ಅಪೇಕ್ಷೆಗಳ ಸೋಲೇ
ಅನೇಕ ದೋಷಗಳಿಗೆ ಮೂಲ,
ನಿಮ್ಮ ಅಪೇಕ್ಷೆಗಳ ನಿರಾಸೆಗೆ
ಜನರನ್ನು ನಿಂದಿಸಬೇಡಿ,
ಬದಲಿಗೆ ಅವರಲ್ಲಿ ಅತಿಯಾದ ಅಪೇಕ್ಷೆ ಇಟ್ಟುಕೊಂಡ ನಿಮ್ಮನ್ನು ನೀವೇ ನಿಂದಿಸಿಕೊಳ್ಳಿ..🌹🙏🏻
ವಾಟ್ಸಪ್ ಕೃಪೆ.
ವಾಸ್ತವದಲ್ಲಿ ನಾವು ಬದುಕುತ್ತಿಲ್ಲ ಹಿಂದಿನದ್ದನ್ನೇ ಕೆದಕಿ ಗಾಯ ಮಾಡಿ ಹುಣ್ಣು ಮಾಡಿ ಅದಕ್ಕೆ ಮೇಲಿನ ಔಷಧ ಹಚ್ಚಿಕೊಂಡು ಆದ ಗಾಯವನ್ನು ಜನರಿಗೆ ಹಂಚಿಕೊಂಡು ಹರಡಿಕೊಂಡಿದ್ದರೆ ನಮ್ಮ ಆಸೆ ಆಕಾಂಕ್ಷೆಗಳನ್ನು ಇನ್ಯಾರೋ ಮಧ್ಯೆ ಬಂದು ಅರ್ಥ ಮಾಡಿಕೊಂಡು ಬದುಕುವರು. ಇದನ್ನು ತಪ್ಪು ಎಂದರೆ ಸರಿ ಯಾವುದು? ನಾವೆಲ್ಲರೂ ಹಿಂದೂಗಳು ಒಂದು ಎನ್ನುವ ಕೂಗಿನಲ್ಲಿ ಮೂಗುತೂರಿಸಿಕೊಂಡು ಸ್ವಾರ್ಥ ದ ಬೇಳೆ ಬೇಯಿಸಿಕೊಂಡವರನ್ನು ಕೇಳೋದಿಲ್ಲ.ಅದೇ ನಮ್ಮವರೆ ಮಾಡಿದರೆ ಎಲ್ಲಾ ವಿರೋಧಿಸುವರು. ಹಿಂದೂ ಧರ್ಮ ಪ್ರಚಾರ ಜಗತ್ತಿನಾದ್ಯಂತ ಬೆಳೆದಿದೆ ಆದರೆ ಹಿಂದೂಸ್ತಾನದ ಶಿಕ್ಷಣದಲ್ಲಿಯೇ ಹಿಂದುಳಿದಿರುವಾಗ ಅದನ್ನು ಸರಿಪಡಿಸಲು ಹಿಂದೂಗಳು ಮುಂದಾಗುತ್ತಿಲ್ಲ.ಮುಂದೆ ಹೋದವರಿಗೆ ಅಸಹಕಾರ ಕೊಡುವವರೂ ಹಿಂದೂಗಳೇ ಎನ್ನುವ ಕಠೋರ ಸತ್ಯ ಅನುಭವಿಸಿದವರಿಗಷ್ಟೆ ಗೊತ್ತು. ಒಟ್ಟಿನಲ್ಲಿ ಯಾವುದೇ ದೇಶದ ಸಂಪತ್ತು ಅದರ ಪ್ರಜೆಗಳ ಜ್ಞಾನವಾಗಿದೆ. ಸತ್ಯವೇ ತಿಳಿಯದ ಅಮಾಯಕರನ್ನು ಅಸತ್ಯದೆಡೆಗೆ ಎಳೆದು ಆಳಿದರೆ ಬೆಳೆಯೋದು ಧರ್ಮ ವಲ್ಲ ಅಧರ್ಮ. ಹಿಂದಿನಿಂದಲೂ ನಡೆದು ಬಂದಿರುವ ಈ ಎಳೆದಾಟದಲ್ಲಿ ಬಿದ್ದವರು ಮೇಲೆ ಏಳಲಾಗದೆ ಹೋದರು.ಕೆಲವರು ಬಿದ್ದರೂ ಮೀಸೆ ಮಣ್ಣಾಗಿಲ್ಲವೆಂದರು.ಹಲವರಿಗೆ ನಮ್ಮೊಳಗೇ ಇದ್ದ ಸತ್ಯ ತಿಳಿಯದೆ ಹೊರಗಿನವರ ಅಸತ್ಯದೊಳಗೆ ಅಧರ್ಮಕ್ಕೆ ಶರಣಾಗಿ ದಾಸರಾಗಿದ್ದರೆ ಇದೇ ಸ್ವರ್ಗ ಸುಖವೆಂದು ನಂಬಿ ನಡೆದರು. ಈಗ ಯಾರಿಗೆ ಸಿಕ್ಕಿದೆ ಸ್ವಾತಂತ್ರ್ಯ?
ಒಟ್ಟಿನಲ್ಲಿ ನಮ್ಮ ಆಸೆ ಪೂರೈಸಿಕೊಳ್ಳಲು ಜನರನ್ನು ಬಳಸಿದರೆ ನಿರಾಸೆಯಾಗೋದು ಸಹಜ. ಆಸೆಯೇ ದು:ಖಕ್ಕೆ ಕಾರಣ. ಆಸೆ ಇರಲಿ ಸತ್ಕರ್ಮ,ಸ್ವಧರ್ಮ, ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ಜ್ಞಾನದೆಡೆಗೆ ನಡೆದರೆ ಉತ್ತಮ.
ಇದಕ್ಕಾಗಿ ಮನೆಯೊಳಗೆ ಇದ್ದು ಬೆಳೆಸುವ ಶಿಕ್ಷಣವನ್ನು ಪೋಷಕರೆ ವಿರೋಧಿಸಿದರೆ ಆಗಬಾರದ್ದು ಆಗುತ್ತದೆ. ಆಗ ಹೊರಗೆ ಬಂದು ಹೋರಾಡಿ ಜೀವ ಹೋದರೂ ಕೇಳೋರಿರೋದಿಲ್ಲ. ಒಟ್ಟಿನಲ್ಲಿ ಜೀವ ಶಾಶ್ವತವಲ್ಲ ಆತ್ಮಶಾಶ್ವತ. ಇದನ್ನರಿತು ನಡೆದವರು ಮಹಾತ್ಮರಾದರು.
ಅಂತಹ ದೇಶಭಕ್ತರು ದೇವರ ಭಕ್ತರಲ್ಲಿದ್ದ ಯೋಗ ಶಕ್ತಿಯನ್ನು ಅರ್ಥ ಮಾಡಿಕೊಳ್ಳದೆ ಹಿಂದೂ ಸನಾತನ ಧರ್ಮ ಮುಂದುವರಿಯದು. ಇಡೀ ವಿಶ್ವ ಧರ್ಮದ ಆಧಾರದಲ್ಲಿದೆ. ಯಾರು ಯಾವುದನ್ನು ಹಿಡಿದರೂ ಅದಕ್ಕೆ ತಕ್ಕಂತೆ ಜೀವನವಿರುತ್ತದೆ. ಇದು ತತ್ವದಿಂದ ತಿಳಿದು ಒಂದು ಮಾಡಲು ಹೋದವರನ್ನು ಹಿಂದೆಯೂ ವಿರೋಧಿಸಿ ಹಿಂದೆ ತಳ್ಳಿದ್ದರು.ಈಗಲೂ ನಡೆದಿದೆಯಷ್ಟೆ. ಕಾರಣ ಇಲ್ಲಿ ಹಣವಿದ್ದರೆ ಅಧಿಕಾರವಿದ್ದರೆ ಜನಬಲಹಣಬಲದಿಂದ ರಾಜಕೀಯ ನಡೆಯುತ್ತದೆ. ಅದಕ್ಕಾಗಿ ಸಾಕಷ್ಟು ವಾಮಮಾರ್ಗ ಹಿಡಿದರೂ ಜನಕೇಳೋದಿಲ್ಲ.ಆದರೆ ಇದೇ ಮನುಕುಲದ ವಿನಾಶಕ್ಕೆ ಕಾರಣವಾಗುತ್ತಿರುವುದು ದುರಂತ.
ನಾವೆಷ್ಟು ಹೆಸರು ಹಣ ಅಧಿಕಾರ ಪಡೆದರೂ ಒಳಗಿನ ಸತ್ಯ ಬಿಟ್ಟು ಹೊರಗಿರಬೇಕು. ಕಾರಣ ಒಳಗಿರುವ ಒಂದೇ ಸತ್ಯ ಹೊರಗಿರುವ ಅಸಂಖ್ಯಾತ ಅಸತ್ಯಕ್ಕೆ ವಿರುದ್ದವಾದಾಗ ಒಪ್ಪಿ ನಡೆಯೋರಿಗೆ ಒಂದೇ ಸತ್ಯದ ಅರಿವಿರಬೇಕು. ಇದೇ ಕಷ್ಟ.
ಸತ್ಸಂಗದಲ್ಲಿ ಸತ್ಯವಿದ್ದರೆ ಸರಿ. ಅಲ್ಲಿಯೂ ಅಸತ್ಯದ ರಾಜಕೀಯ ವಿದ್ದರೆ ಅಸಮಾನತೆ ಎದ್ದು ನಿಲ್ಲುತ್ತದೆ.ಅದೇ ದ್ವೇಷವಾಗಿ ದೇಶದ ತುಂಬಾ ಹರಡುತ್ತದೆ. ಪ್ರಚಾರಕರ ಅರ್ಧ ಸತ್ಯ ಅಸತ್ಯಕ್ಕಿಂತಲೂ ಅಪಾಯಕಾರಿ.
ದೇವಾಸುರರಿಗಿಂತ ಮಧ್ಯವರ್ತಿ ಮಾನವ ಅಪಾಯಕಾರಿ.
ಇಲ್ಲಿ ಮಾನವನ ಚಂಚಲ ಮನಸ್ಸಿಗೆ ಕಾಣೋದು ಭೌತವಿಜ್ಞಾನವಾದ್ದರಿಂದ ಭೂಮಿಯ ಮೇಲೆ ನಿಂತಿರುವ ಸತ್ಯವನ್ನು ಅಲ್ಲಗೆಳೆಯುವನು. ಹೀಗಾಗಿನಿಂತ ನೆಲ ಜಲದ ಋಣ ತೀರಿಸಲು ಕಷ್ಟಪಡೋದು ತಪ್ಪಿಲ್ಲ. ಪ್ರತಿಜನ್ಮವೂ ಒಂದೇ ರೀತಿಯಲ್ಲಿ ಇರೋದಿಲ್ಲವೆಂದರೆ ಜನ್ಮವೇ ಇಲ್ಲ ಎನ್ನುವವರೂ ಇರುವರು. ಹೀಗಾಗಿ ಸ್ವತಂತ್ರ ಇಂದು ಸ್ವೇಚ್ಚಾಚಾರವಾಗಿದೆ.
No comments:
Post a Comment