ಪ್ರತ್ಯಕ್ಷಾನುಮಾನಾಗಮಾ: ಪ್ರಮಾಣಾನಿ
ಪಾತಂಜಲ ಯೋಗಸೂತ್ರ-೭
ಪ್ರತ್ಯಕ್ಷ,ಅನುಮಾನ,ಆಪ್ತವಾಕ್ಯಗಳೇ ಪ್ರಮಾಣ.
ನಾನು ಯಾವುದನ್ನು ಕೇಳುತ್ತೇನೆ,ಹೇಳುತ್ತೇನೆ,ಮಾಡುತ್ತೇನೆ ಅದು ನನ್ನ ಆತ್ಮಸಾಕ್ಷಿಗೆ ಸರಿಯಿದ್ದರೆ,ನಮ್ಮ ಇಂದ್ರಿಯಗಳು ಯಾವುದೂ ಮೋಹಗೊಳಿಸದೆ ಇದ್ದರೆ ನಾವು ಏನೇನನ್ನು ಇಂದ್ರಿಯಗಳ ಮೂಲಕ ಅನುಭವಿಸುತ್ತೇವೆಯೋ ಅದು ಪ್ರತ್ಯಕ್ಷ ಪ್ರಮಾಣ.
ಅನುಮಾನದಲ್ಲಿ ದ್ವಂದ್ವವಿರುತ್ತದೆ ಬೇರೆಯವರಿಂದ ತಿಳಿದು ತಿಳಿಸುವುದು ,ಮೂರನೆಯವರಿಗೆ ದ್ವಂದ್ವವಾಗಿ ಅನುಮಾನ ಆಗಬಹುದು.
ನಿರ್ಲಿಪ್ತಚಿತ್ತರಾದ ಯೋಗಿಗಳು ಎಲ್ಲಾ ದ್ವಂದ್ವ ಮೀರಿ ಸತ್ಯ ತಿಳಿದವರಾದ ಕಾರಣ ಅವರೆದುರು ಭೂತ,ವರ್ತ ಮಾನ ಭವಿಷ್ಯವೆಲ್ಲವೂ ಓದುವ ಪುಸ್ತಕದಂತಿರುತ್ತದೆ.ಯೋಗಿ ಎಂದರೆ ಪರಮಾತ್ಮನೊಳಗೇ ಸೇರಿರುವ ಜೀವಾತ್ಮರು. ನಾವು ಜ್ಞಾನಾರ್ಜನೆಗೆ ಪಡುವ ಕಷ್ಟವನ್ನು ಅವರು ಪಡುವ ಅಗತ್ಯವಿಲ್ಲ ಅವರ ಮಾತೇ ಪ್ರಮಾಣ.ಸತ್ಯ ತಮ್ಮಲ್ಲಿಯೇ ಅವರು ಕಾಣುವರು. ಹಿಂದಿನ ಯೋಗಿಗಳ ಪ್ರಮಾಣವನ್ನು ವಿರೋಧಿಸದಿರೋದಿರೋದೆ ಮಹಾಪ್ರಮಾಣವೆನ್ನುವುದು ಹಿಂದೂ ಧರ್ಮ.
ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವರು.
ಯಾವುದೇ ವಿಚಾರವಾದರೂ ಪ್ರತ್ಯಕ್ಷವಾಗಿ ಕಣ್ಣಿಗೆ ಕಂಡರೂಅದರೊಳಗೆ ಹೊಕ್ಕಿ ಅನುಭವಿಸಿದ ನಂತರವೇ ಇದನ್ನು ಸತ್ಯವೆನ್ನಲು ಸಾಧ್ಯ.ಅಲ್ಲಿಯವರೆಗೆ ಅದೊಂದು ಅನುಮಾನವಾಗಿರುತ್ತದೆ.ಅನುಮಾನಂ ಪೆದ್ದರೋಗಂ ಎಂದಂತೆ ಅನುಮಾನವನ್ನು ಪರಿಹರಿಸಿಕೊಳ್ಳದೆ ಬೆಳೆಸಿಕೊಂಡರೆ ಕೊನೆಗೆ ಪೆದ್ದರಂತೆ ವರ್ತಿಸಬೇಕಾಗುತ್ತದೆ.
ಖಗೋಳಶಾಸ್ತ್ರ ದಲ್ಲಿ ಏನಾದರೂ ಹೊಸದನ್ನು ಕಂಡುಹಿಡಿದು ತೋರಿಸಿದಂತೆ ಅಶುದ್ದರಾದ ಯಾರೂ ಅಧ್ಯಾತ್ಮಿಕ ಶಕ್ತಿಯನ್ನು ಪಡೆಯಲು ಸಾಧ್ಯವಿಲ್ಲ. ರಾಜಕೀಯದಿಂದ ಅಧ್ಯಾತ್ಮ ದ ಬೆಳವಣಿಗೆಯಾಗದು.
ರಾಜಯೋಗದಿಂದ ಮಾತ್ರ ಇದು ಸಾಧ್ಯವೆನ್ನುವರು ಮಹಾತ್ಮರುಗಳು.ಇಲ್ಲಿ ಮಹಾತ್ಮರೆಂದರೆಆತ್ಮಾನುಸಾರ ಸತ್ಯ,ಧರ್ಮದಲ್ಲಿ ನಡೆದವರಾಗಿರುವ ಯೋಗಿಗಳಾಗುತ್ತಾರೆ. ಅಧ್ಯಾತ್ಮ ಸತ್ಯವು ಹಿಂದಿನ ಯೋಗಿಗಳ ಪ್ರಮಾಣವನ್ನು ವಿರೋದಿಸದೆ ಹೊಂದಿಕೆಯಾಗಿರುತ್ತದೆ. ಆತ್ಮಜ್ಞಾನ ವಿಜ್ಞಾನದ ಅಂತರ ಬೆಳೆದಾಗಲೇ ಮಾನವನಲ್ಲಿ ಅನುಮಾನ ಹೆಚ್ಚಾಗುತ್ತಾ ಅಜ್ಞಾನ ಬೆಳೆಯುತ್ತದೆ. ಅಜ್ಞಾನದಿಂದ ಧರ್ಮ ರಕ್ಷಣೆ ಕಷ್ಟ.
ಪ್ರತಿಯೊಬ್ಬರೂ ದೇವರ ಪುತ್ರರು ಎನ್ನಬಹುದಷ್ಟೆ. ದೇವರಾಗಲಾರರು,ದೇವರನ್ನು ನೋಡಲಾಗದು.
ದೈವತ್ವವನ್ನು ಹೊಂದಿದವರಷ್ಟೆ ದೇವೀ ಸಂಪತ್ತನ್ನು ಅರ್ಥ ಮಾಡಿಕೊಂಡು ಭೂಮಿಯಲ್ಲಿ ಧರ್ಮ ರಕ್ಷಣೆ ಮಾಡಬಹುದು. ಲೋಕಕಲ್ಯಾಣಾರ್ಥ ವಾಗಿ ತತ್ವ ಬಿಡದೆ ಎಲ್ಲಾ ಜೀವಾತ್ಮರಿಗೂ ಒಳ್ಳೆಯ ದಾರಿದೀಪವಾಗಿ
ತಾನೂ ನಡೆದು ಇತರರನ್ನು ನಡೆಸುವವರೆ ನಿಜವಾದ ಯೋಗಿ.ಇದರಲ್ಲಿ ಇದು ನನಗೆ ಮಾತ್ರ ಸಾಧ್ಯ ಎನ್ನುವ ಅಹಂಕಾರ ವಿಲ್ಲದೆ ನನ್ನಂತೆ ಪರರು ಎನ್ನುವ ಭಾವನೆ
ಇರುತ್ತದೆ. ಒಂದೇ ದೇವರು,ಒಂದೇ ಸತ್ಯ,ಒಂದೇ ಜಗತ್ತು ಒಂದೇ ಭೂಮಿಯಲ್ಲಿ ಅಸಂಖ್ಯಾತ ಬೆಳೆದಿರುವುದು ಅಜ್ಞಾನದಿಂದ. ಒಟ್ಟಿನಲ್ಲಿ ಯಾರಿಗೆ ಯಾವ ರೂಪದಲ್ಲಿ ಯಾವಾಗ ಆತ್ಮಸಾಕ್ಷಾತ್ಕಾರ ವಾಗುವುದೋ ಅದೆಲ್ಲವೂ ಯೋಗವಾಗಿರುತ್ತದೆ. ಪರಮಾತ್ಮನ ಇಚ್ಚೆಯಿಲ್ಲದೆ ಏನೂ ನಡೆಯದು ಎನ್ನುವವರು ಪ್ರತಿಯೊಬ್ಬರಲ್ಲಿಯೂ ಅಡಗಿರುವ ಆ ಪರಮಾತ್ಮನ ಕಾಣೋದು ಕಷ್ಟ.ನಾನೇ ಬೇರೆ ನೀನೇ ಬೇರೆ ಎನ್ನುವುದು ದ್ವಂದ್ವವಾದರೂ ಭೂಮಿಯ ಮಾಯಾಶಕ್ತಿಯ ಮುಂದೆ ಯಾವ ಆಟವೂ,ನಾಟಕವೂ ನಡೆಯದು. ಪ್ರಯತ್ನಪಟ್ಟರೆ ಫಲವಿದೆ. ಇದು ಅಧ್ಯಾತ್ಮಿಕ ಆದರೆ ಯೋಗ. ಭೌತಿಕವಾದರೆ ಭೋಗವಾಗಿರುತ್ತದೆ.ಭೋಗ ಹೆಚ್ಚಾದರೆ ರೋಗ. ರೋಗದಲ್ಲಿ ಅಧ್ಯಾತ್ಮ ಸಾಧನೆ ಕುಂಟುತ್ತದೆ. ಎನ್ನುವರು ಪಾತಂಜಲಿ ಮಹರ್ಷಿಗಳು.
ಭೌತಿದೆಡೆಗೆ ನಡೆದ ಇಂದಿನ ಜಗತ್ತಿನಲ್ಲಿ ಭೋಗವೇ ಹೆಚ್ಚು
ಇದರಿಂದಾಗಿ ಅಧ್ಯಾತ್ಮ ಸಾಧನೆ ಕುಂಟಿತವಾಗಿ ಭೌತಿಕದ ಅಸುರಿತನ ಹೆಚ್ಚಾಗಿದೆ. ಇದಕ್ಕೆ ಸಹಕರಿಸಿದಷ್ಟೂ ಅಜ್ಞಾನ ಬೆಳೆದು ಜ್ಞಾನ ಕುಸಿಯುತ್ತದೆ. ಒಳಗಿನ ಕಣ್ಣು ಹೊರಗಿನಕಣ್ಣು ಒಂದೇ ದೃಷ್ಟಿಯಿಂದ ನೋಡುವುದೇ ಮಹಾಯೋಗಿಗಳ ಲಕ್ಷಣ. ತನ್ನ ತಪ್ಪು ಅರ್ಥ ವಾಗದೆ ಪರರ ತಪ್ಪು ಅರ್ಥ ವಾಗದು. ತನ್ನ ತಾನರಿಯದೆ ಪರರನ್ನು ಆಳೋದರಿಂದ ಧರ್ಮ ರಕ್ಷಣೆ ಆಗದು. ಹಣದಿಂದ ಸತ್ಯ ತಿಳಿಯಲಾಗದು. ಹೀಗೇ ಜ್ಞಾನ ವಿಜ್ಞಾನವೆಲ್ಲವೂ ಅಣು ಪರಮಾಣುಗಳ ಸಹಕಾರವಿಲ್ಲದೆ ಬೆಳೆದಿಲ್ಲ.ಅವುಗಳ ಸದ್ಬಳಕೆ ಮಾನವ ಮಾಡಿಕೊಳ್ಳಲು ಸೋತಿದ್ದಾನಷ್ಟೆ.
ಗುರುಗಳನ್ನು ದೇವರಿಗಿಂತ ದೊಡ್ಡವರೆನ್ನಲು ಕಾರಣವಿಷ್ಟೆ.
ಗುರುವಿನಲ್ಲಿ ಯಾವುದೇ ರಾಜಕೀಯವಿರದೆ ಜ್ಞಾನವನ್ನು
ಎಲ್ಲರಿಗೂ ಸಮಾನವಾಗಿ ಹಂಚುವ ಶಕ್ತಿಯಿರುತ್ತದೆ.ಸ್ವಾರ್ಥ ಅಹಂಕಾರ ರಹಿತವಾಗಿರುವ ಮಹಾತ್ಮರು,ಯೋಗಿಗಳಾಗಿ
ಗುರುವಾಗಿರುತ್ತಾರೆ. ಅನುಭವ ಜ್ಞಾನದಿಂದ ಪರಿಸ್ಥಿತಿಯನ್ನು
ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾದಂತೆ ದೇವತೆಗಳಿಗೂ ಕಷ್ಟ. ಇಲ್ಲಿ ಭೂಮಿ ಮೇಲಿರುವ ದೇವರು ಮಾನವರು ಅಸುರರ ಗುಣವನ್ನು ಅರ್ಥ ಮಾಡಿಕೊಳ್ಳಲು
ಯೋಗಿಗಳಿಗಷ್ಟೆ ಸಾಧ್ಯ. ಶ್ರೀ ಕೃಷ್ಣ ಪರಮಾತ್ಮ ಯೋಗಿಯಾಗಿದ್ದು ಭೋಗ ಜೀವನದಲ್ಲಿದ್ದರೂ ಸ್ಥಿತಪ್ರಜ್ಞ
ನಾಗಿದ್ದು ಅಂದಿನ ಧರ್ಮರಕ್ಷಣೆಗಾಗಿ ಸಾಮಾನ್ಯರಂತೆ
ಜೀವನ ನಡೆಸುತ್ತಿದ್ದ ಹಾಗೆ ಶ್ರೀ ರಾಮಚಂದ್ರನ ಅವತಾರ
ಅಂದಿನ ಮಹಾಯೋಗಿಗಳ ಆಶೀರ್ವಾದ ಉಪದೇಶವು
ಕ್ಷತ್ರಿಯರಿಗೆ ಗುರಿಯೆಡೆಗೆ ನಡೆಸಿತ್ತು ಎಂದರೆ ಗುರುವೇ ಕಣ್ಣಿಗೆ ಕಾಣುವ ದೇವರಾಗಿದ್ದರು.ಅಂದಿನ ಶಿಕ್ಷಣವೇ ಇದಕ್ಕೆ ಕಾರಣ. ಗುರುಗಳ ಸ್ವತಂತ್ರ ಜೀವನವೇ ಮುಖ್ಯ ಕಾರಣ. ಅನುಭವದಿಂದ ಸತ್ಯದರ್ಶನ ಮಾಡಿಕೊಂಡು ಕಾಲಕ್ಕೆ ತಕ್ಕಂತೆ ಧರ್ಮ ಸೂಕ್ಮವನ್ನರಿತು ಧರ್ಮೋಪದೇಶ ಮಾಡಿದ
ನಮ್ಮ ಹಿಂದಿನ ಮಹಾಗುರುಗಳನ್ನು ಅರ್ಥ ಮಾಡಿಕೊಳ್ಳಲು
ಅಧ್ಯಾತ್ಮದ ಒಳಗಿದ್ದವರಿಗಷ್ಡೆ ಸಾಧ್ಯ.ಹೊರಬಂದು ವ್ಯವಹಾರಕ್ಕೆ ಇಳಿದವರಿಗೆ ಸಾಕಷ್ಟು ಅನುಮಾನಗಳಿವೆ.
ಹೀಗಾಗಿ ಅಧರ್ಮದ ರಾಜಕೀಯ ಬೆಳೆದಿದೆ ರಾಜಯೋಗ ಹಿಂದುಳಿಯುತ್ತಿದೆ.
ಯೋಗಿಗಳ ಲಕ್ಷಣ
ಚಾರಿತ್ರ್ಯ ಶುದ್ದಿ, ಸತ್ಯಪ್ರಿಯ,ಧರ್ಮದ ನಡತೆ,ಸ್ವತಂತ್ರ ಜ್ಞಾನ, ನಿಸ್ವಾರ್ಥ ನಿರಹಂಕಾರದ ಆಚಾರ,ವಿಚಾರ,ಪ್ರಚಾರ. ಸ್ಥಿತಪ್ರಜ್ಞನಾಗಿರೋದು. ರಾಜಕೀಯ ರಹಿತ ಜೀವನ.
ಇಲ್ಲಿ ರಾಜಕೀಯ ವೆಂದರೆ ಪರರನ್ನು ಆಳೋದಾಗಿರುತ್ತದೆ.
ಇದು ಧರ್ಮ ಮಾರ್ಗದಲ್ಲಿರುವಾಗ ಶಾಂತಿ ಅಧರ್ಮ ದಲ್ಲಿದ್ದರೆ ಕ್ರಾಂತಿ.
No comments:
Post a Comment