ಸಂಕ್ರಾಂತಿಯನ್ನು ಸಮ್ ಕ್ರಾಂತಿ ,ಸನ್ ಕ್ರಾಂತಿಯೆಂದು
ಕಂಗ್ಲೀಷ್ ನಲ್ಲಿ ಹೇಳಿದರೂ ಸಂಕ್ರಾಂತಿಯ ಸತ್ವ,ಸತ್ಯಕ್ಕೆ
ಚ್ಯುತಿ ಬರೋದಿಲ್ಲ. ಆದರೆ ಮಾನವ ಜ್ಞಾನದಿಂದ ಸಂಕ್ರಾಂತಿ ಆಚರಿಸುವುದಕ್ಕೂ ಅಜ್ಞಾನದಿಂದ ಆಚರಿಸುವುದಕ್ಕೂ ವ್ಯತ್ಯಾಸವಿದೆ. ಪ್ರಕೃತಿಯೊಂದಿಗೆ ಬೆರೆತು ಬಾಳುವುದಕ್ಕೂ ಪ್ರಕೃತಿ ವಿರುದ್ದ ಬಾಳುವುದಕ್ಕೂ ವ್ಯತ್ಯಾಸವಿದ್ದ ಹಾಗೆ ಒಂದು ರಾಜಯೋಗ ಇನ್ನೊಂದು ರಾಜಕೀಯ.
ಕ್ರಾಂತಿಯ ನಂತರವೇ ಶಾಂತಿ ಎನ್ನುವ ಬದಲು ಶಾಂತಿಯಿಂದ ಕ್ರಾಂತಿಗೆ ಕಾರಣ ತಿಳಿಯುವುದು ಜ್ಞಾನ.
ಅತಿಯಾದ ಶಾಂತಿ ಕ್ರಾಂತಿಗೆ ಕಾರಣವಾದಂತೆ ಅತಿಯಾದ ಕ್ರಾಂತಿ ಶಾಂತಿಗೆ ಕಾರಣವಾಗೋದಿಲ್ಲ. ಹೀಗಾಗಿ ಯಾವುದೇ ವಿಚಾರವಿರಲಿ ಮಿತಿಮೀರಿದರೆ ಅಧೋಗತಿ.
ಹಿಂದೂ ಧರ್ಮವನ್ನು ವೇದಗಳಿಗಿಂತ ಹೆಚ್ಚಾಗಿ ಗಾದೆಗಳಿಂದ ಉಳಿಸಿ ಬೆಳೆಸಿದರೆ ಮಾನವನಾಗಿದ್ದು ಭೂಮಿಯಲ್ಲಿ ಹೇಗೆ ಜೀವಿಸಬೇಕೆಂಬುದು ಸರಳವಾಗಿ ಅರ್ಥವಾಗಬಹುದು.
ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಸತ್ಯ. ವೇದಕಾಲದ ಸತ್ಯಾಸತ್ಯತೆಯನ್ನು ಕಾಲಮಾನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಬಂದು ಅದರ ಅನುಭವವನ್ನು ಗಾದೆ ಮೂಲಕ ಜನಸಾಮಾನ್ಯರು ಅರ್ಥಮಾಡಿಕೊಂಡವರು
ವೇದಕಾಲದಲ್ಲಿದ್ದವರೂ ಕಲಿಯುಗದವರೆಗೂ ಇರುವವರೆಂದರೆ ಮಾನವನ ಮೂಲ ಯಾರೂ ತಿಳಿಸಲಾಗದು. ಅವರವರ ಜನ್ಮಕ್ಕೆ ತಕ್ಕಂತೆ ಧರ್ಮ ಕರ್ಮ ವೂ ಪುರಾಣಕಾಲದಿಂದಲೂ ಇದೆ.ಈಗಲೂ ಇದೆ.ವ್ಯತ್ಯಾಸ ವಿಷ್ಟೆ ಅಂದು ಧರ್ಮ ಕರ್ಮ ದ ಪ್ರಕಾರ ಶಿಕ್ಷಣವಿದ್ದು ಸ್ವತಂತ್ರ ಜ್ಞಾನವಿತ್ತು. ಈಗ ಧರ್ಮ ವೇ ಬೇರೆ ಕರ್ಮವೇ ಬೇರೆ ಶಿಕ್ಷಣವೇ ಬೇರೆ ಒಂದಕ್ಕೊಂದು ಹೊಂದಿಕೆ ಆಗದೆ ಸ್ವತಂತ್ರ ಜ್ಞಾನವಿಲ್ಲದವರು ಪರರ ತಂತ್ರದಲ್ಲಿ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆದಿದೆ.
ಭಗವದ್ಗೀತೆ ಯ ಸಾರ ಕನ್ನಡದ ಭಗವದ್ಗೀತೆ ಎಂದು ಕರೆಯೋ ಡಿ.ವಿ.ಗುಂಡಪ್ಪನವರ ಕಗ್ಗದ ಸಾರ ಒಂದೇ ಆದರೂ ಭಗವದ್ಗೀತೆ ಪವಿತ್ರ ಗ್ರಂಥ ಭಗವಂತನ ವಾಣಿಯು ಜಗತ್ತಿಗೇ ಬೆಳಕನ್ನು ಕೊಡುವ ಮಟ್ಟಿಗೆ ಪ್ರಚಾರವಾಗುತ್ತದೆ.
ಆದರೆ, ಕನ್ನಡದ ಕಗ್ಗ ಅರ್ಥ ಮಾಡಿಕೊಳ್ಳಲು ಕನ್ನಡಿಗರಿಗೇ ಕಷ್ಟವಾದರೂ ಗುಂಡಪ್ಪನವರಂತಹ ಮಹಾತ್ಮರ ವಾಸ್ತವತೆಯ ಸತ್ಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲು
ನಾವು ತಯಾರಿಲ್ಲ.ಕಾರಣ. ನಾನಿರುವಾಗ ನನಗೆ ನನ್ನ ವಾಸ್ತವ ಸತ್ಯವನ್ನು ಬೇರೆಯವರು ಹೇಳಿದರೆ ಇಷ್ಟವಾಗೋದಿಲ್ಲ. ಹೀಗಾಗಿ ಸತ್ಯ ನಾನು ಒಪ್ಪೋದಿಲ್ಲ
ವಾದಾಗ ನನಗೆ ನಾನೇ ಸರಿ. ನನ್ನೊಳಗೇ ಇರುವ ಸತ್ಯ ನನಗೇ ವೈರಿಯಾದರೆ ಹಿಂದಿನ ಕಾಲದ ವೇದವಾಗಲಿ ಗಾದೆಯಾಗಲಿ ನನಗೆ ಅರ್ಥ ವಾಗದು. ಇದು ನನ್ನದೇ ಸಮಸ್ಯೆ. ಈ ಸಮಸ್ಯೆಗೆ ಪರಿಹಾರವೂ ನನ್ನೊಳಗೇ ಇದೆ. ಹೊರಗಿರುವ ಸತ್ಯಾಸತ್ಯತೆಯನ್ನು ಎಲ್ಲಿಯವರೆಗೆ ನಾನು ಹಿಡಿದುಕೊಂಡು ನಡೆಯುವೆನೋ ಅಲ್ಲಿಯವರೆಗೆ ನನ್ನೊಳಗೇ ಅಡಗಿರುವ ಸತ್ಯಕ್ಕೆ ನಾನು ಸ್ಪಂದಿಸೋದು ಕಷ್ಟ. ಅದರಲ್ಲೂ ಯಾವಾಗ ನನಗೆ ಹೊರಗೆ ಅಸತ್ಯ,ಅನ್ಯಾಯ,
ಭ್ರಷ್ಟಾಚಾರ ಸಹಕರಿಸಿ ಅಧಿಕಾರ,ಹಣ, ಹೆಸರು,ಸ್ಥಾನ ಕೊಡುವುದೋ ನಾನು ಹೊರಗಿನವನಾಗೇ ಇರುತ್ತೇನೆ. ಈ ಕಾರಣಕ್ಕಾಗಿ ನಾನು ಹಿಂದಿನವರೆಡೆಗೆ ಹೋಗದೆ ಮುಂದೆ ನಡೆದು ಮೂಲದಿಂದ ದೂರವಾಗಿ ಪರಕೀಯರ ವಶದಲ್ಲಿ ನಾನಿರುವಾಗ ಒಳಗಿನ ಪರಮಾತ್ಮನನಗೆ ಸಿಗೋದಿಲ್ಲವಲ್ಲ.
ನಾನಿರುವಾಗ ಪರಮಾತ್ಮ ಕಾಣದುಪರಕೀಯತೆ ಹೋದಾಗ
ಪರಮಾತ್ಮನ ದರ್ಶನ. ನನ್ನೊಳಗೇ ಇರುವ ಪರಕೀಯರ
ಜ್ಞಾನವೇ ಭೌತಿಕದೆಡೆಗೆ ಸೆಳೆದಿರುವಾಗ ಅಧ್ಯಾತ್ಮದ
ಪರಮಾತ್ಮನ ಜ್ಞಾನದ ಅನುಭವ ನನಗೆ ಆಗದು.
ಆಳವಾಗಿರುವ ಬೇರನ್ನು ಕೀಳಲಾಗದು. ಬೆಳೆದಿರುವ ರೆಂಬೆ ಕೊಂಬೆಗಳನ್ನು ಮುರಿದರೂ ಬೇರು ಚಿಗುರುತ್ತದೆ. ಹಾಗಾಗಿ ಬೇರು ಸಹಿತ ಕಿತ್ತು ಹಾಕುವ ಪ್ರಯತ್ನ ಶಿಕ್ಷಣದಲ್ಲಿಯೇ ಮಾಡಿ ಭಾರತವನ್ನು ಆಳುವ ತಂತ್ರಕ್ಕೆ ನಮ್ಮವರ ಸಹಕಾರ
ಹೆಚ್ಚಾಗಿರುವಾಗ ಎಷ್ಟೇ ತತ್ವಜ್ಞಾನದ ಪ್ರಚಾರ ಮಾಡಿದರೂ
ತತ್ವವನ್ನು ವೇದದಿಂದಾಗಲಿ,ಗಾದೆಯಿಂದಾಗಲಿ ಅಳವಡಿಸಿಕೊಳ್ಳಲು ಸೋತರೆ ಹಿಂದುಳಿದ ಜನರಷ್ಟೆ ಕಾಣೋದು ಹಿಂದೂ ಧರ್ಮದ ಸಾರವಲ್ಲ. ಒಟ್ಟಿನಲ್ಲಿ ಸಂಸಾರ ಬಿಟ್ಟು ಹೊರಗೆ ಬಂದವರಿಗೆ ಮುಕ್ತಿ ಎನ್ನುವುದು ಅಸತ್ಯ. ಸಂಸಾರದಲ್ಲಿದ್ದು ಅದರ ಸಾರವನ್ನು ಅರ್ಥ ಮಾಡಿಕೊಳ್ಳಲು ಸಂನ್ಯಾಸಿಗಳ ಅಗತ್ಯಕ್ಕಿಂತ ಯೋಗಿಗಳ ಅಗತ್ಯವಿದೆ. ಯೋಗಿಗಳು ಸಂನ್ಯಾಸಿಗಿಂತ ದೊಡ್ಡವರು.
ಯೋಗ್ಯ ಜೀವನ ನಡೆಸೋದು ಯೋಗಿಗಳಾಗುತ್ತಾರೆ.
ಎಲ್ಲವೂ ನಶ್ವರ ಎಂದು ಸತ್ಯ ತಿಳಿಯದೆ ಸಂನ್ಯಾಸಿ
ಯಾದರೂ ಕಾಡಿನಲ್ಲಿದ್ದು ಸಾಧನೆ ಮಾಡಿದವರು
ಶ್ರೇಷ್ಠ ಜ್ಞಾನಿಗಳಾಗುತ್ತಾರೆ. ಅನುಭವಿಸಿಯೇ ಸತ್ಯ ದರ್ಶನ ಎನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ. ಇದರಲ್ಲಿ ಅಧ್ಯಾತ್ಮ ಭೌತಿಕ ವಿಜ್ಞಾನದ ಅಂತರ ಹೆಚ್ಚಾದರೆ ಕಷ್ಟ ನಷ್ಟ ಹೆಚ್ಚುತ್ತದೆ. ಆಕಾಶದೊಳಗಿರುವ ಭೂಮಿ,ಭೂಮಿ ಮೇಲಿರುವ ಮಾನವ,ಮಾನವನೊಳಗಿರುವ ಸತ್ಯಜ್ಞಾನದವರೆಗೂ ಒಂದೇ ಶಕ್ತಿ ಇರೋದು. ಆ ಶಕ್ತಿಯನ್ನು ಹೊರಗೆ ತೋರಿಸಲಾಗದು ಒಳಗೇ ತಿಳಿಯುವುದೇ ಅಧ್ಯಾತ್ಮ.
ಸಮಾಜದ ಋಣದಲ್ಲಿರುವ ಎಲ್ಲರೂ ಸಂಸಾರಿಗಳೇ. ಋಣ ಮುಕ್ತನಾಗೋದಕ್ಕೆ ಸೇವೆ ಮಾಡಬೇಕು.ಭೂ ಸೇವೆಯನ್ನು
ನಿಸ್ವಾರ್ಥ ನಿರಹಂಕಾರದಿಂದ ಜ್ಞಾನದಿಂದ ಮಾಡಲು ಸತ್ಯ ತಿಳಿಯಬೇಕು. ಆತ್ಮಸಾಕ್ಷಿಯಂತೆ ನಡೆಯುವವರಿಗೆ ಆತ್ಮಜ್ಞಾನವಾದ ನಂತರವೇ ಎಲ್ಲಾ ಸೇವೆಯಲ್ಲಿ ಪರಮಾತ್ಮನ ಕಾಣಲು ಸಾಧ್ಯವಾಗಿ ನಾನಿರೋದಿಲ್ಲ. ಇದನ್ನು ಅದ್ವೈತ ಸಿದ್ದಾಂತದ ಪ್ರಕಾರ ನಾನೆಂಬುದಿಲ್ಲ ಎಂದರು.
ವಾಸ್ತವದಲ್ಲಿ ಎಲ್ಲಾ ನಡೆದಿರೋದಕ್ಕೆ ನಾನೇ ಕಾರಣವೆಂದಾಗ
ಅದರ ಪ್ರತಿಫಲ ನಾನೇ ಪಡೆಯಬೇಕಷ್ಟೆ.ಒಳ್ಳೆಯದಾದರೆ ಉತ್ತಮ ಫಲ ಕೆಟ್ಟದ್ದಾದರೆ ಕೆಟ್ಟಫಲ.ಹಾಗಾದರೆ ನಾನ್ಯಾರು?
ಜೀವವೋ ? ಪರಮಾತ್ಮವೋ?
ಪರಮಾತ್ಮ ಒಬ್ಬನಾದರೆ ಎಲ್ಲರಲ್ಲಿಯೂ ಇರುವ ನಾನೇ ಪರಮಾತ್ಮನೆ? ಪರಮಾತ್ಮನಲ್ಲಿ ಅಧರ್ಮವಿದೆಯೆ? ಅಸುರತೆ ಇದೆಯೇ? ಅಸತ್ಯ,ಅನ್ಯಾಯ,ಭ್ರಷ್ಟಾಚಾರ ವಿದೆಯೆ? ಎಲ್ಲಾ ಇರುವುದು ಯಾರಲ್ಲಿ? ನನ್ನಲ್ಲಿ. ನಾನೇ ಬೇರೆ ಪರಮಾತ್ಮನೆ ಬೇರೆ ಎನ್ನುವ ದ್ವಂದ್ವ ನಿಲುವಲ್ಲಿ ನನಗೆ ಭೂಮಿ ಮೇಲಿರುವ ಜ್ಞಾನವೂ ಇಲ್ಲ. ಆಕಾಶಕ್ಕೆ ಹಾರೋ ಜ್ಞಾನವೂ ಇಲ್ಲ. ಹೀಗಾಗಿ ಮಧ್ಯೆ ಇರುವ ಮಾನವನಾಗಿರಲು ಸಾಧ್ಯವಾಗದೆ ನನಗೆ ನಾನೇ ಮೋಸ ಹೋದರೂ ಚಿಂತೆಯಿಲ್ಲ. ಸ್ವಾಮಿವಿವೇಕಾನಂದರ ವಿವೇಕದ ರಾಜಯೋಗ ಅರ್ಥ ವಾಗಲ್ಲ. ರಾಜಕೀಯ ಬಿಟ್ಟು ಜೀವನ ನಡೆಸಲಾಗುತ್ತಿಲ್ಲ. ಆದರೂ ನಾನು ಸ್ವತಂತ್ರ ಭಾರತದ ಪ್ರಜೆಯಾಗಿದ್ದು ಸ್ವತಂತ್ರ
ಚಿಂತನೆ ನಡೆಸುವ ಸ್ವಾತಂತ್ರ್ಯ ಇನ್ನೂ ಇರೋದು ಆ ಪರಮಾತ್ಮನ ಕೃಪೆ ನನ್ನ ಮೇಲಿದೆ. ಪರಮಾತ್ಮನಿಲ್ಲದೆ ನಾನಿಲ್ಲ.
ನಾನಿಲ್ಲದ ಪರಮಾತ್ಮನಿಲ್ಲ. ಅದ್ಯಾತ್ಮ ದ ಅನುಭವದಲ್ಲಿ ಸ್ತ್ರೀ ಗಾದ ಅನುಭವ ಪುರುಷರಿಗಾಗಿಲ್ಲ.ಪುರುಷರಿಗಾದ ಅನುಭವ ಸ್ತ್ರೀ ಗಾಗಿಲ್ಲ. ಹೀಗಿರುವಾಗ ಭೂಮಿ ಮೇಲಿರುವ
ಇಬ್ಬರಿಗೂ ಅನುಭವದಲ್ಲಿ ವ್ಯತ್ಯಾಸವಿದೆ.ನಮ್ಮ ಅನುಭವವೇ ನಮಗೆ ಸಮಸ್ಯೆ ಯಾಗಿರುವಾಗ ಬೇರೆಯವರ ಅನುಭವದಿಂದ ಸಮಸ್ಯೆ ನಿವಾರಣೆ ಸಾಧ್ಯವಾಗೋದಾದರೆ ಅದು ಯೋಗಿಗಳ ಅನುಭವವಾಗಿರಬೇಕು.ಅದ್ವೈತ ದಲ್ಲಿದ್ದು
ಸಾಧನೆ ಮಾಡಿರಬೇಕು. ವೇದದ ಜೊತೆಗೆ ಗಾದೆಯ ಸತ್ಯವೂ
ಸೇರಿರಬೇಕು. ಅಂತಹವರಿಗೆ ಪರಮಾತ್ಮನೇ ನೇರವಾಗಿ ನಡೆಸುವಾಗ ಒಂದೇ ಸತ್ಯವಿರುತ್ತದೆ. ಕಾರಣ ಮೂಲ ಒಂದೇ. ಆ ಮೂಲದಕಡೆಗೆ ಹೊರಟವರಿಗೆ ನೆಮ್ಮದಿ ,ಶಾಂತಿ
ತೃಪ್ತಿ ಮುಕ್ತಿ ಸಿಕ್ಕಿದೆ. ಅದನ್ನು ಬಿಟ್ಟು ಹೊರಬಂದವರನ್ನು ಇಲ್ಲಿ ಸಾಧಕರನ್ನಾಗಿಸಿದರೆ ಅಧ್ಯಾತ್ಮ ವಾಗದೆ ರಾಜಕೀಯ
ತಂತ್ರವಷ್ಟೆ ಆಗಿರುತ್ತದೆ. ಯಾರನ್ನೋ ಯಾರೋ ಆಳಲು ಇದು ರಾಜಪ್ರಭುತ್ವದ ದೇಶವಲ್ಲ. ಪ್ರಜಾಪ್ರಭುತ್ವದ ದೇಶ.
ಇದಕ್ಕೆ ಸಹಕರಿಸುವ ಪ್ರಜೆಗಳಿಗೆ ವೇದವೂ ಗೊತ್ತಿಲ್ಲ. ಗಾದೆಯೂ ಅರ್ಥ ವಾಗಿಲ್ಲ. ಅಜ್ಞಾನಿಗಳನ್ನು ಬೆಳೆಸುತ್ತಾ ಹೊರಬಂದ ಶಿಕ್ಷಣವೇ ಇದಕ್ಕೆ ಕಾರಣವಾಗಿದ್ದರೂ ಹೇಳಿದರೂ ಕೇಳಿ ತಿಳಿಯುವ ಜ್ಞಾನವಿಲ್ಲದೆ ಮನೆಯಿಂದ ಹೆಚ್ಚು ಮಹಿಳೆ ಮಕ್ಕಳು ಹೊರಬಂದು ಹೋರಾಟ,ಹಾರಾಟ,
ಮಾರಾಟದ ವ್ಯವಹಾರಿಕ ಹಾಗು ರಾಜಕೀಯದಲ್ಲಿ ದೈವತ್ವವಿಲ್ಲ.
ಕಾಲಚಕ್ರ ತಿರುಗುವಾಗ ಕೆಳಗಿರುವ ಹಿಂದುಳಿದವರು ಮೇಲೆ ಬರುತ್ತಾರೆ.ಮೇಲಿನವರು ಕೆಳಗಿರುತ್ತಾರೆ. ಪರಮಾತ್ಮನಿಗೇನೂ ನಷ್ಟವಿಲ್ಲ. ಜೀವಾತ್ಮನೇ ಎಲ್ಲದ್ದಕ್ಕೂ ಕಾರಣಕರ್ತನಾಗಿರುತ್ತಾನೆ.
ಭಾರತೀಯರಲ್ಲಿ ಭಾರತೀಯತೆ ದೇಶದೊಳಗಿದ್ದರೆ ದೇಶದ ಋಣ ತೀರಿಸಬಹುದು. ದೇಶದ ಹೊರಗೆ ಹೋಗಿದ್ದರೆ ಹೇಗೆ ಋಣ ತೀರಿಸಲಾಗುತ್ತದೆ? ಹಾಗೇ ದೈವತ್ವ ಒಳಗಿದ್ದರೆ ದೇವರ ದರ್ಶನ. ಹೊರಗಿದ್ದರೆ ಪ್ರತಿಮೆಯಷ್ಟೆ ಕಾಣೋದು. ಪ್ರತಿಮೆ ಶಾಶ್ವತವಲ್ಲ. ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿತಾಣವಾಗಿಸುವ ಬದಲು ಯಾತ್ರಸ್ಥಳ ಮಾಡಿದರೆ ಧರ್ಮ, ಎಲ್ಲಿ ವ್ಯವಹಾರವಿರುವುದೋ ಅಲ್ಲಿ ಅಸತ್ಯ,ಅನ್ಯಾಯ, ಅಧರ್ಮ, ನಾನೆಂಬ ರಾಜಕೀಯತೆ ಹೆಚ್ಚು. ಹೀಗಾಗಿ ಹಿಂದಿನ ಭಾರತದಲ್ಲಿ ಮನೆ ಮನೆಯೂ ಗುರುಕುಲವಾಗಿತ್ರು ದೇವಸ್ಥಾನವಿತ್ತು. ಆದರೀಗ ಮನೆ ಬಿಟ್ಟು ಹೊರಗೆ ದೇವರನ್ನು ಹುಡುಕುತ್ತಾ, ಹೊರಗಿನ ಶಿಕ್ಷಣಕ್ಕಾಗಿ ಮನೆ ಬಿಟ್ಟು ನಡೆದವರಿಗೆ ಪೋಷಕರ ಸಹಕಾರ,ಗುರುಗಳ ಆಶೀರ್ವಾದ, ಹಿರಿಯರ ಪ್ರೋತ್ಸಾಹ. ಪುರಸ್ಕಾರ ಸಿಗುತ್ತದೆ. ಮನೆಯೊಳಗಿದ್ದು ಧರ್ಮ ಕರ್ಮ ವನ್ನು ತಿಳಿದವರಿಗೆ ತಿರಸ್ಕಾರವಿದೆ ಎಂದರೆ ಭಾರತೀಯರು ಎಲ್ಲಿರುವರು?
No comments:
Post a Comment