. ಚುನಾವಣಾ ಫಲಿತಾಂಶದಿಂದ ಜನ ಬುದ್ದಿ ಕಲಿತರೋ ಅಥವಾ ರಾಜಕಾರಣಿಗಳೋ ? ಇಲ್ಲಿ ಬುದ್ದಿವಂತಿಕೆ ಕೆಲಸವೇ ಮಾಡಿಲ್ಲ.ನಾವು ಯಾರನ್ನು ಆಳಬೇಕು,ಗೆಲ್ಲಬೇಕು,ಸೋಲಿಸಬೇಕು ಯಾವುದಕ್ಕೆ ಸೋಲಬೇಕೆನ್ನುವ ಜ್ಞಾನವಿದ್ದರೆ ಸೋಲು ಗೆಲುವಿನ ಆಟದಲ್ಲಿ ಯಾರೂ ಸೋತಿಲ್ಲ ಗೆದ್ದೂ ಇಲ್ಲ ಎನ್ನಬಹುದು.
ಆದರೆ ಪ್ರಜಾಪ್ರಭುತ್ವದ ಸೋಲು ಪ್ರಜೆಗಳ ಜ್ಞಾನದಲ್ಲಿ ಮುಂದುವರಿದಿದೆ ಇದು ಸತ್ಯ. ಇಬ್ಬರ ಜಗಳ ಮೂರನೆಯವರಿಗೆ ಲಾಭ ವಾದಾಗ ಆ ಮೂರನೆ ಮಧ್ಯವರ್ತಿ ಚೆನ್ನಾಗಿ ಆಟವಾಡಿಸೋದಂತೂ ಸತ್ಯ. ನಮ್ಮ ಆತ್ಮಕ್ಕೆ ನಾವೇ ಒಡೆಯರಾದರೆ ಪರಮಾತ್ಮನ ಆಟವೂ ಅರ್ಥ ವಾಗುತ್ತದೆ. ಇದು ಸನಾತನ ಧರ್ಮ ತಿಳಿಸುತ್ತದೆ.
ಇದನ್ನರಿಯದವರು ಅನ್ಯಧರ್ಮದವರ ದಾಸರಾಗಲು ಹೋಗಿ ತಾವೇ ದಾಸ್ಯತ್ವಕ್ಕೆ ಬಲಿಯಾಗುವ ಜೊತೆಗೆ ತನ್ನ ನಂಬಿದವರನ್ನೂ ಬೀಳಿಸುವಾಗ ಯಾರೂ ಎತ್ತಿ ಹಿಡಿಯಲಾಗದು.ಮಾಡಿದ್ದುಣ್ಣೋ ಮಹಾರಾಯ ಎಂದರೆ ಹೀಗೆಯೇ .
"ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯ ಬೇಡ ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ ಇದೇ ಕೂಡಲಸಂಗಮನೊಲಿಯುವ ಪರಿ.." ಬಸವಣ್ಣನವರು ಆತ್ಮಶುದ್ದಿಗಾಗಿ ರಾಜರ ವಶದಿಂದ ಹೊರಬಂದು ತತ್ವಜ್ಞಾನಿಗಳಾಗಿ ಮಹಾತ್ಮರಾದರು. ಈಗನಾವು ತತ್ವ ಬಿಟ್ಟು ರಾಜಕೀಯದ ತಂತ್ರದೊಳಗೆ ಸೇರಿಕೊಂಡು ಭ್ರಷ್ಟರಿಗೆ ದುಷ್ಟರಿಗೆ ಸಹಕಾರ ಕೊಟ್ಟರೆ ಆತ್ಮಹತ್ಯೆಯಲ್ಲವೆ?
ಇದನ್ನು ತಿಳಿಸಬೇಕಾದವರೆ ರಾಜಕಾರಣಿಗಳ ಹಿಂದೆ ನಡೆದರೆ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರಿಲ್ಲ.
ಮೇಲಿರುವ ಪರಮಾತ್ಮನ ಕಡೆಗೆ ಇಂದು ನಡೆಯೋದು ಬಹಳ ಕಷ್ಟವಿದೆ. ಕೊನೆಪಕ್ಷ ದೇಶದ ಹಿತದೃಷ್ಟಿಯಿಂದ ತಮ್ಮ ಸ್ವಾರ್ಥ ಅಹಂಕಾರದ ರಾಜಕೀಯ ಬಿಟ್ಟು ಸ್ವತಂತ್ರ ಪ್ರಜೆಗಳು ಸತ್ಯಜ್ಞಾನದ ಕಡೆಗೆ ದೃಷ್ಟಿ ಹರಿಸಿದರೆ ತಾವೇ ತೋಡಿಕೊಂಡಿರುವ ಹೊಂಡದಿಂದ ಮೇಲಕ್ಕೆ ಬರಬಹುದು.
ಇಲ್ಲಿ ಏನೂ ಆಗೇ ಇಲ್ಲ ಎನ್ನುವ ಬದಲು ಏನೋ ಹಿಂದೆ ಕುತಂತ್ರ ನೆಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ನಮ್ಮ ಮನಸ್ಸನ್ನು ಸ್ವಚ್ಚಗೊಳಿಸಿಕೊಂಡರೆ ಅರ್ಥ ವಾಗುತ್ತದೆ.
ಸತ್ಯ ಯಾವತ್ತೂ ಸತ್ಯವೆ. ಮಿಥ್ಯದಿಂದ ತೇಪೆ ಹಾಕಿ ಮುಚ್ಚಿದರೂ ಒಳಗಿನ ಸತ್ಯ ಬದಲಾಗದು. ಇದು ನಮ್ಮ ಆತ್ಮಸಾಕ್ಷಿಯಾಗಿದೆ.
ಪ್ರಜಾಪ್ರಭುತ್ವದ ಈ ಸ್ಥಿತಿಗೆ ಮುಖ್ಯಕಾರಣಕರ್ತರೆ ಅರ್ಧ ಸತ್ಯ ತಿಳಿದಿರುವಮಧ್ಯವರ್ತಿಗಳ ವ್ಯವಹಾರ ಜ್ಞಾನ. ಇದು ಧಾರ್ಮಿಕ ಶೈಕ್ಷಣಿಕ ,ಸಾಹಿತ್ಯ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶ ಮಾಡುತ್ತಾ ಜನರ ಒಳಗಿದ್ದ ಸಾಮಾನ್ಯ ಜ್ಞಾನಕ್ಕೆ ಲಕ್ಷ್ಯ ಕೊಡದೆ ಲಕ್ಷ ಲಕ್ಷ ಹಣಗಳಿಸಿ ಧರ್ಮ ಕುಸಿದಿದೆ.
ಇದನ್ನು ಹೇಳಲು ಹೋದವರನ್ನು ನಿರ್ಲಕ್ಷ್ಯ ಮಾಡುತ್ತಾ ಅಸಹಕಾರ ಅನಾಧರ, ಅಪಹಾಸ್ಯ ಮಾಡಿದವರಿಗೆ ಈಗಲೂ ಸ್ಥಾನಮಾನ ಸನ್ಮಾನ ಅಧಿಕಾರ ಜನರೆ ನೀಡಿ ಬೆಳೆಸಿರುವಾಗ ಅವರ ತಪ್ಪು ಕಾಣೋದಿಲ್ಲ. ಎಲ್ಲಿಯವರೆಗೆ ಮಾನವನಿಗೆ ಜನಬಲ ಹಣಬಲ ಇರುವುದೋ ಅಲ್ಲಿಯವರೆಗೆ ಸತ್ಯದ ಬಲ ಅರ್ಥ ವಾಗದು. ಜನರಲ್ಲಿ ಸತ್ಯವಿದ್ದರೆ ಸರಿ ಆದರೆ ಇಂದು ಸತ್ಯವಿಲ್ಲದ ಶಿಕ್ಷಣ ಅಜ್ಞಾನವನ್ನು ಬೆಳೆಸಿ ಹೊರಜಗತ್ತಿನೆಡೆಗೆ ನೆಡೆಸಿ ಒಳಗೇ ಇದ್ದ ಜಗತ್ತಿನಿಂದ ಮನಸ್ಸನ್ನು ದೂರ ಮಾಡಿದೆ. ಹೀಗಾಗಿ ಅರಿವೇ ಗುರು ಎನ್ನುವುದು ಹೊರಗಿನ ವಿಷಯಕ್ಕೆ ಸೀಮಿತವಾಗುತ್ತಾ ಅಸತ್ಯ ಅನ್ಯಾಯ ಅಧರ್ಮ ದಿಂದ ಭ್ರಷ್ಟಾಚಾರ ಬೆಳೆದಿದೆ. ಇದೇ ಸ್ವರ್ಗ ವೆಂದು ಮಕ್ಕಳು ಮಹಿಳೆಯರನ್ನು ಬಳಸಿಕೊಂಡು ರಾಜಕೀಯದಲ್ಲಿ ದ್ವೇಷದ ವಿಷಬೀಜ ಬಿತ್ತಿ ಸಾಕಷ್ಟು ಮಧ್ಯವರ್ತಿಗಳು ಮಾಧ್ಯಮಗಳು ದೇಶ ಏನಾದರೇನು ನಾವು ಮನರಂಜನೆಯಲ್ಲಿರಬೇಕೆಂದು ವಿಷಯ ಪ್ರಚಾರದಲ್ಲಿದೆ. ಕೆಲವು ಉತ್ತಮವಿದ್ದರೂ ನೆಡೆಸಲಾಗದೆ ಹಿಂದುಳಿದಿದೆ. ಆದರೂ ಮೇಲಿರುವ ಶಕ್ತಿಯ ಮುಂದೆ ಎಲ್ಲಾ ನಗಣ್ಯವೆ.
ಸಾಮಾಜಿಕ ಜಾಲತಾಣವನ್ನೇ ನೋಡಿದಾಗ ಯಾರದ್ದೋ ಒಂದು ಮುಖಚಿತ್ರಕ್ಕೆ ಕೊಡುವ ಪ್ರೋತ್ಸಾಹ ಲೈಕ್ಸ ಜನರ ದೃಷ್ಟಿ ಅರ್ಥ ಮಾಡಿಕೊಳ್ಳಲು ಸಾಧ್ಯ.
ಆದರೂ ಮಾನವನಿಗೆ ಮನರಂಜನೆ ಅಗತ್ಯ..ಇಲ್ಲವಾದರೆ ಸತ್ತ ಹೆಣದಂತಿರಬೇಕು.ಇದು ಆತ್ಮವಂಚನೆಯಾಗದಂತಿರಬೇಕಷ್ಟೆ.
ಉದಾಹರಣೆಗೆ ಬದಲಾವಣೆ ನಮ್ಮಿಂದ ಆದಾಗಲೇ ಆತ್ಮಕ್ಕೆ ತೃಪ್ತಿ ಮುಕ್ತಿ .ಅಂದರೆ ಎಲ್ಲಾ ತಪಸ್ವಿಗಳಾಗರು,ಯೋಗಿಯಾಗರು,ಸಂನ್ಯಾಸಿಯಾಗರು,ಸಂಸಾರಿಯಾಗರು,ದೇಶಭಕ್ತರಾಗರು,ದೇವರಭಕ್ತರಾಗರು ಆದರೂ ಎಲ್ಲಾ ಪರಮಾತ್ಮನ ಸೇವಕರೆ ಆಗಿರುವರು.
ಯಾವಾಗ ಈ ಸೇವೆ ರಾಜಕೀಯಕ್ಕೆ ಬಳಸಲಾಗುವುದೋ ಆಗ ಅಹಂಕಾರ ಸ್ವಾರ್ಥ ತಿಳಿಯದೆಯೇ ದಾರಿತಪ್ಪಿಸಿ ಆಳುವುದು.
ಇದನ್ನು ಪುರಾಣ ಇತಿಹಾಸದಿಂದಲೂ ತಿಳಿದು ತಿಳಿಸುತ್ತಾ ಬಂದಿದ್ದರೂ ನಮ್ಮ ಅಸುರಿ ಶಕ್ತಿಯನ್ನು ನಾವು ಬಿಡದೆ ಹೊರಗಿನ ಅಸುರಿ ಶಕ್ತಿಯನ್ನು ದ್ವೇಷ ಮಾಡುತ್ತಾ ನಡೆದರೆ
ಒಳಗೆ ದೈವತ್ವವಿರುವುದೆ?
ಶ್ರೀ ಕೃಷ್ಣ ಪರಮಾತ್ಮ ಪಾಂಡವ ಕೌರವರ ಜೊತೆಗೆ ಇದ್ದೇ ಧರ್ಮ ರಕ್ಷಣೆ ಮಾಡಿದನೆಂದರೆ ಪರಮಾತ್ಮನಿಗೆ ಯಾರಲ್ಲೂ ದ್ವೇಷವಿಲ್ಲ. ಹಾಗಂತ ದುಷ್ಟರನ್ನು ಬೆಳೆಸೋದಿಲ್ಲ. ನಮ್ಮ ಮನಸ್ಸು ಹದಗೆಡಲು ಕಾರಣವೇ ಈ ದ್ವೇಷ. ಇದರ ಮೂಲ ನಮ್ಮ ಹಿಂದಿನವರೆ ಆಗಿರುವರು. ಅಂದಿನ ಕಾಲದಲ್ಲಿದ್ದ ಧರ್ಮದ ಕಟ್ಟುಪಾಡುಗಳನ್ನು ಅರ್ಥ ಮಾಡಿಕೊಳ್ಳಲು ಸೋತವರು ಅದನ್ನು ಬಿಟ್ಟು ಹೊರಗೆ ಬಂದಿದ್ದರೂ ಅದೇ ದ್ವೇಷ ಇಂದಿಗೂ ಬಂದಿದೆ.ಒಳಗೇ ಅಡಗಿರುವುದೇ ಹೆಚ್ಚು ಪ್ರಚಾರ ಪಡೆಯುತ್ತದೆ.ಒಟ್ಟಿನಲ್ಲಿ ದ್ವೇಷದಿಂದ ದೇಶಕಟ್ಟಲು ಆಗದು. ಧರ್ಮ ವೂ ಉಳಿಯದು.
ಈಗಲಾದರೂ ಹಿಂದೂಗಳು ಎಚ್ಚರವಾದರೆ ಅಪಾರ್ಥ ಕ್ಕೆ ಒಳಗಾಗಿರುವ ಪಾರ್ಥ ಸಾರಥಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಧರ್ಮ ರಕ್ಷಣೆಗಾಗಿ ಪರಮಾತ್ಮ ಯಾವ ರೂಪವಾದರೂ ತಾಳಬಹುದು, ಯಾರ ಸೇವಕನೂ ಆಗಬಹುದು, ಸಾರಥಿಯೂ ಆಗಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಸತ್ಯಜ್ಞಾನವಿರಬೇಕಷ್ಟೆ..ವಿಜ್ಞಾನ ಹೊರಗಿನ ಸತ್ಯ ತಿಳಿಸಬಹುದು ಆದರೆ ಇದು ತಾತ್ಕಾಲಿಕ ಸತ್ಯವಾಗಿರುತ್ತದೆ.ಬದಲಾಗುತ್ತಲೇ ಇರುತ್ತದೆ. ಅಧ್ಯಾತ್ಮ ಸಂಶೋಧನೆ ಪುರಾಣ ಪಠಣದಿಂದ ಆಗಿದೆಯೆ? ಅಥವಾ ಸಾಮಾನ್ಯ ಜ್ಞಾನದೊಳಗೇ ಅಡಗಿದೆಯೆ?
ಕಲಬೇಡ ಕೊಲಬೇಡ.....ಅರಿಷಡ್ವರ್ಗ ಮಿತಿಮೀರಿದರೆ ಅಜ್ಞಾನದ ಅಂಧಕಾರದಲ್ಲಿ ಅಶುದ್ಧ ವಿಷಯಪ್ರಚಾರದ ಮೂಲಕ ಪರಿಸರ ಮಾಲಿನ್ಯ ಹೆಚ್ಚುವುದು.
ಪರಿಸರ ಸಂರಕ್ಷಣಾ ದಿನಾಚರಣೆಗೆ ಕೋಟ್ಯಾಂತರ ರೂ ಬಳಸಿ ಅರಿವಿನಕಾರ್ಯಕ್ರಮ ನೆಡೆಸಿ ಊಟ ಉಪಚಾರ ಆಟ ಪಾಠಗಳೇನೂ ನೆಡೆದರೂ ವರ್ಷ ಪೂರ್ತಿ ತಲೆಗೆ ತುಂಬುವ ಅಶುದ್ದ ಪ್ರಭುದ್ದ ವಿಷಯಗಳಿಂದ ಮಕ್ಕಳ ಮಹಿಳೆಯರ ಅಂತರಾತ್ಮ ಶುದ್ದವಾಗಿದೆಯೆ ಎನ್ನುವ ಚಿಂತನೆ ಮನೆಯೊಳಗೆ ನೆಡೆಸಿಕೊಂಡರೆ ಒಳಗೇ ಅಡಗಿರುವ ಶಾಂತಿ ಕಾಣಬಹುದು.
ಬರವಣಿಗೆಯ ಮೂಲಕ ವಿಚಾರ ತಿಳಿಸುವಾಗ ನಾನು ಕಾಣೋದಿಲ್ಲ ಅದೇ ಮಾತಿನಮೂಲಕ ಹೇಳುವಾಗ ನಾನಿರುತ್ತೇನೆ ಸತ್ಯ ಕಾಣೋದಿಲ್ಲ. ಸತ್ಯ ಕಾಣದಿದ್ದರೆ ಧರ್ಮಸೂಕ್ಮ ಅರ್ಥ ವಾಗದು. ಹೀಗಾಗಿ ಎಲ್ಲದ್ದಕ್ಕೂ ನನ್ನ ಹೋರಾಟ ಯಾವ ದಿಕ್ಕಿನಲ್ಲಿ ನಡೆದಿದೆ ಎನ್ನುವುದೆ ಕಾರಣ.ಅಂತರಾತ್ಮನ ಬಿಟ್ಟು ಅಂತರಾಷ್ಟ್ರೀಯ ದ ಕಡೆಗೆ ಹೋಗಬಹುದೆ? ಹೋದರೂ ಶಾಶ್ವತ ಸುಖ ಸಿಗುವುದೆ?
ನುಡಿಮುತ್ತುಗಳು:- *
- - - — - - - - - - - -
**ಮನಸ್ಸಿಗೆ ಹಿತ ಎನಿದರೆ ಮಾತ್ರ ಸ್ನೇಹ ಬೆಳೆಸಿ.ಮನೆಯವರ ಜೊತೆಗೆ ಸಂಬಂಧ ಚೆನ್ನಾಗಿರಲಿ.ಮನಸ್ಸಿಗೆ ಬಂದಂತೆ ಮಾತಾಡುವವರ ಬಳಿ ಹುಷಾರಾಗಿರಿ.ಮನದ ಭಾವನೆಗಳನ್ನು ಹಂಚಿಕೊಳ್ಳುವಾಗ ಸ್ವಲ್ಪ ಯೋಚಿಸಿರಿ.*
**ಕೆಲವರು ಸುಂದರವಾದ ಸ್ಥಳವನ್ನು ಹುಡುಕುತ್ತಾರೆ.ಇತರರು ಇರುವ ಸ್ಥಳವನ್ನೇ ಸುಂದರವಾಗಿಸುತ್ತಾರೆ.**
**ಆಸೆ ಮತ್ತು ದುಃಖ ಎರಡೂ ಧ್ಯಾನದಲ್ಲಿ ಭಂಗ ತರಬಹುದು. ಅವೆಲ್ಲಿವೆಯೋ ಅಲ್ಲಿಯೇ ಬಿಟ್ಟು ಮುಂದೆ ಸಾಗಿರಿ.ಆಸೆಯೇ ದುಃಖಕ್ಕೆ ಮೂಲ.**
**ಸರಳ ಜೀವನ ಸಂಯಮವನ್ನು ಕಲಿಸುತ್ತದೆ,ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ,*ಸರಳ ನಡೆ ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ.**
ನಮ್ಮ ಮನಸ್ಸು ಎಷ್ಟೇ ಕಠೋರವಾಗಿ, ನಾವು ಎಷ್ಟೇ ಶಕ್ತಿಯುತರಾಗಿ ಇದ್ದರೂ,ನಮ್ಮ ಜೊತೆಯೇ ನಾವು ಹೋರಾಡಲು ಸಾಧ್ಯವಿಲ್ಲ.*
ದಡ ಸೇರಲು ದೋಣಿ ಬದಲಿಸಬೇಕಿಲ್ಲ. ದಿಕ್ಕು ಬದಲಿಸಿದರೆ
ಸಾಕು.**
**ನಾವು ನಮ್ಮ ಕ್ರಿಯೆಯ ಮೂಲಕ ಎದುರಿನವರನ್ನು ಗೆಲ್ಲಬೇಕೇ ವಿನಃ ವಾದದಿಂದಲ್ಲ. ಭಾವೋದ್ರೇಕದ ಮಾತುಗಳು ಯಾವ ಸಮಸ್ಯೆಯನ್ನೂ ಪರಿಹರಿಸಲಾರವು.**
**ಮತ್ತೊಬ್ಬರನ್ನು ಖುಷಿ ಪಡಿಸುವ ಬದುಕು ನಮ್ಮದಾದಾಗ ಒತ್ತಡ, ಆತಂಕ ಮತ್ತು ಖಿನ್ನತೆ ಇವುಗಳು ನಮ್ಮನ್ನು ಅತಿಯಾಗಿ ಬಾಧಿಸುತ್ತವೆ.*
ಸದಾ ನಾವು ಬೇರೆಯವರ ಅಭಿಪ್ರಾಯಕ್ಕೆ ತಲೆಕೆಡಿಸಿಕೊಳ್ಳುತ್ತಿದ್ದರೆ ನಮ್ಮ ಜೀವನವು ನಮ್ಮದಾಗಿರುವುದಿಲ್ಲ.**
**ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದು ಮಹತ್ವದ ವಿಷಯವಲ್ಲ. ನಿಮ್ಮನ್ನು ನೀವು ಹೇಗೆ ಕಾಣುತ್ತೀರಿ ಎಂಬುದೇ ನಿಮ್ಮ ಸರ್ವಸ್ವ.**
Life is so confusing. What we want we do not get.What we get we are not satisfied. What we expect never happens and what we hate generally repeats. That is Life.**
** Memory is the space in which, a thing happens for a second time.**
When You Blame And Criticize Others ,You Are Avoiding Some Truth About Yourself.**
**He has the most, who is most content with the least.*
**Nothing can be learnt from life if you think you are right.*
**Don't Just Do Things As They Come Your Way, Plan & Work On Priorities & You Won't Have Pending Important Things Giving You Stress At The End Of The Day. Amongst The Most Important Things Do The Toughest First And Always So Relaxed Will Be Your Day.**
*Dont cry over what is gone. Smile about what remains. No matter what is lost. You can still always find value in what is left.**
*We Always Have Problems. Learn To Enjoy Life While Solving Them. Life Is A Challenge.**
**Kindness through your words creates Confidence in the person that hears it. Kindness in your thoughts creates Profoundness to live by.**
**Your greatest tool against stress is positivity.**
———————————————- - -
No comments:
Post a Comment