ಸೋತು ಗೆಲ್ಲುವುದು ಗೆದ್ದು ಸೋಲುವುದು ಜೀವನದಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಇದರಲ್ಲಿ ಎರಡೂ ರೀತಿಯಲ್ಲಿ ಗೆಲುವು ಸೋಲನ್ನು ಕಾಣಬಹುದು.
ನಾನು ಸೋತಿಲ್ಲವೆನ್ನುವವರು ಹೊರಗೆ ಗೆಲ್ಲಲು ಹೊರಟರೆ ಒಳಗಿನ ಸೋಲು ಇದ್ದೇ ಇರುತ್ತದೆ. ಸತ್ಯದೊಂದಿಗೆ ಗುದ್ದಾಡಿದರೂ ಸೋಲು ನಿಶ್ಚಿತ. ಅಸತ್ಯದೊಂದಿಗೆ ಸೇರಿದರೂ ಸೋಲು ನಿಶ್ಚಿತ. ಸತ್ಯ ದೇವರು,ಅಸತ್ಯ ಅಸುರರು. ಇವರಿಬ್ಬರ ನಡುವೆ ಮನುಕುಲವಿದೆ..ಒಮ್ಮೆ ದೇವತೆಗಳು ಗೆದ್ದರೆ ಇನ್ನೊಮ್ಮೆ ಅಸುರರ ಗೆಲುವು ಇದಕ್ಕೆ ಸಹಕಾರ ಕೊಟ್ಟ ಹುಲುಮಾನವನಿಗೆ ಸೋಲು ಗೆಲುವಿನ ಆಟವಾಡೋದಷ್ಟೆ ಕರ್ಮ. ಅದನ್ನು ನೋಡಿಕೊಂಡು ಇದ್ದವರಿಗೆ ಮನರಂಜನೆ .ಮನರಂಜನೆಯಿರಲಿ ಆತ್ಮವಂಚನೆ ಆಗದಿರಲಿ. ಎಲ್ಲಾ ಒಮ್ಮೆ ಗೆದ್ದವರೆ ಹಾಗೆ ಸೋತವರೆ.
ಪ್ರಳಯಕಾಲದಲ್ಲಿ ಎಲ್ಲಾ ಮುಳುಗಿದ ಮಾನವರೆ ಆಗಿರುವರು.
No comments:
Post a Comment