ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, June 14, 2024

ಅಹಂಕಾರ ಆತ್ಮವಿಶ್ವಾಸವಾಗದು

ನನ್ನ ಮಾತನ್ನು ಕೇಳಿ ಹಲವರು ನನ್ನಲ್ಲಿ ಅಹಂಕಾರವಿದೆ ಎಂದು ತಿಳಿಯುವರು ಆದರೆ ಅಹಂಕಾರ ಪಡಲು ನನ್ನಲ್ಲಿ ಏನಿದೆ ಎಂದು ನಾನೇ ಪ್ರಶ್ನೆ ಮಾಡಿಕೊಂಡಾಗ  ನನ್ನದೇನೂ ಇಲ್ಲ ಎಲ್ಲಾ ಆ ಭಗವತಿಯ ಪ್ರೇರಣೆ ಎನ್ನುವ ಸತ್ಯ ತಿಳಿದಾಗ ಸತ್ಯ ತಿಳಿಸುವುದನ್ನು ಅಹಂಕಾರ ವೆಂದುಕೊಂಡರೆ ತಪ್ಪು ಅದನ್ನು ಆತ್ಮವಿಶ್ವಾಸವೆಂದುಕೊಂಡಾಗ  ಸತ್ಯದರ್ಶನ ನಮಗೆ ಒಳಗೇ ಆಗುತ್ತದೆ. ಯಾರೇ ಆಗಿರಲಿ  ಸತ್ಯದ ದಾರಿಯಲ್ಲಿ ನಡೆಯುವಾಗ  ಆತ್ಮವಿಶ್ವಾಸ ಹೆಚ್ಚುತ್ತದೆ ಅಹಂಕಾರ ಕರಗುತ್ತದೆ. ಇಷ್ಟಕ್ಕೂ ಅಹಂಕಾರ ಪಡಲು ನಾವ್ಯಾರು? ಎಲ್ಲಿಂದ‌ಬಂದೆವು? ಯಾಕೆ ಬಂದೆವು? ಎಲ್ಲಿಗೆ ಸೇರಬೇಕು? ಯಾಕೆ  ಸೇರಬೇಕೆಂಬ ವಿಷಯ ಅಧ್ಯಾತ್ಮ ದ ಮೂಲಕ ತಿಳಿಯುವಾಗ ಅಹಂಕಾರ ಹೆಚ್ಚಾಗುವುದೆ ಆತ್ಮವಿಶ್ವಾಸವೆ? 
ಅದಕ್ಕೆ ಮಾತಿಗಿಂತ ಕೃತಿಯೇ ಮೇಲೆಂದರು. ಇಂದು ಹೆಚ್ಚು ಕೃತಿಚೌರ್ಯ ಹೆಚ್ಚಾಗಿದೆ  ಕಾರಣ ಮೂಲದ ಕೃತಿಯಲ್ಲಿ ಅಡಗಿದ್ದ ಸತ್ಯ ಧರ್ಮ ಅರ್ಥ ವಾಗಿಲ್ಲವಷ್ಟೆ.ಕೃತಿಚೌರ್ಯಕ್ಕೆ ಹೆಚ್ಚು ಬೆಲೆಕೊಟ್ಟು ಕೊಂಡುಕೊಳ್ಳುವವರಿದ್ದಾರೆಂದರೆ ಅಸತ್ಯ  ಬೆಳೆಯುತ್ತಿದೆ ಎಂದರ್ಥ. ಎಷ್ಟು ಬೆಳೆದರೂ ಹೊರಜಗತ್ತಿನಲ್ಲಿ  ಹರಡುತ್ತದೆ ಅದೇ ಒಳಜಗತ್ತನ್ನು ಹಿಂದುಳಿಸುತ್ತದೆ.
ಆಕಾಶದೆತ್ತರ ಹಾರಬಹುದು ಅಲ್ಲಿಯೇ ವಾಸ ಮಾಡಲು ಸಾಧ್ಯವೆ? ಇಲ್ಲವೆಂದರೆ ನಾವು ಅರಿತಿರೋದು ಅಲ್ಪ ಸ್ವಲ್ಪ ವಾದರೂ ಇಷ್ಟೊಂದು ಹಾರಾಟ ಮಾರಾಟ ಹೋರಾಟ ನಡೆಸುತ್ತಿರೋದರ ಹಿಂದೆ  ಏನರ್ಥ ವಿದೆ?  ಶಾಂತವಾಗಿದ್ದ ಮನಸ್ಸಿಗೆ ಹೊರಗಿನ  ಅಸತ್ಯದ ವಿಷಯತುಂಬಿ  ಅಶಾಂತಿಯ ಗೂಡಾಗಿಸಿಕೊಂಡರೆ  ಕಷ್ಟ ‌ನಷ್ಟ ಯಾರಿಗೆ?
ಮನಸ್ಸು ಸ್ಥಿರವಾಗಲು ಅಧ್ಯಾತ್ಮ ಸತ್ಯ ಅಗತ್ಯವೆಂದರು.
ಅಧ್ಯಾತ್ಮ ಎಂದರೆ ತನ್ನತಾನರಿಯುವ  ಆತ್ಮಜ್ಞಾನವಾಗಿತ್ತು.
ಯಾರನ್ನೂ ಅರಿತು ನಡೆಯುವ ಮೊದಲು ಪರಮಾತ್ಮನ ಅರ್ಥ  ತಿಳಿದರೆ ಎಲ್ಲೋ ಹುಡುಕುವ ಬದಲು ಒಳಗೇ ಸಂಶೋಧನೆ ಆಗಬಹುದು. ಎಲ್ಲಾ ಕಾಲದ ಮಹಿಮೆ.
ಜಗತ್ತು ನಡೆದಿದೆ ನಡೆಯುತ್ತಿದೆ ನಡೆಯುತ್ತಲೇ ಇರಬೇಕು
 
ಅಧಿಕಾರ ಸ್ಥಾನ ಹಣವಿದ್ದವರು  ಅಸತ್ಯ ನುಡಿದರೂ ಸತ್ಯ ಎಂದು ತಿಳಿಯುವ ಜನರಿಗೆ  ಸತ್ಯ ನುಡಿಯುವವರ ಮಾತು ಅಹಂಕಾರ ಎನಿಸುವುದು ಸಹಜ. ವ್ಯಕ್ತಿಯನ್ನು ಕಾಣುವಾಗ ವ್ಯಕ್ತಿತ್ವದ ಪರಿಚಯವಾಗೋದು ಕಷ್ಟವಿದೆ. ಹೀಗಾಗಿ‌ಜಗತ್ತು ವ್ಯಕ್ತಿಯಿಂದ ನಡೆಯುತ್ತಿದೆ ವ್ಯಕ್ತಿತ್ವ ಕುಸಿಯುತ್ತಿದೆ. 

ಎಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಸಾಧಕರೆ. ಈ ಭೂಮಿಯಲ್ಲಿ ಜನ್ಮ ಪಡೆಯಲು ಎಷ್ಟೋ ಜನ್ಮಗಳನ್ನು ಪಡೆದು ಮಾನವನಾಗಿರೋದೆ ದೊಡ್ಡ ಸಾಧನೆ. ಮಾನವನಾಗಿ ಜನ್ಮ ಪಡೆದ ಮೇಲೆ ತನ್ನ ಜನ್ಮಕ್ಕೆ ಕಾರಣರಾದ  ಪೋಷಕರ ಋಣದಿಂದ ಹಿಡಿದು ನಡೆಸುತ್ತಿರುವ ಪರಮಾತ್ಮನ ವರೆಗೆ  ತಿಳಿದು ನಡೆಯುವುದೆ ಜೀವನದ ಗುರಿ.
ಇದರಲ್ಲಿ ಯಾರು ಎಷ್ಟು ಅರ್ಥ ಮಾಡಿಕೊಳ್ಳಲು ಸಾಧ್ಯವೋ ಅಷ್ಟು ತಿಳಿದು ಮೇಲೇರಿರುವರು. ಮೇಲೆ ಹೋದವರ ಹೆಸರು ಹಿಡಿದು ಕೆಳಗೆ ನಡೆಸುವರು.ಕೆಳಗಿದ್ದವರ ಹೆಸರು ಹಿಡಿದು ವ್ಯವಹಾರದೊಳಗಿರುವರು.ಏನೂ ಅರಿಯದವರ ಹಿಡಿದು ರಾಜಕೀಯ ಮಾಡುತ್ತಿರುವವರೆಲ್ಲರೂ ಸಾಧಕರೆ.
ಒಬ್ಬೊಬ್ಬರು  ಒಂದೊಂದು ಕಲೆಯಲ್ಲಿ ಆಸಕ್ತಿ ಹೊಂದಿ ಮುಂದೆ ನಡೆಯುವರು.ಇದರಲ್ಲಿ ಸತ್ಯಧರ್ಮ ಇದೆಯೋ ಇಲ್ಲವೋ ಎನ್ನುವ  ಜ್ಞಾನದಿಂದ  ನಡೆದಾಗಲೇ ಆತ್ಮಕ್ಕೆ ತೃಪ್ತಿ.
ಒಟ್ಟಿನಲ್ಲಿ ಅವರವರ ಆತ್ಮರಕ್ಷಣೆಗೆ ಸತ್ಯವೇ ದೇವರು.
ಅಸತ್ಯದಿಂದ  ದೈವತ್ವಕ್ಕೆ  ತಡೆಯಾದರೂ  ಕೊನೆಗೆ ಸತ್ಯದ‌ಕಡೆಗೆ ನಡೆದವರು  ಅನುಭವಿಗಳು. ಮಾಯೆಯ ಒಳಗಿರುವ‌ಮನಸ್ಸಿಗೆ ಸತ್ಯ ಅಸತ್ಯ ಎರಡೂ ಕಾಣುತ್ತದೆ.ಆದರೆ ಒಳಜಗತ್ತು ಸತ್ಯದಿಂದ ನಡೆಯುತ್ತದೆ. ಎರಡನ್ನೂ  ಬಳಸಿಕೊಂಡು ಮನುಕುಲ ನಡೆಯುತ್ತದೆ. ಇಲ್ಲಿ ಯಾರೂ ಶಾಶ್ವತವಲ್ಲ ಇದು ಸತ್ಯ.

ಅಂದೇ  ಪುರಂಧರ ದಾಸರು ಸತ್ಯವಂತರಿಗೆ ಇದು ಕಾಲವಲ್ಲ ದುಷ್ಟ ಜನರಿಗೇ ಸುಭಿಕ್ಷಕಾಲವೆಂದಿದ್ದರು.ಈಗಿದು ಪುರಂಧರ ದಾಸರ  ಹೆಸರಿನಲ್ಲೇ ಅಸತ್ಯ ಬೆಳೆಸಿದರೂ  ಕೇಳೋರಿಲ್ಲವಾಗಿದೆಯಷ್ಟೆ. ಇದು ಕಲಿಯುಗ.ಕಲಿಯುವ ಯುಗ ಹೊರಗೆ ಕಲಿತಷ್ಟೂ ಅಸತ್ಯವೇ ಬೆಳೆಯೋದು.ಒಳಗೆ ಸ್ವಚ್ಚವಾಗುವ‌ ಕಲಿಕೆಯಿದ್ದರೆ ಉತ್ತಮ. ಯಾರಿಗೆ ಗೊತ್ತು ಯಾರೊಳಗೆ ಯಾವ‌ ಮಹಾತ್ಮರಿರುವರೋ  ಅಸುರರಿರುವರೋ?  ಕಾಲಾಯ ತಸ್ಮೈ ನಮ:

No comments:

Post a Comment