ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Friday, January 20, 2023

ಬಡತನ ಅಜ್ಞಾನದಿಂದ ಬೆಳೆದಿದೆಯೆ?

ಹಿಂದೂಗಳು ಹಿಂದುಳಿದೇ  ಬಡವರಾದರೆ?
ಹಿಂದೂ ಧರ್ಮದಲ್ಲಿ ಬಡತನವನ್ನು  ಜ್ಞಾನದ ಆಧಾರದ ಮೇಲೆ ತಿಳಿಯುವುದಿತ್ತು . ಜ್ಞಾನ ಸಂಪಾದನೆಗೆ ಹಣವನ್ನು ದಾನ ಧರ್ಮಕ್ಕೆ ಬಳಸಬೇಕಿತ್ತು. ಹೀಗಾಗಿ ದಿನನಿತ್ಯದ ಕಾಯಕದ ಹಣದಿಂದಲೇ ಮಹಾಬ್ರಾಹ್ಮಣರಾದವರು  ಜೀವನ ನಡೆಸಿ ,ಸಂಗ್ರಹಣೆ ಮಾಡುತ್ತಿರಲಿಲ್ಲ.ಹಾಗೆಯೇ ಕಾಯಕ ಯೋಗಿ ರೈತನೂ ತನ್ನ ಜೊತೆಗೆ ಸುತ್ತಮುತ್ತಲಿನವರಿಗೂ ದವಸ ಧಾನ್ಯಗಳನ್ನು ಹಂಚಿಕೊಂಡು  ಅತಿಯಾದ ಸಂಗ್ರಹಣೆಯಿಲ್ಲದೆ ನೆಮ್ಮದಿ ಯಾಗಿದ್ದ.  ಆ ನೆಮ್ಮದಿ ಶಾಂತಿ ತೃಪ್ತಿಯ ಅನುಭವವಿಲ್ಲದ ಹೊರಗಿನವರು  ಬಡ ಬ್ರಾಹ್ಮಣ, ಬಡ  ಸೈನಿಕ, ಬಡ ವ್ಯಾಪಾರಿ,ಬಡ ಶಿಕ್ಷಕ,ಬಡ ರೈತನೆಂದು ಕರೆದು  ಸಾಲದ. ಹಣ ಕೊಟ್ಟು ಮೇಲೆತ್ತುವ  ಮೂಲಕ ಮೂಲದ  ಭೂಮಿ ಮಾರಿ ಹೊರಬಂದವರು ಹಣ  ಪಡೆದರು, ಕಾಲಾನಂತರ ಬಡತನ  ಹಣದಿಂದ ಅಳೆಯುವತ್ತ ನಡೆಯಿತು. ಭೂಮಿಯಲ್ಲಿ ಸಾಕಷ್ಟು ಸಮೃದ್ದಿ ಇದೆ, ಜ್ಞಾನದಿಂದ ಸದ್ಬಳಕೆ ಮಾಡಿಕೊಂಡವನು ಭೂಮಿಯ ಒಡೆಯನಾಗುತ್ತಾನೆ. ಅಂದರೆ ಸ್ತ್ರೀ ಶಕ್ತಿಯನ್ನು ಪ್ರಕೃತಿಯನ್ನು
ಜ್ಞಾನದಿಂದ ಉಳಿಸಿ ಬೆಳೆಸುವುದೇ ನಿಜವಾದ ಮಾನವ ಧರ್ಮ.
ಮನುಕುಲಕ್ಕೆ ಆಸರೆಯಾಗಿರುವ ಈ ಭೂಮಿ ತಾಯಿ ಬಡವಳೆ? ಕಲಿಗಾಲದ ಪ್ರಭಾವ ಎಷ್ಟು ಅಜ್ಞಾನವನ್ನು ಎತ್ತಿಹಿಡಿದು ಮನುಕುಲವನ್ನು ಹಾಳುಮಾಡಿದೆ ಎನ್ನುವುದನ್ನು ಕೇವಲ  ಬಾಹ್ಯಚಕ್ಷುವಿನಿಂದ ಅಳೆದರೆ ಸಾಲದು. ಸಾಲದ ಹೊರೆ ಹೊತ್ತು ಹೋಗುತ್ತಿರುವ ಜೀವಕ್ಕೆ ಮುಕ್ತಿ ಸಿಗುವುದು ಜ್ಞಾನದಿಂದ ಮಾತ್ರ ಎನ್ನುವ ಹಿಂದೂ ಧರ್ಮದ ತಿರುಳನ್ನು ಸರಿಯಾಗಿ ತಿಳಿಯದ ಮಧ್ಯವರ್ತಿಗಳು  ಸ್ತ್ರೀ ಯನ್ನು ಭೂಮಿಯನ್ನು ಆಳೋದಕ್ಕೆ   ತತ್ವ ಬಿಟ್ಟು ತಂತ್ರದಿಂದ ಹಣಸಂಪಾದನೆಗಿಳಿದರು.ಇದರ ಪರಿಣಾಮವೇ ಸ್ತ್ರೀ ಶೋಷಣೆ. ಶೋಷಣೆಯ ಪರಿಣಾಮ ಸ್ತ್ರೀ ಮಾರಿಯಾಗಿ ಹೊರಬಂದು ಜೀವ ಹೊತ್ತು ನಡೆದಿರೋದು.ಇವೆಲ್ಲವೂ ಅಧ್ಯಾತ್ಮ ಸತ್ಯವಾದರೂ ಅದ್ಯಾತ್ಮ ವರ್ಗದವರೆ ವಿರೋಧ ವ್ಯಕ್ತಪಡಿಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ.ಹಾಗೆ ಶ್ರೀಮಂತ ಸ್ತ್ರೀ ಯರೂ ಇದಕ್ಕೆ ಸಹಕರಿಸಿದರೆ ಭೂಮಿಗೇ ನಷ್ಟ. ಇಲ್ಲಿ ಭೂ ತಾಯಿಯ ಶ್ರೀಮಂತಿಕೆಯು  ಅವಳ ಗರ್ಭದಲ್ಲಿದ್ದ ಚಿನ್ನ ದಲ್ಲಿರಲಿಲ್ಲ. ಅದನ್ನು ಹೊರತೆಗೆದವರಿಗೆ ಸ್ತ್ರೀ ಸಹಕಾರ ಹೆಚ್ಚಾದಂತೆ  ಭೂಮಿಯ ಸತ್ಯ,ಸತ್ವ,ತತ್ವವೂ ಕೆಳಗಿಳಿಯಿತು. ಈಗಲೂ ನಾವು ಕಾಣುವ ಕೋಟ್ಯಾಧೀಶರು
ದೇವಸ್ಥಾನ‌ಮಠಗಳಿಗೆ ಕೊಡುವ‌ ದಾನದಿಂದ ಯಾವ ಧರ್ಮ ಉಳಿಯಿತೋ  ಅಳಿಯಿತೋ ಒಟ್ಟಿನಲ್ಲಿ ಕೋಟ್ಯಾಧೀಶ್ವರರು ಇನ್ನಷ್ಟು ಚಿನ್ನದ ಗಣಿಮಾಲೀಕರಾದರು. ಇದೊಂದು ಉದಾಹರಣೆ ಅಷ್ಟೆ.
ಇಲ್ಲಿ ಪ್ರತಿಮೆಯಲ್ಲಿರುವ ಜ್ಞಾನ ದೇವತೆಗೆ ಚಿನ್ನ ಬೆಳ್ಳಿ ಯ ,ಒಡವೆ,ವಸ್ತ್ರ,ಅಲಂಕಾರ ಮಾಡಿದವರಲ್ಲಿ ಜ್ಞಾನ ಬೆಳೆದರೆ ಉತ್ತಮ ಬದಲಾವಣೆ.ಆದರೆ ಅದಕ್ಕೆ ಬದಲಾಗಿ ರಾಜಕೀಯವೇ ಬೆಳೆದು ಕಣ್ಣಿಗೆ ಕಾಣುವ ಸ್ತ್ರೀ ಶಕ್ತಿಯನ್ನು ದುರ್ಭಳಕೆ ಮಾಡಿಕೊಂಡರೆ  ಇದರರ್ಥ  ಅಜ್ಞಾನದ ಸಂಪಾದನೆಯು ದೇವಿ ಸ್ವೀಕರಿಸಿಲ್ಲವೆಂದು.
ಸಾಮಾನ್ಯ ಜನತೆಗೆ ವೈಭವ ಮಾತ್ರ ಕಾಣುತ್ತದೆ .ಹೀಗಾಗಿ ಮಧ್ಯವರ್ತಿಗಳ ಅಜ್ಞಾನದ ವ್ಯವಹಾರ ಕಾಣದೆ ಇನ್ನಷ್ಟು ಭ್ರಷ್ಟಾಚಾರ  ದೇವರ ಹೆಸರಲ್ಲಿ,ಧರ್ಮದ ಹೆಸರಲ್ಲಿ,ಜಾತಿ, ಸಂಸ್ಕೃತಿ, ಭಾಷೆ,ದೇಶದವರೆಗೆ ಹರಡುತ್ತಾ ಕೊನೆಗೆ ಜನ ಸಾಮಾನ್ಯರನ್ನೇ ಆಳುವ ಹಂತಕ್ಕೆ ಬಂದರೆ ಭಾರತ ಮಾತೆ ಬಡವಳೆ? ಸ್ತ್ರೀ ಜ್ಞಾನ  ಕೀಳುಮಟ್ಟದ್ದೆ? ಸ್ತ್ರೀ ಯನ್ನು ಯಾವ ರೀತಿಯಲ್ಲಿ ಗೌರವಿಸಿ ಜೀವಿಸಬೇಕೆಂಬ ಜ್ಞಾನಿಗಳಿಗೆ ಮಾತ್ರ ನಿಜವಾದ ದೈವತ್ವ ಸಿಗೋದು. ಈ ಕಾರಣಕ್ಕಾಗಿ ಹಿಂದಿನ ಮಹರ್ಷಿಗಳು  ತಮ್ಮ ಜ್ಞಾನವನ್ನು ಲೋಕಕಲ್ಯಾಣಕ್ಕೆ ಬಳಸಿ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದರು.ಇದಕ್ಕೆ ಸ್ತ್ರೀ ಸಹಕಾರವೂ ಇತ್ತು ಕಾರಣ ಅಲ್ಲಿ ಸ್ತ್ರೀ ಗೂ ವೇದ ಪಾರಂಗತೆ ಆಗುವ ಅವಕಾಶವಿತ್ತು.
ಹಿಂದೂ ಧರ್ಮವು ಬೆಳೆದಿರೋದೆ ಸ್ತ್ರೀ ಯರ ಆತ್ಮಜ್ಞಾನದಿಂದ ಎಂದಾಗ ಭೂಮಿ ನಡೆದಿರೋದೆ ಸ್ತ್ರೀ ಸಹಕಾರದಿಂದ. ಇದು ಜ್ಞಾನದಿಂದ ಬೆಳೆದರೆ ಧರ್ಮದ ಸಂಪತ್ತು, ಅಜ್ಞಾನದಿಂದ ಬೆಳೆದರೆ ಅಧರ್ಮದ ಆಪತ್ತು ಸ್ತ್ರೀ ಅನುಭವಿಸುವ ಜೊತೆಗೆ ಇಡೀ ಸಂಸಾರ,ಸಮಾಜ,

ದೇಶ,ವಿಶ್ವವೇ ಅನುಭವಿಸುತ್ತದೆ.ಅಂದರೆ‌ಜ್ಞಾನಕ್ಕೆ ಲಿಂಗ ಬೇಧ ವಿಲ್ಲ.ತತ್ವಕ್ಕೆ  ಧರ್ಮ ಬೇಧವಿಲ್ಲ, ಈ ಬೇಧಬಾವವೇ ಬಡತನವನ್ನು ಬೆಳೆಸುತ್ತದೆ. ಬಡತನವು ಅಜ್ಞಾನದಲ್ಲಿ ಕಂಡಾಗ ಹಣವೇ ಸರ್ವ  ಶ್ರೇಷ್ಠ ವೆನಿಸಿದರೆ,ಜ್ಞಾನಿಗಳಿಗೆ  ಸತ್ಯಜ್ಞಾನವೇ ಶ್ರೇಷ್ಠ.
ವಿಪರ್ಯಾಸವೆಂದರೆ ಈಗಿನ ಭಾರತದಲ್ಲಿ ಜ್ಞಾನದ ಶಿಕ್ಷಣ ನೀಡದೆ  ಅಜ್ಞಾನದ ರಾಜಕೀಯಕ್ಕೆ ಸಹಕರಿಸುತ್ತಾ ದೇಶಕ್ಕೆ ವಿದೇಶದಿಂದ ಸಾಲ,ಬಂಡವಾಳದ ಮೂಲಕ ವ್ಯವಹಾರಕ್ಕೆ  ಕರೆತಂದು  ಹೊರಗಿನ ಆಚರಣೆಯು ವೈಭವದಲ್ಲಿದೆ. ಜನರ ಸಾಲ ಮಿತಿಮೀರಿದೆ, ದೈವತ್ವ‌ಕುಸಿದಿದೆ, ಅಸುರ ಶಕ್ತಿ ದಿನದಿಂದ ದಿನಕ್ಕೆ ತನ್ನ ಪ್ರಭಾವ ತೋರಿಸುತ್ತಿದೆ. ಆದರೂ  ಮಧ್ಯವರ್ತಿಗಳು  ಇದಕ್ಕೂ ನಮಗೂ ಏನೂ ಸಂಬಂಧವಿಲ್ಲ
ಎನ್ನುವಂತೆ  ಭ್ರಷ್ಟಾಚಾರದ ಮಧ್ಯೆ ಇದ್ದು  ಮನರಂಜನೆಯಲ್ಲಿ, ಸಮಾವೇಶದಲ್ಲಿ ಜನರು ಮೈ ಮರೆಯುವಂತೆ ಮಾಡಿಕೊಂಡು  ದೇಶವನ್ನು ಲೂಟಿ ಮಾಡಿಯಾದರೂ ತಮ್ಮ ಅಧಿಕಾರ, ಸ್ಥಾನಮಾನ ಉಳಿಸಿಕೊಂಡು ಆಳೋರಿಗೆ  ಸಹಕರಿಸುತ್ತಿರುವುದು ದೊಡ್ಡ ದುರಂತ.
ಭೂಮಿಯ ಋಣ ತೀರಿಸಲು ಬಂದ ಸಣ್ಣ ಜೀವ  ಉಳಿಸಲು ಸರ್ಕಾರದ ಸಹಾಯಕ್ಕಾಗಿ ಬೇಡೋರಿಗೆ ಸರಿಯಾದ ಜ್ಞಾನ ನೀಡಿ ಸ್ವತಂತ್ರ ವಾಗಿ ಜೀವಿಸಲು ಅವಕಾಶ ನೀಡುವ ಬದಲಾಗಿ ಇನ್ನಷ್ಟು ಸಾಲದ ಹೊರೆ ಹಾಕಿ  ರೋಗದಿಂದ ಜೀವ ಹೋಗುವಷ್ಟು  ಅಜ್ಞಾನ ತುಂಬುತ್ತಿರುವ ಹಿಂದಿನ
ಶಕ್ತಿ  ಬಡತನವನ್ನು  ದುರ್ಭಳಕೆ ಮಾಡಿಕೊಂಡಿಲ್ಲವೆ?
ಕೆಲವರು  ಉತ್ತಮ ಶಿಕ್ಷಣದ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿರಬಹುದು.ಆದರೆ ದೇಶದ ಈ ಸ್ಥಿತಿಗೆ ಕಾರಣವಾಗಿರುವ ಅಜ್ಞಾನದ ಶಿಕ್ಷಣವು ಮುಂದಿನ ಪೀಳಿಗೆಗೆ ಯಾರಿಗೆ ದಾರಿದೀಪವಾಗಬಹುದು? ಒಳಗೇ ಇರುವ‌  ಅಮೃತವಾದ ಜ್ಞಾನ ಸಂಪತ್ತನ್ನು ಬಿಟ್ಟು ಹೊರಗಿನ
ಹಣದ ಸಂಪತ್ತನ್ನು  ಪಡೆದಷ್ಟೂ  ಅಜ್ಞಾನವೇ ಹೆಚ್ಚುವುದು.
ಮೂಲದ ಜ್ಞಾನವೇ ಬಂಡವಾಳ, ಅದರ ಪ್ರಕಾರ ಧರ್ಮದಿಂದ ಕರ್ಮ ಮಾಡಿದಾಗಲೇ ಮುಕ್ತಿ ಎನ್ನುವ ಹಿಂದೂ ಧರ್ಮವು ಇಂದು ಹೊರಗಿನ‌ ಜ್ಞಾನದಿಂದ ಮುಂದೆ ನಡೆದು  ಹಿಂದುಳಿದು  ತಿರುಗಿ ಹಿಂದೆ ಬರುವ ಪ್ರಯತ್ನ ಮಾಡಿರುವುದೂ ಒಂದು ಸಣ್ಣ ಬದಲಾವಣೆ ಆದರೆ, ಇಲ್ಲಿ ಬಡವರ ಜ್ಞಾನ ಶ್ರೀಮಂತ ರ ಹಣಕ್ಕೆ ಮಾರಾಟವಾದರೆ ಅಧರ್ಮ. ಶ್ರೀಮಂತ ದೇವತೆಗಳು‌ಬಡ ದೇವತೆಗಳನ್ನು ಕೇವಲವಾಗಿ ಕಂಡರೆ ಸರಿಯೆ? ಹಾಗೆಯೇ ಪ್ರಜಾಪ್ರಭುತ್ವದ ಎಲ್ಲಾ ಪ್ರಜೆಗಳಲ್ಲಿ ಅಡಗಿರುವ ವಿಶೇಷವಾದ ಜ್ಞಾನಶಕ್ತಿ ಸದ್ಬಳಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡದೆ ಅವರನ್ನು ಅಜ್ಞಾನಕ್ಕೆ ತಳ್ಳಿ ನಾನೇ ದೇವರು ಎನ್ನುವ‌ಹಂತಕ್ಕೆ ಬಂದರೆ
ದೇವರು ವ್ಯಕ್ತಿಯೆ? ಶಕ್ತಿಯೆ? ಅಗೋಚರ ಶಕ್ತಿಯನ್ನು ಎಷ್ಟೇ ದುರ್ಭಳಕೆ ಮಾಡಿಕೊಂಡರೂ ಅದಕ್ಕೆ ತಕ್ಕ ಶಿಕ್ಷೆಯಿದೆ.ಇದನ್ನು ಕರ್ಮಫಲವೆಂದರು. ಹೀಗಿರುವಾಗ ಹಿಂದೂ ಧರ್ಮದ ಆಳ ಅಗಲ ನೋಡದೆ ಹಿಂದುಳಿದ ಧರ್ಮ ಎಂದು ಹಣದಿಂದ  ಬೆಳೆಸುವ ಪ್ರಯತ್ನ ನಡೆಸಿದರೆ ಅಜ್ಞಾನವಷ್ಟೆ.
ಹಣವಿಲ್ಲದೆ ಏನೂ ವ್ಯವಹಾರ ಮಾಡಲಾಗದು.ಹಾಗೆಯೇ ಜ್ಞಾನವಿಲ್ಲದೆ ಯಾವ ಧರ್ಮ ರಕ್ಷಣೆಯೂ ಆಗದು.
ಧರ್ಮ ವಿಲ್ಲದ ವ್ಯವಹಾರದಿಂದ  ಋಣ ತೀರದು. ಋಣ ತೀರದೆ ಶಾಂತಿ ತೃಪ್ತಿ ಮುಕ್ತಿ  ಸಿಗದು.
ಭಾರತಮಾತೆಯ ಮಕ್ಕಳಲ್ಲಿ ಹೆಣ್ಣಿನ ಜ್ಞಾನವೇ ಸಂಸಾರಕ್ಕೆ ಬಂಡವಾಳವಾಗಿತ್ತು.ಯಾವಾಗ ಜ್ಞಾನದಿಂದ ವಂಚಿತಗೊಳಿಸಿ ಆಳಿದರೋ ಆಗಲೇ ಅಧರ್ಮ ಪ್ರಾರಂಭ
ಈಗಲೂ ಸ್ತ್ರೀ ಶಕ್ತಿಯ ಒಗ್ಗಟ್ಟು ಏನನ್ನಾದರೂ ಬದಲಾವಣೆ ಮಾಡಬಹುದು.ಆದರೆ ಇದು ಆಂತರಿಕ ಶುದ್ದಿಯಿಂದ ಆದರೆ ಮಾತ್ರ ಸಾಧ್ಯ.ಕಾರಣ ಅಧ್ಯಾತ್ಮ ಬಿಟ್ಟು ಭೌತಿಕದೆಡೆಗೆ ಸ್ತ್ರೀ ಹೊರ ನಡೆದಂತೆಲ್ಲಾ  ರಾಜಕೀಯ ಬೆಳೆಯುತ್ತದೆ.ರಾಜಯೋಗ ಹಿಂದುಳಿದರೆ ಪರಮಾತ್ಮನ ಶಕ್ತಿ ಹಿಂದುಳಿದು  ತಾತ್ಕಾಲಿಕ ಪರಿಹಾರವಾಗಿರುತ್ತದೆ. ಅವರವರ ಕರ್ಮಕ್ಕೆ ತಕ್ಕಂತೆ ಫಲ ಕೊಡುವಾಗ ಅಸತ್ಯ,ಅನ್ಯಾಯ, ಭ್ರಷ್ಟಾಚಾರದ ಸುಳಿಯಲ್ಲಿ ರುವವರ ಹಣ,ಅಧಿಕಾರ,ಸ್ಥಾನವೂ ಭ್ರಷ್ಟರ ಬಂಡವಾಳ. ಒಟ್ಟಿನಲ್ಲಿ ಬದಲಾವಣೆಗೆ ಸತ್ಯಜ್ಞಾನ ಬೇಕು.ಸತ್ಯಕ್ಕಿಂತ ದೊಡ್ಡ ಸಂಪತ್ತು ಯಾವುದಿಲ್ಲ.ಅದು ಆತ್ಮಸಾಕ್ಷಿ ಎಂದರೆ ಸರಿಯಾಗಬಹುದು.
ನಾನು ಜೀವಿಸಬೇಕು ನಿಜ ಆದರೆ ನನ್ನ ಜೀವನದಿಂದ ಬೇರೆಯವರ ಜೀವನ‌ಹಾಳಾಗಬಾರದಷ್ಟೆ.ನಾನು ಆತ್ಮಜ್ಞಾನಿ ಆಗೋದಕ್ಕೆ ಒಳಗಿರುವ  ಜ್ಞಾನಸಂಪತ್ತನ್ನು ಸರಿಯಾಗಿ ಬಳಸಿದರೆ ಉತ್ತಮ. ಈ ವಿಚಾರದಲ್ಲಿ ಸಾಕಷ್ಟು ಗೊಂದಲ ಹುಟ್ಟಿರುವುದು ಹೊರಗಿನ ರಾಜಕೀಯದಿಂದ ಮಾತ್ರ. ನಾನು ಇದನ್ನೇ ನೋಡಬೇಕು,ಹೇಳಬೇಕು,ಕೇಳಬೇಕು,ಓದಬೇಕು  ತಿಳಿಯಬೇಕೆಂಬುದು ನಮ್ಮ ಶಿಕ್ಷಣ ತಿಳಿಸಿದೆ.ಈ ಕಾರಣಕ್ಕಾಗಿ
ನಮ್ಮ‌ಮಕ್ಕಳ ಆತ್ಮಜ್ಞಾನ ಬೆಳೆಯದೆ ಭೌತಿಕವಿಜ್ಞಾನದಲ್ಲಿ ಸಾಧಕರಾಗಿ ಹಣಸಂಪಾದಿಸಿ ವಿದೇಶದೆಡೆಗೆ ಹೋಗಿ ಅಲ್ಲಿ ಸೇವೆ ಮಾಡುತ್ತಾ ನಾನು ಭಾರತೀಯನು ಎನ್ನುವುದು  ನಮ್ಮ  ಗೌರವವಾದರೆ ಇದರಲ್ಲಿ ನಮ್ಮ ದೇಶದ ಗೌರವ ಎಲ್ಲಿದೆ? ನಿಜ ವಿದೇಶಿಗರು ಭಾರತೀಯರನ್ನು ಗೌರವಿಸಲು ಕಾರಣ  ಅವರ ಜ್ಞಾನ.ವಿದಗಯಾವಂತ ಬುದ್ದಿವಂತ ಪ್ರಜೆಗೆ ದೇಶದೊಳಗೆ ಸೇವೆ ಮಾಡುವ ಅವಕಾಶವಿಲ್ಲ. ಅವಕಾಶ ಕೊಟ್ಟರೂ ಕೆಲವರಿಗೆ ವಿದೇಶಿ ವ್ಯಾಮೋಹವೇ ಹೆಚ್ಚಾಗಿ ಹೊರಹೋಗಿ ಅಲ್ಲಿಯ ಋಣ ತೀರಿಸುತ್ತಿದ್ದಾರೆ.ನಮ್ಮ ಒಳಗಿನ ವಿಷಯ  ನಮ್ಮನ್ನು ನಡೆಸಿದೆ. ಇದರಲ್ಲಿ ಧರ್ಮ ಸತ್ಯ,ನ್ಯಾಯ,ನೀತಿ,ಸಂಸ್ಕೃತಿ ನಮ್ಮದಾಗಿದ್ದರೆ ನಾವು ಆತ್ಮಜ್ಞಾನಿಗಳೆ. ಪರಕೀಯರದ್ದಾದರೆ ? ಹೀಗಾಗಿ ಪೋಷಕರ ಸಮಸ್ಯೆ ಬೆಳೆಯುತ್ತಿದೆ.ನಮ್ಮ‌ಮಕ್ಕಳ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡದೆ ಹೊರಗೆ ಕಳಿಸಿದರೆ ಅವರ ಮನಸ್ಸು ಹೊರಮುಖ ಆಗಿರುವಾಗ ಒಳಗಿನ ಸತ್ಯಜ್ಞಾನ ಎಲ್ಲಿರಬೇಕು? ಹಿಂದುಳಿದವರು ಅವರೆ ಆದರೂ, ಹಣದ ಹಿಂದೆ ನಡೆದರೆ ಶ್ರೀಮಂತ ನಾಗಬಹುದೆನ್ನುವ  ಮಾನವನಿಗೆ ನಿಜವಾದ ಶ್ರೀಮಂತ ರು ಯಾರು ಬಡವರು ಯಾರೆಂಬುದನ್ನು ತಿಳಿಸಿ ಹೇಳಲಾಗದು.ಅನುಭವಿಸಿಯೇ ತೀರಬೇಕು.ಇದೊಂದು ಪ್ರಾರಬ್ದ ಕರ್ಮ. ಇದನ್ನು ಹಿಂದಿನ ಮಹಾತ್ಮರುಗಳು ತಿಳಿದು ತಿಳಿಸುತ್ತಾ ಪರಮಾತ್ಮನೆಡೆಗೆ ಹೋಗಲು ಜ್ಞಾನ ಪಡೆದು ಹಣವನ್ನು ದಾನಧರ್ಮಕ್ಕೆ ಕೊಡುತ್ತಾ  ಒಳಗಿರುವ ಯೋಗ ಶಕ್ತಿಯಿಂದ ಮುಕ್ತರಾದರು. ಈಗ ಅವರ ಪ್ರತಿಮೆಗಳು ಬಂಡವಾಳವಾಗಿದೆ.ತತ್ವ ಬಿಟ್ಟು ತಂತ್ರ ಬೆಳೆದಿದೆ. ತಂತ್ರದ ಸಹಕಾರದಿಂದ ಸಾಕಷ್ಟು ಹಣಗಳಿಸಿದರೂ ಸದ್ಬಳಕೆ ಮಾಡಿಕೊಳ್ಳಲು ಜ್ಞಾನವಿಲ್ಲದೆ ಇನ್ನಷ್ಟು ಸಾಲದ ಕಡೆಗೆ ಮಾನವ ನಡೆದಿರೋದು ಕಾಲದ ಮಹಿಮೆ. ಒಟ್ಟಿನಲ್ಲಿ ಭಾರತ ವಿಶ್ವಗುರು ಆಗಿದ್ದು ಅಧ್ಯಾತ್ಮ ದಿಂದ. ಈಗಲೂ ಅಧ್ಯಾತ್ಮ ಪ್ರಚಾರವಿದೆ.ಆದರೆ ಮಧ್ಯವರ್ತಿಗಳ ಕುತಂತ್ರದಿಂದ ಸ್ವತಂತ್ರ ಜ್ಞಾನದವರೆಗೆ ತಲುಪದೆ ಅತಂತ್ರಸ್ಥಿತಿಗೆ ತಲುಪುತ್ತಿದೆ. ಬದಲಾವಣೆಗೆ ಮಾನವನೆ ಸಹಕರಿಸದಿದ್ದರೆ  ದೇವರಾದರೂ ಏನೂ ಮಾಡಲಾಗದು. ಇಲ್ಲಿ ದೇವರು ಮಾನವರು ಅಸುರರು  ಇದ್ದರೂ ಮಧ್ಯವರ್ತಿ ಮಾನವನಲ್ಲಿರುವ ದೈವಗುಣಕ್ಕೆ ಶಿಕ್ಷಣ ನೀಡದೆ ಆಳುವವರು ಯಾರು? ಸರ್ಕಾರದ ಹಣ ಜನರ ಋಣ.
ಯಾರೂ ಯಾರದ್ದೋ ಋಣ ತೀರಿಸಲಾಗದ ಮೇಲೆ ಅದರ ಮೂಲ ತಿಳಿದು ತೀರಿಸುವ ಜ್ಞಾನ ಪಡೆಯುವುದೇ ಪರಿಹಾರ
ಬ್ರಹ್ಮಜ್ಞಾನವೆಂದರೆ ಬ್ರಹ್ಮನೊಳಗಿರುವ ಜ್ಞಾನ.ಬ್ರಹ್ಮನ ಸೃಷ್ಟಿ ಯ ಜೊತೆಗೆ  ಆ ದೇವಿ ಜ್ಞಾನವನ್ನು ಕೊಟ್ಟಿರುವಾಗ ನಾವೇ ಒಳಗಿನ‌ಜ್ಞಾನಕ್ಕೆ ಸೂಕ್ತ ಶಿಕ್ಷಣ ನೀಡುವ ಗುರುವಾದರೆ ಉತ್ತಮ.ಪೋಷಕರು ಮಕ್ಕಳ ಆಸಕ್ತಿ,ಪ್ರತಿಭೆಜ್ಞಾನವನ್ನು ಗುರುತಿಸಿ ಬೆಳೆಸುವ ಗುರುವಾಗಿದ್ದರೆ  ಮಕ್ಕಳಿಗೆ ಮನೆಯಲ್ಲಿ ಗುರುದರ್ಶನ. ಇಲ್ಲ ಪೋಷಕರೆ ಜ್ಞಾನಕ್ಕೆ ವಿರುದ್ದ ನಿಂತು ಹೊರಗಿನ ಶಿಕ್ಷಣ ನೀಡಿದರೆ ಪೋಷಕರೆ ಮಕ್ಕಳ ಶತ್ರುವಾಗಲೂಬಹುದು.ಹೀಗಾಗಿ ಪೋಷಕರು ಅದ್ಯಾತ್ಮ ಸತ್ಯ ತಿಳಿಯುವುದೇ ನಿಜವಾದ ಸಂಪತ್ತು. ಇದು ಎಲ್ಲಾ ಆಪತ್ತಿನಿಂದ ಪಾರುಮಾಡುತ್ತದೆ.

No comments:

Post a Comment