ಇತ್ತೀಚಿನ ದಿನಗಳಲ್ಲಿ ತತ್ವವನ್ನು ವಾದದಿಂದ ಅರ್ಥ ಮಾಡಿಕೊಳ್ಳಲು ಹೋಗಿ ದ್ವೇಷ ಹೆಚ್ಚಾಗಿದೆ. ವಾಸ್ತವ ಸತ್ಯವೇ ಬೇರೆ ಪುರಾಣದ ತತ್ವವೇ ಬೇರೆ ಎನ್ನುವಂತಹ ಪರಿಸ್ಥಿತಿಯಲ್ಲಿ
ವಾಸ್ತವದಲ್ಲಿ ನಾನ್ಯಾರು ಪ್ರಶ್ನೆಗೆ ಉತ್ತರ ಹೊರಗೆ ಹುಡುಕಿ ನಾವ್ಯಾರು ಎನ್ನುವ ಸತ್ಯವನ್ನು ಹಿಂದೆ ಬಿಟ್ಟು ನಾನೇ ಸರಿ ಎನ್ನುವ ಅಹಂಕಾರ ಬೆಳೆದರೆ ಅದ್ವೈತ ದಲ್ಲಿ ದ್ದ ನಾನೆಂಬುದಿಲ್ಲ ಎನ್ನುವುದು ಅರ್ಥ ವಾಗದು. ಇದಕ್ಕೆ ಕಾರಣವೇ ಭೌತಿಕಾಸಕ್ತಿ. ಭೌತಿಕದಲ್ಲಿದ್ದು ಅಧ್ಯಾತ್ಮ ಅಧ್ಯಯನ ಮಾಡುವಾಗ ನಿಸ್ವಾರ್ಥ ನಿರಹಂಕಾರವಿದ್ದು ಪ್ರತಿಫಲಾಪೇಕ್ಷೆ ಯಿಲ್ಲದ ವ್ಯವಹಾರಿಕವಲ್ಲದ ತತ್ವವನ್ನು ಅಳವಡಿಸಿಕೊಂಡರೆ ಉತ್ತಮ ಸ್ಥಿತಿ. ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳಿಗೇ ಅಧ್ಯಾತ್ಮ ಶಿಕ್ಷಣ ನೀಡದೆ ವ್ಯವಹಾರಕ್ಕೆ ಬಳಸಿದರೆ ತತ್ವವಲ್ಲ ತಂತ್ರವಾಗಿರುತ್ತದೆ. ತತ್ವಜ್ಞಾನ ಅಧ್ಯಾತ್ಮ ತಂತ್ರಜ್ಞಾನ ಭೌತಿಕಸತ್ಯ. ಎಲ್ಲಾ ತತ್ವಜ್ಞಾನಿಗಳಲ್ಲಿ ಸ್ಥಿತಪ್ರಜ್ಞತೆ ಇತ್ತು. ಆ ಕಾಲಕ್ಕೆ ಬೇಕಾದ ತತ್ವ ವನ್ನು ತಿಳಿದು ನಡೆದರು.ಈಗ ಎಲ್ಲಾ ಓದಲು ಇದೆ ನಡೆಯಲಾಗದ ಪ್ರಚಾರವಷ್ಟೆ.ಅಹಂ ಬ್ರಹ್ಮಾಸ್ಮಿ .ನಾನೇ ಬ್ರಹ್ಮ ನಾನೇ ಮಾಡಿಕೊಂಡ ಸೃಷ್ಟಿ ಯು ಸತ್ಯವಿಲ್ಲದೆ ಧರ್ಮ ವಾಗದೆ ಇರೋವಾಗ ಸ್ಥಿತಿಗೂ ನಾನೇ ಕಾರಣ,ಲಯವೂ ನನ್ನಿಂದಲೇ ಆಗಬೇಕಿದೆ ಅಲ್ಲವೆ? ನಾಟಕದಲ್ಲಿ ಪಾತ್ರಧಾರಿ ಆಗಬಹುದು ಸೂತ್ರಧಾರನ ಮರೆಯಬಾರದಿತ್ತು. ಇದೇ ಭಾರತೀಯರ ಸಮಸ್ಯೆಗೆ ಕಾರಣವೆಂದರೆ ಯಾರೂ ಒಪ್ಪೋದಿಲ್ಲ.ಕಾರಣವಿಷ್ಟೆ ಸತ್ಯ ಕಠೋರವಾಗಿರುತ್ತದೆ. ಸತ್ಯ ಹಿಂದುಳಿದಂತೆಲ್ಲಾ ಕಠೋರತೆ ಹೆಚ್ಚಾಗುತ್ತದೆ. ಅದಕ್ಕೆ ಸತ್ಯದ ಜೊತೆಗೆ ಧರ್ಮ ವಿದ್ರೆ ಸಮಾನತೆ,ಶಾಂತಿ,ತೃಪ್ತಿ, ಮುಕ್ತಿ ಎಂದರು. ಅದ್ವೈತ ಒಂದೇ ಎನ್ನುವ ಸಮಾನವೆನ್ನುವ,
ಏಕತೆ,ಐಕ್ಯ್ಯತೆ ಎನ್ನುವತ್ತ ನಡೆದರೆ ಅದರೊಳಗಿನ ದ್ವೈತವೂ ಜೊತೆಗಿರಬಹುದು. ನಾನೇ ಸರಿ ಎಂದರೆ ಬೇರೆ ಬೇರೆಯಂತೆ.ಸಾಮಾನ್ಯಜ್ಞಾನದ ಕೊರತೆಯಿದೆ.
ಇದೊಂದು ಸಾಮಾನ್ಯಜ್ಞಾನವುಳ್ಳ ಸಾಮಾನ್ಯ ಪ್ರಜೆಯ ಅನುಭವದ ಸತ್ಯ. ಇಲ್ಲಿ ತತ್ವದ ಬದಲು ತಂತ್ರವೇ ತನ್ನ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದೆ.ಇದಕ್ಕೆ ಸಾಮಾನ್ಯಜ್ಞಾನ ಬಿಟ್ಟ ಜನರ ಸಹಕಾರವೇ ಕಾರಣವಾಗಿ ತಿರುಗಿ ಪ್ರಜೆಗಳಿಗೇ ಸರಿಯಾದ ಪಾಠ ಕಲಿಸುತ್ತಿದೆ. ಪಾಠ ಕಲಿಯದವರು ತಿರುಗಿ ತಿರುಗಿ ತಂತ್ರವನ್ನೇ ಬಳಸುತ್ತಾ ತನ್ನ ಜೊತೆಗೆ ಮಕ್ಕಳು ಮೊಮ್ಮಕ್ಕಳ ದಾರಿತಪ್ಪಿಸಿದರೆ ಕಷ್ಟ ನಷ್ಟ ಯಾರಿಗೆ?
ರಾಜಪ್ರಭುತ್ವದ ಧಾರ್ಮಿಕ ರಾಜಕೀಯದಲ್ಲಿ ಸ್ವಯಂ ಗುರುವೇ ದೇವರಾಗಿದ್ದರು. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಗುರುವಿಲ್ಲದವರ ಗುರಿಯಿಲ್ಲದವರ ರಾಜಕೀಯವೇ ಪ್ರಜೆಗಳಿಗೆ ದಾರಿತಪ್ಪಿಸಿದೆ. ಯಾವಾಗ ಸತ್ಯ ತಿಳಿಯುವುದೋ ಆಗ ಧರ್ಮ ರಕ್ಷಣೆಆಗುವುದು.ಆದರೆ ಸತ್ಯ ತಿಳಿಯುವುದಕ್ಕೇ ತಯಾರಿಲ್ಲದ ಮಧ್ಯವರ್ತಿಗಳು ಸಾಕಷ್ಟು ರೀತಿಯಲ್ಲಿ ನಾಟಕವಾಡುತ್ತಾ ತಮ್ಮ ವ್ಯವಹಾರಕ್ಕೆ ಜೋತು ಬಿದ್ದರೆ ಸತ್ಯವಿಲ್ಲದೆ ದೇವರನ್ನು ಕಾಣಬಹುದೆ? ಸತ್ಯವೇ ದೇವರು ಎನ್ನುವುದೇ ಸುಳ್ಳಾಯಿತಲ್ಲವೆ?
ಬ್ರಹ್ಮ ಸತ್ಯವಾದರೆ ಕಂಡವರೆಲ್ಲಿ? ಕಂಡವರ ತತ್ವ ಬಿಟ್ಟತಂತ್ರ ಬೆಳೆಯಿತು. ತಂತ್ರವಿದ್ದರೂ ಕುತಂತ್ರವಿರಬಾರದು. ನಮ್ಮ ಜೀವನವೇ ಅತಂತ್ರಸ್ಥಿತಿಗೆ ತಲುಪಿಸುತ್ತದೆ. ಇದೇ ಸ್ವತಂತ್ರ ವಾಗಿರುವ ವಾಸ್ತವ ಸತ್ಯ. ಹಾಗಾದರೆ ನಾನ್ಯಾರು?
ನಾವ್ಯಾರು? ಪ್ರಶ್ನೆಗೆ ಉತ್ತರ ಹೊರಗೆ ನಾವು ಭಾರತೀಯರು.
ಒಳಗಿರುವ ವಿಷಯಜ್ಞಾನದ ಮೇಲೇ ನಾನಿರೋದು. ಎಲ್ಲಾ ಬ್ರಹ್ಮನಾದರೆ ಸೃಷ್ಟಿ ಮಾಡುವ ಯೋಗ ನಮಗಿದೆಯೆ? ಸೃಷ್ಟಿ ಯ ಸಣ್ಣ ಕಣವಾಗಿರುವ ನಾನೇ ಇಷ್ಟು ಸೃಷ್ಟಿ ಮಾಡಿದರೆ ಉಳಿದ ಕಣಗಳ ಗತಿಯೇನು? ಒಟ್ಟಿನಲ್ಲಿ ಭಗವದ್ಗೀತೆಯನ್ನು ಪಠಣ,ಶ್ರವಣ,ಮನನ ಮಾಡಿಕೊಂಡರೆ ಅಂದಿನ ರಾಜಕೀಯದ ಕ್ಷತ್ರಿಯ ಧರ್ಮ, ಇಂದಿನ ರಾಜಕೀಯದ ಪ್ರಜಾಧರ್ಮ ವು ನಮ್ಮದೇ ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಳ್ಳಲು ಸಾಮಾನ್ಯಜ್ಞಾನದ ಸಾಮಾನ್ಯಪ್ರಜೆಗೂ ಸಾಧ್ಯವಿತ್ತು.
ವಿಶೇಷಜ್ಞಾನವನ್ನು ಹೊರಗಿನಿಂದ ತುಂಬಿದ ಪರಿಣಾಮ ಇಂದಿಗೂ ಮಾನವ ಮಾನವನಾಗಿರಲು ಕಷ್ಟ ಪಡುವಂತಾಗಿದೆ.ಮೊದಲು ಮಾನವನಾದರೆ ನಂತರವೇ ಮಹಾತ್ಮನಾಗಲು ಸಾಧ್ಯ. ಆತ್ಮಾನುಸಾರ ನಡೆಯೋದರಲ್ಲಿ ರಾಜಕೀಯವಿದೆಯೆ? ರಾಜಯೋಗದ ಆತ್ಮವಿಶ್ವಾಸವಿದೆಯೆ? ಕೆಲವರಲ್ಲಿದೆ ಹಲವರಲ್ಲಿ ಅಹಂಕಾರ ಇದೆ.ಸ್ವಾರ್ಥ ಅಹಂಕಾರವೇ ಮಾನವನ ಹಿತ ಶತ್ರುವೆನ್ನುವರು. ಇದು ನಮ್ಮೊಳಗೇ ಇರೋವಾಗ ಹೊರಗಿನ ಶತ್ರುಗಳನ್ನು ಓಡಿಸಲಾಗದು. ಅವರೂ ನಮ್ಮ ಹಾಗೆ ಅಲ್ಲವೆ? ಆಂತರಿಕ ಶುದ್ದಿಯಿಂದ ಆತ್ಮಜ್ಞಾನವೆಂದರೆ ಸ್ವಚ್ಚಭಾರತಕ್ಕೆ ಅಧ್ಯಾತ್ಮದ ತತ್ವ ಮುಖ್ಯ. ಭೌತಿಕದ ತಂತ್ರವನ್ನು ಸದ್ಬಳಕೆ ಮಾಡಿಕೊಳ್ಳಲು ಆತ್ಮಜ್ಞಾನದಿಂದ ಸಾಧ್ಯವೆಂದರು ಯೋಗಿಗಳು. ಯೋಗಿಗಳ ದೇಶವನ್ನು ದ್ವೇಷದ ರಾಜಕೀಯಕ್ಕೆ ಬಳಸುತ್ತಾ ರೋಗಿಗಳ ದೇಶ ಮಾಡಿರೋದು ಯಾರು?
ಸತ್ಯ ಸತ್ಯವೇ ಅದು ಬದಲಾಗದು.ಮಿಥ್ಯ ಬದಲಾಗುತ್ತದೆ. ಬದಲಾವಣೆ ಜಗದ ನಿಯಮ.ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಮಾನವರು ಕಾರಣಮಾತ್ರರಷ್ಟೆ ಅಂದರೆ ಆಟಕ್ಕೆ ಬಳಸಿಕೊಳ್ಳುವ ಗೊಂಬೆಗಳು. ನಾಟಕದಲ್ಲಿ ಉತ್ತಮ ಪಾತ್ರವಿದ್ದರೆ ಪುಣ್ಯ, ಕೆಟ್ಟದ್ದಿದ್ದರೆ ಪಾಪದ ಫಲ ಜೀವ ಅನುಭವಿಸುತ್ತದೆ. ನಮ್ಮದೇನಿಲ್ಲ ಎಲ್ಲಾ ಭಗವಂತನದ್ದೆ ಆದರೂ ನಾನೇಕೆ ಹೋರಾಟ ನಡೆಸಬೇಕು? ನಾನೆಂಬ ಭಾವನೆಯೇ ಇದಕ್ಕೆ ಕಾರಣ. ನಾನು ಹೋದರೆ ಹೋರಾಟವಿಲ್ಲ ಮುಕ್ತಿ ಎಂದರು. ಹಾಗಂತ ಯಾರಾದರೂ ಸುಮ್ಮನಿರುವರೆ? ಮನಸ್ಸನ್ನು ಯೋಗದತ್ತ ಸೆಳೆಯಲೂ ನನಗೆ ಮನಸ್ಸಿಲ್ಲವೆಂದರೆ ಪರಮಾತ್ಮನಾದರೂ ಏನೂ ಮಾಡಲಾಗದು. ಇದೇ ಜಡಶಕ್ತಿ.ಭೂಮಿಯ ಋಣ ತೀರಿಸಲು ಸೇವೆ ಮಾಡಬೇಕು. ದೇಶಸೇವೆ ಈಶಸೇವೆ,ಪಿ ತೃಸೇವೆ,ಜನಸೇವೆ ಹೀಗೇ ನಿಸ್ವಾರ್ಥ ನಿರಹಂಕಾರದಿಂದ ಸೇವೆ ಮಾಡಿದವರ ಋಣ ಕಳೆದು ಮುಕ್ತಿ ಪಡೆದಿದ್ದಾರೆನ್ನಬಹುದು. ಇಂದಿನಸೇವೆಯ ಹಣ,ಜನರ ಜ್ಞಾನತ ತ್ವದೊಳಗಿದ್ದರೆ ಅದೇ ನಿಜವಾದ ಸೇವೆ.ಒಂದೇ ಭೂಮಿ,ಒಂದೇ ದೇಶ,ಒಂದೇ ಧರ್ಮ, ಒಂದೇ ಶಿಕ್ಷಣ,ಒಂದೇ ದೇವರು ,ಒಂದೆ ಜಾತಿ ಎನ್ನುವ ತತ್ವವು ಅಸಂಖ್ಯಾತ ತಂತ್ರಗಳಿಂದ ಹರಡಿದ್ದರೂ ಮಾನವರು ಒಂದಾಗೋದು ಕಷ್ಟ .ಹಾಗಾಗಿ ಎಲ್ಲಾ ಮಹಾತ್ಮರುಗಳು ಎಲ್ಲರನ್ನೂ ಒಂದಾಗಿಸುವುದು ಸುಲಭವಲ್ಲ.ಎಲ್ಲರ ಜೊತೆಗೆಬಾಳಬಹುದಷ್ಟೆ.
No comments:
Post a Comment