ಸಣ್ಣ ವಯಸ್ಸಿನಿಂದಲೇ ಅಪ್ಪ ಅಮ್ಮನವರ ಮೇಲೆ ಪ್ರೀತಿ ವಿಶ್ವಾಸ.ತಪ್ಪು ಮಾಡಿದಾಗ ಬೈಸಿಕೊಂಡು ತಿದ್ದಿ ನಡೆಯುವುದು ಸಹಜವಾಗಿತ್ತು. ಸತ್ಯದ ವಿಚಾರದಲ್ಲಿ ಸಾಕಷ್ಟು ಬಾರಿ ಬೈಸಿಕೊಂಡಿದ್ದೆ ಕಾರಣ ದೊಡ್ಡವರು ಮಾಡಿದ್ದನ್ನು ಸಣ್ಣವರು ಮಾಡಿದರೆ ತಪ್ಪೇನು ಎನ್ನುವ ಚಿಂತನೆ ಯಲ್ಲಿದ್ದ ನನ್ನ ಪ್ರಶ್ನೆಗೆ ಉತ್ತರಿಸುವವರಿರಲಿಲ್ಲ. ತಪ್ಪು ಮಾಡಿ ತಪ್ಪು ಮಾಡಿದೆ ಎನ್ನುವ ಬದಲು ಮಾಡದಿದ್ದರೆ ಬೈಸಿಕೊಳ್ಳುವುದು ತಪ್ಪುತ್ತದೆ ಎಂದರೂ ತಿಳಿಯದೆ ನಡೆದೇ ಹೋದಾಗ ಸತ್ಯ ಹೇಳಿದರೂ ನಂಬದ ಪರಿಸ್ಥಿತಿ. ಸುಳ್ಳು ಹೇಳಿದರೆ ಒಳಗಿನ ಕೂಗು ನೀನು ಸುಳ್ಳು ಹೇಳಿದ್ದೀಯ..ಹೊರಗಿನವರಿಂದ ಬೈಸಿಕೊಂಡರೂ ಸರಿ ಒಳಗಿನಕೂಗಿಗೆ ಸರಿಯಿರಬೇಕಷ್ಟೆ. ಇಲ್ಲವಾದರೆ ಇದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗುತ್ತದೆ.
ಹೇಗೆ ಧರ್ಮ ರಾಯನಿಗೆ ಕೆಟ್ಟವರು ಕಾಣಲಿಲ್ಲವೂ ದುರ್ಯೋಧನನಿಗೆ ಒಳ್ಳೆಯವರು ಕಾಣಲಿಲ್ಲ. ನಮ್ಮ ಮನಸ್ಸು ಇದ್ದಂತೆ ಲೋಕದ ಜನ ಕಾಣುವರು. ಇಂದಿಗೂ ಎಷ್ಟೋ ಒಳ್ಳೆಯವರನ್ನು ಕೆಟ್ಟದೃಷ್ಟಿಯಿಂದ ಕಂಡು ಹಿಂದೆ ಉಳಿಸಿರುವರು ಅದಕ್ಕೆ ಕೆಟ್ಟವರು ಮುಂದೆ ನಡೆದಿರೋದು.
ಇಷ್ಟಕ್ಕೂ ಯಾರನ್ನು ಯಾರು ನಡೆಸುವರು? ಪರಮಾತ್ಮನ ಒಳಗೆ ಅಡಗಿರುವ ಎಲ್ಲಾ ಜೀವಾತ್ಮರಿಗೆ ತನ್ನೊಳಗೆ ಅಡಗಿರುವ ಜ್ಞಾನದ ಆಸ್ತಿಯನ್ನು ಬಳಸಿಕೊಳ್ಳಲು ಹೊರಗಿನ ಸಹಕಾರ ಬೇಕೆ?
ಸರ್ಕಾರದಿಂದ ಶಿಕ್ಷಣ ಬದಲಾವಣೆಮಾಡಲಾಗಿದೆಯೆ?
ಇಲ್ಲವೆಂದರೆ ಯಾರು ಬದಲಾಯಿಸಬೇಕು? ಪ್ರಜಾಪ್ರಭುತ್ವ ನಡೆದಿರೋದು ಪ್ರಜೆಗಳ ಸಹಕಾರದಿಂದ. ಈ ಸಹಕಾರವೇ ಅಜ್ಞಾನದೆಡೆಗೆ ನಡೆದರೆ ಅದಕ್ಕೆ ತಕ್ಕಂತೆ ಜೀವನವಿರುತ್ತದೆ.
ಆದರೆ ಸನಾತನ ಧರ್ಮದಲ್ಲಿ ನಡೆಯುವುದಕ್ಕೆ ಕಷ್ಟವಿದೆ.
ವೈಜ್ಞಾನಿಕ ವಾಗಿ ಮುಂದೆ ಬೆಳೆದಿರುವ ಮನಸ್ಸಿಗೆ ಕಣ್ಣಿಗೆ ಕಾಣೋದಷ್ಟೆ ಸತ್ಯ. ಕಾಣದ ಸತ್ಯ ನಮ್ಮ ಹಿಂದೆ ಒಳಗೇ ಇದ್ದು ನಡೆಸಿದರೂ ನಾನು ಒಪ್ಪೋದಿಲ್ಲವೆಂದರೆ ನಡೆಸೋದು ಬಿಡೋದಿಲ್ಲ. ಇದಕ್ಕಾಗಿ ಹೊರಗಿನಿಂದ ಅಸತ್ಯ ಅನ್ಯಾಯ ಅಧರ್ಮ ಬೆಳೆದು ಪ್ರತಿಫಲವಾಗಿ ಹಿಂದಿರುಗಿಬರುತ್ತಿದೆ. ಒಂದು ಘಟ್ಟದವರೆಗೆ ಅಸತ್ಯ ಬೆಳೆಸಬಹುದು ಮಿತಿಮೀರಿದರೆ ಕೆಳಗಿಳಿದು ಬರಲೇಬೇಕು. ಹಾಗಾಗಿ ನಮ್ಮ ಗುರುಹಿರಿಯರು ಸತ್ಯದ ಪರ ನಿಂತು ಆಕಾಶದೆತ್ತರ ಬೆಳೆದರು. ಈಗಲೂ ಆಕಾಶದೆತ್ತರ ಹಾರಿದರೂ ಭೂಮಿಯ ಸತ್ಯ ಸತ್ವ ತತ್ವದ ಅರಿವಿಲ್ಲದಿದ್ದರೆ ವ್ಯರ್ಥ ಜೀವನವೆನ್ನುವರು
ಇದಕ್ಕಾಗಿ ಆತ್ಮಸಾಕ್ಷಿ ಯೇ ದೊಡ್ಡದು.
ದೇಶ ಹಿಂದುಳಿದಿಲ್ಲ ಹಿಂದಿನವರಂತೆ ದೇಶವಾಸಿಗಳಲ್ಲಿ ಸತ್ಯ ಜ್ಞಾನವಿಲ್ಲ. ಹಾಗಾದರೆ ರಾಜಕೀಯದಲ್ಲಿ ಅಡಗಿದೆಯೆ? ಇಲ್ಲ
ಮನೆಯೊಳಗೆ ಇದೆಯೆ? ಮನಸ್ಸಿನಲ್ಲಿದೆಯೆ?
ಸತ್ಯ ಯಾವತ್ತೂ ಒಂದೇ.. ಅದರೊಂದಿಗೆ ಹೋದವರಿಗೆ ಅರ್ಥ ವಾಗಿದೆಯಷ್ಟೆ.ಅದನ್ನು ಬೆಳೆಸೋದಾಗಲಿ ಅಳಿಸೋದಾಗಲಿ ಒಬ್ಬರಿಂದ ಸಾಧ್ಯವಿಲ್ಲ.ಅವರವರ ಸತ್ಯಕ್ಕೆ ತಕ್ಕಂತೆ ಧರ್ಮ ಬೆಳೆದಿದೆ. ಒಂದೇ ಸತ್ಯ ಅಸಂಖ್ಯಾತ ಸತ್ಯ ಆಗಿರೋದು ಹೊರಗಿನ ಜಗತ್ತಿನ ಪ್ರಭಾವ.
ಆ ಜಗತ್ತಿನೊಳಗಿದ್ದು ಒಂದೇ ಸತ್ಯದೆಡೆಗೆ ನಡೆದವರು ಮಹಾತ್ಮರುಗಳು. ಮಹಾತ್ಮರುಗಳು ಮೇಲಿನಿಂದ ಬಂದರೋ ಕೆಳಗಿನಿಂದ ಮೇಲೇರಿದರೋ ಒಟ್ಟಿನಲ್ಲಿ ಸತ್ಯವೇ ದೇವರೆಂದರು.
ಹೇಳಿದ್ದು ಕೇಳಿದ್ದು ಮಾಡಿದ್ದು ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿ ಚಿಂತಿಸಿ ಅನುಭವಿಸಿದ ಮೇಲೇ ಸತ್ಯ ತಿಳಿಯುವುದು..ನಿಧಾನವೇ ಪ್ರಧಾನ.ತಾಳಿದವನು ಬಾಳಿಯಾನು. ಒಳ್ಳೆಯದನ್ನು ಹೇಳಿ,ಕೇಳಿ ಮಾಡಿ ನೋಡಿದವರಿಗೆ ಜೀವನದಲ್ಲಿ ಒಳ್ಳೆಯದು ಆಗಿದೆ. ಆಯಸ್ಸು ಕಡಿಮೆಯಾಗಿದೆ ಎಂದರೂ ಒಳ್ಳೆಯದೆ ಕಾರಣ ಜೀವನ್ಮುಕ್ತಿ ಬೇಗ ಸಿಕ್ಕಿದೆ ಎನ್ನಬಹುದಲ್ಲವೆ?
ಹಿಂದಿನ ಮಹಾತ್ಮರ ಕಥೆಗಳಲ್ಲಿ ಹೆಚ್ಚು ಆಯಸ್ಸಿರುವ ಮಗು ಬೇಕೋ ಕಡಿಮೆ ಆಯಸ್ಸಿನಜ್ಞಾನಿಯಾದ ಮಗು ಬೇಕೋ ಎಂದರೆ ಕಡಿಮೆ ಆಯಸ್ಸಾದರೂ ಸರಿ ಜ್ಞಾನಿಯಾದ ಮಗುವಿರಲಿ ಎಂದು ದೇವರನ್ನು ಬೇಡುತ್ತಿದ್ದರಂತೆ.
No comments:
Post a Comment