ಮಕ್ಕಳು ಪ್ರಾಮಾಣಿಕರಾಗಿರುವುವಂತೆ ಮಾಡುವುದೇ ಶಿಕ್ಷಣದ ಪ್ರಾರಂಭ. ಆಣೆಪ್ರಮಾಣಗಳನ್ನು ಮಾಡಿಕೊಂಡು ತಮ್ಮ ಆತ್ಮದ್ರೋಹಕ್ಕೆ ತಾವೇ ಕಾರಣವಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಮಕ್ಕಳ ಪ್ರಾಮಾಣಿಕತೆಯನ್ನಾಗಲಿ,ಸತ್ಯವನ್ನಾಗಲಿ ಗಮನಿಸಲು ಗುರು ಶಿಕ್ಷಕರಿಗೇ ಸಾಧ್ಯವಾಗದೆ ಮಕ್ಕಳನ್ನು ಸೇರಿಸಿಕೊಂಡು ಅಸತ್ಯ ಅಧರ್ಮ ಅನ್ಯಾಯ ಅನೀತಿಯ ಕಡೆಗೆ ಹೊರಗಿನ ರಾಜಕೀಯದ ಹಿಂದೆ ನಿಂತವರಿಗೆ ಶಿಕ್ಷಣದೊಳಗೇ ಆಗಿರುವ ಮೋಸ ಅರ್ಥ ವಾಗದೆ ಅದೇ ಶಿಕ್ಷಣಕ್ಕೆ ತಲೆಬಾಗಿ ಸಾಲ ಮಾಡುತ್ತಾ ಹೊರಗಿನ ವಿಷಯಾಸಕ್ತಿಯಲ್ಲಿಮೈಮರೆತು ಸ್ವಾತಂತ್ರ್ಯ ವನ್ನು ದುರ್ಭಳಕೆ ಮಾಡಿಕೊಂಡವರಿಂದ ಆತ್ಮನಿರ್ಭರ ಕನಸು ನನಸಾಗುವುದೆ?
ಮಧ್ಯವರ್ತಿಗಳು ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಹದಗೆಟ್ಟ ಮಾನಗೆಟ್ಟಿರುವ ವಿಷಯವನ್ನು ಪ್ರಚಾರ ಮಾಡೋದಕ್ಕೆ ಸಾಕಷ್ಟು ಹೊರನಡೆದಿದೆ. ಅದೇ ಸಮಯದಲ್ಲಿ ಜನರಿಗೆ ಉತ್ತಮ ಸದ್ವಿಚಾರ ರ ತಿಳಿಸುವುದಕ್ಕೆ ತಡೆಗೋಡೆ ಹಾಕಿಕೊಂಡಿರೋದನ್ನು ಜನಸಾಮಾನ್ಯರು ತಿಳಿದು ತಿಳಿಯದಂತಿರೋದು ದುರಂತವಷ್ಟೆ. ಕೆಲವು ಮಾಧ್ಯಮಗಳು ಉತ್ತಮ ಕಾರ್ಯಕ್ರಮದ ಮೂಲಕ ಜನರನ್ನು ಸನ್ಮಾರ್ಗದಲ್ಲಿ ನಡೆಸಲು ಪ್ರಯತ್ನಪಟ್ಟರೂ ಸರಿಯಾದ ಸಹಕಾರವಿಲ್ಲದೆ ಹಿಂದುಳಿದಿವೆ. ಒಟ್ಟಿನಲ್ಲಿ ವ್ಯವಹಾರಕ್ಕೆ ಇಳಿದಾಗ ಹಣದ ಲಾಭವಿಲ್ಲದೆ ಮುಂದೆ ನಡೆಯಲಾಗದು. ಇದನ್ನು ಶಿಕ್ಷಣ ಕ್ಷೇತ್ರ ಧಾರ್ಮಿಕ ಕ್ಷೇತ್ರ ಸಾಹಿತ್ಯ ಕ್ಷೇತ್ರ ಮುಂದುವರಿಸಿದರೆ ಮುಗಿಯಿತು ಧರ್ಮದ ಗತಿ ಅಧೋಗತಿ.
ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಸೇವೆಯು ಯಾವಾಗ ಹಣಸಂಪಾದನೆ ಮುಖ್ಯ ಗುರಿ ಹಿಡಿಯುವುದೋ ಅಲ್ಲಿ ಸತ್ಯಜ್ಞಾನವಿರದು. ಅಜ್ಞಾನವೇ ಬೆಳೆದಿರುತ್ತದೆ.
ಒಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಿಂದ ಮನುಕುಲ ಜ್ಞಾನ ಗಳಿಸಿ ಮೇಲ್ಮಟ್ಟದ ಚಿಂತನೆಗಳಿಂದ ಆತ್ಮರಕ್ಷಣೆಯತ್ತ ನಡೆದಿರುವುದು ಸನಾತನ ಧರ್ಮದಲ್ಲಿ ಕಂಡಿದ್ದೆವು.ಈಗ?
ಮಠ ಮಂದಿರ ಚರ್ಚ್, ಮಸೀದಿಯಂತಹ ಧಾರ್ಮಿಕ ಕೇಂದ್ರ ಬೆಳೆದಿರೋದೆ ಹಣದಿಂದ.ಅದೂ ಜನರ ಹಣವೇ, ದೇಶದ ಋಣವೇ ಆದಾಗ ದೇಶ ಸೇವೆ ಜನಸೇವೆ ಯಾರು ಮಾಡುತ್ತಿರುವುದು? ದೈವತ್ವ ಪಡೆಯುವ ಶಿಕ್ಷಣ ಕೊಡದೆ ಆಳಿದವರನ್ನು ಏನೆಂದು ಕರೆಯಬೇಕು?
No comments:
Post a Comment