ಒಬ್ಬ ವ್ಯಕ್ತಿಯು ಸಿರಿವಂತನೋ, ಬಡವನೋ ಆಗಿರಬಹುದು ಆದರೆ ಅವರಲ್ಲಿರುವ ಜೀವಜ್ಯೋತಿಯು ಸಿರಿವಂತವಲ್ಲ ಬಡವವಲ್ಲ. ಒಬ್ಬ ವ್ಯಕ್ತಿಯು ವಿಶ್ವವಿದ್ಯಾಲಯದಲ್ಲಿ ನಾಲ್ಕು ವರ್ಷ ಓದಿದರೆ ಅವನಿಗೆ ವೈದ್ಯ, ವಕೀಲ, ಅಭಿಯಂತರ ಪದವಿಗಳನ್ನು ಕೊಡುತ್ತಾರೆ. ಆದರೆ ಒಬ್ಬ ವ್ಯಕ್ತಿಯು ನೂರು ವರುಷ ಬದುಕಿದರೂ ಅವನಲ್ಲಿರುವ ಜೀವಜ್ಯೋತಿಗೆ ಯಾವ ಪದವಿ ಪ್ರಶಸ್ತಿಗಳಿಲ್ಲ. ಲೌಕಿಕವಾದ ಭೌತಿಕವಾದ ನಮ್ಮ ಎಲ್ಲ ಪದವಿ, ಪ್ರಶಸ್ತಿಗಳನ್ನು ಮಾನ ಸನ್ಮಾನಗಳನ್ನು ಮೀರಿದ್ದು ಈ ಜೀವಜ್ಯೋತಿ ಪರಂಜ್ಯೋತಿ! ಮನೆ-ತೋರಿಸಬಹುದು, ಮನೆಯೊಳಗಿರುವ ಬಯಲನ್ನು ತೋರಿಸಲು ಬರುವುದಿಲ್ಲ. ನಮ್ಮ ದೇಹವೆಂಬ ಮನೆಯೊಳಗಿರುವ ಜೀವಜ್ಯೋತಿಯನ್ನು ಆತ್ಮವನ್ನು ತೋರಿಸಲಾಗದು. ನಾವು ಕಟ್ಟಿಸಿದ ಮನೆ ಒಮ್ಮೆ ಬೀಳಬಹುದು ಮತ್ತೆ ಅದನ್ನು ಕಟ್ಟಲು ಬರುತ್ತದೆ. ಮನೆಯೊಳಗಿರುವ ಬಯಲು ಬೀಳುವುದೂ ಇಲ್ಲ ಏಳುವುದೂ ಇಲ್ಲ. ಹಾಗೇ ದೇಹವು ಹೋಗಬಹುದು, ಬರಬಹುದು ಆದರೆ ಜೀವಜ್ಯೋತಿ, ಆತ್ಮಜ್ಯೋತಿ ಬರುವುದಿಲ್ಲ, ಹೋಗುವುದಿಲ್ಲ. ಅದು ನಿತ್ಯ ನೂತನ ಶಾಶ್ವತ.
ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ದೇವಮಂಡಲ* ಪುಸ್ತಕದಿಂದ ಪುಟ ೨೩.
ಬಡತನ ಸಿರಿತನದ ಅಂತರದಲ್ಲಿ ಮನೆತನವೂ ಮರೆತು ಹೋಗುತ್ತಿದೆ. ನಮ್ಮದು ಸಿರಿವಂತರ ಕುಟುಂಬವಾಗಿತ್ತು.ಈಗ ನಮ್ಮಲ್ಲಿ ಬಡತನವಿದೆ ಎನ್ನುವವರೊಮ್ಮೆ ಯೋಚಿಸಿದರೆ ಅಂದಿನ ಕಾಲದ ಶ್ರೀಮಂತ ರಲ್ಲಿದ್ದ ಜ್ಞಾನಕ್ಕಿಂತ ಉನ್ನತಮಟ್ಟದ ಜ್ಞಾನ ನಮ್ಮೊಳಗೇ ಇದ್ದರೂ ಗುರುತಿಸುವ ಶಿಕ್ಷಣವಿಲ್ಲದೆ ಇಂದು ಬಡವರನ್ನು ಹಣದಿಂದ ಅಳೆಯುವ ಕಾಲ ಬಂದಿದೆ. ಅದೇ ಹಣವಂತರಲ್ಲಿ ಹೃದಯವಂತಿಕೆಯ ಕೊರತೆಯಿದೆ ಎಂದರೆ ಭಗವಂತನಿಗೆ ಹತ್ತಿರವಾಗಿರೋದು ಹೃದಯವಂತಿಕೆಯುಳ್ಳ ಬ್ರಾಹ್ಮಣ. ಇಲ್ಲಿ ಬ್ರಾಹ್ಮಣ ಎಂದರೆ ಜಾತಿಯಾಗೋದಿಲ್ಲ ಬ್ರಹ್ಮನ ಸತ್ಯವನರಿತು ಬ್ರಹ್ಮಾಂಡದಲ್ಲಿ ಇದ್ದವರಾಗುವರು.ಎಲ್ಲಾ ಬ್ರಹ್ಮಾಂಡದ ಒಂದು ಸಣ್ಣಕಣವೆ ಆಗಿದ್ದರೂ ಅದನ್ನರಿಯದೆ ಹೊರಗಿನಿಂದ ಮೇಲು ಕೀಳಿನ ರಾಜಕೀಯ ನಡೆಸಿದರೆ ನಿಜವಾದ ಬಡವ ಎಲ್ಲೂ ಇಲ್ಲ. ಇದ್ದರೆ ಅದು ನಮ್ಮೊಳಗೇ ಇರೋದು. ಎಷ್ಟು ಸಾಲ ಮಾಡಿ ಶ್ರೀಮಂತ ನಾಗಿದ್ದರೂ ಅದನ್ನು ತೀರಿಸಿ ಕೊಟ್ಟು ಹೋಗೋ ವರೆಗೂ ಆತ್ಮಕ್ಕೆ ಶಾಂತಿ ಮುಕ್ತಿ ಸಿಗದೆನ್ನುವುದು ಸನಾತನ ಧರ್ಮ.
No comments:
Post a Comment