ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Thursday, January 19, 2023

ಭಾರತೀಯರು ಸ್ವತಂತ್ರ ರೆ ಅತಂತ್ರರೆ?

ಸ್ವಾತಂತ್ಯ  ಹೋರಾಟಗಾರರಲ್ಲಿಯ ಹಲವು ತಾತ್ವಿಕ ವಿಚಾರಗಳನ್ನು ತಂತ್ರಜ್ಞಾನಿಗಳು ವಿರೋಧಿಸಿ ನಡೆದಿರೋದರಲ್ಲಿ ರಾಜಕೀಯ ಶಕ್ತಿಯನ್ನು ಕಾಣಬಹುದು.
ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಅಂದಿನ ದೇಶಭಕ್ತರಿಗೂ ದೇಶವನ್ನೇ ತಂತ್ರಜ್ಞಾನದಿಂದ ವಿದೇಶ ಮಾಡಿ ರಾಜಕೀಯ ನಡೆಸುವ ಇಂದಿನವರಿಗೂ ಬಹಳ ವ್ಯತ್ಯಾಸವಿದೆ.
ಅಂದಿನ  ದೇಶಭಕ್ತರಿಗೆ ತತ್ವಜ್ಞಾನವಿತ್ತು.ಇಂದಿನವರಲ್ಲಿ ವಿದೇಶಿ ತಂತ್ರಜ್ಞಾನವೇ ತುಂಬಿಕೊಂಡಿದೆ.ಅಂದಿನ ಶಿಕ್ಷಣವು ದೇಶದ ಪರವಾಗಿತ್ತು.ಇಂದಿನ ಶಿಕ್ಷಣವೇ ವಿದೇಶಿಗರ ವಶವಾಗಿ  ಜನರನ್ನು ಆಳುತ್ತಿದೆ. 
ಅಂದಿನ‌ ಮಹಾತ್ಮರುಗಳಲ್ಲಿದ್ದ ನಿಸ್ವಾರ್ಥ ನಿರಹಂಕಾರದ ಜ್ಞಾನ  ಶಿಕ್ಷಣದ ಮೂಲಕ ಜನಸಾಮಾನ್ಯರವರೆಗೆ ಕೊಡಲಾಗುತ್ತಿತ್ತು. ಇಂದಿನ ಜ್ಞಾನಿಗಳಲ್ಲಿರುವ ವಿಶೇಷ ಜ್ಞಾನ  ಕೇವಲ ಕೆಲವು ಜನರಿಗೆ ಸೀಮಿತವಾಗಿ ಸತ್ಯವಿಲ್ಲದ ಧರ್ಮ ಬೆಳೆದಿದೆ. 
ಪುರಾಣ ಇತಿಹಾಸದ ಕಥೆಯು ರಾಜರ ಕಾಲದ ಸತ್ಯವಾಗಿದ್ದರೆ, ಇಂದಿನ ಕಥೆ ಪ್ರಜಾಪ್ರಭುತ್ವದ ವ್ಯಥೆಯಾಗಿದೆ.
ಅಂದರೆ, ಯುಗಯುಗದಿಂದಲೂಭೂಮಿಯಿದೆ,ಮನುಕುಲವಿದೆ, 
ಜೀವರಾಶಿಗಳಿವೆ,ಧರ್ಮ ವಿದೆ,ಸತ್ಯವಿದೆ,ನ್ಯಾಯ,
ನೀತಿ,ಸಂಸ್ಕೃತಿ, ಸಂಪ್ರದಾಯದ ಆಚರಣೆಯಿದೆ.ಆದರೆ ಅಂದಿನ ತತ್ವಕ್ಕೂ ಇಂದಿನ ತಂತ್ತಕ್ಕೂ ಅಜಗಜಾಂತರ 
ವ್ಯತ್ಯಾಸವಿದೆ. ಈ ವ್ಯತ್ಯಾಸವು ಅಸಮಾನತೆಗೆ ಕಾರಣವಾಗಿದೆ.ಅಸಮಾನತೆಯನ್ನು ತತ್ವದ ಮೂಲಕ ಸರಿಪಡಿಸದೆ ತಂತ್ರದ ರಾಜಕೀಯದಿಂದ ಸರಿಪಡಿಸಲು ಹೊರಟು ಇನ್ನಷ್ಟು ಅಜ್ಞಾನವೇ ಬೆಳೆದು ನಿಂತಿದೆ. ಅಜ್ಞಾನಕ್ಕೆ ಪರಿಹಾರ ಜ್ಞಾನದ ಶಿಕ್ಷಣ. ಇದನ್ನು ಕೊಡದೆ  ಜನರನ್ನು ಮನೆಯಿಂದ ಹೊರತಂದು ಆಳುವ ರಾಜಕೀಯದಿಂದ ಶಾಂತಿ ಸಿಗುವುದೆ? 
ಹಿಂದಿನವರಲ್ಲಿದ್ದ ಒಗ್ಗಟ್ಟು ಶಾಂತಿ,ಸಮಾಧಾನ,ತೃಪ್ತಿ ಯ ಜೀವನ ಇಂದಿಲ್ಲ. ಅಂದರೆ ತತ್ವಗಳು ಒಗ್ಗಟ್ಟನ್ನು ಬೆಳೆಸುವತ್ತ ನಡೆದಿದ್ದವು ಇಂದಿದು  ತಂತ್ರದೆಡೆಗೆ ನಡೆದು ಬಿಕ್ಕಟ್ಟಿನ ಅಶಾಂತಿ ಭಿನ್ನಾಭಿಪ್ರಾಯ, ದ್ವೇಷದಿಂದ ದೇಶವನ್ನೇ  ಛಿದ್ರ ಛಿದ್ರ ಮಾಡಿದರೂ ಹೇಳೋರಿಲ್ಲ ಕೇಳೋರಿಲ್ಲ.ಕಾರಣ ಯಾರಿಗೂ  ನಮ್ಮ ಸಹಕಾರವೇ ಇದಕ್ಕೆಲ್ಲ ಕಾರಣ ಎನ್ನುವ ಸತ್ಯಜ್ಞಾನವಿಲ್ಲವಾದರೆ ಸತ್ಯ ಅರ್ಥ ಆಗೋದಿಲ್ಲ.
ಒಟ್ಟಿನಲ್ಲಿ ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಮಹಾತ್ಮರೆ ಆಗಬೇಕು.ಅಂದರೆ ಆತ್ಮಾನುಸಾರ ಅಧ್ಯಾತ್ಮ ಸತ್ಯ ತಿಳಿದರೆ ಸಾಧ್ಯ. ಇದು ಮಕ್ಕಳ ಮಹಿಳೆಯರ ಶಿಕ್ಷಣದಲ್ಲಿಯೇ ಮರೆಯಾಗಿದ್ದರೆ  ಮೊದಲ ಗುರುವೇ ಅಜ್ಞಾನದ ರಾಜಕೀಯದ ವಶದಲ್ಲಿದ್ದರೆ ರಾಜಯೋಗದ ಅರ್ಥ ವಾಗದು.
ಸ್ವಾಮಿ ವಿವೇಕಾನಂದರು ದೇಶದ ಆಸ್ತಿಯಾಗಿ ಯುವಶಕ್ತಿಯನ್ನು ಸದೃಢಗೊಳಿಸಲು ಅಧ್ಯಾತ್ಮ ದ ರಾಜಯೋಗದ  ಕ್ಷಾತ್ರ ಧರ್ಮದ ಶಿಕ್ಷಣಕ್ಕೆ  ಒತ್ತುಕೊಡಲು ಹೇಳಿದ್ದರೆ ,ಇಂದಿನ ಯುವಕರಿಗೆ ವಿದೇಶಿ ವ್ಯಾಮೋಹದ ಶಿಕ್ಷಣ ಕೊಟ್ಟು ರಾಜಕೀಯಕ್ಕೆ ಬಳಸಿಕೊಂಡಿರುವುದನ್ನು ನೋಡಿದರೆ ಭಾರತದ ಭವಿಷ್ಯ ವಿದೇಶದಲ್ಲಿದೆಯೆ? ಅಥವಾ ಸ್ವದೇಶದಲ್ಲಿತ್ತೆ?
ಯುವಕರ ಮನಸ್ಥಿತಿ ಹದಗೆಟ್ಟು  ಹೋಗಿದ್ದರೂ ಅದನ್ನು ಸರಿಯಾದ  ಮಾರ್ಗದಲ್ಲಿ  ಸರಿಪಡಿಸುವ ಶಕ್ತಿ ಪೋಷಕರಲ್ಲಿಲ್ಲ. ಶಿಕ್ಷಕರಂತೂ ತಮ್ಮ‌ ಜೀವನಕ್ಕಾಗಿ ಉದ್ಯೋಗದಲ್ಲಿರುವುದು ಹೆಚ್ಚಾಗಿದೆ, ಸಣ್ಣ ಮಕ್ಕಳ ಮುಗ್ದ ಮನಸ್ಸು ಒಣಗಿ ಪ್ರಭುದ್ದತೆಯ ವಿಷಯಗಳಿಂದ ಮಲಿನವಾಗಿದೆ. ಹಾಗಾದರೆ  ದೇಶದ ಆರ್ಥಿಕ ಸ್ಥಿತಿ ಹಣದಿಂದ ಸುಧಾರಿಸುವುದಾಗಿದ್ದರೆ ಯಾಕಿಷ್ಟು ಸಾಲದ ಹೊರೆ? ಯಾಕಿಷ್ಟು ರೋಗದ ಜನತೆ? ಯಾಕಿಷ್ಟು ಕ್ರಾಂತಿ?
ಯಾಕಿಷ್ಟು ರಾಜಕೀಯ ಹೋರಾಟ,ಹಾರಾಟ,ಮಾರಾಟ? ಭಾರತೀಯರ  ಆಸ್ತಿ ಆತ್ಮಜ್ಞಾನವಾಗಿತ್ತು.ಇದು ಆತ್ಮನಿರ್ಭರ ಭಾರತ ಮಾಡಿತ್ತು. ವಿಶ್ವಗುರು ಸ್ಥಾನಕ್ಕೆ ಏರಿಸಿತ್ತು. ಆದರೆ ಈಗ  ತಂತ್ರಜ್ಞಾನದ ಮಿತಿಮೀರಿದ ಬಳಕೆಯಿಂದ ತತ್ವಜ್ಞಾನವೇ ಹಿಂದುಳಿದಿದೆ. ಜ್ಞಾನಿಗಳು ಬಡವರಾಗಿ ಕಂಡು ಸರ್ಕಾರದ ಸಾಲ,ಸೌಲಭ್ಯಗಳನ್ನು ಪಡೆಯುತ್ತಾ  ಇನ್ನಷ್ಟು ಅಜ್ಞಾನದೆಡೆಗೆ ನಡೆದಾಗ  ದೇಶದ ಧರ್ಮದ ಗತಿ?
ಮಂತ್ರ,ತಂತ್ರ,ಯಂತ್ರಗಳು ಸ್ವತಂತ್ರ ಭಾರತವನ್ನು ಕಟ್ಟಬೇಕು.ಇವುಗಳ ನಡುವಿರುವ ಅಂತರಗಳೇ ಅತಂತ್ರಸ್ಥಿತಿಗೆ  ದೇಶವನ್ನು ನಡೆಸಿದರೆ  ಇದು ಪ್ರಗತಿಯೆ?
ಮನೆಯೊಳಗೆ ಸುರಕ್ಷಿತವಾಗಿ ಸುಶಿಕ್ಷಿತರಾಗಿದ್ದ ಮಹಿಳೆಯರು
ಹೊರಗೆ ಬಂದು ದುಡಿದು ಸಂಸಾರ ನಡೆಸೋ ಪರಿಸ್ಥಿತಿಯಿದೆ ಎಂದರೆ  ಇದು ಪ್ರಗತಿಯೆ? ಮಕ್ಕಳಿಗಾಗಿ ಹೊಟ್ಟೆ ಬಟ್ಟೆ ಕಟ್ಟಿ ಓದಿಸಿ ಬೆಳೆಸಿದ ಪೋಷಕರು ಕೊನೆಗಾಲದಲ್ಲಿ ವೃದ್ದಾಶ್ರಮ ಸೇರಿದರೆ ಪ್ರಗತಿಯೆ?  ಬಿಕ್ಷುಗಳ ದೇಶದಲ್ಲಿ ಬಿಕ್ಷುಕಾಶ್ರಮ ಬೆಳೆದರೆ ಪ್ರಗತಿಯೆ?  ಸರಳಜೀವನ,ಸತ್ಯಾಗ್ರಹ,ಉಪವಾಸ ಮಾಡಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ನಡೆಸಿದವರನ್ನೇ ಪ್ರಶ್ನೆ ಮಾಡುತ್ತಾ  ಸರಿಯಿಲ್ಲವೆನ್ನುವವರು ಬೆಳೆದಿರೋದು ಪ್ರಗತಿಯೆ? ಮನರಂಜನೆಯೆಂದು ಆತ್ಮವಂಚನೆಯ ಕಾರ್ಯ ಕ್ರಮದಲ್ಲಿ ಮುಳುಗಿರುವ  ಪ್ರಜೆಗಳಿಂದ ಆತ್ಮನಿರ್ಭರ ಭಾರತ ಸಾಧ್ಯವೆ? ಪ್ರತಿಯೊಂದು ವಿಚಾರದಲ್ಲೂ ಎರಡು ಸತ್ಯವಿದೆ ಅಧ್ಯಾತ್ಮ ಹಾಗು ಭೌತಿಕ ಸತ್ಯ. ಯಾವಾಗ ಕಾಣದ ಅಧ್ಯಾತ್ಮ ಬಿಟ್ಟು ಕಾಣುವ ಭೌತಿಕದೆಡೆಗೆ ಮಾನವ ನಡೆದನೋ ಆಗಲೇ ಅವನ  ಅವನತಿಗೆ ಅವನೇ ಕಾರಣನಾದ. ಈಗಲೂ ನಮ್ಮ ಜೀವ ಒಳಗಿದೆ ಅದನ್ನು ಹೊರಗಿನ ಸರ್ಕಾರ ಉಳಿಸಬೇಕು ಎನ್ನುವವರು ಸಾಕಷ್ಟಿದ್ದರೂ ಅದು ಅವರ ತಪ್ಪಲ್ಲ. ಅಂತಹ ಆಶ್ವಾಸನೆ ಕೊಡುತ್ತಾ  ತಮ್ಮೆಡೆ ಸೆಳೆದುಕೊಂಡು  ಆಳುವ ರಾಜಕೀಯವೆ ಕಾರಣ. ಎಲ್ಲಾ ರಾಜಕೀಯ  ಮಾನವನಿಗೆ ದುರಂತವನ್ನೇ  ಕೊಟ್ಟಿದೆ ಎನ್ನುವ ಸತ್ಯ ಹಿಂದಿನ ಯುದ್ದ ತಿಳಿಸುತ್ತದೆ. ಹಾಗಂತ ಹಿಂದಿನ ಧರ್ಮ ಯುದ್ದ ಇಂದಿಲ್ಲ.ಅಂದಿನ ಕ್ಷತ್ರಿಯರು ಇಂದಿಲ್ಲ.ಅಂದಿನ‌ ಯೋಗಿಗಳು ಇಂದಿಲ್ಲ,ಅಂದಿನ ದೇಶಭಕ್ತರು ಇಂದಿಲ್ಲ, ಅಂದಿನ  ರಾಜಪ್ರಭುತ್ವ ಇಂದಿಲ್ಲವೆಂದಾಗ ಈಗಿರುವವರು ಯಾರು?
ಮಾನವರಷ್ಟೆ.ಮಾನವ ಮಾನವನನ್ನೇ ಆಳುತ್ತಿದ್ದಾನೆ. ಇದೂ ಅಧರ್ಮದಿಂದ ಅನ್ಯಾಯ,ಅಸತ್ಯ,ಭ್ರಷ್ಟಾಚಾರ ದಿಂದ ಆಳಿ ಅಳಿಸುತ್ತಿದ್ದಾನೆಂದರೆ ಒಪ್ಪಲು ಕಷ್ಟ. ಕಾರಣ ನಾವು ಅವರಿಗೆ ಅಧಿಕಾರ,ಸ್ಥಾನಮಾನ,ಸನ್ಮಾನ,ಪದವಿ,ಪಟ್ಟ ಕೊಟ್ಟಿರುವಾಗ
ಇದು ಅವರ ತಪ್ಪಲ್ಲ. ಕೊಡುವಾಗ ನಮ್ಮಲ್ಲಿ ಜ್ಞಾನವಿದ್ದರೆ ಜ್ಞಾನಿಗಳೇ  ದೇಶವಾಳುತ್ತಿದ್ದರು. ಜ್ಞಾನದಿಂದ ಧರ್ಮ ರಕ್ಷಣೆ ಸಾಧ್ಯವಿತ್ತು. ಒಟ್ಟಿನಲ್ಲಿ  ಇಲ್ಲಿ  ನಾವೆಲ್ಲರೂ  ಆಟಕ್ಕುಂಟು ಲೆಕ್ಕಕ್ಕಿಲ್ಲದ ಸಾಮಾನ್ಯರಷ್ಟೆ.ನಮ್ಮಲ್ಲಿ ಸಾಮಾನ್ಯಜ್ಞಾನ
ವಿದ್ದರೂ ವಿಶೇಷ ಜ್ಞಾನಿಗಳ  ರಾಜಕೀಯಕ್ಕೆ ನಮ್ಮತನ ನಮ್ಮ ಜ್ಞಾನ ಹಿಂದುಳಿದಿದೆ. ಸ್ವಂತ ಬುದ್ದಿಯಿಲ್ಲದೆ ಪರರ ಹಿಂದೆ ನಡೆದರೆ ನಾವೇ ಪರಕೀಯರಾಗೋದು. ಪರಕೀಯರ  ವಶದಲ್ಲಿ ದೇಶವಿದೆ. 
ದೇಶಭಕ್ತರು,ಜ್ಞಾನಿಗಳು,ಮಹಾತ್ಮರು,ಇನ್ನಿತರ ತತ್ವಜ್ಞಾನಿಗಳ ಪ್ರತಿಮೆಯನ್ನು  ಮಧ್ಯವರ್ತಿಗಳು ಬಳಸಿಕೊಂಡು ಜನರ ಪ್ರತಿಭೆ,ಜ್ಞಾನವನ್ನು  ಬೆಳೆಸಿದರೆ? ಅಳಿಸಿದರೆ? ಇದರ ಬಗ್ಗೆ ಜನರೆ ಚಿಂತನೆ ನಡೆಸಿದರೆ ನಮ್ಮನ್ನು ದೇವರು ಆಳುತ್ತಿರುವುದೆ? ಅಸುರರೆ? ಎನ್ನುವ ಸತ್ಯದರ್ಶನ ವಾಗುತ್ತದೆ. ದೇವರೂ ಇದ್ದರೂ ಮಾನವನಲ್ಲಿ ದೈವತ್ವದ ಕೊರತೆಯಿದೆ. ಇದಕ್ಕೆ ಕಾರಣವೇ ತತ್ವವನ್ನು ತಂತ್ರದಿಂದ ಬಳಸಿಕೊಂಡು ರಾಜಕೀಯ ನಡೆಸಿದ ಮಧ್ಯವರ್ತಿಗಳು.
ಮಧ್ಯವರ್ತಿಗಳ ತಂತ್ರಗಾರಿಕೆಯು ದೇಶವನ್ನು, ಪ್ರಜೆಗಳನ್ನು ಸ್ವತಂತ್ರಗೊಳಿಸಿದೆಯೆ? ಅತಂತ್ರಸ್ಥಿತಿಗೆ ತಂದಿದೆಯೆ?
ಈ ಸತ್ಯ ತಿಳಿದವರು ವಿರೋಧಿಸುವ ಅಗತ್ಯವಿಲ್ಲ.ಕಾರಣ ಇಲ್ಲಿ ನಮ್ಮ ಸಹಕಾರದಿಂದ  ಎಲ್ಲಾ ನಡೆದಿದೆ.ನಮ್ಮದೇ ಅಜ್ಞಾನಕ್ಕೆ ತಕ್ಕಂತೆ  ರಾಜಕೀಯ ಬೆಳೆದಿದೆ. ಅಸಹಕಾರ ಚಳುವಳಿಯಲ್ಲಿ ಅಂದು ಬ್ರಿಟಿಷ್ ಸರ್ಕಾರದ  ಯಾವುದೇ ವಸ್ತು,ವಿಷಯ,ಕಾನೂನಿಗೆ  ಸಹಕರಿಸದೆ  ಅವರ ಶಕ್ತಿಕ್ಷೀಣವಾಗಿ ದೇಶ ಬಿಟ್ಟು ಹೋದರೋ ಹಾಗೆ ಭ್ರಷ್ಟಾಚಾರಕ್ಕೆ,ಭ್ರಷ್ಡರಿಗೆ ಸಹಕರಿಸದಿದ್ದರೆ ಭ್ರಷ್ಟರೂ ಬೆಳೆಯುತ್ತಿರಲಿಲ್ಲ.  
ಭ್ರಷ್ಟಾಚಾರದ ನಿಯಂತ್ರಣದ ಹೋರಾಟದಲ್ಲಿ ಭ್ರಷ್ಡರೆ ಇದ್ದರೆ ಇದೊಂದು  ರಾಜಕೀಯನಾಟಕವಲ್ಲವೆ?
ನಾಟಕವಾಡಿದವರ ಹಿಂದೆ ನಿಂತು  ಬೇಡಿದರೆ ಭ್ರಷ್ಟರ ಹಣ ಇನ್ನಷ್ಟು ಸಂಕಷ್ಟ ತರುತ್ತದೆ. ಸಮಾ,ವೇಶ ಮಾಡಿಕೊಂಡು ಜನರನ್ನು ಮನೆಯಿಂದ ಹೊರತಂದು ಮನೆಯೊಳಗೆ  ಶತ್ರುಗಳ ಪ್ರವೇಶವಾದರೂ  ಅವರವರ ಕರ್ಮಫಲವನ್ನು ಅವರೆ ಅನುಭವಿಸಬೇಕು.ಹಾಗೆ ದೇಶದಿಂದ ಹೊರ ನಡೆದವರು ದೇಶದ ವಿಚಾರದಲ್ಲಿ ಮೂಗು
ತೂರಿಸಿಕೊಂಡು ವಿದೇಶಿಗಳನ್ನು  ದೇಶದೊಳಗೆ ಬೆಳೆಸಿದರೆ  ನಂತರ‌ ಅವರ ಆಳಾಗಿ ದುಡಿಯಬೇಕೆನ್ನುವ ಸಾಮಾನ್ಯಜ್ಞಾನವಿದ್ದರೆ  ನಾವೆಲ್ಲರೂ ಎಲ್ಲಿ ಎಡವಿದ್ದೇವೆನ್ನುವ ಸತ್ಯದರ್ಶನ ಸಾಧ್ಯವಿದೆ. ಯಾರನ್ನೂ ಯಾರೋ ಆಳೋದಕ್ಕೆ ಸಾಧ್ಯವೆ?  ಸಾಧ್ಯವಾಗಿದ್ದರೆ ಇದು ಅಜ್ಞಾನದಿಂದ ಸಾಧ್ಯವಷ್ಟೆ.
ದೇಶದ ಆರ್ಥಿಕಾಭಿವೃದ್ಧಿ  ಜನತೆಯ ಜ್ಞಾನದಲ್ಲಿತ್ತು.
ಕಾಯಕವೇ ಕೈಲಾಸವೆನ್ನುವ‌ ಮಂತ್ರದಲ್ಲಿತ್ತು. ರಾಜಯೋಗದಲ್ಲಿತ್ತು. ಸಾತ್ವಿಕತೆಯನ್ನು ಬಿಟ್ಟು ರಾಜಕೀಯತೆ ಬೆಳೆದು ಜನರ ತಾಮಸಿಕತೆ ಬೆಳೆದರೆ ಯೋಗವಲ್ಲ ರೋಗವೇ ಬೆಳೆಯುತ್ತದೆ. ಇದಕ್ಕೆ ತಕ್ಕಂತೆ ಔಷಧಾಲಯ,ವೃದ್ದಾಶ್ರಮ, ಅನಾಥಾಶ್ರಮ, ಅಬಲಾಶ್ರಮ,ಬಿಕ್ಷುಕರ ಆಶ್ರಮ ವಿದೇಶಿಗಳ ಬಂಡವಾಳ,ಸಾಲ,ವಿಜ್ಞಾನದಿಂದ  ಬೆಳೆಸಿದರೆ ಆತ್ಮದುರ್ಭಲ ಭಾರತ. ಈವರೆಗೆ ಶಿಕ್ಷಣವೇ ನಮ್ಮನ್ನು ಆಳುತ್ತಿದೆ.ಈ ಶಿಕ್ಷಣದಲ್ಲಿ ರಾಜಯೋಗವಿತ್ತೆ? ರಾಜಕೀಯವಿತ್ತೆ? ನಮ್ಮದೆ ಜ್ಞಾನವೇ ? ಪರಕೀಯರದ್ದೆ? 

No comments:

Post a Comment