ಚರಿತ್ರೆಯ ರಾಜಕೀಯದಿಂದ ಚಾರಿತ್ರ್ಯ ನಿರ್ಮಾಣವಾಗಿದೆಯೆ? ಚರಿತ್ರೆ ಗಳು ರಾಜಕೀಯ ಪ್ರೇರಿತವಾಗಿದೆ. ವೇದಗಳಲ್ಲಿ ರಾಜಯೋಗವಿತ್ತು ಆದರೆ ಇಂದು ಅದೂ ರಾಜಕೀಯದ ವಶವಾಗಿರೋದು ದುರಂತ.
ಒಟ್ಟಿನಲ್ಲಿ ಆಂತರಿಕ ಶುದ್ದಿಯಿಲ್ಲದ ಆಚರಣೆಗಳಿಂದ ಭ್ರಷ್ಟಾಚಾರ ಬೆಳೆದರೆ ಯಾರಿಗೆ ಶಕ್ತಿ ಸಿಗುತ್ತದೆ? ದೇವತೆಗಳಿಗೋ ಅಸುರರಿಗೋ ಮಾನವರಿಗೋ? ನಾವ್ಯಾರು? ಆತ್ಮಾವಲೋಕನ ಜನಸಾಮಾನ್ಯರೆ ಮಾಡಿಕೊಂಡರೆ ನಮ್ಮ ನಮ್ಮ ಸಹಕಾರವೇ ನಮ್ಮನ್ನು ನಡೆಸಿದೆ.ಇದು ಒಳಗಿನ ಅರಿವಿನೆಡೆಗೆ ಕರೆದೊಯ್ಯುವುದಾದರೆ ಉತ್ತಮ .ಹೊರಗೆಳೆದು ಆಳುವುದಾದರೆ ಅಧಮ. ಹಿಂದಿನ ಇತಿಹಾಸದ ರಾಜಾಧಿರಾಜರ ಧಾರ್ಮಿಕ ನಡೆ ನುಡಿಯು ಅವರ ಮೂಲ ಶಿಕ್ಷಣದಲ್ಲಿಯೇ ಕೊಡಲಾಗಿತ್ತು.ಈಗಿನ ಶಿಕ್ಷಣದ ಮೂಲ ಯಾವುದಿದೆ? ಶಿಕ್ಷಣ ಒಂದು ವ್ಯಾಪಾರದಂತಾದರೆ ಹೊರಗೆ ಕಾಣೋದಷ್ಟೆ ಸತ್ಯವೆಂದು ನಂಬುವ ವಿಚಾರವೇ ಪಠ್ಯವಾಗಿ ಮಕ್ಕಳ ಆಂತರಿಕ ಅರಿವಿನೆಡೆಗೆ ಹೋಗದೆ ಭೌತಿಕದ ಗೊಂಬೆಗಳಾಗಿರುತ್ತಾರೆ.
ಗೊಂಬೆಯಾಟವಯ್ಯಾ ಇದು ಗೊಂಬೆಯಾಟವಯ್ಯಾ ಬ್ರಹ್ಮಾಂಡವೇ ಆ ದೇವನಾಡುವ ಗೊಂಬೆಯಾಟವಯ್ಯಾ. ಹಾಗಾದರೆ ದೇವರಿರುವುದು ಎಲ್ಲಿ? ದೇವರ ಇಚ್ಚೆಯಿಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು ಎಂದರೆ ಇಂದಿನ ಜಗತ್ತಿನ ಆಗುಹೋಗುಗಳಿಗೆ ದೇವರೇ ಕಾರಣವೆ? ಆತ್ಮವೇ ದೇವರು ಎಂದರು, ತಂದೆ ತಾಯಿಯರೆ ಕಾಣುವ ದೇವರು ಎಂದರು.
ಮಕ್ಕಳೇ ದೇವರೆಂದರು,ಗುರುವೇ ದೇವರಿಗಿಂತ ದೊಡ್ಡವರೆಂದರು. ಆಂತರಿಕ ಜ್ಞಾನದಿಂದ ತಿಳಿದ ವಿಚಾರ ಇಂದಿಗೂ ಭೌತಿಕದ ಪ್ರಚಾರದಲ್ಲಿದೆ. ಆದರೆ ದೈವತ್ವ ಇಲ್ಲದೆ
ಮಾನವ ಮಾನವನಿಗೇ ದ್ವೇಷ ಅಸೂಯೆಯಿಂದ ಮೋಸ ಮಾಡಿ ರಾಜಕೀಯಕ್ಕೆ ಇಳಿದಿರುವಾಗ ಇದರಲ್ಲಿ ತಪ್ಪು ಯಾರದ್ದು? ತಂದೆ,ತಾಯಿ,ಮಕ್ಕಳು, ಗುರುಗಳೆಲ್ಲರೂ ಸರ್ಕಾರ ಸರಿಯಿಲ್ಲ,ಶಿಕ್ಷಣ ಸರಿಯಿಲ್ಲ,ದೇಶಸರಿಯಿಲ್ಲ ಎನ್ನುವುದರ ಮೂಲಕ ನಾನೇ ಸರಿಯಿಲ್ಲ ನನ್ನ ತಿಳುವಳಿಕೆ ಸರಿಯಿಲ್ಲ,ನನ್ನ ಸಹಕಾರ ಸರಿಯಿಲ್ಲ ನನ್ನ ಶಿಕ್ಷಣ ಸರಿಯಿಲ್ಲ ಎನ್ನುವ ಸತ್ಯವನ್ನು ನಾನೇ ವಿರೋಧಿಸಿ ಮುಂದೆ ನಡೆದರೆ ಸರಿಯಾಗೋದು ಹೇಗೆ? ರಾಜಯೋಗವು ಇದನ್ನು ತಿಳಿಸಿದೆ
ನಿನ್ನನೀ ಸರಿಪಡಿಸಿಕೊಂಡರೆ ಮಾತ್ರ ನಿನಗೆ ನೀನೇ ಗುರು ಆಗಲು ಸಾಧ್ಯವೆಂದರು ಸ್ವಾಮಿ ವಿವೇಕಾನಂದರ ಪ್ರಕಾರ ಭಾರತದ ಏಳಿಗೆಯು ಅದರ ಮೂಲ ಶಿಕ್ಷಣದಲ್ಲಿತ್ತು. ಶಿಕ್ಷಕರು ಚಾರಿತ್ರ್ಯವಂತರಾಗಿರುವುದು ಅಗತ್ಯವಾಗಿತ್ತು.ಹಾಗೇ ಪೋಷಕರ ಚಾರಿತ್ರ್ಯ ಮಕ್ಕಳ ಮೂಲ ಶಿಕ್ಷಣಕ್ಕೆ ಮೂಲಾಧಾರವಾಗಿತ್ತು. ಪಾಶ್ಚಾತ್ಯ ರ ಪ್ರವೇಶ ಅವರ ಶಿಕ್ಷಣವು ಚರಿತ್ರೆಯ ರಾಜಕೀಯ ಬೆಳೆಸಿ ಜನರಲ್ಲಿ ಮೇಲುಕೀಳುಗಳ ದುಷ್ಟ ಶಕ್ತಿಯನ್ನು ಹುಟ್ಟಿಸಿ ತನ್ನ ಸ್ವಾರ್ಥ ಸುಖವನ್ನು ಭೌತಿಕದೆಡೆಗೆ ಹೆಚ್ಚಿಸಿ ಹಣದಿಂದ ಜನರ ಜ್ಞಾನವನ್ನು ಹಿಂದುಳಿಸಿ ಈಗಿದು ಹೆಮ್ಮರವಾಗಿದೆ.
ಮರವನ್ನು ಕಡಿಯೋ ಬದಲಾಗಿ ಹೊಸ ಗಿಡವನ್ನು ನೆಟ್ಟು
ಸರಿಯಾದ ಸಾತ್ವಿಕ ಗೊಬ್ಬರದಿಂದ ಬೆಳೆಸುವ ಕೆಲಸ ಪೋಷಕರೆ ಮಾಡಿದರೆ ನಮ್ಮ ದೇಶ ನಮ್ಮದಾಗಿರಲು ಸಾಧ್ಯ.
ಇದಕ್ಕಾಗಿ ಮಧ್ಯವರ್ತಿಗಳು ವ್ಯವಹಾರಕ್ಕೆ ಹೆಚ್ಚು ಒತ್ತುಕೊಡದೆ ಧಾರ್ಮಿಕ ಸತ್ಯಕ್ಕೆ ಸಹಕರಿಸಿ ನಡೆಯಬೇಕಿತ್ತು.
ವ್ಯವಹಾರದಲ್ಲಿ ಹಣದ ಲಾಭವೇ ಮುಖ್ಯ. ಧಾರ್ಮಿಕವಾಗಿ ತಿಳಿದರೆ ಜ್ಞಾನೋದಯ ಸಾಧ್ಯ. ಚಾರಿತ್ರ್ಯ ಕೇವಲ ಭಾರತೀಯರಿಗಲ್ಲ ಮನುಕುಲಕ್ಕೆ ಅಗತ್ಯವಿದೆ.ಇದು ದೈವತ್ವ.
ಮಹಾಭಾರತದ ಬೀಷ್ಮಾಚಾರ್ಯರು ಬ್ರಹ್ಮಚಾರಿಗಳಾಗಿ ಮಹಾಜ್ಞಾನಿಗಳಾಗಿದ್ದರೂ ಚಾರಿತ್ರ್ಯ ಹೀನರಾದ ಕೌರವರಿಂದ
ಕೊನೆಗೆ ಸೋಲಬೇಕಾಯಿತು. ಅಂದರೆ ರಾಜಕೀಯದಲ್ಲಿ ರುವ ವ್ಯಕ್ತಿಗಳಲ್ಲಿ ಚಾರಿತ್ರ್ಯ ವಿದ್ದರೂ ಸಹಚರ ರ ದೋಷದಿಂದ ಅಧರ್ಮಕ್ಕೆ ಸಹಕರಿಸಿದರೆ ತಮಗೇ ತಿಳಿಯದೆ ಕೂಪಮಂಡೂಕದಂತಾಗುತ್ತಾರೆ. ಜನಬಲ ಹಣಬಲ,ಅಧಿಕಾರ ಬಲವು ತಾತ್ಕಾಲಿಕ ಶಕ್ತಿಯಾಗಿದೆ. ಜ್ಞಾನಬಲದ ಜೊತೆಗೆ ಚಾರಿತ್ರ್ಯ ವೂ ಇದ್ದರೆ ಮಾತ್ರ ರಾಜಯೋಗವೆಂದಿದ್ದಾರೆ ವಿವೇಕಾನಂದರು.
ಮಕ್ಕಳಿಗೆ ಚರಿತ್ರೆಯಿಂದ ಚಾರಿತ್ರ್ಯ ನಿರ್ಮಾಣಕ್ಕೆ ಹೆಚ್ಚು ಒತ್ತು ಕೊಡಲು ಶಿಕ್ಷಣ ಕ್ಷೇತ್ರಕ್ಕೆ ಆವರಿಸಿರುವ ರಾಜಕೀಯ ಹೋಗಬೇಕಿದೆ. ಒಂದೇ ಮಾರ್ಗ ವೆಂದರೆ ಉತ್ತಮ ಪೋಷಕರು ಮಕ್ಕಳಿಗೆ ಮನೆಯಲ್ಲಿದ್ದೇ ಉತ್ತಮ ಗುರುವಾಗಿ
ಜೀವನದ ಗುರಿ ತೋರಿಸುವುದಾಗಿದೆ.ಇದಕ್ಕೆ ಒಗ್ಗಟ್ಟು ಅಗತ್ಯ.
ನಮ್ಮವರನ್ನೇ ನಾವು ದ್ವೇಷ ಮಾಡಿದರೆ ಮೂರನೆಯವರೆ ಆಳೋದು ಎಚ್ಚರವಾದರೆ ಉತ್ತಮ ಬದಲಾವಣೆ.
ಈ ದ್ವೇಷ,ರೋಷ ವೇಷದಿಂದ ದೇಶವೇ ಹಿಂದುಳಿದರೆ ಹಿಂದೂ ಧರ್ಮ ಹಿಂದುಳಿಯುವುದಿಲ್ಲವೆ? ಇಲ್ಲಿ ನಮ್ಮ ನಮ್ಮ
ಹಿಂದಿನ ವೇದ ಪುರಾಣ ಕಥೆ ಪ್ರಚಾರಗಳು ಮಾಧ್ಯಮದಲ್ಲಿ
ಸಾಕಷ್ಟು ವೇಷಭೂಷಣದಲ್ಲಿದೆ.ವಿಪರ್ಯಾಸವೆಂದರೆ ಕಲಾವಿದರಿಗೆ ಇದು ಕೆಲಸ ನೋಡುಗರಿಗೆ ಇದು ಮನರಂಜನೆ
ಹಾಗಾದರೆ ಅದರಲ್ಲಿನ ತತ್ವಜ್ಞಾನ ಯಾರಿಗೆ? ಇದಕ್ಕಾಗಿ ಸಾಕಷ್ಟು ಶ್ರಮ,ಹಣ,ಸಮಯವೆಲ್ಲವೂ ಬಳಕೆಯಾಗಿದೆ.
ಆದರೆ ದೇಶ ಯಾಕೆ ಹೀಗಿದೆ?
ನಾಟಕದಲ್ಲಿ ನಾಟಕವಾಡೋರು ನೋಡೋರು ಎಲ್ಲಾ ನಾವೇ
ಆದರೆ ಮೇಲಿರುವ ಸೂತ್ರಧಾರನ ಅರಿಯದೆ ನಾವೇ ಮೋಸ ಹೋದರೆ ತಪ್ಪು ನಮ್ಮೊಳಗಿದೆ.ಉತ್ತಮ ಪಾತ್ರವನ್ನು ನಾವೇ
ಆರಿಸಿಕೊಂಡು ಜನರ ಉತ್ತಮ ಜೀವನಕ್ಕೆ ದಾರಿಮಾಡಿ
ಕೊಟ್ಡರೆ ರಾಜಯೋಗ.ದಾರಿತಪ್ಪಿಸಿ ಆಳಿದರೆ ಅಧರ್ಮಕ್ಕೆ ತಕ್ಕಂತೆ ಪ್ರತಿಫಲ. ಇಷ್ಟೇ ಜೀವನ. ಕಲಿಯುಗದ ಮಹಿಮೆ ನೋಡಿ ಕಣ್ಣಿಗೆ ಕಂಡದ್ದೇ ಸತ್ಯ.ಕಾಣದ ಸತ್ಯವನ್ನು
ಭೌತಿಕದ ಸಾಧನೆಗೆ ಕೊಡುವ ಹಣ,ಶ್ರಮ,ಸಮಯವನ್ನು ಅಧ್ಯಾತ್ಮ ಸಾಧನೆಗೆ ಕೊಡೋದಿಲ್ಲ.ಮನಸ್ಸಿಲ್ಲ.ಮನಸ್ಸು ಹೊರಗಿದೆ ಒಳಗೆಳೆದುಕೊಂಡು ನಿಲ್ಲಸದಿದ್ದರೆ ಸಾಧ್ಯವಿಲ್ಲ.
ಮನುಕುಲದ ಉದ್ದಾರ ಮಾನವನೇ ಮಾಡಿಕೊಂಡರೆ ಸರಿ.
ದೇವತೆಗಳಿಗೂ ಸಾಧ್ಯವಿಲ್ಲ. ಅಸುರರಿಗಂತೂ ಮಾನವೀಯತೆಯೇ ಗೊತ್ತಿಲ್ಲ.
ನಾನು ಈವರೆಗೆ ಕಂಡ ಸತ್ಯದಲ್ಲಿ ಇಂತಹ ವಿಚಾರವನ್ನು ಹಂಚಿಕೊಂಡವರು ವಿರಳ.ಅದೇ ರಾಜಕೀಯ ವಿಚಾರಗಳು
ಬಹಳ ಬೇಗ ಹರಡುತ್ತವೆ.ಇದಕ್ಕೆ ನಮಗೆ ರಾಜಯೋಗದೆಡೆಗೆ ನಡೆಯಲಾಗಿಲ್ಲ. ರಾಜಕೀಯದಿಂದ ಮುಕ್ತಿ ಸಿಗೋದಿಲ್ಲ.
ರಾಜಯೋಗದಲ್ಲಿದೆ ಮುಕ್ತಿ. ಉತ್ತಮವಿಚಾರ ಹಂಚಿಕೊಂಡು ಬದುಕುವುದೇ ಜೀವನ.
No comments:
Post a Comment