.
ಮಾತು ಬೆಳ್ಳಿ ಮೌನ ಬಂಗಾರ
*ತನ್ನಷ್ಟಕ್ಕೆ ತಾನು ಪ್ರಶಾಂತವಾಗಿರುವ ಮನುಷ್ಯನನ್ನು, ಈ ಜಗತ್ತು ಎಂದಿಗೂ ಗಣನೆಗೆ ತೆಗೆದುಕೊಳ್ಳುವುದಿಲ್ಲ.**
**ಮಕ್ಕಳ ಮುಂದಿನ ಭವಿಷ್ಯಕ್ಕಾಗಿ,
ಹೆತ್ತವರು ವರ್ತಮಾನವನ್ನು ಕಳೆದುಕೊಳ್ಳಲೇಬೇಕು.ಅದರ ಫಲಾಫಲವನ್ನೂ ಕೂಡ ಭವಿಷ್ಯದಲ್ಲೇ ನೋಡಬೇಕು.**
**ಜಗತ್ತಿನಲ್ಲಿ ತುಂಬ ಸುಲಭದ ಮತ್ತು ಕಷ್ಟದ ಸಂಗತಿ ಎಂದರೆ "ತಪ್ಪನ್ನು" ಇನ್ನೊಬ್ಬರು ಮಾಡಿದರೆ
ಗಮನಿಸುವುದು 'ಸುಲಭ',ನಾವೇ ಮಾಡಿದರೆ ಒಪ್ಪುವುದು 'ಕಷ್ಟ".**
ಸಾಧನೆಯ ಮಾರ್ಗದಲ್ಲಿ ಇನ್ನೂ
ಬಹಳ ದೂರಕ್ರಮಿಸಬೇಕಾಗಬಹುದೆಂದು ನಿಮಗೆ
ಚಿಂತೆ ಆಗಬಹುದು.ಆದರೆ ಒಮ್ಮೆ ಹಿಂತಿರುಗಿ ನೋಡಿದಾಗ,ನೀವು ಆಗಲೇ ಸಾಧನೆಗೆ ಹತ್ತಿರ
ಬಂದಿರುವುದು ಮನವರಿಕೆಯಾಗಬಹುದು.**
ನಡೆಯುವಾಗ ಒಂದು ಕಾಲು ಮುಂದೆ
ಮತ್ತು ಒಂದು ಕಾಲು ಹಿಂದೆ ಇರುತ್ತವೆ. ಮುಂದಿನ ಕಾಲಿಗೆ ಗರ್ವವಿರುವುದಿಲ್ಲ ಹಿಂದಿನ ಕಾಲಿಗೆ ಬೇಸರವಿರುವುದಿಲ್ಲ.ಏಕೆಂದರೆ ,ಅವುಗಳಿಗೆ ಗೊತ್ತು.ಇದುಕ್ಷಣಾರ್ಧದಲ್ಲಿ ಬದಲಾಗುವುದಿದೆಎಂದು. ಜೀವನವು ಹೀಗೆ ಯಾವಾಗಲೂ ಸ್ಥಿರವಾಗಿರುವುದಿಲ್ಲ.**
**FAITH is Like a Small LAMP in a Dark FOREST. It does not Show Everything at Once but gives Enough Light for the Next Step to be SAFE.**
** Do not Cry over the Past, it is Gone. Do not Stress about the Future, it has not arrived. Live in the Present and make it Beautiful.**
**Everything in the World is BEAUTIFUL depending on your THOUGHTS. A SCHOOL BELL Sounds Irritating at 8 A M, but the same BELL Sounds MELODIOUS at 2 P M.**
**Self Confidence us a Super Power. Once you start to Believe in Yourself, Magic Starts Happening.**
*^APPRECIATE the Space between Where You are and Where You are Going.**
**TWO things Define You: Your PATIENCE When You have Nothing and Your ATTITUDE When you have EVERYTHING.**
—————————————————-
ಮೌನ ಮತ್ತು ಮಾತು ಅತಿಯಾದರೆ ಯೋಗಿಯಾಗಲಾರನು.
ಯೋಗವೆಂದರೆ ಸೇರುವುದು,ಕೂಡುವುದೆಂದರ್ಥ ವಾದರೆ ಇಲ್ಲಿ ಪರಮಾತ್ಮನ ಜೀವಾತ್ಮ ಸೇರುವುದು, ಮನಸ್ಸು ಮತ್ತು ಆತ್ಮ ಒಂದಾಗೋದು,ನಡೆ ನುಡಿ ಸಮಾನವಾಗಿರೋದು, ಆತ್ಮಾನುಸಾರ ನಡೆಯೋದು,
ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗದಲ್ಲಿ
ಕರ್ಮ ಮಾಡದೆಯೇ ಜ್ಞಾನವಿಲ್ಲ.ಜ್ಞಾನವಿಲ್ಲದ ಕರ್ಮದಿಂದ ಮುಕ್ತಿಯಿಲ್ಲ ಯೋಗವಿಲ್ಲ. ದೇಶವನ್ನು ಯೋಗದ ದೃಷ್ಟಿಯಿಂದ ನೋಡಿದರೆ ನಮ್ಮಲ್ಲಿ ದೇಶದ ಜ್ಞಾನವಿರಬೇಕು,ದೇಶಭಕ್ತಿಯಿರಬೇಕು,ದೇಶಕ್ಕಾಗಿ ದುಡಿಯಬೇಕು ಆಗಲೇ ನಾನ್ಯಾರೆಂಬ ಸತ್ಯದರ್ಶನವಾಗುವುದು.ಅಂದರೆ ಭಾರತಮಾತೆಯ ದರ್ಶನ ವಾಗಲು ಯೋಗಿಗಳಾಗಬೇಕೆಂದಂತೆ ದೇವರ ದರ್ಶನ ವಾಗೋದಕ್ಕೂ ಯೋಗಿಯಾಗಬೇಕು. ಯೋಗಿಗಳ ಲಕ್ಷಣವನ್ನು ಭಗವದ್ಗೀತೆ ಯಲ್ಲಿ ವಿವರಿಸಿರುವ ಶ್ರೀ ಕೃಷ್ಣ ಯೋಗಿ,ಅರ್ಜುನ ಯೋಗಿಯಾಗುವಂತೆ ಉಪದೇಶ ನೀಡಿದ ಸಾಮಾನ್ಯಜ್ಞಾನ ನಾವರಿತರೆ ಭಗವದ್ಗೀತೆ ಯು ಆತ್ಮಜ್ಞಾನದೆಡೆಗೆ ನಡೆಸುತ್ತದೆ. ಆದರೆ ಅದನ್ನು ರಾಜಕೀಯವಾಗಿ ಬಳಸಿದರೆ ಭೋಗ ಜೀವನದಲ್ಲಿ ರೋಗ ಹೆಚ್ಚುವುದು. ಗೀತೆಯಲ್ಲಿ ರಾಜಯೋಗದ ಜೊತೆಗೆ ರಾಜಕೀಯ ವಿದ್ದರೂ ಧರ್ಮ ರಕ್ಷಣೆಗಾಗಿ ಕ್ಷತ್ರಿಯನಾದವನು ಹೇಗಿರಬೇಕೆನ್ನುವ ಸತ್ಯವಿದೆ. ಇಂದಿನ ರಾಜಕಾರಣದ ಹೋರಾಟ ಕೇವಲ ತಮ್ಮ ಅಧಿಕಾರ ,ಸ್ಥಾನ ಉಳಿಸಿಕೊಳ್ಳುವ ಮಟ್ಟಕ್ಕೆ ನಿಂತಿದೆ ಎಂದರೆ ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯವಿದೆ.
ಯೋಗಾಸನದಿಂದ ಯೋಗಿಯಾಗೋದಿಲ್ಲ. ಆರೋಗ್ಯಕರ ಜ್ಞಾನದಿಂದ ಯೋಗಿಯಾಗಬೇಕೆನ್ನುವುದು ಜ್ಞಾನಯೋಗ, ತನ್ನ ತಾನರಿತು ತನ್ನ ಜೀವನದ ಉದ್ದೇಶ ತಿಳಿದ ಮಹಾತ್ಮರಾಗಲು ರಾಜಯೋಗ ಬೇಕು, ಪರಮಾತ್ಮನಲ್ಲಿ ಮನಸ್ಸನ್ನು ನಿಲ್ಲಿಸಿ ಭಕ್ತಿಯಿಂದ ಎಲ್ಲರಲ್ಲಿಯೂ ಅಡಗಿರುವ ಆ ಶಕ್ತಿಯನ್ನರಿಯುವುದು ಭಕ್ತಿಯೋಗ, ಕಾಯಕವೇ ಕೈಲಾಸ ಎನ್ನುವ ಮಂತ್ರದ ಅರ್ಥ ಸತ್ಕರ್ಮದಿಂದ ಪರಮಾತ್ಮನ ಸೇವೆ ಮಾಡುತ್ತಾ ಜೀವನ ನಡೆಸುವುದಾಗಿದೆ. ಇದರಲ್ಲಿ ಜ್ಞಾನ ವಿಜ್ಞಾನ ಯೋಗವಿದೆ.ಜ್ಞಾನವೆಂದರೆ ತಿಳುವಳಿಕೆ ವಿಜ್ಞಾನವೆಂದರೆ ತಿಳುವಳಿಕೆಯನ್ನು ಉತ್ತಮ ಶಿಕ್ಷಣದಿಂದ ವಿಶೇಷವಾಗಿ ತಿಳಿದು ಸದ್ಬಳಕೆ ಮಾಡಿಕೊಂಡಿರೋದು.
ಇವೆಲ್ಲವೂ ಅಧ್ಯಾತ್ಮ ಶಕ್ತಿಯನ್ನು ಹೆಚ್ಚಿಸುತ್ತಾ ಮೇಲಿರುವ ಪರಾಶಕ್ತಿ ಪರಮಾತ್ಮನಲ್ಲಿ ಲೀನವಾದರೆ ಯೋಗ.
ತಾತ್ಕಾಲಿಕ ಯೋಗಗಳು ನಿರಂತರ ನಡೆಯುತ್ತದೆ.ಮಾನವನ ಪ್ರಯತ್ನಕ್ಕೆ ತಕ್ಕಂತೆ ಫಲ ಸಿಗೋದು ಯೋಗ.ಇದು ಅಧಿಕಾರ, ಹಣ,ಸ್ಥಾನ,ವಸ್ತು,ಒಡವೆ, ಆಹಾರ,ವಿಹಾರ, , ವಿದ್ಯೆ, ಮದುವೆ, ಮನೆ,ಮಠ ಇನ್ನಿತರ ವಿಷಯದಲ್ಲಿ ಆಸೆಯಿಂದ ಮುಂದೆ ಹೋದವರಿಗೂ ಯೋಗವಿದೆ. ಆದರೆ ಇದರಿಂದ ಜೀವನ್ಮುಕ್ತಿ ? .ಹೀಗಾಗಿ ಸಂನ್ಯಾಸಿ ಗಳು, ಯೋಗಿಗಳು ಸ್ವತಂತ್ರ ವಾಗಿ ಸತ್ಯ ತಿಳಿದು ಆತ್ಮಶುದ್ದಿಯಿಂದ ಪರಮಾತ್ಮನೆಡೆಗೆ ಹೋಗಲು ಸಾಧ್ಯವಾಯಿತು. ಭಗವದ್ಗೀತೆ ಯು ಸರ್ವ ಕಾಲಿಕ ಸತ್ಯವಾದರೂ, ಅವರವರ ಜ್ಞಾನಕ್ಕೆ ತಕ್ಕಂತೆ ಅನುಭವಕ್ಕೆ ಬಂದ ಕಾರಣ ಸಾಕಷ್ಟು ರೀತಿಯಲ್ಲಿ ವಿವರಣೆ ಕೊಟ್ಟರೆ ಓದುಗರ ,ಕೇಳುಗರ ಯೋಗಶಕ್ತಿಗೆ ತಕ್ಕಂತೆ ಅನುಭವಕ್ಕೆ ಬರುತ್ತದೆ.ಹಾಗೆಯೇ ದೇಶ ಹಾಗು ದೇವರನ್ನು ತೋರಿಸಲಾಗದು.ಅಂತರಾಳದ ಅರಿವಿಲ್ಲದೆ ಏನೂ ಅರ್ಥ ಆಗದು. ರಾಜಯೋಗವೆಂದರೆ ನಮ್ಮನ್ನು ನಾವು ಆಳಿಕೊಳ್ಳಲು ಬೇಕಾದ ಯೋಗ.ರಾಜಕೀಯದಲ್ಲಿ ಯೋಗ
ವಿಲ್ಲದೆ ಜನರನ್ನು ಆಳಿದರೆ ಅಧರ್ಮ.ಈ ವಿಚಾರಗಳು ಮೊದಲು ಸಂನ್ಯಾಸಿಗಳು ಅರ್ಥ ಮಾಡಿಕೊಂಡರೆ ಸಂಸಾರಿಗಳ ಈ ಸ್ಥಿತಿಗೆ ಕಾರಣ ತಿಳಿಸಬಹುದು. ಸಂಸಾರದಲ್ಲಿದ್ದವರು ಯೋಗಿಗಳಾಗಬಹುದು.ಸಂನ್ಯಾಸಿಯಾಗೋದಕ್ಕೆ ಮೆಟ್ಟಿಲು ಹತ್ತಬೇಕು. ಇತ್ತೀಚೆಗೆ ಸಾಕಷ್ಟು ಮಂದಿ ಮನೆ ಬಿಟ್ಟು ಹೊರ ಬಂದು ಆಶ್ರಮ ಸೇರಿದ್ದಾರೆ. ಆದರೆ ಯೋಗಿಗಳಾಗಿಲ್ಲ ಹಾಗೆ ಸಂನ್ಯಾಸಧರ್ಮವೂ ಪೂರ್ಣ ಪ್ರಮಾಣದಲ್ಲಿ ಅರ್ಥ ವಾಗಿಲ್ಲ.
ಜನಬಲ,ಹಣಬಲ,ಅಧಿಕಾರಬಲದ ಜೊತೆಗೆ ನಡೆಯುವಾಗ
ಪರಮಾತ್ಮ ಕಾಣೋದಿಲ್ಲವೆನ್ನಬಹುದು.ಅದಕ್ಕೆ ದೇಶ ಹೀಗಿದೆ. ಯೋಗ ಕೂಡಿಬರುವವರೆಗೂ ತಾಳ್ಮೆ ಬೇಕು.
ತಾಳಿದವನು ಬಾಳಿಯಾನು, ಇದು ವೈಜ್ಞಾನಿಕ ಜಗತ್ತಿಗೆ
ವಿರುದ್ದವಾಗಿರುವಾಗ ಶೀಘ್ರವಾಗಿ ಮೇಲೇರಿದವರು ಹಾಗೇ ಕೆಳಗೆ ಕುಸಿಯುವುದೂ ಸಹಜವಾಗುತ್ತಿದೆ. ನಮ್ಮಲ್ಲೇ ಇದ್ದ ದೈವಶಕ್ತಿಗೆ ಪೂರಕವಾದ ಶಿಕ್ಷಣ ನೀಡದೆ ಆಳಿದರೆ ರಾಜಕೀಯ ಮಾತ್ರ ಬೆಳೆಯುತ್ತದೆ ರಾಜಯೋಗವಲ್ಲ
ವೆನ್ನಬಹುದು. ಅದ್ವೈತ ದೊಳಗೆ ದ್ವೈತ ವಿದ್ದರೂ ಬೇರೆ ಮಾಡಿದರೆ ಅಧರ್ಮವಾಗುತ್ತದೆ. ಹಾಗೆ ದೇಶದೊಳಗಿರುವ ಪ್ರಜೆಗಳೇ ದೇಶ ಬೇರೆ ನಾನೇ ಬೇರೆ ಎಂದರೆ ವಿದೇಶವೆ ಬೆಳೆಯೋದು. ಪರಮಾತ್ಮನೊಳಗಿರುವ ಜೀವಾತ್ಮನು ನಾನೇ ಬೇರೆ ನೀನೇ ಬೇರೆ ಎಂದರೆ ಯೋಗಿಯಾಗಲಾರ. ಯಾವ ಪುರಾಣ ಇತಿಹಾಸದ ಕಥೆಗಳೂ ಈ ಸತ್ಯವನ್ನು ತಿಳಿಸಲಾಗದು ಕಾರಣವಿಷ್ಟೆ ಅವು ನಡೆದು ಹೋದ ಪುರಾಣ ಸತ್ಯ, ಇದು ವಾಸ್ತವ ಸತ್ಯ. ವಾಸ್ತವದಲ್ಲಿದ್ದು ಸತ್ಯ ತಿಳಿದರೆ ಭವಿಷ್ಯದಲ್ಲಿಯೂ ಸತ್ಯವಿರುತ್ತದೆ. ಒಂದೇ ಸತ್ಯ ಎಷ್ಟೋ ರೂಪ ತಳೆದರೂ ಸೇರೋದು ಒಂದೇ ಕಡೆ.ಅದೇ ಸತ್ಯಯೋಗ. ಸತ್ಯಾಸತ್ಯತೆ,ಜ್ಞಾನವಿಜ್ಞಾನ,ದೇವಾಸುರರು ಇರೋದು ಮಾನವನೊಳಗಿನ ಜ್ಞಾನದಲ್ಲಿ. ಹಾಗಾದರೆ ಇಲ್ಲಿ ನಮ್ಮೊಳಗೇ ಹುಡುಕಿಕೊಂಡು ಮನಸ್ಸನ್ನು ಸೇರಿಸಲು ಹೊರ ನಡೆದರೆ ಆಗುವುದೆ? ಹೊರಗೆ ಹೋದರೂ ಕಾಡಿನಲ್ಲಿ ಒಬ್ಬಂಟಿಯಾಗಿ ತಪಸ್ಸು ಮಾಡಬೇಕು.ಸಾಧ್ಯವೆ? ಇದಕ್ಕಾಗಿ ಮೌನ ಬಂಗಾರ ಮಾತು ಬೆಳ್ಳಿ ಎಂದರು. ಸತ್ಯ ತಿಳಿದ ಮೇಲೆ ಯೋಗಿ ಮೌನವಾಗುತ್ತಾನೆ. ಆದರೆ ಸಂಸಾರಿಗೆ ಕಷ್ಟವಾಗಿ ಮಾತಾಡಿ ಸತ್ಯ ತಿಳಿಯುತ್ತಾನೆ.
No comments:
Post a Comment