ನುಡಿಮುತ್ತುಗಳು:- *
- - - — - - - - - - - -
*”ನಾವು ಬಲಶಾಲಿಗಳು"*ಏಕೆಂದರೆ
*ನಾವು ಇದ್ದುದ್ದರಲ್ಲೇ "ಸುಖ" ಕಾಣುವ ಸಾಮರ್ಥ್ಯ ನಮಗಿದೆ.**
ಆತ್ಮಬಲವಿದ್ದರೆ ತೃಪ್ತಿಕರ ಜೀವನ ಸಾಧ್ಯವಿದೆ.
ಯೋಗ್ಯ ಮಕ್ಕಳಿಗೆ ಆಸ್ತಿ ಮಾಡಿ ಇಡುವ ಅವಶ್ಯಕತೆಯೇ ಇರುವುದಿಲ್ಲ. ಯೋಗ್ಯವಲ್ಲದ ಮಕ್ಕಳಿಗೆ ಎಷ್ಟೇ ಆಸ್ತಿ ಮಾಡಿಟ್ಟರೂ ಪ್ರಯೋಜನವಿರಲ್ಲ.**
ಮಕ್ಕಳಿಗೆ ಜ್ಞಾನದ ಆಸ್ತಿ ಬಿಟ್ಟು ಹೋದರೆ ಹಣ ಸದ್ಬಳಕೆ ಆಗುತ್ತದೆ.
**ಎಷ್ಟೇ ಚಿಕ್ಕ ವಯಸ್ಸಿನವರಾದರೂ ಸರಿ, ಗೌರವವನ್ನು ಕೊಟ್ಟು ಮಾಡನಾಡಿಸಿದಾಗ ಅವರು ಗೌರವ ಕೊಡುವರು.**
ಏನು ಕೊಡುವೆವೋ ಅದೇ ತಿರುಗಿ ಬರೋದು.ಮಕ್ಕಳಿಗೆ ಗೌರವಿಸೋದೆಂದರೆ ಅವರ ಆತ್ಮವಿಶ್ವಾಸ ಬೆಳೆಸೋದಷ್ಟೆ.
**ದೂಷಿಸಿಕೊಂಡು ಕೂರುವ ಕಾಲವಿದಲ್ಲ,ಕೊರಗಿಕೊಂಡು
ಮಲಗಲು ಸಾಧ್ಯವಿಲ್ಲ,ಜೀವನವೆಂಬ ಚಕ್ರ ನಮ್ಮ ಮುಂದಿದೆ..
ಪಾಪ ಪುಣ್ಯದ ಗಂಟು ಹೊರುವವರು ನಾವೇ, ಮರೆಯುವರು ನಾವೇ, ಅನುಭವಿಸುವವರೂ ನಾವೇ. ನೀವು ಮಾಡಿದ ಪಾಪದ ಗಂಟನ್ನು ನೀವೇ ಹೊರ ಬೇಕು. ನಂಬಿದವರ ಬೆನ್ನಿಗೆ ಇರಿದ ನಿಮಗೆ ಖಂಡಿತ ಮುಂದೆ , ದೇವರ ಘೋರ ಶಿಕ್ಷೆ ಕಾದಿದೆ. ಸರ್ವ ನಾಶ ತಪ್ಪಿದ್ದಲ್ಲ.
ಅಂತರಾಳಕ್ಕಿಂತ ದೊಡ್ಡ ನ್ಯಾಯಾಧೀಶ ಯಾರೂ ಇಲ್ಲಾ, ಅದರೂ ಗಮನಿಸದೆ ಮುಂದೆ ಸಾಗುವ ನಿಮ್ಮ ಜಾಯಾಮಾನಕ್ಕೆ ಒಂದೊಮ್ಮೆ ಮಹಾನ್ ಹೊಡೆತ ನಿಶ್ಚಿತ .**
ಕರ್ಮಕ್ಕೆ ತಕ್ಕಂತೆ ಫ್ರತಿಫಲ
**ಈ ಲೋಕದಲ್ಲಿ ಅತ್ಯಂತ ಮೂಢರಾಗಿರುವವರು ಸುಖವಾಗಿರುತ್ತಾರೆ.
ಹಾಗೆಯೇ ಅತ್ಯಂತ ಬುದ್ಧಿಶಾಲಿಗಳಾಗಿರುವವರೂ ಸುಖವಾಗಿರುತ್ತಾರೆ.
ಮೂಢನಿಗೆ ಯಾವುದರ ಬಗ್ಗೆಯೂ ಚಿಂತೆ ಇಲ್ಲ.
ಬುದ್ಧಿವಂತನು ಕಷ್ಟ-ಸುಖಗಳೆರಡನ್ನೂ ಅನುಭವಿಸಲು ಸಿದ್ಧನಾಗಿರುತ್ತಾನೆ.
ಕಷ್ಟಪಡುವುದೇನಿದ್ದರೂ
#ಮಧ್ಯಮ_ದರ್ಜೆಯವರು ಮಾತ್ರ.*
( ಮಹಾಭಾರತ ಶಾಂತಿಪರ್ವ )
ಮಧ್ಯವರ್ತಿಗಳು ಮಾಧ್ಯಮದವರು ಎರಡೂ ಕಡೆ ವಾಲಿಕೊಂಡು ಜೀವನನೆಡೆಸೋದಕ್ಕೆ ಪಡುವ ಕಷ್ಟ ಮೇಲಿನ ಕೆಳಗಿನ ಜನ ಪಡೋದಿಲ್ಲ.
**ಯಶಸ್ವಿಯಾಗುವವರೆಗೆ ಹೆದರಿಕೆ
ಗೆಲ್ಲುವವರೆಗೆ ಅನುಮಾನ,ಗುರಿ ತಲುಪುವವರೆಗೆ ಸಮಸ್ಯೆಗಳಿರುತ್ತವೆ.
ಸಮಸ್ಯೆಗೆ ಕಾರಣ ಒಳಗಿನ ಚಿಂತನೆ ಅದು ಸರಿಯಾಗಿದ್ದರೆ ಒಳಗೇ ಪರಿಹಾರವಿರುತ್ತದೆ.ಹೊರಗಿನ ಯಶಸ್ಸು ಒಳಗಿನ ಯಶಸ್ಸಾಗೋದು ಕಷ್ಟವಿದೆ.
**ಬೇಡಿಕೆಗೂ ಮತ್ತು ಅಧಿಕಾರಕ್ಕೂ, ವ್ಯತ್ಯಾಸ ಇದೆ.ಅರ್ಥ ಮಾಡಿಕೊಳ್ಳಬೇಕು ಅಷ್ಟೇ.**
ಮತಕ್ಕಾಗಿ ಬೇಡೋದು ನಂತರ ಅಧಿಕಾರ ಪಡೆದ ಮೇಲೆ ಜನರನ್ನು ಆಳೋದು ಇದಕ್ಕೆ ಅರ್ಥ ವಿದೆಯೆ?
**ಸತ್ಯದ ಮಾರ್ಗದಲ್ಲಿ ಒಂಟಿಯಾಗಿ ಪ್ರಯಾಣಿಸಿದರೂ ಪರವಾಗಿಲ್ಲ, ತಪ್ಪನ್ನು ಸಮರ್ಥಿಸುವ ಗುಂಪಿನೊಳಗೆ ಎಂದೂ ಸೇರಿಕೊಳ್ಳಬಾರದು.**
ಅಧ್ವೈತ ತತ್ವ ಯಾವತ್ತೂ ಒಬ್ಬಂಟಿಯಾಗಿರುತ್ತದೆ. ಕಾರಣ ಇದು ಒಂದನ್ನು ಎರಡಾಗಿಸೋದಿಲ್ಲ.ಒಂದೇ ಸತ್ಯದೆಡೆಗೆ ಸಾಗಿಸುವ ಸಿದ್ದಾಂತ.ಹಾಗಾಗಿ ಇದು ನಿಜವಾದ ಸಂನ್ಯಾಸಿಗಳು ಯೋಗಿಗಳಷ್ಟೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ.
** If you have a dream, don’t just sit there. Gather courage to believe that you can succeed & leave no stone unturned to make it a reality. Don't be satisfied with stories, how things have gone with others. Unfold your own myth.
If one advances confidently in the direction of his dreams, to live the life which he has imagined, he will meet with success . If you believe it will work out, you’ll see opportunities. If you believe it won’t you will see obstacles.
Stop doubting yourself. Work hard, and make it happen .There can be no failure to a man who has not lost his courage & self-respect.**
**The most valuable gift you can receive is an honest friend. **
Everyone you meet in life, is a part of your journey, but not all of them are meant to stay in your life. Some people are just passing through to bring you gifts; either their blessings or lessons.***
**"Truth does not mind being questioned, but lies do not like being challenged.**
**"If you have the choice, choose the best. If you don't have the choice, then do the best.**
No comments:
Post a Comment