ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 1, 2023

ಯಾರ ಜೀವನ ದೊಡ್ಡದು ?

ಎಷ್ಟು ವ್ಯತ್ಯಾಸ ವಿದೆಯಲ್ವ ಮಾನವ ಮಾನವನನ್ನು ಅಳೆಯುವ ಬಗೆಯಲ್ಲಿ?
ಒಬ್ಬ ಹಣದ ಶ್ರೀಮಂತ ಮಹಿಳೆಯು  ನಕಲಿ ಆಭರಣ ಧರಿಸಿದರೂ ಅದು ಚಿನ್ನದ ಆಭರಣವೆಂದು ನಂಬುತ್ತೇವೆ.
ಅದೇ ಒಬ್ಬ ಸಾಧಾರಣ ಸ್ತ್ರೀ ಕಷ್ಟಪಟ್ಟು ದುಡಿದ ಹಣದಲ್ಲಿ ಚಿನ್ನ ಧರಿಸಿದರೂ ನಕಲಿ ಎಂದು ತಿಳಿಯುತ್ತೇವೆ.
ಹೀಗೆ ದೊಡ್ಡ ರಾಜಕಾರಣಿಗಳು ಪ್ರತಿಷ್ಠಿತ ರು,ಹೆಸರುವಾಸಿಗಳು ಎಷ್ಟೇ ತಪ್ಪು ಮಾಡಿದರೂ  ಇದೊಂದು ಸಾಮಾನ್ಯವೆಂದು ಸಮಾಜ ಪರಿಗಣಿಸಿದರೆ ,ಅದೇ ಜೊತೆಗೆ ಇದ್ದ ಸಾಮಾನ್ಯನ ಸಣ್ಣ ತಪ್ಪೂ ತಪ್ಪಾಗಿ ಕಂಡು ದೊಡ್ಡ ಸುದ್ದಿ ಮಾಡುವ ಮೂಲಕ ತೇಜೋವಧೆ ನಡೆಯುತ್ತದೆ.
ಇನ್ನು ಮನೆಯೊಳಗೆ  ಇರುವ ಅಸತ್ಯ,ಅನ್ಯಾಯ,ಭ್ರಷ್ಟಾಚಾರ
ಕಣ್ಣಿಗೆ ಕಂಡರೂ ಮುಚ್ಚಿಡುವವರು ಹೊರಗಿನ ಅಸತ್ಯ
,ಅನ್ಯಾಯ, ಅಧರ್ಮದ ವಿರುದ್ದ ಹೋರಾಟಕ್ಕೆ ಇಳಿದು  ನಾವೇನೋ  ಸಾಧನೆ ಮಾಡಿದ್ದೇವೆಂದು ಬೀಗುತ್ತೇವೆ.
ದೊಡ್ಡ  ವ್ಯಕ್ತಿಗಳ ಸಾವು ನೋವು ಮನೆ ಮನೆಗೂ ತಲುಪಿಸುವಾಗ  ಪ್ರತಿಯೊಬ್ಬರೂ ಜೀವವುಳ್ಳ ಮಾನವರೆ ಎನ್ನುವ ಸಾಮಾನ್ಯಜ್ಞಾನವಿರೋದಿಲ್ಲ.ಒಟ್ಟಿನಲ್ಲಿ ಮಾನವ ಮಾನವನಲ್ಲಿಯೇ ಇರುವ ವ್ಯತ್ಯಾಸವನ್ನು ಸರಿಪಡಿಸಲಾಗದ ರಾಜಕೀಯಕ್ಕೆ  ನಮ್ಮದೇ ಸಹಕಾರ ವಿರುವಾಗ  ಇದರಿಂದ ಮುಕ್ತಿ ಸಿಗೋದಿಲ್ಲ. 
ಎಲ್ಲರನ್ನೂ ನಡೆಸುವ ಮೇಲಿರುವವನಿಗೆ ಎಲ್ಲರ ಜೀವವೂ ಒಂದೇ. ಅವನಿಗೆ  ಹತ್ತಿರವಿದ್ದವರು ಭೌತಿಕದಲ್ಲಿರುವವರು ಗಮನಿಸದಿದ್ದರೂ  ಒಳ್ಳೆಯದೆ  ಕಾರಣ ಯಾವ ಮಧ್ಯವರ್ತಿಗಳ  ಸಹಾಯವಿಲ್ಲದೆಯೇ ಕಷ್ಟಪಟ್ಟು ಮೇಲೇರಿ ಪರಮಾತ್ಮನಲ್ಲಿ ಲೀನವಾಗೋದಕ್ಕೆ ರಾಜಕೀಯ ಬೇಡ. ಇದು ಸರ್ವಕಾಲದ ಸತ್ಯ. 
ಎಲ್ಲಿಯವರೆಗೆ ಮಾನವನಲ್ಲಿ ಸಾಮಾನ್ಯಜ್ಞಾನವಿರುವುದೋ ಅಲ್ಲಿಯವರೆಗೆ  ಅಸಮಾನ್ಯರ  ರಾಜಕೀಯದ ಉದ್ದೇಶ ಅರ್ಥ ವಾಗುತ್ತದೆ. ಸಾಮಾನ್ಯಜ್ಞಾನವನ್ನೇ  ಬಿಟ್ಟು ಹೊರಗಿನ ಅಸಮಾನ್ಯರೆಡೆಗೆ ಜೀವಹೋದಷ್ಟೂ  ಕಷ್ಟ ನಷ್ಟ ಹೆಚ್ಚು.

ಅಜ್ಞಾನಕ್ಕಿಂತ ಹೆಚ್ಚು ಅಪಾಯಕಾರಿ ಜಾಣತನ ಮತ್ತು ದುರಹಂಕಾರ.
ವಿದ್ಯೆಗಿಂತ ಜ್ಞಾನವೇ ಮೇಲು.ಸತ್ಯಜ್ಞಾನವಿಲ್ಲದ ವಿದ್ಯೆಯು  ಜಾಣರನ್ನು ಬೆಳೆಸಿ  ಅಹಂಕಾರ ಹಾಗು ಸ್ವಾರ್ಥ ದಲ್ಲಿ ತಾನೂ ಹಾಳಾಗಿ ಇತರರನ್ನು ಹಾಳು ಮಾಡುತ್ತದೆ. ಅಜ್ಞಾನವೆಂದರೆ ತಿಳುವಳಿಕೆಯೇ ಸರಿಯಿಲ್ಲದಿರೋದೆಂದರೆ ಸರಿಯಾಗಬಹುದು. ನಾನು ಭೂಮಿ ಮೇಲಿರುವ ಸತ್ಯ  ಎಲ್ಲರಿಗೂ ತಿಳಿದಿದೆ ಆದರೆ ನಾನು ಭೂಮಿಯನ್ನೇ ಆಳುವಷ್ಟು  ಜಾಣನಾದರೂ ಇದು ಜ್ಞಾನದ  ದುರಹಂಕಾರ ಮತ್ತು ದುರ್ಭಳಕೆ,  ಅಜ್ಞಾನವನ್ನೂ ಮೀರಿಸುವ ಜಾಣತನ.ಇದು ಮನುಕುಲವನ್ನು  ದಾರಿತಪ್ಪಿಸುತ್ತದೆ.
ಹೀಗಾಗಿ  ಯಾರಾದರೂ ನಮ್ಮನ್ನು ಆಳುತ್ತಿರುವ‌  ಹಿಂದೆ  ಸತ್ಯಜ್ಞಾನವಿದೆಯೋ ? ಜಾಣತನವಿದೆಯೋ? ಅಜ್ಞಾನವಿದೆಯೋ? ಗುರುತಿಸಲೂ ನಮ್ಮಲ್ಲಿ ಸತ್ಯಜ್ಞಾನವಿರಬೇಕು. ಎಷ್ಟೋ  ಜನರು ಮೋಸ
ಲಹೋಗಿರಬಹುದು.ಮಹಾತ್ಮರು ಮೋಸಹೋಗಿಲ್ಲ. ಕಾರಣ ಆತ್ಮ ಶುದ್ದವಾದವರಲ್ಲಿ ಪರಮಾತ್ಮನಿರುವನು. 
"ಕುರುಡು ಕಾಂಚಾಣ ಕುಣಿಯುತ್ತಲಿತ್ತ ಕಾಲಿಗೆ ಬಿದ್ದವರ ತುಳಿಯುತಲಿತ್ತ ಕುರುಡು ಕಾಂಚಾಣ"
 ಸತ್ಯಜ್ಞಾನವಿಲ್ಲದೆ ಸಂಪಾದಿಸಿದ ಹಣದಿಂದ ಜಾಣರಾಗಬಹುದು ಜೊತೆಗೆ ಅಹಂಕಾರ ಸ್ವಾರ್ಥ ವೂ ಇದ್ದು ತನಗೆ ತಾನೇ ಮೋಸಹೋಗಲೂಬಹುದು ಮಾನವ.

No comments:

Post a Comment