ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Tuesday, January 31, 2023

ಭೂತಕಾಲದ ಅಗತ್ಯವೆಷ್ಟಿದೆ?

.    .    .    .🕉.    .    . 
      - - - - - - - - - - - - **   
ಭೂತಕಾಲವನ್ನು ಮರೆಯಬಾರದು. ಅಂದಿನ ನೋವಿನಿಂದಲೇ ಇಂದಿನ ಬಲ ಬಂದಿದ್ದು.ಆಗಿನ ಭಯದಿಂದಲೇ ಧೈರ್ಯ ಗಳಿಸಿಕೊಂಡಿದ್ದು ಇಂದಿನ ಫಲದ ಮೂಲವೇ ಅದು.**

**ಕತ್ತಲನ್ನು ದೂಷಿಸಿ ಪ್ರಯೋಜನವಿಲ್ಲ, ದೀಪ* ಹತ್ತಿಸಿದರೆ,ಕತ್ತಲು ತಾನಾಗಿಯೇ,ಓಡಿ ಹೋಗುತ್ತದೆ"....**

 ಆಗಿದ್ದನ್ನು ಮರೆತು ಮುಂದೆ ನಡೆಯಬೇಕೆನ್ನುವರು ಹಾಗೆಯೇ ಹಿಂದಿನದನ್ನು ಮರೆಯಬಾರದೆನ್ನುವರು. ಇಲ್ಲಿ ಎರಡೂ ಸತ್ಯವಾದರೆ ಯಾವುದನ್ನು ಮರೆಯಬೇಕು ಯಾವುದನ್ನು ಮರೆಯಬಾರದೆನ್ನುವ ಜ್ಞಾನವಿರಬೇಕಷ್ಟೆ.
ಮನಸ್ಸು  ಬಹಳ ಸೂಕ್ಮವಾಗಿರುವ ಕಾರಣ ಜನ್ಮ ಜನ್ಮಗಳ ತನಕ ಒಂದೇ ವಿಷಯವನ್ನು  ಹೊತ್ತುಕೊಂಡು  ಹೋಗುವುದಕ್ಕೆ ಕಾರಣ ಅಜ್ಞಾನವೆನ್ನುವರು.ಹೀಗಾಗಿ ಮಾನವ ಜ್ಞಾನದ ಕಡೆಗೆ ಹೊರಟಾಗ ರಾಜಕೀಯವನ್ನು ಮರೆಯುತ್ತಾ ರಾಜಯೋಗದೆಡೆಗೆ ಹೆಜ್ಜೆ ಹಾಕುವುದೇ ಉತ್ತಮವೆನ್ನುವುದು ಹಿಂದೂ ಧರ್ಮದ ಉದ್ದೇಶ.
ಶತ್ರುಗಳನ್ನು ಪ್ರೀತಿಸುವಷ್ಟು ಶಕ್ತಿ ಆತ್ಮಜ್ಞಾನಿಗಳಿಗಿರುತ್ತದೆ ಕಾರಣ  ಜೀವ ಈ ಭೂಮಿಗೆ ಬರುವ  ಉದ್ದೇಶ  ಇದೇ ಆಗಿದೆ.
ಆದರೆ  ಭೂಮಿಯ ಮಾಯಾಲೋಕದಲ್ಲಿ ಮುಳುಗುವ ಮನಸ್ಸಿಗೆ ಇದರರ್ಥ ವಾಗೋದು ಕಷ್ಟವಾದ ಕಾರಣ ತನ್ನ ಮನಸ್ಸಿಗೆ ಬಂದಂತೆ  ಜೀವನ ನಡೆಸುತ್ತಾ ಮುಂದೆ ಹೋದ ಮೇಲೇ ತಿಳಿಯೋದು ದಾರಿತಪ್ಪಿದೆ ಎಂದು. ಈ ಕಾರಣಕ್ಕಾಗಿ ನಾವು  ಭೂತಕಾಲವನ್ನು ಮರೆಯಬಾರದು. ಇಲ್ಲಿ ತಪ್ಪಿಗೆ ಕಾರಣ ತಿಳಿಯುವ  ಪ್ರಯತ್ನ ಮಾಡಿ ತಿರುಗಿ  ಸರಿದಾರಿಗೆ ನಡೆಯಬೇಕೇ ಹೊರತು ತಪ್ಪು ಮಾಡಿಯಾಗಿದೆ ಹಿಂದಿರುಗಲು ಸಾಧ್ಯವಿಲ್ಲದ ಮೇಲೆ  ಬದಲಾವಣೆ ಸಾಧ್ಯವಿಲ್ಲ ಎನ್ನುವುದರಲ್ಲಿ ಯಾವ ಪುರುಷಾರ್ಥ ವಿಲ್ಲ.
ಪುರುಷಾರ್ಥ ಎಲ್ಲರೂ ಬಯಸುವ ಎಲ್ಲರೂ ಶ್ರಮಪಟ್ಟು ಗಳಿಸಬೇಕಾದ ಧಾರ್ಮಿಕ ವಿಷಯ ಇದನ್ನು ಧರ್ಮ, ಅರ್ಥ, ಕಾಮ, ಮೋಕ್ಷವೆಂದು ವಿಂಗಡಿಸಿ ಜೀವನದ ಸಾರ್ಥಕತೆಯ ಕಡೆಗೆ ಮಾನವ ಹೇಗೆ ನಡೆಯಬೇಕೆಂಬುದನ್ನು  ಹಿಂದಿನ ಭೂತಕಾಲದ ಪುರಾಣದ,ಇತಿಹಾಸದ  ಮಹಾತ್ಮರುಗಳು ತಿಳಿದು,ತಿಳಿಸಿ ನಡೆದು ನಡೆಸುವಲ್ಲಿ  ಯಶಸ್ವಿಯಾಗಿದ್ದರೂ
ಈಗಿನ  ಸಮಾಜದಲ್ಲಿ ಇದನ್ನು ಅಪಾರ್ಥ ಮಾಡಿಕೊಂಡು ತಾನೂ  ನಡೆಯದೆ ನಡೆಯುವವರನ್ನೂ  ಬಿಡದೆ ಅಡ್ಡಿಪಡಿಸುವವರು  ವಿರೋಧಿಸಬಹುದಷ್ಟೆ. ಅಂದರೆ ಬದಲಾವಣೆ ಜಗದ ನಿಯಮ.ಇದು ಯಾರಿಂದ ಹೇಗೆ ಯಾವಾಗಲಾದರೂ ಆಗಬಹುದು. ಹೀಗಾಗಿ ಭೂತ ವರ್ತಮಾನ ಭವಿಷ್ಯಗಳು ಸೃಷ್ಟಿ ಸ್ಥಿತಿ ಲಯಕ್ಕೆ ಕಾರಣವಾಗಿ
ಭೂತಕಾಲದ   ಧರ್ಮ ಜ್ಞಾನ ವರ್ತ ಮಾನದ ಅಧರ್ಮಕ್ಕೆ ಕಾರಣವೆನ್ನುವುದು ಅಜ್ಞಾನವಷ್ಟೆ. ಅಂದಿನ ಧಾರ್ಮಿಕತೆಯ ಉದ್ದೇಶ ಅಂದಿನ ಸಮಾಜಕ್ಕೆ  ಹೊಂದಿಕೆಯಾದಂತೆ ಇಂದಿನ ಧಾರ್ಮಿಕತೆ ಸಮಾಜಕ್ಕೆ ಹೊಂದಿಕೆಯಾಗಿದೆಯೆ ಎನ್ನುವ ಬಗ್ಗೆ ಚರ್ಚೆ ಯಾಗಬೇಕಷ್ಟೆ. ಸರಿಯಾದ ಸಂಸ್ಕಾರ,ಸಂಸ್ಕರಣೆ ಮಾಡದ ಯಾವುದೇ ವಿಷಯವಾಗಲಿ ವಿಷವಾಗುತ್ತದೆ. ಇದನ್ನು ಬಳಸಿದ ಮಾನವನಲ್ಲಿ ವಿಷವೇ ತುಂಬಿದರೆ ದ್ವೇಷವೇ ಹೆಚ್ಚುವುದಲ್ಲವೆ? ಹೀಗಾಗಿ ನಾವೀಗ ಪುರಾಣ, ಇತಿಹಾಸವನ್ನು ಓದಿ ತಿಳಿಯುವುದು ತಪ್ಪಲ್ಲ.ಆದರೆ ಅಂದಿನ ರಾಜರಲ್ಲಿದ್ದ ಧಾರ್ಮಿಕ ಪ್ರಜ್ಞೆ ಇಂದಿನ ರಾಜಕಾರಣಿಗಳಲ್ಲಿ ಇದೆಯೆ? ರಾಜಕಾರಣಿಗಳನ್ನು ಆಟವಾಡಿಸುತ್ತಿರುವ ಪ್ರಜೆಗಳಲ್ಲಿ ಇದೆಯೆ? ಪ್ರಜೆಗಳನ್ನು ಧರ್ಮದ ಮಾರ್ಗದಲ್ಲಿ ನಡೆಸುವ ಧಾರ್ಮಿಕ ವರ್ಗದವರೆಲ್ಲರಲ್ಲಿಯೂ ಇದೆಯೆ? ಈ ಪ್ರಶ್ನೆಗೆ ಉತ್ತರ ನಾವೇ ಒಳಗೆ ತಿಳಿದಾಗಲೇ ನಮ್ಮ ಭೂತಕಾಲವೇ ನಮ್ಮ ಇಂದಿನ ಜೀವನಕ್ಕೆ ಕಾರಣವಾಗಿದೆ.
ಅಂದರೆ ಸೃಷ್ಟಿ ಮಾಡಿಕೊಂಡ ವಿಷಯಗಳು  ಸ್ವಚ್ಚವಾಗಿದ್ದರೆ ಸ್ಥಿತಿ ಯೂ ಸ್ವಚ್ಚವಾಗಿರುತ್ತದೆ ಹಾಗೆ ಸ್ವಚ್ಚ ಮನಸ್ಸಿನಿಂದ ಜೀವ ಹೋಗುತ್ತದೆ. ಇಲ್ಲವಾದರೆ  ಅಶುದ್ದತೆಯೇ ಹೆಚ್ಚಾಗುತ್ತಾ  ಮಾನವ ಅಸುರನಾಗಿ ಹೋಗುತ್ತಾನೆ.ಮತ್ತೆ ಅಸುರ ಜನ್ಮ ಹೀಗಾಗಿ ಕಲಿಯುಗದಲ್ಲಿ ಅಜ್ಞಾನದ ಅಸುರರ ಸಂಖ್ಯೆ ಹೆಚ್ಚು ಎಂದಿರೋದು ಶ್ರೀ ಕೃಷ್ಣ ಪರಮಾತ್ಮ.
ಒಟ್ಟಿನಲ್ಲಿ  ಬೀಜದಂತೆ ಸಸಿ ಸಸಿಯಂತೆ ಮರ. ಇದನ್ನು ಯಾವ ಹಣದಿಂದ ಅಧಿಕಾರದಿಂದ  ಸರಿಪಡಿಸಲಾಗದು.
ಜ್ಞಾನದಿಂದ ಹುಟ್ಟಿದ ಮೇಲೆ ಆ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ  ಅದೇ ಜೀವನವಾಗುತ್ತದೆ.ದುರ್ಭಳಕೆ ಮಾಡಿಕೊಂಡರೆ ಇದ್ದಾಗಲೇ ಸತ್ತಂತೆ. ಆತ್ಮಹತ್ಯೆಯೆನ್ನಬಹುದು. ಆತ್ಮಕ್ಕೆ ಮರಣವಿಲ್ಲ ಆದರೆ ಮಾನವನಿಗೆ ಆತ್ಮಜ್ಞಾನವಿಲ್ಲವಾದರೆ  ವ್ಯರ್ಥ ಜೀವನ ಎನ್ನುವರು. ಭೂತಕಾಲದ ದೋಷವನ್ನು ಹುಡುಕುತ್ತಿದ್ದರೆ ದೋಷವೇ ಕಾಣುವುದು ಹಾಗೆ ದ್ವೇಷ ಬೆಳೆಯುವುದು.ದ್ವೇಷದಿಂದ  ದೇಶ ಕಟ್ಟಲಾಗದು. ಈ ಕಾರಣದಿಂದ ಮಹಾತ್ಮರುಗಳು ಆಗಿದ್ದು ಆಗಿ ಹೋಗಿದೆ ಮುಂದೆ ಏನು ಮಾಡಬೇಕೆಂದು  ಯೋಚಿಸಿ ನಡೆಯಬೇಕೆಂದರು.  ಇದನ್ನು ಭೂಮಿಯ ಮೇಲೆ ಹೋರಿಸಿ,ಸ್ತ್ರೀ ತಪ್ಪು ಎಂದು  ವಾದಿಸಿ ಮುಂದೆ ನಡೆದರೆ ಭೂಮಿ ಸ್ವಚ್ಚ ವಾಗುವುದೆ?  ಮಾಡಿದ್ದುಣ್ಣೋ ಮಹಾರಾಯ ಎಂದಂತಾಗುವುದಷ್ಟೆ. ಯಾರೂ ಪರಿಪೂರ್ಣರಲ್ಲ ಯಾರೂ ಸರ್ವಜ್ಞರಲ್ಲ. ಎಲ್ಲಾ ಭೂಮಿ ಮೇಲಿರುವ ಜೀವಾತ್ಮರಷ್ಟೆ.
ಯೋಗದಿಂದ  ಮಾತ್ರ ಮುಕ್ತಿ. ಎಂದರೆ ಪರಮಾತ್ಮನೆಡೆಗೆ ಜೀವಾತ್ಮ ಹೋಗಿ ಸೇರುವುದೆ ಮಹಾಯೋಗ.ಸತ್ಯದೆಡೆಗೆ ಧರ್ಮದೆಡೆಗೆ ಸಾಗುವುದೇ ಕರ್ಮ, ಇದರಲ್ಲಿ ದೇವರು ಮಾನವರು ಅಸುರರು ಭೂಮಿಯಲ್ಲಿರುವಾಗ ದೈವತ್ವದೆಡೆಗೆ ದೇವರೆಡೆಗೆ ಸಾಗಿದರೆ ಅಸುರತೆ ಕಡೆಗೆ ಅಸುರರು ಹೋಗುವರು.ಯಾವಾಗ ದೈವತ್ವದವರೂ ಅಸುರರಿಗೆ ಸಹಕರಿಸಿ  ರಾಜಕೀಯ ನಡೆಸುವರೋ  ಅದೇ ಲಯಕ್ಕೆ ಕಾರಣವಾಗುವುದು. ಇದರಿಂದ. ಭೂತಕ್ಕಾಗಲಿ,ವರ್ತ ಮಾನಕ್ಕಾಗಲಿ,ಭವಿಷ್ಯಕ್ಕಾಗಲಿ ನಷ್ಟವಿಲ್ಲ. ಯಾವಾಗ ಇದನ್ನು ಅಜ್ಞಾನದ ದ್ವೇಷಕ್ಕೆ ಬಳಸಿ  ಭೂಮಿಯನ್ನು ದುರ್ಭಳಕೆ ಮಾಡಿಕೊಳ್ಳುವರೋ ಅದೇ ಮನುಕುಲಕ್ಕೆ  ಕಷ್ಟ ನಷ್ಟಕ್ಕೆ ಕಾರಣವಾಗುತ್ತದೆ. ಹಿಂದಿನ ಮಹಾತ್ಮರಿಲ್ಲದಿದ್ದರೂ ಅವರ ಹೆಸರಿನಲ್ಲಿ  ಜೀವನ ನಡೆದಿರುವಂತೆ ಅಸುರ ರ ಹೆಸರಿನಲ್ಲಿಯೂ  ಜೀವನ ನಡೆಸಿದ್ದಾರೆಂದರೆ  ನಮ್ಮಲ್ಲಿರುವ ಮಹಾತ್ಮರ ಗತಿ? ಹತ್ತಿರವಿರುವವರ ಗತಿ? ಎಲ್ಲರಲ್ಲಿಯೂ ಅಡಗಿರುವ ಶಕ್ತಿ ಒಂದೇ ಎಂದಾಗ  ಯಾಕೆ ಕಾಣುತ್ತಿಲ್ಲ? ಕಾರಣ ಇಲ್ಲಿ ರಾಜಕೀಯವಷ್ಟೆ ಕಾಣೋದು. ಜ್ಞಾನವಲ್ಲ. ಜ್ಞಾನವನ್ನು  ಹಿಂದುಳಿಸಿ  ಆಳಿದವರ  ಉದ್ದೇಶ ಅರ್ಥ ಆಗಿದ್ದರೂ ಜ್ಞಾನಪಡೆಯುವ ಸ್ಥಿತಿಯಲ್ಲಿ ನಾವಿಲ್ಲವಾದರೆ ಇದರರ್ಥ ಭೂತಕಾಲದಿಂದಲೂ  ಮನುಕುಲದ ದಾರಿ ತಪ್ಪಿಸುವ  ರಾಜಕೀಯವಿದೆ.ದಾರಿತೋರಿಸಿದ ರಾಜಯೋಗಿಗಳನ್ನು  ಗುರುತಿಸದ ಅಜ್ಞಾನವೂ ನಮ್ಮಲ್ಲಿದೆ.
ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದರೂ ನಮಗೆ ಅಂಟಿಕೊಂಡಿರುವ ಭೂತ ಭಯ ಬಿಟ್ಟಿಲ್ಲ.ಭಯವೇ ಕಾರಣ.ಇಲ್ಲಿ ಭಯೋತ್ಪಾದಕರು  ಯಾರು?  ಜೀವಭಯವಿಲ್ಲದೆ  ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ದೇಶಭಕ್ತರೆಲ್ಲಿ? ದೇಶವನ್ನೇ ವಿದೇಶದೆಡೆಗೆ ನಡೆಸುತ್ತಾ ಜನರನ್ನು ಭಯಭೀತರಾಗಿಸುತ್ತಿರುವ ಭ್ರಷ್ಟಾಚಾರಿಗಳೆಲ್ಲಿ?
ಭೂತದ ಭ್ರಷ್ಟಾಚಾರ ಬೆಳೆದಂತೆ ಶಿಷ್ಟಾಚಾರ ಬೆಳೆದರೆ  ಉತ್ತಮ ಬದಲಾವಣೆ .

No comments:

Post a Comment