ನಾವ್ಯಾರ ವಶದಲ್ಲಿರೋದು?

ದೇವತೆಗಳನ್ನು ಪೂಜಿಸುವವರು ದೇವತೆಗಳ ವಶ, ಮಾನವರನ್ನು ಪೂಜಿಸುವವರು ಮಾನವರ ವಶ ಹಾಗೇ ಅಸುರರನ್ನು ಪೂಜಿಸುವವರು ಅಸುರರ ವಶದಲ್ಲಿರುವರು. ನಮ್ಮ ಆರಾಧನೆ ಪೂಜೆಯ ಹಿಂದಿನ ಗುರಿ...

Sunday, January 29, 2023

ಪ್ರಯತ್ನ ನಮ್ಮದು ಫಲ ಭಗವಂತನದು

ಪ್ರಯತ್ನ ನಮ್ಮದು ಫಲ ಭಗವಂತನದು ಎನ್ನುವುದು ಸತ್ಯ. ಇದರಲ್ಲಿ ಎರಡು ರೀತಿಯ ಪ್ರಯತ್ನವಿದೆ ಒಂದು ನನ್ನ ನಾನು ತಿದ್ದಿಕೊಂಡು ಇತರರನ್ನು ತಿದ್ದುವುದು, ಇನ್ನೊಂದು  ಇತರರನ್ನು ತಿದ್ದುವುದರಲ್ಲಿಯೇ  ಪ್ರಯತ್ನಪಡುತ್ತಾ ಮುಂದೆ ನಡೆಯುವುದು. ಮೊದಲನೆಯದು  ಮಾನವನಿಗೆ ಜ್ಞಾನದೆಡೆಗೆ ನಡೆಸಿದರೆ ಇನ್ನೊಂದು ವಿಜ್ಞಾನದೆಡೆಗೆ ನಡೆಸುತ್ತದೆ. ವಿಜ್ಞಾನದಿಂದ ನಾವು ಏನೇ ಬದಲಾವಣೆ ಮಾಡಿದರೂ ತಾತ್ಕಾಲಿಕ ವಾಗಿರುತ್ತದೆನ್ನಬಹುದು.ಇಲ್ಲಿ ವಿಜ್ಞಾನ ವಿಶೇಷ ಜ್ಞಾನವಾದರೂ ಇದರಲ್ಲಿ ಸಾಮಾನ್ಯಜ್ಞಾನದ ಕೊರತೆಯಿರುತ್ತದೆ. ನಾನೂ ಎಲ್ಲರಂತೆ ಸಾಮಾನ್ಯ ಎನ್ನುವ ಬಾವನೆ  ಮಾನವನಿಗಿರೋದಿಲ್ಲ.ನಾನು ಎಲ್ಲರಿಗಿಂತ ತಿಳಿದವನು,ಮೇಲಿನವನು,ಶ್ರೇಷ್ಠ, ಉತ್ತಮ ಎನ್ನುವ ಬಾವನೆ ಹೆಚ್ಚಾದಂತೆಲ್ಲಾ ಎಲ್ಲರಲ್ಲಿಯೂ ಅಡಗಿರುವ ಆ ಮಹಾಶಕ್ತಿಯನ್ನು ಗುರುತಿಸುವ  ಸಾಮಾನ್ಯ ಜ್ಞಾನ  ಕಡಿಮೆ ಆದಾಗಲೇ‌ ನಮ್ಮ ಪ್ರಯತ್ನಗಳು ರಾಜಕೀಯ ಮಟ್ಟಕ್ಕೆ ಏರಿ ಬಲತ್ಕಾರದಿಂದಾಗಲಿ, ಅಧಿಕಾರದಿಂದಾಗಲಿ,ಹಣದಿಂದಾಗಲಿ,ಸ್ಥಾನಮಾನಕ್ಕಾಗಿಯಾಗಲಿ  ಸಾಕಷ್ಟು ಪ್ರಯತ್ನಪೂರ್ವಕ ಬದಲಾವಣೆ ಆಗಿ  ಕೊನೆಗೆ ಅದರ ಪ್ರತಿಫಲ  ಇಡೀ ಸಂಸಾರದ ಜೊತೆಗೆ ಸಮಾಜ,ದೇಶ,ವಿಶ್ವವೇ ನೋಡಬೇಕಾಗುತ್ತದೆ. 
ಇದೀಗ ಕಲಿಯುಗದಲ್ಲಿ ನಾವು ಕಾಣುತ್ತಿರುವ ಸತ್ಯವಾಗಿದೆ. ಸತ್ಯವೇ ತಿಳಿಯದವರು ಧರ್ಮ ವನ್ನು ಅನುಸರಿಸದವರು ಅಧಿಕಾರ,ಹಣ,ಸ್ಥಾನದಿಂದ ಸಾಮಾನ್ಯರನ್ನು ಬದಲಾಯಿಸಲು ಹೊರಟು  ಇಡೀ ಸಮಾಜವೇ ದಾರಿತಪ್ಪಿ ನಡೆದಿದೆ.ಇದನ್ನು ಯಾರೋ ಒಬ್ಬರು ಸರಿಪಡಿಸಲಾಗದು. ಅವರವರ ಧರ್ಮ, ಕರ್ಮ ,ಸತ್ಯಕ್ಕೆ ಅವರವರೆ ಸಾಕ್ಷಿಭೂತರಾಗಿರುವಾಗ  ಒಳಗಿರುವ. ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಮುಂದೆ ನಡೆದವರಿಗೆ ಮಾತ್ರ ಉತ್ತಮ ಫಲ ಭಗವಂತನಿಂದ ಸಿಗುತ್ತದೆನ್ನುವುದು ಹಿಂದೂ ಧರ್ಮ, ಆದರೆ ನಮ್ಮ ಹಿಂದಿನವರಲ್ಲಿದ್ದ  ಜ್ಞಾನ ಸಂಪತ್ತು,ತತ್ವ ಗುಣ, ಮನೋಧರ್ಮ ದ ಕೊರತೆ ನಮ್ಮ ಶಿಕ್ಷಣದಲ್ಲಿಯೇ  ಹೆಚ್ಚಾಗಿರುವಾಗ. ತಂತ್ರದಿಂದ ಎಷ್ಟು ಪ್ರಯತ್ನಪಟ್ಟರೂ ಮಾನವನಿಗೆ ಸ್ವತಂತ್ರ ಜ್ಞಾನ  ಸಿಗೋವರೆಗೆ  ಶಾಂತಿ,ತೃಪ್ತಿ, ನೆಮ್ಮದಿ,ಮುಕ್ತಿ ಯು  ಒಳಗೇ ಸಿಗುವುದು ಕಷ್ಟ. 
ಪ್ರಯತ್ನಕ್ಕೆ ತಕ್ಕಂತೆ ಫಲವಿದೆ. ಆದರೆ ಪ್ರಯತ್ನ ಯಾವ ಕಡೆಗೆ ನಡೆದರೆ ಯಾವ ಫಲ ಸಿಗುವುದೆನ್ನುವ ಆತ್ಮಜ್ಞಾನದ ಅಗತ್ಯವೂ ಇದೆ.ಎಲ್ಲರಲ್ಲಿಯೂ ಜ್ಞಾನವಿದೆ.ಆ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ದಾರಿಯಲ್ಲಿ ನಡೆಯುವ ಪ್ರಯತ್ನ ಎಲ್ಲಾ ಮಾಡೋದು ಕಷ್ಟವಿದೆ. ಕಾರಣವಿಷ್ಟೆ ನಮ್ಮ ಒಳಗಿನ ಅರಿವು ಹೊರಗಿನ ಅರಿವಿನ ವಿರುದ್ದವಿದ್ದರೆ ನಮ್ಮ  ಪ್ರಯತ್ನದಲ್ಲಿ ತಡೆಯಾಗುತ್ತದೆ. ತಡೆಯಾದರೂ ಎಡಬಿಡದೆ
ಒಂದೇ ಸತ್ಯದ ಕಡೆಗೆ ಪ್ರಯತ್ನವಿದ್ದರೆ ಯೋಗವಾಗುತ್ತದೆ. ಅಂದರೆ ಒಂದು ಶಕ್ತಿಯೊಂದಿಗೆ ಇನ್ನೊಂದು ಶಕ್ತಿ ಸೇರುವುದು  ಒಂದೇ ತತ್ವವಾಗಿರುತ್ತದೆ. ನಾನೇ ಬೇರೆ ನೀನೇ ಬೇರೆ ಎಂದರೆ  ಕೂಡುವುದಿಲ್ಲ. ಹಾಗೆಯೇ ಇಲ್ಲಿ ದೈವಶಕ್ತಿ,ಮಾನವಶಕ್ತಿ,ಅಸುರಶಕ್ತಿಯ ಮೂರೂ ಗುಣಗಳೂ ತಮ್ಮದೇ ಆದ  ಪ್ರಯತ್ನದಲ್ಲಿ  ಕೆಲಸ ಮಾಡಿದರೂ ಮಾನವ ದೇವಾಸುರರ ಮಧ್ಯವರ್ತಿ ಯಾಗಿದ್ದು ಮಾನವೀಯ ಮೌಲ್ಯ ವಿಲ್ಲದೆ ದೈವತ್ವದೆಡೆಗೆ ನಡೆಯಲಾಗದು, ಹಾಗೆ ದೇವರ ಹೆಸರಿನಲ್ಲಿ ಅಸುರರನ್ನೂ ಸೇರುವುದೂ ಅಧರ್ಮ ವಾಗುತ್ತದೆ. ಒಟ್ಟಿನಲ್ಲಿ ರಾಜಕೀಯದ ಪ್ರಯತ್ನಗಳು ತಾತ್ಕಾಲಿಕ ಫಲ ಕೊಟ್ಟರೆ ರಾಜಯೋಗದ ಪ್ರಯತ್ನ ಶಾಶ್ವತ ಫಲ ನೀಡುತ್ತದೆನ್ನಬಹುದು. ರಾಜಕೀಯ ನಡೆಸುವಾಗ ತಾನು ಯಾವ ಶಕ್ತಿಯನ್ನು ಆಳುತ್ತಿರುವೆನೆಂಬುದರ ಅರಿವಿರೋದು ಕಷ್ಟ. ಆದರೆ ಸ್ವತಂತ್ರ ಜೀವನ ನಡೆಸುವವರಿಗೆ  ಹೊರಗಿನ ಹಾಗು ಒಳಗಿನ ಅಂತರದ ಮಧ್ಯೆ ಇರುವ  ರಾಜಕೀಯತೆ ಕಾಣುತ್ತದೆ. ಹೀಗಾಗಿ ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಉತ್ತಮ ಫಲವಿದೆ.ಇದು ನಿಧಾನಗತಿಯಲ್ಲಿ ಸಿಗುವ‌ಕಾರಣ ಮಾನವನಿಗೆ ತಾಳ್ಮೆಯ ಅಗತ್ಯವಿದೆ.
ತಾಳಿದವನು ಬಾಳಿಯಾನು ಎಂದು ಹಿಂದಿನ ಮಹಾತ್ಮರುಗಳು ತಿಳಿಸಿರುವುದು ಅಧ್ಯಾತ್ಮ ಸತ್ಯವಾಗಿತ್ತು.
ಭೌತಿಕದೆಡೆಗೆ ನಡೆದವರಿಗೆ ತಾಳ್ಮೆ ಕಡಿಮೆಯಾದ ಕಾರಣ ಇಂದು ಮಹಿಳೆ ಮಕ್ಕಳೆನ್ನದೆ ಹೊರಗೆ ಬಂದು ಹೋರಾಟ,
ಹಾರಾಟ,ಮಾರಾಟದ ರಾಜಕೀಯತೆ ಬೆಳೆದಿದೆ. ಈ ಪ್ರಯತ್ನದಲ್ಲಿ ಗೆಲುವೂ ಇದೆ ಸೋಲೂ ಇದೆ. ಸ್ವೀಕರಿಸುವ ಗುಣವಿರಬೇಕಷ್ಟೆ. ಅದು ಒಳಗಿದೆ ಹೊರಗಿಲ್ಲ. 
ರಾಜಪ್ರಭುತ್ವದ ರಾಜರಿಗೆ ಅಧ್ಯಾತ್ಮ ಜ್ಞಾನದ ಜೊತೆಗೆ ಕ್ಷತ್ರಿಯ ಧರ್ಮದ ಶಿಕ್ಷಣವಿತ್ತು. ಜನರಿಗೆ  ಯಾವ ರೀತಿಯಲ್ಲಿ  ಜೀವನ ನಡೆಸಿಕೊಂಡು ಹೋದರೆ  ಉತ್ತಮ  ಪ್ರಗತಿ ಸಾಧ್ಯ ಎನ್ನುವ ಜ್ಞಾನವಿದ್ದ ಕಾರಣ  ರಾಜನೇ ದೇವರಾಗಿದ್ದರು. ಕಾಲಾನಂತರದಲ್ಲಿ  ಬೆಳೆದ  ಅಜ್ಞಾನದಿಂದ   ರಾಜಪ್ರಭುತ್ವವು ಅಸುರರ ವಶವಾಗುತ್ತಾ ಜನರನ್ನು ದಾರಿತಪ್ಪಿಸಿ ಆಳುವ ಹಂತಕ್ಕೆ  ಬಂದು ಯುದ್ದಗಳಾದವು. ಯಾವ ಯುದ್ದವಾದರೂ ತಾತ್ಕಾಲಿಕ  ತಡೆಯಾಗಿರುತ್ತದೆ. ಜನ್ಮ ಜನ್ಮಕ್ಕೆ  ದೇಹಬದಲಾಗಬಹುದಷ್ಟೆ ಆತ್ಮವಲ್ಲದ ಕಾರಣ ಅದೇ ಅಸುರ ಶಕ್ತಿ ಭೂಮಿಯನ್ನು  ಆವರಿಸುತ್ತಾ ಈಗಲೂ ಮಾನವನ ಒಳಗೆ ಅಸುರೀ ಗುಣವಿತುವಷ್ಟು ದೈವಗುಣವಿಲ್ಲ. ಹೀಗಾಗಿ  ಮಾನವ ಮಹಾತ್ಮನಾಗೋದಕ್ಕೆ ರಾಜಕೀಯದಿಂದ ಕಷ್ಟವಿದೆ ಎಂದು  ನಿನ್ನ ನೀ ಮೊದಲು ತಿಳಿ,ನಿನ್ನ ನೀ ಆಳಿಕೊಳ್ಳಲು ಕಲಿ, ಆತ್ಮಜ್ಞಾನದೆಡೆಗೆ ನಡೆ, ಅಮೃತಪುತ್ರನಾಗು. ಹೀಗೇ  ರಾಜಯೋಗದ  ವಿಚಾರವನ್ನು  ಅಧ್ಯಾತ್ಮದ  ಕಡೆಗೆ  ನಡೆಯಲು ಸ್ವಾವಲಂಬನೆಯ,ಸ್ವತಂತ್ರ ವಾದ ಸತ್ಯ,ಧರ್ಮ, ನ್ಯಾಯ, ನೀತಿ,ಸಂಸ್ಕೃತಿ, ಸಂಪ್ರದಾಯ, ಶಾಸ್ತ್ರ, ಪುರಾಣ,ಇತಿಹಾಸ,ವೇದಗಳಲ್ಲಿ  ತಿಳಿಸಿದ್ದಾರೆ.  ಇದರಿಂದ ಮಾನವನಲ್ಲಿ ಅಡಗಿರುವ  ಅಸುರಿ ಶಕ್ತಿ ಹೋಗಿ ದೈವೀ ಶಕ್ತಿ ಹೆಚ್ಚುವುದೆನ್ನುವರು. ಈಗ ಅಲ್ಪ ಸ್ವಲ್ಪ ಮಟ್ಟಿಗೆ ಜನರಲ್ಲಿ ದೈವೀ ಶಕ್ತಿ ಜಾಗೃತವಾಗಿರಲು ಇವುಗಳೇ ಕಾರಣ. ಆದರೆ  ಈ ವಿಚಾರಗಳನ್ನು  ಪ್ರಚಾರಮಾಡೋ ಮೊದಲು  ಅದರಲ್ಲಿರುವ ರಾಜಕೀಯ ಶಕ್ತಿಯನ್ನು ಬಿಟ್ಟು ರಾಜಯೋಗದ ಕಡೆಗೆ ಗಮನಕೊಟ್ಟರೆ ಎಲ್ಲರಲ್ಲಿಯೂ ಅಡಗಿರುವ ಆ ಪರಾಶಕ್ತಿ,ಪರಮಾತ್ಮನ  ಕಾಣುವ ಕಡೆಗೆ ಮಾನವ  ನಡೆಯಬಹುದೆನ್ನುವುದಾಗಿತ್ತು. ಕಾಲವನ್ನು ತಡೆಯೋ ಶಕ್ತಿ ಯಾರಿಗೂ ಇಲ್ಲ ಹಾಗೆ ಕರ್ಮಫಲವನ್ನು  ಬೇರೆಯಾರೋ ತಡೆಯಲಾಗದು. ಮನಸ್ಸನ್ನು ತಡೆಹಿಡಿಯುವ ಯೋಗಶಕ್ತಿ  ಮಾನವನೊಳಗಿದೆ. ಹೀಗಾಗಿ ಯೋಗಿಗಳಾದವರ ಪ್ರಯತ್ನ ಯಶಸ್ವಿಯಾಗಿದೆ. ಯೋಗಿಗಳ ದೇಶ  ಭೋಗದೆಡಗೆ ನಡೆಯುತ್ತಾ ರೋಗವನ್ನು ತಡೆಯುವತ್ತ  ನಡೆದಿರೋದು  ಒಂದು ಪ್ರಯತ್ನವಾದರೂ ಫಲಾಫಲಗಳು‌  ಜನರ  ಮುಂದೆ  ನಿಂತಿದೆ. ಜೀವ ಶಾಶ್ವತವಲ್ಲ ಆತ್ಮ ಶಾಶ್ವತವೆನ್ನುವ ಅಧ್ಯಾತ್ಮದ ವಿರುದ್ದ  ನಿಂತರೂ ಜೀವ ಹೋಗೋದನ್ನು ತಪ್ಪಿಸಲಾಗದು. ಇದ್ದಾಗಲೇ ಪರಮಾತ್ಮನ  ಕಡೆಗೆ ಹೋದವರು ಮಹಾತ್ಮರು.
ಅವರ ಪ್ರಯತ್ನಕ್ಕೆ ತಕ್ಕಂತೆ ಫಲ ಸಿಕ್ಕಿದೆ. ಹೀಗೇ ಭೌತಿಕದ ಸಾಧನೆಯೂ ಆಗಿದೆ. ಒಂದು  ಶಾಶ್ವತ ಶಾಂತಿಯಾದರೆ ಇನ್ನೊಂದು ತಾತ್ಕಾಲಿಕ  ಪ್ರಗತಿ. ಎರಡೂ ಭೂಮಿಯನ್ನು ನಡೆಸುತ್ತದೆ. ಇವೆರಡರ ನಡುವಿರುವ ಮಾನವನಿಗೆ ಶಾಂತಿ ಸಿಗುವುದು  ತನ್ನ ತಾನರಿತು ನಡೆಯೋದರಿಂದ  ಎನ್ನುವ  ಸತ್ಯ ಒಂದೇ. ಒಳಗಿರುವ  ಸತ್ಯ ಕ್ಕೆ ವಿರುದ್ಧ ಹೊರಗಿನ ಸತ್ಯ ಹೆಚ್ಚಾದಂತೆ ಕ್ರಾಂತಿಯಾಗುವುದು. ಕ್ರಾಂತಿಯಿಂದ ಹೋದ ಜೀವಕ್ಕೆ ಶಾಂತಿ ಸಿಗದು. ಆದರೆ ಶಾಂತಿಯಿಂದ ಹೋದ ಜೀವ ಮರಳಿಬಾರದು.

No comments:

Post a Comment