ಎಲ್ಲದ್ದಕ್ಕೂ ಮಹಿಳೆ ಕಾರಣ ಎನ್ನುವುದು ಸುಲಭ.ಯಾಕೆ ಕಾರಣಳಾದಳೆನ್ನುವುದನ್ನು ತಿಳಿಯುವುದು ಕಷ್ಟ. ತಾಯಿಯನ್ನು ಎಲ್ಲಿ ಭಕ್ತಿಗೌರವದಿಂದ ಕಾಣಲಾಗುವುದೋ ಅಲ್ಲಿ ಸುಖ ಶಾಂತಿ ಸಮೃದ್ದಿಯಿರುತ್ತದೆನ್ನುವುದು ಹಿಂದೂ ಸನಾತನ ಧರ್ಮ ತಿಳಿಸುತ್ತದೆ. ಭಾರತ ಇಂದು ಅಶಾಂತಿಯ ಗೂಡಾಗುತ್ತಿದೆ ಎಂದರೆ ಭಾರತಮಾತೆಗೆ ತೋರಿಸದ ಗೌರವ ಎಂದರೆ ಒಪ್ಪಿಕೊಳ್ಳಲು ಎಷ್ಟು ಮಂದಿ ತಯಾರಿದ್ದಾರೆ?
ದೇಶಭಕ್ತರು ನಡೆಸಿರುವರಾಜಕೀಯ ಹೋರಾಟ ಹಾರಾಟ ಮಾರಾಟದಲ್ಲಿ ಸ್ತ್ರೀ ಯರನ್ನುಹೆಚ್ಚಾಗಿ ಬಳಸಲಾಗಿದೆ. ಮನೆಯೊಳಗೆ ಸಮಾಧಾನ ಶಾಂತಿ,ಸುರಕ್ಷಿತವಾಗಿದ್ದ ಮಹಿಳೆ ಯಾವಾಗ ಸಿಡಿದು ಹೊರಬಂದಳೋ ಅದೇ ಮುಂದೆ ಸಾಧನೆಯಾಗಿ ಕಾಣಲಾರಂಭಿಸಿತು. ಇದರಿಂದಾಗಿ ಸಮಾಜ ಸಂಘ,ಸಂಸ್ಥೆಗಳು ಬೆಳೆದವು. ಇದರೊಂದಿಗೆ ರಾಜಕೀಯ ಬೆಳೆಯಿತು.ಅದೇ ರಾಜಕೀಯ ಮನೆಯೊಳಗೆ ತೂರಿ ಕೊಂಡು
ಹಣಸಂಪಾದನೆ ಮಾಡುವ ಮಹಿಳೆ ಬೇರೆ ಗೃಹಕೆಲಸ ಮಾಡುವ ಗೃಹಿಣಿ ಬೇರೆಯಾಗಿ ಬೆಳೆದರು.ಯಾವಾಗ ಸ್ತ್ರೀ ಯರ ನಡುವೆ ಅಂತರ ಬೆಳೆಯಿತೋ ಮಧ್ಯವರ್ತಿಗಳು ಆಳಲು ಪ್ರಾರಂಭಿಸಿದರು. ಭೂಮಿಯಲ್ಲಿ ಬದುಕುವುದೇ ಬೇರೆ ಆಳೋದೇ ಬೇರೆಯಾಯಿತು. ಜೀವನವೆಂದರೆ ಜೀವಿಗಳ ವನ.ಈ ಜೀವರಕ್ಷಣೆಗಾಗಿ ಆತ್ಮಹತ್ಯೆಗಳಾದವು.
ಆತ್ಮವೇ ದೇವರೆಂದವರಿಗೆ ಸ್ತ್ರೀ ಯರಲ್ಲಿದ್ದ ಆತ್ಮ ಕಾಣಲಿಲ್ಲ.
ಹೀಗಾಗಿ ಅಧರ್ಮ, ಅಸಮಾನತೆ,ಅನ್ಯಾಯ,ಅಸತ್ಯದ ಭ್ರಷ್ಟಾಚಾರಕ್ಕೆ ತಿಳಿಯದೆಯೇ ಸ್ತ್ರೀ ಸಹಕಾರವೂ ಸಿಗುತ್ತಾ ಕೊನೆಗೆ ಅದೇ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಕಲಿಯುಗ ಪ್ರಾರಂಭವಾಯಿತು.
ಈಗಿನಪರಿಸ್ಥಿತಿಯಲ್ಲಿ ಅನೇಕ ಸ್ತ್ರೀ ಯರಿಗೆ ಸ್ವಾತಂತ್ರ್ಯ ಸಿಕ್ಕಿದೆ.
ಆದರೆ ಅಧ್ಯಾತ್ಮಿಕ ಕ್ಷೇತ್ರಕ್ಕೆ ಬಂದಾಗ ಸತ್ಯಕ್ಕೆ ಬೆಲೆಯಿಲ್ಲ ಧರ್ಮಕ್ಕೆ ನೆಲೆಯಿಲ್ಲವಾಗಿದೆ. ಎಲ್ಲಿರುವುದು ದೇವರು ಮಹಾತ್ಮರು ಎಂದರೆ ಫೋಟೋ ತೋರಿಸಿ ದೇವಸ್ಥಾನ ತೋರಿಸುವ ಮಕ್ಕಳೊಳಗೇ ಅಡಗಿರುವ ದೈವತ್ವಕ್ಕೆ ಸರಿಯಾದ ಶಿಕ್ಷಣ ಕೊಡದೆ ಬೆಳೆಸುವ ಪೋಷಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣಸಂಪಾದನೆ ಮಾಡಿದರೂ ಸಾಲ ಬೆಳೆಯುತ್ತಿದೆಯೇ ಹೊರತು ಮಕ್ಕಳಲ್ಲಿ ಸತ್ಯಜ್ಞಾನ ಬೆಳೆಯುತ್ತಿಲ್ಲ. ಅದರಲ್ಲಿ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ದೂರವಿಟ್ಟ ಹಿಂದಿನವರ ಅಜ್ಞಾನದಿಂದ ಇಂದು ವಿದ್ಯೆ ಅವಿದ್ಯೆಯಾಗಿದೆ ಎಂದರೆ ಅರ್ಥ ವಾಗದು. ಕಾರಣ, ವಿದ್ಯೆಯಿಂದ ವಿನಯ ಬೆಳೆಯಬೇಕು. ಸತ್ಯ ಧರ್ಮ ರಕ್ಷಣೆ ಆಗಬೇಕು. ಯೋಗದ ಮೂಲಕ ಪರಮಾತ್ಮನ ಜೀವಾತ್ಮ ಸೇರಬೇಕು. ಇದನ್ನು ಅಧ್ಯಾತ್ಮ ಸಾಧಕರು ತಿಳಿಸಿದ್ದರು.
ಹಿಂದೆ ವೇದಕಾಲದಲ್ಲಿದ್ದ ಎಷ್ಟೋ ಮಹಿಳೆಯರು ವೇದ ಶಾಸ್ತ್ರ ಪುರಾಣಗಳಿಂದ ಬ್ರಹ್ಮಜ್ಞಾನಿಗಳಾಗಿದ್ದರೆಂದರೆ ಅವರ ಶಿಕ್ಷಣ ಹೇಗಿರಬಹುದು?
ಜ್ಞಾನದೇವತೆ ಸರಸ್ವತಿಯನ್ನು ವಿಗ್ರಹದಲ್ಲಿಟ್ಟು ಪೂಜೆ ಮಾಡಿದವರೆಲ್ಲರೂ ಬ್ರಹ್ಮಜ್ಞಾನಿಗಳಾಗಿಲ್ಲ .ಬ್ರಾಹ್ಮಣರೆಲ್ಲರೂ ಬ್ರಹ್ಮನಾಗಿಲ್ಲ.ಎಂದರೆ ಸೃಷ್ಟಿಯ ರಹಸ್ಯವನರಿಯಲು ಜ್ಞಾನ ಬೇಕು. ಅದು ಒಳಗೇ ಇರುವ ಸಂಪತ್ತು. ಈಗಿನ ತಂತ್ರವಿದ್ಯೆ ಮನುಕುಲಕ್ಕೆ ಆಪತ್ತನ್ನು ತರುತ್ತಿದೆ ಎಂದಾಗ ಅದರಲ್ಲಿ ಸತ್ವ ಸತ್ಯ ತತ್ವವಿದೆಯೆ ಎನ್ನುವ ಬಗ್ಗೆ ಚಿಂತನೆ ನಡೆಸುವುದು ಗುರು ಹಿರಿಯರ ಧರ್ಮ ಕರ್ಮ ವಾಗಿದೆ.
ಒಟ್ಟಿನಲ್ಲಿ ನಮ್ಮ ತಂತ್ರಕ್ಕೆ ಸರಿಯಾಗಿ ಅತಂತ್ರ ಸ್ಥಿತಿಗೆ ತಲುಪಿರುವಾಗ ನಾವು ಸ್ವತಂತ್ರ ಪ್ರಜೆಗಳೆಂದು ಅಜ್ಞಾನದಲ್ಲಿ ಮಕ್ಕಳು ಮಹಿಳೆಯರ ಜ್ಞಾನವನ್ನು ದುರ್ಭಳಕೆ ಮಾಡಿಕೊಂಡು ಹೊರಗೆಳೆದರೆ ಒಳಗಿದ್ದ ಶಾಂತಿ ಸಿಗದು.
ಕೆಲವೆಡೆ ಸ್ತ್ರೀ ಯರು ಎಚ್ಚರವಾಗಿದ್ದರೆ ಹಲವೆಡೆ ಅಧರ್ಮಕ್ಕೆ ಕೈ ಜೋಡಿಸಿಕೊಂಡು ಮನರಂಜನೆಯಲ್ಲಿ ಮೈಮರೆತಿದ್ದಾರೆ.
ಇದರಿಂದಾಗಿ ಅಸುರಿ ಶಕ್ತಿ ಜಾಗೃತವಾಗಿ ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡು ಮೆರೆಯುತ್ತಿದೆ.
ದೇವತೆಗಳಿರುವಲ್ಲಿ ಶಾಂತಿ ಸಮಾಧಾನ ತೃಪ್ತಿ ಇರುತ್ತದೆ ಎಂದರೆ ಇಂದು ಲಕ್ಷ ಕೋಟಿ ಸಂಪಾದಿಸುವವರ ಗತಿ ಏನಾಗುತ್ತಿದೆ? ಮಕ್ಕಳೇ ಅವರಿಂದ ದೂರವಾಗುತ್ತಿದ್ದಾರೆ.ದ್ವೇಷ ಬೆಳೆಯುತ್ತಿದೆ ಮಕ್ಕಳು ದಾರಿತಪ್ಪಿ ನೆಡೆದಿದ್ದಾರೆಂದರೆ ತಾಯಿಯನ್ನು ಸರಿಯಾಗಿ ಗೌರವಿಸದಿರೋದು ಕಾರಣವಿರಬಹುದು ಅಥವಾ ತಾಯಿಗೆ ಉತ್ತಮ ವಿದ್ಯೆ ಕಲಿಸದಿರಬಹುದು, ಅಥವಾ ತಾಯಿಯೇ ಸ್ವಯಂ ಕೃತ ಅಪರಾಧಿಯಾಗಿರಬಹುದು. ಕಲಿಗಾಲದ ಪ್ರಭಾವ ಅತಿಯಾದ ಮೋಹಮಾಯೆಯ ಹಿಡಿತದಲ್ಲಿರುವ ಮನುಕುಲಕ್ಕೆ ಸತ್ಯಾಸತ್ಯತೆಯ ಅರಿವಿನ ಕೊರತೆಯಿದೆ. ಆ ಅರಿವು ಅಂತರಾಳಕ್ಕೆ ಇಳಿದವರಿಗಷ್ಟೆ ಅರ್ಥ ವಾಗಿದೆ. ಅವರನ್ನು ಮಹಾತ್ಮರೆಂದು ಕರೆಯಲಾಗಿದೆ. ಇದರಲ್ಲಿ ಸ್ತ್ರೀ ಶಕ್ತಿ ಇದ್ದರೂ ನಿರ್ಲಕ್ಷ್ಯ ಮಾಡಿರೋದೇ ಇಂದಿನ ಈ ಭಾರತದ ಸ್ಥಿತಿಗೆ ಕಾರಣವಾಗಿದೆ. ಈಗಲಾದರೂ ಹೆಣ್ಣು ಮನೆಯ ಕಣ್ಣು, ಒಂದು ಕಣ್ಣಿಗೆ ನೋವಾದರೂ ಎರಡೂ ಕಣ್ಣಿನಲ್ಲಿ ನೀರುಬರುತ್ತದೆ. ಅಂದರೆ ಹೃದಯಕ್ಕೆ ನೋವನ್ನು ಕೊಟ್ಟು ಬುದ್ದಿಬೆಳೆಸಿಕೊಂಡರೆ ಅಸುರರಾಗುವರು.
ತಲೆಯಲ್ಲಿ ಉತ್ತಮ ವಿಚಾರವಿದ್ದರೆ ಕಾಲಿನನಡಿಗೆ ಉತ್ತಮವಾಗಿರುತ್ತದೆ. ಹೀಗಾಗಿ ಎಷ್ಟು ಓದಿದ್ದೇವೆನ್ನುವ ಬದಲು ಎಷ್ಟು ಅರ್ಥ ಮಾಡಿಕೊಂಡು ಭೂಮಿಯಲ್ಲಿ ನಡೆದಿದ್ದೇವೆಂದು ಹಿಂದೂಗಳಾದವರು ತತ್ವದಿಂದ ಅರ್ಥ ಮಾಡಿಕೊಂಡರೆ ಸ್ತ್ರೀ ಸಹಕಾರವಿಲ್ಲದೆ ಈವರೆಗೆ ಏನೂ ನೆಡೆದಿಲ್ಲ ನಡೆಯೋದಿಲ್ಲ. ಅವಳ ಜ್ಞಾನಶಕ್ತಿಯಿಂದಲೇ ಭೂಮಿ ನಡೆದಿದೆ. ಇದರಲ್ಲಿ ಅಜ್ಞಾನ ಮಿತಿಮೀರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಒಲಿದರೆ ನಾರಿ ಮುನಿದರೆ ಮಾರಿ .ಒಮ್ಮೆ ಮಾರಿಯ ದರ್ಶನದಲ್ಲಿ ಸಾಕಷ್ಟು ಜೀವ ಹೋಗಿದೆ.ಇದಕ್ಕೆ ಕಾರಣವೆ ಸೋಮಾರಿತನ. ಸೋ ಮಾರಿ ಇರೋದೆಲ್ಲಿ? ನಮ್ಮೊಳಗೇ .
ಮನೆಯೊಳಗೆ ಹೊರಗೆ ದುಡಿದು ಸಂಸಾರ ನೆಡೆಸೋ ಪರಿಸ್ಥಿತಿ ನಾರಿಗೆ ಬಂದಿದೆ ಎಂದರೆ ಸೋಮಾರಿ ಸಂತಾನವಿದೆ ಎಂದರ್ಥ. ಭಾರತ ಮಾತೆಯ ಒಳಗಿರುವಕುಳಿತು ತಿನ್ನುವವರ ಸಂಖ್ಯೆ ಬೆಳೆದಿದೆ ಹೀಗಾದರೆ ಪ್ರಗತಿ ಸಾಧ್ಯವೆ?
ಪ್ರಜೆಗಳಲ್ಲಿ ಸಾಕಷ್ಟು ಆಸ್ತಿ ಹಣ,ಅಂತಸ್ತು ಇದ್ದರೂತೃಪ್ತಿ ಇಲ್ಲ ಎಂದರೆತಾಯಿಯ ಋಣ ತೀರಿಸಿಲ್ಲ. ಋಣ ತೀರೋದಕ್ಕೆ ಯೋಗದ ಅಗತ್ಯವಿದೆ. ಪರಮಾತ್ಮ ಜೀವಾತ್ಮರ ಸೇರೋದು ಮಹಾಯೋಗ.
ಭೂಮಿಗೆ ಬಂದ ಮೇಲೆ ಇಲ್ಲಿನ ಋಣ ತೀರದೆ ಪರಾಶಕ್ತಿ ಪರಮಾತ್ಮ ಕಾಣೋದಿಲ್ಲ.ಇದಕ್ಕೆ ಮಹಾತ್ಮರುಗಳು ರಾಜಕೀಯ ಬಿಟ್ಟು ಭೂಮಿಯಲ್ಲಿ ಸತ್ಯ ಧರ್ರ್ಮ ದಿಂದ ಜೀವನ ನೆಡೆಸುತ್ತಿದ್ದರು. ಬ್ರಹ್ಮನ್ ಸತ್ಯ ಜಗತ್ ಮಿಥ್ಯವೆಂದರು.ಇಂತಹ ಯೋಗಿಗಳ ಹೆಸರಿನಲ್ಲಿ ಭೋಗದ ಜೀವನ ನಡೆಸುವುದೇ ಸಮಸ್ಯೆಗೆ ಕಾರಣವಾದಾಗ ಎಷ್ಟು ಬೇಕೋ ಅಷ್ಟು ಯೋಗದ ಜೊತೆಗೆ ಭೋಗವಿದ್ದರೆ ಉತ್ತಮ.
ಏನೇ ಇರಲಿ ಸಂನ್ಯಾಸಿಯಾಗೋದು ಕಷ್ಟ.ಸಂಸಾರ ಇನ್ನೂ ಕಷ್ಟ.ಆದರೆ ಯೋಗದಿಂದ ಇವರೆಡೂ ಅರ್ಥ ವಾದರೆ ಲಿಂಗಬೇಧ,ಧರ್ಮಬೇಧ,ಜಾತಿ ಬೇಧದ ಹಿಂದಿನ ಹಲವು ರಾಜಕೀಯ ಕುತಂತ್ರದಿಂದ ಅಧರ್ಮ ಹೇಗೆ ಬೆಳೆದಿದೆ ಇದೇ ಮುಂದೆ ಯಾವ ರೀತಿಯಲ್ಲಿ ತಿರುಗಿ ಹೊಡೆಯುತ್ತದೆ ಎಂದು ತಿಳಿಯಬಹುದು.
ಮಾಡಿದ್ದುಣ್ಣೋ ಮಹಾರಾಯ. ತಾಯಿ ಮಾಡಿ ಹಾಕಿದ್ದ ನ್ನು ಉಂಡು ಬೆಳೆದವರು ತಾಯಿಯನ್ನು ಆಳೋದೆಂದರೆ ಏನರ್ಥ. ಕಾಲಸರಿಯಿಲ್ಲವೆನ್ನುವ ಬದಲು ನಮ್ಮ ಕಲಿಕೆಯ ವಿಷಯ ಸರಿಯಿಲ್ಲವೆಂದರೆ ಸರಿಯಾಗುತ್ತದೆ..ವಿಷಯದಲ್ಲಿ ವಿಷವಿದ್ದರೆ ಅಮೃತ ಎಲ್ಲಿರುವುದು?
ದೇವತೆಗಳು ಅಮೃತ ಕ್ಕಾಗಿ ಸಮುದ್ರಮಥನ ಮಾಡಿ ಅಮೃತ ಸೇವಿಸಿ ಗೆದ್ದರು. ಆದರೆ ಅಸುರರಿಗೆ ಮಾಡಿದ ಮೋಸದ ಫಲ ಇಂದಿಗೂ ಭೂಮಿಯಲ್ಲಿ ಅಸುರರು ಜನ್ಮಪಡೆದು ದ್ವೇಷ ಮುಗಿಲುಮುಟ್ಟಿದೆ. ಯಾರಿಗೆ ಗೊತ್ತು ಯಾರಲ್ಲಿ ದೇವರಿರುವರೋ ಅಸುರರೋ ಎಂದು. ಅವರವರ ಆತ್ಮವೆ ಅವರ ದೇವರು. ಜನ್ಮವೇ ಇಲ್ಲದಿದ್ದರೆ ಭೂಮಿ ಋಣ ಇರದು.
ಹೀಗಾಗಿ ಭೂಮಿಯಲ್ಲಿ ಜನ್ಮಪಡೆಯಲು ಕಾರಣವೇ ಹಿಂದಿನ ಋಣ. ಇದನ್ನು ಸೇವೆಯಿಂದಷ್ಟೆ ತೀರಿಸಬಹುದೆನ್ನುವರು ಅದೂ ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇರಬಾರದಂತೆ .ಈಗ ಎಲ್ಲಿರುವರು ? ದೇಶದಿಂದ ನನಗೇನು ಲಾಭ? ತಾಯಿಯಿಂದ ನನಗೇನು ಲಾಭ? ಎನ್ನುವ ವ್ಯವಹಾರಕ್ಕೆ ಸಿಲುಕಿದ ಮನಸ್ಸಿಗೆ ಹಣವೇ ಜ್ಞಾನಕ್ಕಿಂತ ಶ್ರೇಷ್ಠ ಎನ್ನುವ ಹಂತ ತಲುಪಿದೆ. ಇದನ್ನು ನೇರವಾಗಿ ಧಾರ್ಮಿಕ ವರ್ಗ ವೇ ಹೇಳುವಾಗ ಸಾಮಾನ್ಯರ ಪಾಡೇನು?
ಲಕ್ಷ ಕೋಟಿ ಕೊಟ್ಟರೆ ಮಹಾಯಾಗ ಮಾಡಿಸಬಹುದು.ಕೋಟಿ ಸಂಪಾದನೆಗೆ ಭ್ರಷ್ಟಾಚಾರ ಕ್ಕೆ ಇಳಿದಿರಬೇಕು. ಪಿತೃಗಳ ಆಸ್ತಿ ಮಾರಿ ಧರ್ಮ ರಕ್ಷಕಾಗಲಾರ.ಅವರ ಆಸ್ತಿಯನ್ನು ಅವರದೇ ಆದ ಧರ್ಮ ಕರ್ಮದಿಂದ ಬೆಳೆಸಿ ಸೇವೆ ಮಾಡೋದರಿಂದ ಒಳಗೇ ತೃಪ್ತಿ ಸಿಗುತ್ತದೆ.
ಕಷ್ಟವಿದೆ. ಕಷ್ಟಪಡದೆ ಸುಖವಿಲ್ಲ. ಸುಖ ಒಳಗಿನ ಜ್ಞಾನದಿಂದ ಬೆಳೆದರೆ ಯೋಗ. ಹೊರಗಿನ ಜ್ಞಾನದಿಂದ ಬೆಳೆದರೆ ಭೋಗ.
ಎರಡೂ ಒಂದಾಗಿ ತಿಳಿದಾಗಲೇ ಪರಮಾತ್ಮನ ದರ್ಶನ.
_ಭಾನುವಿನಂತಿಪ್ಪುದು ಜ್ಞಾನ,_ _ಭಾನುಕಿರಣದಂತಿಪ್ಪುದು ಭಕ್ತಿ,_
_ಭಾನುವನಳಿದು ಕಿರಣಂಗಳಿಲ್ಲ,_
_ಕಿರಣಂಗಳನಳಿದು ಭಾನುವಿಲ್ಲ,_
_ಜ್ಞಾನವಿಲ್ಲದ ಭಕ್ತಿ,_
_ಭಕ್ತಿಯಿಲ್ಲದ ಜ್ಞಾನವೆಂತಿಪ್ಪುದು ಚೆನ್ನಮಲ್ಲಿಕಾರ್ಜುನಾ?_
*- ಅಕ್ಕಮಹಾದೇವಿ.*
*ಭಾವಾರ್ಥ:-*
ಜ್ಞಾನ ಅಥವಾ ಅರಿವು, ತಿಳುವಳಿಕೆ ಎಂಬುದು ಪ್ರಜ್ವಲಿಸುತ್ತಿರುವ ಸೂರ್ಯನಂತೆ, ಭಕ್ತಿ ಎನ್ನುವುದು ಆ ಸೂರ್ಯನ ಕಿರಣದಂತೆ. ಸೂರ್ಯನಿಲ್ಲದೆ ಕಿರಣ ಇರುವುದಿಲ್ಲ. ಕಿರಣಗಳಿಲ್ಲದ ಸೂರ್ಯನಿಲ್ಲ. ಕಿರಣ ಮತ್ತು ಸೂರ್ಯ ಎರಡೂ ಪರಸ್ಪರ ಪೂರಕ. ಅದೇ ರೀತಿಯಲ್ಲಿ ಪರಿಪೂರ್ಣ ಅರಿವಿಗೆ ಭಕ್ತಿ ಜ್ಞಾನ ಎರಡೂ ಇರಬೇಕು. ಭಕ್ತಿ ಇಲ್ಲದ ಜ್ಞಾನ, ಜ್ಞಾನವಿಲ್ಲದ ಭಕ್ತಿ ಎರಡೂ ಪರಿಪೂರ್ಣವಲ್ಲ, ಎಂದು ಅಕ್ಕಮಹಾದೇವಿ ತಿಳಿಸಿದ್ದಾರೆ.
_ವಿಶ್ವ ಕಂಡ ಮಹಾ ಮೇಧಾವಿ_
_ಆಲ್ಬರ್ಟ್ ಐನ್ಸ್ಟೆನ್ ಹೇಳಿದ ಪ್ರಸಿದ್ದ ಮಾತು._
*_ಧರ್ಮ ರಹಿತ ವಿಜ್ಞಾನ ಕುಂಟು,_*
*_ವಿಜ್ಞಾನ ರಹಿತ ಧರ್ಮ ಕುರುಡು.._*
No comments:
Post a Comment