ಇತ್ತೀಚಿನ ದಿನಗಳಲ್ಲಿ ಯಾವುದು ಆಗಬಾರದಿತ್ತೋ ಅದೇ ಆಗುತ್ತಿದೆ ಎಂದರೆ ಆಗಬಾರದ ವಿಚಾರವನ್ನು ಹೆಚ್ಚು ಪ್ರಚಾರ ಮಾಡಲಾಗಿ ಬೆಳೆಸುತ್ತಿರುವುದಾಗಿದೆ. ಒಳ್ಳೆಯದನ್ನು ಪ್ರಚಾರ ಮಾಡಿದರೆ ಒಳ್ಳೆಯದೆ ಆಗುತ್ತದೆ. ಕೆಟ್ಟದ್ದು ಕೆಟ್ಟದ್ದನ್ನು ಬೆಳೆಸುತ್ತದೆ. ಇದು ಮಾನವನೊಳಗೇ ಬೆಳೆದಿರುವಾಗ ಹೊರಗೂ ಹರಡಿಕೊಂಡಿದೆ ಅಷ್ಟೆ. ಇದಕ್ಕೆ ಪರಿಹಾರ ಕಣ್ಣು ಮುಚ್ಚಿಕೊಂಡು ಒಳ್ಳೆಯ ದ್ಯಾನ ಮಾಡೋದು.ಕಣ್ಣುಬಿಟ್ಟರೆ ಕೆಟ್ಟದ್ದು ಕಂಡರೂ ಒಳಗಿರುವ ಒಳ್ಳೆಯದರಿಂದ ಒಳಿತಾಗಬಹುದು. ಒಳಮನಸ್ಸು ಸ್ವಚ್ಚಮಾಡಲು ಸರ್ಕಾರದಿಂದ ಅಸಾಧ್ಯ. ಸತ್ಸಂಗದಿಂದ ಸದಾಚಾರದಿಂದ ಸಾಧ್ಯವಿದೆ ಆದರೆ ಇದು ರಾಜಕೀಯ ವ್ಯವಹಾರಕ್ಕೆ ಇಳಿದರೆ ಅಪಾಯವೇ ಹೆಚ್ಚು.
ನುಡಿಮುತ್ತುಗಳು:- *
- - - — - - - - - - - -
**ಹೇಳುವವರಿಗಿಂತ ಹೇಳಿದಂತೆ ನಡೆಯುವವರ ಯೋಗ್ಯತೆ ಹೆಚ್ಚು.ಸತ್ಯ ಹೇಳುವವನು, ಸ್ವಾರ್ಥವನ್ನು ಗೆದ್ದವನು ಸದಾ ಸುಖಿ.*
**ಒಳ್ಳೆಯವರಾಗಿರುವುದಕ್ಕಿಂತ ಪ್ರಾಮಾಣಿಕರಾಗಿರುವುದು ಕಠಿಣ.**
**ಬಡವನಿಗೆ ನೆಮ್ಮದಿ ಇರುತ್ತೆ ಆದರೆ ಹಣ ಇರಲ್ಲ,*ಸಾಹುಕಾರನಿಗೆ ಹಣ ಇರುತ್ತೆ ಆದರೆ ನೆಮ್ಮದಿ ಇರಲ್ಲ.ಹಣ ಮತ್ತು ನೆಮ್ಮದಿ ಇದ್ದವರಿಗೆ ಒಳ್ಳೆಗುಣ ಇರಲ್ಲ,.*ಹಣ, ಗುಣ, ನೆಮ್ಮದಿ ಇದ್ದವರಿಗೆ.* ಈ ಭೂಮಿಯ ಮೇಲೆ ಜಾಸ್ತಿ ದಿನ ಬದುಕುವ ಋಣ ಇರಲ್ಲ.
**ಎಷ್ಟೇ ಗಟ್ಟಿಯಾದ ಕಲ್ಲು ಸುಂದರ ಮೂರ್ತಿಯಾಗಿ ರೂಪುಗೊಳ್ಳಲು, ಉಳಿಯ ಪೆಟ್ಟು ಬೀಳಲೇಬೇಕು. ಹಾಗೆಯೇ ಜೀವನದಲ್ಲಿ ಪ್ರಬುದ್ಧತೆ ಬರಲು, ಮನಸ್ಸು ಗಟ್ಟಿಯಾಗಲು, ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕು. ಸಂಕಟಗಳು ಬಂದರೆ ಅವು ನಿಮ್ಮನ್ನು ಗಟ್ಟಿಗೊಳಿಸಲು ಬರುತ್ತವೆ ಎಂಬುದು ಗೊತ್ತಿರಬೇಕು.**
*ಮನದಲ್ಲಿ ಕಾಡೋ ಪ್ರತಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಜೀವನದ ನೆಮ್ಮದಿ ಕಳೆದುಹೋಗುತ್ತದೆ, ಆದ್ದರಿಂದ ಕೆಲವು ಪ್ರಶ್ನೆಗಳನ್ನು ಪ್ರಶ್ನೆಗಳಾಗಿಯೇ ಉಳಿಸುವುದು ಉತ್ತಮ.**
ನಮಗೆ ಸಂತೋಷ ದೊರೆಯಬೇಕೆಂದರೆ ಬಯಸಿದ್ದೆಲ್ಲವೂ ಸಿಗಬೇಕು ಎಂದಲ್ಲ, ನಮ್ಮ ಬಳಿ ಇರುವುದರ ಬಗ್ಗೆ ನಾವು ಕೃತಜ್ಞರಾಗಿದ್ದರೆ ಸಾಕು.**
**ಸೋತ ಮಾತ್ರಕ್ಕೆ ಜಗತ್ತೇ ಮುಗಿಯುವುದಿಲ್ಲ. ಪ್ರಯತ್ನದ ಹಾದಿಯಲ್ಲಿನ ಅನುಭವ ಎಂದು ಭಾವಿಸಿ, ಗೆಲುವಿನ ಗುರಿಯತ್ತ ನಿಮ್ಮ ಪಯಣ ಮುಂದುವರಿಸಿ.**
**ನಿಮ್ಮ ಬಗ್ಗೆ ನೀವೇ ವರ್ಣನೆ ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ನೈಜ ಮಿತ್ರರಿಗೆ ಅದರ ಅಗತ್ಯವಿಲ್ಲ. ನಿಮಗಾಗದವರು ಅದನ್ನು ನಂಬುವುದಿಲ್ಲ.**
**ನಿಮ್ಮ ಸಂತೋಷದ ಕೀಲಿಕೈ ನಿಮ್ಮಲ್ಲಿರಬೇಕೇ ಹೊರತು ಬೇರೆಯವರ ಕೈಯಲ್ಲಿ ಅಲ್ಲ.**
**ಲೋಕದಲ್ಲಿ ಜನರು,
ಮಾತನಾಡದೇ ಇರುವವರನ್ನು ನಿಂದಿಸುತ್ತಾರೆ.
ತುಂಬಾ ಮಾತನಾಡುವವರನ್ನೂ ನಿಂದಿಸುತ್ತಾರೆ.
ಮಿತವಾಗಿ ಮಾತನಾಡುವವರನ್ನೂ ನಿಂದಿಸುತ್ತಾರೆ.
ಹೀಗೆ ನಿಂದನೆಗೆ ಗುರಿಯಾಗದ ಜನ ಜಗತ್ತಿನಲ್ಲಿಲ್ಲ.**
{ ಸುವಚನ ರತ್ನಾವಳಿ }
ಕನಸಿಗೆ ಒಳ್ಳೆಯ ನಿದ್ದೆಬೇಕು.ಗುರಿಗೆ ನಿದ್ದೆಯೇ ಅಡಚಣೆ.ಕನಸಿಗಾಗಿ ನಿದ್ರಿಸಿ,ಗುರಿಗಾಗಿ ಎಚ್ಚರವಾಗೋಣ.**
**Life is the hardest school, as you never know what level of class you are in, what exam you will have next & you can't cheat bcoz nobody else will have the same question.**
**Imagination gives you the picture . Vision gives you the impulse to make picture of your own.**
**Instead of worrying about what you cannot control, shift your energy to what you can create.**
**Reflection cannot be seen in boiling water. Similarly solution cannot be seen with a disturbed mind. Be cool and you will find solution for all your problems.**
A life spent making mistakes is not only more honourable, but more useful than a life spent doing nothing.We should not regret anything we did. If it was not right,it taught us a lesson for life, and if it was right, we need to be proud of it.**
*Experiences are gained not by age, but by circumstances.
**Sometimes in the winds of change we find our greatest direction.**
No comments:
Post a Comment