ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, December 2, 2022

ನಿಜವಾದ ಗುರುಗಳ‌ ಲಕ್ಷಣ

ನಿಜವಾದ ಗುರುಗಳು ಶಿಷ್ಯರಿಗೆ  ಭೌತಿಕದಲ್ಲಿ ಸಹಕರಿಸುವುದಿಲ್ಲ. ಶಿಷ್ಯ ಸತ್ಯವನ್ನರಿಯಲು  ಪ್ರಚೋಧಿಸುತ್ತಾರೆ. ಶಿಷ್ಯ ಸ್ವತಂತ್ರವಾಗಿ ನಡೆಯಲು ಸಹಕರಿಸುವುದೇ ಗುರುವಿನ‌ ಉದ್ದೇಶವಾಗಿರುತ್ತದೆ.

ಗುರುವೇ ಭೌತಿಕದಲ್ಲಿ ಪರಾವಲಂಬನೆಯಲ್ಲಿರುವಾಗ ಶಿಷ್ಯನಿಗೆ ಸ್ವಾವಲಂಬನೆ ಪಾಠ ಕಲಿಸಲಾಗದು. ಭಾರತೀಯ ಧರ್ಮ, ಸಂಸ್ಕೃತಿ,ಶಿಕ್ಷಣದಲ್ಲಿ ಸ್ವಾವಲಂಬನೆ, ಸತ್ಯ,ಧರ್ಮ, ನ್ಯಾಯ,ನೀತಿ ಮಾನವನೊಳಗೆ ಹುಟ್ಟು ಹಾಕಿ ,ಒಳಗಿನ ಕೆಟ್ಟ ದುಷ್ಟತೆಯನ್ನು  ಹೊರಹಾಕಿ ಶಿಕ್ಷೆ ನೀಡಿ ಕಲಿಸುತ್ತಿದ್ದ ಕಾಲ ಹೋಗಿ ಇಂದು ಶಿಷ್ಯನ ಹಣಕ್ಕೆ,ಅಧಿಕಾರಕ್ಕೆ ಬೆಲೆಕೊಟ್ಟು ಸತ್ಯ ಬಿಟ್ಟು ಬದುಕು ಎನ್ನುವ ಮಟ್ಟಿಗೆ ಬಂದಿರೋದರ ಹಿಂದೆ ನಮ್ಮ ಸಹಕಾರವಿದೆ. ಪ್ರತಿಯೊಂದು ಮನೆ ಮನೆಯೂ ಗುರುಕುಲದಂತಿದ್ದ ಭಾರತ ಇಂದು ಮನೆಯೊಳಗಿನ ಜ್ಞಾನಿಗೆ ತಾಯಿಗೆ ಬೆಲೆಕೊಡದೆ ಹೊರಗೆ ಹೋಗುವಷ್ಟು ಬೆಳೆದಿದೆ. ಹಾಗಾದರೆ ಇಲ್ಲಿ ಮೂಲದಲ್ಲಿರುವ  ಮೊದಲ ಗುರುವಿನ ತಪ್ಪೆ 
ಆನಂತರ ಬಂದು ಸೇರಿದ  ಅಪ್ಪ ಮಕ್ಕಳ ತಪ್ಪೆ? ಒಂದು ಮನೆಯ  ಶಾಂತಿ  ಕಾಪಾಡುವ ಜ್ಞಾನ ದೊಡ್ಡದೆ? ಅಥವಾ ಶಾಂತಿ ಕೆಡಿಸಿ ಆಳುವ‌ ಅಜ್ಞಾನವೆ?  ಜ್ಞಾನವಿಜ್ಞಾನದಲ್ಲಿಯೇ
ದೊಡ್ಡ ಅಂತರ ಬೆಳೆಸಿರುವ ಭೌತಿಕ ಹಾಗು ಧಾರ್ಮಿಕ ಗುರುಗಳ ವಿಷಯಗಳೇ ಅಂತರಕ್ಕೆ ಕಾರಣ. ಶಿಕ್ಷಣದಲ್ಲಿಯೇ
ಪ್ರಾಥಮಿಕ ಹಂತದಲ್ಲಿ  ಗುರುವಾದವರು ಶಿಷ್ಯರ ಆಂತರಿಕ ಜ್ಞಾನವನ್ನು ಗುರುತಿಸಿ ಸೂಕ್ತ ವಿದ್ಯೆ ನೀಡಿ ತಿದ್ದಿ ತೀಡಿದವರು ನಿಜವಾದ ಗುರುವಾಗುತ್ತಾರೆ. 
ಇತ್ತೀಚೆಗೆ ಸಾಕಷ್ಟು ಹೋರಾಟಗಳಿಗೆ ಕಾರಣವೇ ಅಜ್ಞಾನ.
ಹಣಕ್ಕಾಗಿ  ಹೋರಾಟ,ಮಾರಾಟ,ಕಾದಾಟದಲ್ಲಿಯೇ ಜೀವನ  ನಡೆಯುತ್ತಿದೆ ಎಂದರೆ ಒಳಗಿರುವಬೆಲೆಕಟ್ಟಲಾಗದ 
ಜ್ಞಾನವನ್ನು  ಗುರುವಾದವರೆ ಗುರುತಿಸದಿದ್ದರೆ ಶಿಷ್ಯ ಗುರಿ ತಲುಪಲಾಗದು.
ಅಧ್ಯಾತ್ಮ ಸಾಧನೆ ಭೌತಿಕ ಸಾಧನೆ ಎನ್ನುವ ಎರಡೂ ಸಾಧನೆ
ಓದಿ ತಿಳಿದು ತಿಳಿಸಿದರೆ ಅರ್ಧ ಸತ್ಯವಾಗಿ ಮಧ್ಯವರ್ತಿಗಳು ಬೆಳೆಯಬಹುದು. ನಿಜವಾದ ಮೂಲದ ಸತ್ಯವನ್ನು ಆಳವಾಗಿ
ತಿಳಿಯುವುದಕ್ಕೆ ಮಧ್ಯವರ್ತಿಗಳು  ಅಡ್ಡಿ ಮಾಡಿದರೆ  ನಷ್ಟ ಯಾರಿಗೆ? ಇದು ಎಲ್ಲಾ ಮಹಾತ್ಮರ ಜೀವನದಲ್ಲಿಯೂ ನಾವುತಿಳಿದ ಸತ್ಯ.
ಅಂದಿನ ಶರಣರು,ದಾಸರು,ಸಂತರು,ದೇಶಭಕ್ತರು 
ದೇವರ ಭಕ್ತರಿಗೆ ಅಡ್ಡಿಪಡಿಸಿದವರು  ಈ ಅರ್ಧ ಸತ್ಯದ  ಬುದ್ದಿವಂತರು. ತನ್ನ ಬುದ್ದಿ ಶಕ್ತಿಯಿಂದ ಸತ್ಯವನ್ನು ತಿರುಚಿ ಆಳುವುದರಿಂದ  ಸತ್ಯ ಬೆಳೆಯೋದಿಲ್ಲ ಧರ್ಮ ರಕ್ಷಣೆ
 ಸಾಧ್ಯವಿಲ್ಲ.ಹಿಂದಿನ ಧರ್ಮ ವೆ ಹಿಂದೂ ಧರ್ಮ ವೆನ್ನುವ ಸಾಮಾನ್ಯಜ್ಞಾನವಿದ್ದರೆ ನಮ್ಮ ಇಂದಿನ ಧರ್ಮ ಕ್ಕೆ  
ಅಡ್ಡಿಯಾಗಿರುವ‌ ಮಧ್ಯವರ್ತಿಗಳ ರಾಜಕೀಯದ ಅಗತ್ಯವಿರದು. ರಾಜಕೀಯದಿಂದಧರ್ಮಬೆಳೆಯುವುದಾದರೆ
 ರಾಜಕಾರಣಿಗಳಲ್ಲಿ ಧಾರ್ಮಿಕ ಪ್ರಜ್ಞೆ ಅಗತ್ಯವಿತ್ತು.
ಯೋಗಿಗಳಾದವರೆ ಅಯೋಗ್ಯರನ್ನು ಮೇಲೆತ್ತಿ ಅಧಿಕಾರ ಕೊಟ್ಟು ದೇಶ ಆಳಲು ಬಿಟ್ಟರೆ  ಪ್ರಜಾಪ್ರಭುತ್ವದ ಗತಿ ಅಧೋಗತಿ. ಇದನ್ನು ವಿರೋಧಿಸುವ ಅಧಿಕಾರವನ್ನೂ ಪ್ರಜೆಗಳೇ ಕಳೆದುಕೊಂಡು ಮತ್ತೆ ಮತ್ತೆ ಸಹಕರಿಸಿದರೆ ನಮ್ಮ ಅಲ್ಪ ಸ್ವಲ್ಪ ಜ್ಞಾನವೂ ಹಿಂದುಳಿಯುತ್ತದೆ. 
ಒಟ್ಟಿನಲ್ಲಿ ನಿಜವಾದ ಗುರುವನ್ನು ವ್ಯಕ್ತಿಯ ರೂಪದಲ್ಲಿ ಕಾಣದೆ ಅವರಲ್ಲಿರುವ ಸಾತ್ವಿಕ ಶಕ್ತಿಯ ಮೂಲಕ ಕಂಡು ನಮ್ಮಲ್ಲಿ ಆ ಶಕ್ತಿಯನ್ನು ಬೆಳೆಸಿಕೊಂಡರೆ  ಶಿಷ್ಯನ ಜೀವನ ಸಾರ್ಥಕ. ಕಲಿಯುಗ ಮಹಿಮೆ ಕೃಷ್ಣಂ ವಂದೆ ಜಗದ್ಗುರುಂ
ಎನ್ನುವ‌ ನಮಗೆ ಶ್ರೀ ಕೃಷ್ಣನ ಯೋಗದ ಪರಿಚಯವಿಲ್ಲ ಭೋಗದ ಪರಿಚಯವಾಗಿ  ಭೌತಿಕದಲ್ಲಿ ರಾಜಕೀಯ ಬೆಳೆಸಿ
ಒಳಗಿನ ರಾಜಯೋಗವನ್ನು ತಿರಸ್ಕಾರದಿಂದ ನೋಡುವವರ ಮಧ್ಯೆ ಜೀವನ ನಡೆದಿದೆ. ಇದರಿಂದಾಗಿ ಇಡೀ ಭಾರತವೇ  ವಿಶ್ವ ಗುರುವಾದರೆ ಭಾರತ ಯಾವ ರೀತಿಯಲ್ಲಿ  ಶಿಷ್ಯರನ್ನು ಪ್ರಚೋಧಿಸುತ್ತಿದೆ? ಭೌತಿಕದಹೋರಾಟ,ಹಾರಾಟ,ಮಾರಾಟ
ದಿಂದ  ಏನಾದರೂ ಅಧ್ಯಾತ್ಮ ಸಾಧನೆಯಾಗುವುದೆ? ಈ ಪ್ರಶ್ನೆಗೆ ಉತ್ತರ ಯಾರು ಬೇಕಾದರೂ ನೀಡಬಹುದು.ಕಾರಣ ಭಾರತದಲ್ಲಿ ಸಾಮಾನ್ಯರಿಗಿರುವ ಜ್ಞಾನ ಅಸಮಾನ್ಯರಿಗಿಲ್ಲ
ವಾಗುತ್ತಿದೆ.
ಸಾಮಾನ್ಯಜ್ಞಾನದಿಂದಲೇ  ವಿಜ್ಞಾನ ವಿಶೇಷಜ್ಞಾನ ಬೆಳೆದರೆ ಉತ್ತಮ. ನೇರವಾಗಿ ಭೌತಿಕದ ವಿಜ್ಞಾನವಾಗಲಿ, ಆಧ್ಯಾತ್ಮಿಕ ಜ್ಞಾನವಾಗಲಿ ಓದಿ ತಲೆಗೆ ತುಂಬಿದರೆ ಮಾನವನಾಗಿರೋದು ಕಷ್ಟ. ಮೊದಲು ಮಾನವನಾದರೆ ನಂತರ ಮಹಾತ್ಮನಾಗ
ಬಹುದು ಅಥವಾ ಮಹಾಪ್ರಜೆಯಾಗಬಹುದು. ತಪ್ಪನ್ನು  ತಿಳಿಸುವ ಪ್ರಯತ್ನವಾದರೆ  ತಿದ್ದಿ ನಡೆಯಬಹುದು. ಶಿಷ್ಯನ ತಪ್ಪು ಮುಚ್ಚಿಟ್ಟರೆ ಅದೇ ದೊಡ್ಡ ತಪ್ಪಾಗಬಹುದು. ಇದು ಮನೆಯ ಮೊದಲ ಗುರು ಎರಡನೆ ಗುರುವಿನಿಂದ ಪ್ರಾರಂಭವಾಗಿ ಹೊರಗಿನ ಗುರುವಿನವರೆಗೂ‌  ಹೋದರೆ ಶಿಷ್ಯ ಶುದ್ದವಾಗಲು ಕಷ್ಟ ಕಷ್ಟ. ಏನೇ ಇರಲಿ ಕಾಲ ಎಲ್ಲವನ್ನೂ ಕಲಿಸುತ್ತದೆ. ತಿಳಿಸುತ್ತದೆ. ತಿದ್ದುತ್ತದೆ ಆದರೆ ನಾವು ತಿದ್ದಿಕೊಳ್ಳಲು ಪ್ರಯತ್ನ ಪಡೋದಿಲ್ಲವಾದರೆ ಕಾಲವಾದ ಮೇಲೆ ಅನುಭವಿಸುವವರು ಯಾರು? ಜೀವ ಶಾಶ್ವತವಲ್ಲ ಆತ್ಮ ಶಾಶ್ವತ. ಯಾರ ದೇಹದೊಳಗೆ ಯಾವ ಮಹಾತ್ಮರಿರುವರೋ ಗುರುತಿಸುವ ಗುರುಗಳು ಇರಬೇಕಷ್ಟೆ.ಗುರುವೇ ದೇವರು.ಇದರಲ್ಲಿ ತಾಯಿಯೇ ಮೊದಲ ಗುರು.ಅವಳಿಗೇ ಅಧ್ಯಾತ್ಮ ಸತ್ಯ ತಿಳಿಸದೆ ಆಳಿದರೆ ಸಂಸಾರವು ಧರ್ಮದ ಹಾದಿಯಲ್ಲಿ ನಡೆಯಬಹುದೆ? ಭೂಮಿಯ ಋಣ ತೀರಿಸಲು ಸತ್ಕರ್ಮ ಸ್ವಧರ್ಮ ಸುಜ್ಞಾನ, ಸಚ್ಚಾರಿತ್ರದ ಶಿಕ್ಷಣ,ಶಿಕ್ಷಕರಿದ್ದರೆ ಮುಕ್ತಿ ಮೋಕ್ಷಕ್ಕೆ ದಾರಿ. ಇದರಿಂದ ದೂರವಿದ್ದು ಆಳುವವರೆ ಗುರುವಾದರೆ ಅಸುರರ ಸಾಮ್ರಾಜ್ಯ. .ಅಜ್ಞಾನದಿಂದ ಅಸುರ ಶಕ್ತಿ ಬೆಳೆಯುತ್ತದೆ ಎನ್ನುವುದಷ್ಟೆ  ಸತ್ಯ. ಆತ್ಮಜ್ಞಾನದಿಂದ ಯೋಗಿಗಳಿಂದ ವಿಶ್ವಗುರು ಆತ್ಮನಿರ್ಭರ ಭಾರತವಾಗಲು ಈಗೇನು ಮಾಡಬೇಕಿದೆ? ದೇಶದ ಶಿಕ್ಷಣದಲ್ಲಿ ನೈತಿಕತೆ,ಧಾರ್ಮಿಕತೆ, ಸಾತ್ವಿಕತೆ  ತುಂಬಲು  ಮೊದಲು ಪೋಷಕರು ಮನೆಯೊಳಗಿನಿಂದಲೇ  ಮಕ್ಕಳಿಗೆ ಕೊಡುವ ಕೆಲಸವಾಗಬೇಕಿತ್ತು.ವಿಪರ್ಯಾಸವೆಂದರೆ ಇಂದು ಮನೆಯ ಒಳಗಿದ್ದ ಗೃಹಿಣಿಯರಿಗೂ ಮಕ್ಕಳ ಶಾಲೆಯ ಶುಲ್ಕ ಕಟ್ಟಲು ಹಣವಿಲ್ಲದೆ ಹೊರಬಂದು ದುಡಿಯುವ ಪರಿಸ್ಥಿತಿಯಲ್ಲಿ ದೇಶ ಬೆಳೆದಿದೆ. ಸ್ವಾವಲಂಬನೆ ಪುರುಷರಿಗೆ ಅಗತ್ಯವಿತ್ತು.ಈಗ ಸ್ತ್ರೀ ಗೂ ಅನಿವಾರ್ಯ ವಾಗಿದೆ ಎಂದರೆ ಮೊದಲ ಗುರುಗಳಿಗೆ ಶಾಂತಿಯಿಂದ  ಸತ್ಯ ತಿಳಿಯಲಾಗದು. ಎಲ್ಲದ್ದಕ್ಕೂ ಮನಸ್ಸೇ ಕಾರಣ. ಮನಸ್ಸಿನ ನಿಗ್ರಹ ಯೋಗದಿಂದ ಸಾಧ್ಯ. ಪರಮಾತ್ಮನೆಡೆಗೆ ಜೀವಾತ್ಮ ಹೋಗಿ ಸೇರುವುದೇ ಮಹಾಯೋಗ. ಇದಕ್ಕಾಗಿ  ಸಂಸಾರ ಮನೆ ಬಿಟ್ಟು ಕಾಡಿಗೆ ಹೋದರೆ  ಮಹಾತ್ಮರಾಗುತ್ತಾರೆಂದರೆ  ಈಗಿನ ನಾಡಿನಲ್ಲಿದ್ದು
ಸಂಸಾರದ ಜೊತೆಗಿದ್ದು  ಅಧ್ಯಾತ್ಮ ಸಾಧಕರಾದವರು  ಯಾರು? ಎಲ್ಲಾ  ಮಾನವರಷ್ಟೆ. ವಾಸ್ತವ ಸತ್ಯವನ್ನರಿತು ಪುರಾಣದ  ರಾಜಯೋಗವನ್ನರಿತು ನಡೆದರೆ ಭವಿಷ್ಯದಲ್ಲಿ ಉತ್ತಮ ಬದಲಾವಣೆ ಸಾಧ್ಯ. ಹಣದಿಂದ, ಸರ್ಕಾರದಿಂದ  ಭೌತಿಕದಲ್ಲಿ ಬದಲಾವಣೆ ತರುವ‌ಮೊದಲು ಹಣದ ಮೂಲ ಸರ್ಕಾರದ ಉದ್ದೇಶ ಅರ್ಥವಾದರೆ  ನಮ್ಮೊಳಗೇ ಇರುವ ಅರಿವೇ ಗುರುವಾಗಬಹುದಲ್ಲವೆ? ಸ್ವತಂತ್ರ ದೇಶದಲ್ಲಿ ನಮ್ಮ ಸ್ವತಂತ್ರ ಜ್ಞಾನಕ್ಕೆ  ಬೆಲೆಯಿಲ್ಲವೆ? ಬೆಲೆಕಟ್ಟಲಾಗದ ಆಂತರಿಕ ಶಕ್ತಿ  ಗುರುತಿಸಿ ಬೆಳೆಸುವ  ಗುರುಗಳನ್ನು ಗುರುತಿಸಲೂ ಜ್ಞಾನ ಬೇಕಿದೆ.ವೈಜ್ಞಾನಿಕ  ಜ್ಞಾನದಿಂದ ಅಸಾಧ್ಯ. ಮಾಡಿದ್ದುಣ್ಣೋ ಮಹಾರಾಯ ಎಂದಂತಾಗಿದೆ ಇಂದಿನ ಭಾರತೀಯರ ಸ್ಥಿತಿ.

No comments:

Post a Comment