ಅಹಿಂಸೆ,ಸತ್ಯ,ಧರ್ಮ, ನ್ಯಾಯ,ನೀತಿ,ಸತ್ಯಾಗ್ರಹವು ಸತ್ವಗುಣವಾದ್ದರಿಂದ ಭಗವಂತನಿಗೆ ನೇರವಾಗಿ ತಲುಪುತ್ತದೆ ಆದ್ದರಿಂದ ಇದರ ಮೂಲಕವೇ ಮುಕ್ತಿ ಮಾರ್ಗ ಕಂಡುಕೊಂಡಿದ್ದು ಹಿಂದೂ ಧರ್ಮದ ಮೂಲ. ಅದ್ವೈತವು ಇದರ ಪರವಿದ್ದರೆ ದ್ವೈತದ ರಾಜಕೀಯ ಇದನ್ನು ಒಪ್ಪದು. ದುಷ್ಟರಿಗೆ ಅನ್ವಯಿಸುವುದಿಲ್ಲ ಅದ್ವೈತ.
ಅಹಿಂಸೋ ಪರಮೋಧರ್ಮ:
ಹಿಂದೂ ಧರ್ಮದ ಪ್ರಕಾರ ಹಿಂಸೆ ಮಾನಸಿಕವಾಗಿ,
ದೈಹಿಕವಾಗಿ ಮಾಡಲೇಬಾರದೆನ್ನುವರು.
ಹಾಗಾದರೆ ಈಗ ಸಾಧ್ಯವೆ? ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸೋತು ಅಸತ್ಯಕ್ಕೆ ಶರಣಾಗಿ ಧರ್ಮ ರಕ್ಷಣೆ ಮಾಡಲಾಗದು.ಇದೇ ಕಾರಣಕ್ಕಾಗಿ ಹಿಂದೂ ಧರ್ಮ ಹಿಂದುಳಿದಿದೆ.
ಇಲ್ಲಿ ಸತ್ಯವೇ ದೇವರಾದರೆ ಅಸತ್ಯ ಅಸುರರಾಗುತ್ತಾರೆ.
ಅಸತ್ಯಕ್ಕೆ ಸಹಕಾರ ಸಿಕ್ಕರೆ ಅಸುರರೆ ಬೆಳೆಯುತ್ತಾರೆ.ಹಾಗೆ ಧರ್ಮದ ವಿಚಾರ ಬಂದಾಗ ನಮ್ಮ ಧರ್ಮ ವೇ ಶ್ರೇಷ್ಠ ವೆನ್ನುವುದು ಅವರವರ ನಂಬಿಕೆ, ಅವರ ನಂಬಿಕೆಯು ಮನೆಯೊಳಗೆ ಮನಸ್ಸಿನಲ್ಲಿ ಜಾಗೃತವಾಗಿದ್ದರೆ ಹೊರಗಿನವರು ಎಷ್ಟೇ ಆಕ್ರಮಣ ನಡೆಸಿದರೂ ಬದಲಾಗದು. ಯಾವಾಗ ಹೊರಗಿನವರನ್ನೂ ನಮ್ಮೆಡೆಗೆ ಸೇರಿಸಿಕೊಂಡು ಅವರ ಧರ್ಮ ವನ್ನೂ ಬೆಳೆಸುತ್ತಾ ನಮ್ಮತನ ನಮ್ಮವರನ್ನೇ ದ್ವೇಷ ಮಾಡುವ ರಾಜಕೀಯ ಬೆಳೆಯುವುದೋ ಆಗಲೇ ಅಧರ್ಮ ಹೆಚ್ಚುವುದು.
ಭಗವಂತನೆಡೆಗೆ ಹೋಗುವುದಕ್ಕೆ ಸತ್ಯ,ಅಹಿಂಸೆ,ನ್ಯಾಯ,
ನೀತಿ, ಧರ್ಮ ಮಾರ್ಗವನ್ನು ಅರ್ಥ ಮಾಡಿಕೊಂಡು ಆಂತರಿಕ ಸತ್ಯದೆಡೆಗೆ ನಡೆದವರೆ ರಾಜಯೋಗಿಗಳು.
ಅವರಲ್ಲಿ ರಾಜಕೀಯಗುಣವಿರಲಿಲ್ಲ ಆದರೆ, ಸತ್ಯ ತಿಳಿಸುವಾಗ ಅಸತ್ಯದ ಮನಸ್ಸಿಗೆ ಅರ್ಥ ಆಗದ ಕಾರಣ ನಮ್ಮನ್ನು ದಾರಿತಪ್ಪಿಸಿ ಆಳುತ್ತಿದ್ದಾರೆನ್ನಬಹುದಷ್ಟೆ.
ಹೀಗಾಗಿ ಹಿಂದಿನ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ,ಶೂದ್ರರೆಂಬ ನಾಲ್ಕು ವರ್ಣಗಳ ಪ್ರಕಾರ ಅವರವರ ಧರ್ಮ ಕರ್ಮ ಕ್ಕೆ ತಕ್ಕಂತೆ ಶಿಕ್ಷಣ ನೀಡಿ ಒಂದು ಸಮಾಜ,ರಾಜ್ಯ,ರಾಷ್ಟ್ರದ ಹಿತಚಿಂತನೆಯು ಧರ್ಮ ಕರ್ಮದ ಸಮಾನತೆಯಲ್ಲಿತ್ತು.
ಯಾವಾಗ ಮೇಲಿನ ಬ್ರಾಹ್ಮಣ ರ ಜ್ಞಾನಕ್ಕೆ ಬೆಲೆಸಿಗದೆ ರಾಜಕೀಯ ಬೆಳೆಯಿತೋ ನಂತರ ಅದೇ ವ್ಯವಹಾರಕ್ಕೆ ತಿರುಗಿ ಸೇವೆಯನ್ನು ಹಣದಿಂದ ಮಾಡಲಾಯಿತು.
ಜ್ಞಾನವಿಲ್ಲದೆ ಸಂಪಾದಿಸಿದ ರಾಜಕೀಯ ವ್ಯವಹಾರದ ಸೇವೆಯೇ ಅಧರ್ಮದಿಂದ ಹಿಂಸೆಯ ರೂಪ ತಾಳಿತು. ಅಂದರೆ ಹಿಂಸೆಯು ಮನಸ್ಸಿಗೆ ಆದರೂ ಕರ್ಮಫಲ
ಮೈಗೆ ಆದರೂ ಕರ್ಮಫಲ. ಹಾಗಂತ ಕಷ್ಟಪಡದೆ ಸುಖಪಟ್ಟರೆ ಕಷ್ಟದ ಸರದಿ ಮುಂದೆ ಇದ್ದೇ ಇರುತ್ತದೆ. ಹೀಗಾಗಿ ಈಗಲೂ ನಾವು ಎಲ್ಲಾ ಭ್ರಷ್ಟಾಚಾರ ನೋಡಿಕೊಂಡು ಹಿಂಸೆಯಾದರೂ ಅನುಭವಿಸಲೇಬೇಕಾಗಿದೆ ಎಂದರೆ ನಮಗೆ ಸತ್ಯ ತಿಳಿದಿದೆ ಆದರೂ ಹೇಳುವ ಅಧಿಕಾರ ಇಲ್ಲದೆ ಹಿಂಸೆ ತಡೆಯಲಾಗದೆ ಜಗತ್ತಿನಲ್ಲಿ ಇದ್ದೂ ಇಲ್ಲದಂತೆ
ಬದುಕಬೇಕೆಂದರೆ ಇದೊಂದು ಆತ್ಮಹತ್ಯೆ ಎನ್ನುವರು. ಇದಕ್ಕೆ ಕಾರಣವೇ ಅಧ್ಯಾತ್ಮ ವಿಚಾರದಲ್ಲಿ ಸತ್ಯಕ್ಕೆ ಬೆಲೆಕೊಡದೆ ಧರ್ಮ ದ ಹೆಸರಲ್ಲಿ ಒಡೆದು ಆಳಿದ ರಾಜಕೀಯ. ಈ ರಾಜಕೀಯಕ್ಕೆ ಬಲಿಯಾಗಿರೋದು ಜನರ ಜೀವ. ಜೀವರಕ್ಷಣೆ ರಾಜಕೀಯದಿಂದ ಆದರೂ ಆತ್ಮರಕ್ಷಣೆ ಆಗದು.
ಹಿಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಮಾಡಿದ ಉಪವಾಸ ಸತ್ಯಾಗ್ರಹವನ್ನು ಸ್ವಾಗತಿಸಿದವರಷ್ಟೆ ವಿರೋಧಿಸಿದವರೂ ಇದ್ದರು. ಕಾರಣವಿಷ್ಟೆ ಶತ್ರುಗಳನ್ನು ಕ್ಷಮಿಸು ಎನ್ನುವ ಹಿಂದೂ ಧರ್ಮಕ್ಕೂ ಶತ್ರುಗಳನ್ನು ಮುಗಿಸು ಎನ್ನುವ ಪರಧರ್ಮಕ್ಕೂ ವ್ಯತ್ಯಾಸವಿದ್ದರೂ ಇಬ್ಬರೂ ದೇವದೂತರೆ
ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡೋದಕ್ಕೆ ಎರಡೂ ಶಕ್ತಿಯ ನಡುವೆ ಯುದ್ದವಾಗಲೇಬೇಕು.ಜೀವ ಹೋದರೂ ಮತ್ತೆ ಜನ್ಮ ಪಡೆಯುತ್ತದೆ ಆದರೆ ಆತ್ಮಜ್ಞಾನವು ಇದ್ದಾಗಲೇ ಸಂಪಾದನೆ ಮಾಡಬೇಕಾದರೆ ಜ್ಞಾನಿಗಳ ಜೀವರಕ್ಷಣೆ ಅಗತ್ಯ. ಇಲ್ಲಿ ಆಂತರಿಕ ಶಕ್ತಿಯನ್ನು ಬೆಳೆಸುವುದು ಕಷ್ಟ.ಭೌತಿಕ ಶಕ್ತಿಯು ಬೆಳೆದಂತೆಲ್ಲಾ ಆಂತರಿಕ ಶಕ್ತಿ ಹಿಂದುಳಿಯುತ್ತದೆ. ಸತ್ಯದ ನಡೆ ನುಡಿಯಿಂದಲೇ ಆತ್ಮಜ್ಞಾನ.ಅಸತ್ಯದ ನಡೆ ನುಡಿಯು ರಾಜಕೀಯವಾಗಿ ಬೆಳೆಸಬಹುದು.ಇದರಿಂದ ಮಾನವನಿಗೆ ಮುಕ್ತಿ ಸಿಗೋದು ಕಷ್ಟವಾದ್ದರಿಂದ ಹಿಂದಿನ ಗುರು ಹಿರಿಯರು ಸತ್ಯಕ್ಕೆ ಬೆಲೆಕೊಟ್ಟು ಅಸತ್ಯಕ್ಕೆ ಶಿಕ್ಷೆಯಿತ್ತು. ಆದರೆ ಇಲ್ಲಿ ಹಿಂಸೆಯ ವಿಚಾರ ಬಂದಾಗ ಯಾವಾಗ ನಾವು ತಪ್ಪು ತಿಳಿದೂ ನಡೆಯುವೆವೋ ಅದು ಮುಂದೆ ಹಿಂಸೆಗೆ ದಾರಿಯಾಗುತ್ತದೆ. ತಿಳಿಯದೆಯೇ ನಡೆದವರಿಗೆ ತಪ್ಪಿನ ಅರಿವಾಗಬಹುದು.ತಿಳಿದೂ ನಡೆದವರನ್ನು ಬದಲಾಯಿಸಲಾಗದು. ನಾಟಕದಲ್ಲಿ ಪಾತ್ರಧಾರಿಗಳಾಗಿರುವಾಗ ಹಿಂಸೆಯಾದರೂ ಸಹಿಸಿಕೊಳ್ಳುವ ಶಕ್ತಿ ಪರಮಾತ್ಮ ನೀಡಬಹುದು.ಆದರೆ ತನ್ನ ಸ್ವಾರ್ಥ ದ ಜೀವನದಲ್ಲಿ ಮಾಡುವ ನಾಟಕದಲ್ಲಿ ನಾಟಕದ ಪಾತ್ರವು ತಪ್ಪಾಗಿದ್ದರೆ ನೋಡುಗರನ್ನೂ ತಪ್ಪುದಾರಿಗೆಳೆದು ಇದಕ್ಕೆ ಕಾರಣವಾಗಿದ್ದ ಪಾತ್ರಧಾರಿಯವರೆಗೂ ಕರ್ಮ ಆವರಿಸಿ ಹಿಂಸೆ ಬೆಳೆಯುತ್ತದೆ.
ಪೋಷಕರು ಮಕ್ಕಳ ತಪ್ಪು ತಿಳಿದೂ ಬೆಳೆಸಿ ದೊಡ್ಡವರಾದ ಮೇಲೆ ಹೇಗೆ ಮಕ್ಕಳಿಂದಲೇ ಹಿಂಸೆ ಅನುಭವಿಸುವರೋ ಹಾಗೆ ದೇಶದ ಪ್ರಜೆಗಳೂ ರಾಜಕಾರಣಿಗಳಿಗೆ, ಭ್ರಷ್ಟರಿಗೆ, ಸಹಕಾರಕೊಟ್ಟರೆ ನಂತರದ ದಿನಗಳಲ್ಲಿ ಅವರಿಂದಲೇ ಹಿಂಸೆ ಅನುಭವಿಸಬೇಕೆನ್ನುವುದೆ ಕರ್ಮ ಸಿದ್ದಾಂತ.
ಹಾಗಾದರೆ ಸತ್ಯ ಹೇಳುವುದು ಹಿಂಸೆಯೆ? ಸತ್ಯ ದೇವರಲ್ಲವೆ?
ದೈವತ್ವಕ್ಕೆ ಸತ್ಯ ಬೇಡವೆ?
ಅಹಿಂಸೆ ಎನ್ನುವ ಪದದೊಳಗೆ ಹಿಂಸೆಯಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯಿಲ್ಲದ ಮನುಕುಲ ಹಿಂಸೆಯ ಮಾರ್ಗ ಹಿಡಿದು ನಡೆದರೆ ಪರಮಾತ್ಮ ಕಾಣದೆ ಜೀವ ಹೋಗುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿ,ಜೀವ ಜಂತುಗಳು
ಪ್ರಕೃತಿಯ ಪರವಾಗಿದ್ದರೂ ಮಾನವನೆಂಬ ಪ್ರಾಣಿ ಎಲ್ಲಾ ವಶಪಡಿಸಿಕೊಂಡು ಹಿಂಸೆ ಮಾಡಿ ಕೊನೆಗೆ ತಾನೇ ಹಿಂಸೆಗೆ ಗುರಿಯಾದರೂ ಹೇಳೋರಿಲ್ಲ ಕೇಳೋರಿಲ್ಲ. ಇದನ್ನು ಈಗ ಕೊರೊನ ಮಾರಿಯ ಮೂಲಕ ಭಗವಂತನೆ ತಡೆ ಹಾಕಲು ಪ್ರಯತ್ನಪಟ್ಟರೂ ಜ್ಞಾನವಿಲ್ಲದೆ ಜೀವನ ನಡೆಸುವಾಗ ಕೊರೊನ ವೂ ಹಿಂಸೆ ಎಂದರೆ ಪರಿಹಾರವಿಲ್ಲ.
ಇಲ್ಲಿ ರೋಗಕ್ಕೆ ಕಾರಣವೇ ಅತಿಯಾದ ರಾಜಕೀಯತೆ
ಅತಿಯಾದ ಕೂತು ತಿನ್ನುವ ಜನ, ಕೊಟ್ಟು ಆಳುವ
ಜನ,ಕೊಡದೆ ನೋಡುವಜನ,ಕೊಂದು ತಿನ್ನುವ ಜನ, ಕೂಡಿ ಆಡುವ ಜನ, ಕೂಗಿ ಏಳುವ ಜನ, ಈ ಅರಿಷಡ್ವರ್ಗದ ವೈರಿಗಳಿಂದಲೇ ಹಿಂಸೆ ಬೆಳೆದಿರುವಾಗ ಯಾರಲ್ಲಿ ಇವರಿಲ್ಲ?
ನಮ್ಮೊಳಗೇ ಅಡಗಿರುವ ಈ ಹಿತಶತ್ರುಗಳೇ ನಮಗೆ ಹಿಂಸೆ ಕೊಡುವಾಗ ಹೊರಗಿನಿಂದ ಸರಿಪಡಿಸಲಾಗದು. ಒಟ್ಟಿನಲ್ಲಿ ಮಾನವ ಮೊದಲು ಬದಲಾಗಬೇಕು.ಮೊದಲು ಮಾನವನಾಗಬೇಕೆಂದರೆ ನಮ್ಮಲ್ಲಿರುವ ಹಿಂಸಾತ್ಮಕ ಗುಣವು
ಹೋದರೆ ಅಹಿಂಸೆಯ ಅರ್ಥ ತಿಳಿಯಬಹುದು.
ಇದರಲ್ಲಿ ಸಾಮಾನ್ಯವಾದ ಸತ್ಯವಿದ್ದರೂ ಕೆಲವರಿಗೆ ಅರ್ಥ ವಾದರೆ ಕೆಲವರಿಗೆ ತಿಳಿದರೆ ಹಿಂಸೆ ಎನಿಸಬಹುದು. ಹೀಗಾಗಿ
ನಮ್ಮ ಹಿಂಸೆಗೆ ನಾವೇ ತಿಳಿದ ವಿಷಯವಾಗಬಹುದು.
ವಿಷಯದೊಳಗೇ ವಿಷವಿದ್ದರೆ ಸಾಯೋದು ಮನಸ್ಸು.
ಬೆಳೆಯೋದು ಹಿಂಸೆ.ಜೀವವಿದ್ದಾಗಲೇ ಅಧ್ಯಾತ್ಮ ಸತ್ಯ ತಿಳಿಯುವುದು ಉತ್ತಮ
ಹೋದಮೇಲೆ ಮಹಾತ್ಮರ ಹೆಸರಲ್ಲಿ ವ್ಯವಹಾರ ನಡೆಸಿದರೆ ಪ್ರಯೋಜನವಿಲ್ಲವೆನ್ನಬಹುದು.
No comments:
Post a Comment