ಆ ಪಕ್ಷ ಬಂದರೆ ನಮಗೆ ಒಳ್ಳೆಯದಾಗುವುದೆಂದು ಜನ ನಂಬಿಕೊಂಡು ಹಿಂದಿನಿಂದಲೂ ಬಂದಿದ್ದರೂ ಪಕ್ಷ ಪಕ್ಷಗಳು ಒಂದಾಗಿ ಸರ್ಕಾರ ನಡೆಸುವಾಗ ಪಕ್ಷಬೇಧವೇ ಇರಬಾರದು.
ಒಟ್ಟಿನಲ್ಲಿ ದೇಶಕ್ಕೆ ಒಳಿತಾದರೆ ಅದೇ ನಮಗೆ ಶ್ರೀ ರಕ್ಷೆ.ಕಾರಣ ನಾವೆಲ್ಲರೂ ದೇಶವಾಸಿಗಳಲ್ಲವೆ?
ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ ಸೋಮಶೇಖರನು ತನ್ನ ಭಾಮೆಗೆ ಹೇಳಿದ ಮಂತ್ರರಾಮಮಂತ್ರವಾ ಜಪಿಸೋ ಹೇಮನುಜ...
ರಾಮರಾಜ್ಯದ ಕನಸು ರಾಜಕೀಯದಲ್ಲಿಲ್ಲದ ಕಾರಣ ನಮ್ಮ ಮನಸ್ಸು ರಾಜಯೋಗದೆಡೆಗೆ ನಡೆದರೆ ಸ್ವತಂತ್ರ ಭಾರತದಲ್ಲಿ ಶ್ರೀ ರಾಮನ ಒಳಗೇ ಕಾಣಬಹುದು.
ಸ್ವಾಮಿ ವಿವೇಕಾನಂದರು ಶಿಕ್ಷಣದಲ್ಲಿಯೇ ರಾಜಯೋಗದ ವಿಚಾರ ತಿಳಿಸುವ ಸಂದೇಶ ಕೊಟ್ಟು ಏಳಿ ಎದ್ದೇಳಿ ಗುರಿ ತಲುಪುವವರೆಗೂ ನಿಲ್ಲದಿರಿ ಎಂದಿದ್ದರು. ಇಂದಿನ ಯುವ ಪೀಳಿಗೆಯ ಗುರಿ ವಿದೇಶದೆಡೆಗೆ ಸಾಗಿದೆ ಎಂದರೆ ದೇಶಭಕ್ತಿ ಒಳಗಿದೆಯೋ ಹೊರಗಿದೆಯೋ?
ಸರ್ಕಾರ ಯಾವುದೇ ಬಂದರೂ ಅದು ಪ್ರಜೆಗಳ ಸಹಕಾರವೇ ಆಗಿರುತ್ತದೆ.ಪ್ರಜೆಗಳ ಸಹಕಾರದಲ್ಲಿ ರಾಜಕೀಯವೇ ರಾಜಯೋಗಕ್ಕಿಂತ ದೊಡ್ಡದಾಗಿದ್ದರೆ ಯೋಗ ಹಿಂದುಳಿಯುತ್ತದೆ. ವೈಭೋಗದ ಜೀವನಕ್ಕೆ ಹಣ ಬೇಕು. ಹಣ ಸಂಪಾದನೆ ಸತ್ಯಜ್ಞಾನದಿಂದ ಆಗಿರಬೇಕು. ಸತ್ಯ ತಿಳಿದ ನಂತರ ಹಣ ಸದ್ಬಳಕೆ ಆಗುತ್ತದೆ. ಸದ್ಬಳಕೆಯಾದಾಗ ನಮ್ಮ ಜ್ಞಾನ ಇನ್ನಷ್ಟು ಹೆಚ್ಚುತ್ತದೆ. ಆದರೆ ಯಾವಾಗ ಹಣ ಭ್ರಷ್ಟಾಚಾರ ದಿಂದ ಗಳಿಸಲಾಗುವುದೋ ಅಧರ್ಮ ಅಸತ್ಯ ಅನ್ಯಾಯದಿಂದ ಕೂಡಿ ಹಾಕಲಾಗುವುದೋ ಲಕ್ಮಿ ಅಲಕ್ಮಿಯಾಗಿ ಲಕ್ಷ ಲಕ್ಷ ಬಂದರೂ ನಿರ್ಲಕ್ಷ್ಯಕ್ಕೆ ಒಳಗಾಗಿ ದುರ್ಭಳಕೆ ಹೆಚ್ಚಾಗುತ್ತಾ ಸಾಲದೊಳಗೆ ಜೀವನ ನಡೆಯುತ್ತದೆ.
ಸಾಲ ತೀರಿಸಲು ಬಂದಜೀವಾತ್ಮನಿಗೆ ಇನ್ನಷ್ಟು ಸಾಲದ ಹೊರೆ ಹಾಕಿದರೆ ಏನಾಗಬಹುದು.
ಪಕ್ಷಗಳಾದರೂ ಒಂದಾಗಿ ದೇಶ ನಡೆಸಬಹುದು.ಆದರೆ ಈ ಮಧ್ಯವರ್ತಿಗಳು ಮಾಧ್ಯಮಗಳು ಅವರನ್ನು ಒಂದಾಗಿರದಂತೆ ಸುದ್ದಿ ಮಾಡಿ ಜನರಿಗೆ ತಲುಪಿಸುವುದರಿಂದ ಯಾರಿಗೆ ಲಾಭ ?ಯಾರಿಗೆನಷ್ಟ?
ಎಲ್ಲಾ ವ್ಯವಹಾರಕ್ಕಿಳಿದ ಪ್ರಜೆಗಳೇ ಆಗಿದ್ದರೂ ಧರ್ಮ ಸತ್ಯದ ವಿಚಾರದಲ್ಲಿ ಎಲ್ಲರೂ ಬೇರೆ ಬೇರೆ. ಈ ಅಂತರವೇ ಮತಾಂತರ, ಜಾತ್ಯಾಂತರ, ಧರ್ಮಾಂತರ, ಪಕ್ಷಾಂತರಕ್ಕೆ ಕಾರಣವಾಗಿ ದೇಶಾಂತರ ಹೋದವರ ಮಾತಿಗೆ ಕೊಡುವ ಗೌರವವನ್ನು ಜೊತೆಗಿದ್ದವರಿಗೆ ಕೊಡಲಾಗದಿದ್ದರೆ ಅಧರ್ಮ.ಅದಕ್ಕೆ ತಕ್ಕಂತೆ ಕರ್ಮ ಫಲ.
No comments:
Post a Comment