ಬಡವರೆಂದರೆ ಅನ್ನಕ್ಕೆ ಗತಿಯಿಲ್ಲದವರೆಂದು ಒಂದು ರುಪಾಯಿಗೆ ಕೆ.ಜಿ ಅಕ್ಕಿ ಭಾಗ್ತ ಹಿಂದಿನ ಸರ್ಕಾರ ನೀಡಿತು. ಹೀಗೇ ಶಾದಿ ಭಾಗ್ಯ,ಉಚಿತ ಶಿಕ್ಷಣಭಾಗ್ಯ, ಉಚಿತ ವಸತಿ, ಉಚಿತ ಗ್ಯಾಸ್ ಭಾಗ್ಯ ಹೀಗೇ ಉಚಿತವಾಗಿ ಕೊಡುತ್ತಿದ್ದರೂ
ಬಡತನದ ರೇಖಿಯಿಂದ ಹೊರಬಂದೆದ್ದೇವೆನ್ನುವ ಜನರು ಸರ್ಕಾರದ ಮುಂದೆ ಬಂದಿಲ್ಲವೆಂದರೆ ಈ ಭಾಗ್ಯಗಳ ಫಲಾನುಭವಿಗಳು ಯಾರು? ಈ ಪ್ರಶ್ನೆ ಹಾಕದೆ ಇನ್ನಷ್ಟು ಉಚಿತ ಸಾಲದ ದವಡೆಗೆ ಜನರನ್ನು ತಳ್ಳಿದರೆ ಖಚಿತವಾಗಿ ರೋಗ ಆವರಿಸುತ್ತದೆ.
ಸಾಮಾನ್ಯವಾಗಿ ಸ್ವಾಭಿಮಾನ, ಸ್ವಾವಲಂಬನೆ, ಸ್ವತಂತ್ರ ವಾಗಿ ದುಡಿಯುವವರನ್ನು ನಮ್ಮ ದೇಶದಲ್ಲಿ ಜ್ಞಾನಿಗಳೆನ್ನುತ್ತಿದ್ದರು.
ಅವರಿಗೆ ಸರ್ಕಾರದ ಅಗತ್ಯವಿಲ್ಲದೆಯೇ ಜೀವನ ನಡೆಸೋ ಆತ್ಮಶಕ್ತಿಯಿತ್ತು. ದಾಸ,ಶರಣರನ್ನು ಬಡವರೆನ್ನುವವರಿದ್ದಾರೆಯೆ? ಅಂದಿನ ಅಜ್ಞಾನಿಗಳು ಹಾಗೇ ತಿಳಿದು ತಿರಸ್ಕಾರದಿಂದ ಕಂಡಿದ್ದರು.ಆದರೆ ಅವರು ಯಾವತ್ತೂ ರಾಜನ ಬಳಿ ಬೇಡದೆ ಸ್ವತಂತ್ರ ಜೀವನ ನಡೆಸುತ್ತಾ ಆತ್ಮಜ್ಞಾನದಿಂದಲೇ ಪರಮಾತ್ಮನ ದರ್ಶನ ಪಡೆದ ಮಹಾತ್ಮರಾದರು.ಈಗ ಅವರು ಪೂಜನೀಯರಾಗಿರುವರು.
ಆತ್ಮಜ್ಞಾನವುಳ್ಳ ಮಾನವನೆ ಶ್ರೀಮಂತ ಎನ್ನುವುದು ಅಧ್ಯಾತ್ಮ ಸತ್ಯ ಆದರೆ ಇಂದು ಸರ್ಕಾರದ ಭಾಗ್ಯಗಳನ್ನು ಪಡೆದವರ
ಸಾಲವೇ ತೀರುತ್ತಿಲ್ಲ. ಜೊತೆಗೆ ರೋಗಗಳೂ ಹೆಚ್ಚು, ಅತಿಯಾದ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡವರು ಬಡವರಾಗುತ್ತಾರೆ. ಬಡತನಕ್ಕೆ ಕಾರಣವೆ ಅಜ್ಞಾನದ ಶಿಕ್ಷಣ. ಎಲ್ಲಿಯವರೆಗೆ ಪ್ರಜಾಪ್ರಭುತ್ವದ ಪ್ರಜೆಗೆ ಸರಿಯಾದ ಜ್ಞಾನದ ಶಿಕ್ಷಣ ನೀಡದೆ ಉಚಿತ ಸಾಲ,ಸೌಲಭ್ಯ, ಹಣ,ಆಹಾರಕೊಟ್ಟು ಸರ್ಕಾರಗಳು ತಮ್ಮವಶದಲ್ಲಿಟ್ಟುಕೊಂಡು ರಾಜಕೀಯ ನಡೆಸುವುದೋ ಅಲ್ಲಿಯವರೆಗೆ ಬಡತನದ ಸಮಸ್ಯೆಗೆ ಪರಿಹಾರವಿಲ್ಲ.
ಅಧ್ಯಾತ್ಮ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಸೋತಿರುವ ಪ್ರಜಾಪ್ರಭುತ್ವ ಇಂದು ರಾಜಪ್ರಭುತ್ವ ದಂತೆ ಭೋಗದ ಜೀವನಕ್ಕೆ ಹೊರಗೆ ಹೋಗುತ್ತಾ ಸಾಲದ ಜೀವನಕ್ಕೆ ಶರಣಾಗುವುದೋ ಕೊನೆಯಲ್ಲಿ ಯಾವ ಸರ್ಕಾರದ ಸಹಾಯವಿಲ್ಲದೆ ಜೀವ ಹೋಗುವಾಗ ಸಾಲ ಮಾತ್ರ ಹೊತ್ತು ಹೋಗುತ್ತದೆ. ಇದಕ್ಕೆ ಹಿಂದಿನ ಮಹಾತ್ಮರುಗಳು ಸಾಲವೇ ಶೂಲವೆಂದರು. ಒಟ್ಟಿನಲ್ಲಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂದಂತೆ ಬಡತನದ ಹೆಸರಲ್ಲಿ ಮಧ್ಯವರ್ತಿಗಳು ತಮ್ಮ ರಾಜಕೀಯ ನಡೆಸುತ್ತಾ ಜ್ಞಾನವನ್ನು ಬೆಳೆಸದೆ ಆಳುತ್ತಿರು
ವುದು ಭಾರತದಂತಹ ಧಾರ್ಮಿಕ ದೇಶಕ್ಕೆ ನಷ್ಟ.
ಇದರೊಂದಿಗೆ ಇಡೀ ದೇಶದ ಜನರ ತಲೆಯ ಮೇಲೆ ಸಾಲದ ಹೊರೆ ಹಾಕಿ ವಿದೇಶಿ ಕಂಪನಿಗಳನ್ನು ಒಳಗೆ ಕರೆದು ಕೂರಿಸಿ ಇಲ್ಲಿಯ ಭೂಮಿಯನ್ನು ಒಪ್ಪಿಸಿದರೆ ಬಡತನ
ಇರೋದು ಜ್ಞಾನದಲ್ಲಿ.
ನಮ್ಮಮಹಾತ್ಮರುಗಳಲ್ಲಿ ಹಣವಿರಲಿಲ್ಲ ಹಾಗಂತ ಅವರು ಬಡವರಾಗಿರಲಿಲ್ಲ. ಜ್ಞಾನದ ಹಸಿವಿದ್ದವರನ್ನು ಜ್ಞಾನದಿಂದ ತೃಪ್ತಿ ಪಡಿಸುವ ಶಿಕ್ಷಣಕೊಡಬೇಕು. ಹೊಟ್ಟೆಗೆ ಬಟ್ಟೆಗೆ ಇದ್ದು
ಜ್ಞಾನದಲ್ಲಿ ಬಡತನವಿದ್ದರೆ ಇವರನ್ನು ಬಡವರೆನ್ನುವ ಭಾರತ ಇಂದಿಗೂ ಅಜ್ಞಾನದಲ್ಲಿರೋದಕ್ಕೆ ಕಾರಣವೆ ಸರ್ಕಾರಗಳು
ನೀಡುತ್ತಿರುವ ಉಚಿತ ಭಾಗ್ಯಗಳಾಗಿವೆ.
ನಿಜವಾದ ಬಡವರ ಕೈ ಸೇರುವ ಮೊದಲೇ ಮಧ್ಯವರ್ತಿಗಳು
ದುರ್ಭಳಕೆ ಮಾಡಿಕೊಂಡು ಅಳಿದುಳಿದದ್ದನ್ನು ಬಡವರಿಗೆ ಹಂಚಿದರೆ ಯಾರ ಭಾಗ್ಯೋದಯವಾಗುವುದು?
ಭ್ರಷ್ಟಾಚಾರದ ಹಣದಲ್ಲಿ ಮತ್ತಷ್ಟು ಭ್ರಷ್ಟಾಚಾರಿಗಳೇ ಬೆಳೆಯೋದು. ಅಂದರೆ ಬಡತನದ ಹೆಸರಲ್ಲಿ ಸಾಕಷ್ಟು ಭ್ರಷ್ಟಾಚಾರ ಬೆಳೆಯುತ್ತಿದೆ. ಇದರಿಂದಾಗಿ ದೇಶದಲ್ಲಿನ ಬಡತನ ಹೆಚ್ಚಾಗಿದೆ,ರೋಗ ಹೆಚ್ಚಾಗಿದೆ, ಹೋರಾಟ ನಡೆದಿದೆ ಕ್ರಾಂತಿ ಬೆಳೆದಿದೆ ಎಂದರೆ ಇವೆಲ್ಲವುಗಳ ಹಿಂದಿನ ಉದ್ದೇಶ ಒಂದೇ ಸರ್ಕಾರಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು
ಜನರನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ತಾತ್ಕಾಲಿಕ ತಂತ್ರ.
ಒಂದು ವರ್ಷ ಉಚಿತ ಆಹಾರಧಾನ್ಯದ ನಂತರ ಬಡತನ ಹೋಗುವುದೆ? ಇದಕ್ಕೆ ಬದಲಾಗಿ ಎಲ್ಲಾ ಪ್ರಜೆಗಳ ಮಕ್ಕಳಿಗೆ ಉಚಿತ ಜ್ಞಾನದ ಶಿಕ್ಷಣ ನೀಡುವುದರಿಂದ ಸಾಕಷ್ಟು ಬದಲಾವಣೆ ಸಾಧ್ಯ.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಉಚಿತ ಊಟ,ವಸ್ತ್ರ ಪಠ್ಯಪುಸ್ತಕಗಳು,ಸೈಕಲ್ ಮುಂತಾದವು ಬಡವರ ಮಕ್ಕಳಿಗೆ
ಕೊಡುತ್ತಿದ್ದು ಹೆಚ್ಚುವರಿಯಾಗಿರುವುದನ್ನು ಸಿಬ್ಬಂದಿ ವರ್ಗ ಪಡೆದರೂ ಯಾರೂ ಕೇಳೋರಿಲ್ಲ. ಹಾಗೆ ಒಂದು ರುಪಾಯಿ ಅಕ್ಕಿ ಪಡೆದು 20-30 rs ಗೆ ಮಾರುವವರು ಬಡವರೆ?
ಇನ್ನೂ ಇಂದಿರಾ ಕ್ಯಾಟೀಂನ್ ಗತಿ ಕೇಳೋರಿಲ್ಲ.
ಆಹಾರ ತಯಾರಿಸಲು ಸೋಮಾರಿಗಳಾದವರೂ ಹತ್ತಿರದ ಇಂದಿರಾ ಕ್ಯಾಂಟೀನ್ ಬಳಸಿದರೆ ಸರ್ಕಾರದ ಉದ್ದೇಶ ಜನರನ್ನು ಸೋಮಾರಿ ಮಾಡುವುದಾದರೆ ಸರಿಯಾಗಿದೆ. ಸೋ 'ಮಾರಿ' ದರ್ಶನ ಹೆಚ್ಚಿನಬಡವರಿಗಾಗಿದೆ.
ಅಧ್ಯಾತ್ಮದ ಪ್ರಕಾರ ತಿಳಿಯುವುದಾದರೆ ಮಾನವನ ಜನ್ಮಕ್ಕೆ ಕಾರಣ ಅವನ ಋಣ ಅಥವಾ ಸಾಲ. ಇದನ್ನು ಸುಜ್ಞಾನ, ಸ್ವಧರ್ಮ, ಸತ್ಕರ್ಮದಿಂದ ತೀರಿಸಿದಾಗಲೇ ಮುಕ್ತಿ ಮೋಕ್ಷ
ಎಂದಾಗ ಈಗ ಮುಕ್ತಿ ಯಾರಿಗೆ? ಯಾರಿಂದ? ಹೇಗೆ? ಸಿಗುತ್ತದೆ? ಉಚಿತ ಪಡೆದಷ್ಟೂ ಸಾಲ ಬೆಳೆಯುತ್ತದೆ.
ಸಾಲ ಮಾಡಿದ್ದಷ್ಟೂ ಸಮಸ್ಯೆ ಹೆಚ್ಚುತ್ತದೆ.ಸಮಸ್ಯೆ ಹೆಚ್ಚಾದಷ್ಟೂ ಆರೋಗ್ಯ ಕೆಡುತ್ತದೆ.ಆರೋಗ್ಯ ಕೆಟ್ಟಷ್ಟೂ ಸೋಮಾರಿಗಳು ಬೆಳೆಯುತ್ತಾರೆ.ಸೋ ಮಾರಿಯ ದರ್ಶನ ಕ್ಕೆ ಕಾರಣವೇ ಸರ್ಕಾರವಾಗಿದೆ. ಉಚಿತ ಊಟ,ವಸತಿ,ವಸ್ತು, ವಸ್ತ್ರ ದ ಜೊತೆಗೆ ಔಷಧವೂ ಕೊಟ್ಟರೆ ಜೀವನದ ಉದ್ದೇಶ ಏನು? ಎಲ್ಲಿರುವರು ಬಡವರು? ಎಲ್ಲಿರುವರು ಮಹಾತ್ಮರು?
ಹುಟ್ಟಿಸಿದವನು ಹುಲ್ಲು ಮೇಯಿಸನೆ? ಎಲ್ಲಿಗೆ ಹೋಗುತ್ತಿದೆ
ದೇಶ? ಆತ್ಮಾವಲೋಕನ ಮಾಡಿಕೊಳ್ಳಲಾಗದ ಪ್ರಜಾ ಶಕ್ತಿ ಅಜ್ಞಾನದ ರಾಜಕೀಯಕ್ಕೆ ಬಲಿಯಾದರೆ ಜೀವ ಹೋದರೂ
ಆತ್ಮರಕ್ಷಣೆಯಾಗದು.
ನಮಗೆ ಅಧಿಕಾರ ಕೊಡಿ ನಾವು ನಿಮ್ಮನ್ನು ಆಳುತ್ತೇವೆ ಎನ್ನುವುದರಲ್ಲಿಯೇ ಪ್ರಜಾಪ್ರಭುತ್ವದ ಅರ್ಥ ಕಳೆದುಕೊಂಡಿದೆ.
No comments:
Post a Comment