದರೆ ಬುದ್ದನಾಗೋದಿಲ್ಲ. ಆದರೆ ಇಂದು ಸಾಕಷ್ಟು ಬ್ರಹ್ಮಚಾರಿಗಳ ಜೊತೆಗೆ ಬ್ರಹ್ಮಚಾರಿಣಿಯರೂ ತಮ್ಮದೇ ಆಶ್ರಮದಲ್ಲಿ ಬ್ರಹ್ಮಜ್ಞಾನ ಹುಡುಕಿಕೊಂಡು  ಬ್ರಹ್ಮಾಂಡದೊಳಗಿದ್ದಾರೆ. ಆದರೆ ಸಂಸಾರ ಸಾಗರದೊಳಗಿದ್ದು ಬ್ರಹ್ಮತತ್ವವನರಿತವರು ವಿರಳವಾಗುತ್ತಾ ಸಂಸಾರಸ್ಥರಿಗೆ  ಬ್ರಹ್ಮನ ಅರಿವರದೆ  ಸೃಷ್ಟಿಯ ಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ  ಬುದ್ದ ಕಾರಣವೆನ್ನುವವರೂ ಇದ್ದಾರೆ. ತತ್ವಜ್ಞಾನ ಸಂಸಾರಿಗಳಿಗೆ ಬೇರೆ ಸಂನ್ಯಾಸಿಗಳಿಗೆ ಬೇರೆ ಎಂದರೂ ಅಧ್ವೈತ ವಾಗೋದಿಲ್ಲ.ಅದರಲ್ಲಿ ಪ್ರಜಾಪ್ರಭುತ್ವದ ದೇಶವಾದ ಭಾರತೀಯರಿಗೆ  ವಿಶ್ವಗುರು  ತತ್ವಜ್ಞಾನದಿಂದಲೇ ಕಾಣಬೇಕಿದೆ. ಹಾಗಂತ  ತುಂಬಾ ಹಿಂದೆ ನಡೆಯಲೂ‌ಕಷ್ಟ.ವಾಸ್ತವವರಿತು ಭವಿಷ್ಯದೆಡೆಗೆ ನಡೆದರೆ ಉತ್ತಮ.ಕೇವಲ ಪುರಾಣ ಹಿಡಿದು ಭವಿಷ್ಯ ತಿಳಿಯುವುದರಿಂದ ವಾಸ್ತವದಲ್ಲಿ  ಏರುಪೇರಾಗುತ್ತದೆ.
ಅಂದಿನ ಬುದ್ದ ಇಂದಿನ ಬುದ್ದನಾಗಿರೋದಿಲ್ಲ. ತ್ರೇತಾಯುಗದ ರಾಮ ದ್ವಾಪರದ ಕೃಷ್ಣ ಎಂದರೆ ಹೇಗೆ ಬದಲಾವಣೆ ಕಾಣಬಹುದೋ ಹಾಗೆ ಅಂದಿನ‌ ಮಹಾತ್ಮರುಗಳು ಇಂದೂ ಇದ್ದರೂ ಅದೇ ರೀತಿಯಲ್ಲಿ ‌ಜೀವನ ನಡೆಸಲಾಗೋದಿಲ್ಲ ಆಗಿಲ್ಲ. ಆತ್ಮ ಒಂದೇ ಜನ್ಮ ಹಲವು. ದೇವನೊಬ್ಬನೆ ನಾಮ ಹಲವು. ಆಸೆಯೇ ಇದಕ್ಕೆ ಕಾರಣ. ಭೌತಿಕ ಆಸೆ ಅಧ್ಯಾತ್ಮಿಕ ತೆಯನ್ನು ಹಿಂದುಳಿಸಿ ಆಳುತ್ತದೆ. ಅಧ್ಯಾತ್ಮಿಕ  ಜಿಜ್ಞಾಸೆ ಭೌತವಿಜ್ಞಾನದಿಂದ ದೂರ ಸರಿಸುತ್ತದೆ. ಒಟ್ಟಿನಲ್ಲಿ  ಬುದ್ದನ ಕಾಲದಿಂದಲೂ ಸಂಸಾರ ತೊರೆದು  ಸಂನ್ಯಾಸಿಗಳಾಗಿ ಹೊರಬಂದವರು‌ಹಿಂದೂಗಳೆ.
ಈಗ ಹಿಂದೂಗಳ ಸಂಖ್ಯೆ ಕುಸಿದಿದೆ ಎಂದರೆ ಇಲ್ಲಿ ಹೆಣ್ಣಿಗೆ ಸಂನ್ಯಾಸ ಸ್ವೀಕಾರ ನಿಶಿದ್ದ. ಹೊರನೆಡೆದ ಗಂಡನ ಹಿಂದೆ ಹೋಗದ ಹೆಣ್ಣಿನ ಕಥೆ ಕೇಳೋರಿಲ್ಲವಾದಾಗ  ದುಷ್ಟರಿಗೆ  ಅವಕಾಶ ಕೊಟ್ಟಂತಾಗುತ್ತದೆ. ಜೊತೆಗೆ ಜ್ಞಾನಿಗಳ ಸಂತಾನದ ಕೊರತೆಯಿಂದ ಭೂಮಿ ದುರ್ಭಳಕೆ ಆಗುತ್ತದೆ. 
ಜನ್ಮಸಾರ್ಥಕವಾಗೋದು  ಪುರುಷಾರ್ಥಗಳಿಂದ ಎಂದರೆ 
ಬಾಲ್ಯ,ಯೌವನ,ಗೃಹಸ್ಥ, ವಾನಪ್ರಸ್ಥ,ಸಂನ್ಯಾಸವನ್ನು ಯೋಗದಿಂದ ಅನುಭವಿಸಿದ‌ಮೇಲೇ ಮೋಕ್ಷ. ಕೆಲವರಿಗಷ್ಟೆ ಭಗವಂತ ನೇರವಾಗಿ ಸಂನ್ಯಾಸ ಸ್ವೀಕಾರಕ್ಕೆ ಅಧಿಕಾರ ಕೊಟ್ಟು ಲೋಕಕಲ್ಯಾಣಕ್ಕಾಗಿ ಬಳಸಿದ್ದರೆ‌  ಇದನ್ನು  ಇಂದು ಕೆಲವರು ತಮ್ಮ ದೈಹಿಕ ಸ್ವಾರ್ಥ ಸುಖಕ್ಕಾಗಿ  ಹಣ ಅಧಿಕಾರ ಸ್ಥಾನಮಾನದ ಆಸೆಗೆ  ವೇಷಹಾಕಿಕೊಳ್ಳುವವರ ಹಿಂದೆ ಅನೇಕ ಅಮಾಯಕ ಜನ ಹೋಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿರೋದು ಕಲಿಯುಗದ ಪ್ರಭಾವ.
ಸಂಸಾರವನ್ನು  ನಡೆಸುವುದೂ ಧರ್ಮ  ಅದೂ ಯೋಗದಿಂದ  ನಡೆಸುವುದು ಪರಮಧರ್ಮ. ಸಂಸಾರದಿಂದ ಮುಕ್ತರಾಗೋದೆಂದರೆ  ಬಿಟ್ಟು ನಡೆಯೋದಲ್ಲ. ಭೂ ತಾಯಿಯ ಮಕ್ಕಳಾಗಿರುವ‌ ಈ‌ ಮನುಕುಲದ ಸಂಸಾರ ಸತ್ಯ ಹಾಗು ಧರ್ಮದ ಅಡಿಪಾಯದಲ್ಲಿ ನಡೆದಿದೆ. ಯಾವಾಗ ಸತ್ಯ ಬಿಟ್ಟು ಧರ್ಮ ಪ್ರಚಾರವಾಯಿತೋ ಆಗಲೇ ಅಡಿಪಾಯ ಅಲ್ಲಾಡುತ್ತಾ ಈ ಕಡೆ ಧರ್ಮ ಇನ್ನೊಂದು ಕಡೆ ಅಧರ್ಮ . ಯಾವಾಗ ಧರ್ಮ ವೂ ಅಸತ್ಯದೆಡೆಗೆ ವಾಲಿತೋ ಆಗಲೇ ಅಡಿಪಾಯ  ಕಾಣದಾಯಿತು.ಕಾಲದ ವಶದಲ್ಲಿರುವ ಜೀವಕ್ಕೆ  ಬೆಲೆಕಟ್ಟುವುದು ಕಷ್ಟ. ವ್ಯವಹಾರಕ್ಕೆ ಇಳಿದಾಗ  ಜೀವವೇ ಮುಖ್ಯ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ ಎಂದು  ಬುದ್ದ  ಪ್ರಾಣಿ ಹಿಂಸೆ ಜೀವ ಹಿಂಸೆ ಆಗಬಾರದೆಂದರು. ಆದರೆ  ಪ್ರಕೃತಿ ಸಹಜವಾಗಿರುವ‌ ಪ್ರತಿಯೊಂದು ಜೀವ ಪ್ರಾಣಿಗಳಿಗೆ ಆಹಾರವೇ ಮುಖ್ಯವಾಗಿ ಒಂದನ್ನೊಂದು ಕೊಂದು  ತಿಂದು ಬದುಕಲೇಬೇಕೆಂಬ  ಮಾನವ ವಾದದಿಂದ  ಇಂದು ತಿನ್ನುವುದೇ ಜೀವನದ ಗುರಿಯಾಗಿಸುವಷ್ಟು ಬೆಳೆದಿದೆ.
ಅದರಲ್ಲಿ ಮಾನವ ಮಾನವನ ಮನಸ್ಸನ್ನೇ ತಿಂದು ಮುಂದುವರಿದವರಿಗೆ ಬುದ್ದ ಕಾಣೋದಿಲ್ಲ.ಯಾವುದೇ ಇರಲಿ ಅತಿಯಾದರೆ ಗತಿಗೇಡು.
ಸಸ್ಯಾಹಾರಿ ಮಾಂಸಹಾರಿಗಳ‌ನಡುವಿನ ವಾದಕ್ಕೆ ಕೊನೆಯಿಲ್ಲ
ಸಸ್ಯದಲ್ಲೂ ಜೀವವಿದೆ ಹಾಗೆ ಪ್ರಾಣಿಗಳೂ ಎನ್ನುವುದರ ಮೂಲಕ  ನಾವೇ ಸರಿ ಎಂದರೆ ಅರ್ಥ ವಿಲ್ಲ.
ನಮ್ಮ ಆತ್ಮಕ್ಕೆ ಮುಕ್ತಿಸಿಗಬೇಕಾದರೆ  ಹಿಂಸೆಯಿಂದ ದೂರವಿರಬೇಕು. ಆಸೆಯಿಂದ ಮುಕ್ತರಾಗಿರಬೇಕು, ಸತ್ಯವೇ ದೇವರಾಗಿರಬೇಕು...ಬ್ರಹ್ಮನ್ ಸತ್ಯ ಜಗತ್‌ಮಿಥ್ಯ,ಅಹಂ ಬ್ರಹ್ಮಾಸ್ಮಿ, ಇದರ ಅರಿವಾಗಬೇಕಾದರೆ ಅಂತರಾತ್ಮ ಶುದ್ದತೆ ಅಗತ್ಯವಿದೆ ಇದಕ್ಕಾಗಿ ಸಂನ್ಯಾಸಿಗಳಾಗಬೇಕಿದೆ. ಸಂನ್ಯಾಸಿಗಳಿಗೆ ಸ್ವಾರ್ಥ ಅಹಂಕಾರ ಪ್ರತಿಫಲಾಪೇಕ್ಷೆ ಇರೋದಿಲ್ಲ. ಪರಮಾತ್ಮನ ಸೇವೆಯು ಯೋಗದಿಂದ ಮಾಡೋದೇ  ಗುರುವಿನ  ಪರಮಗುರಿಯಾಗಿರುತ್ತದೆ. ಇದನ್ನು ನಮ್ಮ ಮಹಾತ್ಮರಲ್ಲಿ ಕಾಣಬಹುದಾಗಿತ್ತು. ಈಗಲೂ ಕೆಲವರಿರುವರು ಆದರೆ  ಜನಸಾಮಾನ್ಯರಿಗೆ ಕಾಣದೆ ಹಿಂದುಳಿದಿರುವರು. ಹೆಚ್ಚು ಹೆಚ್ಚು ಓದಿ ತಿಳಿಯುವುದಕ್ಕೆ ಬುದ್ದಿಶಕ್ತಿ ಬೇಕು.ಹೆಚ್ಚು ಅನುಭವಿಸಿ ತಿಳಿಯುವುದಕ್ಕೆ ಜ್ಞಾನ ಬೇಕು. ಆತ್ಮಜ್ಞಾನದಿಂದ ಆಸೆ ಕುಸಿದರೆ,ವಿಜ್ಞಾನದಿಂದ ಆಸೆ ಬೆಳೆಯುತ್ತದೆ. ಇವೆರಡರ ನಡುವಿರುವ ಸಾಮಾನ್ಯಜ್ಞಾನ ಮಾನವನಲ್ಲಿದ್ದಾಗ   ಆಸೆ ಇತಿಮಿತಿಯಲ್ಲಿರುತ್ತದೆ.
ಸಾಲ ತೀರಿಸಲು ಬಂದಿರುವ‌ಜೀವದ ಮೇಲೆ ಇನ್ನಷ್ಟು ಹೊರಗಿನಿಂದ ಸಾಲ ಮಾಡಿ ಏರಿಸಿದರೆ ಹೇಗಿರುತ್ತದೆ?
ಮಕ್ಕಳ ಶಿಕ್ಷಣಕ್ಕೆ ಲಕ್ಷಾಂತರ ರೂ ಸಾಲ ಮಾಡುವ ಬದಲಾಗಿ ಮನೆಯೊಳಗೆ  ಸಂಸ್ಕಾರದ ಶಿಕ್ಷಣ ಕೊಟ್ಟು ನೋಡಿ  ನಿಮ್ಮ ಸಾಲ ತೀರಿಸುವಷ್ಟು ಜ್ಞಾನಿಗಳಾಗಿ ಜೀವನ‌ನಡೆಸುವರು. ಭಾರತೀಯರಿಗೆ ಸಾಕಷ್ಟು ಜ್ಞಾನವಿದೆ ಆದರೆ ಸಾಮಾನ್ಯ ಜ್ಞಾನದ ಕೊರತೆಯಿದೆ ಇದಕ್ಕೆ ಕಾರಣವೇ ವಿಶೇಷ ಜ್ಞಾನದ ಹಿಂದೆ ನಡೆದಿರೋದು ಆತ್ಮಜ್ಞಾನವನ್ನು ತಿರಸ್ಕರಿಸಿರೋದು.
ಕೆಲವರು ವಿಶೇಷಜ್ಞಾನವನ್ನು ತಿರಸ್ಕರಿಸಿ ದ್ವೇಷ ಬೆಳೆಸಿರೋದಾಗಿದೆ. ಭೂಮಿಯಲ್ಲಿ ಬದುಕಲು  ಸಾಮಾನ್ಯ ಜ್ಞಾನ ಅಗತ್ಯ.ಅದರ ಸದ್ಬಳಕೆ ವಿಶೇಷಜ್ಞಾನವಾಗುತ್ತದೆ.ದುರ್ಭಳಕೆ ಸಶೇಷವಾಗಿ ಹಿಂದುಳಿಸುತ್ತದೆ. ಒಟ್ಟಿನಲ್ಲಿ ಕಲಿಯುಗದಲ್ಲಿ ಕಲಿಕೆ ಸರಿಯಿಲ್ಲದೆ ಕಲಿಯಲೇಬೇಕಾದ್ದನ್ನು ಕಲಿಸದೆ ಮುಂದೆ ನಡೆದವರ ಹಿಂದೆ ಹಿಂದೂಗಳು ಹೊರಟಾಗ ಹಿಂದುತ್ವಕ್ಕೆ ದಕ್ಕೆ.
ವಿಶ್ವ ದ ತುಂಬಾ ಹಿಂದೂಗಳಿದ್ದರೂ ಹಿಂದೂಸ್ತಾನದಲ್ಲಿಲ್ಲದ ಕಾರಣ ಹಿಂದೂಗಳ ಸಂಖ್ಯೆ ಕುಸಿದಿದೆ ಎನಿಸುತ್ತದೆ.
ಹಿಂದೆ ಪುರಾಣಗಳಲ್ಲಿ ಇದ್ದ ಎಲ್ಲಾ ಹಿಂದೂಗಳೂ ಈಗ ಅನ್ಯಮತೀಯರಾಗಿರಲು ಕಾರಣವೇ ಹಿಂದಿನ ಶಿಕ್ಷಣದಲ್ಲಿದ್ದ ತತ್ವಜ್ಞಾನ ಬಿಟ್ಟು ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಶಿಕ್ಷಣದಲ್ಲಿ ಅಳವಡಿಸಿರೋದು. ಈಗಿದೇ ಮನುಕುಲಕ್ಕೆ ಮಾರಕವಾಗಿದೆ.
ಆದರೂ ಇದರ ಸದ್ಬಳಕೆ ಮಾಡಿಕೊಂಡರೆ ಸಮಾಧಾನವಿದೆ.ಪ್ರಯತ್ನ ನಮ್ಮದು ಫಲ ಭಗವಂತನದು.
ನಮ್ಮ ಕರ್ತವ್ಯ ದಲ್ಲಿ ಲೋಪಧೋಷಗಳಿದ್ದರೆ ಸರಿಪಡಿಸಿಕೊಂಡರೆ ಬುದ್ದನಾಗಬಹುದು. ಸಂಸಾರದಲ್ಲಿದ್ದೇ ಸಂನ್ಯಾಸಿಗಳಂತೆ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ಬದುಕಿದ ಶರಣ ದಾಸ ಮಹಾತ್ಮರುಗಳು  ಇದ್ದರಲ್ಲವೆ? ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ
ಯಾರದ್ದೋ ಅನುಭವ ಸಾಹಿತ್ಯ ಹಿಡಿದು ಜ್ಞಾನಿ,ಗುರು ಆಗೋದು ಅರ್ಧ ಸತ್ಯವಾಗುತ್ತದೆ. ಹಾಗೆ ಯಾರದ್ದೋ ಧರ್ಮವನ್ನು ನಮ್ಮ ಧರ್ಮ ಎಂದರೆ ತಪ್ಪು. ಯಾರದ್ದೋ ದೇಶದಲ್ಲಿದ್ದು  ನಮ್ಮ ದೇಶವೆಂದರೆ ಸರಿಯೆ?
ಭೂಮಿ ಒಂದೇ ಆದರೂ ನಮ್ಮೊಳಗೇ ಅಡಗಿರುವ  ಜ್ಞಾನ ಒಂದೇ ರೀತಿಯಲ್ಲಿಲ್ಲದ ಕಾರಣ ಅದ್ವೈತ  ಅಗೋಚರವಾಗೇ ಉಳಿದಿದೆ. ಕಾಣದ ಶಕ್ತಿಯನ್ನು ಕಂಡೆನೆಂದರೆ ನಂಬೋರಿಲ್ಲ.ಹಾಗಂತ ತೋರಿಸಲಾಗದು ನಾವೇ ಒಳಹೊಕ್ಕಿ ಕಂಡುಕೊಂಡಾಗಲೇ ಅಧ್ಯಾತ್ಮ ವಿಜ್ಞಾನವಾಗುತ್ತದೆ.

ನಾರಸಿಂಹನ ಅವತಾರ ನರಸಿಂಹ

ನಾರಸಿಂಹನ ಅವತಾರವೇ ನರಸಿಂಹ ವಿಷ್ಣುವಿನ ಅವತಾರದಲ್ಲಿ‌
ಮುಖ್ಯವಾಗಿರುವನರಸಿಂಹ‌ಜಯಂತಿಯ ಶುಭಾಶಯಗಳು.
ಮಾನವರ ಜನ್ಮದಿನಕ್ಕೆ ಶುಭಾಶಯಗಳನ್ನು ತಿಳಿಸುವಂತೆ  ಭಗವಂತನ ಅವತಾರದಿಂದ ಮಾನವರಿಗೆ ಶುಭವಾಗಿರುತ್ತದೆ ಹೀಗಾಗಿ   ನಮಗೆ‌ನಾವೇ ಶುಭಾಶಯಗಳನ್ನು ಹೇಳಿಕೊಳ್ಳುವಾಗ  ಶುಭ ಯಾವುದು ಅಶುಭ ಯಾವುದೆನ್ನುವ ಸದ್ವಿಚಾರ ತಿಳಿಯುವುದು ಶುಭವೆ.
ನರಸಿಂಹನ  ಅವತಾರದ  ಕಥೆ ಎಲ್ಲರಿಗೂ ತಿಳಿದದ್ದೆ. ಹಿರಣ್ಯಕಶ್ಯಪುವಿನ ವಧೆಗಾಗಿಯೇ ಅವತಾರವೆತ್ತಿ ಬಂದ ವಿಷ್ಣುವಿನ ಪರಮವೈರಿ ಹಿರಣ್ಯಕಶ್ಯಪು. ಅವನ‌ಮಗನಾಗಿ ಜನ್ಮ ತಳೆದ ಪ್ರಹ್ಲಾದ ವಿಷ್ಣುವಿನ  ಮಹಾಭಕ್ತ. ಅಂದರೆ ಒಂದೇ ಮನೆಯಲ್ಲಿ  ದೇವಾಸುರರು ಜನ್ಮಪಡೆಯಬಹುದು.
ಒಬ್ಬರಿಗೊಬ್ಬರು  ಹೊಡೆದಾಡಲೂಬಹುದು. ಆದರೆ ಭಗವಂತ ಭಕ್ತರ ರಕ್ಷಣೆಗಾಗಿ ದುಷ್ಟರನ್ನು  ಶಿಕ್ಷಿಸುವುದು ಸತ್ಯ.
ಇಲ್ಲಿ  ಪ್ರಹ್ಲಾದನಿಗೆ ಗರ್ಭದಲ್ಲಿರುವಾಗಲೇ ದೇವತೆಗಳ ರಕ್ಷಣೆ ದೈವಾನುಗ್ರಹವಿದ್ದು  ಉತ್ತಮ ಸಂಸ್ಕಾರದಿಂದ ಭೂಮಿಗೆ ಬಂದ ಕಾರಣ ಸ್ವಂತ ತಂದೆಯ  ವಿರುದ್ದ ನಿಲ್ಲುವ ಜ್ಞಾನವಿತ್ತು.
ಜ್ಞಾನದಿಂದ ದೈವತ್ವ ಅಜ್ಞಾನದಿಂದ ಅಸುರತ್ವ.ಅಹಂಕಾರ ಸ್ವಾರ್ಥ ದಿಂದ‌ಜ್ಞಾನ‌ಕುಸಿಯುತ್ತದೆ.ಸತ್ಯ ತಿಳಿಯದೆ ಅಧರ್ಮ ಬೆಳೆಯುತ್ತದೆ....ಇವುಗಳನ್ನು ನಾವು ಪುರಾಣ ಕಥೆಗಳಲ್ಲಿ ತಿಳಿದರೂ ನಮ್ಮೊಳಗೇ ಅಡಗಿರುವ ಎಷ್ಟೋ ಜನ್ಮದ ಈ ಗುಣಗಳಿಂದ‌ಮುಕ್ತಿ ಪಡೆಯಲಾಗಿಲ್ಲ. ಇದಕ್ಕಾಗಿ ಹೊರಗೆ ಹೋರಾಟ ಮಾಡಿ ಉಪಯೋಗವಿಲ್ಲ.
ಪೋಷಕರ ಗುಣವೇ‌ಮಕ್ಕಳ ರಕ್ತದಲ್ಲಿದ್ದರೂ ಉತ್ತಮ ಸಂಸ್ಕಾರದ ಶಿಕ್ಷಣದಿಂದ  ಸ್ವಚ್ಚಗೊಳಸಬಹುದೆನ್ನುವ ಸಂದೇಶ ಇದರಲ್ಲಿದೆ. 
ಹೀಗಾಗಿ ಹಿಂದೂ ಧರ್ಮದಲ್ಲಿ 16 ಸಂಸ್ಕಾರಗಳನ್ನು ಮುಖ್ಯವಾಗಿ  ಹೆಸರಿಸಲಾಗಿದೆ. ಆದರಿದು ಈಗ‌ಮರೆಯಾದ ಕಾರಣ ಅಸುರಿ ಶಕ್ತಿ ನಮ್ಮೊಳಗೇ ಜಾಗೃತವಾಗಿದ್ದು ಹೊರಗೂ ಬೆಳೆದಿದೆ.ಹಾಗಾದರೆ ನಾವು ಅಸುರರೆ?
ಒಪ್ಪಿಕೊಳ್ಳಲು ಕಷ್ಟವಿದೆ. ಅಸುರಿಗುಣಗಳೆಂದರೆ ಅತಿಯಾದ ಕಾಮ,ಕ್ರೋಧ,ಲೋಭ,ಮೋಹ,ಮಧ,ಮತ್ಸರವಾಗಿದೆ.
ಇದರ  ಪರಿಣಾಮವಾಗಿ  ಇಂದು ಲೋಕಕಂಟಕರು ಬೆಳೆದು ತಾನೂ ಬದುಕದೆ ಇತರರನ್ನು ಬದುಕಲು ಬಿಡದಂತಹ ಪರಿಸ್ಥಿತಿ ‌ಹೆಚ್ಚಾಗುತ್ತಿದೆ.
ತಾಯಿಯೇ‌ ಮೊದಲ ಗುರು. ಪ್ರಹ್ಲಾದನ ತಂದೆ ಅಸುರನಾದರೂ  ತಾಯಿಯ ಗರ್ಭದಲ್ಲಿರುವಾಗಲೇ ಸಿಕ್ಕಿದ ಸತ್ಸಂಗ ಸಂಸ್ಕಾರದ ಫಲವೇ  ಪ್ರಹ್ಲಾದ ಭಕ್ತನಾಗಲು ಕಾರಣ.
ಇಲ್ಲಿ ಪ್ರತಿಯೊಬ್ಬ ತಾಯಿಯೂ ತನ್ನ ‌ಮಗು ದೈವೀಕ ಸಂಪತ್ತನ್ನು ಹೊಂದಿರಬೇಕೆಂಬ ಬಯಕೆಯಲ್ಲಿ ಸತ್ಕರ್ಮ, ಸದಾಚಾರ,ಸದ್ಗುಣ,ಸತ್ಸಂಗದೆಡೆಗೆ  ನಡೆಯುವ ಅವಕಾಶ ಇದ್ದರೆ ಭೂಮಿಯಲ್ಲಿ  ಶಾಂತಿ ಇರುತ್ತದೆ. ಇದಕ್ಕೆ ವಿರುದ್ದ ಅಜ್ಞಾನ ಬೆಳೆದಾಗಲೇ ಅಸುರರ ವಂಶ ಬೆಳೆಯೋದು.
ಇಲ್ಲಿ ನಮ್ಮ ಲ್ಲೇ ಅಡಗಿರುವ ಈ ಗುಣಗಳೇ ನಮ್ಮ ಭವಿಷ್ಯವಾಗಿದೆ. ಸತ್ಯ ತಿಳಿಯಲು  ಮೊದಲುಒಳಗಿನ ಸತ್ಯ ಅರ್ಥ ಆಗಬೇಕು. ನಂತರ ಭೌತಿಕ ಸತ್ಯ ತಿಳಿಯಬಹುದು.
ಮನಸ್ಸನ್ನು ಹತೋಟಿಯಲ್ಲಿಡಲು ಯೋಗಮಾರ್ಗ ಅಗತ್ಯ.ನಂತರ ಭೋಗದ ಪ್ರಭಾವ ತಿಳಿಯಬಹುದು.
ಹಾಗೆ ಶಿಕ್ಷಣದಲ್ಲಿ ‌ಮೊದಲು ಮಕ್ಕಳ ಆತ್ಮಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯನರಿತು ಬೆಳೆಸಬೇಕು.ನಂತರವೇ  ಹೊರಗಿನ ಜಗತ್ತಿನಲ್ಲಿ ಹೇಗಿರಬೇಕೆಂಬ ಅರಿವಿರುತ್ತದೆ. ಇದೆಲ್ಲವೂ ಪುರಾಣವೆನಿಸುತ್ತದೆ. ಪುರಾಣದ ರಾಮಾಯಣ‌ ಮಹಾಭಾರತ ಕಥೆ  ವೈಭೋಗದಲ್ಲಿದ್ದು  ತಿಳಿಯುವುದೇ ಬೇರೆ ವೈಚಾರಿಕತೆಯೆಡೆಗೆ ನಡೆದು ಅರ್ಥ ಮಾಡಿಕೊಳ್ಳುವುದೆ ಬೇರೆ.
ಹಾಗೆ ಬೇರೆ ಬೇರೆ ಆದಾಗಲೇ ಅಂತರದಲ್ಲಿ ಅಸುರರು ನಿಂತು ಆಟ ಆಡಿಸೋದು. ಅದ್ವೈತ ದೊಳಗೆ ದ್ವೈತ,ವಿಜ್ಞಾನ ದೊಳಗೆ ಜ್ಞಾನ, ಅಸುರರೊಳಗೆ ಸುರರು, ವಿದೇಶದೊಳಗೆ ದೇಶ, ಅಜ್ಞಾನದೊಳಗೆ ಜ್ಞಾನ  ಸೇರಿಕೊಂಡು ಹೊರಗೆ ಹುಡುಕಿದರೆ ಸಿಗೋದಿಲ್ಲ.ಹಾಗೆ ಮಹಾವಿಷ್ಣುವಿನ‌ನಾರಸಿಂಹನ ಪ್ರತಿರೂಪ ನರಸಿಂಹ.ಅವತಾರ ಹಲವು ಭಗವಂತ ಒಬ್ಬನೆ ಅದ್ವೈತ.
ದೇಶ ಒಂದೇ ರಾಜ್ಯಗಳು ಹಲವು ಪ್ರಜೆಗಳು ಅಸಂಖ್ಯಾತ..
ಧರ್ಮ ಸತ್ಯ ಒಂದೇ ರೂಪ ರೇಖೆಗಳು ಹಲವು ಬೇರು ಒಂದೇ. ಹಿಂದಿನ  ಕಾಲದ ಸತ್ಯ ಈಗಿನ ಸತ್ಯ ಮುಂದಿನ ಸತ್ಯ ಎಲ್ಲಾ ಒಳಗಿದೆ.ಆ ಒಂದು ಸತ್ಯ ಅರ್ಥ ಆದರೆ ಅಧ್ವೈತ.
ಅಸುರರಿಗೆ  ಸಾವೇ ಬರದಂತಹ ವರ ಯಾರೂ ಕೊಡಲಿಲ್ಲ ಆದರೆ ಬುದ್ದಿವಂತಿಕೆಯಿಂದ  ಇಂತಹವರಿಂದ ಹೀಗೇ ಸಾವು ಬರಬೇಕೆಂದು ವರ ಪಡೆದವರನ್ನು ಅದೇ ರೀತಿಯಲ್ಲಿ ಭಗವಂತನ ಅವತಾರವಾಗಿ  ಅಸುರ ಸಂಹಾರ ಮಾಡಿದ. ಅಂದರೆ ಬುದ್ದಿವಂತಿಕೆ ಹೊರಗಿತ್ತು ಒಳಗಿನ‌ಜ್ಞಾನ ಹಿಂದುಳಿದಿತ್ತು ಅಹಂಕಾರ ಮಿತಿಮೀರಿದರೆ ಹೀಗೇ ಮಾನವ ಅಸುರನಾಗೋದೆನ್ನುವುದಾಗಿದೆ.  ಪುರಾಣಗಳಿಂದ  ಕಲಿಯುವುದು ಬಹಳವಿದೆ.ಅಲ್ಪ ತಿಳಿದು ಹೆಚ್ಚು ಮಾತನಾಡುವ ಬದಲು ಹೆಚ್ಚು ತಿಳಿದು ಸ್ವಲ್ಪ ಮಾತಾಡಿದರೆ ಉತ್ತಮ. ಮಾತಿಗಿಂತ‌ ಕೃತಿಯೇ ಮೇಲು ಮಾತಿಗಿಂತ ಮೌನವೇ ಮೇಲೆಂದರು  ಮಹಾತ್ಮರು. ಆದರೆ ಕೆಲವೊಮ್ಮೆ ಮೌನಮುರಿದು ಮನುಕುಲದ ಒಳಿತಿಗಾಗಿ ಮುಂದೆ ನಡೆಯಲೇಬೇಕಾಗುವುದು. ಎಲ್ಲಾ ಕಾಲನಿರ್ಣಯ ಮಾಡಿರುವಾಗ ನಮ್ಮದೇನಿದೆ  ಇಲ್ಲಿ ಭಗವಂತನೇ ಎಲ್ಲರನ್ನೂ ನಡೆಸುವುದು ಎನ್ನುವಾಗ  ನಾನೆಂಬುದಿರದು.
ನಾನೇ ನಡೆಯುವಾಗ ನಾನೇ ಇರೋದು. 
ನಮ್ಮದು ಯಾವ ಜನ್ಮದ‌ಯಾವ ಅವತಾರವೋ ಯಾರಿಗೆ ಗೊತ್ತು. ಒಟ್ಟಿನಲ್ಲಿ ಹೊರಗಿನ ಅವತಾರದಿಂದ ಒಳಗಿನ ಅವಸ್ಥೆ  ಹಾಳಾದರೆ  ಸಂಕಷ್ಟ ಕಟ್ಟಿಟ್ಟ ಬುತ್ತಿ.ಹೊರಗಿನವರು ಯಾರೋ ಹೇಳಿದ್ದನ್ನು ಕೇಳಿಕೊಂಡು  ಹೊರಗೆ ಬಂದರೆ ಒಳಗೇ ಸಮಸ್ಯೆ ಹೆಚ್ಚಾಗುವುದು. ಸತ್ಯ ಧರ್ಮ ತಿಳಿದು ತಿಳಿದವರನ್ನು ಕೇಳಿಕೊಂಡು ನಡೆಯಬೇಕಿದೆ.
ವಯಸ್ಸಿನಲ್ಲಿ ಹಿರಿಯರಿದ್ದರೂ ಕಿರಿಯರ ಜ್ಞಾನವನ್ನು ನಿರ್ಲಕ್ಷ್ಯ ಮಾಡಿದರೆ  ಅನರ್ಥವಾಗುವುದು.ಇದನ್ನು ಹಿರಣ್ಯಕಶ್ಯಪು ಪ್ರಹ್ಲಾದರ ಕಥೆಯೇ ತಿಳಿಸುತ್ತದೆ. ಮಕ್ಕಳಿಗೆ ಕಥೆ ಹೇಳುವಾಗ ಪೋಷಕರೊಳಗಿರುವ  ಒಳ್ಳೆಯತನದ ಜೊತೆಗೆ ಕೆಟ್ಟತನವೂ ಮಕ್ಕಳು ಗುರುತಿಸುವರೆನ್ನುವುದನ್ನು ಮರೆಯಬಾರದು.ಹಾಗೆ ಶಿಕ್ಷಕರು ಗುರು ಹಿರಿಯರೂ ಅರ್ಥ ಮಾಡಿಕೊಳ್ಳುವುದು ಇಂದು ಅಗತ್ಯವಾಗಿದೆ. 
ಉಪದೇಶ ಮಾಡೋದು ಪ್ರಚಾರ ಮಾಡೋದು,
ಗುರುವಾಗೋದು,ತಾಯಿಯಾಗೋದು,ತಂದೆಯಾಗೋದು  ಸುಲಭವಿಲ್ಲ. ಸಂಸಾರದೊಳಗೆ ಇಳಿಯದವರು  ಅರ್ಧ ಸತ್ಯ ತಿಳಿದು ಧರ್ಮ ಪ್ರಚಾರ ಮಾಡಿದರೆ   ಅತಂತ್ರಸ್ಥಿತಿಗೆ  ಧರ್ಮ ತಲುಪುವುದು. ಇದು ಕಣ್ಣಿಗೆ ಕಾಣುತ್ತಿರುವ ಸತ್ಯ...ಹಣವಿದ್ದವರು ಏನು ಹೇಳಿದರೂ  ಕೇಳುವ ಜನ ಜ್ಞಾನಿಗಳ ಮಾತನ್ನು ಅಲ್ಲಗೆಳೆದು ಅಲ್ಲ ಅಲ್ಲ ಎಂದರೆ  ಅಲ್ಲನೇ ಬೆಳೆಯೋದು. ನೀನು ಬೇರೆಯಲ್ಲ ನಾನು ಬೇರೆಯಲ್ಲ ಆದರೂ ಒಂದಾಗಿ ಕಾಣಲಾಗಲ್ಲ.ಎಲ್ಲದರಲ್ಲೂ ಇರುವ ಅಲ್ಲ ನಮ್ಮೊಳಗೇ ಇದ್ದು ಬೆಳೆದಿರುವನಲ್ಲ. ಯಾಕೆ ನಮಗೆ ಕಾಣುತ್ತಿಲ್ಲವಲ್ಲ?ಇದರಲ್ಲಿ ತಪ್ಪೇನಿಲ್ಲವಲ್ಲ? ಇದ್ದರೆ ತಿಳಿಸಬಹುದಲ್ಲ?

Monday, May 20, 2024

ಜನಸಂಖ್ಯೆಗಿಂತ ಜ್ಞಾನಿಗಳ ಸಂಖ್ಯೆ ಮುಖ್ಯ.

ಸಣ್ಣ ವಯಸ್ಸಿನಿಂದಲೇ ಒಳಗೊಂದು ಪ್ರಶ್ನೆಇತ್ತು.ನಾನ್ಯಾರು?/ನಾನ್ಯಾಕೆ ಬಂದೆ?  ಸತ್ಯ ಯಾವುದು? ಇದಕ್ಕೆ ಉತ್ತರ ಹೊರಗೆ ಹುಡುಕಿದಷ್ಟೂ ಪ್ರಶ್ನೆ ಬೆಳೆಯುತ್ತಿತ್ತು. ಯಾರನ್ನೋ ಕೇಳಿ ತಿಳಿಯುವ ಪ್ರಶ್ನೆ ಇದಾಗಿರಲಿಲ್ಲ ‌ಕಾರಣ ಇದಕ್ಕೆ ಉತ್ತರ ಒಳಗೇ ಸಿಕ್ಕಾಗಲೇ  ಎಷ್ಟೋ ವರ್ಷ ಕಳೆದುಹೋಗಿತ್ತು. ನಂತರದ ವಿಚಾರಗಳಲ್ಲಿ ಜ್ಞಾನ ವಿಜ್ಞಾನದ  ಅಂತರವೇ  ಅಧರ್ಮ ಕ್ಕೆ‌ಕಾರಣ, ರಾಜಕೀಯ ರಾಜಯೋಗದ ಅಪಾರ್ಥ ವೇ ಅಧರ್ಮಕ್ಕೆ ಕಾರಣ ದ್ವೈತಾದ್ವೈತದ ನಡುವಿರುವ ಅಂತರವೇ ತಂತ್ರ ಬೆಳೆಯಲು ಕಾರಣ ಎಲ್ಲದರ ಮೂಲವೇ ಶಿಕ್ಷಣ ವ್ಯವಸ್ಥೆ .ಇದನ್ನು ಸಾಮಾನ್ಯ ಜ್ಞಾನದಿಂದ ಸಾಮಾನ್ಯರ‌ ನಡುವಿದ್ದು  ತಿಳಿಯುವಾಗ  ಎಷ್ಟೋ ಜನ ಈ ಕಾಲದಲ್ಲಿ ಇದು ನಡೆಯಲ್ಲ.ಕಾಲಕ್ಕೆ ತಕ್ಕಂತೆ ಜೀವನ ಶೈಲಿ‌ಬದಲಾಯಿಸಿಕೊಂಡು ಬದುಕಬೇಕು. ಇದನ್ನು ಯಾರೂ‌ಸರಿಪಡಿಸಲಾಗದು.ಗುರುಗಳೇ  ಸಹಕಾರ‌ನೀಡದ‌‌ ಮೇಲೆ  ನಾವೇನೂ‌ಮಾಡಲಾಗದು. ನಿಮ್ಮ ಲೇಖನ ಸತ್ಯ ಇದ್ದರೂ  ನಾವು ಬದಲಾಗೋದು ಕಷ್ಟ. ಹೀಗೇ ಉತ್ತರಗಳು ಬಂದಾಗ  ಇದನ್ನು ಆ ದೇವರೆ ಹೇಳಿಸಿರೋದಾದರೆ  ದೇವರೆ ಇದಕ್ಕೆ ಕಾರಣವೆಂದಾಗ  ಅಧರ್ಮ  ನಮ್ಮ ಅರಿವಿನಿಂದ ಬೆಳೆದಿದೆ. ಆ ಅರಿವಿನ ದಾರಿ  ಸರಿಯಾದರೆ ಧರ್ಮ. ರಕ್ಷಣೆ.
ಅಂದರೆ ಶಿಕ್ಷಣ ಬದಲಾದರೆ ಧರ್ಮ ರಕ್ಷಣೆ ಎಂದಾಗ ಇದನ್ನು ಬದಲಾಯಿಸುವವರು ಯಾರು? ಶಿಕ್ಷಕರೆ?ಫೋಷಕರೆ?ಸರ್ಕಾರವೆ?  ಎಲ್ಲರಿಗೂ  ಅರ್ಥ ವಾದಾಗಲೇ‌ಬದಲಾವಣೆ ಸಾಧ್ಯ.
ಒಂದು ‌ಮಗುವಿನ‌ ಭವಿಷ್ಯವಿರೋದೆ ಶಿಕ್ಷಣದಲ್ಲಿ. ಇದನ್ನು ಒಳಗಿನ ಜ್ಞಾನದಿಂದ ಬೆಳೆಸಿದರೆ  ಶಾಂತಿ ಸುಖ ನೆಮ್ಮದಿ ತೃಪ್ತಿ ಇದ್ದ ಲ್ಲಿ ಯೇ ಸಿಗುತ್ತದೆ. ಹೊರಗಿನಿಂದ ಬೆಳೆಸಿದಷ್ಟೂ  ಮನೆಯೊಳಗಿದ್ದರೂ ಮನಸ್ಸು ಹೊರಗೇ ಇದ್ದಾಗ ಮೇಲಿನ ಪ್ರಶ್ನೆಗೆ ‌ಉತ್ತರ ಸಿಗದು.
ಸಿಕ್ಕಿದರೂ  ಇದರಿಂದ ಯಾರಿಗೆ  ಲಾಭ? ಅವರವರ ಹಿಂದಿನ ಜನ್ಮದ ಫಲವನ್ನು  ಜೀವವೇ ಅನುಭವಿಸುವುದನ್ನು ಯಾರೂ ತಪ್ಪಿಸಲಾಗದು. ಒಬ್ಬರ ರೋಗ ಇನ್ನೊಬ್ಬರು  ಅನುಭವಿಸಲು  ಸಾಧ್ಯವಾಗದಿದ್ದರೂ ಹರಡುವುದು  ನಿಲ್ಲದು.ಅದಕ್ಕಾಗಿ ಭ್ರಷ್ಟಾಚಾರ ದ ಹಿಂದೆ ‌ನಡೆದವರಲ್ಲೂ ಭ್ರಷ್ಟಾಚಾರವೇ‌ ನಡೆಸುವಾಗ  ಒಳಗಿದ್ದ ಶಿಷ್ಟಾಚಾರ ಕಾಣೋದಿಲ್ಲ.‌
ಹಾಗೆ  ಈ ಋಣ ಮತ್ತು ಕರ್ಮ ಫಲವೂ ಒಬ್ಬರಿಂದ ಒಬ್ಬರಿಗೆ ಹಣದ ಮೂಲಕ ದಾಟಿಸಿಕೊಂಡು  ಹೊರಗೆ ಬೆಳೆದಿದೆ. ಅದಕ್ಕೆ ಹಿಂದು ಧರ್ಮ ಹಿಂದುಳಿದವರನ್ನು ಬೆಳೆಸಿ ಅಲ್ಲ  ಸಂಖ್ಯೆ ಬಹುಸಂಖ್ಯಾತರಾಗಿ ಬೆಳೆದರು. ಸಂಖ್ಯೆ ಮುಖ್ಯವಲ್ಲ ಜ್ಞಾನವೇ‌ಮುಖ್ಯ.

ಜ್ಞಾನದ ನಂತರದ ಸತ್ಯಕ್ಕೂ  ಹಿಂದಿನ ಸತ್ಯಕ್ಕೂ ಅಂತರವಿದೆ
ಆದರೆ ಒಂದೇ ಜನ್ಮದಲ್ಲಿ  ಎರಡೂ ಸತ್ಯವರಿತಾಗ  ಯಾವುದರ ಹಿಂದೆ ನಡೆಯಬೇಕೆನ್ನುವುದೂ‌
ಮುಖ್ಯವಾಗುತ್ತದೆ. ಇದಕ್ಕೆ ಸರಿಯಾದ ಸಹಕಾರದ ಕೊರತೆಯಿದ್ದರೆ  ಮುಂದೆ ನಡೆಯದಿದ್ದರೂ ಇದ್ದಲ್ಲಿಯೇ ಸಾಧ್ಯವಾದಷ್ಟು ತಿಳಿಯಬಹುದು. ತಿಳುವಳಿಕೆ  ಹೊರಗಿನಿಂದ ಸೇರಿದರೆ ಭೌತವಿಜ್ಞಾನ  ಒಳಗಿನಿಂದ ಬೆಳೆದರೆ ಅಧ್ಯಾತ್ಮ ವಿಜ್ಞಾನ.
ಭೌತವಿಜ್ಞಾನದ ಜಗತ್ತಿನಲ್ಲಿ ಅಧ್ಯಾತ್ಮ ವಿಜ್ಞಾನ ಹಿಂದುಳಿದಾಗ ಅಜ್ಞಾನವೇರುತ್ತದೆ. 

Sunday, May 19, 2024

ಇರುವೆ ಎಲ್ಲಿರುವೆ? ಮಾನವ ನೀನ್ಯಾರಿಗಾದೆಯೋ?

ನಿಮಗೆ ಗೊತ್ತೇ  ???
ಮಾನವನಿಗಿಂತ ಇರುವೆ ದೊಡ್ಡದು.

1. ಇರುವೆಗಳಿಗೆ ಶ್ವಾಸಕೋಶವಿಲ್ಲ.
ಮಾನವನಿಗೆ ಶ್ವಾಸಕೋಶವಿಲ್ಲದೆ ಜೀವವಿಲ್ಲ

2. ಇರುವೆಗಳಿಗೆ ಕಿವಿ ಇಲ್ಲ. ಮಾನವನಿಗೆ ಕಿವಿ ಯಿದ್ದರೂ ಏನು ಕೇಳಬೇಕೆಂಬ ಅರಿವಿಲ್ಲ


3. ಇರುವೆಗಳು ಭೂಮಿಯ ಕೃಷಿಕರು.
 ಮಾನವ ಭೂ ಒಡೆಯನಾಗಲು ಹೋಗಿ ಸೇವಕನಾಗಿಲ್ಲ

4. ಇರುವೆಗಳಿಗೆ ಎರಡು ಹೊಟ್ಟೆಗಳಿವೆ.
 ಮಾನವನ ಒಂದು ಹೊಟ್ಟೆ ತುಂಬಿಸೋದೆ ಕಷ್ಟವಿದೆ

5. ಇರುವೇಗಳು ಈಜುತ್ತವೆ.
ಮಾನವನೂ ಸಂಸಾರವೆಂಬ ಸಾಗರದಲ್ಲಿ ಈಜಲೇಬೇಕು

6. ಇರುವೆಗಳು ಡೈನೋಸಾರ್‌ಗಳಷ್ಟು ಪ್ರಾಚೀನ ಇತಿಹಾಸ ಹೊಂದಿವೆ.
 ಮಾನವನಿಗೂ ಸಾಕಷ್ಟು ಇತಿಹಾಸವಿದ್ದರೂ  ತಿಳಿಯದೆ ನಡೆದಿದ್ದಾನೆ.

7. ಪ್ರಪಂಚದಾದ್ಯಂತ 12,000 ಕ್ಕೂ ಹೆಚ್ಚು ಜಾತಿಯ ಇರುವೆಗಳಿವೆ.
ಕೋಟ್ಯಾಂತರ ಜಾತಿಯ ಮನಸ್ಸುಳ್ಳ ಮಾನವನಿದ್ದಾನೆ

8. ಇರುವೆ ತನ್ನ ದೇಹದ ತೂಕಕ್ಕಿಂತ 20 ಪಟ್ಟು ಹೆಚ್ಚು ತೂಕ ಎತ್ತಬಲ್ಲದು.
 ಮಾನವನಿಗೆ ಅವನ‌ಮೈ ಭಾರಹೊತ್ತು ಹೋಗೋದೆ ಕಷ್ಟ

9. ಕೆಲವು ರಾಣಿ ಇರುವೆಗಳು ವರ್ಷಗಳ ಕಾಲ ಬದುಕಬಲ್ಲವು.

ಭೂತಾಯಿಯಿಲ್ಲದೆ ಮನುಕುಲವಿಲ್ಲ

10. ಇರುವೆಗಳು ಹೋರಾಡಿದಾಗ, ಅವು ಸಾಮಾನ್ಯವಾಗಿ ಸಾವಿನವರೆಗೆ ಹೋರಾಡುತ್ತವೆ.
 ಸಾವಿಗಂಜದ ಮಹಾತ್ಮರುಗಳಿದ್ದಾರೆ

11. ಕೆಲವು‌ ನಿರ್ದಿಷ್ಟ ಗುಂಪಿನ ರಾಣಿ ಇರುವೆ ಸತ್ತಾಗ, ಗುಂಪು ಕೆಲವು ತಿಂಗಳುಗಳವರೆಗೆ ಮಾತ್ರ ಬದುಕಬಲ್ಲದು.
ಮೂಲ ಜೀವ ಹೋದ ಮೇಲೆ ಅದರಿಂದ ಜನ್ಮ ಪಡೆದ ಜೀವ
ಶಕ್ತಿಹೀನವಾಗುತ್ತದೆ.

12. ಇರುವೆಗಳು ಆಮ್ಲಜನಕವಿಲ್ಲದೆ ಎರಡು ಗಂಟೆಗಳ ಕಾಲ ಬದುಕಬಲ್ಲವು.
 ಮಾನವನಿಗೆ ಆಮ್ಲಜನಕವೇ ಜೀವಾಧಾರ

13. ಇರುವೆಗಳಿಗೆ ರಕ್ತವಿಲ್ಲ !

ಮಾನವನ ರಕ್ತ  ಜೀವಶಕ್ತಿಯ ಆಧಾರ.
ಒಂದು ಸಣ್ಣ ಇರುವೆಯಿಂದ ಹಿಡಿದು ದೊಡ್ಡ ಗಾತ್ರದ ಆನೆಯವರೆಗೂ  ಮಾನವ ತಿಳಿಯಲು ಹೊರಗೆ ನಡೆದರೂ ತನ್ನೊಳಗೆ ಇರುವ ಶಕ್ತಿಯನ್ನು ಹೇಗೆ ಬಳಸಬೇಕೆಂಬ ಜ್ಞಾನ‌ ಮಾನವನಿಗೆ ಅಗತ್ಯವಾಗಿದೆ.

~ ಪರಿಸರ ಪರಿವಾರ

👌ಒಂದರಿವಿನ‌ಜೀವಿ ಇರುವೆ.ಅಂದರೆ ಮೂಲ ಜೀವಿ ಇರುವೆಯಾಗಿದೆ.ಆರನೇ ಅರಿವಿನ‌ಜೀವಿ ಮಾನವ. ಒಂದನೇ ಅರಿವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆರನೇ ಅರಿವಿನವರೆಗೆ  ಮಾನವ