ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Monday, June 10, 2024

ಸಾಲ ಅಥವಾ ಋಣಮುಕ್ತರಾಗಲು ಯೋಗ ಮಾರ್ಗಅಗತ್ಯ

ಉಚಿತ ಪಡೆದಷ್ಟೂ ಸಾಲ ಖಚಿತ ಎನ್ನುವುದು ಸತ್ಯ. ಇಂದಿನ ಭಾರತ ಸಾಲದೊಳಗೆ ಮುಳುಗಿದೆ ಅದನ್ನು ತೀರಿಸಲು ಸಾಕಷ್ಟು ರಾಜಕೀಯ ಶಕ್ತಿ ಬೆಳೆದಿದೆ ಆದರೆ ಅದಕ್ಕೆ ಬೇಕಾಗಿದ್ದು ರಾಜಯೋಗದ ಆತ್ಮಶಕ್ತಿ.ಆತ್ಮನಿರ್ಭರ ಭಾರತಕ್ಕೆ  ಎಷ್ಟೋ ಪ್ರಯತ್ನಗಳು ನೆಡೆದಿದೆ.ಇದರಲ್ಲಿ ಮುಖ್ಯವಾಗಿರುವ ಶಿಕ್ಷಣದ ಬದಲಾವಣೆಗೆ ಸ್ವಯಂ ಪೋಷಕರೆ ವಿರೋಧಿಗಳಾಗಿದ್ದು ತಮ್ಮ ‌ಮಕ್ಕಳಜ್ಞಾನ ಗುರುತಿಸುವುದರಲ್ಲಿ ಸೋತು ಹೊರಗಿನವರ ಜ್ಞಾನಕ್ಕೆ  ಸಾಲ ಮಾಡಿ ಬೆಲೆಕಟ್ಟಿ ಮಕ್ಕಳನ್ನು ದೂರ ಮಾಡಿಕೊಂಡರೆ ಅದು ಧರ್ಮ ವಾಗದು. ಒಟ್ಟಿನಲ್ಲಿ ಸರ್ಕಾರ ನಮ್ಮ ಸಹಕಾರದಿಂದ ನಡೆದಿರುವಾಗ  ಅದನ್ನು  ಯಾವ ಮಾರ್ಗದಲ್ಲಿ ನಡೆಸಬೇಕೆಂಬ ಜ್ಞಾನ ನಮ್ಮೊಳಗೇ ಇರೋವಾಗ ಅದನ್ನು ತಿರಸ್ಕರಿಸಿ ಹೊರಗೆ ನಡೆದಷ್ಟೂ ಸಾಲದ ಹೊರೆಯೇ ಹೆಚ್ಚು ಬೆಳೆದು ಜೀವ ಹೋಗುತ್ತದೆ.
ಭಾರತದ ಭೂಮಿ ಪವಿತ್ರವಾಗಿತ್ತು. ಈಗಲೂ ಕೆಲವೆಡೆ ಇದೆ.
ಯಾತ್ರಾಸ್ಥಳವನ್ನು  ಪ್ರವಾಸಿತಾಣ ಮಾಡಿದರೆ ಹಣ ಬರುತ್ತದೆ. ಆ ಹಣದಿಂದ ವ್ಯವಹಾರಕ್ಕೆ ಇಳಿದರೆ  ಅಸತ್ಯ ಅಧರ್ಮ ಅನ್ಯಾಯವೂ ಜೊತೆಗೆ ಸೇರುತ್ತದೆ. ದೈವತ್ವಕ್ಕೆ ಸತ್ಯ ಧರ್ಮ ನ್ಯಾಯ ನೀತಿ ಸಂಸ್ಕೃತಿ ಸಂಸ್ಕಾರ ಅಗತ್ಯವೆಂದಿದ್ದಾರೆ ನಮ್ಮ ಮಹಾತ್ಮರುಗಳು. ಹಾಗಾದರೆ ಈಗ ಇದು ಎಲ್ಲಿದೆ?
ಸತ್ಯ ತಿಳಿಸಿದರೆ ನಮ್ಮವರೆ ನಮಗೆ ಶತ್ರುಗಳಾಗುವರೆಂದರೆ ಇದಕ್ಕೆ ಕಾರಣವೇನು?
ಕಲಿಕೆಯ ಪ್ರಭಾವದಿಂದಾಗಿ ನಮ್ಮೊಳಗೇ ಹೊಕ್ಕಿರುವ ವಿಷಯದಲ್ಲಿ  ಸತ್ಯಕ್ಕಿಂತ ಮಿಥ್ಯವೇ ಬೆಳೆದಿದೆ. ಈ ಮಿಥ್ಯದ ಜಗತ್ತಿನಲ್ಲಿ  ನನ್ನ ನಾ ಮರೆತು ನಡೆಯುವಂತಾಗಿದೆ. ನನ್ನ ಜೀವ ಒಳಗಿದೆ ಇದನ್ನು ಸರ್ಕಾರ ಉಳಿಸುತ್ತದೆನ್ನುವ ಭ್ರಮೆ ಹೊರಗಿದೆ. ಸರ್ಕಾರಗಳು ಜನರಿಗಾಗಿ ಸಾಕಷ್ಟು ಉಚಿತ ಯೋಜನೆಯ ಜೊತೆಗೆ  ಶುಲ್ಕವನ್ನೂ ತಲೆಗೆ ಕಟ್ಟಿ ದೇಶ ನಡೆಸುತ್ತಿವೆ. ಸಾಲಕ್ಕೆ ಹೊರದೇಶದವರೊಂದಿಗೆ ಒಪ್ಪಂದ ಮಾಡಿಕೊಂಡು ವೈಜ್ಞಾನಿಕವಾಗಿ  ಮುಂದುವರಿಯುತ್ತಿದೆ. ಇದರಿಂದಾಗಿ ಎಷ್ಟೋ ಯುವಕರಿಗೆ ಉದ್ಯೋಗ ಸೃಷ್ಟಿ ಯಾಗಿ ದೇಶದೊಳಗೆ  ದುಡಿಯುವ ಅವಕಾಶವೂ ಇದೆ. ಲಕ್ಷಾಂತರ ಹಣ ಗಳಿಸಿ ಸ್ವಂತ ಮನೆ ಆಸ್ತಿ ಅಂತಸ್ತು ಮಾಡಿಕೊಂಡವರಲ್ಲಿ ಕೆಲವರು ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಹಲವು ಸಂಘಟನೆಯ ಮೂಲಕ  ಜನಜಾಗೃತಿ ಜನಸೇವೆ ನಡೆಸಿದ್ದಾರೆ.
ಆದರೆ ಹಲವರಿಗೆ ಇದರ ಬಗ್ಗೆ  ಚಿಂತೆಯಿಲ್ಲ. ದೇಶದಿಂದ ನನಗೇನು ಲಾಭವಾಗಬಹುದೆನ್ನುವ ಚಿಂತನೆಯಲ್ಲಿದ್ದರೆ ಹಲವರು ದೇಶವಿರೋಧ ಕೆಲಸದಲ್ಲಿ ಕೈ ಸೇರಿಸಿಕೊಂಡಿರೋದು  ಅಜ್ಞಾನದ ಸಂಕೇತ. ಇದಕ್ಕಾಗಿ  ವೈರಿಗಳಿಗೆ ಶಕ್ತಿ ಹೆಚ್ಚಾಗಿ  ತಾವೂ ಹಾಳಾಗುವುದರ ಜೊತೆಗೆ ‌ಮಕ್ಕಳು ಮಹಿಳೆಯರನ್ನೂ ಹೊರಗೆಳೆದು ಹಾಳು ಬಾವಿಗೆ ನೂಕುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರದಿಂದ ಕಷ್ಟ.
ಕಾರಣವಿಷ್ಟೆ ಮಾನವನ‌ಮನಸ್ಸು ಅವನಿಗೆ ಮಿತ್ರನಾಗಲೂಬಹುದು ಶತ್ರು ವಾಗಲೂಬಹುದು. ಯಾವಾಗ  ಆತ್ಮವಂಚನೆಯಡಿ ಜೀವನ‌ ಸಿಲುಕುವುದೋ  ಆಗಲೇ  ಅವನಿಗೆ ಅವನೇ ಶತ್ರು.
ಎಲ್ಲರೂ ಭೂಮಿ ಮೇಲೇ ಇರೋದು. ಎಲ್ಲರೂ ಭೂಮಿಯ ಮಕ್ಕಳೆ ಆಗಿದ್ದರೂ ಎಲ್ಲರಿಗೂ ಭೂ ಸೇವೆ ಮಾಡಿ ಋಣ ತೀರಿಸುವ‌ಜ್ಞಾನವಿರದು. ಇಂತಹ ಶಿಕ್ಷಣ ಕೊಡುವ ಗುರು ಸಿಗದು. ಗುರುತಿಸುವ  ಗುರುತ್ವಾಕರ್ಷಣೆಯ ಗುಣವಿರದು.
ಇದು ಮೇಲಿರುವ ಪರಮಾತ್ಮನಿಂದ  ಸಿಗೋವಾಗ ನಮ್ಮ ಕರ್ಮ ಪರಮಾತ್ಮನಿಗೆ ಅರ್ಪಣೆ ಆಗುವ ಸೇವೆಯಲ್ಲಿದೆ.
ಸೇವೆ ನಿಸ್ವಾರ್ಥ ನಿರಹಂಕಾರ ,ಪ್ರತಿಫಲಾಪೇಕ್ಷೆಯಿಲ್ಲದೆ  ಮಾಡಬೇಕೆಂದು ಪರಮಾತ್ಮನೆ ತಿಳಿಸಿರುವಾಗ ಈಗಿನ ನಮ್ಮ ಮನಸ್ಸು  ಎಷ್ಟು ಒಳಗೆ ಎಳೆದುಕೊಂಡರೂ  ಹೊರಗಿನ ರಾಜಕೀಯದ ವಿಚಾರಕ್ಕೆ ಬಂದಾಗ  ಇದು ಮರೆತುಹೋಗಿ ನಾನೇ ಮುಂದೆ ನಡೆಯುವುದು. ಕಷ್ಟವಿದೆ ಪರಮಾತ್ಮನ ಸತ್ಯ ಅರಿಯುವುದು.
ಆದರೂ ಕೆಲವರಿಗೆ ಸಾಧ್ಯವಾಗಿದೆ ಎಂದರೆ ಕಷ್ಟಪಟ್ಟು ಅವರು ಆತ್ಮಾವಲೋಕನ ದಿಂದ ನಡೆದಿದ್ದಾರೆ.ಹಾಗಂತ ಇದು ಎಲ್ಲರೂ ಒಪ್ಪಿಕೊಳ್ಳಲು ಕಷ್ಟ. ತನ್ನ ಜೀವನದಲ್ಲಾದ ಬದಲಾವಣೆಗೆ ಕಾರಣವೇ ನಮ್ಮವರ ಸಹಕಾರವಿರಬಹುದು.ಅಸಹಕಾರವೂ ಇರಬಹುದು.
ಯಾವಾಗ‌ಮನುಷ್ಯ ಸತ್ಯದ ದಾರಿ ಹಿಡಿಯುವನೋ ಹೊರಗಿನವರ ಅಸಹಕಾರ ಹೆಚ್ಚುವುದು. ಅದೇ ಸತ್ಸಂಗವಿದ್ದರೆ ಸಹಕಾರವೂ ಸಿಗಬಹುದು. ಇದು ಭೌತಿಕ ಸಾಧನೆಗೂ ಅನ್ವಯಿಸುತ್ತದೆ. ದುಷ್ಟರೊಂದಿಗೆ ದುಷ್ಟರಿಗೆ ಸಹಕಾರ ಸಿಗುತ್ತದೆ. ಇದು ಬೆಳೆದಂತೆಲ್ಲಾ ಭ್ರಷ್ಟಾಚಾರ ವಾಗುತ್ತದೆ. ಎಲ್ಲರೂ  ಅಸತ್ಯದಿಂದಲೇ ಭೂಮಿಯನ್ನು ಆಳೋದು.ಸತ್ಯದಿಂದ ಆಳೋದು ಸಾಧ್ಯವಿಲ್ಲ.ಆಳು ಆಳೋದಕ್ಕೆ ಸಹಕಾರ ಸಿಗೋದಿಲ್ಲವೆಂದರೂ  ಭೂಮಿಯನ್ನು ಆಳುತ್ತಿರುವ ಮಾನವನಿಗೆ ಸಹಕಾರ ಸಿಗುತ್ತಿದೆ.ಇದರರ್ಥ ಅಸತ್ಯಕ್ಕೆ ಸಹಕಾರ ಹೆಚ್ಚು. ಭೂಮಿ ಮನುಕುಲಕ್ಕೆ ಒಂದು ಮಾಧ್ಯಮವಷ್ಟೆ.ಇಲ್ಲಿ ತನ್ನ ಋಣ ತೀರಿಸಲು ಸೇವಕರೂ ಇರುವರು  ಋಣ ಬೆಳೆಸಿಕೊಳ್ಳುವ ಸೇವೆ ಮಾಡಿಸಿಕೊಳ್ಳುವವರೂ ಇರುವರು. ಇದರಿಂದಾಗಿ ಭೂಮಿಗೆ ಯಾವ ಕಷ್ಟ ನಷ್ಟವಿಲ್ಲ.ಯಾವಾಗ ಇವರಿಬ್ಬರಲ್ಲಿ ಅಜ್ಞಾನ ಬೆಳೆಯುವುದೋ ಆಗ ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆಯಾಗುತ್ತಾ ಭೂಕಂಪ,ಪ್ರಳಯ,ಪ್ರಕೃತಿ ವಿಕೋಪದಿಂದ ಜೀವ ಹೋಗುತ್ತದೆ. ಜೀವಕ್ಕೆ ಸಾವಿದ್ದರೂ ಆತ್ಮಕ್ಕಿಲ್ಲವೆಂಬ ಸತ್ಯ ತಿಳಿದವರು ಜೀವವಿರೋವಾಗ ಸತ್ಯ ಧರ್ಮವರಿತು ಹಿಂದಿನ ಗುರುಹಿರಿಯರ ಹಿಂದೆ ನಡೆಯುವರು.ತಿಳಿಯದವರು ವಿರೋಧಿಸುತ್ತಾ ಮುಂದೆ ಹೋಗಿ ಮರೆಯಾಗುವರು.ಇಷ್ಟೇ ಜೀವನದ ರಹಸ್ಯ.
ಬ್ರಹ್ಮಜ್ಞಾನಕ್ಕೆ  ತನ್ನ ಸೃಷ್ಟಿ ಯ ಮೂಲವನರಿತು ಅದರಲ್ಲಿರುವ ತತ್ವ ಸತ್ವ ತತ್ವ ತಿಳಿಯುವ‌ಪ್ರಯತ್ನ ಮಾಡಲು ನಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ಇದಕ್ಕೆ ಉತ್ತಮ ಗುರು ಶಿಕ್ಷಣವಿರಬೇಕು.ಗುರುವಾದವರು ಶಿಷ್ಯನ ಆತ್ಮದರ್ಶನ ಮಾಡಿರಬೇಕು ಶಿಷ್ಯನ ಹಣವನ್ನಲ್ಲ. ಇದನ್ನು ಪೋಷಕರು ಸ್ವಾಗತಿಸುವ‌ ಗುಣವಿರಬೇಕು. ಇಂತಹ ಪ್ರಜ್ಞೆ ಇರುವ ಯಾವುದೇ ಸಂಸಾರ,ಕುಟುಂಬ, ಗ್ರಾಮ,ರಾಜ್ಯ,ದೇಶ
ವಿಶ್ವ  ಸತ್ಯಯುಗವಾಗಿತ್ತು. ನಂತರ ಅಜ್ಞಾನ ಬೆಳೆಯುತ್ತಾ ಧರ್ಮ ಕುಸಿಯುತ್ತಾ  ಕೆಳಗಿಳಿದ ಮಾನವನ ಶಿಕ್ಷಣವೇ ಸಂಪೂರ್ಣ  ಬದಲಾಗಿ ಕಣ್ಣಿಗೆ ಕಂಡದ್ದೆ ಸತ್ಯ ಆತ್ಮವಿಲ್ಲ ಪರಮಾತ್ಮನೂ ಇಲ್ಲ ನಾನೇ ದೇವರು ಎನ್ನುವ ಹಂತಕ್ಕೆ ಈಗ ಶಿಕ್ಷಣವಿದೆ ಸತ್ಯವಿಲ್ಲ ಧರ್ಮ ವಿಲ್ಲ.ಸತ್ಯವಿದ್ದರೂ ಕಣ್ಣಿಗೆ ಕಾಣುವ ಸತ್ಯವಾಗಿದೆ. ಕಾಣದ ಸತ್ಯ ಎಲ್ಲರನ್ನೂ ನಡೆಸಿ ತನ್ನ ಕೆಲಸ ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣವಾಗಿದೆ. 
ಹಾಗಾದರೆ  ಭೂಮಿಯಲ್ಲಿ ಧರ್ಮ ಸ್ಥಾಪನೆಗೆ  ನಾವೇನು ಮಾಡಬಹುದು? ನಮ್ಮ ಮೂಲದ ಧರ್ಮ ರಕ್ಷಣೆ ನಾವೇ ಮಾಡಿಕೊಂಡರೆ ಸಾಕು. ಅದಕ್ಕೆ ಪೂರಕವಾದ ಶಿಕ್ಷಣ ಮನೆಯೊಳಗೆ ಕೊಡಬಹುದು.ಅಥವಾ ಹೊರಗಿನ ಶಿಕ್ಷಣದಲ್ಲಿಯೇ ಅಳವಡಿಸಬಹುದು.ಆದರೆ ಸಮಸ್ಯೆ ಇರೋದು ಕಲಿಸುವ ಶಿಕ್ಷಕರಿಗೆ ಇದರ ಅರಿವಿರಬೇಕು.
ಸಾಕಷ್ಟು ಅರ್ಧ ಸತ್ಯದ ಧರ್ಮ ಪ್ರಚಾರವಾಗುತ್ತಿದೆ. ಇದಕ್ಕೆ ಎಷ್ಟೋ ಸಂಸಾರಗಳು ಹೊರಬಂದು ಮೂಲದಿಂದ ದೂರವಿದೆ. ದೂರಹೋದ ಮೇಲೆ ಆ ಸ್ಥಳವನ್ನು ಅನ್ಯರು ಬಂದು ಆಕ್ರಮಣ ಮಾಡಿಕೊಂಡು ಅಂತರ ಬೆಳೆಸುತ್ತಿದ್ದಾರೆ.ಯಾವಾಗ ಅಂತರ ಬೆಳೆಯುವುದೋ ಅತಂತ್ರ ಜೀವನವಾಗುತ್ತದೆ.ತತ್ವಹೋಗಿ ತಂತ್ರ ಬೆಳೆದರೆ  ಮುಕ್ತಿಯಿಲ್ಲ.ಹೀಗಾಗಿ ನಮ್ಮ ಗುರುಹಿರಿಯರು ಸಾಲವೇ ಶೂಲವೆಂದರು,ಸಾಲ‌ಮಾಡಿ ಕೆಟ್ಟ ಎಂದರು.ಈಗ ಸಾಲ ಕೊಡೋದಕ್ಕೆ ಸಾಕಷ್ಟು ವ್ಯವಹಾರವಿದೆ.ಬಡ್ಡಿ ಕಟ್ಟಲಾಗದೆ ಭ್ರಷ್ಟಾಚಾರ ದ ಮಾರ್ಗ ಹಿಡಿದರೂ ಭ್ರಷ್ಟಾಚಾರ ಕ್ಕೆ ತಕ್ಕಂತೆ ಜನ್ಮ ಪಡೆಯುವುದನ್ನು ಯಾರೂ ತಪ್ಪಿಸಲಾಗದು.
ಜನನ ಮರಣ ಮಾನವನ ಕೈಯಲ್ಲಿ ಇದ್ದಿದ್ದರೆ ಯಾರೂ ಸಾಯುತ್ತಿರಲಿಲ್ಲ.  ಒಟ್ಟಿನಲ್ಲಿ ಪ್ರಕೃತಿ ಪುರುಷರ ನಡುವಿನ ಅಂತರವೇ ಅವಾಂತರಕ್ಕೆ ಕಾರಣವಾಗಿದೆ. ಇದಕ್ಕಾಗಿ ಮಧ್ಯೆ ಜನ್ಮ ಪಡೆದ ಜಾತಿ ಪಂಗಡ,ಪಕ್ಷ,ಗಳು ದೈಹಿಕಸುಖಕ್ಕಾಗಿ ಆತ್ಮವಂಚನೆಯಲ್ಲಿ ಮನರಂಜನೆಯಲ್ಲಿ ಮೈಮರೆತರೆ ಇದು ಅಧ್ಯಾತ್ಮ ಸಂಶೋಧನೆಗೆ  ಮಾರಕವಾಗುತ್ತದೆ.
ಹಣೆಬರಹ ಅಳಿಸಲಾಗದು. ಹುಟ್ಟುಗುಣ ಸುಟ್ಟರೂ ಹೋಗದು.ಮಾಡಿದ್ದುಣ್ಣೋ ಮಹಾರಾಯ ಎಂದಂತೆ ನಮ್ಮ ಹಿಂದಿನ ಜನ್ಮದ ಪಾಪ ಪುಣ್ಯದ ಪ್ರತಿಫಲವೇ ಈ ಜನ್ಮ.ಈ ಜನ್ಮದ ಪಾಪಪುಣ್ಯವೇ ಮುಂದಿನ‌ಜನ್ಮದ ಆರಂಭ. ಯಾರೋ ಜನ್ಮವೇ ಇಲ್ಲವೆಂದರೆ ಅದು ಸತ್ಯವಾಗದು.ಶ್ರೀ ಕೃಷ್ಣ ಪರಮಾತ್ಮನಿಗೇ ಜನ್ಮವಿದೆ ಎಂದಾಗ ಅವನೊಳಗಿನ ಭಕ್ತರಿಗಿಲ್ಲವೆ? ಯೋಗದಿಂದ ಭಕ್ತಿ ಹೆಚ್ಚಾದರೆ ಆತ್ಮಕ್ಕೆ ತೃಪ್ತಿ ಶಾಂತಿ ಸದ್ಗತಿ.ಮುಕ್ತಿ ಎನ್ನುವ ಎರಡಕ್ಷರದೊಳಗಿನ ಶಕ್ತಿ ಒಳಗಿರುವ ಜ್ಞಾನದಲ್ಲಿದೆ.ಅದರ ಸದ್ಬಳಕೆ ಮಾಡಿಕೊಳ್ಳಲು ಪ್ರಯತ್ನ ಪಟ್ಟರೆ ಫಲವಿದೆ.

ಯಾರೋ ಮಾಡಿಟ್ಟುಹೋದ ಆಸ್ತಿಯನ್ನು ಹಂಚಿಕೊಂಡು ಬದುಕಬಹುದು.ಆದರೆ ಅವರಲ್ಲಿದ್ದ ಜ್ಞಾನವನ್ನು ಹಂಚಿಕೊಳ್ಳದಿದ್ದರೆ ಅದೇ ಸಾಲವಾಗುತ್ತದೆ. ಎಷ್ಟು ಭೂಮಿ ಖರೀಧಿಸಿದರೂ ಹೋಗುವಾಗ ಭೂಮಿ ಹೊತ್ತು ಹೋಗೋದಿಲ್ಲ.ಅದರ ಋಣ ಮಾತ್ರ ಹೊತ್ತು ಜೀವ ಹೋಗುತ್ತದೆ.ತೀರಿಸಲು ಮತ್ತೆ ಬರಲೇಬೇಕೆಂದಾಗ ಇದ್ದಾಗ ಸತ್ಕರ್ಮ ಸ್ವಧರ್ಮ,ಸುಜ್ಞಾನದಿಂದ  ಸತ್ಯವರಿತು ಜೀವನ ನಡೆಸೋದಕ್ಕೆ ಸಂಸ್ಕಾರದ ಶಿಕ್ಷಣ ಬೇಕಷ್ಟೆ.ಶುದ್ದವಾದ ವಿಷಯವನ್ನು ಮಕ್ಕಳಿಗೆ ಕಲಿಸುವುದರಿಂದ ಅವರೊಳಗಿದ್ದ ಅಶುದ್ದತೆ ಹೋಗಿ ಸ್ವಚ್ಚ ಮನಸ್ಸಿನಿಂದ ಮಹಾತ್ಮರಾಗುವರು.
ಇದು ಭಾರತೀಯ ಶಿಕ್ಷಣದ‌ಮುಖ್ಯ ಗುರಿಯಾಗಿತ್ತು.ಈಗ ಹೇಗಿದೆ?
ಕಾಲಮಾನಕ್ಕೆ ತಕ್ಕಂತೆ ಜೀವನ ನಡೆಸೋದು ಅನಿವಾರ್ಯ.ಆದರೂ ಸಾಧ್ಯವಾದಷ್ಟು ಒಳಗಿನ  ಶುದ್ದತೆಗೆ ಸ್ವಯಂ ಪ್ರಯತ್ನಪಟ್ಟರೆ ಅದೇ ಯೋಗ. ಜ್ಞಾನಯೋಗ ನಮ್ಮ ಲ್ಲಿ ಒಳಗೇ ಅಡಗಿರುವ ವಿಶೇಷ ಜ್ಞಾನ ಗುರುತಿಸಿಕೊಂಡು ಯೋಗಿಗಳ ಮಾರ್ಗದಲ್ಲಿ ನಡೆಯುವುದಾಗಿದೆ.
ರಾಜಯೋಗ ತನ್ನ ತಾನರಿತು ತನ್ನ ಆತ್ಮಾನುಸಾರ ನಡೆಯುತ್ತಾ ತನ್ನ ಜೀವದ ಋಣ ತೀರಿಸಲು ಬೇಕಾದ ಕರ್ತವ್ಯ ಕರ್ಮದೆಡೆಗೆ ನೆಡೆದರೆ ನನಗೆ ನಾನೇ ರಾಜ.
ಭಕ್ತಿಯೋಗ- ತನ್ನೊಂದಿಗಿರುವ ಆ ಪರಮಶಕ್ತಿಯನರಿತು  ಶಕ್ತಿಯನ್ನು ಭಕ್ತಿಭಾವದಿಂದ ಪೂಜಿಸಿ ನಡೆಯುವುದು. ಇದು ದೇಶಭಕ್ತಿಯೂ ಆಗಬಹುದು.
ಕರ್ಮ ಯೋಗ- ತನ್ನ ಕೆಲಸವನ್ನು ತಾನೇ ಮಾಡಿಕೊಂಡು ಸತ್ಯ ಧರ್ಮವ ಬಿಡದೆ ಪರಮಾತ್ಮನ ಸೇವಾಭಾವದಲ್ಲಿ ಜೀವನ ಸಾಗಿಸುವುದು.ಪರಮಾತ್ಮನಿಗೆ ದಾಸರಾಗೋದು ಶರಣಾಗೋದು...
ಭಗವದ್ಗೀತೆ  ಹಿಂದೂಗಳ ಧರ್ಮ ಗ್ರಂಥ. ರಾಮಾಯಣ ಮಹಾಭಾರತ ವೇದ ಉಪನಿಷತ್ತುಗಳ ಕಥೆಗಳಲ್ಲಿ ಅಡಗಿರುವ ಯೋಗ ಶಕ್ತಿಯಲ್ಲಿ ದೈವತ್ವ ಅರ್ಥ ವಾದರೆ ನಮ್ಮಲ್ಲಿ ಅಡಗಿರುವ ಅತಿಯಾದ ಸ್ವಾರ್ಥ ಅಹಂಕಾರವೆಂಬ ಅಸುರಿ ಶಕ್ತಿಯೇ ಎಲ್ಲದ್ದಕ್ಕೂ ಕಾರಣವೆನ್ನಬಹುದು.
ಹಿಂದಿನವರಲ್ಲಿದ್ದ ಆಳವಾದ ಸತ್ಯಜ್ಞಾನಕ್ಕೂ ಈಗಿನ‌ಮೇಲಿನ ಮಿಥ್ಯಜ್ಞಾನಕ್ಕೂ ಅಂತರ ಬೆಳೆದಿದೆ.ಅಂತರದಲ್ಲಿ ಅಜ್ಞಾನ ತನ್ನ ಸ್ಥಾನಮಾನಕ್ಕೆ ಹೋರಾಡುತ್ತಿದೆ.ಸಾಮಾನ್ಯಜ್ಞಾನ ಮೌನವಹಿಸಿ ನೋಡುತ್ತಿದೆ. ಇದರಿಂದಾಗಿ ಮಾನವನಿಗೆ ತನ್ನ ಅರಿವು ಹಿಂದುಳಿದಿದೆ.  ಅರಿವನ್ನು ಸದ್ಬಳಕೆ ಮಾಡಿಕೊಂಡರೆ ಸಾಲ ತೀರುತ್ತದೆ.ಸಾಲ ತೀರಿದ ಕ್ಷಣವೇ ಜೀವನ್ಮುಕ್ತಿ. ಆದರೆ ಎಷ್ಟೋ ಜೀವಕ್ಕೆ ಸಾಲ ತೀರದೆ ಹೋಗಿ ಅತೃಪ್ತಿಯಿಂದ ಅಲೆದಾಡುತ್ತಿದೆ. ಇದರ ಪರಿಣಾಮದಿಂದ  ಜನಜೀವನ ಅಸ್ತವ್ಯಸ್ತವಾಗುತ್ತಿದೆ.ಕಣ್ಣಿಗೆ ಕಾಣದ ಅತೃಪ್ತ ಆತ್ಮಗಳು ಮಧ್ಯವರ್ತಿಗಳ ಮೂಲಕ  ಆಟವಾಡಿಸುತ್ತಿವೆ. ಸೂಕ್ಮವಾಗಿರುವ ಈ ಸತ್ಯ ಬರಿಗಣ್ಣಿಗೆ ಕಾಣದು.ದೇಹದೊಳಗಿನ ಶಕ್ತಿಯ ಪ್ರೇರಣೆಯೇ ಎಲ್ಲದ್ದಕ್ಕೂ ಕಾರಣವೆಂದಾಗ‌  ನಾನೆಂಬುದಿಲ್ಲ.ನನ್ನಿಂದ ಏನೂ ನಡೆಯುತ್ತಿಲ್ಲ ನಮ್ಮಿಂದ ನಡೆಯುತ್ತಿದೆ.ನಮ್ಮ ಒಂದು ಹೆಜ್ಜೆ ಹಿಂದೆ ಇಟ್ಟರೆ ಹಿಂದಿನವರ ಧರ್ಮ, ಮುಂದೆ ಇಟ್ಟರೆ ಮುಂದಿನ ಕರ್ಮ. ಇದ್ದಲ್ಲಿಯೇ ಸತ್ಯ ತಿಳಿದರೆ ಸ್ಥಿತಪ್ರಜ್ಞಾ.
ಒಟ್ಟಿನಲ್ಲಿ  ಯಾರೂ ಸ್ಥಿರವಲ್ಲ.ಸತ್ಯ ಒಂದೇ ಎಂದಂತೆ ಭೂಮಿಯೂ ಒಂದೇ ಇರೋದು.ದೇಶವೂ ಒಂದೇ ಇರೋದು. ಹೊರದೇಶಕ್ಕೆ ಹೋಗಿ ನಾನು ಸ್ವದೇಶದಲ್ಲಿದ್ದೇನೆ ಎಂದರೂ  ಅಸತ್ಯ.ಆದರೆ ಅದರ ಸಾಲ ತೀರಿಸಲು ಅಲ್ಲಿದ್ದೇ ದುಡಿಯುವುದು ಧರ್ಮ.ದುಡಿಮೆಯಲ್ಲಿ ನಿಷ್ಟೆಯಿರಲಿ.ಎಲ್ಲಿದ್ದರೇನು  ನಾವೆಲ್ಲರೂ ದೇವರ ಮಕ್ಕಳು
ಭೂತಾಯಿಯ ಋಣಿಗಳೆ.ಋಣಮುಕ್ತರಾಗಲು ಸೇವಕರಾಗಿರಬೇಕು.ಹಣವಿಲ್ಲದವರಲ್ಲಿ ಗುಣಜ್ಞಾನವಿರುತ್ತದೆ.ಹೀಗಾಗಿ ಆ ಗುಣವನ್ನು ಬಳಸಿಕೊಂಡು ಋಣಮುಕ್ತರಾಗಬಹುದು.ಅಗೋಚರ ಶಕ್ತಿಯನ್ನು ಅರಿತ ಮೇಲಿನ ಎಲ್ಲಾ ಕರ್ಮ ಗಳೂ ಯೋಗವಾಗಿರುತ್ತದೆ.

No comments:

Post a Comment