ದೇಶದ ಯುವಕರು ವಿದೇಶದೆಡೆಗೆ ಮುಖಮಾಡಿಕೊಂಡು ಸ್ವದೇಶ ದ ವಿರುದ್ದ ಕೂಗುತ್ತಿರುವುದರ ಹಿಂದೆ ಯಾರ ಕೈವಾಡವಿದೆ?
ಪ್ರಜಾಪ್ರಭುತ್ವ ದ ಅರ್ಥ ತಿಳಿದವರು ಎಚ್ಚರವಾದರೆ ಉತ್ತಮ ಇಲ್ಲಿ ಯುವಪೀಳಿಗೆಗೆ ಹಣ ಅಧಿಕಾರದ ಆಮಿಷ ಒಡ್ಡಿ ತಮ್ಮ ಬೇಳೆ ಬೇಯಿಸಿಕೊಂಡು ಆಳುವವರೆ ಹೆಚ್ಚು.ರಾಜಕೀಯತೆ ಧಾರ್ಮಿಕ ಕ್ಷೇತ್ರವನ್ನೂ ಆವರಿಸಿರುವಾಗ ಇದರಿಂದ ಹೊರ ಬಂದು ವಾಸ್ತವತೆಯನ್ನು ಸರಿಯಾಗಿ ತಿಳಿಯುವುದಕ್ಕೂ ಯುವಶಕ್ತಿಗೆ ಸಮಯವಿಲ್ಲವೆ? ಅಥವಾ ತಿಳಿಸುವವರಲ್ಲಿಯೆ ರಾಜಕೀಯವಿದೆಯೆ?
ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಭಾಷಣ ಮಾಡಿದ್ದನ್ನು ಹಿಡಿದುಕೊಂಡು ಅಮೇರಿಕಾದೆಡೆಗೆ ಹೋಗಲು ದೇಶದ ಹಣ ಬಳಸುವರು.ಒಂದೊಂದು ಕಾರ್ಯಕ್ರಮ ನಡೆಸಲೂ ಹಣ ಬೇಕು ಆದರೆ ಅವರಲ್ಲಿದ್ದ ದೇಶಭಕ್ತಿ ಇಲ್ಲದ ಯುವಪೀಳಿಗೆ ವಿದೇಶದಲ್ಲಿ ಕುಳಿತು ದೇಶದ ಬಗ್ಗೆ ಮಾತಾಡಿ ಒಳಗಿದ್ದ ನಿಜವಾದ ದೇಶಭಕ್ತರನ್ನು ಗಮನಿಸುವ ಜ್ಞಾನವಿಲ್ಲದೆ ತಾವೇ ಸಾಧಕರೆನ್ನುವಂತೆ ವರ್ತಿಸಿ ಆಳುವುದು ಅಧರ್ಮ . ಇದು ಧರ್ಮ, ದೇವರು, ಜಾತಿ,ಪಕ್ಷಗಳವರೆಗೆ ಹರಡಿಕೊಂಡು ದ್ವೇಷ ಹೆಚ್ಚಿಸುವವರಿಗೆ ಒಳ್ಳೆಯ ಸಹಕಾರ ಕೊಟ್ಟಂತಿದೆ. ವಿದೇಶಿಗಳು ಭಾರತದೇಶದ ಜ್ಞಾನಿಗಳು ಬುದ್ದಿವಂತರನ್ನು ಖರೀದಿಸಲು ಹೊರಟಿವೆ.ನಮ್ಮವರು ಇದನ್ನು ಪ್ರಗತಿ ಎಂದು ಮಕ್ಕಳನ್ನು ಕಳಿಸುತ್ತಿದ್ದಾರೆಂದರೆ ಇಲ್ಲಿ ದೇಶಭಕ್ತಿಯಿಲ್ಲ. ತೋರುಗಾಣಿಕೆಯ ನಾಟಕವನ್ನು ಸತ್ಯವೆಂದರಿತ ಜನಸಾಮಾನ್ಯರು ಕುರಿಗಳಂತೆ ಹಿಂದೆ ನಡೆದು ತಿರುಗಿ ಬರಲಾಗದೆ ಸಾಯುತ್ತಿದ್ದಾರೆ. ಹಣದಿಂದ ಜನರನ್ನು ಖರೀದಿಸುವುದೇ ಅಜ್ಞಾನ. ರಾಜಕಾರಣಿಗಳಂತೂ ದೇಶವನ್ನು ವಿದೇಶಿ ಬಂಡವಾಳ ,ಸಾಲದ ವ್ಯವಹಾರಕ್ಕೆ ಬಳಸಿಕೊಂಡು ವೈಭೋಗದೆಡೆಗೆ ನಡೆದಿರೋದು ದುರಂತ.
ಹಿಂದೂ ರಾಷ್ಟ್ರ ಮಾಡೋರ ಲಕ್ಷಣವೆ ಇದು? ಮೊದಲು ನಾವುಬದಲಾಗಬೇಕು. ನಾವುಹಿಂದಿನ ಮಹಾತ್ಮರಂತೆ ಅಧ್ಯಾತ್ಮದಲ್ಲಿ ನಡೆದು ನುಡಿಯಬೇಕು. ಇಲ್ಲಿ ಎಲ್ಲಾ ಮುಂದಿನ ಚಿಂತೆ ಇಂದಿನ ಸತ್ಯ ಅರ್ಥ ವಾಗದೆ ಹಿಂದಿನ ಸತ್ಯವರಿತು ಮುಂದೆ ನಡೆದರೆ ಆಗೋದೇ ಹೀಗೆ. ಯೋಗದಿನಾಚರಣೆಯ ಮೂಲಕ ಯೋಗಾಸನದ ಮೂಲಕ ದೇಶದ ಜನರನ್ನು ಯೋಗಿ ಮಾಡಲಾಗದು. ಪ್ರತಿದಿನ ಯೋಗ್ಯ ವಿಚಾರಗಳಿಂದ ತಮ್ಮ ಯೋಗ್ಯತೆಯ ಕಡೆಗೆ ಗಮನಹರಿಸಿ ಯೋಗ್ಯದಿಕ್ಕಿನಲ್ಲಿನಡೆದುಯೋಗ್ಯಪ್ರಜೆಗಳಾಗು
ವಂತಹ ಶಿಕ್ಷಣವನ್ನೇ ಕೊಡದೆ ಯೋಗ ಮಾಡುತ್ತಾ ವಿದೇಶದೆಡೆಗೆ ನಡೆದರೆ ಇದರಲ್ಲಿ ಯಾವ ಉದ್ದೇಶವಿದೆ? ಒಟ್ಟಿನಲ್ಲಿ ದೇಶಕ್ಕಾಗಿ ನಾವೇನೂ ಮಾಡುವ ಅಗತ್ಯವಿಲ್ಲ. ಕೊನೆಪಕ್ಷ ವಿದೇಶ ಮಾಡದಿದ್ದರೆ ಸಾಕು. ಅಂದರೆನಮ್ಮೊಳಗೇ
ಇರುವ ಸತ್ಯಜ್ಞಾನದಿಂದ ಸತ್ಯ ತಿಳಿದು ಹಿಂದಿರುಗಿ ಬಂದರೆ ನಮ್ಮ ಮೂಲದ ಧರ್ಮ ಕ್ಕೆ ಬಲ ಬರುವುದು. ಧರ್ಮ ಹೊರಗಿಲ್ಲ ಒಳಗೇ ಇದೆ.ಎಲ್ಲಾ ದೇಶದ ಮೂಲ ಧರ್ಮ ಕರ್ಮ ಆ ದೇಶದ ಶಿಕ್ಷಣದಲ್ಲಿಯೇ ತಿಳಿಸಿ ಕಲಿಸುವುದರ ಮೂಲಕದೇಶಭಕ್ತಿಹೆಚ್ಚುವುದು.ಆತ್ಮವಿಶ್ವಾಸಆತ್ಮಜ್ಞಾನದಿಂದ
ಆತ್ಮನಿರ್ಭರ ಆಗುವುದು. ಇದನ್ನು ಯಾರೋ ಹೊರಗಿನಿಂದ ಬಂದು ಕೊಡಲಾಗದು ಒಳಗಿರುವವರೆ ಬೆಳೆಸಬೇಕಿದೆ. ಒಟ್ಟಿನಲ್ಲಿ ರಾಜಕೀಯವೆಂದರೆ ಬೇರೆಯವರನ್ನು ಆಳುವುದಾಗಿದೆ. ಪ್ರಜಾಪ್ರಭುತ್ವ ಎಂದರೆ ನಮ್ಮನ್ನು ನಾವು ಆಳಿಕೊಳ್ಳಬೇಕಿತ್ತು. ಈಗ ದೇಶದಿಂದ ನನಗೇನೂ ಲಾಭವಿಲ್ಲವೆಂದು ವಿದೇಶಿಗರ ಕೈಕೆಳಗೆ ದುಡಿಯುವ ಯುವಪೀಳಿಗೆಯಲ್ಲಿ ದೇಶಭಕ್ತಿ ಇರಲು ಸಾಧ್ಯವೆ? ವಿದೇಶದ ಋಣ ತೀರಿಸದೆ ದೇಶದ ಋಣ ತೀರಿಸಲಾಗದು.ಆದರೂ ಇಲ್ಲಿನ ನೆಲಜಲದ ಋಣ ತೀರಿಸಲು ದೇಶಕ್ಕಾಗಿ ಸೇವೆ ಮಾಡುವುದು ಧರ್ಮ. ಅದು ಬಿಟ್ಟು ಇನ್ನೂ ಸರ್ಕಾರವೇ ನಮ್ಮ ನ್ನು ಸಾಕಬೇಕೆಂದರೆ ಅಜ್ಞಾನ.
ಸಾಲದ ಹಣದಲ್ಲಿ ಎಷ್ಟೇ ಆಸ್ತಿ ಅಂತಸ್ತು ಅಧಿಕಾರ ಪಡೆದರೂ ಅದನ್ನು ತೀರಿಸಲು ಜ್ಞಾನ ಅಗತ್ಯವಿದೆ. ಜ್ಞಾನ ಎಂದರೆ ಹೊರಗಿನ ವಿಜ್ಞಾನವಲ್ಲ ಒಳಗಿರುವ ಆತ್ಮಜ್ಞಾನ.
ಒಂದು ಸಣ್ಣ ಜೀವ ಸಾಕಿಕೊಳ್ಳುವ ಯೋಗ್ಯತೆ ಇಲ್ಲದವರು ದೇಶ ಕಟ್ಟಿ ಬೆಳೆಸಬಹುದೆ? ಜನರ ಹಣದಲ್ಲಿ ಜೀವನ ನಡೆಸಿ ಜನರನ್ನು ದಾರಿತಪ್ಪಿಸಿ ಆಳುವವರ ಸಂಖ್ಯೆ ಬೆಳೆದಿರೋದು ಅಧರ್ಮ ಭ್ರಷ್ಟಾಚಾರವಾಗಿದೆ. ತನ್ನದಲ್ಲದ ವಿಷಯ ವಸ್ತು ಒಡವೆ, ದೇಶ,ಭಾಷೆ,ಧರ್ಮ ವನ್ನು ತನ್ನದೆನ್ನುವಂತೆ ನಾಟಕ ಆಡಿ ಜನರನ್ನು ಮೋಸಮಾಡುವುದೇ ಅಧರ್ಮ ಕ್ಕೆ ಕಾರಣ. ಇದು ಪ್ರತಿಷ್ಠಿತ ಶ್ರೀಮಂತ ವರ್ಗ ಮಧ್ಯವರ್ತಿಗಳ ಸಹಾಯದಿಂದ ನಡೆಸುತ್ತಿರುವ ರಾಜಕೀಯವಾಗಿದೆ. ಇದರಲ್ಲಿ ದೇಶಕ್ಕೆ ಏನು ಸಿಕ್ಕಿದೆ? ಜನರ ಸಾಲ ತೀರಿತೆ? ನಮ್ಮ ಧರ್ಮ ರಕ್ಷಣೆಯಾಗಿದೆಯೆ? ಪ್ರಜೆಗಳೇ ಸಾಮಾನ್ಯಜ್ಞಾನದಿಂದ ತಿಳಿಯುವವರೆಗೆ ಬದಲಾವಣೆ ಕಷ್ಟ.
ಮಹಾತ್ಮರು ಹೇಳಿದ್ದೇ ಒಂದು ಮಹೋದಯರು ಹೇಳೋದೆ ಬೇರೊಂದು. ಎಲ್ಲಾ ತಮ್ಮ ಸ್ವಾರ್ಥ ದ ರಾಜಕೀಯಮಯ ಜಗತ್ತು. ಆದರೆ ಒಳಗಿನ ಜಗತ್ತು ಎಲ್ಲದ್ದಕ್ಕೂ ಸಾಕ್ಷಿಯಾಗಿದೆ. ತಿರುಗಿ ಬರೋವಾಗ ಕಾದಿದೆ ಆಪತ್ತು.ದೇಶವನ್ನು ವಿದೇಶ ಮಾಡಿದರೆ ವಿದೇಶದೊಳಗೆ ದೇಶ ಸಿಲುಕುತ್ತದೆ ಅಂದರೆ ವಿದೇಶಿಗಳ ಅಧಿಕಾರಕ್ಕೆ ದೇಶದ ಯುವಪೀಳಿಗೆ ಬಲಿಯಾಗುತ್ತಾರೆ. ಹಿಂದೆ ಹೀಗೇ ನಡೆದಿತ್ತು ಈಗ ಇತಿಹಾಸ ಪ್ರಚಾರ ಮಾಡಿ ಇತಿಹಾಸದೆಡೆಗೆ ಹೊರಟಿದ್ದಾರೆ.ಇದಕ್ಕೆ ಕಾರಣ ಇತಿಹಾಸ ಪುರಾಣ ಕಾಲದಲ್ಲಿದ್ದ ಶಿಕ್ಷಣ ಕೊಡದೆ ಆಳಿದ ರಾಜಕೀಯ ವ್ಯವಸ್ಥೆ. ಎಲ್ಲಾ ಪಕ್ಷಗಳಿಗೂ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿಡುವ ಉದ್ದೇಶ. ಆದರೆ ಜನರ ಜ್ಞಾನ ಗುರುತಿಸುವ ಶಿಕ್ಷಣವಿಲ್ಲದೆ ವಿದೇಶಿ ವಿಜ್ಞಾನದಿಂದ ಜನರನ್ನು ವಿದೇಶದವರೆಗೆ ಕಳಿಸಿ ಅಳಿದುಳಿದವರನ್ನು ಆಳಿ ಅಳಿಸುವುದೇ ಆಗಿದೆ. ವಿದೇಶಕ್ಕೆ ಹೋದವರ ಆಸ್ತಿ ಪಾಸ್ತಿಗೆ ವಾರಸುದಾರರಿಲ್ಲದೆ ಕೊಳೆತರೂ ಕೇಳೋರಿಲ್ಲ. ಎಂತಹ ಅಜ್ಞಾನ. ನಮ್ಮ ಪೂರ್ವಜರ ಆಸ್ತಿ ಬೇಕು ಅವರ ಧರ್ಮ ಕರ್ಮ ಭೂಮಿ ಸೇವೆಯ ಜ್ಞಾನ ಬೇಡವೆಂದರೆ ಹಿಂದೂ ಧರ್ಮದ ಹಿಂದುಳಿಯುವಿಕೆಗೆ ಇದೇ ಕಾರಣ.ನಮ್ಮವರನ್ನೇ ನಮ್ಮತನ ವನ್ನೇ ಮರೆತು ಬಿಟ್ಟು ಹೋದರೆ ನಮ್ಮವರು ಯಾರು? ಪರಕೀಯರೆ? ಇರಬಹುದು ಕಾರಣ ಅವರು ನಮಗೆ ಆಶ್ರಯ ಕೊಟ್ಟಿರುವಾಗ ಅವರ ಋಣ ನಮಗಿದೆ. ಇದಕ್ಕೆ ಕಾರಣವೇ ಶಿಕ್ಷಣ.ಹಾಗಾಗಿ ಅವರ ಧರ್ಮಕ್ಕೆ ಜಯ.ಹಿಂದೂಗಳ ಮಂತ್ರ ಇಸ್ಲಾಂ ರ ತಂತ್ರ ಮುಸ್ಲಿಂ ರ ಯಂತ್ರದಿಂದ ಮನುಕುಲ ಸ್ವತಂತ್ರವಾಗಿದ್ದರೂ ಅತಂತ್ರಸ್ಥಿತಿಗೆ ತಲುಪಲು ಕಾರಣವೇ ದ್ವೇಷದ ರಾಜಕೀಯ.
ಒಂದಂತೂ ಸತ್ಯ ಮನುಕುಲವಿರೋದು ಭೂಮಿ ಮೇಲೆ.
ಭೂಮಿಯ ಋಣ ತೀರಿಸಲು ಭೂ ಸೇವೆ ಮಾಡಬೇಕು. ಸೇವೆಯಲ್ಲಿ ಸತ್ಯ ಧರ್ಮ ವಿರಬೇಕು. ಈಗ ಎಲ್ಲಿದೆ ಹುಡುಕಬೇಕಿದೆ.ಸಿಗದಿದ್ದರೆ ಒಳಗೇ ಇರುತ್ತದೆ ಬೆಳೆಸಿಕೊಂಡರೆ ಆತ್ಮಜ್ಞಾನದಿಂದ ಶಾಂತಿ ಮುಕ್ತಿ. ಹೊರಗೆ ನಡೆದಷ್ಟೂ ಸಿಗೋದಿಲ್ಲ. ದೇವರನ್ನು ಹೊರಗೆ ಬೆಳೆಸೋ ಮೊದಲು ದೈವತ್ವದ ಜ್ಞಾನ ಒಳಗಿದ್ದರೆ ಉತ್ತಮ . ದೇವರಿರೋದೆಲ್ಲಿ?ಅಸುರರೊಳಗೇ ಸುರರು ಸೇರಿಕೊಂಡರೆ ಆಗೋದೇ ಹೀಗೆ.ರಾಜಕೀಯ ಧರ್ಮ ದ ಹಾದಿಯಲ್ಲಿರಬೇಕಿತ್ತು ಆದರೆ ಧರ್ಮದ ಹೆಸರಿನಲ್ಲಿ ರಾಜಕೀಯ ಬೆಳೆದು ಆಧರ್ಮ ಮಿತಿಮೀರಿದೆ. ಯಾರೋ ಯಾರದ್ದೋ ಸಾಲ ತೀರಿಸಲಾಗದು ಎನ್ನುವ ಸತ್ಯ ತಿಳಿದಾಗಲೇ ಅವರವರ ಸಾಲ ತೀರಿಸಲು ಜನ ಮುಂದೆ ಬರುವರು. ಇದಕ್ಕೆ ಸರ್ಕಾರಗಳೇ ಬಿಡದೆ ಉಚಿತ ಕೊಟ್ಟು ಸಾಲ ಬೆಳೆಸಿದರೆ ಸಮಸ್ಯೆಗೆ ಪರಿಹಾರ ಸಿಗದು. ಅನುಭವಿಸಿಯೇ ತೀರಬೇಕಷ್ಟೆ. ಕಲಿಗಾಲದಲ್ಲಿ ಹೆಚ್ಚು ಜನರು ಧರ್ಮದ ಹೆಸರಿನಲ್ಲಿ ಅಧರ್ಮದ ರಾಜಕೀಯ ಬೆಳೆಸಿ ನಮ್ಮವರನ್ನೇ ಆಳುವಾಗ ಕಲಿಕೆಯಲ್ಲಿ ಅಜ್ಞಾನವಿದೆ ಎಂದರ್ಥ. ಶಿಕ್ಷಣದ ವಿಚಾರವನ್ನು ತಿಳಿಸಿದರೂ ತಲೆಕೆಡಿಸಿಕೊಳ್ಳದವರು ಧರ್ಮದ ವಿಚಾರದಲ್ಲಿ ತಲೆಕೆಡಿಸಿಕೊಂಡರೆ ಉಪಯೋಗವಿಲ್ಲ. ಒಳಗೆ ಸೇರಿಸುವ ವಿಷಯದಲ್ಲಿಯೇ ಅಧರ್ಮ ವಿದ್ದರೆ ಧರ್ಮ ರಕ್ಷಣೆ ಹೇಗೆ ಆಗುತ್ತದೆ. ಸಾಮಾನ್ಯಜ್ಞಾನದ ಕೊರತೆ ವಿಜ್ಞಾನ ಜಗತ್ತನ್ನು ಆಳಲು ಹೊರಟು ಅಜ್ಞಾನವೇ ಹೆಚ್ಚಾಗಿದೆ.
No comments:
Post a Comment