ರಾಜಕೀಯದಲ್ಲಿ ಗೆದ್ದವರು ಯಾರು ಸೋತವರು ಯಾರು?
ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಆಳುವವರನ್ನು ಗೆದ್ದವರೆಂದರೆ ಆಳಿಸಿಕೊಂಡವರನ್ನು ಸೋತವರೆನ್ನಬಹುದಷ್ಟೆ. ಕಾರಣ ಇಲ್ಲಿ ದೇಶ ಸ್ವತಂತ್ರ ಪಡೆದರೂ ಪ್ರಜೆಗಳು ಸ್ವತಂತ್ರ ಚಿಂತನೆ ಮಾಡುವಲ್ಲಿ ಸೋತು
ಹಿಂದುಳಿದಿರೋದು ಸತ್ಯ. ಪಕ್ಷಪಕ್ಷಗಳ ನಡುವಿನ ವೈರತ್ವವು
ಜನಸಾಮಾನ್ಯರ ಜೀವನವನ್ನು ಹಾಳು ಮಾಡುತ್ತಾ ದೇಶವೆ ವಿದೇಶವಾದರೂ ಪ್ರಗತಿ ಎನ್ನುವ ಅಜ್ಞಾನ ಆವರಿಸಿದೆ. ಈ ಅಜ್ಞಾನವೇ ಮಾನವನಿಗೆ ದೊಡ್ಡ ಶಾಪವಾಗಿದೆ. ಇದನ್ನು ಆಳುವವರು ಸರಿಪಡಿಸಿದರೆ ಅವರ ಅಧಿಕಾರವೇ ಕಳೆದು ಕೊಳ್ಳಬಹುದೆನ್ನುವ ಸತ್ಯ ಇಂದಿಗೂ ಜನಸಾಮಾನ್ಯರಿಗೆ ಅರ್ಥ ವಾಗದ ಕಾರಣವೇ ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ದೇವರು,ಧರ್ಮ, ಜಾತಿ, ಪಕ್ಷ,ಪಂಗಡದ ಹೆಸರಲ್ಲಿ ರಾಜಕೀಯತೆ ಬೆಳೆಸುತ್ತಾ ಜನರನ್ನು ಮನೆಯಿಂದ ಹೊರಗೆಳೆದು ಆಳುತ್ತಾ ಈಗ ಮನೆಯೊಳಗೆ ಕ್ಷೇಮವಾಗಿರಬೇಕಾಗಿದ್ದ ಮಹಿಳೆ,ಮಕ್ಕಳನ್ನೂ ಹೊರಗೆಳೆದರೆ
ಒಳಗಿರುವ ಮನಸ್ಸು ಎಚ್ಚರವಾಗಲು ಸಾಧ್ಯವೆ?
ಇಂತಹ ಅಧ್ಯಾತ್ಮ ಸತ್ಯವನ್ನು ಎಷ್ಟು ಅಸಡ್ಡೆ ಮಾಡಿಕೊಂಡರೂ ಅಷ್ಟೇ ಸಮಸ್ಯೆಗಳನ್ನು ಮಾನವ ಮುಂದೆ
ಎದುರಿಸಬೇಕಾಗುತ್ತದೆ. ಒಟ್ಟಿನಲ್ಲಿ ಮನುಕುಲವನ್ನು ಅಜ್ಞಾನದ ರಾಜಕೀಯ ದಾರಿತಪ್ಪಿಸಿ ಆಳುತ್ತಿದೆ.ಇದು ಭಾರತದಂತಹ ಪವಿತ್ರವಾದ ದೇಶವನ್ನು ಹಿಂದುಳಿಸಿರೋದು
ವಿಪರ್ಯಾಸವೆಂದರೆ ತಪ್ಪಿಲ್ಲ.
ಇಲ್ಲಿ ಹಣ,ಅಧಿಕಾರ,ಸ್ಥಾನಮಾನಕ್ಕೆ ಬೆಲೆಕೊಡುತ್ತಾ ತಮ್ಮ ಜ್ಞಾನವನ್ನು ಕಡೆಗಣಿಸಿಕೊಂಡವರೆ ಸಾಮಾನ್ಯರು.
ಸಾಮಾನ್ಯರ ಸಹಕಾರವೇ ಭ್ರಷ್ಟಾಚಾರಕ್ಕೆ ಕಾರಣ. ಭ್ರಷ್ಟಾಚಾರದ ಅರ್ಥ ತಿಳಿಯದವರಿಂದ ಭ್ರಷ್ಟಾಚಾರ ನಿರ್ಮೂಲನೆ ಗಾಗಿ ಹೋರಾಟ ನಡೆಸುವುದು ಭ್ರಷ್ಟಾಚಾರಿಗಳೇ ಎನ್ನುವ ಸತ್ಯದರ್ಶನ ಇನ್ನೂ ಭಾರತೀಯರಿಗೆ ಆಗದಿರೋದೆ ದೊಡ್ಡ ದುರಂತ. ಇದಕ್ಕೆ ಪರಿಹಾರ ಒಳಗಿತ್ತು. ಪರಿಹಾರ ಧನ ಹೊರಗಿನಿಂದ ಪಡೆದು ಇನ್ನಷ್ಟು ಸಮಸ್ಯೆಗಳನ್ನು ಸಾಲವನ್ನು ಹೊತ್ತು ಜೀವ ಹೋಗುತ್ತಿದೆ. ಈಗಲಾದರೂ ಎಚ್ಚರವಾದರೆ ಆತ್ಮಹತ್ಯೆ ಕಡಿಮೆಯಾಗಬಹುದು.
ಇಂದು ವಿಶ್ವ ಭ್ರಷ್ಟಾಚಾರ ನಿರ್ಮೂಲನೆ ದಿನವಂತೆ.ಇದಕ್ಕೆ ಒಂದು ದಿನ ಸಾಕೆ? ಪ್ರತಿದಿನವೂ ಬೇಕೆ? ಪ್ರತಿಕ್ಷಣವೂ ಆತ್ಮಾವಲೋಕನ ಮಾಡಿಕೊಳ್ಳಲು ಯೋಗಿಗಳಿಗಷ್ಟೆ ಸಾಧ್ಯ.
ಯೋಗಿಗಳ ದೇಶವನ್ನು ರಾಜಕೀಯವು ಭೋಗದ ಕಡೆಗೆ ನಡೆಸುತ್ತಾ ಭೌತಿಕದಲ್ಲಿ ಸತ್ಯವನ್ನು ಹುಡುಕುವ ಅಜ್ಞಾನವು ಭ್ರಷ್ಟರಿಗೆ ಉತ್ತಮ ದಾರಿಮಾಡಿಕೊಟ್ಟು ದೇಶವನ್ನಾಳುತ್ತಿದೆ.
ಯೋಗಿಗಳೆಂದರೆ ಯಾರು? ಪರಮಾತ್ಮನೊಡನೆ ಜೀವಾತ್ಮ ಸೇರಿದರೆ ಯೋಗವೆಂದರೆ ಇಂದಿನನಮ್ಮಜೀವ ಯಾರೊಡನೆ ಸೇರುತ್ತಿದೆ?
ರಾಜಯೋಗವೆಂದರೆ ನಮ್ಮ ನಾವು ಆಳಿಕೊಳ್ಳುವುದಾಗಿತ್ತು.
ಅದೂ ಅಧ್ಯಾತ್ಮ ಸತ್ಯದಿಂದ ಜೀವನ ನಡೆಸುವುದಾಗಿತ್ತು.
ಈಗ ನಡೆದಿದೆಯೆ? ಧಾರ್ಮಿಕ ಕ್ಷೇತ್ರವೇ ಭ್ರಷ್ಟಾಚಾರದ ಸುಳಿಯಲ್ಲಿದೆ ಎಂದರೆ ಕಾಯೋರು ಯಾರು?
ಎಲ್ಲಿರುವರು ಮಹಾತ್ಮರುಗಳು?
ಪ್ರಜಾಪ್ರಭುತ್ವ ಧರ್ಮದ ಪ್ರಕಾರ ಪ್ರಜೆಗಳಿಗೆ ಜ್ಞಾನದ ಶಿಕ್ಷಣ ನೀಡಿ ಸ್ವತಂತ್ರ ಜೀವನ ನಡೆಸಲು ಸಹಕರಿಸಬೇಕಾದ ಗುರು ಹಿರಿಯರು ರಾಜಕೀಯದ ಹಿಂದೆ ನಿಂತರೆ ಧರ್ಮ ಉಳಿಯಲು ಸಾಧ್ಯವೆ?
ಆಚಾರ,ವಿಚಾರ,ಪ್ರಚಾರದಿಂದ ಧರ್ಮ ರಕ್ಷಣೆ ಆಗಿದೆಯೆ?
ದೇಶದ ಸ್ವಾತಂತ್ರ್ಯ ಇರೋದೆ ಶಿಕ್ಷಣದಲ್ಲಿ. ದೇಶೀಯ ಶಿಕ್ಷಣ ನೀಡದೆ ಆಳುತ್ತಿರುವವರು ಯಾರು? ಪ್ರತಿಯೊಬ್ಬರೂ ಇಲ್ಲಿ ಸ್ವತಂತ್ರ ಪ್ರಜೆಗಳಾಗಿದ್ದರೂ ಸತ್ಯ ತಿಳಿಸಲಾಗಲಿ,
ಕೇಳುವುದಕ್ಕಾಗಲಿ ಜ್ಞಾನವಿಲ್ಲದೆ ಹಿಂದುಳಿದವರಾಗಿದ್ದರೆ ಬೇಡೋದು ಸರ್ಕಾರ ನಡೆಸೋರನ್ನು.ಪರಮಾತ್ಮ
ನಿರೋದೆಲ್ಲಿ?
ಪರಮಪವಿತ್ರ ಆತ್ಮ ಎಲ್ಲರೊಳಗೂ ಇದೆ.ಇದನ್ನರಿಯದೆ ಹೊರಗೆ ಹುಡುಕಿದರೆ ಸಿಗುವುದೆ? ದೈವತ್ವಕ್ಕೆ ತತ್ವಜ್ಞಾನದ ಅಗತ್ಯವಿತ್ತು.ತಂತ್ರದಿಂದ ತತ್ವವನ್ನು ಪ್ರಚಾರ ಮಾಡುತ್ತಾ ಆಳುವುದೇ ರಾಜಕೀಯ. ಸ್ವತಂತ್ರ ವಾಗಿದ್ದ ತತ್ವವನ್ನು ಅತಂತ್ರಸ್ಥಿತಿಗೆ ತಲುಪಿಸುವ ರಾಜಕೀಯದಿಂದ ಧರ್ಮ ರಕ್ಷಣೆ ಸಾಧ್ಯವೆ?
ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದ ದೇಶವನ್ನು ತಂತ್ರವೇ ಆಳುತ್ತಾ ತತ್ವದರ್ಶನವಾಗದೆ ಪ್ರಜೆಗಳ ಜೀವನ ಅತಂತ್ರಸ್ಥಿತಿಗೆ ತಲುಪಿದರೆ ಇದಕ್ಕೆ ಕಾರಣವೇನು?
ಅಜ್ಞಾನವೇ ಕಾರಣ. ಅದನ್ನು ಬೆಳೆಸಿದ ರಾಜಕೀಯ ಶಿಕ್ಷಣವೇ ಕಾರಣ. ಇಲ್ಲಿ ಧಾರ್ಮಿಕ ಕ್ಷೇತ್ರ ನಡೆಸುತ್ತಿರುವ ಶಿಕ್ಷಣವೂ ಒಂದು ಚೌಕಟ್ಟಿನ ರಾಜಕೀಯತೆ ಬೆಳೆಸಿದೆ. ತತ್ವದ ಪ್ರಕಾರ ದೇಶ ಒಂದೇ ಅದರೊಳಗಿನ ಧರ್ಮ, ಜಾತಿ, ಪಕ್ಷವು ಜನರನ್ನು ಆಳಲು ಹೊರಟು ತಾವೇ ಆಳಾಗಿ ಹೋದರೆ ಹಾಳಾಗೋದು ದೇಶವಲ್ಲವೆ?
ದೇಹದೊಳಗಿರುವ ಎಲ್ಲಾ ಅಂಗಾಂಗಗಳಿಗೂ ತಮ್ಮದೇ ಆದ ಕಾರ್ಯ ಕ್ರಮವಿದೆ.ಇದು ಕ್ರಮಬದ್ದವಾಗಿ ನಡೆಯಲು ಯೋಗ ಶಕ್ತಿಯ ಅಗತ್ಯವಿದೆ. ಭೋಗಕ್ಕೆ ಬಳಸಿದರೆ ರೋಗವೇ ಬೆಳೆಯುತ್ತದೆ. ಇದಕ್ಕೆ ಕಾರಣ ದೇಹವೇ ಅಥವಾ ದೇಹಧಾರಿಯಾದ ಆತ್ಮನೇ ಅಥವಾ ಮನಸ್ಸೆ?
ಮನಸ್ಸನ್ನು ನಿಗ್ರಹಿಸುವ ಯೋಗಿಗಳ ದೇಶವನ್ನು ಸ್ಮಾಟ್೯ ಮಾಡಲು ಹೊರಗಿನ ದೇಶದ ಸಾಲ,ಬಂಡವಾಳ, ವಿಜ್ಞಾನವನ್ನು ತಂದು ತುಂಬಿ ಆತ್ಮನಿರ್ಭರ ಭಾರತವೆಂದರೆ
ಅಧ್ಯಾತ್ಮದ ಪ್ರಕಾರ ಅಸತ್ಯ. ಭೌತಿಕದ ವಿಜ್ಞಾನಕ್ಕೂ ಅಧ್ಯಾತ್ಮ ಜ್ಞಾನಕ್ಕೂ ಅಂತರ ಬೆಳೆಸಿದರೆ ಅಂತರದಲ್ಲಿ ಮಧ್ಯವರ್ತಿಗಳು ತಮ್ಮ ಸಾಮ್ರಾಜ್ಯ ಸ್ಥಾಪನೆ ಮಾಡಿಕೊಂಡು ಆಳುವುದು ಸಹಜ.
ಮಾನವ ತನಗೆ ತಾನೇ ಮೋಸ ಹೋಗುವುದರಲ್ಲಿ ನಿಸ್ಸೀಮ
ಎಂದಿರೋದು ಇದಕ್ಕೆ ಇರಬೇಕು. ಯಾರಿಗೆ ಯಾರೂ ಇಲ್ಲದ ಜಗತ್ತಿನಲ್ಲಿ ನಾನೇ ಅಧಿಕಾರಿ,ರಾಜನೆಂದರೆ ಅಜ್ಞಾನವಷ್ಟೆ. ಇವರ ಹಿಂದೆ ನಡೆಯೋದು ಅಜ್ಞಾನಿಗಳೇ ಹೊರತು ಜ್ಞಾನಿಗಳಲ್ಲ. ಇದು ಪುರಾಣ ಕಾಲದಿಂದಲೂ ನಡೆದಿರಬಹುದು.ಆದರೆ ಅಂದಿನ ಶಿಕ್ಷಣವು ಜ್ಞಾನದ ಪರವಿತ್ತು.ಈಗ ಅಜ್ಞಾನದ ಪರವಿದೆ ಇದೇ ಸತ್ಯಯುಗಕ್ಕೂ ಮಿಥ್ಯಯುಗಕ್ಕಿರುವ ವ್ಯತ್ಯಾಸ ವೆನ್ನಬಹುದು.
ಯಾರದ್ದೋ ಕಥೆಯನ್ನು ನನ್ನ ಕಥೆ ಎಂದರೆ ಸತ್ಯವೆ? ಯಾರದ್ದೋ ಜೀವನ ಚರಿತ್ರೆಯನ್ನು ನಮ್ಮದು ಎಂದರೆ ಸರಿಯೆ? ಯಾರದ್ದೋ ದೇಶದ ಒಳಗಿದ್ದು ನಮ್ಮ ದೇಶ ಎಂದರೆ ಸರಿಯೆ? ಯಾರದ್ದೋ ದೇಶವನ್ನು ನಾವಾಳೋದು ಧರ್ಮ ವೆ? ಯಾರನ್ನೂ ನಂಬಿ ನಮ್ಮವರನ್ನು ದ್ವೇಷ ಮಾಡಿದರೆ ನಷ್ಟ ಯಾರಿಗೆ?
ಒಳಗಿದ್ದ ಸತ್ಯ ಧರ್ಮ ಬಿಟ್ಟು ಹೊರಗಿನಿಂದ ಒಳಗೆಳೆದುಕೊಂಡರೆ ಒಳಗಿನ ಶಕ್ತಿ ಬಿಡುವುದೆ? ಹೀಗೇ ಸಾಮಾನ್ಯಜ್ಞಾನದಿಂದಲೇ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ನಮ್ಮಲ್ಲಿ ಸಾಮಾನ್ಯಜ್ಞಾನ ಇರಬೇಕಷ್ಟೆ.
ಅದೇ ಮುಂದೆ ವಿಶೇಷವಾಗಿ ಒಳಗೆ ಬೆಳೆದಾಗಲೇ ವಿಜ್ಞಾನ ಆಗುತ್ತದೆ. ನೇರವಾಗಿ ವಿಜ್ಞಾನಿ ಆಗೋದು ಓದಿ ತಿಳಿದವರಷ್ಟೆ
ಅನುಭವಿಸದೆ ಸತ್ಯ ತಿಳಿಯಲಾಗದ ಮೇಲೆ ಅದರೊಳಗಿನ
ರಾಜಕೀಯ ನಮ್ಮನ್ನು ಆಳುತ್ತದೆನ್ನಬಹುದು.
ವಿದ್ಯಾವಂತರೆಲ್ಲರೂ ಜ್ಞಾನಿಗಳಲ್ಲ.ಜ್ಞಾನಿಗಳಾದವರು ವಿದ್ಯಾವಂತರಾಗಬೇಕೆಂದಿಲ್ಲ. ವಿದ್ಯೆಗಿಂತ ಜ್ಞಾನವೇ ಶ್ರೇಷ್ಠ.
ನಮ್ಮ ಸಹಕಾರ ಜ್ಞಾನಕ್ಕೆ ಇದ್ದರೆ ಆತ್ಮನಿರ್ಭರ ಭಾರತ.
ಭೌತಿಕ ವಿಜ್ಞಾನಕ್ಕೆ ಸೀಮಿತವಾದರೆ ಆತ್ಮದುರ್ಭಲ ಭಾರತ.
ತಾವೇ ಆಪರೇಶನ್ ಮೂಲಕ ಆರೋಗ್ಯ ಸುಧಾರಸಿಕೊಂಡಿರುವಾಗ ಜನರ ಆರೋಗ್ಯರಕ್ಷಣೆ ಸಾಧ್ಯವೆ?ಆಪರೇಷನ್ ಆಂತರಿಕ ಅರಿವಿನಿಂದ ಹೆಚ್ಚಾಗಬೇಕಿದೆ.
ಹೊರಗಿನ ರಾಜಕೀಯದಿಂದಲ್ಲ. ಇಲ್ಲಿ ಯಾರೂ ಪರಿಪೂರ್ಣ ರಿಲ್ಲ,ಸರ್ವಜ್ಞ ರಲ್ಲ. ಸ್ವತಂತ್ರ ರಾಗಿಲ್ಲ. ಎಲ್ಲರ ಸಹಕಾರದಿಂದ ಬೆಳೆದ ಅಜ್ಞಾನಕ್ಕೆ ಮುಕ್ತಿ ಮೋಕ್ಷ ಸಿಗೋದಿಲ್ಲ.
ಅವರವರ ಹಿಂದಿನ ಮಹಾತ್ಮರು ತಿಳಿದು ತಿಳಿಸಿ ನಡೆದ ಧರ್ಮ ಕರ್ಮ ವನ್ನರಿಯುವುದೇ ಹಿಂದೂ ಧರ್ಮ ವಾಗುತ್ತದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.
ಕೋಟಿ ದೇವರಿದ್ದರೂ ಒಂದು ದೇವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸೋತರೆ ವ್ಯರ್ಥ.ಹೀಗೇ ನಮ್ಮ ನಮ್ಮ ಮನೆಯ ಅಶಾಂತಿಗೆ ನಮ್ಮ ಅಜ್ಞಾನದ ಸ್ವಾರ್ಥ ಅಹಂಕಾರ ದ ರಾಜಕೀಯವೇ ಕಾರಣವಾಗುತ್ತಿದೆ. ಎಲ್ಲಿಗೆ ತಲುಪಿದೆ ಮನುಕುಲ? ನಿಜವಾದ ಭಾರತೀಯರು ಯಾರು?
ಮಂತ್ರ,ತಂತ್ರ,ಯಂತ್ರಗಳು ಸ್ವತಂತ್ರ ಜ್ಞಾನದೆಡೆಗೆ ನಡೆಸಿದೆಯೆ?ಆತ್ಮಾವಲೋಕನ ಅಗತ್ಯವಿದೆ.ಅದೂ ಜ್ಞಾನದಿಂದ ಮಾತ್ರ ಸಾಧ್ಯವಿದೆ.
No comments:
Post a Comment