ಕ್ಯಾಲಂಡರ್ ಹೊಸವರ್ಷದ ಶುಭಾಶಯಗಳು. ಯಾಕೆ ಹೊಸವರ್ಷದಲ್ಲಿಯೂ ಬೇರೆ ಬೇರೆ ಆಚರಣೆಯಿದೆ? ಕಾರಣ ಒಂದು ಭೌತಿಕದ ವ್ಯವಹಾರಕ್ಕೆ ಬಳಸಿದರೆ ಇನ್ನೊಂದು ಧಾರ್ಮಿಕ ವ್ಯವಹಾರಕ್ಕೆ ಬಳಸುತ್ತಾರೆ. ಇಲ್ಲಿ ವ್ಯವಹಾರವೇ ವರ್ಷಾಚರಣೆಯ ಉದ್ದೇಶವಾದಾಗ ಹಣವೇ ಮುಖ್ಯ. ಆಚರಣೆಗಳು ಭ್ರಷ್ಟಾಚಾರದ ಹಣದಲ್ಲಾದರೆ ಅಧರ್ಮಕ್ಕೆ ಬಲ, ಧರ್ಮದಿಂದ ಸಂಪಾದಿಸಿದ್ದಾದರೆ ಧರ್ಮ ರಕ್ಷಣೆ.
ಹಿಂದಿನ ಕಾಲದಲ್ಲಿದ್ದ ಆಚರಣೆಯಲ್ಲಿ ಸತ್ವ,ಸತ್ಯದ ಜೊತೆಗೆ ಧರ್ಮ ವಿತ್ತು.ಒಗ್ಗಟ್ಟು ಏಕತೆ,ಐಕ್ಯತೆಯ ತತ್ವವಿತ್ತು. ಆದರೆ ಕಾಲಾನಂತರದ ಭೌತಿಕಾಸಕ್ತಿ ಮಾನವನ ಮನಸ್ಸನ್ನು ಸಂತೋಷ ಪಡಿಸುವವರೆಗೆ ಆಚರಣೆ ಬೆಳೆದು ಪರಮಾತ್ಮನವರೆಗೆ ಹೋಗುವ ಶಕ್ತಿ ಕುಸಿಯಿತು. ಕಣ್ಣಿಗೆ ಕಾಣೋದೆಲ್ಲಾ ಸತ್ಯವೆನ್ನುವ ಮಧ್ಯವರ್ತಿಗಳು ಬೆಳೆದರು.ಅದರ ಹಿಂದೆ ನಿಂತ ಅಗೋಚರ ಶಕ್ತಿ ಕಾಣದೆ ನಾನೇ ದೇವರು ಎನ್ನುವ ಹಂತಕ್ಕೆ ಬಂದು ಪರರಲ್ಲಿರುವ ದೈವತ್ವ ಗುರುತಿಸದೆ ಆಳುವ ರಾಜಕೀಯ ಬೆಳೆದಾಗಲೇ ಮಾನವನಿಗೆ ರಾಜಯೋಗದ ಅರ್ಥ ತಿಳಿಯಲಾಗಿಲ್ಲ. ಭೂಮಿಯ ಮೇಲೆ ನಿಂತು ಭೂಮಿ ಆಳುವಾಗ ಭೂ ತತ್ವಕ್ಕೆ ದಕ್ಕೆ ಆಗಬಾರದಷ್ಟೆ. ಯಾವಾಗ ಭೂಮಿಯನ್ನು ದುರ್ಭಳಕೆ ಮಾಡಿಕೊಂಡು ಅಸುರ ಶಕ್ತಿ ಮಿತಿಮೀರಿ ಬೆಳೆಯುವುದೋ ಆಗ ಸ್ವಯಂ ದೇವತೆಗಳೇ ಭೂಮಿಯಲ್ಲಿ ಅವತರಿಸಿ ಧರ್ಮ ರಕ್ಷಣೆ ಮಾಡುವರೆನ್ನುವುದು ಹಿಂದೂ ಧರ್ಮ ತಿಳಿಸಿದೆ.
ಭಗವದ್ಗೀತೆ ಯಲ್ಲಿರುವ ಶ್ರೀ ಕೃಷ್ಣನ ಅವತಾರವನ್ನು ಹಿಂದೂಗಳು ಸ್ವಯಂ ಭಗವಂತನೇ ಎಂದು ನಂಬಿದರೆ ಕ್ರೈಸ್ತ
ಮತದವರು ಶ್ರೀ ಕೃಷ್ಣ ನೇ ಏಸುವಾಗಿ ಜನ್ಮಪಡೆದ ಮೇಲೆ ಏಸುವೂ ಭಗವಂತನೆ ಎಂದು ವಾದ ಮಾಡುತ್ತಾರೆ. ಹಾಗಾದರೆ ಸತ್ಯ ಒಂದೇ ಇರೋವಾಗ ಎರಡು ಸತ್ಯ ಹುಟ್ಟಿದ್ದು ಏಕೆ? ಒಂದೆ ದೇಶದಲ್ಲಿ ಎರಡೂ ಆಚರಣೆ ಯಾಕೆ? ಎರಡಲ್ಲಿ ವ್ಯತ್ಯಾಸವಿಲ್ಲವೆ?
ಒಂದೆ ಇರೋವಾಗ ವ್ಯತ್ಯಾಸವಿರೋದಿಲ್ಲ.ಎರಡಾದಾಗಲೇ ದ್ವಂದ್ವ,ಭಿನ್ನಾಭಿಪ್ರಾಯ ದಿಂದ ವ್ಯತ್ಯಾಸಗಳು ಬೆಳೆದು ನಿಂತು ರಾಜಕೀಯದಿಂದ ಮುಂದೆ ಹರಡುವುದು. ಇಲ್ಲಿ ಆಚರಣೆಯಿಂದ ಆತ್ಮಶುದ್ದಿಯಾದರೆ ಆತ್ಮಜ್ಞಾನ. ಆಚರಣೆಯೇ ಆತ್ಮವಂಚನೆಗೆ ದಾರಿಮಾಡಿಕೊಟ್ಟರೆ ಭ್ರಷ್ಟಾಚಾರವಾಗುತ್ತದೆ. ಹಾಗಾದರೆ ನಮ್ಮ ಆಚರಣೆಯು ಶುದ್ದವಾಗಿದೆಯೆ? ಶುದ್ದ ಮನಸ್ಸಿನೆಡೆಗೆ ನಡೆದಿದೆಯೆ? ಸ್ವಚ್ಚಭಾರತಕ್ಕೆ ಕಾರಣವಾಗಿದೆಯೆ? ಸ್ವತಂತ್ರ ಜ್ಞಾನದೆಡೆಗೆ ನಡೆಸಿದೆಯೆ? ಸರಳವಾಗಿದ್ದ ಜೀವನ ಮಾರ್ಗ ತೋರಿಸಿದೆಯೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹಿಂದೂ ಧರ್ಮದವರು ಮಾತ್ರ ಒಳಗೆ ಉತ್ತರ ಹುಡುಕಿಕೊಳ್ಳಲು ಸಾಧ್ಯವಿದೆ.ಕಾರಣವಿಷ್ಟೆ ನಮ್ಮ ಹಿಂದಿನ ಗುರು ಹಿರಿಯರಲ್ಲಿದ್ದ ತತ್ವಜ್ಞಾನದಿಂದ ಬೆಳೆದ ಧರ್ಮ ವನ್ನು ತಂತ್ರದಿಂದ ತಿಳಿದರೆ ನಮ್ಮಲ್ಲಿ ಏಕತೆ ಮೂಡೋದಿಲ್ಲ.ಅದ್ವೈತ ದೊಳಗಿನ ದ್ವೈತದ ರಾಜಕೀಯವು ಅರ್ಥ ಆಗೋದಿಲ್ಲ. ದೇಶವಿದೇಶದೆಡೆಗೆ ಹರಡಿರುವ ಹಿಂದೂ ಧರ್ಮವು ದೇಶದೊಳಗೇ ಹಿಂದುಳಿದರೆ ದೇಶರಕ್ಷಣೆ ಸಾಧ್ಯವೆ? ಇಲ್ಲಿ ಪ್ರಚಾರವಿದೆ ಆಚಾರ,ವಿಚಾರವೂ ಸಾಕಷ್ಟು ರೀತಿಯಲ್ಲಿ ನಡೆಯುತ್ತಿದೆ.ಆದರೆ ಅದಕ್ಕೆ ಬಳಸುತ್ತಿರುವ ತಂತ್ರಜ್ಞಾನವು ಸಾತ್ವಿಕತೆಯನ್ನು ಸತ್ಯವನ್ನು ಮರೆಯಾಗಿಸಿ ಜನರನ್ನು ಆಳುತ್ತಿದೆ .ಜನಸಾಮಾನ್ಯರಲ್ಲಿದ್ದ ಸಾಮಾನ್ಯಜ್ಞಾನ ಮರೆಯಾದರೆ ವಿಶೇಷವಾಗಿರುವ ಆತ್ಮಜ್ಞಾನ ಬೆಳೆಯದು.
ಆಚರಣೆಯೇ ಭ್ರಷ್ಟಾಚಾರದ ಸುಳಿಗೆ ಸಿಲುಕಿದರೆ ಮೇಲಿನ ಸಾತ್ವಿಕ ಶಕ್ತಿಯ ಕಡೆಗೆ ಜೀವ ನಡೆಯಲಾಗದು.ಜೀವಾತ್ಮ ಪರಮಾತ್ಮನೆಡೆಗೆ ಸೇರುವ ಯೋಗವನ್ನು ಆಚರಣೆಗಳು ಬೆಳೆಸಿರೋದು ಹಿಂದೂ ಧರ್ಮ. ಪ್ರಕೃತಿ ಪುರುಷರಿಂದ ಸೇರಿ ನಡೆಯುವ ಭೂಮಿಯಲ್ಲಿ ಮಾನವರು ಪ್ರಕೃತಿಗೆ ವಿರುದ್ದ ನಡೆದು ವಿಕೃತವಾಗಿ ಆಚರಣೆಗಳು ಬೆಳೆದಂತೆಲ್ಲಾ ಅಸುರಿ ಶಕ್ತಿಯೇ ಭೂಮಿಯನ್ನು ಆಳುವುದಲ್ಲವೆ?
ದೇವಾಸುರರ ಶಕ್ತಿ ಇರೋದು ಯಾರಲ್ಲಿ? ಮಾನವನಲ್ಲಿ ಅವನ ಗುಣದಲ್ಲಿ. ಸಾತ್ವಿಕ,ರಾಜಸ,ತಾಮಸ ಗುಣಗಳಿಂದಾಗಿರುವ ದೇಹದೊಳಗಿರುವ ಜೀವಾತ್ಮ ಪ್ರತಿಯೊಬ್ಬರ ಮಹಾಶಕ್ತಿ. ಪ್ರತಿಯೊಬ್ಬರಿಗೂ ಸ್ವತಂತ್ರ ಜ್ಞಾನವಿದ್ದರೂ ಗುರುತಿಸುವ ಗುರು ಸಿಗದಿದ್ದರೆ ಅವರ ಕರ್ಮಫಲ ಎನ್ನುವರು .ಆದರೆ ಕರ್ಮ ಬೆಳೆಯುವುದು ಸಹಜ, ಧರ್ಮದ ಜೊತೆಗೆ ಕರ್ಮ ವೂ ಬೆಳೆದರೆ ಉತ್ತಮ.ಈ ಕಾರಣದಿಂದ ಹಿಂದೆ ವರ್ಣ ಪದ್ದತಿಯ ಪ್ರಕಾರ ಅವರವರ ಮೂಲ ಧರ್ಮ ಕರ್ಮವನ್ನು ಜನ್ಮದ ಆಧರಿತವಾಗಿ ತಿಳಿದು ಸ್ವತಂತ್ರ ಜೀವನನಡೆಸುವ ಶಿಕ್ಷಣ ಪ್ರಾರಂಭದಿಂದ ಕಲಿಸುವ ಗುರುಗಳಿದ್ದರು.ಮನೆಮನೆಯೂ ಗುರುಕುಲವಾಗಿತ್ತು.
ಕಾಲಾನಂತರದ ರಾಜಕೀಯಕ್ಕೆ ಸಿಕ್ಕಿದ ಜ್ಞಾನ ತಂತ್ರದಿಂದ ಸ್ವತಂತ್ರ ಜ್ಞಾನವನ್ನು ಹಿಂದುಳಿಸಿತು. ಈಗಂತೂ ಮಿತಿಮೀರಿ
ಬೆಳೆದ ತಂತ್ರಜ್ಞಾನವು ತತ್ವವನ್ನರಿಯದೆ ಜನರ ಮನಸ್ಸನ್ನು ಹೊರಗೆಳೆದು ಆಳುತ್ತಿದೆ. ಆದರೆ ತತ್ವವಿಲ್ಲದ ತಂತ್ರ ಅತಂತ್ರ.
ತತ್ವದೊಂದಿಗೆ ತಂತ್ರವಿದ್ದರೆ ಸಮಾನತೆ, ತಂತ್ರವೇ ತತ್ವವನ್ನು ಆಳಿದರೆ ಅಸಮಾನತೆ. ಇವುಗಳು ಆಚರಣೆಯಲ್ಲಿ ಬೆಳೆದಿದೆ.
ಯಾವುದೇ ಆಚರಣೆಯಿರಲಿ ಜನರನ್ನು ಆಳುವ ಸ್ಥಿತಿಗೆ ಹೋದರೆ ಭ್ರಷ್ಟಾಚಾರ ವಾಗುತ್ತದೆ. ಇದು ಹಿಂದೂ ಇಸ್ಲಾಂ, ಮುಸ್ಲಿಂ ಸಮುದಾಯದ ವರಿಗೂ ಅನ್ವಯಿಸುತ್ತದೆ. ಇಡೀ ವಿಶ್ವವನ್ನು ಆಳುವುದೇ ರಾಜಕೀಯ.ಇಡೀ ವಿಶ್ವ ಶಕ್ತಿಯನ್ನು ಅರ್ಥ ಮಾಡಿಕೊಂಡು ಸ್ವತಂತ್ರ ಜೀವನನಡೆಸಿ ಹೋಗುವುದೆ ರಾಜಯೋಗ.
ಪರಾವಲಂಬನೆಯಿಂದ ಸಾಲ ಬೆಳೆಯುತ್ತದೆ. ಸ್ವಾವಲಂಬನೆ ಯಿಂದ ಸಾಲ ತೀರುತ್ತದೆ.ಎಂದರೆ ನಮ್ಮ ಧಾರ್ಮಿಕ ಆಚರಣೆಗೆ ಬಳಸುವ ಪ್ರತಿಯೊಂದು ವಿಷಯ,ವಸ್ತು,ಹಣ,ಜನ ನಮ್ಮ ಸಂಪಾದನೆ ಎಂದರೆ ಸತ್ಯವೆ? ಜ್ಞಾನ ಸಂಪಾದನೆಯಷ್ಟೆ ನಮ್ಮ ಧರ್ಮ ವನ್ನು ಗಟ್ಟಿಗೊಳಿಸುವುದಾದರೆ ನಮ್ಮ ಜ್ಞಾನದ ಅಳಿವು ಉಳಿವಿಗೆ
ನಾವೇ ಜವಾಬ್ದಾರರು. ನಾವೀಗ ಸಾಮಾನ್ಯ ಪ್ರಜೆಯಾಗಿದ್ದು ದೇಶದ ಧರ್ಮ ರಕ್ಷಣೆ ಮಾಡೋ ಸಾಮಾನ್ಯಜ್ಞಾನದೆಡೆಗೆ ನಡೆದರೆ ಎಲ್ಲಾ ಆಚರಣೆಯೂ ಶುದ್ದವಾಗಿದೆಯೆ ? ಆಚರಣೆಯ ಉದ್ದೇಶ ತಿಳಿದಿದೆಯೆ? ಆಚರಣೆಯೇ ಭ್ರಷ್ಟರಿಗೆ ಶಕ್ತಿನೀಡುವಂತಿದ್ದರೆ ಅದಕ್ಕಿಂತ ವಿಶೇಷವಾಗಿರುವ
ಆತ್ಮವಿಶ್ವಾಸ ಆತ್ಮಜ್ಞಾನಕ್ಕಾಗಿ ನಮ್ಮ ಕರ್ಮಫಲವನ್ನು ಭಗವಂತನಿಗೆ ಅರ್ಪಿಸುವ ಧಾರ್ಮಿಕ ಪ್ರಜ್ಞೆ ಇದ್ದಲ್ಲಿಯೇ ತಿಳಿದು ಬೆಳೆಸಿಕೊಂಡು ಕಾಯಕವೇ ಕೈಲಾಸವೆಂಬ ಮಂತ್ರಕ್ಕೆ ಶಕ್ತಿ ನೀಡಿದರೆ ಪರಮಾತ್ಮನಿಗೆ ಶರಣಾಗಬಹುದು.
ಇದ್ದವರು ಶಿವಾಲಯವ ಕಟ್ಟುವರು ನಾನೇನು ಮಾಡಲಿ ಬಡವನಯ್ಯ ಎಂದಂತೆ ನಮಗೆ ಕೊಟ್ಟ ಜೀವನದಲ್ಲಿ ಶಿವಸ್ಮರಣೆ ಮಾಡುತ್ತಾ ಕಾಯಕ ಮಾಡುವ ಯೋಗಿಗೆ ಆಚರಣೆಯ ಅಗತ್ಯವಿಲ್ಲ ಎಂದಿದ್ದಾರೆ ಮಹಾತ್ಮರುಗಳು.
ಯೋಗಿಗಳ ದೇಶವನ್ನು ಆಳುತ್ತಿರುವ ತಂತ್ರಜ್ಞಾನ ರೋಗಿಗಳನ್ನು ಬೆಳೆಸಿದರೆ ನಷ್ಟ ಯಾರಿಗೆ? ಭೌತಿಕಾಸಕ್ತಿಯು ತಂತ್ರದಿಂದ ಬೆಳೆದಿದೆ, ಧಾರ್ಮಿಕಾಸಕ್ತಿ ತತ್ವದೊಳಗಿದೆ. ವ್ಯತ್ಯಾಸ ಇಷ್ಟೆ ಒಂದು ಹೊರಮುಖ,ಇನ್ನೊಂದು ಒಳಮುಖ.
ಎರಡೂ ಒಂದೇ ನಾಣ್ಯದ ಎರಡು ಮುಖ.ಒಂದು ಮುಖ ಅರ್ಥ ವಾಗದೆ ಇನ್ನೊಂದು ಬೆಳೆದರೆ ಕೇವಲ ನಾಟಕ.
ಮೊದಲು ಧಾರ್ಮಿಕ ಪ್ರಜ್ಞೆ ನಂತರ ಭೌತಿಕ ಪ್ರಜ್ಞೆ. ಆದರೆ ಹೊಸವರ್ಷ ವೇ ಮೊದಲು ಭೌತಿಕ ಆಚರಣೆಯಲ್ಲಿ ಪ್ರಾರಂಭ ಆದರೆ ನಂತರ ಧಾರ್ಮಿಕ ಆಚರಣೆಗೆ ಮನಸ್ಸು ಹೊರಳಿಸುವುದಕ್ಕೆ ಕಷ್ಟ.ಇದೇ ಭಾರತದ ಈ ಸ್ಥಿತಿಗೆ ಕಾರಣವೆಂದರೂ ತಪ್ಪು ಎನ್ನುವ ಭಾರತೀಯರೂ ಇತ್ತೀಚೆಗೆ ಹೆಚ್ಚಾಗಿರೋದು ದುರಂತ. ಎಲ್ಲಿಯವರೆಗೆ ಜೀವಕ್ಕೆ ಅನುಭವವಾಗುವುದಿಲ್ಲವೋ ಅಲ್ಲಿಯವರೆಗೆ ಮಾನವ ಬದಲಾವಣೆಗೆ ಸಹಕರಿಸೋದಿಲ್ಲ.ಹೀಗಾಗಿ ಮೂಲ ಶಿಕ್ಷಣವು ಧರ್ಮದ ಪರವಾಗಿತ್ತು. ಈಗ ಶಿಕ್ಷಣವೇ ವ್ಯಾಪಾರಕ್ಕೆ ತಿರುಗಿದೆ. ಇದಕ್ಕೆ ನಮ್ಮದೇ ಸಹಕಾರವಿದ್ದರೆ ಬದಲಾವಣೆ ಸಾಧ್ಯವೆ? ತತ್ವವು ಒಗ್ಗಟ್ಟಿನಿಂದ ಬೆಳೆದರೆ ಉತ್ತಮ.ರಾಜಕೀಯದಿಂದ ಬೆಳೆಸಲಾಗದು ಅದು ತಂತ್ರವಾಗಿ ಕೊನೆಗೆ ಅತಂತ್ರಸ್ಥಿತಿಗೆ ಜೀವ ತಲುಪುತ್ತದೆ. ಎನ್ನುವ ಕಾರಣಕ್ಕಾಗಿ ಹಿಂದಿನ ಮಹಾತ್ಮರುಗಳು ಆತ್ಮಾನುಸಾರ ನಡೆದು ಸತ್ಯದೆಡೆಗೆ ನಡೆದರು.
ನಮ್ಮವರನ್ನೇ ದ್ವೇಷ ಮಾಡಿ ಪರರನ್ನು ಬೆಳೆಸುವ ಆಚರಣೆಯು ನಮಗೇ ನಷ್ಟ. ನಮ್ಮವರ ಜೊತೆಗೆ ಪರರನ್ನು ನಮ್ಮವರಾಗಿಸೋದು ಸುಖ ನೀಡಿದರೂ ಅದು ಶುದ್ದ ಸತ್ಯದಲ್ಲಿರೋದು ಮುಖ್ಯವಾಗಿದೆ ಎನ್ನುವುದೆ ಪರತತ್ವ,ಪರಮಾತ್ಮನ ತತ್ವ. ಆಧ್ಯಾತ್ಮ ಸತ್ಯ.
No comments:
Post a Comment