ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, June 4, 2024

ದ್ವೇಷವೆಂಬ ಅಜ್ಞಾನದ ಅಸುರಿಗುಣ

🌺 🍁 *ಸ್ಪೂರ್ತಿ ಕಿರಣ*🌺 🍁 ꧂     
*☘“ನೀವು ಒಬ್ಬರನ್ನು ಕ್ಷಮಿಸಿದ ನಂತರ, ನಿಮ್ಮಲ್ಲಿರುವ ಸಿಟ್ಟು ತನ್ನಷ್ಟಕ್ಕೆ ತಣಿದುಹೋಗುತ್ತದೆ. ದ್ವೇಷವನ್ನು ಸದಾ ಬೆಳೆಯಲು ಬಿಟ್ಟರೆ ಅದು ನಿಮ್ಮನ್ನು ಸುಡುತ್ತಲೇ ಹೋಗುತ್ತದೆ. ನಿಮ್ಮೊಳಗಿನ ನೆಮ್ಮದಿ ಹೊರಟುಹೋಗುತ್ತದೆ. ಕೆಲವು ಕಲಹ, ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ನಿಮ್ಮ ನೆಮ್ಮದಿಯ ದೃಷ್ಟಿಯಿಂದ ಒಳ್ಳೆಯದು.ಸಂತಸ ಮತ್ತು ನೆಮ್ಮದಿಯು ನಿಮ್ಮಲ್ಲಿ ಎಷ್ಟು ಆಸ್ತಿ ಇದೆ ಅಥವಾ ನೀವು ಯಾರು ಎಂಬುದನ್ನು ಆಧರಿಸಿರುವುದಿಲ್ಲ. ಇದು ನೀವು ಏನನ್ನು ಯೋಚಿಸುತ್ತಿದ್ದೀರಿ ಎಂಬುದನ್ನಷ್ಟೇ ಆಧರಿಸಿರುತ್ತದೆ. ಸಂತಸ ನಮ್ಮೊಳಗೇ ಅರಳಿಸಿಕೊಳ್ಳುವಂಥದ್ದು.

ದ್ವೇಷವೆಂಬುದು ಅಜ್ಞಾನದ ಸಂಕೇತ.ಇದು ಪುರಾಣ ಇತಿಹಾಸದಿಂದಲೂ ಬೆಳೆದ ಬಂದ ಅಸುರಿ ಶಕ್ತಿ.ಈಗಲೂ ಹರಡಿಕೊಂಡು ವ್ಯವಹಾರ ನೆಡೆಸಿ ಹಣ,ಅಧಿಕಾರಕ್ಕಾಗಿ ಕಿತ್ತಾಟ ನಡೆಸಿದೆ ಇದರಿಂದ ಲಾಭ ನಷ್ಟ ನಿರಂತರವಾಗಿ ಆಗುತ್ತಿದೆ. ಆದರೆ, ಮಾನವನ ಬುದ್ದಿ ಬೆಳೆದಂತೆಲ್ಲಾ ಇದು ರಾಜಕೀಯ ಪ್ರೇರಿತ ವಾಗುತ್ತಾ ಜ್ಞಾನ ಕುಸಿದು ತನ್ನ ತಾನರಿಯದಂತೆ ವಿನಾಶದೆಡೆಗೆ ನೆಡೆದಿರೋದೆ ದುರಂತ.
ಜೀವ ಇದ್ದರೆ ತಾನೆ ಜೀವನ. ಈ ದ್ವೇಷದಿಂದ ಜೀವ ಹೋದರೆ   ಏನರ್ಥ?
ಒಟ್ಟಿನಲ್ಲಿ ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸಂತೋಷಕ್ಕಾಗಿ  ಬಿಚ್ಚಿಟ್ಟ ದ್ವೇಷದ ಕಿಡಿ ಹತ್ತಿ ಉರಿಯುವಾಗ ಎಷ್ಟೋ ಒಳ್ಳೆಯ ಕೆಟ್ಟ ಜನರ ಜೀವಹೋಗುತ್ತದೆ. ಇದರಿಂದ ಧರ್ಮ ರಕ್ಷಣೆ  ಆಗಿದೆಯೋ ಅಧರ್ಮ ವೋ ಎನ್ನುವ ಚಿಂತನೆ ನಡೆಸುವಷ್ಟು ಸಮಯವಿಲ್ಲದೆ ಹೋದವರನ್ನು ಹಿಡಿದು ತಮ್ಮ ವ್ಯವಹಾರ ನೆಡೆಸೋ ಮಟ್ಟಿಗೆ  ಅಸುರರು ಬೆಳೆದರೆ ಭೂಮಿಯಲ್ಲಿ ಅಸುರರ ಸಂತಾನವೇ ಹೆಚ್ಚುವುದು.
ದೇವಾಸುರರ ಹಿಂದಿನ ಕಾಳಗದಲ್ಲಿ ಸಾಮಾನ್ಯರ ಜೀವಕ್ಕೆ ಬೆಲೆಯೇ ಇರಲಿಲ್ಲ.ವೀರ ಮರಣವನ್ನು  ಹೊಂದಿರುವ ಎಷ್ಟೋ ಸೈನಿಕರ ಕುಟುಂಬಕ್ಕೆ ಸಾಂತ್ವನ ಹೇಳಿದ ಕಥೆಯಿಲ್ಲ.ಆದರೆ ಅವರ ಸಂಸಾರದ ದುರ್ಗತಿಗೆ  ಈ ದ್ವೇಷದ ರಾಜಕೀಯವೆ ಕಾರಣವಾಗಿ ಅದೇ ದ್ವೇಷ. ಮುಂದೆಯೂ  ಹರಡಿಕೊಂಡಿದೆ.
ಸ್ವಲ್ಪ ನಿಧಾನವಾಗಿ ಚಿಂತನೆ ನಡೆಸಿದರೆ ವಾಸ್ತವದಲ್ಲಿ ಯಾರಿಗೆ ಯಾರು ಶತ್ರುಗಳು?
ವ್ಯವಹಾರಕ್ಕೆ ಇಳಿದಾಗ ಯಾವ ಧರ್ಮ, ಪಂಗಡ,ಪಕ್ಷ,ದೇಶ,ಜಾತಿ,ದೇವರು ಅಡ್ಡಬರೋದಿಲ್ಲ. ಹಣದ ಲಾಭವಾದರೆ ಸಂತೋಷ ನಷ್ಟವಾದರೆ ದು:ಖ. ಆ ದು:ಖವೇ ಮುಂದೆ ದ್ವೇಷಕ್ಕೆ ಕಾರಣವಾಗುತ್ತಾ ಕೊನೆಗೊಮ್ಮೆ ಜೀವ ಹೋಗುತ್ತದೆ. ಹಾಗಾದರೆ ಭೂಮಿಯಲ್ಲಿ ಜನ್ಮ ಪಡೆಯಲು ದ್ವೇಷ ಕಾರಣವೆ?
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ದ್ವೇಷ‌ಹರಡಲು ಹೆಚ್ಚು ಹಣಬಳಕೆಯಾಗುತ್ತಿದೆ.ಒಳ್ಳೆಯ ಸುದ್ದಿ ತಿಳಿಸುವುದೇ ತಪ್ಪು ಎನ್ನುವ ಮಟ್ಟಿಗೆ ಅಜ್ಞಾನ ಆವರಿಸಿದೆ. ಸತ್ಯ ತಿಳಿಸಿದರೂ ದ್ವೇಷ ಮಾಡುವ ನಮ್ಮವರೆ ನಮಗೆ ಶತ್ರುಗಳಂತೆ ಕಂಡರೆ ಎಲ್ಲಿಯ ಪ್ರೀತಿ ವಿಶ್ವಾಸ ನೆಮ್ಮದಿ ಶಾಂತಿ?
ತತ್ವದ ನಡುವೆ ಅಂತರ, ಲಿಂಗದ ನಡುವೆ ಅಂತರ, ಜಾತ್ಯಾಂತರ,ಧರ್ಮಾಂತರ,ಪಕ್ಷಾಂತರ,ಮತಾಂತರಗಳು ಸಾಮಾನ್ಯವಿಚಾರವಾಗುತ್ತಿದೆ. ಆ ಅಂತರಗಳೇ ಅವಾಂತರಕ್ಕೆ ಕಾರಣವಾದರೂ  ಅದಕ್ಕೆ ಕಾರಣ ನಾವೇ ಸೃಷ್ಟಿ ಮಾಡಿಕೊಂಡ ದ್ವೇಷ ಎನ್ನುವ ಸಾಮಾನ್ಯ ಜ್ಞಾನದ ಕೊರತೆ ಮಾನವನಿಗಿರೋವಾಗ. ಮಾನವನ ಶತ್ರು ಎಲ್ಲೂ ಇಲ್ಲ ಒಳಗೇ ಕುಳಿತಿರುವ ಅಹಂಕಾರ ಸ್ವಾರ್ಥ ದ ರಾಜಕೀಯ ಬುದ್ದಿವಂತಿಕೆ  ಅವನಿಗೇ ಮುಳುವಾಗುತ್ತಿದೆ.
ಎಲ್ಲಿರುವುದು ಮಹಾತ್ಮರುಗಳು ದೇವತೆಗಳು ಅಸುರರು ಎಂದರೆ ಎಲ್ಲಾ ನಮ್ಮೊಳಗೇ ಅಡಗಿರುವ ಗುಣವಾಗಿದೆ. ಆದರೆ ಅಸುರಿ ಗುಣವನ್ನು ಬಹಳ ಬೇಗ ಬೆಳೆಸುವುದೇ ಹೊರಗೆ  ಹೆಚ್ಚಾಗಿರುವ ದ್ವೇಷಕ್ಕೆ ಕಾರಣ. 
ಮಕ್ಕಳು ಮಹಿಳೆಯರು ಮನೆಯೊಳಗೆ ಸುರಕ್ಷಿತವಾಗಿರಲು ಅವರಲ್ಲಿ ಸುಶಿಕ್ಷಣವಿರಬೇಕಷ್ಟೆ. ಇದನ್ನು ಕೊಡದೆ ಹೊರಗಿನ ಶಿಕ್ಷಣದ. ದಾಸರಾಗಿಸಿದರೆ ಹೊರಗಿನವರು ಆಳುವರು.‌ಆಳುವುದನ್ನು ದ್ವೇಷದಿಂದ ವಿರೋಧ ಮಾಡಿದರೆ ಇನ್ನಷ್ಟು ದ್ವೇಷವೇ ಹೆಚ್ಚುವುದು. ಒಟ್ಟಿನಲ್ಲಿ ಮನರಂಜನೆ ಬೇಕು ಹಣ ಬೇಕು, ವ್ಯವಹಾರ ಬೇಕು, ಸುಖವಿರಬೇಕು...ಎಲ್ಲಾ ಬೇಕುಗಳ ನಡುವೆ ಆತ್ಮವಂಚನೆ ಆಗುತ್ತಿದ್ದರೆ ದೇವರಿಲ್ಲ ನಾನೇ ಎಲ್ಲಾ ಎನ್ನುವ ಅಸುರ ಶಕ್ತಿ ಬೆಳೆದಿರೋದು ಕಾಣೋದೇ ಇಲ್ಲ.
ಇದನ್ನು ಮೊದಲು ಧಾರ್ಮಿಕ ವರ್ಗ, ಶಿಕ್ಷಕವರ್ಗ ಅರ್ಥ ಮಾಡಿಕೊಂಡು  ದೇಶದ ಪೋಷಕ ರಾಗಿ ನಮ್ಮ ಸಂಸಾರದ ಜವಾಬ್ದಾರಿ  ನಮ್ಮ ಕೈಯಲ್ಲಿದೆ ಸರ್ಕಾರದ ಕೈವಶದಲ್ಲಿಲ್ಲ ಎನ್ನುವ ಸತ್ಯವರಿತರೆ ಸ್ವಲ್ಪ ಮಟ್ಟಿಗೆ ನಮ್ಮ ದ್ವೇಷದ ಪ್ರಭಾವ ಕಡಿಮೆಯಾಗಿ ವಾಸ್ತವದಲ್ಲಿ ಬದುಕಬಹುದಷ್ಟೆ.
ಎಂತೆಂತಹ ಮಹಾತ್ಮರುಗಳು, ದೇವಾನುದೇವತೆಗಳು, ದಾಸ ಸಂತ ಶರಣರು ಜನ್ಮ ಪಡೆದ ಭಾರತ  ಇಂದು ಎಂತಹ ಪರಿಸ್ಥಿತಿ ಯಲ್ಲಿದೆ ಎಂದರೆ ವಿದೇಶದೊಳಗೆ ಸಿಲುಕಿದೆ.
ಅಜ್ಞಾನವನ್ನು ಜ್ಞಾನವೆಂದು ನಂಬಿದೆ,ಅಧರ್ಮವನ್ನು ಧರ್ಮ ಎಂದು ಬೆಳೆಸಿದೆ, ಅನ್ಯಾಯವನ್ನು ನ್ಯಾಯವೆಂದು ವಾದಿಸಿದೆ, ಅಸತ್ಯವನ್ನೇ ಸತ್ಯವೆಂಬ ಭ್ರಮೆಯಲ್ಲಿ  ಬೆಳೆಸಿದೆ
ಇದನ್ನು ಕಲಿಗಾಲವೆಂದು ಒಪ್ಪಿಕೊಂಡು ನಡೆದವರು ನಮ್ಮವರೆ  ,ನಮ್ಮವರನ್ನೇ  ಮೆಚ್ಚಿಕೊಂಡು ಅನುಸರಿಸಿದವರೂ ನಮ್ಮವರೆ, ಈಗ ನಮ್ಮವರನ್ನೇ ದೂರಿಕೊಂಡು ದ್ವೇಷ  ಹರಡುವವರೂ ನಮ್ಮವರೆ ಎಂದರೆ ದ್ವೇಷ  ನಮ್ಮವರೊಂದಿಗೆ ಬೆಳೆಸಿಕೊಂಡಾಗ ಇದರ ಪ್ರತಿಫಲ ಅನುಭವಿಸೋರು ಯಾರು?
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂದಂತೆ.ಮಧ್ಯವರ್ತಿಗಳು ರಾಜಾರೋಷವಾಗಿ  ನಮ್ಮದೇನೂ ತಪ್ಪಿಲ್ಲವೆಂದು ಸುದ್ದಿ ಹರಡಿಕೊಂಡಿದ್ದರೆ ಮುಂದೆ  ಅದೇ ತಮ್ಮ ಸಂಸಾರದೊಳಗೇ ಗ
ನುಗ್ಗಿ ಬರೋದಂತೂ ಸತ್ಯ. ಮಾಡಿದ್ದುಣ್ಣೋ ಮಹಾರಾಯ.
ಯಾರಾದರೂ ಹಣದಿಂದ ದ್ವೇಷ ಶಮನ ಮಾಡಿರೋದಿದೆಯೆ?
ಜ್ಞಾನದಿಂದ  ಮಾಡಿಕೊಂಡಿದ್ದಾರಷ್ಟೆ.ಅದಕ್ಕೆ ಸನಾತನ ಧರ್ಮ ಶತ್ರುಗಳನ್ನು ಪ್ರೀತಿಸುವ ಶಕ್ತಿ ಪಡೆದಿರೋದು.ಅದನ್ನು  ಯಾರೋ ಹೊರಗಿನಿಂದ  ಬೆಳೆಸಿಲ್ಲ.ಒಳಗಿರುವ ಈ ಶಕ್ತಿಯನ್ನು  ಒಳಗಿದ್ದೇ ಬೆಳೆಸಿಕೊಂಡರೆ ಆತ್ಮಕ್ಕೆ ಶಾಂತಿ.
ಮನುಷ್ಯ ಬದುಕಿದ್ದಾಗ ಸಿಗದ ಶಾಂತಿ ಹೋದ‌ಮೇಲೆ ಸಿಗದು.
ಕಣ್ಣಿಗೆ ಕಾಣದಿರೋರನ್ನು  ಹಿಡಿದು  ಪೂಜಿಸಬೇಕೆಂದರೆ ಕಷ್ಟ.
ದೇವರನ್ನು ಹಿಡಿದು ರಾಜಕೀಯ ನೆಡೆಸುವುದು ಕಷ್ಟ. ಎಷ್ಟೇ  ಒಳ್ಳೆಯವರಿದ್ದರೂ ಕೆಟ್ಟವರಿರೋವರೆಗೆ  ಒಳ್ಳೆಯದು ಬೆಳೆಯದು. ಕಾರಣ ರಾಜಕೀಯ ದ್ವೇಷಕ್ಕೆ ಬಲಿಯಾಗೋದು ಒಳ್ಳೆಯವರೆ. ಹೀಗಾಗಿ ಮಹಾತ್ಮರುಗಳು ರಾಜಕೀಯದಿಂದ ದೂರವಿದ್ದು ಸಾಧಕರಾದರು. ಈಗಿದು ಪ್ರಜಾಪ್ರಭುತ್ವದಲ್ಲಿ  ಕಷ್ಟವಿದೆ.ಕಾರಣ ದೇವರು ಪ್ರಜೆಗಳ ಮೂಲಕವೇ ದೇಶ ನೆಡಸಿರೋದರಿಂದ ಪ್ರಜೆಗಳೇ ಅಜ್ಞಾನದ ದ್ವೇಷಕ್ಕೆ ಬಲಿಪಶು ಆಗಿದ್ದರೆ  ಎಲ್ಲಿರುವುದು ಶಾಂತಿ?
ಮನೆಯೊಳಗೆ ಕುಳಿತು ಮಾಧ್ಯಮದ ಮೂಲಕ ಸುದ್ದಿ ತಿಳಿದು ಇದೇ ಸತ್ಯವೆಂದು ಒಳಗೆ ವಿಷ ತುಂಬಿಕೊಂಡು ಹೊರಬರುವ ಮಹಿಳೆ ಮಕ್ಕಳನ್ನು ತಡೆಯುವವರಿಲ್ಲ.ಮನಸ್ಸು ಬಹಳ ಸೂಕ್ಮ. ಇದನ್ನು ಹಿಡಿದುಕೊಂಡು ಒಂದೆಡೆ ಕೂರುವುದು ಬಹಳ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ  ಇನ್ನಷ್ಟು ಅಪಪ್ರಚಾರ
ಕೆಟ್ಟ ಸುದ್ದಿಗಳು, ದ್ವೇಷದ ಕಿಡಿ ಹರಡುವ ಧಾರಾವಾಹಿ,ಚಲನಚಿತ್ರ,ಕಾರ್ಯಕ್ರಮ ಗಳಿಂದ  ಮಾನವ ಶಾಂತಿ ಪಡೆಯಲಾಗದು. ಇಂತಹ ಕಾರ್ಯಕ್ರಮಕ್ಕೆ ಸಾಕಷ್ಟು ಹಣಬಳಸಲಾಗುತ್ತದೆಂದರೆ ನಮ್ಮ ಜೀವನ ಎತ್ತ ಸಾಗಿದೆ?
ಒಳ್ಳೆಯ ಕಾರ್ಯಕ್ರಮ ಕ್ಕೆ ಜನಬಲ ಹಣಬಲ ಇಲ್ಲ ಎಂದರೆ ಮಾನವನ ಮನಸ್ಸು ಎಷ್ಟು ಹದಗೆಟ್ಟಿದೆ ಎಂದು ತಿಳಿಯಬಹುದು. ಈ ವಿಚಾರವೂ  ಹರಡೋದಿಲ್ಲಕಾರಣ ಇದು ನಮ್ಮ  ತಪ್ಪನ್ನು ಎತ್ತಿ ಹಿಡಿಯುತ್ತಿದೆ. ಇದರಿಂದಾಗಿ ನಮಗೆ ಅವಮಾನವಾಗುತ್ತದೆ. ಆದರೆ ಅವಮಾನ ದೇಶಕ್ಕೆ ಆದಾಗ ಅದರೊಳಗಿರುವ ನಾವೂ ಕಾರಣರೆ ಎಂದರ್ಥ.
ನಮ್ಮ ಸಹಕಾರವಿಲ್ಲದೆ ಯಾರೂ ಬೆಳೆದಿಲ್ಲ. ರಾಜಕಾರಣಿಗಳ ನಡುವೆ,ಜನರ ನಡುವೆ,ಪಕ್ಷ,ಧರ್ಮ, ಜಾತಿಗಳ ನಡುವೆ ಅಂತರ ಬೆಳೆಸುತ್ತಾ ಕೋಟ್ಯಾಂತರ ಹಣಗಳಿಸಿ ಶ್ರೀಮಂತರಾದರೂ ಒಮ್ಮೆ ಜೀವ ಹೋಗೋದೆ.ಪರಮಾತ್ಮನಿಗೆ  ಯಾರೂ ಶ್ರೀಮಂತ ರಲ್ಲ.ಯಾರ ಮೇಲೂ ದ್ವೇಷವಿಲ್ಲ. ಆದರೆ ಪರಮಾತ್ಮನನ್ನು ದ್ವೇಷ ಮಾಡಿ  ಮಹಾತ್ಮರಾದವರಿಲ್ಲ. ಮಹಾತ್ಮರಿಂದ ಯೋಗಿಗಳಿಂದ ವಿಶ್ವಗುರು ವಾಗಿದ್ದ ಭಾರತ ಇಂದು ಪಾಪಿಷ್ಟರಿಂದ  ತುಂಬಿ ಭ್ರಷ್ಟಾಚಾರದ ರೋಗ ಹರಡುವ ಹಂತಕ್ಕೆ ಬಂದಿರೋದಕ್ಕೆ ಪ್ರಜೆಗಳ ಸಹಕಾರವೇ ಕಾರಣ. ಇದರ ಮೂಲವೇ ಶಿಕ್ಷಣ ವ್ಯವಸ್ಥೆ.
ಸೇವೆಯ ಹೆಸರಿನಲ್ಲಿ  ಸಾಕಷ್ಟು ಸೇವಕರು ಬೆಳೆದಿದ್ದರೂ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಸೇವಕರ ಕೊರತೆ  ಎದ್ದು  ಕಾಣುತ್ತಿದೆ. ಹಣವಿದ್ದರೆ ಮಾತ್ರ ಬೆಲೆ. ಸತ್ಯಜ್ಞಾನಕ್ಕೆ ಕೊರತೆ. 
ಸತ್ಯವಿಲ್ಲದ ಧರ್ಮದ ಆಚರಣೆ ನೀರಿನಲ್ಲಿ ಹೋಮಮಾಡಿದಂತೆ. ಹಾಗೆ ಧರ್ಮವಿಲ್ಲದ ಸತ್ಯ.ಒಂದು ಕುಂಟು, ಇನ್ನೊಂದು ಕುರುಡು.ಇವೆರಡೂ ದ್ವೇಷದ ವಿಷಬೀಜ ಬಿತ್ತಿ ಅಧರ್ಮ ಬೆಳೆದಿದೆ. ಯಾರನ್ನೋ ಯಾರೋ ಆಳುವ‌ಪರಿಸ್ಥಿತಿ ನಿರ್ಮಾಣವಾದರೆ  ಸ್ವಾತಂತ್ರ್ಯ ಪಡೆದು ಪ್ರಯೋಜನವೇನು?
ಕಲಿಗಾಲದ ಕಲಿಕೆಯ ಪ್ರಭಾವ  ಪ್ರಾರಂಭದಲ್ಲಿಯೇ ಹೀಗಾದರೆ ಮುಂದೆ ಗತಿ ಏನು? ಬದಲಾವಣೆ ಒಳಗೇ ಆಗಬೇಕಷ್ಟೆ.ಹೊರಗೆ ತೇಪೆ ಹಾಕಿ ಆಪರೇಷನ್ ಮಾಡಿ ತಿರುಗಿದರೂ ಒಳಗಿನ ರೋಗ ವಾಸಿಯಾಗದು.

No comments:

Post a Comment