ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, November 26, 2023

ಎಲ್ಲದ್ದಕ್ಕೂ ಇತಿಮಿತಿ ಇರಬೇಕು

ಎಲ್ಲದ್ದಕ್ಕೂ ಒಂದು ಇತಿಮಿತಿಯಿರಬೇಕೆಂದು ಎಲ್ಲರಿಗೂ ತಿಳಿದ ವಿಚಾರ.ಆದರೆ ಇತಿಮಿತಿ ಯಾವುದರಲ್ಲಿರಬೇಕೆಂಬುದೇ ಪ್ರಶ್ನೆಯಾಗಿದೆ. ಭ್ರಷ್ಟಾಚಾರ, ಸಾಲ, ಮನರಂಜನೆ, ಆಸ್ತಿ,ಅಂತಸ್ತು, ಹೆಸರು,ಹಣದ ವಿಚಾರ ಬಂದಾಗ ಆಸೆ‌ ಎದ್ದು ನಿಲ್ಲುತ್ತದೆ. ಆಸೆಯನ್ನು ಹಿಡಿತದಲ್ಲಿಟ್ಟುಕೊಳ್ಳದೆ ಮಿತಿ ಮೀರಿ ಬೆಳೆದಾಗwaegಲೇ ಮೇಲಿರುವ ಎಲ್ಲಾ  ಸೇರುವುದು. ಸೇರಿದಂತೆಲ್ಲಾ  ನಾನು ಶ್ರೀಮಂತ ಅದೃಷ್ಟವಂತ,ಪುಣ್ಯವಂತ,ಬುದ್ದಿವಂತ ಎನ್ನುವ  ಅಹಂಕಾರದ ಜೊತೆಗೆ ಸ್ವಾರ್ಥ ವೂ ಜೊತೆಯಾಗುತ್ತಾ ಕೊನೆಗೆ  ಹಿಂದಿರುಗಿ ಕೊಡುವಾಗ  ಕೊಡಲಾಗದೆ ಇಟ್ಟುಕೊಂಡರೂ ಸಂತೋಷ ಸಿಗದೆ ಪರಿತಪಿಸುವಂತಹ ಪರಿಸ್ಥಿತಿಯಲ್ಲಿ   ಧರ್ಮದ ಮೊರೆ ಹೊಕ್ಕರೂ‌  ಹೆಚ್ಚುವರಿಯನ್ನು  ಹೊರಹಾಕದೆ  ಶಾಂತಿ,ಸುಖ ಸಮಾಧಾನ ತೃಪ್ತಿ ಮುಕ್ತಿ ಸಿಗೋದಿಲ್ಲವೆನ್ನುವುದೇ ಸನಾತನ ಧರ್ಮ ತಿಳಿಸುತ್ತದೆ. ಅದಕ್ಕಾಗಿ  ಹೆಚ್ಚು ಜ್ಞಾನದ ಸಂಪಾದನೆಯೂ ಹಣವನ್ನು  ಕೊಡುತ್ತದೆ. ಆದರೆ ಆ ಹಣ ಸದ್ಬಳಕೆ ಮಾಡುವ ಜ್ಞಾನವಿದ್ದವರು ಎಲ್ಲಾ ಇತಿಮಿತಿಗಳನ್ನು ತಿಳಿದು ನಡೆಯುವರು. ಕೆಲವರು  ಅರ್ಧ ಸತ್ಯ ತಿಳಿದವರು ಈ ಕಡೆ ಮುಂದೂ ನಡೆಯದೆ ಹಿಂದೆ ಬರದೆ  ಅಡ್ಡದಾರಿಯಲ್ಲಿ ಅಡ್ಡಲಾಗಿರುವರು. ಇವರಿಂದಲೇ  ದೊಡ್ಡ ದೊಡ್ಡ ಸಮಸ್ಯೆ ಜನ್ಮತಾಳುವುದು ಹೆಚ್ಚಾಗುತ್ತಿದೆ.  ಹಣಕ್ಕಾಗಿ ಭ್ರಷ್ಟ ದುಷ್ಟ ಕಳ್ಳ ಸುಳ್ಳರಿಗೆ ಮಣೆ ಹಾಕುವುದರಿಂದ  ಸಮಸ್ಯೆ ಬೆಳೆಯುತ್ತದೆ. ಇವರು ಮಿತಿಮೀರಿದರೆ ಮನುಕುಲಕ್ಕೆ   ಕಷ್ಟ ನಷ್ಟ.ಯೋಗಿ ಬಯಸಿದ್ದು ಯೋಗಿಗೆ ಭೋಗಿ ಬಯಸಿದ್ದು ಭೋಗಿಗೆ.ಇವರಿಬ್ಬರ ನಡುವಿರುವವರ‌ ಬಯಕೆಯಿಂದ ರೋಗಿಗಳು ಬೆಳೆದಿರೋದು.  ಪರಮಾತ್ಮ‌ಜೀವಾತ್ಮನ ಸೇರೋದು  ಅಧ್ಯಾತ್ಮಿಕ ಯೋಗ, ಪರದೇಶದೊಳಗೆ ಸ್ವದೇಶ ಸೇರಿಸೋದು ಭೋಗಿಗಳ ಭೌತಿಕ ಯೋಗ. ಇವರಿಬ್ಬರ ನಡುವಿದ್ದು ತಮ್ಮ ಯೋಗಾಭೋಗದ ಲೆಕ್ಕಾಚಾರದಲ್ಲಿ ಕಷ್ಟ ನಷ್ಟ ಅನುಭವಿಸುತ್ತಾ ತಮ್ಮ ಮಾನಸಿಕ ನೆಮ್ಮದಿ ಜೊತೆಗೆ ಎಲ್ಲರ ಮನಸ್ಸನ್ನೂ ಕೆಡಿಸಿ ಆರೋಗ್ಯ ಹಾಳು ಮಾಡೋದು ಮಧ್ಯವರ್ತಿಗಳ ರೋಗಕ್ಕೆ ಕಾರಣ. ದೇವಾಸುರರ ನಡುವಿನ ಮಾನವನ ರೋಗಕ್ಕೆ ಇದೇ ಕಾರಣವಾದಾಗ  ಆರೋಗ್ಯದ ಕಡೆಗೆ‌ನಡೆಯಲು ದೈವಗುಣಸಂಪತ್ತು ಅಗತ್ಯವಿದೆ. ಇದುಭೌತಿಕ ಸಂಪತ್ತಿನೆಡೆಗೆ  ವಿಪರೀತವಾಗಿ ಬೆಳೆದರೆ ಅಸುರಿ ಶಕ್ತಿಯಿಂದ ಆಪತ್ತು. Ferrer's dresser Ferrer's r

Wednesday, November 15, 2023

ಭಗವಂತ ಅಧರ್ಮಕ್ಕೆ ಸಹಕರಿಸುವನೆ?

ಬದುಕಿರುವಾಗ  ಅರ್ಥ ವಾದ ಸತ್ಯವನ್ನು  ಹೇಳುವ ಅಧಿಕಾರವಿದ್ದರೆ ಅದನ್ನು ಕೇಳೋರು ಹಲವರು.ಅದೇ ಸತ್ಯ ಸತ್ತನಂತರ ಬೇರೆಯವರು ಹೇಳಿದರೆ  ವಿರೋಧಿಸುವವರೂ ಅನೇಕರು ಆಗಿರಬಹುದು. ಕಾರಣ  ಅನುಭವದಿಂದ ಒಬ್ಬರು ತಿಳಿದದ್ದೇ ಇನ್ನೊಬ್ಬರ ಅನುಭವವಾಗಿರದು ಇದರಲ್ಲಿ ಅಸತ್ಯವಿದ್ದರೆ ವಿರೋಧವಿರುತ್ತದೆ. ಶ್ರೀ ಶಂಕರಭಗವತ್ಪಾದರು  ಅಂದಿನ ಕಾಲದಲ್ಲಿದ್ದ  ಅಧರ್ಮ ವನ್ನು  ಹೋಗಿಸಲು  ಒಬ್ಬಂಟಿಯಾಗಿ ಸತ್ಯದೆಡೆಗೆ ನಡೆಯಲು ಅಂದಿನ ಸಮಾಜದ ವಿರೋಧವಿತ್ತು.ಆದರೂ ವಾದದಲ್ಲಿ ಗೆದ್ದು ಜಗದ್ಗುರುಗಳಾದರು. ಸತ್ಯಸಂಶೋಧನೆಗೆ ಆತ್ಮಸಾಕ್ಷಿಯ ಅಗತ್ಯವಿದೆ. ಹೊರಗಿನವರ ಕಣ್ಣಿಗೆ  ನಮ್ಮ ಅನುಭವ ತಿಳಿಸಬೇಕಾದರೆ ಅವರೂ  ಆ ಅನುಭವವದೆಡೆಗೆ  ನಡೆದಿದ್ದರೆ  ಒಪ್ಪಬಹುದು. ಒಟ್ಟಿನಲ್ಲಿ ಒಂದೇ ಸತ್ಯ  ಒಂದೇ ವ್ಯಕ್ತಿ ಒಂದೇ ದೇಶ, ಒಂದೇ ಧರ್ಮದೊಳಗಿದ್ದು  ಹೊರಗಿನ ಅನೇಕವನ್ನು ಒಂದು ಮಾಡೋದು‌ ಬದುಕಿರುವಾಗ ಕಷ್ಟ. ಹಾಗಾಗಿ ಸತ್ಯದಲ್ಲಿ ಬದುಕುವುದೇ ಕಷ್ಟವಾದವರೂ‌ ಅಸತ್ಯದ ಪರ ನಿಂತಾಗ ಅಸತ್ಯದ ಬದುಕಾಗುತ್ತದೆ.  
"ಬ್ರಹ್ಮನ್ ಸತ್ಯ ಜಗತ್ ಮಿಥ್ಯ," "ಅಹಂ ಬ್ರಹ್ಮಾಸ್ಮಿ" "ತತ್ವಮಸಿ" ಇವುಗಳಲ್ಲಿ ಅಡಗಿರುವ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಅಧಿಕಾರ ಹಣ ಜನರ ಅಗತ್ಯವಿಲ್ಲವಾದರೂ  ಅವರಿಂದಲೇ  ಅರ್ಥ ಮಾಡಿಸುವ ಜಗತ್ತಿನಲ್ಲಿದ್ದೇ ತಿಳಿಯಬೇಕಿದೆ. ಎಲ್ಲೋ ಕಾಣದ ಜಗತ್ತಿನಲ್ಲಿ ಕುಳಿತು ತಪಸ್ಸು ಮಾಡಿದವರಿಗೂ  ಇದರ ಅನುಭವವಾಗದು. ಇದನ್ನು  ಅಧ್ವೈತ, ದ್ವೈತ ವಿಶಿಷ್ಟಾದ್ವೈತ ಗಳಲ್ಲೂ  ಒಂದಾಗಿ ಕಾಣೋದು ಮುಖ್ಯವಾಗಿದೆ. 
ಸಂನ್ಯಾಸಿಗಳ ಅನುಭವ ಜ್ಞಾನ ಸಂಸಾರಿಗಳಿಗಿರದು,
ಸಂಸಾರಿಗಳ ಅನುಭವ ಜ್ಞಾನ ಸಂನ್ಯಾಸಿ ಅನುಭವಿಸಲಾಗದು. ಹೀಗಿರುವಾಗ ಸಂನ್ಯಾಸಿಗೆ ಸಂನ್ಯಾಸಿಯೇ  ಸತ್ಯ ತಿಳಿಸಿದರೂ  ಅವರವರ ನಡುವಿನ ಶಿಷ್ಯರು ಬಿಡರು.ಇದು  ಇಂದಿನ ಸ್ಥಿತಿಗೆ ಕಾರಣ. ಸ್ವತಂತ್ರ ವಾಗಿರುವ ಸತ್ಯ ಒಳಗಿತ್ತು.ಮಿಥ್ಯ ಹೊರಗೆ ಬೆಳೆಯಿತು. ಇವೆರಡರ ನಡುವಿನ ರಾಜಕೀಯ ಜನರನ್ನೇ ಆಳಲು ಹೊರಟಿತು. 
ಇದಕ್ಕೆ  ಪರಿಹಾರ ಮಾರ್ಗ ಒಂದೇ  ಪ್ರತಿಮೆಗಳ ಹೆಸರಿನಲ್ಲಿ ಜನರನ್ನು ಒಂದಾಗಿಸೋ ಬದಲು  ಪ್ರತಿಭೆ ಹಾಗು ಜ್ಞಾನಗುರುತಿಸಿ ಬೆಳೆಸುವ ಶಿಕ್ಷಣ ಕೇಂದ್ರ‌ತೆರೆದು ಉತ್ತಮಜ್ಞಾನಿಗಳಿಗೆ ಶಿಕ್ಷಕ ಸ್ಥಾನ ನೀಡಿ ಜೊತೆಗೆ ದೇವಸ್ಥಾನ ವಿದ್ದರೆ  ಮಕ್ಕಳು ದೇವರ ಸನ್ನಿದಿಯಲ್ಲಿದ್ದೇ ಸತ್ಯ ಧರ್ಮದ ಪಾಠ ಕಲಿಯಬಹುದು. ಒಂದು ಪ್ರತಿಮೆಯಿಂದ ಅಸಂಖ್ಯಾತ ಜನರು ಒಮ್ಮೆ ಬೇಟಿನೀಡಿ  ಪ್ರವಾಸ ಮಾಡಬಹುದು. ಅದೇ ಸ್ಥಳದಲ್ಲಿ ಶಾಲೆಯಿದ್ದರೆ ಅಸಂಖ್ಯಾತ ಮಕ್ಕಳ ಜ್ಞಾನೋದಯದ ಕೇಂದ್ರವಾಗಬಹುದು. ಪೋಷಕರಾದವರು ತಮ್ಮ ಮಕ್ಕಳ ಜ್ಞಾನ ಬೆಳೆಸಲು ಹಣ ನೀಡುವುದರಿಂದ  ದಾನ ಧರ್ಮ ಕಾರ್ಯ ಕ್ರಮವಾಗುತ್ತದೆ. ಲಕ್ಷಾಂತರ ಕೋಟ್ಯಾಂತರ  ಹಣದಿಂದ  ಯಾರಾದರೂ ಜ್ಞಾನಿಗಳಾಗಿರುವರೆ?  ಎತ್ತ ಸಾಗುತ್ತಿದೆ ಭಾರತ? 

ಒಮ್ಮೆ ಸಂದರ್ಶಕರೊಬ್ಬರು ರಮಣರನ್ನು ಕೇಳಿದರು, ದೇವರು  ಈ ಭೂಮಿಯ ಮೇಲೆ ಇಷ್ಟೊಂದು ಅನ್ಯಾಯಗಳು ನಡೆಯುತ್ತಿದ್ದರೂ ಸುಮ್ಮನೆ ಏಕಿದ್ದಾನೆ, ಏಕೆ ಎಲ್ಲಾ ಅನ್ಯಾಯಗಳಿಗೆ ಅನುಮತಿಸುತ್ತಾನೆ ಮತ್ತು ನಮ್ಮಲ್ಲಿ ಏಕೆ ಇಷ್ಟೊಂದು ಕೊರತೆಗಳಿವೆ..? ಎಂದು 

ಮಹರ್ಷಿ ಉತ್ತರಿಸಿದರು, ದೇವರ ಬಳಿಗೆ ಹೋಗಿ ಅದರ ಬಗ್ಗೆ ನೀನು ಕೇಳು. ನೀವು ಒಪ್ಪಿಕೊಂಡಂತೆ ನೀವು ಅವನ ಬಳಿಗೆ ಹೋಗಲು ಸಾಧ್ಯವಾಗದಿದ್ದರೆ, ಪ್ರಶ್ನೆಯನ್ನು ಹೇಗೆ ಕೇಳುವುದು..? ದುರ್ಬಲರಿಗೆ ಇಲ್ಲಿ ಮುಕ್ತಿ ಸಿಗುವುದಿಲ್ಲ ಎಂದು 

ಇನ್ನೊಂದು ಪ್ರಶ್ನೆಗೆ ಉತ್ತರವಾಗಿ, ಮಹರ್ಷಿ ಹೇಳಿದರು, ದೇಹವು ಇರುವವರೆಗೆ, ಕೆಲವು ಚಟುವಟಿಕೆಗಳು ಸಂಭವಿಸುತ್ತವೆ. ನಾನೇ ಮಾಡುವವನು’ ಎಂಬ ಧೋರಣೆಯನ್ನು ಮಾತ್ರ ಬಿಡಬೇಕು. ಚಟುವಟಿಕೆಗಳು ಅಡ್ಡಿಯಾಗುವುದಿಲ್ಲ. ಇದು ನಾನು ಮಾಡಿದ್ದೇನೆ ಎಂಬ ಮನೋಭಾವ. ಅದು ಅಡಚಣೆಯಾಗಿದೆ. ಇದಲ್ಲದೆ, ಬಾಹ್ಯ ವಸ್ತುವಿನ ಅಗತ್ಯವಿರುವವರೆಗೆ ಸಂತೋಷಕ್ಕಾಗಿ, ಅಪೂರ್ಣತೆಯ ಭಾವನೆ ಉಂಟಾಗುತ್ತದೆ. ಆತ್ಮನೊಬ್ಬನೇ ಇದ್ದಾನೆ ಎಂದು ಭಾವಿಸಿದಾಗ, ಶಾಶ್ವತ ಸಂತೋಷವು ಉಳಿಯುತ್ತದೆ.

ಧ್ಯಾನಿಸುವಾಗ ನಾನು ಅವನ ಕಣ್ಣುಗಳನ್ನು ನೋಡಬೇಕೇ ಅಥವಾ ಅವನ ಮುಖವನ್ನು ನೋಡಬೇಕೇ ಅಥವಾ ನನ್ನ ಕಣ್ಣುಗಳನ್ನು ಮುಚ್ಚಿ ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಬೇಕೇ ಎಂದು ನಾನು ಕೇಳಿದಾಗ, ಅವರು ಉತ್ತರಿಸಿದರು. ನಿಮ್ಮ ಸ್ವಂತ ನೈಜ ಸ್ವಭಾವವನ್ನು ನೋಡಿ. ಇಲ್ಲಿ ಇರುವುದು ಒಂದೇ, ಎಲ್ಲೆಲ್ಲೂ  ಅದು ಒಂದೇ ಆಗಿದೆ, ಹಾಗಾಗಿ ಕಣ್ಣು ತೆರೆದರೂ ಮುಚ್ಚಿದರೂ ಒಂದೇ. ನೀವು ಧ್ಯಾನ ಮಾಡಲು ಬಯಸಿದರೆ, ನಿಮ್ಮಲ್ಲಿರುವ ನಾನು ಮೇಲೆ ಮಾಡಿ. ಅದುವೇ  ಇದು ಆತ್ಮ.

 - ಶ್ರೀ ರಮಣ ಮಹರ್ಷಿಯೊಂದಿಗೆ ಮುಖಾಮುಖಿ ಸ್ವಾಮಿ ಮಾಧವತೀರ್ಥ.

Tuesday, November 14, 2023

ಮಕ್ಕಳಿಗೆ ದಾನದ‌ಮಹತ್ವ ತಿಳಿಸಿ ಬೆಳೆಸಿದರೆ ಉತ್ತಮ

ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ದಾನ ಪರಮಾತ್ಮನಿಗೆ  ಸಲ್ಲುವುದಂತೆ. ದಾನ ಕೊಡೋದು ಸರಿ , ತಪ್ಪಲ್ಲ ಎಷ್ಟು ಯಾರಿಗೆ ಯಾಕೆ ಹೇಗೆ ಕೊಟ್ಟರೆ  ಉತ್ತಮ ಫಲ ಸಿಗೋದೆನ್ನುವ ಅರಿವಿರಬೇಕು. ಕಲಿಗಾಲದಲ್ಲಿ  ಕೊಟ್ಟವರನ್ನೇ  ಕೆಟ್ಟದಾಗಿ ನಡೆಸಿಕೊಳ್ಳುವ ಅಸುರರಿರುವರು.ದಾನವರಿಗೆ ಕೊಟ್ಟರೆ ಮುಗಿಯಿತು ಕಥೆ. ಮತದಾನ ದೇಶದ ಭವಿಷ್ಯವಾದರೆ ಉಳಿದ ಸಣ್ಣ ಪುಟ್ಟ ದಾನ  ಮಕ್ಕಳ ಭವಿಷ್ಯವಾಗಿರುವುದು. ಮಕ್ಕಳು ದೇಶದ ಒಳಗಿರಬೇಕಾದರೆ  ದಾನ ಉತ್ತಮವಾಗಿರಬೇಕು. 
ಮಕ್ಕಳ ದಿನಾಚರಣೆಯಂದು  ಮಕ್ಕಳಿಗೆ ದಾನದ ಬಗ್ಗೆ ಅರಿವು ಮೂಡಿಸುವ ಶಿಕ್ಷಣವಿರಲಿ. ಮಕ್ಕಳನ್ನೇ ದಾನವರಿಗೆ ಒಪ್ಪಿಸಿ  ಹಣಕೊಟ್ಟು ಕಳಿಸಬೇಡಿ. ಹಣದ ಹಿಂದಿನ ಋಣ ತೀರಿಸುವ‌ ಜ್ಞಾನಿಗಳಿಂದ  ಮಕ್ಕಳ ಭವಿಷ್ಯ ಉತ್ತಮವಾಗಿರಲಿ. 
ಬಲಿಚಕ್ರವರ್ತಿ ಕರ್ಣ ನಂತಹ ಮಹಾದಾನಿಗಳ  ಅತಿಯಾದ ದಾನವೇ ಕೊನೆಯಲ್ಲಿ  ಉರುಳಾಯಿತು. ಆಗಿನ ಕಾಲದಲ್ಲಿ ಭೂಮಿ ಸಂಪತ್ತಿನಿಂದ ಕೂಡಿತ್ತು ಈಗಿದು ಆಪತ್ತಿನಲ್ಲಿದೆ. ಕಾರಣ ದಾನವರು ಭೂಮಿಯನ್ನೇ ಹಾಳು ಮಾಡುವ ದಾನಕ್ಕೆ  ಹೊರಟಿದ್ದಾರೆ.ಇದಕ್ಕೆ ಸಹಕಾರವೂ ಹೆಚ್ಚಾಗಿದೆ ಎಂದರೆ ದಾನದ  ಬಗ್ಗೆ ಸರಿಯಾದ ಜ್ಞಾನವಿಲ್ಲದ ಜನಸಂಖ್ಯೆ ಬೆಳೆದಿದೆ ಎಂದರ್ಥ. ಯಾವುದೇ ವಿಷಯ,ವಸ್ತು, ಒಡವೆ,ವಸ್ತ್ರ ದಾನ ಮಾಡಿದರೂ  ಅದು ಜ್ಞಾನದಿಂದ ಗಳಿಸಿದ್ದಾಗಿ ಶುದ್ದವಾಗಿರಬೇಕೆನ್ನುವರು ಜ್ಞಾನಿಗಳು .ಹೆಚ್ಚು ಹಣಸಂಪಾದನೆ ಹೆಚ್ಚು ದಾನಧರ್ಮಕ್ಕೆ  ಕಾರಣವಾಗುತ್ತದೆ.
ಹಣಸಂಪಾದನೆ ಅಧರ್ಮದಲ್ಲಾಗಿದ್ದರೆ  ಜ್ಞಾನವಿಲ್ಲದ ದಾನವರಿಗೇ ಶಕ್ತಿ ಹೆಚ್ಚುವುದು.ಇದನ್ನು ಹೊರಗೆ ಪ್ರಗತಿ ಎಂದರೆ ಅಜ್ಞಾನವಷ್ಟೆ. ಮಿತಿಮೀರಿದ ಯಾವುದೇ ಆದರೂ ಧರ್ಮ ವಾಗಿರದು. 
ಅಸುರರೊಳಗೇ ಸುರರು ಸಿಲುಕಿದರೆ ಅಧರ್ಮ. ಇದಕ್ಕೆ ಕಾರಣ ಸುರರ ಹಣದ ವ್ಯಾಮೋಹ.
ವ್ಯಾಮೋಹವೇ‌  ಮೋಸಕ್ಕೆ  ಕಾರಣವಾಗಬಹುದು.ಮಕ್ಕಳ ಮೇಲಿನ ವ್ಯಾಮೋಹದಲ್ಲಿ ತಪ್ಪಿ ನಡೆದರೂ  ತಪ್ಪಿ ಸಿಕೊಂಡು ಮುಂದೆ ಹೋಗಬಹುದು ಆದರೆ ಹಿಂದೆ ಬರೋದು ಕಷ್ಟ. ಹೀಗಾಗಿ ತಪ್ಪಿಗೆ ಶಿಕ್ಷೆ ನೀಡಿ ಸರಿಪಡಿಸುವುದಾಗಿತ್ತು. ಇಂದಿನ  ಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ವಿಷಯವೇ  ಸರಿಯಿಲ್ಲ. ಸತ್ಯದಲ್ಲಿ ನಡೆಯಲು  ಪೋಷಕರಿಗೆ ಸಾಧ್ಯವಾಗದಿರೋವಾಗ  ಮಕ್ಕಳನ್ನು ಸತ್ಯದೆಡೆಗೆ ನಡೆಸಲು ಸಾಧ್ಯವಾಗದೆ  ಅಸತ್ಯ ಅನ್ಯಾಯ ಅಧರ್ಮ ವೆಂದು ತಿಳಿದೂ ಅದೇ ದಾರಿಯಲ್ಲಿ  ಸಹಿಸಿಕೊಂಡು ಬದುಕಲು ಹೋದರೆ ಸಹನೆಗೂ ಇತಿಮಿತಿ ಇರುತ್ತದೆ. ಹೀಗಾಗಿ ಯಾವುದೂ ಅತಿಯಾದರೆ ಗತಿಗೇಡು.ಮಕ್ಕಳಿಗಾಗಿ  ಮಾಡುವ ಆಸ್ತಿ ಮಕ್ಕಳು ಅನುಭವಿಸದೇ ಇರಬಹುದು. ಆದರೆ ಅವರಿಗೆ ನೀಡುವ‌ಜ್ಞಾನದ ಆಸ್ತಿ‌ ಎಲ್ಲರನ್ನೂ ರಕ್ಷಿಸಬಹುದು. ಒಂದು ದಿನದ ಮಕ್ಕಳ ದಿನಾಚರಣೆಯ  ಬದಲಾಗಿ ಪ್ರತಿಕ್ಷಣವೂ ಮಕ್ಕಳಿಂದಲೇ ದಿನ‌ನಡೆದಿದೆ‌ ಎನ್ನುವ ಸತ್ಯ ತಿಳಿದರೆ ಅವರ ಕ್ಷಣಕ್ಷಣದ‌  ನಡೆ ನುಡಿಯೇ ಭವಿಷ್ಯವಾಗಿರುತ್ತದೆ. ಹಾಗಾಗಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದವರ ಭವಿಷ್ಯವೂ  ಉತ್ತಮವಾಗಿರುತ್ತದೆನ್ನುವರು.ಇಲ್ಲಿ ಸಂಸ್ಕಾರ ಎಂದರೆ ಬೇಡದ ವಿಚಾರ ವಿಷಯವನ್ನು ಬಿಟ್ಟು  ಕಲಿಸುವುದಾಗಿತ್ತು.ಶುದ್ದ ಸತ್ವಸತ್ಯದ  ವಿಚಾರಗಳು ಯಾವತ್ತೂ ಮನಸ್ಸನ್ನು ಶುದ್ದಗೊಳಿಸುತ್ತದೆ. ಅದೇ ಶಾಂತಿಯ ಕಡೆಗೆ ನಡೆಸುತ್ತಾ ಯೋಗ ಮಾರ್ಗ ವಾಗುತ್ತದೆ. ಯೋಗ್ಯ ಗುರು‌ ಯೋಗ್ಯ ಶಿಷ್ಯ‌  ಹೊರಗಿನಿಂದ ಬೆಳೆಸುವುದು ಕಷ್ಟ ಒಳಗಿನಿಂದ  ಕಲಿಸಿ ಬೆಳೆಸುವುದೇ ಗುರುಕುಲ. 
ಹಿಂದೆ ಮನೆಮನೆಯು ಗುರುಕುಲವಾದ ಹಾಗೆ ಮನೆಮನೆಯಲ್ಲಿ ಗೋಕುಲವಿತ್ತು. ಈಗ ಇವೆರಡೂ  ಮರೆಯಾಗುತ್ತಿರುವುದಕ್ಕೆ   ಗೋವಿಂದನಿಲ್ಲ. ಮಕ್ಕಳನ್ನು ಕೃಷ್ಣನೆಂದು  ಕರೆಯುತ್ತಿದ್ದ‌ಕಾಲವಿತ್ತು. ಕಾಲದ ಅಂತರದಲ್ಲಿ  ಅಜ್ಞಾನ‌ ಬೆಳೆದಂತೆಲ್ಲಾ  ಸತ್ಯ ಧರ್ಮ ಹಿಂದುಳಿದು ಈಗ ಹೊರಗಿದೆ ಒಳಗಿಲ್ಲ. ದೇವರು ಧರ್ಮ ಜಾತಿ ಪಂಗಡ, ಪಕ್ಷಗಳ  ರಾಜಕೀಯದೆಡೆಗೆ ಮಕ್ಕಳು ಮಹಿಳೆಯರೂ‌
ಮನೆಯಿಂದ ಹೊರಬಂದರೆ   ಏನಾಗುವುದೆನ್ನುವುದು ಕೆಲವರಿಗೆ ಅನುಭವಕ್ಕೆ ಬಂದರೂ ಅನೇಕರಿಗೆ  ಅನುಭವಕ್ಕೆ ಬರದೆ  ಮನಸ್ಸು ಹೊರಗುಳಿದಿದೆ.

Monday, November 13, 2023

ದಾನ ಅತಿಯಾದರೆ ದಾನವರು ಬೆಳೆಯುವರು

ಬಲಿ ಚಕ್ರವರ್ತಿಯ  ಅತಿಯಾದ ದಾನವೂ  ಕೊನೆಯಲ್ಲಿ ಕಡೆಗಣಿಸಲಾಯಿತು ಕರ್ಣನ ಕಥೆಯೂ ಹಾಗೇ ಆಗಿದೆ ಅಂದರೆ ದಾನ ಮಾಡೋ ಮೊದಲು ಯಾರಿಗೆ ಯಾವುದಕ್ಕೆ ಯಾವಾಗ ಯಾಕೆ ಕೊಡಬೇಕೆಂಬ ಅರಿವಿದ್ದರೆ  ಉತ್ತಮವೆನ್ನಬಹುದೆ? ದಾನ ಮಾಡುವಷ್ಟು ಸಂಪತ್ತಿರುವಾಗ  ಆ ಸಂಪತ್ತನ್ನು ತಿರುಗಿ ಕೊಡುವುದೂ ಕಷ್ಟವಾಗುತ್ತದೆ. ತಿರುಗಿ ಕೊಡುವಾಗ  ಅರಿವಿನಲ್ಲಿರೋದೂ ಕಷ್ಟ. ಹೀಗಾಗಿ ದಾನವರು ಎಂದರು. ಬಲಿ ಚಕ್ರವರ್ತಿಯು  ಅಸುರನೆಂದರೆ ಸರಿಯೆನಿಸುವುದಿಲ್ಲವಲ್ಲ.  ಇಲ್ಲಿ  ಅಸುರರೊಳಗೇ ಸುರರಿದ್ದರೂ ಕಾಣೋದಿಲ್ಲ.  ಸುರರು ಮಾಡಬೇಕಾದ್ದನ್ನು ಅಸುರರು ಮಾಡಲು ಹೋದರೆ ಸರಿಯಾಗಿರದು. ಕೆಲವು ಸೂಕ್ಷ್ಮ ಸತ್ಯ ವಿಚಾರಗಳು ಅಸುರರಿಗೆ ಅರ್ಥ ವಾಗದು ಆದರೂ ಅಧಿಕಾರ ಸ್ಥಾನ ಸಿಕ್ಕಾಗ. ಸುರರಂತೆ  ದಾನ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡು  ಲೋಕದ ಜನತೆಗೆ ಸಂತೋಷ ಸುಖ  ಕೊಟ್ಟರೂ   ಅಸುರರೆಂದರೆ‌ಈಗ ಒಪ್ಪೋದಿಲ್ಲ. 
ಸರ್ಕಾರ  ಎಲ್ಲರಿಗೂ  ಉಚಿತವಾಗಿ  ಸಾಲ ಸೌಲಭ್ಯಗಳನ್ನು ಭಾಗ್ಯಗಳನ್ನು ಹಂಚಿದ್ದರೂ  ಬಡತನ ಮಾತ್ರ  ಕಡಿಮೆಯಾಗದೆ ಅಜ್ಞಾನ ಮಿತಿಮೀರಿದೆ ಅಸುರಿ ಗುಣ ಜನಸಾಮಾನ್ಯವರೆಗೂ‌  ಹರಡುತ್ತಿದೆ  ಎಂದಾಗ ತಪ್ಪಾಗಿದ್ದು ಎಲ್ಲಿ?  ಕೊಡೋದು ತಪ್ಪಲ್ಲ.ಯಾರಿಗೆ ಯಾವಾಗ ಎಷ್ಟು ಯಾಕೆ ಹೇಗೆ ಕೊಡಬೇಕೆಂಬುದೇ ಮುಖ್ಯವಾಗಿತ್ತು.  ಉಚಿತದ ಹಿಂದಿರುವ  ಸಾಲವನ್ನು ತೀರಿಸಲು  ಕಷ್ಟಪಟ್ಟು ದುಡಿಯಲೇಬೇಕು ಅದೇ ಧರ್ಮ. ದುಡಿಯದೆ ಕುಳಿತು ತಿಂದರೆ  ಸೋಮಾರಿತನ ಹೆಚ್ಚಾಗಿ  ರೋಗಗಳು  ಬಂದು ಜೀವಹೋಗುತ್ತದೆ.ಜೀವ ಆರೋಗ್ಯವಾಗಿತ್ತು ಹೊರಗಿನಿಂದ  ಒಳಗೆಳೆದುಕೊಂಡ  ರೋಗದಿಂದ ಹೋಯಿತೆಂದರೆ   ನಂಬಲಾಗದು. ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಸರಿ ಕಷ್ಟಪಡದವರಿಗೆ ಸಹಾಯ ಮಾಡೋದು ಸರಿಯಲ್ಲ.ಹಾಗೆ ದಾನ ಮಾಡುವುದು ಸರಿ ಆದರೆ ದಾನವರಿಗೆ  ದಾನ ಮಾಡಬಾರದೆನ್ನುವರು.ಕಾರಣ ಅಸುರರಿಗೆ ಸತ್ಯಧರ್ಮದ ಬಗ್ಗೆ ಅರಿವಿರದು. ಒಳಗಿನ ಆತ್ಮಸಾಕ್ಷಿಯಂತೆ ನಡೆಯುವುದಕ್ಕೆ  ಕಷ್ಟ. ಕಣ್ಣಿಗೆ ಕಂಡದ್ದೇ ಸತ್ಯವೆಂದು ನಂಬಿ ನಡೆಯುವಾಗ  ಕಾಣದ ಶಕ್ತಿಗಳ ಕೈಚಳಕದಲ್ಲಿ ಮಾನವ ಮೋಸಹೋಗೋದೇ ಹೆಚ್ಚು.ಹೀಗಾಗಿ ಪುರಾಣ ಕಥೆಗಳಲ್ಲಿ  ಕೆಲವೆಡೆ ಧರ್ಮ ಸೂಕ್ಮವನ್ನು  ಭೌತಿಕದ ಅಂದಿನ ಪರಿಸ್ಥಿತಿಗೆ  ಅರ್ಥ ಮಾಡಿಕೊಂಡರೆ  ಕೆಲವನ್ನು ಇಂದಿನ ಪರಿಸ್ಥಿತಿಯನ್ನರಿತು ತಿಳಿಯಬೇಕಿದೆ. ಅಂದು ಭೂಮಿಯಲ್ಲಿ ಸಾಕಷ್ಟು ಸಂಪತ್ತಿತ್ತು.ಜನರಲ್ಲಿ  ಧಾರ್ಮಿಕ ಶ್ರದ್ದೆಯಿತ್ತು ಶಿಕ್ಷಣವೂ ಉತ್ತಮವಾಗಿತ್ತು.ಆದರೂ  ರಾಜರ ಕಾಲವಾಗಿದ್ದರಿಂದ  ಒಬ್ಬನೇ ರಾಜ ಕೊನೆಯವರೆಗೂ ಒಂದೇ  ರೀತಿಯಲ್ಲಿ ಆಡಳಿತ ನಡೆಸಲಾಗುತ್ತಿರಲಿಲ್ಲ . ಯುದ್ದಗಳು ನಡೆಯುತ್ತಿತ್ತು.ಚಕ್ರವರ್ತಿಗಳಾಗುತ್ತಿದ್ದರು. ಎತ್ತರಕ್ಕೆ ಬೆಳೆದಾಗ ಅಧರ್ಮ ವೂ  ಬೆಳೆಯುತ್ತಿತ್ತು.ಇದನ್ನು ತಡೆಯಲು  ದೇವತೆಗಳಿಗೇ ಸಾಧ್ಯವಾಗದಿದ್ದಾಗ ಭಗವಂತನ  ಅವತಾರಗಳು ನಡೆದವು.  ಬಲಿಚಕ್ರವರ್ತಿ ಯಂತಹ ಮಹಾದಾನಶೂರನ  ಸೋಲಿಸಲು  ವಾಮನಾವತಾರವಾಯಿತು. ಮೂರ್ತಿಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಾಯಿತು. ಕಣ್ಣಿಗೆ ಕಾಣೋದೆಲ್ಲಾ ದಾನವಾಗಿರದು.ಅದರ ಹಿಂದಿನ ಋಣಭಾರ ತೀರಿಸುವ‌ ಜ್ಞಾನವಿದ್ದರೆ    ದಾನ‌ಪಡೆಯಬಹುದು.ಸರ್ಕಾರದ ಉಚಿತಗಳು  ದೇಶದ ಸಾಲವಷ್ಟೆ. ದೇಶಸೇವೆ ಮಾಡುವವರಿಗೆ ಕೊಟ್ಟರೆ ದಾನಕ್ಕೆ ಬೆಲೆಯಿರುತ್ತದೆ.ದೇಶವನ್ನೇ  ಹಾಳು ಮಾಡುವವರಿಗೆ ಹಂಚಿದರೆ ದಾನವರಿಗೇ ಕೊಟ್ಟಂತಾಗುತ್ತದೆ.ಇದರಿಂದಾಗಿ  ಎಲ್ಲರಿಗೂ ಕಷ್ಟ ನಷ್ಟ.  ಮೊದಲು  ಶಿಕ್ಷಣದಲ್ಲಿ   ಇದನ್ನು ತಿಳಿಸುವ ಅಗತ್ಯವಿದೆ.ಶಿಕ್ಷಣದ ವಿಷಯವೇ  ಸರಿಯಿಲ್ಲವಾದರೆ ಶಿಕ್ಷಣಕೊಟ್ಟು ಉಪಯೋಗವಿಲ್ಲ. ಹೀಗೆ ಆಹಾರ ವಿಹಾರದಲ್ಲಿಯೂ   ಯಾವುದನ್ನು ತಿನ್ನಬಾರದೋ ಮಾಡಬಾರದೋ ನೋಡಬಾರದೋ ಅವುಗಳಿಗೆ ಹೆಚ್ಚಿನ ಹಣ ನೀಡಲಾಗಿ  ಬೆಳೆಸಿದ ಮೇಲೇ‌  ಅಸುರರನ್ನು ತಡೆಯಲಾಗದೆ   ಪರಿತಪಿಸುವಂತಾಗಿರೋದು. ಒಳಗಿದ್ದ ಜ್ಞಾನ  ಸದ್ಭಳಕೆ  ಮಾಡಿಕೊಳ್ಳುವ ಶಿಕ್ಷಣವೇ ನಿಜವಾದ ಶಿಕ್ಷಣ.ಈಗಿನ ಶಿಕ್ಷಣವೇ ಹೊರಗಿನ ವಿಷಯದ್ದಾಗಿರುವಾಗ  ಶಿಕ್ಷಣ ದಾಸೋಹವಾಯಿತೆ.ಶಿಕ್ಷಣವೇ  ಪರಕೀಯರ ದಾಸ್ಯಕ್ಕೆ ಒಳಗಾಯಿತೆ? ಈಗಲೂ ಕಾಲಮಿಂಚಿಲ್ಲ.ಆತ್ಮರಕ್ಷಣೆಗಾಗಿ  ದಾನ ಧರ್ಮ ಕಾರ್ಯ ನಡೆಸಲು ಆತ್ಮಜ್ಞಾನವಿರಬೇಕು.. ಎಷ್ಟೇ ದಾನ ಧರ್ಮ   ಮಾಡಿದರೂ  ನಾನು ಎನ್ನುವ ಅಹಂಕಾರ  ಹೋಗದೆ ಹೆಚ್ಚಾಗುತ್ತಿದ್ದರೆ  ದಾನವರಾಗುವರು.  
ಮಕ್ಕಳ ದಿನಾಚರಣೆಯಂದು  ಬಲಿಪಾಡ್ಯಮಿ ಬಂದಿದೆ. ಮಕ್ಕಳಿಗೆ ದಾನದ ಬಗ್ಗೆ ತಿಳಿಸಿ ಬೆಳೆಸಿ. ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಉತ್ತಮ  ದಾನಿಗಳಾಗುವರು. ಒಳ್ಳೆಯದನ್ನು ಹಂಚಿದರೆ ಒಳ್ಳೆಯದಾಗುವುದು.ಕೆಟ್ಟದ್ದನ್ನು ಹಂಚಿದರೆ ಕೆಟ್ಟದ್ದಾಗುವುದು. ಇಷ್ಟೇ  ಜೀವನ.ಒಳ್ಳೆಯದು ಯಾವುದು, ದಾನ ಯಾವುದು ಸತ್ಯ ಯಾವುದೆನ್ನುವ  ಅರಿವೇ ನಿಜವಾದ ಗುರು  ಜೀವನದ ಗುರಿಯೆಡೆಗೆ ನಡೆಸುತ್ತದೆ. ಹಿಂದೆ ಇಂದು ಮುಂದೆ  ಇರುವ ಈ ಗುರು ಒಳಗೇ ಇರೋವಾಗ  ಹುಡುಕಿಕೊಂಡು  ಸತ್ಯ ತಿಳಿದರೆ  ಮಕ್ಕಳೇ ದೇವರಾಗಬಹುದು. 

ಗುರುಗಳಲ್ಲಿಯೂ ದೇವಗುರು ಅಸುರಗುರು ಎನ್ನುವರಿದ್ದರು.ಈಗಲೂ ಇದ್ದಾರೆ ಕಾಣೋ ದೃಷ್ಟಿ ಸರಿಯಿಲ್ಲವಷ್ಟೆ. ಯಾವುದೂ ಅತಿಯಾಗಬಾರದು ಯಾರೂ ಅತಿಯಾಗಿ ಬೆಳೆಯಬಾರದು  ಅಜ್ಞಾನದ ಜೊತೆಗೆ ಅಹಂಕಾರ ಸ್ವಾರ್ಥ ವೇ ಮಾನವನ ಶತ್ರುವಾಗಿರುತ್ತದೆ. ಆಗೋದೆಲ್ಲಾ  ಒಳ್ಳೆಯದಕ್ಕೆ ಆಗೋದನ್ನು ತಡೆಯಲಾಗದು ಆಗಿದ್ದಕ್ಕೆ ಕಾರಣ ತಿಳಿಯಬಹುದು. 

ಕೊಟ್ಟ ಮಾತಿಗೆ( ಭಾಷೆ) ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು

ಸಂಸ್ಕೃತ ಭಾಷೆ ಅರ್ಥ ವಾಗದಿದ್ದರೂ ಪರವಾಗಿಲ್ಲರಿ ಸಂಸ್ಕಾರಯುತ ಶಿಕ್ಷಣ ಸಿಕ್ಕಿದ್ದರೆ  ಜ್ಞಾನಿಗಳಾಗಲು ಸಮಸ್ಯೆಯಿಲ್ಲ.ಜ್ಞಾನಕ್ಕೆ ಭಾಷೆ ಮುಖ್ಯವಲ್ಲ ಕೊಟ್ಟ ಭಾಷೆ ಉಳಿಸಿ ಬೆಳೆಸೋದೇ ಮುಖ್ಯ. ಭಾಷಾಂತರದಿಂದಾಗುತ್ತಿರುವ ಅವಾಂತರಗಳು ಜ್ಞಾನ ಕುಸಿಯುವಂತೆ ಮಾಡುತ್ತಿವೆ. ಒಂದೇ ವಿಷಯವನ್ನು ಹಲವಾರು ಭಾಷೆಗಳಲ್ಲಿ ಹಲವಾರು ಶಬ್ದಕೋಶ ಹಿಡಿದು ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡೋ ಬದಲು ತಮ್ಮ ಸ್ವಂತ ಭಾಷೆಯಲ್ಲಿ ಒಮ್ಮೆ ತಿಳಿದು ಕಲಿಯುವುದೇ ಶ್ರೇಷ್ಠ.
ಸಂಸ್ಕೃತ  ಪುರಾತನ ದೇವಭಾಷೆಯಾಗಿದ್ದು ಎಲ್ಲಾ ವೇದ ಪುರಾಣಗಳ ವಿಷಯ  ಓದಿ ತಿಳಿಯುವಲ್ಲಿ ಸಹಾಯಕವಾಗಿದ್ದರೂ  ಮುಖ್ಯವಾಗಿ ಶಿಕ್ಷಣ ಕ್ಷೇತ್ರದಿಂದ ದೂರವಾಗುತ್ತಾ ಪರಭಾಷೆಗಳಿಗೆ ಜಾಗ ಮಾಡಿಕೊಟ್ಟಿತು. ಹೊರಗಿನಿಂದ ಬೆಳೆದ ಭಾಷೆ ಕೇವಲ ಹೊರಗಿನ ವಿಷಯವನ್ನು ಸರಿಯಾಗಿ ಅರ್ಥ ಮಾಡಿಸಬಹುದು.ಆದರೆ ಮೂಲ ಭಾಷೆಯನ್ನರಿಯದೆ ಹೊರ ನಡೆದವರಿಗೆ ಮೂಲದ ಭಾಷೆ ಅನಗತ್ಯವೆನಿಸಿದರೂ  ತಪ್ಪು. ಹೀಗಾಗಿ ತಿರುಗಿ ಮೂಲಕ್ಕೆ ಹೋಗುವಾಗ ಹೊರಗಿನ ಭಾಷೆಯ ಮೂಲಕವೇ ಅರ್ಥ ತಿಳಿಯುವಂತಾಗಿ ಅನರ್ಥಗಳೇ ಹೆಚ್ಚಾದವು. ಈ ಅನರ್ಥ ವಿರೋಧಿಸಿದವರನ್ನು ಮೂಲೆಗುಂಪು ಮಾಡಿಯಾದರೂ  ಭಾಷೆ  ಬೆಳೆಯಿತು. ಆದರೆ ಇದರಿಂದ ಯಾರಿಗಾದರೂ‌ ಲಾಭವಾಯಿತೆ? ಜ್ಞಾನ ಬಂದಿತೆ? ಸತ್ಯ ತಿಳಿಯಿತೆ ಎಂದರೆ  ಹೊರಗಿನ ಸತ್ಯ ಮೇಲೆ ಬಂತು ಹೊರಗಿನ ಜ್ಞಾನ ಬೆಳೆಯಿತು‌ ಒಳಗೇ ಇದ್ದ  ಸತ್ಯ ಧರ್ಮ ಹಿಂದುಳಿಯಿತು.
ಈಗ ಮತ್ತೆ ಸಾಕಷ್ಟು ಜನರು ಸಂಸ್ಕೃತ ಕಲಿಯಲು ಕಲಿಸಲು ಪ್ರಾರಂಭ ಮಾಡಿರೋದರಿಂದ ವೇದಕಾಲದ ಗ್ರಂಥಗಳನ್ನು ಓದಲು ಸಾಧ್ಯ.ಕೆಲವು ಗ್ರಂಥ ಮೂಲದ ಸತ್ಯ ತಿಳಿಸಿದ್ದರೆ ಅದನ್ನು ತಮ್ಮ ಅನುಭವದಿಂದ ತಿಳಿದು ಅಂದಿನ ಕಾಲಕ್ಕೆ ತಕ್ಕಂತೆ ವಿವರಿಸಿರುವುದನ್ನು  ಇಂದಿನ ಕಾಲದ ಜನರ ಜ್ಞಾನ ಪರಿಸ್ಥಿತಿ ಮನಸ್ಥಿತಿ ಯ ಆಧಾರದ ಮೇಲೆ ಕೂಲಂಕುಶವಾಗಿ ಅರ್ಥ ಮಾಡಿಕೊಳ್ಳಲು ‌ಇಂದಿನ ಭಾಷೆಯೂ ಅಗತ್ಯವಿದೆ.
ಕಾರಣ‌ ಹಿಂದಿನ ಧರ್ಮ ಸಂಸ್ಕೃತಿ ಸಂಪ್ರದಾಯ‌ಶಿಕ್ಷಣ ಭಾಷೆ ಹೇಗೆ ಜನರನ್ನು ಮುಂದೆ ನಡೆಸಿದೆಯೋ ಹಾಗೆ ಈಗಿನದ್ದೂ ನಡೆಸಿದೆ. ದಾರಿ  ಮಾತ್ರ ಬದಲಾಗಿದೆ. ಆತ್ಮಜ್ಞಾನದೆಡೆಗೆ ಹಿಂದೆ ನಡೆಸಿತ್ತು ಈಗಿದು ವಿಜ್ಞಾನದೆಡೆಗೆ  ನಡೆಸಿದೆ. ಎರಡೂ ಮುಖ್ಯವೆ ಆದ್ದರಿಂದ ಮೂಲ ಸತ್ಯವರಿತು  ಹೊರಗಿನ ಸತ್ಯ ತಿಳಿದು  ಜೀವನದಲ್ಲಿ  ಬದಲಾಗುವುದನ್ನು  ಕಂಡುಕೊಳ್ಳಲು ನಮ್ಮ ಮಾತೃಭಾಷೆ ಅಗತ್ಯ. ಯಾವ ಭಾಷೆಯೇ ಇರಲಿ ಅದರಲ್ಲಿ ಸತ್ವ ಸತ್ಯ ತತ್ವವಿದ್ದರೆ  ಶಾಂತಿಯ ಜ್ಞಾನ.
ವಿರುದ್ದವಿದ್ದರೆ ಕ್ರಾಂತಿಯ ಅಜ್ಞಾ‌ನ. ಕ್ರಾಂತಿಯಿಂದ ಭಾಷೆ ಉಳಿಯದು. ಕೊಟ್ಟ ಮಾತಿಗೆ ತಪ್ಪಿ ನಡೆದರೆ ಕ್ರಾಂತಿಯಾಗುವುದು. ಈ ಮಾತು ಗುರುಹಿರಿಯರಿಗೂ ಅನ್ವಯಿಸುತ್ತದೆ. ದೇವಾನುದೇವತೆಗಳು ಋಷಿಮುನಿಗಳೂ ಧರ್ಮ ಸಂಕಟದಲ್ಲಿ ಮಾತಿಗೆ ತಪ್ಪಿರುವಾಗ ನಾವೇನು ಲೆಕ್ಕ? ಎನ್ನುವ ಹಾಗಿಲ್ಲ.ಅಲ್ಲಿ ಧರ್ಮ ವಿತ್ತು ಇಲ್ಲಿ ಅಧರ್ಮ ವಿದೆ. ಅವರೊಳಗೆ ನಾವಿರೋವಾಗ. ಅಧರ್ಮ ಬೆಳೆದಂತೆಲ್ಲಾ ದೈವಶಕ್ತಿ ಗುರುಶಕ್ತಿಗೇ ದಕ್ಕೆಯಾಗುವುದಲ್ಲವೆ? 
ಇದರಲ್ಲಿನ ಅಧ್ವೈತ ವನ್ನು ಗಮನಿಸಿದರೆ  ನಾನೆಂಬುದಿಲ್ಲ ಎಂದಾಗುತ್ತದೆ. ನಾನು ನೀನು ಒಂದೇ ಆಗುತ್ತದೆ.ಎಲ್ಲಾ ಒಂದೇ ಶಕ್ತಿಯ ಅಧೀನದಲ್ಲಿರುವಾಗ ನಾವು ಮಾಡುವ ತಪ್ಪು ನಮ್ಮ ಶಕ್ತಿಯನ್ನು  ಹಿಂದುಳಿಸುವುದು. ಆತ್ಮಶಕ್ತಿಗೆ ಭಾಷೆ ಮುಖ್ಯವಲ್ಲ ಅದರೊಳಗಿನ ಸತ್ಯ ಸತ್ವ ತತ್ವವೇ ಮುಖ್ಯ. ಈಗಲಾದರೂ ಭಾಷೆ ಹೆಸರಿನಲ್ಲಿ ರಾಜಕೀಯ ಹೋರಾಟ ನಡೆಸಿ ಇನ್ನಷ್ಟು  ಭಾಷಾಂತರವಾದರೆ  ಇದರಿಂದ ಭಾಷೆಯ ಮೂಲವೇ  ಮೂಲೆಸೇರಬಹುದು. ಹೊರಗಿನವರಿಗೆ‌ಬೇಕಾಗಿರೋದು ಇದೇ. ಭಾಷೆ ಬೆಳೆಸಲು ಹೊರಗೆ ಹೋಗುವ ಅಗತ್ಯವಿರಲಿಲ್ಲ ಒಳಗಿದ್ದೇ ರಕ್ಷಣೆ ಮಾಡಬಹುದಿತ್ತು. ಆದರೆ ಆಗಿದ್ದೇ ಬೇರೆ. ಒಟ್ಟಿನಲ್ಲಿ ಭಾಷೆ ನಮ್ಮ ಆತ್ಮಶಕ್ತಿ ಬೆಳೆಸಬೇಕು. ಜ್ಞಾನ ಬೆಳೆದರೆ ಸಾಧ್ಯವಿದೆ.ಯಾರದ್ದೋ ಭಾಷೆ ಯಾರದ್ದೋ ವಿಷಯ,ಯಾರೋ‌  ಬೆಳೆಸಿ ಯಾರೋ ಕೇಳಿ,ಓದಿ ತಿಳಿದು ಇನ್ಯಾರೋ ತಲೆಗೆ ಒತ್ತಾಯದಿಂದ ತುಂಬಿದರೆ  ಆ ತಲೆಯಲ್ಲಿ ಮೊದಲೇ ಇದ್ದ ಜ್ಞಾನದ ಜೊತೆಗೆ ಭಾಷೆಗೂ ಅಡ್ಡಿಯಾಗಿ ತಲೆನೋವು ಹೆಚ್ಚಾಗುತ್ತದೆ.ಮಕ್ಕಳ ತಲೆಗೆ ವಿಷಯ ತುಂಬುವಾಗ ಎಚ್ಚರವಿದ್ದರೆ ಉತ್ತಮ. ಶಾಂತವಾಗಿದ್ದ ಮನಸ್ಸನ್ನು ಹದಗೆಡಿಸೋದೇ ಪರಭಾಷೆಯವಿಷಯಜ್ಞಾನ. ಇದನ್ನು ಸರ್ಕಾರವಾಗಲಿ, ರಾಜಕಾರಣಿಗಳಾಗಲಿ, ಪೋಷಕರಾಗಲಿ, ಪ್ರತಿಷ್ಠಿತ ಶಿಕ್ಷಣತಜ್ಞರು, ಜ್ಞಾನಿಗಳು,ಶಿಕ್ಷಕರು, ಸಂಸ್ಕೃತ ಪಂಡಿತರು, ನೇರವಾಗಿ ಮಕ್ಕಳಿಗೆ ತಿಳಿಸಲಾರರು. ಮಕ್ಕಳ ಮನಸ್ಸನ್ನು ಅರಿಯುವ ಕಲೆ ಕೇವಲ ಪೋಷಕರಿಗಿದೆ. ಈಗ  ಈ ಪೋಷಕರೆ ಮಕ್ಕಳನ್ನು  ಹೊರಗಟ್ಟಿ ಪರಭಾಷೆಯ ವ್ಯಾಮೋಹಕ್ಕೆ ಸಿಲುಕಿ ಸಂಸ್ಕಾರವಿಲ್ಲದ  ವಿಷಯವನ್ನು ತಲೆಗೆ ತುಂಬಿ ಮಕ್ಕಳೇ ಸರಿಯಿಲ್ಲವೆಂದರೆ  ಮಕ್ಕಳು ದೇವರ ಸಮಾನರು.ಆ ದೇವರಿಗೆ ತಿಳಿಯುವ ಭಾಷೆ  ಕಲಿಸಬೇಕಷ್ಟೆ.ವಿಚಾರವನ್ನು  ಯಾರಿಗೋ ತಿಳಿಸುತ್ತಿಲ್ಲ.ಪ್ರಜಾಪ್ರಭುತ್ವದ ಈ ಸ್ಥಿತಿಗೆ ಕಾರಣ ಭಾಷೆಯೇ  ಆಗಿರುವಾಗ ನಮ್ಮ ಮಾತನ್ನು ಮಕ್ಕಳು ಕೇಳುತ್ತಿಲ್ಲವೆಂದರೆ ನಾವು ನಮ್ಮ ಭಾಷೆಯನ್ನು ಉಳಿಸಿಕೊಂಡಿಲ್ಲವೆಂದರ್ಥ ವಾಗಬಹುದು. ನಮ್ಮ ನಮ್ಮ ಮನೆಯ  ಭಾಷೆ  ಕಲಿಸುವುದಕ್ಕೆ ಹೊರಗಿನವರ ಅಗತ್ಯವಿಲ್ಲ. ಹೊರಗಿನಿಂದ ಬಂದವರು ಅವರ ಭಾಷೆಯ ಹೇರಿದರೂ ನಾವು  ಯಾಕೆಂದು ಕೇಳಲಿಲ್ಲ.ಹಾಗಾಗಿ ಅವರು ಬೆಳೆದರು ನಾವು ಹಿಂದುಳಿದೆವು.ಇದನ್ನು ಸರಿಪಡಿಸಲು ಹಣದಿಂದ ಸಾಧ್ಯವಿಲ್ಲವಾದರೂ ಸರ್ಕಾರದ ಹಣವನ್ನು ನೀರಿನಂತೆಬಳಸಿ   ಪ್ರಚಾರ ಮಾಡುವವರ ಹೊಟ್ಟೆ ತುಂಬಿದರೂ ಜ್ಞಾನಬರಲಿಲ್ಲ. ಹಿಂದಿನ  ಜ್ಞಾನಿಗಳಲ್ಲಿದ್ದ ಭಕ್ತಿ ಶ್ರದ್ದೆ ಶಾಂತಿ ಈಗಿಲ್ಲವೆಂದರೆ ನಾವು ಅವರಂತೆ ಬದುಕಲಾಗಿಲ್ಲ. 
ಹೇಗೆ ಹಬ್ಬಗಳ ಹಿಂದೆ ಕಥೆಯಿರುವುದೋ ಹಾಗೆ ಭಾಷೆಗೂ ಕಥೆಯಿರುತ್ತದೆ. ಕಥೆ ಸರಿಯಾಗಿ ಅರ್ಥ ವಾಗಲು ಭಾಷೆ ನಮಗೆ ಅರ್ಥ ವಾಗುವಂತಿರಬೇಕು.ಯಾರದ್ದೋ ಒತ್ತಾಯಕ್ಕೆ  ಭಾಷೆ ಬೆಳೆಯೋದಿಲ್ಲ ನಾವೇ ಬೆಳೆಸಬೇಕು.
ರಾಮಾಯಣ ಮಹಾಭಾರತ ಭಗವದ್ಗೀತೆ ಮುಂತಾದ ಧರ್ಮ ಗ್ರಂಥ ಗಳ  ವಿಷಯ  ಸಂಸ್ಕೃತ ದಲ್ಲಿದ್ದರೂ ಭಾಷಾಂತರ ಮಾಡಿದವರಿಗೆ ಏನೇನೋ ವಿಷಯ ಹೇಗೇಗೋ ಅರ್ಥ ವಾಗಿ ಅವರ ಭಾಷೆಗೆ ಇಳಿಸಲಾಯಿತು.ಆ ಕಾಲಕ್ಕೆ ತಕ್ಕಂತೆ ಕಥೆಯನ್ನು ತಿರುಚಲಾಗಿದ್ದರೆ ಸತ್ಯವಿರದು. ಹಾಗೆ  ಮಾಡಿದ್ದರಿಂದ ಧರ್ಮ ಉಳಿಯಿತೆ ಇಲ್ಲವಾದರೆ  ಅದೂ ಕಷ್ಟ ನಷ್ಟಕ್ಕೆ ಕಾರಣವಾಯಿತು.  ಪುರಾಣದ ತತ್ವ ವಾಸ್ತವದ ತಂತ್ರ ಭವಿಷ್ಯದ ಕುತಂತ್ರಕ್ಕೆ ದಾರಿಯಾಗದಂತೆ ಭಾಷೆಯ ಜೊತೆಗೆ  ಸತ್ಯ ಧರ್ಮವನರಿತರೆ  ಉತ್ತಮ.ರಾಮನಂತೆ ಶ್ರೀ ಕೃಷ್ಣ ನ ಕಾಲ ನಡೆದಿಲ್ಲವೆಂದರೆ  ಇಂದಿನ‌ ಕಲಿಯುಗದಲ್ಲಿ ಸಣ್ಣಪುಟ್ಟ ಸಮಸ್ಯೆ ಯನ್ನು ಬಂಡವಾಳವಾಗಿಸಿಕೊಂಡು ಹೊರಬರುವವರಿಗೆ ಭಾಷೆಯ ಮಹತ್ವ  ತಿಳಿಸುವ ಪ್ರಯತ್ನ ಮಾಡಿದರೆ ಉತ್ತಮ. ಆದರೂ ಎಲ್ಲರಿಗೂ ಜ್ಞಾನ ವಿದೆ. ಆದರೆ ಎಲ್ಲರಿಗೂ ಅವರ ಮಾತೃಭಾಷೆಯ ಜ್ಞಾನವಿಲ್ಲದೆ ಪೂರ್ಣ ಸತ್ಯ ಅರ್ಥ ವಾಗಿಲ್ಲ. ಇದಕ್ಕೆ ಸರ್ಕಾರ ಹೊಣೆಯಾಗದು ನಮ್ಮದೇ ಅಸಹಕಾರವೇ ಹೊಣೆಯಾಗಿದೆ. ಆಂಗ್ಲ ಮಾಧ್ಯಮವಿರಲಿ  ಪರಭಾಷೆಯೇ ಇರಲಿ ವಿಷಯದಲ್ಲಿ ಸತ್ವ ಸತ್ಯ ತತ್ವವಿದ್ದರೆ ಜ್ಞಾ‌ನ ಬರುತ್ತದೆ.

Sunday, November 12, 2023

ಯೋಗಲಕ್ಮಿ ಭೋಗಲಕ್ಮಿ ಒಂದೇ ನಾಣ್ಯದ ಎರಡು ಮುಖ

ಯೋಗಕ್ಕಾಗಿ ಕಷ್ಟಪಟ್ಟವರು ಮಹಾತ್ಮರೆನಿಸಿಕೊಂಡರು.
ಭೋಗಕ್ಕಾಗಿ ಕಷ್ಟಪಟ್ಟವರು  ಅಸುರರೆನಿಸಿದರು. ಕಷ್ಟನಷ್ಟ ಪಾಪಪುಣ್ಯಗಳನ್ನು ಅಳೆದು ತೂಗುವ  ವ್ಯವಹಾರದಲ್ಲಿ  ಸತ್ಯಜ್ಞಾನ ಮಿಥ್ಯಜ್ಞಾನದ ನಡುವೆ ಸಾಮಾನ್ಯ ಜ್ಞಾನವೂ ಅಡಗಿದೆ. ಹಾಗಾಗಿ ಮಧ್ಯವರ್ತಿ ಮಾನವ ಸಾಮಾನ್ಯರಂತಿದ್ದು ಜೀವನದ ಸತ್ಯಾಸತ್ಯತೆಯನ್ನು ತಿಳಿಯುವುದೇ  ಧರ್ಮ ವಾಗಿದೆ. ಯಾರೋ ಹಿಂದೆ ಮುಂದೆ ನಿಂತು ಹೇಳೋದು ಅವರ ಜ್ಞಾನವಾಗಿರುವುದು.ಅದರಲ್ಲಿ ಸತ್ಯಾಸತ್ಯತೆಯನ್ನು  ತಿಳಿಯುವುದಕ್ಕೆ ಅದರೊಳಗೆ ಹೊಕ್ಕಿ ತನ್ನ ಆತ್ಮಸಾಕ್ಷಿಗೆ ದಕ್ಕೆ ಬರದಂತಿರೋದು‌ಬಹಳ ಕಷ್ಟದ ಕೆಲಸ.ಹಾಗಾಗಿ ಎಷ್ಟೋ  ಸ್ತ್ರೀ ಯರು  ತಮ್ಮ ಜ್ಞಾನವನ್ನು ಬಿಟ್ಟು ಪರರ ಜ್ಞಾನವನ್ನು ಬೆಳೆಸಿ  ಭೂಮಿಯ ಸತ್ಯ ಸತ್ವ ತತ್ವಕ್ಕೆ ದಕ್ಕೆಯಾಗುತ್ತಿದ್ದರೂ  ಏನೂ ಮಾಡದ ಪರಿಸ್ಥಿತಿಯಲ್ಲಿ  ಸಂಸಾರದ ಒಳಗೆ ಹೊರಗೆ ದುಡಿದರೂ  ಗೌರವದ ನಿರೀಕ್ಷೆಯಲ್ಲಿರೋದು ಭಾರತದಂತಹ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಹಣವಿದ್ದರೆ ಮಾತ್ರ ಗೌರವ ಎಂದಾಗ ಸಂಪಾದಿಸಲು ಹೊರಗಿನ ಜ್ಞಾನ ಬೇಕು. ಅಧ್ಯಾತ್ಮ ಜ್ಞಾನಕ್ಕೆ ಬೆಲೆಕೊಡದವರೊಂದಿಗೆ  ಎಷ್ಟು  ದುಡಿದರೂ ವ್ಯರ್ಥ. ನಮ್ಮ ಭಾರತೀಯ ಗೃಹಿಣಿಯರಿಗೆ ಗೃಹಲಕ್ಮಿ ಯೋಜನೆಯ ಮೂಲಕ ಸರ್ಕಾರ  ಹಣ ನೀಡುವ ಪರಿಸ್ಥಿತಿ ಬಂದಿರೋದು ದುರಂತ. ಎಷ್ಟೋ ಮಹಿಳೆಯರ ಮೈತುಂಬಾ ಒಡವೆ ಹಾಕಿಕೊಂಡರೂ ಮುಗಿಯದಷ್ಟು ಒಡವೆ ಆಸ್ತಿಯಿದೆ.ಆದರೆ  ಕಷ್ಟಪಟ್ಟು  ಹೊರಗೆ ಒಳಗೆ ದುಡಿದರೂ ಒಂದು ತುಂಡು ಚಿನ್ನ ಖರೀದಿಸಲು ಸಾಲ ಮಾಡುವ ಮಹಿಳೆಯರೂ ಇದ್ದಾರೆ.ಈ ಅಂತರದಲ್ಲಿ  ಮೇಲುಕೀಳಿನ ವ್ಯವಹಾರವೇ ಹೆಚ್ಚು ಧರ್ಮದ ದೃಷ್ಟಿಯಿಂದ ನೋಡುವ ಕಣ್ಣಿಲ್ಲ. ಇದನ್ನು  ಧಾರ್ಮಿಕ ವರ್ಗ ಸರಿಪಡಿಸಬಹುದೆ? ರಾಜಕೀಯ ‌ಕ್ಷೇತ್ರ ಸರಿಪಡಿಸಲಾಗುವುದೆ? ಧಾರ್ಮಿಕ ಕ್ಷೇತ್ರವೇ ರಾಜಕೀಯದ ಹಿಂದೆ ನಿಂತರೆ‌ ದೊಡ್ಡವರು ಯಾರು? ಲಕ್ಮಿಪೂಜೆಯನ್ನು ಸಾಲ ಮಾಡಿ ಮಾಡಿದರೆ ಅರ್ಥ ವಿಲ್ಲ. ಸಾಲದ ಹಾಗು ಭ್ರಷ್ಟಾಚಾರದ ಹಣದಲ್ಲಿ  ಭಗವಂತ ಕಾಣೋದಿಲ್ಲವೆಂದರೆ ಅವನ ಹೃದಯಲಕ್ಮಿ ಒಲಿಯುವಳೆ?  ಇತ್ತೀಚೆಗೆ  ಪ್ರತಿಮೆಗೆ ಸುರಿಯುವ ಹಣ  ದೇಶದ ಸಾಲ ತೀರಿಸಲು ಬಳಸಲಾಗದೆ ದೇಶದ ತುಂಬಾ ವಿದೇಶಿ ಸಾಲ ಹೆಚ್ಚಾಗುತ್ತಿದೆ. ಅವರಕೈಕೆಳಗೆ ದುಡಿದು ತೀರಿಸಲೇಬೇಕೆನ್ನುವ ಮಟ್ಟಿಗೆ ಕಂಪನಿಗಳು ಯುವಕಯುವತಿಯರನ್ನುಸೆಳೆಯುತ್ತಿದ್ದಾರೆ. ಆಸ್ತಿ ಇದ್ದವರನ್ನೂ ದೇಶದಿಂದ ಹೊರಗೆ‌ ಕಳಿಸಿ ಪೋಷಕರು ವೃದ್ದಾಶ್ರಮ ಸೇರುತ್ತಿರುವುದನ್ನೂ ಕಾಣುತ್ತಿದ್ದೇವೆ ಇದರಲ್ಲಿ ಧರ್ಮ ವಿದೆಯೆ? ಎಲ್ಲೋ ಕೆಲವರು ತಮ್ಮ ಹಣ ಬಲ ಜನಬಲದಲ್ಲಿ  ಹೆಸರುಗಳಿಸಿ  ಸಾಧನೆ ಎಂದರೆ ಅವರ ಹಿಂದೆ ನಡೆದವರ ಗತಿ ಕೇಳೋರಿಲ್ಲ. ಒಟ್ಟಿನಲ್ಲಿ ಜನಮರುಳೋ ಜಾತ್ರೆಯೋ ಎನ್ನುವಂತೆ ಸತ್ಯ ಕಣ್ಣೆದುರೇ ಇದ್ದರೂ ನಂಬದ‌ಜನ ಮರುಳಾಗುತ್ತಿರೋದು ಹಣಕ್ಕೆ. ಜ್ಞಾನ ಒಳಗೇ ಕೊಳೆತು ನಾರಿದರೂ  ಬಳಸಲಾಗದೆ‌ ಮನಸ್ಸೇ‌ ಹಾಳಾಗುತ್ತಿದೆ.
ಇದಕ್ಕೆ ಸರ್ಕಾರದ ಗೃಹಲಕ್ಮಿ ಯೋಜನೆ ಜಾರಿಗೆ ಬಂದರೂ ಆ ಹಣವನ್ನು ಗೃಹಿಣಿಯರು ಬಳಸಲು ಸ್ವಾತಂತ್ರ್ಯ ವಿದೆಯೆ? ಅಥವಾ ಹೇಗೆ ಬಳಸಬೇಕೆಂಬ ಜ್ಞಾನವಿದೆಯೆ? ಇದ್ದರೆ  ಇದರಿಂದ ಮನೆಮನೆಯಲ್ಲಿ ಸುಖ ಶಾಂತಿ ಕಾಣಬಹುದಷ್ಟೆ. ಸರ್ಕಾರದ ಹಣ‌ ಜನರ ಋಣ‌,ಜನರ ಋಣ ತೀರಿಸಲು ಸೇವೆ ಮಾಡಬೇಕು.ಜನಸೇವೆ ಮಾಡಲು ಹೊರಬರಬೇಕು.ಹೊರಗೆ ಬಂದರೆ ಸಂಸಾರಕ್ಕೆ ತೊಂದರೆ. ಸಂಸಾರಕ್ಕೆ ತೊಂದರೆ ಯಾದರೆ ನಾರಿ‌ಮಾರಿಯಾಗಿ ಸಿಡಿದೇಳುವಳು. ಹಾಸಿಗೆ ಇದ್ದಷ್ಟು ಕಾಲುಚಾಚು, ಪಾಲಿಗೆ ಬಂದದ್ದು ಪಂಚಾಮೃತ  ಇದಕ್ಕೆ  ಅನುಭವಿ ಜ್ಞಾನಿಗಳು ಹೇಳಿರೋದೆನಿಸುತ್ತದೆ. ಮನಸ್ಸಿನ ಸಂತೋಷದ ಜೊತೆಗೆ ಆತ್ಮಸಂತೋಷವಿದ್ದರೆ ಮನೆಯಲ್ಲಿ ನೆಮ್ಮದಿ. ಆತ್ಮಸಂತೋಷಕ್ಕೆ ಆತ್ಮಸಂಶೋಧನೆ  ಬೇಕು. ಇಂದಿನ ಭೌತಿಕದ ವಿಜ್ಞಾನ ಸಂಶೋಧನೆಯು ಆಕಾಶದೆತ್ತರ ಬೆಳೆದಿದ್ದರೂ ಕೆಳಗಿರುವ ಭೂಮಿಯನ್ನು ಅರ್ಥ ಮಾಡಿಕೊಳ್ಳಲು ಸೋತರೆ ಮನುಕುಲಕ್ಕೆ ನಷ್ಟ.

Friday, November 10, 2023

ಬ್ರಾಹ್ಮಣ ಶೂದ್ರನೆಂಬುದರಲ್ಲಿ ಮೇಲುಕೀಳಿಲ್ಲ

ಒಬ್ಬ ಬ್ರಾಹ್ಮಣ ಶೂದ್ರನಾದರೆ  ಭೌತಿಕದಲ್ಲಿ ಸಾಧನೆ ಮಾಡಬಹುದು‌ ಹಾಗೆಯೇ ಶೂದ್ರ ಬ್ರಾಹ್ಮಣನಾದರೆ ಅಧ್ಯಾತ್ಮ ಸಾಧನೆಯಾಗುತ್ತದೆ.ಇದರಲ್ಲಿ ಮೇಲುಕೀಳೆಂಬುದಿಲ್ಲ.ಸಾಧನೆಗೆ ಪರಿಶ್ರಮ ಅಗತ್ಯವಿದೆ. ಬ್ರಾಹ್ಮಣನೆಂದರೆ ಜಾತಿಯಲ್ಲ ಶೂದ್ರನೆಂದರೂ ಜಾತಿಯಲ್ಲ. ಬ್ರಹ್ಮಜ್ಞಾನವನರಿತವರು ಬ್ರಾಹ್ಮಣ ಸೇವೆಯಿಂದ  ಜ್ಞಾನಿಯಾಗೋದು  ಮಹಾತ್ಮರ ಲಕ್ಷಣವಾಗಿತ್ತು.
ಸೇವೆಯಿಂದಲೇ ಸೇವಕನಾಗೋದು ಇದರಲ್ಲಿ ಪರಮಾತ್ಮನ ಸೇವಕನಾಗೋದಕ್ಕೆ ಪ್ರತಿಯೊಬ್ಬರಲ್ಲಿಯೂ ಅಡಗಿರುವ ಪರಮಾತ್ಮನ ಸೇವೆ  ಮಾಡುವ ಜ್ಞಾನಬೇಕಷ್ಟೆ. ಭಗವಂತನ ತಲೆಯ ಜ್ಞಾನ ಕಾಲಿನವರೆಗೂ ಹರಡಿದೆ. ಮಾನವನ ಚಿಂತನೆಯ  ತಲೆ ಸರಿಯಿಲ್ಲದೆ ಕಾಲಿನ‌ನಡಿಗೆ ಸರಿಯಾಗದು.ಯಾರೂ ಅವರ ಕಾಲನ್ನು ಕೊಟ್ಟು ನೀನು ನಡೆ ಎನ್ನಲಾಗದು.ಆದರೆ ತಲೆ ಬಳಸಿಕೊಂಡು ಇತರರನ್ನು ನಡೆಸಿದವರಿದ್ದಾರೆ.ಅದು ಸರಿದಾರಿಯಾಗಿದ್ದರೆ‌ ನಡಿಗೆಯಿಂದ ಜ್ಞಾನ ಇಲ್ಲವಾದರೆ ಅಜ್ಞಾನ. ಒಟ್ಟಿನಲ್ಲಿ  ನಡೆಯೋದಕ್ಕೆ ಎಲ್ಲರಿಗೂ ಗೊತ್ತಿದೆ  ಅವರವರ ನಡಿಗೆಯಲ್ಲಿ ಯಾರ ಜ್ಞಾನವಿದೆ ಎನ್ನುವುದು ತಿಳಿದಾಗಲೇ ನಮ್ಮ ಕಾಲು ನಮ್ಮ ಹಿಂದಿನವರ‌ಕಾಲಿನಂತೆ ನಡೆದಿದೆಯೋ ಅಥವಾ ಹಿಂದಿರುಗಿದೆಯೋ ತಿಳಿಯಬಹುದು. ಇಲ್ಲಿ ಯಾರೋ ತಿಳಿಸಿದ್ದನ್ನು ಸತ್ಯವೆಂದು ತಿಳಿದವರೆ ಹೆಚ್ಚು. ಹೀಗಾಗಿ ಯಾರದ್ದೋ ಕಾಲವನ್ನು ಕಾಲನ್ನು  ನಮ್ಮದೆಂದು ನಡೆದಾಗ ನಮ್ಮ ಕಾಲಿಗೆ ಶಕ್ತಿಬರದು. ಇದರಿಂದ ಧರ್ಮ ಸತ್ಯ ಬೆಳೆದಿದ್ದರೆ  ಬ್ರಹ್ಮಜ್ಞಾನವಾಗುತ್ತದೆ.ಅಂದರೆ ನಮ್ಮ ಸೃಷ್ಟಿ ಗೆ ಬೆಲೆಯಿರುತ್ತದೆ. ಇಲ್ಲವಾದರೆ  ಕಾಲವನ್ನೇ ಸರಿಯಿಲ್ಲ ಕಾಲೇ ಸರಿಯಿಲ್ಲವೆನಿಸುತ್ತದೆ. ಒಟ್ಟಿನಲ್ಲಿ ಯಾರು ಯಾವ‌ಮಾರ್ಗದಲ್ಲಿ  ನಡೆದರೂ ಆ ಮಾರ್ಗ ಬೆಳೆಯುತ್ತದೆ. ಆಂತರಿಕ ಜ್ಞಾನ ಭೌತಿಕ ವಿಜ್ಞಾನವೆರಡೂ ಒಂದೇ ನಾಣ್ಯದ ಎರಡು ಮುಖವಾಗಿದ್ದರೂ ಆಂತರಿಕ ಜ್ಞಾನ ಬಿಟ್ಟು ಬೌತಿಕವಿಜ್ಞಾನ ಮುಂದೆ ನಡೆದಾಗ  ಒಳಹೊಕ್ಕು ನೋಡುವ ಶಕ್ತಿ ಜೀವಾತ್ಮನಿಗಿರದು. ಹೊರಗಿನ ಶಕ್ತಿಯ ಅಧೀನದಲ್ಲಿ ಬಂಧಿಯಾಗಿರುವಾಗ ಆ ಬಂಧನದಲ್ಲಿ ಇತರರನ್ನೂ ಸಳೆಯುವುದೇ ಅಧರ್ಮ ವಾಗುತ್ತದೆ. ಸೇವೆ ಪರಮಸತ್ಯದಿಂದ ಧರ್ಮ ದಿಂದಾದರೆ  ಪರಮಾತ್ಮನ ಸೇವೆ ಆಗುತ್ತದೆ. ಇದು ಬ್ರಾಹ್ಮಣ,ಕ್ಷತ್ರಿಯ ವೈಶ್ಯ ಶೂದ್ರರಿಗೆ ಒಂದೇ ಆಗಿದ್ದರೂ  ಮೇಲಿನವರು ಕೆಳಗಿಳಿದು ಸೇವೆ ಮಾಡೋದಕ್ಕೂ ಕೆಳಗಿನವರು ಮೇಲೇರಿ ಸೇವಕರಾಗೋದಕ್ಕೂ ವ್ಯತ್ಯಾಸವಿದೆ. ಮೇಲಿನಿಂದ ಕೆಳಗಿಳಿಯುವಾಗ ಅಹಂಕಾರ ಮಾಯವಾಗಿರುತ್ತದೆ.
ಕೆಳಗಿನಿಂದ ಮೇಲೇರುವಾಗ ಆತ್ಮವಿಶ್ವಾಸ ಬೆಳೆದಿರುತ್ತದೆ.ಎರಡೂ ಒಂದೇ  ಇಬ್ಬರಿಗೂ ಪರಮಾತ್ಮನದರ್ಶನವಾಗಿದ್ದರೂ ಅನುಭವದಲ್ಲಿ ವ್ಯತ್ಯಾಸವಿದೆ. ಈ ಅನುಭವವನ್ನು ಸ್ವತಃ ಅನುಭವಿಸಿಯೇ ಅರ್ಥ ಮಾಡಿಕೊಳ್ಳಲು ನಡಿಗೆ ಅಗತ್ಯ. ನಡಿಯದೆ ನುಡಿದರೆ  ಸತ್ಯವಿರದು. 
ಶ್ರೀ ಶಂಕರಾಚಾರ್ಯರಂತೆ ಮದ್ವಾಚಾರ್ಯರಾಗಲಿ ರಾಮಾನುಜಾಚಾರ್ಯ ರಾಗಲಿ  ನಡೆದಿಲ್ಲವಾದರೂ ಅವರ ತತ್ವದ ಉದ್ದೇಶ ಒಂದೇ ಆಗಿತ್ತು. ಆ ತತ್ವವನರಿಯದೆ ಬೇರೆ ಬೇರೆ ಎಂದವರ ನಡಿಗೆಯಲ್ಲಿ ವ್ಯತ್ಯಾಸವಾಗಿ ಪರಮಾತ್ಮನ  ತಿಳಿದ ರೀತಿ ನೀತಿ ಸಂಸ್ಕೃತಿ ಆಚರಣೆಗಳು ಬೆಳೆದವು ಧರ್ಮ ಹಿಂದುಳಿಯಿತು. ಒಂದೇ ಭೂಮಿಯಲ್ಲಿ  ಅಸಂಖ್ಯಾತ ಧರ್ಮ ಜಾತಿ ಪಂಗಡ ವರ್ಗ ಪಕ್ಷವಿದ್ದರೆ  ಒಂದು ಮಾಡೋದು ಕಷ್ಟ.ಆದರೂ ಭಾರತದಂತಹ ಪವಿತ್ರ ದೇಶದಲ್ಲಿ ಸರ್ವ ಮತ ಸಮ್ಮತ ಎನ್ನುವ ಮಂತ್ರವಿದೆ.ಇದನ್ನು ರಾಜಕೀಯಕ್ಕೆ ಬಳಸಿ  ಬೇರೆ ಬೇರೆ ಮಾಡಿದರೆ  ರಾಜಯೋಗವೆಲ್ಲಿರುವುದು? ಲೇಖನಗಳಲ್ಲಿ ಅಡಗಿರುವ ವಾಸ್ತವ ಸತ್ಯವನ್ನು  ಒಪ್ಪಿಕೊಳ್ಳಲು ಕಷ್ಟವಾದರೂ ಸತ್ಯ ಒಪ್ಪಿಕೊಂಡರೆ ಆತ್ಮರಕ್ಷಣೆ  ಆತ್ಮರಕ್ಷಣೆಯಿಂದ ದೇಶರಕ್ಷಣೆ.ದೇಶದ ಧರ್ಮ ಉಳಿಸಲು ಮೇಲಿರುವವರ ಅಹಂಕಾರ ಹೋಗಬೇಕು ಕೆಳಗಿರುವವರ ಆತ್ಮವಿಶ್ವಾಸ ಬೆಳೆಸಬೇಕಿದೆ. ಮೇಲೆ ನಿಂತು ಕೆಳಗಿನಿಂದ ಕಷ್ಟಪಟ್ಟು ಮೇಲೆ ಬರುವವರನ್ನು ಕಾಲಿನಿಂದ ತುಳಿದರೆ  ಧರ್ಮ ವಾಗದು. ಒಟ್ಟಿನಲ್ಲಿ  ಶಂಖದಿಂದ ಬಂದದ್ದಷ್ಟೇ ಸತ್ಯವಲ್ಲ.ಶಂಖವೆಷ್ಟು ಸ್ವಚ್ಚವಾಗಿದೆ ಆರೋಗ್ಯವಾಗಿದೆ  ಎನ್ನುವ ಸತ್ಯ ಮುಖ್ಯವಾಗಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಮಾಡಿಕೊಟ್ಟು  ಹೋದರೆ  ಪ್ರಗತಿ ಎಂದರೆ ಮೂರನೆಯವರು ಮಧ್ಯವರ್ತಿಗಳು. ಅರ್ದ ಸತ್ಯ  ಹಿಡಿದರೆ ಅತಂತ್ರ ಜೀವನ. ಅಸತ್ಯವಾದರೂ ಕೊನೆಗೆ ಸತ್ಯದೆಡೆಗೆ ನಿಲ್ಲಬಹುದು ಆದರೆ ಅರ್ಧ ಸತ್ಯಯಾವತ್ತೂ ಅಪಾಯಕಾರಿ. 
ಪ್ರತಿಮೆಗಳ  ಪ್ರದರ್ಶ ನ  ಪ್ರತಿಭೆಗಳ ಪ್ರದರ್ಶನದಲ್ಲಿ ವ್ಯವಹಾರವಿರದೆ ಧರ್ಮದ ತತ್ವ ಇದ್ದರೆ ಒಗ್ಗಟ್ಟು ಏಕತೆ ಐಕ್ಯತೆಗೇನೂ ಕೊರತೆಯಾಗದು. ಒಗ್ಗಟ್ಟಿನಲ್ಲಿದೆ ಬಲ. ಇದು ಭಿನ್ನಾಭಿಪ್ರಾಯ ದ್ವೇಷವನ್ನು ಹುಟ್ಟುಹಾಕದಂತಿರಬೇಕಷ್ಟೆ. ಎಲ್ಲರೊಳಗಿರುವ ಚೇತನಾಶಕ್ತಿಯು ಹೊರಗಣ್ಣಿಗೆ ಕಾಣದೆ ಇದ್ದರೆ  ಅವರು ಅಚೇತನರು ಎನ್ನುವುದು ಸರಿಯಲ್ಲ.ನಮ್ಮ ದೃಷ್ಟಿ ಸರಿಯಿಲ್ಲವೆನ್ನಬಹುದಷ್ಟೆ. ದೃಷ್ಟಿದೋಷಕ್ಕೆ ತತ್ವಜ್ಞಾನ ಪರಿಹಾರ ನೀಡಬಹುದು ತಂತ್ರದಿಂದ ಸಾಧ್ಯವಿಲ್ಲ. ತಂತ್ರದಲ್ಲಿ ಒಂದೇ  ಸತ್ಯವಿರದು.  ಓದುಗರು ಇದನ್ನು ಶೇರ್ ಮಾಡಿಕೊಂಡರೆ‌ ನಷ್ಟವೇನಿಲ್ಲ.ಆದರೂ ಮಾಡೋದಿಲ್ಲ ಇದೇ ಭಾರತೀಯರ ದೊಡ್ಡ ಸಮಸ್ಯೆಗೆ ಕಾರಣ. ಯಾವುದೋ ಚಿತ್ರ  ಹಂಚಿಕೊಳ್ಳುವುದು ಸುಲಭ.ಸತ್ಯ ಹಂಚಿಕೊಳ್ಳಲು ಕಷ್ಟ. ಕಾರಣ ಸತ್ಯವೇ ದೇವರು.ದೇವರನ್ನು ಹಂಚಿಕೊಳ್ಳಲು ಕಷ್ಟವಾದರೂ ಎಲ್ಲರಲ್ಲಿಯೂ ಅವನೇ ಇರೋದಲ್ಲವೆ? ಬೆಳೆದರೆ  ನಮಗೇ ಮುಕ್ತಿ ಸಿಗುತ್ತದೆ.
ವಿಷ್ಣುವಿನವತಾರದಲ್ಲಿ  ಯಾವುದೇ ಜಾತಿ ವರ್ಣ ದ ವರ್ಣನೆ ಮಾಡೋಹಾಗಿಲ್ಲ.  ಭೂಮಿಯಲ್ಲಿ ಧರ್ಮ ರಕ್ಷಣೆಯೇ ಗುರಿಯಾಗಿತ್ತು.  ಇದರಲ್ಲಿ ತಪ್ಪು ಕಂಡರೆ ತಿಳಿಸಿದರೆ ಸರಿಪಡಿಸಬಹುದು. ತಪ್ಪು ಮಾನವನಿಂದ ಆಗುತ್ತದೆ ಸರಿಪಡಿಸಿಕೊಳ್ಳುವುದೂ  ಮನುಷ್ಯತ್ವ.ಮನುಷ್ಯತ್ವಕ್ಕೆ ತತ್ವದ ಅಗತ್ಯವಿದೆ .ಭಾರತದೊಳಗಿದ್ದು ನಾನು ಭಾರತೀಯ ಎಂದರೆ ಸರಿ ವಿದೇಶಕ್ಕೆ ಹೋಗಿ ಹೇಳಿದರೆ ಅರ್ಧ ಸತ್ಯವಲ್ಲವೆ? ಹಾಗೆ ಬ್ರಹ್ಮಾಂಡದೊಳಗಿದ್ದು ಅಹಂ ಬ್ರಹ್ಮಾಸ್ಮಿ ಎಂದರೆ ಸರಿ ಆದರೆ ಬ್ರಹ್ಮಜ್ಞಾನವಿಲ್ಲದೆ ಹೊರಗಿದ್ದರೆ ಸರಿಯಲ್ಲ. ಬ್ರಹ್ಮನ ಅರ್ಥ ಮಾಡಿಕೊಳ್ಳಲು ಮೊದಲು ನಾನ್ಯಾರೆಂಬುದನ್ನು ಅರಿಯಬೇಕು. ನನ್ನಲ್ಲಿ ರುವ ಜ್ಞಾನ ಯಾರದ್ದೆಂದು ಅರ್ಥ ವಾಗಬೇಕು. ನಾನೇ ಪರರ ವಶದಲ್ಲಿರುವಾಗ  ಪರಮಾತ್ಮನ ಅರಿಯಲಾಗದು. ಇದನ್ನು ಹೊರಗಿನಿಂದ ತಿಳಿಯುವುದೂ  ತಾತ್ಕಾಲಿಕ ವಾಗಿರುತ್ತದೆ.ಒಟ್ಟಿನಲ್ಲಿ ಆತ್ಮಾವಲೋಕನ ಕ್ಕೆ ರಾಜಕೀಯದ ಅಗತ್ಯವಿಲ್ಲ. ರಾಜಕೀಯದಲ್ಲಿ ತಂತ್ರವಿರುವ ಕಾರಣ ಸ್ವತಂತ್ರ ಜ್ಞಾನ ಕುಸಿಯುತ್ತದೆ. ಹೊರಗಿನಿಂದ ಬೆಳೆದ ದೇವರನ್ನು ಒಳಗಿರುವ ದೈವತ್ವದೆಡೆಗೆ  ನಡೆಸಬಹುದಾದರೆ  ಬದಲಾವಣೆ  ಸಾಧ್ಯ. ಯಾರನ್ನೂ ಬದಲಾಯಿಸಲು ಹೋಗಿ  ನಮ್ಮ ಮೂಲವನ್ನು ದೂರಮಾಡಿಕೊಂಡರೆ ನಷ್ಟ ನಮಗೇ. ಹೊರಗಿನ ಕಾನೂನಿಗೆ ಶರಣಾದಂತೆ ಒಳಗಿನ ಕಾನೂನಿಗೆ ಶರಣಾದರೆ  ಶರಣರ  ತತ್ವದೊಳಗಿದ್ದ ಸಾಮಾನ್ಯಜ್ಞಾನ ಕಾಣುವುದು. ಮೊದಲು ಮಾನವರಾದರೆ ಮಹಾತ್ಮರೂ ಕಾಣುವರು. 
ಒಟ್ಟಾರೆ ಹೇಳೋದಾದರೆ ಮಾನವನೇ ಮಾಡಿಕೊಂಡಿರುವ  ವ್ಯವಸ್ಥೆಯಲ್ಲಿ  ದೊಡ್ಡ ದೊಡ್ಡ ಅವಸ್ಥೆ ಸೃಷ್ಟಿ ಯಾಗಿ ಸ್ಥಿತಿಗೆ ಕಾರಣವಾಗಿ ಲಯದ ಕಾರ್ಯ  ನಡೆದಿದೆ. ಇದನ್ನು ತಪ್ಪಿಸಲು ಸೃಷ್ಟಿ ಸರಿಯಾಗಿರಬೇಕು. ಅದೇ ಶಿಕ್ಷಣ ಸರಿಯಾಗಬೇಕು. ಅದರಲ್ಲಿ ರಾಜಕೀಯವಿದ್ದರೆ ಮುಗಿಯಿತು ಕಥೆ.ಮಕ್ಕಳ ಜ್ಞಾನಕ್ಕೆ ಬೆಲೆಯೇ ಇರದು. ಪೋಷಕರ  ಸಮಸ್ಯೆಗೆ ಪರಿಹಾರ ಸಿಗದು. ಜನ್ಮಜನ್ಮದ ಕರ್ಮ ಅನುಭವಿಸಲೇಬೇಕೆನ್ನುವುದೇ ಕರ್ಮ ಸಿದ್ದಾಂತ. ಜ್ಞಾನಯೋಗ ಕರ್ಮ ಯೋಗಕ್ಕಿಂತ ದೊಡ್ಡದು ಎಂದರು ಶಂಕರರು. ಆದರೆ ಈಗ ಕರ್ಮ ವಿಲ್ಲದ ಜ್ಞಾನ  ಸಣ್ಣದಾಗುತ್ತಿದೆ. ಅನುಭವವಿಲ್ಲದವರು ಅನುಭವಿಗಳನ್ನೇ  ಕೆಳಗೆ ತಳ್ಳಿ  ಆಳುತ್ತಿರೋದು  ಕಣ್ಣಿಗೆ ಕಾಣುತ್ತಿರುವ ಸತ್ಯವಾಗಿದ್ದರೂ  ತಿಳಿಸೋ ಹಾಗಿಲ್ಲ.ಕಾರಣ ಇವರ  ಹಿಂದೆ ನಡೆದವರಿಗೆ ಸ್ವಂತ ಜ್ಞಾನದ ಕೊರತೆಯಿದೆ.
ಸರ್ಕಾರ ಉಚಿತ ಕೊಟ್ಟು  ಸಾಲದ ಹೊರೆ  ಒಳಗೇ ಬೆಳೆದಾಗ ತೀರಿಸದೆ ಬೇರೆ ದಾರಿಯಿಲ್ಲ ಹೊರಗೇ  ಉಳಿಯಬೇಕಾಗಿದೆ.  ಕಾಲಚಕ್ರ ತಿರುಗುತ್ತದೆ ಇದನ್ನು ನಿಲ್ಲಿಸುವ ಶಕ್ತಿ ಮಾನವನಿಗಿಲ್ಲ. ಎಷ್ಟು ಹಿಂದಿನ ದ್ವೇಷ ಹೊರಹಾಕಿದರೂ  ಹಿಂದುಳಿದವರು ಮುಂದೆ ಬರೋದಿಲ್ಲ. ದ್ವೇಷದಿಂದ ಜ್ಞಾನಬರದು. ಹಣದಿಂದ ದ್ವೇಷ ಅಳಿಯದು.ಆದರೂ ತಾತ್ಕಾಲಿಕ ವಾಗಿ  ಶಾಂತಿ ಸಿಗಬಹುದು. ಋಣ ತೀರಿಸುವುದು ಕಷ್ಟ. ತಂತ್ರವಿರಲಿ ಕುತಂತ್ರವಾಗದಿರಲಿ. ಸ್ವತಂತ್ರ ಭಾರತಕ್ಕೆ ಆತ್ಮಾವಲೋಕನ ಅಗತ್ಯವಿದೆ. ಅಧ್ಯಾತ್ಮ  ದೂರದ ದೇಶಕ್ಕೆ ಪ್ರಚಾರವಾಗಿದ್ದರೂ ನಮ್ಮವರಲ್ಲಿಯೇ  ಇರದಿದ್ದರೆ ಆತ್ಮನಿರ್ಭರ ಭಾರತವಾಗದು. ಪ್ರಯತ್ನ ನಮ್ಮದು ಫಲ ಭಗವಂತನದು.
ಬ್ರಹ್ಮಜ್ಞಾನಿಗಳಾಗಿದ್ದ ಮಹರ್ಷಿಗಳು‌   ಸೃಷ್ಟಿ ಯ ರಹಸ್ಯ ಅರಿತರು. ಆ ಅರಿವಿನಲ್ಲಿ  ಎಲ್ಲಾ ನಡೆಯಲಾಗಿಲ್ಲ ಕಾರಣ  ಜ್ಞಾನದಲ್ಲಿ ವ್ಯತ್ಯಾಸವಾಗಿದೆ. ಒಬ್ಬರ ಜ್ಞಾನ
ಮತ್ತೊಬ್ಬರಿಗೆ ವಿಜ್ಞಾನವೆನಿಸಬಹುದು. ವಿಜ್ಞಾನ ಅಜ್ಞಾನವೂ ಆಗಬಹುದು. ಜ್ಞಾನ ವಿಜ್ಞಾನದ ನಡುವಿರುವ ಸಾಮಾನ್ಯ ಜ್ಞಾನ. ಮಾನವನಿಗೆ  ಅಗತ್ಯವಿದೆ. 

Tuesday, November 7, 2023

ಸರಿತಪ್ಪುಗಳ ಲೆಕ್ಕಾಚಾರದಲ್ಲಿ ಲಾಭ ನಷ್ಟಗಳ ಜೀವನ

ಹಲವು ಬಾರಿ  ನಾವು ಸರಿತಪ್ಪು ಲೆಕ್ಕಾಚಾರವನ್ನು  ಪ್ರತಿಫಲಾಪೇಕ್ಷೆ ಯಿಂದಲೇ ನಡೆಸುವುದರಿಂದ ಜೀವನದಲ್ಲಿ ಕಷ್ಟ ನಷ್ಟಗಳೇ ಹೆಚ್ಚಾಗಿರುತ್ತದೆ.ಕಷ್ಟನಷ್ಟಕ್ಕೆ ಕಾರಣವೇ ನಮ್ಮ ವ್ಯವಹಾರಿಕ ಜೀವನವಾದಾಗ ಅದರಲ್ಲಿ ಧರ್ಮ ವ ಅಳವಡಿಸಿ ಕೊಂಡರೆ  ಧರ್ಮದ ಪ್ರಕಾರ ಯಾವುದು ಸರಿ ತಪ್ಪು ಎನ್ನುವ ಸತ್ಯಜ್ಞಾನ  ಹೆಚ್ಚಾಗಿಸ್ವಲ್ಪ ಮಟ್ಟಿಗೆ ಋಣ
ಮುಕ್ತರಾಗಬಹುದು. ಸಂಪೂರ್ಣ  ಋಣ ತೀರಿಸಲು ಕಷ್ಟ. ಬಡವರಿಗೆ ‌ ಜೀವನ ನಡೆಸಲು ಹಣ ಬೇಕು.ಶ್ರೀಮಂತ ರಿಗೆ  ಜ್ಞಾನವಿರಬೇಕು. ಇವರಿಬ್ಬರ ನಡುವಿರುವ‌ ಮಧ್ಯಮವರ್ಗಕ್ಕೆ ಎರಡೂ ಅಲ್ಪ ಸ್ವಲ್ಪ ಇದ್ದರೂ‌ ಯಾವುದಕ್ಕೆ ಬೆಲೆಕಟ್ಟಬೇಕೆಂಬ ವ್ಯವಹಾರಕ್ಕೆ ಸಿಲುಕಿದರೆ ಅತಂತ್ರ ಜೀವನ. ಹೀಗಾಗಿ ಭೂಮಿ ಒಂದು ಮನುಕುಲಕ್ಕೆ ಮಾಧ್ಯಮವಾಗಿದೆ.ಇದರ ಮೇಲಿದ್ದು ಋಣ ತೀರಿಸಲು  ಆತ್ಮಜ್ಞಾನ ಬೇಕು.ಋಣ ಬೆಳೆಸಲು ಭೌತಿಕ ವಿಜ್ಞಾನ ವಿದೆ. ಇವೆರಡರ‌  ನಡುವಿರುವ ಮಾನವನೊಳಗೆ ಸಾಮಾನ್ಯ ಜ್ಞಾನವಿದ್ದರೆ  ಉತ್ತಮ. ಇದನ್ನೇ ಹಿಂದೆ ತಳ್ಳಿ ಮುಂದೆ ಹೋದರೆ  ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಕಷ್ಟ ನಷ್ಟದಿಂದ  ಜ್ಞಾನ ಬರುತ್ತದೆ. ಜ್ಞಾನದ ನಂತರವೇ ‌ಜೀವನದ ಉದ್ದೇಶ ಅರ್ಥ ಆಗೋದೆಂದು ನಮ್ಮ ಹಿಂದಿನ ಮಹಾತ್ಮರುಗಳು ತಿಳಿಸಿದ್ದಾರೆ. ಜ್ಞಾನ ನಮ್ಮ ಹಿಂದಿನವರದ್ದಾಗಿದ್ದು ತತ್ವದೆಡೆಗೆ  ನಡೆದಾಗ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದೆ ಯಾಕೆ  ಪರಮಾತ್ಮನ ಸೇವೆ ಮಾಡಬೇಕೆಂಬ ಅರಿವು ಹೆಚ್ಚುವುದು. ಹಾಗಂತ ಈಗಿನ ಸ್ವಾರ್ಥ ಪೂರ್ಣ ಜಗತ್ತಿನಲ್ಲಿ  ಹೀಗೆ ಬದುಕುವುದಕ್ಕೆ  ಸಂನ್ಯಾಸಿಗಳಿಗೇ ಸಾಧ್ಯವಾಗದೆ ಸರ್ಕಾರದ/ಹಿಂದೆ ‌ನಡೆದಿರುವಾಗ ಸಂಸಾರ ಸಾಗಿಸಬೇಕಾದ ಸಾಮಾನ್ಯಗತಿ ಹೇಗಿರಬಹುದು?  ಆದರೆ, ಭಾರತದಂತಹ ಮಹಾದೇಶದಲ್ಲಿ  ಜನಸಂಖ್ಯೆ ಬೆಳೆದಿದೆ ಜ್ಞಾನಿಗಳ ಸಂಖ್ಯೆಕುಸಿದಿದೆ. ಎಲ್ಲರೂ ಹಣಕ್ಕಾಗಿ ಹೊರಗೆ ಬರುವಾಗ  ಒಳಗಿದ್ದು  ಜ್ಞಾನಪಡೆಯೋದು ಬಹಳ‌ಕಷ್ಟದ ಕೆಲಸ.ಹಾಗೆ ಇದ್ದವರನ್ನೇ ಮೂಲೆಗುಂಪು ಮಾಡುವ ಮಂದಿ ಮನೆ ಒಳಗೆ ಹೊರಗಿರುವಾಗ  ಇಲ್ಲಿ ಸರಿತಪ್ಪಿನ ಲೆಕ್ಕಾಚಾರವಾಗಲಿ‌ ಚರ್ಚೆ ವಾದ ವಾಗಲಿ‌  ಅಧ್ಯಾತ್ಮಿಕವಾಗಿ ಮಾಡೋರಿಲ್ಲದೆ  ಅಜ್ಞಾನಕ್ಕೆ ಹೆಚ್ಚಿನ ಸಹಕಾರ ಬೆಲೆ ಸಿಗುತ್ತಾ  ಅಸತ್ಯ ಅನ್ಯಾಯ ಅಧರ್ಮ ವನ್ನು  ಸರಿ ಎಂದು ವಾದಿಸುವವರೂ ನ್ಯಾಯಾಧೀಶರು. ತಪ್ಪು ಎಂದುವಾದಿಸುವವರೂ ನ್ಯಾಯಾಧೀಶರೆ ಹಾಗಾದರೆ ನ್ಯಾಯ ಯಾವುದು? ಒಂದೇ ಸತ್ಯ ನ್ಯಾಯ,ಧರ್ಮ ಎಂದಾಗ ಈ ಪರವಿರೋಧ ಎಲ್ಲಿಂದ‌ಬಂತು? ಒಂದು ಒಳಗಿನ‌ನ್ಯಾಯ ಇನ್ನೊಂದು ಹೊರಗಿನ‌ನ್ಯಾಯ. ಒಳಗಿನ ನ್ಯಾಯವನ್ನು ಆತ್ಮಸಾಕ್ಷಿಯಿಂದಲೇ ತಿಳಿಯಬೇಕು.ಹೊರಗಿನ‌ ನ್ಯಾಯ  ಕಣ್ಣಿಗೆ  ಕಂಡರೂ  ಸರಿಯಿರದು. ಒಟ್ಟಿನಲ್ಲಿ ಹೇಳೋದಾದರೆ ಈ ನ್ಯಾಯಾಲಯ ಎನ್ನುವ ಪವಿತ್ರ  ಮಂದಿರದಲ್ಲಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಕುಳಿತಿರುವ‌ ನ್ಯಾಯದೇವತೆಯನ್ನು ಹೊರಗಿನಿಂದ ಅಳೆದು ತೂಗಿ  ತಮ್ಮ ಸ್ವಾರ್ಥ ಬೆಳೆಸಿಕೊಂಡು ಎಷ್ಟು ಹಣದಿಂದ ಅನ್ಯಾಯ ಗೆಲ್ಲಿಸಿದರೂ   ಅದರ ಫಲ ಹಿಂದಿರುಗಿ ಬರೋವಾಗ  ಹಣವೂ ಇರದು ಜ್ಞಾನವೂ ಇರದು. ಕರ್ಮಫಲವಷ್ಟೆ ಅನುಭವಿಸೋದು. ಯಾವುದೇ  ವ್ಯಕ್ತಿ ಶಕ್ತಿ,ವಸ್ತು,ಒಡವೆ,ವಸ್ತ್ರ, ವಿದ್ಯೆ,ಬುದ್ದಿಯನ್ನು  ರಾಜಕೀಯದಿಂದ  ಪಡೆಯುವುದಕ್ಕೂ ರಾಜಯೋಗದಿಂದ ಗಳಿಸುವುದಕ್ಕೂ ವ್ಯತ್ಯಾಸವಿದೆ. ಪಡೆದದ್ದು ತಾತ್ಕಾಲಿಕ ಗಳಿಸಿದ್ದು ಶಾಶ್ವತ. ದೇವರು ಕೊಟ್ಟಿದ್ದರಲ್ಲಿ  ನನ್ನ ಪಾಲೆಷ್ಟಿದೆ ಇತರರ ಪಾಲೆಷ್ಟಿದೆ ಎನ್ನುವ ಲೆಕ್ಕಾಚಾರ ಹಾಕಿದರೆ ನಮ್ಮ ಪಾಲಿರೋದಿಲ್ಲ.ಅದನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಹೆಚ್ಚು‌ ಇತರರಿಗೆ ಹಂಚಬಹುದಷ್ಟೆ.ಇದರಲ್ಲಿ ಜ್ಞಾನವೂ ಒಂದು. ಜ್ಞಾನ ಎಂದರೆ ತಿಳುವಳಿಕೆ.ಸದ್ವಿಚಾರ ತಿಳಿಸಿದರೆ ಯಾರೂ ಕೇಳೋದಿಲ್ಲವಾದ್ದರಿಂದ ಅದು ಬೆಳೆಯದು.ಅದಕ್ಕೆ ಕೆಟ್ಟವಿಚಾರ ಹಂಚುವುದು ಅಜ್ಞಾನವಾಗುತ್ತದೆ. ಯಾವುದನ್ನು ಹಂಚಬೇಕೋ ಅದನ್ನು ತಡೆದು ಬೇಡವಾದ್ದನ್ನು ಹಂಚಿದರೆ ಇದರ‌ ಪ್ರತಿಫಲವೂ ಬೇಡವಾಗಿರುತ್ತದೆ. ಹಾಗಂತ ಅದನ್ನು ತಡೆಯಲಾಗದು.ಬೆಳೆದು ನಿಂತವರನ್ನು ತಡೆಯೋ ಬದಲು ಮಕ್ಕಳನ್ನು  ಕೆಟ್ಟದಾರಿಗೆ ಹೋಗದಂತೆ ತಡೆಯುವುದು ಜ್ಞಾನ.
ಎಲ್ಲಾ ವಿಷಯಗಳಿಗೂ ಇದು ಅನ್ವಯಿಸುತ್ತದೆ. ನಮಗೆ ಸಿಗಬೇಕಾದ್ದನ್ನು  ಇತರರು  ಪಡೆದರೂ  ನೆಮ್ಮದಿಯಿಂದ  ಶಾಂತಿಯಿಂದ  ಇರುವವರೆ ನಿಜವಾದ ಜ್ಞಾನಿಗಳು. ಕಾರಣ ಅವರಿಗೆ ತಿಳಿದಿದೆ  ಇದೊಂದು ‌ಋಣ ಅದನ್ನು ತೀರಿಸಲೇಬೇಕೆಂದು. ಅದು ಸಿಗದಿದ್ದರೆ ಪರಮಾತ್ಮನ ಕರುಣೆಯಿದೆ ಎಂದರ್ಥ. ಹಿಂದಿನ ಕಾಲದಲ್ಲಿದ್ದಂತೆ ಈಗಿಲ್ಲ.
ಪಂಚಪಾಂಡವರಲ್ಲಿದ್ದ ಒಗ್ಗಟ್ಟು, ಕ್ಷಮೆ,ಕರುಣೆ,ಸಹನೆಯು ಕೌರವರಲ್ಲಿರಲಿಲ್ಲ.ಕಾರಣ ಪಾಂಡವರಲ್ಲಿ ಜ್ಞಾನವಿತ್ತು ಕೌರವ ರಲ್ಲಿ ಅಜ್ಞಾನವಿತ್ತು.  ಇದರ ಫಲವಾಗಿ  ಯುದ್ದವೇ ನಡೆಯಿತು. ಯಾವುದೇ ಆಗಲಿ ಅತಿಯಾದರೆ ಕಷ್ಟ ನಷ್ಟ.
ಭೂಮಿಯನ್ನಾಗಲಿ ಸ್ತ್ರೀ ಯನ್ನಾಗಲಿ ಅತಿಯಾಗಿ ಬಳಸಿದರೂ ಕಷ್ಟ  ಬೆಳೆಸದಿದ್ದರೂ ನಷ್ಟ.ಇತಿಮಿತಿಗಳನ್ನು ಕಾಯ್ದುಕೊಂಡು ಜೀವನ ನಡೆಸುವುದೊಂದೆ  ದಾರಿ. "ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ " ಆಕಾಶದಲ್ಲಿ ತಿರುಗುತ್ತಿರುವ ಭೂಮಿಯಲ್ಲಿ ಮನುಕುಲವಿದೆ. ಭೂಮಿಯ ಋಣ ತೀರಿಸಲು ಬಂದ ಮಾನವ ಇನ್ನಷ್ಟು ಋಣ ಏರಿಸಿಕೊಂಡಿದ್ದರೆ  ಶಾಂತಿ ಹೇಗೆ ಸಿಗಬೇಕು? ಅಸುರರಿಗೆ ಇದು ಅರ್ಥ ವಾಗದ ಕಾರಣ  ದೇವತೆಗಳನ್ನು ದ್ವೇಷ
ಮಾಡಬಹುದು.ಇದು ಅವರ ತಪ್ಪಲ್ಲ ಅಜ್ಞಾನವಷ್ಟೆ. ಇದನ್ನು ದೈವತ್ವದಿಂದ ಸರಿಪಡಿಸುವುದೇ ಧರ್ಮ. ಅಸುರರನ್ನೇ ದ್ವೇಷ ಮಾಡುತ್ತಾ ಮುಂದೆ ಹೋದರೆ  ಸರಿಪಡಿಸುವ‌ಬದಲು ತಾವೇ ಅಸುರರಾಗಬೇಕಾಗುತ್ತದೆ. ಕೆಲವರಿಗೆ ಸತ್ಯ ಅರ್ಥ ವಾಗದೆ ಅಸತ್ಯವನ್ನು ಸತ್ಯವೆಂದು ವಾದ ಮಾಡಿ ಗೆಲ್ಲುವರು.ಹಾಗಂತ ಸತ್ಯ ಗೆದ್ದಂತಾಗೋದಿಲ್ಲವಲ್ಲ. ಇದೇ ಇಂದಿನ‌ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯಾರೋ  ಹೆಸರು ಹಣ ಅಧಿಕಾರವನ್ನು ಅಧರ್ಮ ಅನ್ಯಾಯ ಅಸತ್ಯದಿಂದ ಪಡೆದು  ತಾನೇ ರಾಜ ಎಂದರೆ ಜನ ಒಪ್ಪುವರೆಂದರೆ  ಅಜ್ಞಾನವಷ್ಟೆ. ಇವನ‌ಹಿಂದೆ ನಡೆದವರೂ ಅಸತ್ಯ ಅನ್ಯಾಯ ಅಧರ್ಮದ ಪಾಲುದಾರರೆ ಆದಾಗ ಅದರ ಪ್ರತಿಫಲ ಎಲ್ಲಾ ಅನುಭವಿಸಲೇಬೇಕಷ್ಟೆ.
ಯಾಕೆ ಪ್ರಜಾಪ್ರಭುತ್ವದ  ಪ್ರಜೆಗಳಿಗೆ ಸಮಸ್ಯೆಯ ಸರಮಾಲೆ ಬೆಳೆದಿದೆ ಎಂದಾಗ  ಸಮಸ್ಯೆ ಹೊರಗಿನ ವಿಜ್ಞಾನದಿಂದ ಬೆಳೆಸಿ  ಒಳಗಿನ ಜ್ಞಾನ ಹಿಂದುಳಿದಿದೆ. ಪರಿಹಾರ  ಜ್ಞಾನದಿಂದ ಕಂಡುಕೊಳ್ಳಲು ವಿಜ್ಞಾನ ಬಿಡುತ್ತಿಲ್ಲ.  
ಗ್ರಹಣದ ವಿಚಾರದಲ್ಲೂ  ಹಣ ಮಾಡಬಹುದಾದರೆ  ಗ್ರಹಚಾರ  ಹೆಚ್ಚಾಗುವುದಿಲ್ಲವೆ? ಆದರೂ  ಗ್ರಹಗಳ ಚಲನವನ್ನು  ತಡೆಯೋ ಶಕ್ತಿ ಮಾನವನಿಗಿಲ್ಲ ಕಾರಣ ಭೂ ಗ್ರಹದ ಒಂದು ಸಣ್ಣ ಬಿಂದು ಗಾತ್ರದ ಜ್ಞಾನ ಅವನಲ್ಲಿದೆ
ಯಷ್ಟೆ.  ಒಂದು ಬಿಂದವೇ ಇಷ್ಟೆಲ್ಲಾ ಆಟವಾಡುವಾಗ  ಎಲ್ಲಾ ಬಿಂದುಗಳನ್ನು ತನ್ನೊಳಗೆ ಇಟ್ಟುಕೊಂಡಿರುವ  ಮಹಾಶಕ್ತಿ
ಯನ್ನು  ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಅದಕ್ಕಾಗಿ  ಪರ ವಿರೋಧದ ಗುಂಪು ಘರ್ಷಣೆ ಹೋರಾಟ,ಹಾರಾಟ,
ಮಾರಾಟದಲ್ಲಿಯೇ ಜೀವನ ಮುಗಿಯುತ್ತಿದೆ. ನಿರಂತರವಾಗಿ  ನಡೆದಿರುವ ಇದು ಯುಗಯುಗದ ಪುರಾಣ ಕಥೆಯಾಗಿ‌ದ್ದರೂ  ಸತ್ಯ ಒಂದೇ ಭೂಮಿ ಒಂದೇ ಆಗಿದೆ. ಜನನ ಮರಣದ ನಡುವಿರುವ ಜೀವನದ ಸತ್ಯ ತಿಳಿಯುವುದೇ‌  ಜೀವನದ ಮುಖ್ಯ ಗುರಿಯಾಗಿತ್ತು. ಆಗೋದನ್ನು ತಪ್ಪಿಸಲಾಗದು.ಆಗಿದ್ದಕ್ಕೆ ಕಾರಣವಿರುತ್ತದೆ. ಇದು ನಮ್ಮ ಅಜ್ಞಾನದಿಂದಲೋ  ಜ್ಞಾನದಿಂದಲೋ  ನಡೆದರೂ‌  ನಾವೇ ಕಾರಣವಾದಾಗ  ನಾವು ಬದಲಾದರೆ ಉತ್ತಮ  ಪ್ರತಿಫಲವಿದೆ. ಹೊರಜಗತ್ತನ್ನು ಅರಿಯೋ ಮೊದಲು ಒಳಜಗತ್ತನ್ನು ತಿಳಿದಿದ್ದರೆ ಉತ್ತಮ. ವಿಷ್ಣುವಿನವತಾರ ಪುರುಷರು ವಿಷ್ಣುವಿನ ಒಂದು ಮಹಾಶಕ್ತಿ ಎಂದರೆ ದ್ವೈತ ಸ್ವಯಂ ವಿಷ್ಣುವೇ ಎಂದರೆ ಅಧ್ವೈತ. ಇದನ್ನು ವಾದ ಮಾಡುತ್ತಾ ಕುಳಿತರೆ  ಉಪಯೋಗವಿಲ್ಲ ಒಂದೇ ಸತ್ಯ.

ಮೊದಲು ಮಾನವನಾಗು ನಂತರ ಮಹಾತ್ಮನಾಗಬಹುದು

ಇತ್ತೀಚೆಗೆ ನನ್ನ ಜೀವನದ ಕೆಲವು ಅನುಭವವನ್ನು  ಹಂಚಿಕೊಳ್ಳುವ ಲೇಖನ  ಬರೆಯುವ ಮನಸ್ಸಾಗುತ್ತಿದೆ. ಮೊದಲು ಇದರಲ್ಲಿಏನೂ ವಿಶೇಷವಿಲ್ಲ ಎಲ್ಲರಂತೆ  ನನಗೂ ಅನಿಸಿದೆಯಷ್ಟೆ ಎಂದು  ಅನಿಸಿತ್ತು ಆದರೆ ಈಗ ಎಲ್ಲಾ  ಓದಿ ತಿಳಿದದ್ದನ್ನು ಬರೆದರೆ ನನ್ನ ಅನುಭವಕ್ಕೆ ಬಂದ ಮೇಲೆ ಇಳಿಸುವ ಪ್ರಯತ್ನದಲ್ಲಿ ವಾಸ್ತವ ಸತ್ಯವಿರೋದು ವಿಶೇಷ ಎನಿಸಿತು. ಕಾರಣ ಪುರಾಣ ಭವಿಷ್ಯದ ನಡುವಿರುವ ವಾಸ್ತವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು  ವಾಸ್ತವತೆಯನ್ನು ಅರ್ಥ ಮಾಡಿಕೊಂಡು ತತ್ವವನರಿತರೆ ಭವಿಷ್ಯಕ್ಕೆ ಉತ್ತಮ. ನಾವೇ  ಸತ್ಯಾಸತ್ಯತೆ ತಿಳಿಯದೆ ಪುರಾಣ ವನ್ನು ಮುಂದೆ ಬಿಟ್ಟರೆ  ದೊಡ್ಡ ರಾಮಾಯಣ ಮಹಾಭಾರತ ಯುದ್ದ ಇನ್ನೊಂದು ರೂಪಪಡೆಯುತ್ತದೆ. ಒಟ್ಟಿನಲ್ಲಿ ಯುದ್ದಕ್ಕೆ ಕಾರಣವೇ ಅರ್ಧ ಸತ್ಯದ ರಾಜಕೀಯ. ಯುದ್ದ ಒಳಗೇ ನಡೆದಿದ್ದರೂ ಅದರಿಂದ ಶಾಂತಿ ಸಿಗದೆ ಹೊರಗಿನಯುದ್ದಕ್ಕೆ ಶಾಂತಿದೂತರಾಗಿ ಹೋದರೆ  ವ್ಯರ್ಥ ಪ್ರಯತ್ನ.
ಹಾಗಾಗಿ ವಾಸ್ತವದಲ್ಲಿ ನಾವು ಪ್ರಜಾಪ್ರಭುತ್ವದ ಸಾಮಾನ್ಯ ಪ್ರಜೆಯಾಗಿದ್ದು ದೇಶದೊಳಗೆ ಇದ್ದು ನಮ್ಮ ಮೂಲದ ಶಿಕ್ಷಣ ಧರ್ಮ ಕರ್ಮ ದ ಬಗ್ಗೆ ಎಷ್ಟು ತಿಳಿಯಲಾಗಿದೆ? ಎಷ್ಟು ಅಳವಡಿಸಿಕೊಂಡು ಸತ್ಯ ಅರ್ಥ ವಾಗಿದೆ? ತತ್ವದೆಡೆಗೆ  ನಡೆದೆವೋ ತಂತ್ರದೆಡೆಗೆ ನಡೆದೆವೋ?  ನಾವು ಯಾರ ಆಳಾಗಿರುವೆವೋ ಅವರ ಋಣ ತೀರಿಸಲು  ಸೇವೆ ನಡೆದಿದೆಯೋ ಅಥವಾ ಅವರಿಂದಲೇ ಸೇವೆ ಬಯಸಿದೆವೋ? ಪ್ರಜಾಪ್ರಭುತ್ವದ ಪ್ರಜೆಗಳು ದೇಶ ಸೇವೆಗೆ  ಮನೆಯಿಂದ ಹೊರಬರುವ ಮೊದಲು ಮನೆಯೊಳಗೆ  ಸೇವೆಯ ಅರ್ಥ ತಿಳಿದಿರಬೇಕಿತ್ತು. ಸರ್ಕಾರದ ಕೆಲಸ ದೇವರ ಕೆಲಸ ಎಂದಾಗ  ದೇವರ ಕೆಲಸದಲ್ಲಿ ಭ್ರಷ್ಟಾಚಾರ ವಿರುವುದೆ?
ದೇಶಸೇವೆಯೇ ಈಶಸೇವೆ ಎಂದಾಗ  ಸೇವೆಯಲ್ಲಿ ತೃಪ್ತಿ ಮುಕ್ತಿ ಸಿಕ್ಕಿದೆಯೆ?  ಋಣ ಎಂದರೆ ಸಾಲ. ಈ ಸಾಲ ತೀರಿಸಲು ಸೇವೆ ಮಾಡಬೇಕು. ಭೂಮಿಯ ಋಣ ತೀರಿಸಲು ಭೂತಾಯಿ ಸೇವಕರಾಗಬೇಕು.ತಾಯಿ ಋಣ ತೀರಿಸಲು ತಾಯಿ ಸೇವೆ , ದೇಶದ ಋಣಕ್ಕೆ ದೇಶಸೇವೆ,ಪರಮಾತ್ಮನ ಋಣ ತೀರಿಸಲು ಪರಮಾತ್ಮನ ಸೇವೆ ಆಗಬೇಕು. ಆದರೆ ಇದರಲ್ಲಿ ಸ್ವಾರ್ಥ ಅಹಂಕಾರ ಪ್ರತಿಫಲಾಪೇಕ್ಷೆ ಇರಬಾರದೆನ್ನುವ ಸತ್ಯ ಭಗವಂತನೇ ತಿಳಿಸಿರುವಾಗ ಎಲ್ಲಿ ಸೇವೆಯಾಗಿದೆ? ಎಲ್ಲಿ ಸೇವೆಯಲ್ಲಿ ಲೋಪಧೋಷಗಳಾಗಿದೆ ಎನ್ನುವ ಬಗ್ಗೆ ಧಾರ್ಮಿಕ,ಶೈಕ್ಷಣಿಕ, ಆರ್ಥಿಕ/ಸಾಮಾಜಿಕ ಕ್ಷೇತ್ರದಲ್ಲಿರುವ‌ ಪ್ರತಿಯೊಬ್ಬರೂ  ಆತ್ಮಾವಲೋಕನ ಮಾಡಿಕೊಂಡರೆ  ಸಾಮಾನ್ಯಜ್ಞಾನವನ್ನು ಸಾಮಾನ್ಯ
ಸತ್ಯವನ್ನು, ಸಾಮಾನ್ಯ ಸ್ತ್ರೀ ಪುರುಷರನ್ನು, ಮಕ್ಕಳ
ಜ್ಞಾನವನ್ನು  ಹಿಂದಕ್ಕೆ ತಳ್ಳುತ್ತಾ ತಾನೇ ವಿಶೇಷ ವ್ಯಕ್ತಿ ಎನ್ನುವ ಅಹಂಕಾರ ಸ್ವಾರ್ಥ ದಲ್ಲಿ  ಮುಂದಿನ ಭವಿಷ್ಯ ನಿರ್ಣಯ ಮಾಡಲು ಇಂದಿನ ಸ್ಥಿತಿಯನ್ನು ಹದಗೆಡಿಸಿಕೊಂಡಿರುವ  ಅಜ್ಞಾನ ಕಾರಣವಾಗಿದೆ ಎನ್ನಬಹುದು.ಈಗಲೂ ನಿರಂತರವಾಗಿ  ಶೋಷಣೆಗಳು ನಡೆದಿವೆ. ಇದು ಅಜ್ಞಾನದ ಸಂಕೇತವಷ್ಟೆ. ಯಾರನ್ನೂ ಶೋಷಣೆ ಮಾಡಿ  ನಮ್ಮ ಆತ್ಮಕ್ಕೆ ಮುಕ್ತಿ ಸಿಗುವುದೆ? ಅಥವಾ ಅಸತ್ಯ ಅಧರ್ಮ ಅನ್ಯಾಯ ಕ್ಕೆ ಸಹಕಾರ ಕೊಟ್ಟು ಹಣಗಳಿಸಿ ಧರ್ಮ ಕಾರ್ಯ ನಡೆಸಿದರೆ‌ ಪರಮಾತ್ಮನಿಗೆ ತಲುಪುವುದೆ? ಒಟ್ಟಿನಲ್ಲಿ ಮಾನವ ತಾನು ತೋಡಿಕೊಂಡ ಹೊಂಡದಲ್ಲಿ ತಾನೇ ಬಿದ್ದರೂ ಅದಕ್ಕೆ ಕಾರಣ  ಅಜ್ಞಾನವಾಗಿರುತ್ತದೆ. ಪ್ರತಿಯೊಬ್ಬರಲ್ಲಿಯೂ ಅಡಗಿರುವ  ಜ್ಞಾನವನ್ನು  ಒಳಹೊಕ್ಕಿ ಗುರುತಿಸಿಕೊಳ್ಳಲು ಮಕ್ಕಳಿಗೆ ಪೋಷಕರು ಬಿಡೋದಿಲ್ಲ ಪೋಷಕರಿಗೆ ಸಮಾಜ ಬಿಡೋದಿಲ್ಲ. ಸಮಾಜಕ್ಕೆ  ರಾಜಕೀಯ ಬಿಡೋದಿಲ್ಲ ರಾಜಕೀಯಕ್ಕೆ ಮಾಧ್ಯಮಗಳು ಬಿಡೋದಿಲ್ಲ. ಹಾಗಾದರೆ ಎಲ್ಲದಕ್ಕೂ ಕಾರಣ ಮಾಧ್ಯಮವೆಂದರೆ  ಸರಿಯೆ ತಪ್ಪೆ? ಮಾಧ್ಯಮ ಬೆಳೆದಿರೋದೆ  ಜನರಿಂದಾದಾಗ  ಜನ ಎಲ್ಲಿಯವರೆಗೆ  ಒಳಸತ್ಯ ಬಿಟ್ಟು ವಾಸ್ತವತೆಯನ್ನು  ಮಾಧ್ಯಮದಿಂದ ಅಳೆಯುವರೋ ಅಲ್ಲಿಯವರೆಗೆ  ಪರಿಸ್ಥಿತಿ ಸುಧಾರಿಸದು.ಮಾಧ್ಯಮವೇ  ಒಂದು ಮಧ್ಯವರ್ತಿಗಳ ತಾಣ ಅದರೊಳಗೆ ಹೋಗಿ ಕುಳಿತು ವಾದವಿವಾದ ಮಾಡುವ ಮಧ್ಯವರ್ತಿಗಳು  ಎಷ್ಟು ಸತ್ಯವಂತರು ಧರ್ಮ ವಂತರು ಇರಬಹುದು? ಇದ್ದರೂ ಅವರ ಸಂಪೂರ್ಣ ಸತ್ಯ ಹೊರಬರದು. ಅರ್ಧ ಸತ್ಯದಿಂದ  ಬದಲಾವಣೆ ಕಷ್ಟವಿದೆ. ಸರ್ವಜ್ಞ ರಾಗೋದಕ್ಕೆ ಪೂರ್ಣ ಸತ್ಯ ಅಗತ್ಯವಿದೆ. ಹೀಗಾಗಿ ವಾಸ್ತವ ಸತ್ಯ ಪುರಾಣ ಭವಿಷ್ಯದ ನಡುವಿರೋವಾಗ ಹಿಂದಿನ ಧರ್ಮ ಕ್ಕೂ ಈಗಿನ ಆಚರಣೆಗೂ ಮುಂದಿನ  ಬದಲಾವಣೆಗೂ  ಪರಸ್ಪರ ಹೊಂದಿಕೆಯಾದರೆ ಉತ್ತಮ. ಹೊಂದಾಣಿಕೆಯೇ ಇಲ್ಲದೆ ಹೋದರೆ ಅಧಮ. ಸತ್ಯ ಒಂದೇ ಅದು ಬದಲಾಗದು.
ಬದಲಾಗೋದು ಮಾನವನ ಮನಸ್ಸು.ಆತ್ಮವಲ್ಲ.ಹೀಗಾಗಿ ಆತ್ಮಸಂಶೋಧನೆಯಿಂದಷ್ಟೆ ಧರ್ಮ ಸ್ಥಾಪನೆ. ಇದಕ್ಕೆ ಹೊರಗಿನ ರಾಜಕೀಯ ತಿಳಿಯುವ ಮೊದಲು
ರಾಜಯೋಗದ  ವಿಚಾರ ಅರ್ಥ ವಾದರೆ ಯೋಗ.
ಇಲ್ಲವಾದರೆ ಭೋಗದಿಂದ  ರೋಗದ ಸಮಾಜ ನಿರ್ಮಾಣ.
ಇತ್ತೀಚೆಗೆ ಸಾಕಷ್ಟು  ವೈಧ್ಯಕೀಯ ಸೇವಾಕೇಂದ್ರ ಬೆಳೆದಿದೆ.
ಅದರೊಳಗೆ ಸೇವೆ ಹೇಗೆ ನಡೆದಿದೆ ಎನ್ನುವ ಸತ್ಯ
ತಿಳಿಯುತ್ತಿದೆ.
ಹಾಗೆಯೇ ಧಾರ್ಮಿಕ ಸೇವಾಕೇಂದ್ರಗಳೂ ಲೆಕ್ಕವಿಲ್ಲದಷ್ಟಿದೆ ಧರ್ಮ ಎತ್ತ ಸಾಗಿದೆ?  ಕಾರಣವಿಷ್ಟೆ ಸೇವೆಯ  ಮಾರ್ಗ ಸರಿಯಿಲ್ಲ. ಭ್ರಷ್ಟಾಚಾರ ದ ಹಣದಿಂದ ಎಷ್ಟು ಸೇವೆ ಮಾಡಿದರೂ ಭ್ರಷ್ಟರಿಗೆ ಶಕ್ತಿ.ಹಣದಿಂದ ಸೇವೆ‌ ಮಾಡುವಾಗ ಜ್ಞಾನವಿರಬೇಕು.ಸತ್ಪಾತ್ರರಿಗೆ ದಾನಮಾಡಬೇಕೆನ್ನುವರು.
ಅಪಾತ್ರರಿಗೆ‌ ಕೊಟ್ಟರೆ ವ್ಯರ್ಥ.
ಒಂದು ಕುಟುಂಬದಲ್ಲಿ  ಸದಸ್ಯರುಗಳ ಸಮಸ್ಯೆ ಬೇರೆ ಬೇರೆ ಆಗಿರುತ್ತದೆ. ಹಾಗಂತ  ಸಮಸ್ಯೆಯನ್ನು ಹೊಂದಿರುವ  ವ್ಯಕ್ತಿಗೆ  ಸಹಕರಿಸದೆ ಹೊರಗಿನವರಿಗೆ ಸಹಕಾರ ನೀಡಿದರೆ ಧರ್ಮ ವೆ? ಹೊರಗಿನವರ ಜೊತೆಗೆ ಒಳಗಿನವರ ಸಮಸ್ಯೆಯೂ ಪರಿಹಾರವಾಗುವ  ಯೋಜನೆಯನ್ನು  ಸರ್ಕಾರ ಮಾಡಲು ಕಷ್ಟ. ದೇಶದ ಸಾಲ ತೀರಿಸಲು ದೇಶದ ಪ್ರಜೆಗಳೇ ದುಡಿಯಬೇಕಿತ್ತು. ಹೊರಗಿನವರನ್ನು ದುಡಿಸಿ‌
ಒಳಗಿದ್ದವರಿಗೆ ಉಚಿತವಾಗಿ ತಿನ್ನಿಸಿದರೆ  ಸೋಮಾರಿಗಳಾಗಿ  ರೋಗಿಗಳು ಬೆಳೆಯುವರಲ್ಲವೆ? ಇದರಲ್ಲಿ ತಪ್ಪು ಯಾರದ್ದು? ಕುಳಿತು ತಿಂದವರದ್ದೆ ತಿನ್ನಿಸಿದವರದ್ದೆ? ಇಬ್ಬರ ತಪ್ಪು ಮೂರನೆಯವರಿಗೆ  ಲಾಭವಾದಾಗ   ಲಾಭ ಮಾಡಿಕೊಂಡು ಲೋಭಿಗಳು ಬೆಳೆಯುವರು. ಕಾಮ,ಕ್ರೋಧ ಲೋಭ ಮೋಹ ಮಧ ಮತ್ಸರಗಳಿಂದ‌  ತಪ್ಪಿಸಿಕೊಂಡು  ಜೀವನ ನಡೆಸೋದು ಕಷ್ಟ.ಎಂತೆಂತಹ  ಜ್ಞಾನಿಗಳೇ ಎಡವಿರುವಾಗ ಸಾಮಾನ್ಯರ ಪಾಡೇನು? ಆದರೂ  ನಾವಿರುವ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ.
ಸ್ವತಂತ್ರ ಜ್ಞಾನ ಬಳಸಿ ಸ್ವತಂತ್ರ ವಿದ್ಯೆ ಗಳಿಸಿ ಸ್ವತಂತ್ರ ಜೀವನ ನಡೆಸುವುದಕ್ಕೆ ಸಾಮಾನ್ಯಜ್ಞಾನ ಅಗತ್ಯ.ಅದೇ ಉತ್ತಮ ದಾರಿಹಿಡಿದರೆ ವಿಶೇಷಜ್ಞಾನ ಒಳಗೇ ಕಾಣುವುದು.ಇದನ್ನು ಸದ್ಬಳಕೆ ಮಾಡಿಕೊಂಡರೆ ಸಂತೃಪ್ತಿ,
ಸಂತೋಷ, ಸಮಾಧಾನ,ಶಾಂತಿ ಕೊಡುತ್ತದೆ.
ಇದನ್ನು  ತಿಳಿದುಕೊಳ್ಳಲು  ಸತ್ಯವೇ ದೇವರಾದರೆ ಉತ್ತಮ. 
ಮಕ್ಕಳನ್ನು ದೇವರೆಂದರು ಕಾರಣ ಅವರಲ್ಲಿ ಸತ್ಯ ನಿಷ್ಕಲ್ಮಶ ಹೃದಯವಿರುತ್ತದೆ.  ಆದರೆ ಅವರಿಗೆ ಪೋಷಕರೆ ದೆವ್ವಗಳಂತೆ ಕಾಡಿದರೆ  ಎಲ್ಲಿಗೆ ಹೋಗಬೇಕು?. ಕಲಿಗಾಲದ ಪ್ರಭಾವದಲ್ಲಿ ಯಾರಲ್ಲಿ ಯಾವ‌ ಮಹಾತ್ಮ,ಪ್ರೇತಾತ್ಮ,ಭೂತಾತ್ಮ, ದೇವಾತ್ಮ,
ಪರಮಾತ್ಮನಿರುವರೋ  ಹೊರಗಿನ ಕಣ್ಣಿಗೆ ಕಾಣದೆ  ಎಲ್ಲಾ ನಾನೇ ನನ್ನಿಂದಲೇ ನಡೆದಿದೆ ಎನ್ನುವ ಭ್ರಮೆಯಲ್ಲಿ  ಜೀವನ‌
ನಡೆಸಿರುವಾಗ  ಪರಮಸತ್ಯ ತಿಳಿದವರೂ ತಿಳಿಸಲಾಗದು.
ತಿಳಿಸಿದರೂ ಅನುಭವಿಸದೆ ಅರ್ಥ ವಾಗದು. ಅರ್ಥ ವಾದ ಮೇಲೆ ಹೇಳಿಕೇಳಿ ಉಪಯೋಗವಿದ್ದರೆ  ಸರಿ ಇಲ್ಲವಾದರೆ ಸುಮ್ಮನಿರೋದು ಸರಿ. ಆದರೂ ಕೋಟ್ಯಾಂತರ ಜೀವರಾಶಿಗಳಲ್ಲಿ‌ ಒಬ್ಬರಿಗಾದರೂ ತಲುಪಿದರೂ  ಸತ್ಯ ಬೆಳೆಯುತ್ತದೆ. ಎಲ್ಲರೂ  ಒಂದೇ ಶಕ್ತಿಯ ಅಧೀನದಲ್ಲಿರುವ ಸಣ್ಣ ಕಣಗಳಷ್ಟೆ. ಆ ಕಣವನರಿತರೆ  ಶಕ್ತಿಯ ದರ್ಶನ.  ಅಣು ಪರಮಾಣುಗಳನ್ನು ಮನಸ್ಸಿಗೆಬಂದಂತೆಬಳಸಬಹುದಾದರೂ
 ಅದರ ಪ್ರತಿಫಲ  ತಿರುಗಿ ಬರೋವಾಗ ಅದೇ ಮನಸ್ಸಿನಿಂದ ಸ್ವೀಕರಿಸುವ ಶಕ್ತಿ‌ಮಾನವನಿಗಿರದು. ಹಾಗೆಯೇ ಅನೇಕ ದೇವಾನು ದೇವತೆಗಳನ್ನು ಸೃಷ್ಟಿ ಮಾಡಿಕೊಂಡು 
ಬೇಡಬಹುದು.ಕೊಟ್ಟ ಮೇಲೆ ಸದ್ಬಳಕೆ ಮಾಡಿಕೊಳ್ಳುವ ಜ್ಞಾನವಿದ್ದರೆ ಸರಿ ದುರ್ಭಳಕೆ ಮಾಡಿಕೊಂಡು ದೇವರನ್ನೇ ಆಳಲು ಹೊರಟರೆ ಅಸುರರಾದಂತಾಯಿತು. ಎಲ್ಲಿರುವರು ದೇವಾಸುರರು? ಇದೊಂದು ಗುಣವಷ್ಟೆ. ಶಕ್ತಿಯನ್ನು  ಹೇಗೆ ಬಳಸಿದರೂ ಫಲವಿದೆ. ಒಳ್ಳೆಯದಕ್ಕೆ ಬಳಸಿದರೆ ಒಳ್ಳೆಯದಾಗುತ್ತದೆ.
ಕೆಟ್ಟದ್ದಕ್ಕೆ ಬಳಸಿ ಅಹಂಕಾರ ಸ್ವಾರ್ಥ ಮಿತಿ ಮೀರಿದರೆ ಅಧೋಗತಿ.  ಮಕ್ಕಳಿಗಾಗಿ ಆಸ್ತಿ ಮಾಡುವ ವ್ಯವಹಾರಕ್ಕೆ ಇಳಿದು ಮಕ್ಕಳ ಜ್ಞಾನ ಕುಸಿದರೆ ತಕ್ಕ ಶಾಸ್ತಿ ಮಕ್ಕಳು ದೊಡ್ಡವರಾದ ನಂತರ ಮಾಡುವರು. ಜ್ಞಾನದಿಂದ ಆಸ್ತಿ ಮಾಡಬೇಕು. ಜ್ಞಾನವೇ ಆಸ್ತಿಯಾಗಬೇಕು ಅದರಲ್ಲೂ ಅಧ್ಯಾತ್ಮ ವಿಜ್ಞಾನವಿದ್ದರೆ ಶಾಂತಿಯ ಜೀವನ.
ಹಣವಿಲ್ಲದೆ ಏನೂ ಸಾಧಿಸಲಾಗದು. ಆದರೆ ದಾಸಸಂತರು ಹಣ ಬಿಟ್ಟುಕೊಟ್ಟು ಜ್ಞಾನಪಡೆದರು.ಇಂದು ಹಣಕ್ಕಾಗಿ ಜ್ಞಾನ ಬಿಟ್ಟು ಹೊರನಡೆದವರಿಗೆ ಹಿಂದಿರುಗಲಾಗದ ಪರಿಸ್ಥಿತಿಗೆ ಸರ್ಕಾರ ಕಾರಣವೆಂದರೆ  ಪ್ರಜೆಗಳ ಸಹಕಾರವೇ  ಕಾರಣ.ಅಂದರೆ ನಾವೇ ಕಾರಣವಾದಾಗ ಬದಲಾವಣೆ ನಮ್ಮಿಂದ ಆಗಬೇಕಷ್ಟೆ. ಅದೇ ಕಷ್ಟ.ಕಷ್ಟಪಟ್ಟರೆ ಸುಖವಿದೆ ಎಂದರು  ಶ್ರಮ ಜೀವಿಗಳು. ಸನಾತನಧರ್ಮ  ಸರಳ
ಜೀವನದಲ್ಲಿದೆ. ಎಂದಾಗ ಹಿಂದಿರುಗಿ ಹೋಗಲು ಸಾಧ್ಯವೆ?
ಆತ್ಮವಿಶ್ವಾಸಕ್ಕೂ ಅಹಂಕಾರಕ್ಕೂ ವ್ಯತ್ಯಾಸವಿಷ್ಟೆ. ಒಂದು ಒಳಗಿನ ಶಕ್ತಿ ಇನ್ನೊಂದು ಹೊರಗಿನ ಶಕ್ತಿ.  ವಾಸ್ತವದಲ್ಲಿ  ನಮ್ಮ ಆತ್ಮವಿಶ್ವಾಸ  ಅಹಂಕಾರದೆಡೆಗೆ ಹೊರಟಿರುವ‌ ಕಾರಣ ಮನುಕುಲಕ್ಕೆ  ಸಮಸ್ಯೆ ಮಿತಿಮೀರಿದೆ.ಸಮಸ್ಯೆ ಒಳಗಿನಿಂದ ಬೆಳೆದಿದ್ದರೆ ಪರಿಹಾರ ಒಳಗೇ ಹುಡುಕಿದರೆ ಸಿಗಬಹುದು.
ಹೊರಗಿಲ್ಲ.ಇದೊಂದು ಸಾಮಾನ್ಯ ಜ್ಞಾನವಷ್ಟೆ.