ಅದ್ವೈತ ದವರು ಶಿವನೇ ಶ್ರೇಷ್ಠ ವೆಂದರೆ ದ್ವೈತ ದವರು ವಿಷ್ಣು ವೇ ಶ್ರೇಷ್ಠ ಎನ್ನುವರು. ಇವರಿಬ್ಬರನ್ನೂ ಅನುಸರಿಸಿದವರು ಮಾನವರು. ಮಧ್ಯವರ್ತಿಗಳು ನಾವೇ ಶ್ರೇಷ್ಠ ವೆನ್ನುವರು. ಹಾಗಾದರೆ ಶ್ರೇಷ್ಠ ರು ಯಾರು ಕನಿಷ್ಟರು ಯಾರು?
ಬ್ರಹ್ಮನ ಸೃಷ್ಟಿ ಯಿಲ್ಲದೆ ಮನುಕುಲವೂ ಇಲ್ಲ, ಮನುಕುಲಕ್ಕೆ ಭೂಮಿಯಿಲ್ಲದಿದ್ದರೆ ಜೀವನವೇ ಇಲ್ಲ. ಭೂಮಿಯ ಋಣ ತೀರಿಸಲು ಬಂದಿರುವ ಮಾನವರಿಗೆ ಶ್ರೇಷ್ಠ ಕನಿಷ್ಟದ ಬಗ್ಗೆ ತಿಳಿಯುವುದರಲ್ಲಿಯೇ ಜೀವನಮುಗಿದರೆ ಮುಕ್ತಿ ಯೇ ಇಲ್ಲ. ಸೃಷ್ಟಿ ಕಾರ್ಯ ನಿರಂತರವಾಗಿ ನಡೆದಿದೆ ಮಹಾವಿಷ್ಣುವೂ ತನ್ನ ಸ್ಥಿತಿಯ ಕಾರ್ಯಕ್ರಮದಲ್ಲಿ ಮಗ್ನನಾಗಿದ್ದು ನಂತರದ ಲಯವನ್ನು ಶಿವ ನಡೆಸುತ್ತಿರುವಾಗ ಮಧ್ಯವರ್ತಿಗಳು ಅರ್ಧ ಸತ್ಯದ ರಾಜಕೀಯದಲ್ಲಿ ನಿಂತು ಮೇಲೂ ಹೋಗದೆ ಕೆಳಗೂ ನೋಡದೆ ಸತ್ಯವನ್ನು ತಿರುಚಿಕೊಂಡರೆ ಮಾಡಿದ್ದುಣ್ಣೋ ಮಹಾರಾಯ ಎನ್ನುವುದಷ್ಟೆ ಸತ್ಯ. ಇಲ್ಲಿ ಪರಮಾತ್ಮನಿ
ಗೇನೂ ಸಮಸ್ಯೆಯಿಲ್ಲ.ಸಮಸ್ಯೆ ಹೆಚ್ಚಾಗಿರೋದೆ ಮನುಕುಲಕ್ಕೆ. ದೇವಾಸುರರ ನಡುವಿನ ಮಾನವನಿಗೆ ತನ್ನ ಜೀವನದ ಸತ್ಯ ತಿಳಿಯದೆ ಹೊರಗೆ ಎಷ್ಟೇ ರಾಜಕೀಯ ಹೋರಾಟ,ಹಾರಾಟ ಮಾರಾಟ ನಡೆಸಿದರೂ ಆತ್ಮಕ್ಕೆ ತೃಪ್ತಿ, ಶಾಂತಿ ಸಿಗೋದಿಲ್ಲ ಎನ್ನುವ ಕಾರಣಕ್ಕಾಗಿ ಹಿಂದೆ ರಾಜಕೀಯ ಬಿಟ್ಟು ರಾಜಯೋಗದೆಡೆಗೆ ಯೋಗಿಗಳು ನಡೆದರು. ಸಂನ್ಯಾಸಿಗಿಂತ ಯೋಗಿಯೇ ದೊಡ್ಡವರು. ಯೋಗವೆಂದರೆ ಸೇರುವುದು.
ಪರಮಸತ್ಯದೆಡೆಗೆ ಮನಸ್ಸು ಸೇರುವುದು ಯೋಗ.
ಪರಮಾತ್ಮನೆಡೆಗೆ ಜೀವಾತ್ಮಸೇರುವುದು ಯೋಗ.
ಜೀವ ಇರೋದು ಒಳಗೆ ಅಂದರೆ ಒಳಗಿನ ಸತ್ಯದೆಡೆಗೆ ಮನಸ್ಸು ಸೇರಿದಾಗಲೇ ಪರಮಸತ್ಯ ಪರಮಾತ್ಮನ ಸತ್ಯದ ಅರಿವಾಗೋದಲ್ಲವೆ?
ರಾಜಕೀಯ ಹೊರಗಿದೆ. ಹೊರಗಿನ ಸತ್ಯ ತಾತ್ಕಾಲಿಕ ವಾಗಿದೆ.
ಅಧ್ಯಾತ್ಮ ಚಿಂತಕರೆ ರಾಜಕೀಯದೆಡೆಗೆ ನಡೆದರೆ ಸಾಮಾನ್ಯರ ಗತಿ ಅಧೋಗತಿ. ಭಾರತವನ್ನು ಆತ್ಮನಿರ್ಭರ ಮಾಡೋದಕ್ಕೆ ಸರ್ಕಾರಗಳ ರಾಜಕೀಯದ ಅಗತ್ಯವಿಲ್ಲ. ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲು ಉಚಿತ ಯೋಜನೆ,ಯೋಚನೆಗಳನ್ನು ಜನಸಾಮಾನ್ಯರಿಗೆ ಹರಡುತ್ತಾ ಸಾಮಾನ್ಯಜ್ಞಾನವಿಲ್ಲದೆ ಸಾಲದ ಹೊರೆ ಏರಿಸುತ್ತಾ ಕೊನೆಗೊಮ್ಮೆ ಮರೆಯಾಗುವ ಜೀವಕ್ಕಾಗಿ ಆತ್ಮವಂಚನೆ ಮಾಡಿಕೊಂಡರೆ ನಷ್ಟ ಯಾರಿಗೆ? ರಾಜಕೀಯದಿಂದ ಆತ್ಮದುರ್ಭಲ ಭಾರತವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ರಾಜಯೋಗದ ಶಿಕ್ಷಣದ ಅಗತ್ಯವಿತ್ತು. ರಾಜಯೋಗದ ವಿಚಾರ ಪ್ರಚಾರ ಮಾಡುತ್ತಾ ಮಾಧ್ಯಮಗಳಿಗೆ ಬರುವವರು ಒಮ್ಮೆ ದೇಶದ ಚಿಂತನೆ ಮಾಡಿದರೆ ಉತ್ತಮ. ಪ್ರಚಾರಕ್ಕೆ ಅವಕಾಶ ನೀಡುವ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಂಡರೆ ಸಾಕು.
ನಡೆ ನುಡಿಯ ಅಂತರದಲ್ಲಿ ಯಾರಿದ್ದಾರೆ? ಏನಿದೆ? ಇದರ
ಪರಿಣಾಮ ಯಾರ ಮೇಲಾಗುತ್ತಿದೆ? ನಾವಿರೋದು ಎಲ್ಲಿ?
ನಾವೆಷ್ಟು ಪರಿಶುದ್ದರು? ನಮ್ಮಲ್ಲಿ ದೈವತ್ವವಿದೆಯೆ?
ರಾಜಯೋಗವೆಂದರೆ ನಮ್ಮನ್ನು ನಾವು ಆಳಿಕೊಳ್ಳುವ ಯೋಗ. ರಾಜಕೀಯ ನಾವು ಬೇರೆಯವರನ್ನು ಆಳುವ ಭೋಗ. ಭೋಗದಿಂದ ರೋಗ ಬೆಳೆದರೆ ಪ್ರಗತಿಯೆ?
ಯೋಗಿಗಳ ದೇಶವನ್ನು ಯಾವ ಮಾರ್ಗದಲ್ಲಿ ನಡೆಸಿರೋದು?
ಒಟ್ಟಿನಲ್ಲಿ ಇಲ್ಲಿ ನಮ್ಮದೇ ಅಜ್ಞಾನಕ್ಕೆ ನಮ್ಮದೇ ಸಹಕಾರದಲ್ಲಿ
ನಮ್ಮನ್ನು ಆಳುವವರಿಗೆ ನಾವೇ ಸಹಕರಿಸುತ್ತಾ ನಮ್ಮ ಆತ್ಮಕ್ಕೆ ನಾವೇ ದ್ರೋಹವೆಸಗಿದರೆ ದೇವರು ಏನೂ ಮಾಡಲಾಗದು.
ದೈವತ್ವ ಒಳಗಿತ್ತು. ಹೊರಗೆ ಹುಡುಕುತ್ತಾ ಮನಸ್ಸು ಹೊರ ಬಂದಿದೆ.ಮನಸ್ಸನ್ನು ಒಳಗೆಳೆದುಕೊಳ್ಳಲು ರಾಜಕೀಯ ಬಿಡುತ್ತಿಲ್ಲವೆಂದರೆ ನಮ್ಮ ಮನಸ್ಸು ಎಲ್ಲದಕ್ಕೂ ಕಾರಣ.
ಮನಸ್ಸಿನ ನಿಗ್ರಹಕ್ಕೆ ವಿಗ್ರಹದ ಆರಾಧನೆ ಪ್ರಾರಂಭವಾಗಿತ್ತು.
ಈಗ ವಿಗ್ರಹದ ಮೇಲೂ ಮನಸ್ಸು ನಿಲ್ಲುತ್ತಿಲ್ಲವೆಂದರೆ ಆಗ್ರಹ
ಮಾಡೋರೆ ಹೆಚ್ಚು. ಆ ಗ್ರಹದ ಮೇಲೇ ಲಗ್ಗೆ ಹಾಕುವ ಮಾನವನಿಗೆ ಭೂ ಗ್ರಹವನ್ನು ಹೇಗೆ ಬಳಸಬೇಕೆಂಬುದಕ್ಕೆ ಮನಸ್ಸಿನ ನಿಗ್ರಹವೇ ಮುಖ್ಯ.ಅದೇ ಯೋಗ. ವಿಷ್ಣುವಿಲ್ಲದೆ ಶಿವನಿಲ್ಲ.ಶಿವನಿಲ್ಲದೆ ವಿಷ್ಣುವಿಲ್ಲ.ಬ್ರಹ್ಮನಿಲ್ಲದೆ ಸೃಷ್ಟಿ ಯೇ ಇಲ್ಲ. ಸೃಷ್ಟಿಯಾಗದೆ ಮನುಕುಲವೇ ಇಲ್ಲ.ಅಂದರೆ ಸೃಷ್ಟಿ ಕರ್ತ ಬ್ರಹ್ಮಜ್ಞಾನವೇ ಮುಖ್ಯ. ಭೂಮಿಗೆ ಬಂದ ಮೇಲೆ ಜ್ಞಾನಸಂಪಾದನೆ ಮಾಡದಿದ್ದರೆ ಜೀವನದ ಗುರಿ ಹೇಗೆ ತಿಳಿಯೋದು.ಉತ್ತಮ ಗುರುವಿಲ್ಲದೆ ಹೇಗೆ ನಡೆಯೋದು?
ತನ್ನ ತಾನರಿಯೋದೆ ಜೀವನದ ಗುರಿ.'ಅಹಂ ಬ್ರಹ್ಮಾಸ್ಮಿ' ಇದರಲ್ಲಿ ಅಹಂಕಾರ ವಿದ್ದರೆ ಅಜ್ಞಾನ. ಆತ್ಮವಿಶ್ವಾಸ ವಿದ್ದರೆ ಆತ್ಮಜ್ಞಾನ. ಅಹಂಕಾರ ರಾಜಕೀಯದಿಂದ ಬೆಳೆದರೆ ಆತ್ಮಜ್ಞಾನಕ್ಕೆ ರಾಜಯೋಗ ಬೇಕು. ಆಂತರಿಕ ಶುದ್ದಿಯಿಂದ ಭೌತಿಕದೆಡೆಗೆ ಮನಸ್ಸು ಸಾಗಿ ಸತ್ಯ ತಿಳಿಯುವುದು ರಾಜಯೋಗದ ಗುರಿ. ಶಿಕ್ಷಣವೇ ಶುದ್ದವಾಗದೆ ಇದು ಸಾಧ್ಯವಿಲ್ಲ. ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರವೇ ರಾಜಕೀಯ ವ್ಯವಹಾರಕ್ಕೆ ಸೀಮಿತವಾದಷ್ಟೂ ಅಧರ್ಮ ವೇ ಬೆಳೆಯೋದು. ಕೆಲವೆಡೆ ಬದಲಾವಣೆ ಆದರೂ
ಜನಸಾಮಾನ್ಯರಿಗೆ ಗೊಂದಲ ಸೃಷ್ಟಿಸುವಮಧ್ಯವರ್ತಿಗಳು ಬದಲಾಗದಿದ್ದರೆ ವ್ಯರ್ಥ.
ಮಧ್ಯವರ್ತಿಗಳು, ಮಾಧ್ಯಮಗಳು, ಮಾನವರು,
ಮಹಿಳೆ,ಮಕ್ಕಳವರೆಗೂ ಹರಡುತ್ತಿರುವ ಅಜ್ಞಾನವನ್ನು ತಡೆಯಲು ರಾಜಯೋಗದ ಅರ್ಥ ತಿಳಿಸುವ ಗುರು ಬೇಕಾಗಿದೆ. ಅಂದರೆ ನಾನ್ಯಾರು ಪ್ರಶ್ನೆಗೆ ಉತ್ತರ ಒಳಗಿನ ಸತ್ಯದಿಂದ ತಿಳಿಯಬೇಕಿದೆ. ಮಂತ್ರ,ತಂತ್ರ,ಯಂತ್ರವು ಮಾಧ್ಯಮವಷ್ಟೆ .ಇದನ್ನು ಕುತಂತ್ರದಿಂದ ಬಳಸಿದರೆ ಅಜ್ಞಾನ. ಸ್ವತಂತ್ರ ವಾಗಿ ತಿಳಿದರೆ ಆತ್ಮಜ್ಞಾನವಾಗುತ್ತದೆ. ಯಾರಿಗೆ ಸಿಕ್ಕಿದೆ ಸ್ವತಂತ್ರ?
No comments:
Post a Comment